Tag: BHU

  • ಕೊವಾಕ್ಸಿನ್‌ ಅಡ್ಡ ಪರಿಣಾಮ ಅಧ್ಯಯನ – ಸಂಶೋಧನಾ ವರದಿ ಕಳಪೆ ಎಂದ ICMR

    ಕೊವಾಕ್ಸಿನ್‌ ಅಡ್ಡ ಪರಿಣಾಮ ಅಧ್ಯಯನ – ಸಂಶೋಧನಾ ವರದಿ ಕಳಪೆ ಎಂದ ICMR

    ನವದೆಹಲಿ: ಕೊವಾಕ್ಸಿನ್‌ ಲಸಿಕೆಯ (Covaxin Vaccine) ಅಡ್ಡ ಪರಿಣಾಮಗಳ ಬಗ್ಗೆ ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (BHU) ನಡೆಸಿದ ಸಂಶೋಧನೆ ಕಳಪೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ.

    ಸಂಶೋಧನೆಗೆ ಯಾವುದೇ ಆರ್ಥಿಕ ಅಥವಾ ತಾಂತ್ರಿಕ ಬೆಂಬಲವನ್ನು ಒದಗಿಸಿಲ್ಲ. ಈ ಸಂಶೋಧನೆಯನ್ನು ಕಳಪೆಯಾಗಿ ತಯಾರಿಸಲಾಗಿದೆ ಎಂದು ಐಸಿಎಂಆರ್‌ ಡೈರೆಕ್ಟರ್‌ ಜನರಲ್ ರಾಜೀವ್ ಬಹ್ಲ್ ಹೇಳಿದ್ದಾರೆ. ಅಧ್ಯಯನ ವರದಿಯಲ್ಲಿ ಐಸಿಎಂಆರ್‌ ಹೆಸರನ್ನು ಬಳಸಿದ್ದನ್ನು ಕೂಡಲೇ ತೆಗೆದು ಹಾಕುವಂತೆ ಬಿಹೆಚ್‌ಯು ಸೂಚಿಸಿದೆ.  ಇದನ್ನೂ ಓದಿ: ಅಪ್ರಾಪ್ತನ ಹುಚ್ಚಾಟಕ್ಕೆ ಇಬ್ಬರು ಟೆಕ್ಕಿಗಳು ಬಲಿ – ಅಪಘಾತದ ಬಗ್ಗೆ ಪ್ರಬಂಧ ಬರೆಯುವಂತೆ ಸೂಚಿಸಿದ ಕೋರ್ಟ್‌

    ಭಾರತ್ ಬಯೋಟೆಕ್ (Bharat Biotech) ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯ ಪಡೆದುಕೊಂಡಿರುವ ಮೂರನೇ ಒಂದರಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡಪರಿಣಾಮಗಳು ಕಾಣಿಸಿಕೊಂಡಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಅಧ್ಯಯನ ತಿಳಿಸಿತ್ತು. ಇದರ ಜೊತೆ ಜೊತೆಗೆ ಅಧ್ಯಯನದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಹೆಸರನ್ನು ಬಳಸಲಾಗಿತ್ತು.

     

  • ವಿವಿಗಳಲ್ಲಿರೋ ಹಿಂದೂ, ಮುಸ್ಲಿಂ ಪದಗಳನ್ನು ಕೈಬಿಡಿ: ಕೇಂದ್ರಕ್ಕೆ ಯುಜಿಸಿ ಸಲಹೆ

    ವಿವಿಗಳಲ್ಲಿರೋ ಹಿಂದೂ, ಮುಸ್ಲಿಂ ಪದಗಳನ್ನು ಕೈಬಿಡಿ: ಕೇಂದ್ರಕ್ಕೆ ಯುಜಿಸಿ ಸಲಹೆ

    ನವದೆಹಲಿ: ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‍ಯು) ಹಾಗೂ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು)ಗಳ ಹೆಸರಿನಲ್ಲಿರುವ ಹಿಂದೂ ಹಾಗೂ ಮುಸ್ಲಿಂ ಪದಗಳನ್ನು ಕೈಬಿಡುವಂತೆ ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗದ (ಯುಜಿಸಿ) ಸಮಿತಿ ಸಲಹೆಯನ್ನು ನೀಡಿದೆ.

    “ಎಚ್” ಮತ್ತು “ಎಂ” ಪದಗಳು ಭಾರತೀಯ ಸಂವಿಧಾನದಲ್ಲಿ ಅಳವಡಿಸಲಾಗಿರುವ ಜ್ಯಾತ್ಯಾತೀತ ತತ್ವಕ್ಕೆ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕೆ ಯುಜಿಸಿ ಸಮಿತಿ ಶಿಫಾರಸ್ಸು ಮಾಡಿದೆ.

    ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಕೇಂದ್ರದ ಹತ್ತು ವಿಶ್ವವಿದ್ಯಾಲಗಳ ಕುರಿತು ಬಂದ ದೂರುಗಳನ್ನು ಆಧಾರಿಸಿ ವರದಿಯನ್ನು ನೀಡುವಂತೆ ಎಎಂಯು ಅಡಿಯಲ್ಲಿ ಯುಜಿಸಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆದರೆ ಬಿಎಸ್‍ಯು ವಿಶ್ವವಿದ್ಯಾಲಯ ಈ ಪಟ್ಟಿಯಲ್ಲಿ ಇರಲಿಲ್ಲ ಆದರೂ ಸಲಹೆಯನ್ನು ಸಮಿತಿ ತನ್ನ ವರದಿಯಲ್ಲಿ ನೀಡಿದೆ. ಅಲ್ಲದೆ ಈ ವಿಶ್ವವಿದ್ಯಾಲಯಗಳನ್ನು ಅಲಿಗಢ ಮತ್ತು ಬನಾರಸ್ ವಿಶ್ವವಿದ್ಯಾಲಯ ಎಂದು ಕರೆಯಬಹುದು ಎಂದು ಸೂಚಿಸಿದೆ.

    ಯುಜಿಸಿ ಸಮಿತಿಯ ಅಡಿಯಲ್ಲಿ ಎಎಂಯು ಹೊರತುಪಡಿಸಿ ತ್ರಿಪುರ, ಪಾಂಡೀಚೆರಿ, ಅಲಹಾಬಾದ್ ವಿಶ್ವವಿದ್ಯಾಲಯ, ಜಮ್ಮು, ರಾಜಸ್ಥಾನ್ ಮತ್ತು ಜಾರ್ಖಂಡ್ ಕೇಂದ್ರಿಯ ವಿಶ್ವವಿದ್ಯಾಲಯ, ಉತ್ತರಾಖಂಡದ ಹೇಮವಾತಿ ನಂದನ್ ಗಡ್ವಾಲ್ ವಿಶ್ವವಿದ್ಯಾಲಯ, ವರ್ಧಾದ ಮಹಾತ್ಮ ಗಾಂಧೀ ಅಂತರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ, ಮಧ್ಯಪ್ರದೇಶದ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ಆಡಳಿತಾತ್ಮಕ, ಸಂಶೋಧನ, ಆರ್ಥಿಕ ಮತ್ತು ಹಣಕಾಸು ವಿಷಯಗಳ ಲೆಕ್ಕಪರಿಶೋಧನೆಯನ್ನು ಮಾಡಲಾಯಿತು.

    ಸಮಿತಿಯಿಂದ ವಿಶ್ವವಿದ್ಯಾಲಯಗಳ ಮೂಲಭೂತ ಅಗತ್ಯತೆಗಳು ಹಾಗೂ ಆರ್ಥಿಕತೆಯ ಕುರಿತು ವರದಿಯನ್ನು ಸಿದ್ಧಪಡಿಸಲಾಗಿದೆ. ವಿಶೇಷವಾಗಿ ಎಎಂಯು ವಿಶ್ವವಿದ್ಯಾಲದಲ್ಲಿ ಕೈಗೊಂಡಿರುವ ನೇಮಕಾತಿಗಳಲ್ಲಿ ಉಂಟಾಗಿರುವಂತಹ ಭ್ರಷ್ಟಚಾರದ ಕುರಿತು ತನ್ನ ವರದಿಯಲ್ಲಿ ಮಾಹಿತಿಯನ್ನು ನೀಡಿದೆ. ಇದುವರೆಗೂ ಎಎಂಯುನಲ್ಲಿ ನೇಮಕವಾದ ಎಲ್ಲಾ ಬೋಧಕರು ಸಹ ಅದೇ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರಾಗಿದ್ದಾರೆ. ಅಲ್ಲದೆ ಹುದ್ದೆಗಳು ಖಾಲಿ ಇಲ್ಲದಿದ್ದರೂ ಸಹ ಆಕ್ರಮವಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವ ಕುರಿತ ದೂರಗಳ ಬಗ್ಗೆಯು ವರದಿಯನ್ನು ನೀಡಲು ಯುಜಿಸಿ ಸೂಚಿಸಿದೆ.