Tag: bhubaneshwar

  • ರೈಲ್ವೆ ನಿಲ್ದಾಣದಲ್ಲಿ 16 ಕೋಟಿ ಮೌಲ್ಯದ 32 ಕೆ.ಜಿ ಚಿನ್ನ ವಶಪಡಿಸಿಕೊಂಡ ಅಧಿಕಾರಿಗಳು!

    ರೈಲ್ವೆ ನಿಲ್ದಾಣದಲ್ಲಿ 16 ಕೋಟಿ ಮೌಲ್ಯದ 32 ಕೆ.ಜಿ ಚಿನ್ನ ವಶಪಡಿಸಿಕೊಂಡ ಅಧಿಕಾರಿಗಳು!

    ಭುವನೇಶ್ವರ: ಕೋನಾರ್ಕ್ ಎಕ್ಸ್ ಪ್ರೆಸ್‍ನಲ್ಲಿ ಸಾಗಿಸುತ್ತಿದ್ದ ಸುಮಾರು 16 ಕೋಟಿ ಮೌಲ್ಯದ 32 ಕೆ.ಜಿ ಚಿನ್ನವನ್ನು ಗವರ್ನ್‍ಮೆಂಟ್ ರೈಲ್ವೇ ಪೊಲೀಸ್(GRP) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಮುಂಬೈಯಿಂದ ಮಂಗಳವಾರ ರಾತ್ರಿ 11.30ರ ಸುಮಾರಿಗೆ ಭುವನೇಶ್ವರಕ್ಕೆ ಆಗಮಿಸಿದ ರೈಲಿನಲ್ಲಿ ಅಕ್ರಮ ಚಿನ್ನ ಪತ್ತೆಯಾಗಿದ್ದು, ಬುಧವಾರ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ನಾಲ್ವರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿದೆ – ರಷ್ಯಾ ಆರೋಪ

    ಅಧಿಕಾರಿಗಳ ವಶವಾದ ನಾಲ್ವರನ್ನು ಹಸ್ಮುಖಲಾಲ್ ದೀಕ್ಷಿತ್, ಮಹೇಶ್ ಭೋಮ್ಸರ್, ಸುರೇಶ್ ಸಹದೇವ್ ಖರೆ ಮತ್ತು ದೀಪಕ್ ಪಟೇಲ್ ಎಂದು ಗುರುತಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆ(GST) ದಾಖಲೆಗಳನ್ನು ಸಲ್ಲಿಸಲು ವಿಫಲರಾದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಆರ್ ಪಿ  ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರಗಳ ಬದಲಿಗೆ, ಯುಪಿ ಈಗ ಕ್ಷಿಪಣಿಗಳನ್ನು ತಯಾರಿಸುತ್ತಿದೆ: ಅಮಿತ್ ಶಾ

    ನಾಲ್ವರು ವ್ಯಕ್ತಿಗಳು ಮುಂಬೈಯಿಂದ ನಾಲ್ಕು ಬ್ಯಾಗ್ ಗಳ ಜೊತೆ ಬಂದಿದ್ದರು. ಒಂದೊಂದು ಬ್ಯಾಗ್ ನಲ್ಲಿ ಸುಮಾರು 8 ಕೆ.ಜಿಯಷ್ಟು ಬಂಗಾರ ತುಂಬಿದ್ದರು. ಭುವನೇಶ್ವರದಲ್ಲಿ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡುವುದು ಅವರ ಪ್ಲ್ಯಾನ್ ಆಗಿತ್ತು. ಈ ವೇಳೆ ನಾಲ್ವರು ವ್ಯಕ್ತಿಗಳ ಮೇಲೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಚಿನ್ನ ಸಾಗಾಟ ಮಾಡುತ್ತಿರುವುದು ಬಯಲಾಗಿದೆ ಎಂದು ಭುವನೇಶ್ವರದ ಜಿಆರ್ ಪಿ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

    ಈ ಆಭರಣಗಳಿಗೆ ಅವರು ತೆರಿಗೆ ಪಾವತಿಸುತ್ತಿರಲಿಲ್ಲ. ಹೀಗಾಗಿ ಈ ಚಿನ್ನವನ್ನು ಯಾರಿಗೆ ನೀಡುತ್ತಿದ್ದೇವೆ ಎಂಬುದನ್ನು ಸರಿಯಾಗಿ ಬಾಯಿಬಿಟ್ಟಿಲ್ಲ. ಒಟ್ಟಿನಲ್ಲಿ ಈ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇತ್ತ 32 ಕೆ.ಜಿ ಚಿನ್ನವನ್ನು ಜಿಆರ್‍ಪಿ ಅಧಿಕಾರಿಗಳು ಕೈಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಗುಡಿಸಲಿನಲ್ಲಿ ಆಡುತ್ತಿದ್ದ ಮೂವರು ಬಾಲಕಿಯರು ಸಜೀವ ದಹನ

    ಗುಡಿಸಲಿನಲ್ಲಿ ಆಡುತ್ತಿದ್ದ ಮೂವರು ಬಾಲಕಿಯರು ಸಜೀವ ದಹನ

    ಭುವನೇಶ್ವರ: ಭತ್ತದ ಪೈರಿನ ಕೂಳೆ ತುಂಬಿದ್ದ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅದರೊಳಗೆ ಆಟವಾಡುತ್ತಿದ್ದ ಮೂವರು ಬಾಲಕಿಯರು ಸಾವನ್ನಪ್ಪಿದ ದುರಂತ ಘಟನೆ ಒಡಿಶಾದಲ್ಲಿ ನಡೆದಿದೆ.

    ಶನಿವಾರ ಕಲಹಂಡಿ ಜಿಲ್ಲೆಯ ಬಿಜ್ಮಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು 4 ವರ್ಷದ ದಾಜಿ ದಿಶಾರಿ, ರಾಜಿ ದಿಶಾರಿ ಹಾಗೂ ರಚನಾ ರೌತ್ ಎಂದು ಗುರುತಿಸಲಾಗಿದೆ. ದಾಜಿ ಹಾಗೂ ರಾಜಿ ಅವಳಿ ಜವಳಿ ಸಹೋದರಿಯರು. ಮೂವರು ಬಾಲಕಿಯರು ಭತ್ತದ ಪೈರಿನ ಕೂಳೆ ತುಂಬಿಟ್ಟಿದ್ದ ಗುಡಿಸಲಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಹೊತ್ತಿಹೊಂಡಿದ್ದು, ಗುಡಿಸಲ ಒಳಗಿದ್ದ ಮೂವರು ಬಾಲಕಿಯರು ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ.

    ಗ್ರಾಮದ ಮಹಿಳೆಯೊಬ್ಬರು ಈ ಬಗ್ಗೆ ಮಾತನಾಡಿ, ಗುಡಿಸಲ ಸುತ್ತಮುತ್ತಲು ಚಳಿ ಕಾಯಿಸಲು ಕೆಲವರು ಕಲ್ಲಿದ್ದಲು ಸುಡುತ್ತಿದ್ದರು. ಬಹುಶಃ ಅದರ ಕಿಡಿ ಗುಡಿಸಲಿಗೆ ತಗಲಿ ಬೆಂಕಿ ಹೊತ್ತಿಕೊಂಡಿರಬೇಕು. ಗುಡಿಸಲಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಾಲಕಿಯರಿಗೆ ಅಲ್ಲಿಂದ ಹೊರಬರಲು ಆಗಲಿಲ್ಲ. ಮಕ್ಕಳ ಕಿರುಚಾಟ ಕೇಳಿ ಸ್ಥಳಿಯರು ಹೋಗಿ ಬೆಂಕಿ ನಂದಿಸುವಷ್ಟರಲ್ಲಿ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

    ತಕ್ಷಣ ಬಾಲಕಿಯರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಗ್ನಿ ಅವಘಡದಲ್ಲಿ ಬಾಲಕಿಯರ ಶೇ.90ರಷ್ಟು ದೇಹದ ಭಾಗವು ಸುಟ್ಟು ಹೋಗಿತ್ತು. ನಾವು ಅವರನ್ನು ಉಳಿಸಲು ಪ್ರಯತ್ನಿಸಿದೆವು, ಆದರೆ ಚಿಕಿತ್ಸೆ ನೀಡಿದ 1 ಗಂಟೆ ಬಳಿಕ ಮೂವರು ಬಾಲಕಿಯರು ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ.

    ಬಾಲಕಿಯರ ಹೆತ್ತವರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಮಕ್ಕಳು ಗುಡಿಸಲಿನಲ್ಲಿ ಆಟವಾಡುತ್ತಿದ್ದರು. ಆದರೆ ಈ ರೀತಿ ದುರಂತ ಸಂಭವಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಮೃತ ಬಾಲಕಿಯರ ಅಜ್ಜ ಕಣ್ಣಿರಿಟ್ಟಿದ್ದಾರೆ.

    ಸದ್ಯ ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅಪ್ರಾಪ್ತೆಯ ಮೇಲೆ 8 ದಿನ ನಾಲ್ವರು ಪೊಲೀಸರಿಂದ ಗ್ಯಾಂಗ್ ರೇಪ್

    ಅಪ್ರಾಪ್ತೆಯ ಮೇಲೆ 8 ದಿನ ನಾಲ್ವರು ಪೊಲೀಸರಿಂದ ಗ್ಯಾಂಗ್ ರೇಪ್

    ಭುವನೇಶ್ವರ್: ಅಪ್ರಾಪ್ತೆಯ ಮೇಲೆ ನಾಲ್ವರು ಪೊಲೀಸ್ ಅಧಿಕಾರಿಗಳು ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ.

    ಜಾರ್ಸಗುಡಾದ ಪೊಲೀಸರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ದೂರಿದ್ದಾಳೆ. ಪ್ರವಾಸಕ್ಕೆಂದು ಕರೆದುಕೊಂಡು ಬಂದಿದ್ದ ಗೆಳೆಯ ಪರಾರಿಯಾಗಿದ್ದಾನೆ.

    ಆಗಿದ್ದೇನು?:
    ಸಂತ್ರಸ್ತೆ ಗೆಳೆಯ ರವಿ ಜೊತೆಗೆ ಪ್ರವಾಸಕ್ಕೆಂದು ಹೋಗಿದ್ದರು. ಹೀಗಾಗಿ ಜಾರ್ಸಗುಡಾದ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಕರ್ತವ್ಯನಿರತ ಹಾಗೂ ಸಮವಸ್ತ್ರದ ಧರಿಸಿದ್ದ ನಾಲ್ವರು ಪೊಲೀಸರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆಯಿಂದಾಗಿ ರವಿ ಕೂಡ ಗಾಬರಿಗೊಂಡಿದ್ದ.

    ಪೊಲೀಸರು ಬಾಲಕಿಯ ಮೇಲೆ ನಿರಂತರವಾಗಿ 8 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 8ನೇ ದಿನ ರವಿ ಬಾಲಕಿಯನ್ನು ಹೋಟೆಲ್ ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿಂದ ಜಾರ್ಖಂಡಿನ ಜುಗ್ಸಾಲೈ ನಗರದ ಹೋಟೆಲ್‍ಗೆ ಬಂದಿದ್ದಾನೆ. ಆದರೆ ರೂಮ್‍ನಲ್ಲಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.

    ಬಾಲಕಿ ಕಣ್ಣು ತೆರೆದು ನೋಡಿದಾಗ ರವಿ ಸ್ಥಳದಲ್ಲಿ ಇರಲಿಲ್ಲ. ಇದರಿಂದ ಗಾಬರಿಗೊಂಡ ಬಾಲಕಿ ಹೋಟೆಲ್ ಮಾಲೀಕರ ಬಳಿ ಅಳಲು ತೋಡಿಕೊಂಡಿದ್ದಾಳೆ. ಇದಕ್ಕೆ ಸ್ಪಂದಿಸಿದ ಮಾಲೀಕ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ.

    ಸಂತ್ರಸ್ತೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಜುಗ್ಸಾಲೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

  • ನಕಲಿ ಮದ್ಯಕ್ಕೆ ಮೂವರು ಬಲಿ, 29 ಮಂದಿ ಅಸ್ವಸ್ಥ!

    ನಕಲಿ ಮದ್ಯಕ್ಕೆ ಮೂವರು ಬಲಿ, 29 ಮಂದಿ ಅಸ್ವಸ್ಥ!

    ಭುವನೇಶ್ವರ: ನಕಲಿ ಮದ್ಯವನ್ನು ಸೇವಿಸಿ 29 ಮಂದಿ ಅಸ್ವಸ್ಥಗೊಂಡು ಮೂವರು ಸಾವನ್ನಪ್ಪಿರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ.

    ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕಾಗಿ ಸ್ಥಳೀಯ ರಾಜಕೀಯ ನಾಯಕರು ಮತ ಹಾಕಲು ಜನರಿಗೆ ಹಣವನ್ನು ನೀಡಿದ್ದರು. ಈ ಹಣವನ್ನು ಬಳಸಿಕೊಂಡು ಅಲ್ಲಿನ ಜನರು ಮದ್ಯ ಖರೀದಿಸಿ ಕುಡಿದಿದ್ದರು. ಬಳಿಕ ಹೀಗೆ ಅಸ್ವಸ್ಥಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಅಂತ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಉಮಾಕಾಂತ್ ಹೇಳಿದ್ದಾರೆ.

    ಭದ್ರಾಕ್ ಜಿಲ್ಲೆಯ ತಿಹಿಡೀ ಪೊಲೀಸ್ ಠಾಣಾ ವ್ಯಾಪ್ತಿಯ ದೌಲತಪುರ ಗ್ರಾಮದ ಜನರು ಮತದಾನದ ಬಳಿಕ ಸ್ಥಳೀಯ ಮಾರುಕಟ್ಟೆಯಿಂದ ಮದ್ಯ ಖರೀದಿಸಿ ತಂದಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಉಮಾಕಾಂತ್ ಹೇಳಿದ್ದಾರೆ.

    ಘಟನೆಯಲ್ಲಿ ಅಸ್ವಸ್ಥರಾದ 29 ಮಂದಿಯನ್ನು ಎಸ್‍ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತರನ್ನು ಸುಧಾ ಚರಣ್ ನಾಯಕ್, ಸರಬೇಸವಾ ದಾಸ್, ರಾಮಚಂದ್ರ ದಾಸ್ ಎಂದು ಗುರುತಿಸಲಾಗಿದೆ.

    ನಕಲಿ ಮದ್ಯವನ್ನು ಸೇವಿಸಿದ ಬಳಿಕ ಕೆಲವರಿಗೆ ಹೊಟ್ಟೆ ನೋವು, ಕಣ್ಣು ಕಾಣದಿದ್ದ ಹಾಗೆ ಆಗಿತ್ತು ಎಂದು ಕೆಲವರು ತಿಳಿಸಿದ್ದಾರೆ. ಹಾಗೆಯೇ ಈ ನಕಲಿ ಮದ್ಯ ಸರಬರಾಜು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಭದ್ರಾಕ್‍ನ ಚಂದಬಲಿ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಬಳಿಕ ಪೊಲೀಸರು ಜನರ ಮನವೊಲಿಸಿ ಪ್ರತಿಭಟನೆಗೆ ತೆರೆ ಎಳೆಯಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಭಾರೀ ಮಳೆ ನೀರಿಗೆ ಹಳಿಯಲ್ಲೇ ಸಿಲುಕಿದ ರೈಲು-ವಿಡಿಯೋ ನೋಡಿ

    ಭಾರೀ ಮಳೆ ನೀರಿಗೆ ಹಳಿಯಲ್ಲೇ ಸಿಲುಕಿದ ರೈಲು-ವಿಡಿಯೋ ನೋಡಿ

    ಭುವನೇಶ್ವರ: ಒಡಿಶಾದ ರಾಯ್ ಗಢ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಳಿ ಕಾಣದೆ ರೈಲೊಂದು ಮಳೆ ನೀರಿನಲ್ಲಿ ಸಿಲುಕಿಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಭುವನೇಶ್ವರ್- ಜಗ್ದಾಲ್ ಪುರ್ ಹಿರಾಖಂಡ್ ಎಕ್ಸ್ ಪ್ರೆಸ್ ಮಳೆ ನೀರಿನಲ್ಲಿ ಸಿಲುಕಿಕೊಂಡಿದೆ. ರೈಲು ನೀರಿನಲ್ಲಿ ಸಿಲುಕಿ ಚಲಿಸಲು ಪರದಾಡುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದೆ.

    ವಿಡಿಯೋದಲ್ಲೇನಿದೆ?:
    ಭಾರೀ ಮಳೆಯ ಪರಿಣಾಮ ರೈಲ್ವೇ ಹಳಿಯ ಮೇಲೆಯೇ ನೀರು ಹರಿದುಹೋಗುತ್ತಿದ್ದು, ಈ ಘಟನೆಯನ್ನು ನೋಡಲು ಸುತ್ತಮುತ್ತಲಿನ ಜನ ಛತ್ರಿ ಹಿಡಿದುಕೊಂಡು ನೋಡುತ್ತಿರುವುದು ಕಾಣಬಹುದು. ಈ ವೇಳೆ ಅದೇ ಸಮಯಕ್ಕೆ ರೈಲೊಂದು ಬಂದಿದ್ದು, ಹಳಿ ಕಾಣದೆ ಮುಂದೆ ಹೋಗಲು ಅಸಾಧ್ಯವಾಗಿ ಪರದಾಡಿದೆ.

    ಹಳಿಯಲ್ಲಿಯೇ ನೀರು ಹರಿಯುತ್ತಿದ್ದ ಪರಿಣಾಮ ಜಗದಲ್ ಪುರದಿಂದ ಭುವನೇಶ್ವರ್ ಗೆ ಹೋಗುವ ರೈಲನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಬದಲಿ ಮಾರ್ಗವಾಗಿ ಕೊರಪುಟ್ ನಿಂದ ಭುವನೇಶ್ವರ್ ಗೆ ಹೋಗುವಂತೆ ಸೂಚಿಸಲಾಗಿದೆ.

    ಒಡಿಶಾದ ರಾಯ್ ಗಢ್ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಲ್ಯಾಣಿ ನದಿ ನಡುಗಡ್ಡೆಯಾಗಿದೆ. ಪರಿಣಾಮ ಪ್ರವಾಹ ರೈಲ್ವೇ ಹಳಿಯ ಮೇಲೆ ಹರಿದುಬಂದಿದೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದುದರಿಂದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸುವಂತೆ ಹಾಗೂ ಈ ಬಗ್ಗೆ ಎಚ್ಚರಿಕೆ ನೀಡುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಲ್ಲಿನ ಸರ್ಕಾರ ಸೂಚಿಸಿದೆ. ರಾಜ್ಯದ ಮಲ್ಕಾಂಗರಿ, ಕಂಧಮಾಲ್ ಹಾಗೂ ಗಜಪತಿ ಜಿಲ್ಲೆಗಳು ಪ್ರವಾಹಕ್ಕೀಡಾಗಿವೆ.

  • ದೇವಸ್ಥಾನದಲ್ಲೇ ಯುವ ಜೋಡಿಗೆ ಥಳಿಸಿ ಯುವಕರಿಂದ ಅಸಭ್ಯವಾಗಿ ವರ್ತನೆ!

    ದೇವಸ್ಥಾನದಲ್ಲೇ ಯುವ ಜೋಡಿಗೆ ಥಳಿಸಿ ಯುವಕರಿಂದ ಅಸಭ್ಯವಾಗಿ ವರ್ತನೆ!

    ಭುವನೇಶ್ವರ್: ಯುವ ಜೋಡಿಯನ್ನು ಐದಾರು ಯುವಕರು ಥಳಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ಒಡಿಶಾದ ನಯಾಗರ್ ದ ರಘುನಾಥ್ ದೇವಸ್ಥಾನದಲ್ಲಿ ನಡೆದಿದೆ.

    ದೇವಸ್ಥಾನದ ಆವರಣದಲ್ಲಿ ಐದಾರು ಯುವಕರು ಯುವ ಜೋಡಿಯನ್ನು ಥಳಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಯುವ ಜೋಡಿಯನ್ನು ಥಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜೋಡಿಯನ್ನು ಥಳಿಸುತ್ತಿರುವ ವಿಡಿಯೋ 1.49 ನಿಮಿಷಗಳಿದ್ದು, ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ಎಂಬ ಕಾರಣಕ್ಕೆ ಯುವಕರು ಅವರ ಮೇಲೆ ದೇವಸ್ಥಾನದ ಆವರಣದಲ್ಲೇ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.

    ಆ ಯುವಕರು ಇಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಅಲ್ಲದೇ ನಿಮ್ಮ ಪೋಷಕರ ಮೊಬೈಲ್ ನಂಬರ್ ಕೊಡಿ ಅವರಿಗೆ ನಿಮ್ಮ ಈ ಪ್ರೀತಿಯ ವಿಷಯವನ್ನು ಹೇಳುತ್ತೇವೆ ಎಂದು ಹೇಳಿ ಥಳಿಸಿದ್ದಾರೆ.

    ಐದಾರು ಯುವಕರಲ್ಲಿ ಒಬ್ಬ ಯುವಕ ಉದ್ದೇಶಪೂರ್ವಕವಾಗಿ ಯುವತಿಯನ್ನು ಹಿಡಿದು ಆಕೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಪ್ರೇಮಿಗಳು ನಾವು ಈ ತಪ್ಪನ್ನು ಮತ್ತೇ ಮಾಡುವುದಿಲ್ಲ. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಪ್ರೇಮಿಗಳು ಮನವಿ ಮಾಡಿಕೊಂಡರೂ ಅವರ ಮಾತನ್ನು ಕೇಳದೆ ಅವರ ಮೇಲೆ ನಿರಂತರವಾಗಿ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರೇಮಿಗಳ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಸದ್ಯ ಪೊಲೀಸರು ಇದುವರೆಗೂ ಆ ಯುವಕರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.

  • ತನ್ನ ಪತ್ನಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ ಪತಿ!

    ತನ್ನ ಪತ್ನಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ ಪತಿ!

    ಭುವನೇಶ್ವರ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ಸೀತಾಕಾಂತ್ ಮೋಹಪಾತ್ರ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡಿದ ಪತಿ. ಈತ ಭುವನೇಶ್ವರ್ ನ ಕಪಿಲ ಪ್ರಸಾದ್ ನ ನಿವಾಸಿಯಾಗಿದ್ದು, ಈತನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

    ಸೀತಾಕಾಂತ್ 2015ರಲ್ಲಿ ಯುವತಿ ಜೊತೆ ತನ್ನ ಕುಟುಂಬಕ್ಕೆ ತಿಳಿಸದಂತೆ ಗೌಪ್ಯವಾಗಿ ಮದುವೆಯಾಗಿದ್ದನು. ಮದುವೆಯಾದ ನಂತರ ಆತ ಕೆಲಸ ಹುಡುಕಿ ಹೈದರಾಬಾದ್‍ಗೆ ಬಂದಿದ್ದನು. ಹೈದರಾಬಾದ್‍ಗೆ ಹೋಗಿ ಮತ್ತೆ ಆತ ಹಿಂದುರುಗಲಿಲ್ಲ. ಆಗ ಯುವತಿ ಸೀತಾಕಾಂತ್ ಮನೆಗೆ ತೆರಳಿ ಆತನ ಕುಟುಂಬದವರಿಗೆ ತನ್ನ ಮದುವೆಯ ವಿಷಯ ತಿಳಿಸಿದ್ದಳು.

    ವಿಷಯ ಗೊತ್ತಾಗಿ ಸೀತಾಕಾಂತ್ ಕುಟುಂಬದವರು ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಿಂದಿಸಿದ ವಿಷಯವನ್ನು ಆಕೆ ಸೀತಾಕಾಂತ್‍ಗೆ ತಿಳಿಸಿದಾಗ ಆತ ಕೂಡ ಯುವತಿಯನ್ನು ನಿಂದಿಸಿ, ತನ್ನ ಜೀವನದಿಂದ ಹೊರಟು ಹೋಗು ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.

    ಈ ಘಟನೆ ನಡೆದು ಸ್ವಲ್ಪ ದಿನಗಳ ನಂತರ ಸೀತಾಕಾಂತ್ ಆಕೆಯ ಜೀವನ ಹಾಳು ಮಾಡಲೆಂದು ಹಾಗೂ ಸಮಾಜದಲ್ಲಿ ಆಕೆಯ ಹೆಸರನ್ನು ಹಾಳು ಮಾಡಲು ತನ್ನ ಪತ್ನಿ ಜೊತೆಗಿನ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

    ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋ ವೈರಲ್ ಆಗಿದ್ದನ್ನು ತಿಳಿದ ಯುವತಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಸೀತಾಕಾಂತ್ ಮೇಲೆ ದೂರನ್ನು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಶಾಸಕನನ್ನು ಮದ್ವೆಯಾಗಿದ್ದೀನೆಂದು ಒಡಿಶಾ ವಿಧಾನಸಭೆ ಮುಂಭಾಗ ಫಿನಾಯಿಲ್ ಕುಡಿದು ಮಹಿಳೆ ಆತ್ಮತ್ಯೆಗೆ ಯತ್ನ

    ಶಾಸಕನನ್ನು ಮದ್ವೆಯಾಗಿದ್ದೀನೆಂದು ಒಡಿಶಾ ವಿಧಾನಸಭೆ ಮುಂಭಾಗ ಫಿನಾಯಿಲ್ ಕುಡಿದು ಮಹಿಳೆ ಆತ್ಮತ್ಯೆಗೆ ಯತ್ನ

    ಭುವನೇಶ್ವರ: ಒಡಿಶಾದ ವಿಧಾನಸಭೆಯ ಮುಂಭಾಗ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

    ವಾರದ ಹಿಂದಷ್ಟೇ ಇದೇ ಮಹಿಳೆ ಒಡಿಶಾ ಸಿಎಂ ನಿವಾಸದ ಎದುರು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇಂದು ಮತ್ತೆ ವಿಧಾಸಭೆಯ ಮುಂಭಾಗ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

    ಆತ್ಮಹತ್ಯೆ ಯತ್ನಿಸಿದ ಮಹಿಳೆಯನ್ನು ಸೊನಾಲಿಕಾ ಮೊಹಂತಿ ಎಂದು ಗುರುತಿಸಲಾಗಿದ್ದು, ಈಕೆ ಬಿಜೆಡಿ ಶಾಸಕ ಬ್ರಾಜಾ ಕಿಶೋರ್ ಪ್ರಧಾನ್ ಅವರ ಹೆಂಡತಿ ಎಂದು ಹೇಳಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಕಿಶೋರ್ ಪ್ರಧಾನ್ ಅವರೊಂದಿಗೆ ಗುಟ್ಟಾಗಿ ಮದುವೆಯಾಗಿರುವುದಾಗಿ ಹೇಳಿದ್ದಾರೆ. ಆದರೆ ಶಾಸಕರಾದ ಕಿಶೋರ್ ಮಹಿಳೆಯ ಆರೋಪವನ್ನು ನಿರಾಕರಿಸಿದ್ದು, ಆಕೆಯನ್ನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.

    ಸದನವನ್ನು ಮುಂದೂಡಲ್ಪಟ್ಟಿದ್ದ ವೇಳೆ ವಿಧಾನಸಭೆಯ ಗೇಟ್ ಬಳಿ ಆಗಮಿಸಿದ ಮೊಹಂತಿ, ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.

    ಸೆಪ್ಟೆಂಬರ್ 7ರಂದು ಮೊಹಂತಿ, ಸಿಎಂ ನಿವಾಸದ ಎದುರು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮೇ 17 ರಂದು ಶಾಸಕರ ಮನೆಯ ಗೇಟ್‍ನ ಕಂಬಿಗಳನ್ನ ಮುರಿದು ಒಳಗೆ ನುಗ್ಗಿದ್ದರು. ಅದಕ್ಕೂ ಮುಂಚೆ ಶಾಸಕರ ತವರು ಜಿಲ್ಲೆ ಅಂಗುಲ್‍ನಲ್ಲಿರುವ ಶಾಸಕರ ಮನೆ ಮುಂದೆ ಧರಣಿ ನಡೆಸಿದ್ದರು ಎಂದು ವರದಿಯಾಗಿದೆ.

    ಅಲ್ಲದೆ ಮೊಹಂತಿ ಅವರು ಶಾಸಕರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಜೊತೆಗೆ ಎಸ್‍ಡಿಜೆಎಮ್ ಕೋರ್ಟ್‍ನಲ್ಲಿ ಇದೇ ವರ್ಷ ಮೇ ನಲ್ಲಿ ಪ್ರಧಾನ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.