Tag: bhuma mounika reddy

  • ಭೂಮಾ ಮೌನಿಕಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗು ನಟ ಮಂಚು ಮನೋಜ್‌

    ಭೂಮಾ ಮೌನಿಕಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗು ನಟ ಮಂಚು ಮನೋಜ್‌

    ಟಾಲಿವುಡ್ (Tollywood) ನಟ ಮಂಚು ಮನೋಜ್ & ಭೂಮಾ ಮೌನಿಕಾ ರೆಡ್ಡಿ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಹೊಸ ಬಾಳಿಗೆ ಭೂಮಾ ಮೌನಿಕಾ ರೆಡ್ಡಿ ಜೊತೆ ಮಂಚು ಮನೋಜ್ (Manchu Manoj) ಕಾಲಿಟ್ಟಿದ್ದಾರೆ.

    ಮಾರ್ಚ್ 3ರಂದು ನಡೆದ ಅದ್ಧೂರಿ ಕಲ್ಯಾಣದಲ್ಲಿ ಮಂಚು ಮನೋಜ್- ಭೂಮಾ ಮೌನಿಕಾ ರೆಡ್ಡಿ (Bhuma Mounika Reddy) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ಇದು 2ನೇ ಮದುವೆ (Wedding) ಆಗಿದೆ. ಇಬ್ಬರೂ ತಮ್ಮ ಜೀವನದಲ್ಲಿ ಏಳು ಹೆಜ್ಜೆ ಇಡುತ್ತಾ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಭೂಮಾ ಮೌನಿಕಾ ರೆಡ್ಡಿ ದಿವಂಗತ ಭೂಮಾ ನಾಗಿರೆಡ್ಡಿ ಮತ್ತು ಶೋಭಾ ರೆಡ್ಡಿ ಅವರ 2ನೇ ಪುತ್ರಿಯಾಗಿದ್ದಾರೆ. ಮೌನಿಕಾಳನ್ನು ಪ್ರೀತಿಸುತ್ತಿದ್ದ ಮಂಚು ಮನೋಜ್ ಈಗ ಅವಳಿಗೆ ಮೂರು ಗಂಟು ಹಾಕಿದ್ದಾರೆ. ಈ ಜೋಡಿಗೆ ಅನೇಕ ಸಿನಿ ಮತ್ತು ರಾಜಕೀಯ ಗಣ್ಯರು ಮದುವೆಗೆ ಆಗಮಿಸಿ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ತಂದೆ ಮೋಹನ್ ಬಾಬು (Mohan Babu) ಮತ್ತು ಸಹೋದರಿ ಮಂಚು ಲಕ್ಷ್ಮಿ (Manchu Lakshmi) ಮದುವೆಯಲ್ಲಿ ಮಿಂಚಿದ್ದಾರೆ. ಮಂಚು ಮನೋಜ್- ಮೌನಿಕಾಗೆ 2ನೇ ಮದುವೆ ಆಗಿದ್ದರೂ ಕೂಡ ಅದ್ದೂರಿಯಾಗಿ ಮದುವೆ ಮಾಡಲಾಯಿತು. ನವಜೋಡಿಗೆ ಇದೀಗ ಅಭಿಮಾನಿಗಳಿಂದ ಸೆಲೆಬ್ರಿಟಿ ಸ್ನೇಹಿತರಿಂದ ಶುಭಾಶಯಗಳು ಹರಿದುಬರುತ್ತಿದೆ.

  • ನಟ ಮಂಚು ಮನೋಜ್ 2ನೇ ಮದುವೆ : ಡೇಟ್ ಫಿಕ್ಸ್ ಮಾಡಿದ ಕುಟುಂಬ

    ನಟ ಮಂಚು ಮನೋಜ್ 2ನೇ ಮದುವೆ : ಡೇಟ್ ಫಿಕ್ಸ್ ಮಾಡಿದ ಕುಟುಂಬ

    ಟಾಲಿವುಡ್ ಹಿರಿಯ ನಟ ಮಂಚು ಮೋಹನ್ ಬಾಬು ಅವರ ಪುತ್ರ, ನಟ ಮಂಚು ಮನೋಜ್ (Manchu Manoj) ಮದುವೆ (Marriage) ಕುರಿತು ಕಳೆದ ಎರಡು ವಾರಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಅಲ್ಲದೇ ಕೆಲ ದಿನಗಳಿಂದ ಟ್ರೆಂಡಿಂಗ್ ಕೂಡ ಆಗಿದೆ. ಈಗಾಗಲೇ ಮೊದಲ ಪತ್ನಿಗೆ ಡಿವೋರ್ಸ್ ನೀಡಿರುವ ಮನೋಜ್, ಎರಡನೇ ಮದುವೆಗೆ ಸಜ್ಜಾಗಿರುವ ವಿಚಾರ ಸಂಚಲನವನ್ನೂ ಉಂಟು ಮಾಡಿತ್ತು. ಇದೀಗ ಮಂಚು ಮನೆಯಲ್ಲಿ ಮದುವೆ ದಿನಾಂಕ ಗೊತ್ತು ಮಾಡಲಾಗಿದೆ.

    ಶ್ರೀಮಂತ ಮನೆತನದ ಹುಡುಗಿಯನ್ನು ಮನೋಜ್ ಮದುವೆಯಾಗುತ್ತಿದ್ದು, ಮಾರ್ಚ್ 3ರಂದು ಅವರು ಭೂಮಾ ಮೌನಿಕಾ ರೆಡ್ಡಿ (Bhuma Mounika Reddy) ಅವರ ಜೊತೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕರ್ನೂಲ್ ಜಿಲ್ಲೆಯ ದೊಡ್ಡ ಕುಟುಂಬದ ಮಗಳಾಗಿರುವ ಭೂಮಾ ಮೌನಿಕಾ ರೆಡ್ಡಿ, ಮೊದಲಿನಿಂದಲೂ ಮನೋಜ್ ಗೆ ಪರಿಚಯ ಎಂದು ಹೇಳಲಾಗುತ್ತಿದೆ. ಆದರೆ, ಸಿನಿಮಾ ರಂಗಕ್ಕೂ ಭೂಮಾಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ವೀಶೇಷ. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

    ಇದು ಭೂಮಾಗೂ ಎರಡನೇ ಮದುವೆ ಎನ್ನಲಾಗುತ್ತಿದ್ದು, ಸ್ವತಃ ಮನೋಜ್ ಆ ಮದುವೆಗೂ ಹೋಗಿದ್ದರು ಎನ್ನುವ ಗಾಸಿಪ್ ಕೂಡ ಕೇಳಿ ಬರುತ್ತಿದೆ. ಮನೋಜ್ ತಮ್ಮ ಪತ್ನಿ ಪ್ರಣತಿ ರೆಡ್ಡಿಯಿಂದ (Pranathi Reddy) ವಿಚ್ಛೇದನ ಪಡೆದ ನಂತರ ಭೂಮಾ ಜೊತೆ ಸ್ನೇಹಿ ಹೊಂದಿದ್ದರು ಎನ್ನುವ ಮಾತೂ ಇದೆ. ಕೇವಲ ಮದುವೆ ದಿನಾಂಕ ಮಾತ್ರ ಗೊತ್ತು ಮಾಡಲಾಗಿದ್ದು, ಎಲ್ಲಿ ಮದುವೆ ಆಗುತ್ತಾರೆ ಎನ್ನುವ ವಿವರವನ್ನು ಕುಟುಂಬಗಳು ಬಿಟ್ಟುಕೊಟ್ಟಿಲ್ಲ.

  • 2ನೇ ಮದುವೆಗೆ ರೆಡಿಯಾದ ತೆಲುಗು ನಟ ಮಂಚು ಮನೋಜ್?

    2ನೇ ಮದುವೆಗೆ ರೆಡಿಯಾದ ತೆಲುಗು ನಟ ಮಂಚು ಮನೋಜ್?

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ಮಂಚು ಮನೋಜ್ (Actor Manchu Manoj) ಸಿಹಿ ಸುದ್ದಿ ಕೊಡಲು ರೆಡಿಯಾಗಿದ್ದಾರೆ. ಭೂಮಾ ಮೌನಿಕಾ ರೆಡ್ಡಿ (Bhuma Mounika Reddy) ಜೊತೆ ನಟ ಮಂಚು ಡೇಟಿಂಗ್ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಗುಡ್ ನ್ಯೂಸ್ ಹೇಳಲು ಕಾತರದಿಂದ ಕಾಯುತ್ತಿದ್ದೆ ಎಂದು ನಟ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಸಿನಿಮಾಗಿಂತ ನಟ ಮಂಚು ಮನೋಜ್ ಇತ್ತೀಚೆಗೆ 2ನೇ ಮದುವೆ ವಿಷ್ಯವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಸಾಕಷ್ಟು ಸಮಯದಿಂದ ಮಂಚು ಮತ್ತು ಭೂಮಾ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲಿ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವದಂತಿ ಹಬ್ಬಿರುವ ಬೆನ್ನಲ್ಲೇ ಮಂಚು ಟ್ವೀಟ್ ಮಾಡಿ ಅಚ್ಚರಿ ನೀಡಿದ್ದಾರೆ. ಇದನ್ನೂ ಓದಿ:ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಬಹಳ ದಿನದಿಂದ ನಿಮ್ಮೆಲ್ಲರಿಗೂ ಈ ಗುಡ್ ನ್ಯೂಸ್ ಹೇಳಲು ಕಾಯುತ್ತಿದೆ. ಆದರೆ ಈಗ ಸಮಯ ಕೂಡಿ ಬಂದಿದೆ. ಜನವರಿ 20ರಂದು ನಿಮಗೆ ಶುಭಸುದ್ದಿ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಈ ಸುದ್ದಿ ಹೇಳುತ್ತಿದ್ದಂತೆ 2ನೇ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

    ಇನ್ನೂ ಮೊದಲ ಪತ್ನಿ ಪ್ರಣತಿ ರೆಡ್ಡಿ (Pranathi Reddy) ಜೊತೆ 2015ರಲ್ಲಿ ನಟ ಮಂಚು ಮನೋಜ್ ಮದುವೆಯಾಗಿದ್ದರು. ಕೆಲವು ವೈಯಕ್ತಿಕ ಕಾರಣಗಳಿಂದ 2019ರಲ್ಲಿ ಡಿವೋರ್ಸ್‌ ಪಡೆದರು. ಹಾಗಾಗಿ ನಟನ ಟ್ವೀಟ್ ಹಲವು ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದೆ. 2ನೇ ಮದುವೆಯ ಗುಡ್ ನ್ಯೂಸ್ ಹೇಳುತ್ತಾರಾ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k