ಆಲಿಯಾ ಭಟ್(Alia Bhaat) ಮತ್ತು ರಣ್‌ಬೀರ್ ಕಪೂರ್(Ranbir Kapoor) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮನೆಗೆ ಮುದ್ದು ಮಗಳ ಆಗಮನವಾಗಿದೆ. ಹೆರಿಗೆಯ ಬಳಿಕ ಆಲಿಯಾ ಮನೆಗೆ ಆಗಮಿಸಿದ್ದಾರೆ.

ಬಾಲಿವುಡ್‌ನ(Bollywood) `ಬ್ರಹ್ಮಾಸ್ತ್ರ’ ಜೋಡಿ ರಣ್‌ಬೀರ್ ಮತ್ತು ಆಲಿಯಾ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಈ ವರ್ಷ ಹಸೆಮಣೆ ಏರಿದ್ದರು. ಇದೀಗ ಮನೆಗೆ ಮುದ್ದು ಮಹಾಲಕ್ಷ್ಮಿಯ ಆಗಮನವಾಗಿದೆ. ಇದೇ (ನ.6)ರಂದು ಆಲಿಯಾ ಹೆಣ್ಣು ಮಗುವಿಗೆ(Baby Girl) ಜನ್ಮ ನೀಡಿದ್ದರು. ಇದೀಗ ಹೆರಿಗೆಯ ನಂತರ ಮಗಳೊಂದಿಗೆ ಆಲಿಯಾ ದಂಪತಿ ಮನೆಗೆ ಬಂದಿದ್ದಾರೆ.
View this post on Instagram
ಕಪೂರ್ ಕುಟುಂಬದಲ್ಲಿ(Kapoor Family) ಸಂತಸ ಮನೆ ಮಾಡಿದೆ. ಆಲಿಯಾ ಖುಷಿಯಿಂದ ಮಗುವಿನತ್ತ ನೋಡಿದ್ರೆ, ರಣ್‌ಬೀರ್ ಮಗಳು ಎತ್ತಿಕೊಂಡು ಕಾರಿನಿಂದ ಇಳಿಯುತ್ತಿದ್ದಾರೆ. ಸದ್ಯ ಆಲಿಯಾ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ಆಲಿಯಾ ಭಟ್

ಈ ವೇಳೆ ಪಾಪರಾಜಿ ಅವರ ಕ್ಯಾಮೆರಾ ಕಣ್ಣಿನಿಂದ ಮಗುವಿನ ಮುಖ ತೋರಿಸದೇ ರಣ್‌ಬೀರ್ ಮರೆಮಾಚಿದ್ದಾರೆ.






`ಬ್ರಹ್ಮಾಸ್ತ್ರʼ ಚಿತ್ರದ ಪ್ರಚಾರ ಕಾರ್ಯದಲ್ಲಿ ಆಲಿಯಾ ಮತ್ತು ರಣ್‌ಬೀರ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಆಲಿಯಾ ಪಿಂಕ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ್ದರು. ನಟಿಯ ಬೇಬಿ ಬಂಪ್ ಲುಕ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.



ಸಂದರ್ಶನವೊಂದರಲ್ಲಿ ರಣ್‌ಬೀರ್‌ಗೊಂದು ಟಾಸ್ಕ್ ನೀಡಲಾಗಿತ್ತು. ಒಂದು ಸುಳ್ಳು, ಎರಡು ಸತ್ಯ ಹೇಳಬೇಕು ಎಂದು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ನಟ, ನಾನು ಅವಳಿ ಮಕ್ಕಳ ತಂದೆಯಾಗುತ್ತಿದ್ದೇನೆ. ಒಂದು ದೊಡ್ಡ ಪೌರಾಣಿಕ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರರಂಗದಿಂದ ದೀರ್ಘ ಕಾಲ ಬ್ರೇಕ್ ತೆಗೆದುಕೊಳ್ಳಲಿದ್ದೇನೆ ಈ ಮೂರು ವಾಕ್ಯಗಳನ್ನ ಹೇಳಿದ್ದಾರೆ. ಪೌರಾಣಿಕ ಶೈಲಿಯ `ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣ್‌ಬೀರ್ ನಟಿಸಿರುವುದು ನಿಜ ಆದರೆ ಇನ್ನುಳಿದ ಹೇಳಿಕೆಯಲ್ಲಿ ಯಾವುದು ನಿಜ ಮತ್ತು ಸುಳ್ಳು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಅಷ್ಟಕ್ಕೂ ನಟಿ ಆಲಿಯಾ ಭಟ್ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರಾ ಎಂಬುದನ್ನ ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.
