Tag: bhramastra

  • ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ 1 ವರ್ಷ- ಚಿತ್ರತಂಡದಿಂದ ಗುಡ್ ನ್ಯೂಸ್

    ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ 1 ವರ್ಷ- ಚಿತ್ರತಂಡದಿಂದ ಗುಡ್ ನ್ಯೂಸ್

    ಣ್‌ಬೀರ್ ಕಪೂರ್- ಆಲಿಯಾ ಭಟ್ (Alia Bhatt) ನಟನೆಯ ಬ್ರಹ್ಮಾಸ್ತ್ರ (Brahmastra Film) ಸಿನಿಮಾ 2022ರಲ್ಲಿ ತೆರೆಕಂಡಿತ್ತು. ಈ ಸಿನಿಮಾ ಇದೀಗ ಒಂದು ವರ್ಷ ಪೂರೈಸಿದೆ. ಈ ಖುಷಿಯಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ, ಬ್ರಹ್ಮಾಸ್ತ್ರ ಪಾರ್ಟ್ 2, 3 ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಅಯಾನ್ ಮುಖರ್ಜಿ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಾರ್ಟೂನ್ ಚಿತ್ರಗಳು, ವಿಡಿಯೋಗಳನ್ನು ಹಂಚಿಕೊಂಡಿದ್ದು, ಬ್ರಹ್ಮಾಸ್ತ್ರ 2 ಮತ್ತು 3 ಕೆಲಸ ಚಾಲ್ತಿಯಲ್ಲಿದೆ ಎಂದಿದ್ದಾರೆ. ಸದ್ಯಕ್ಕೆ ಬ್ರಹ್ಮಾಸ್ತ್ರ 2 & 3 ಸಿನಿಮಾಗಳ ಕಾನ್ಸೆಪ್ಟ್ ಆರ್ಟ್ ವರ್ಕ್ ನಡೆಯುತ್ತಿದ್ದು, ಕಾನ್ಸೆಪ್ಟ್ ಆರ್ಟ್ ವರ್ಕ್ ಮುಗಿದ ಕೂಡಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಮೂಲಕ ರಣ್‌ಬೀರ್‌-ಆಲಿಯಾ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ.  ಇದನ್ನೂ ಓದಿ:ವಿಕ್ಕಿ ವರುಣ್ ನಟಿಸಿ, ನಿರ್ದೇಶನ ಮಾಡಿರುವ ‘ಕಾಲಾಪತ್ಥರ್’ ಸಾಂಗ್ ರಿಲೀಸ್

    ಅಯಾನ್ ಮುಖರ್ಜಿ ಈಗ ಹಂಚಿಕೊಂಡಿರುವ ಕಾರ್ಟೂನ್ ಚಿತ್ರ- ವಿಡಿಯೋಗಳಲ್ಲಿ ಶಿವ ಭಕ್ತನೊಬ್ಬ ಆಯುಧ ಹಿಡಿದು ದೈತ್ಯಾಕಾರದ ಅಸುರನನ್ನು ಕೊಲ್ಲಲು ಯತ್ನಿಸುತ್ತಿರುವ ದೃಶ್ಯಗಳಿವೆ. ಆ ವ್ಯಕ್ತಿಗೆ ಮಹಿಳೆಯೊಬ್ಬಾಕೆ ಬೆಂಬಲವಾಗಿ ನಿಂತಿರುವುದು ಸಹ ಕಾಣುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾವು ಅಗ್ನಿ ಅಸ್ತ್ರ, ವಾಯು ಅಸ್ತ್ರ, ಜಲ ಅಸ್ತ್ರ ಹೀಗೆ ಬೇರೆ ಬೇರೆ ಆಯುಧಗಳ ಕುರಿತಾದ ಕತೆಯನ್ನು ಒಳಗೊಂಡಿತ್ತು. ರಣ್‌ಬೀರ್ ಅಗ್ನಿ ಅಸ್ತ್ರ ಸಂರಕ್ಷಕನಾಗಿ ಪಾತ್ರದಲ್ಲಿ ನಟಿಸಿದ್ದರು. ಮುಂದುವರೆದ ಭಾಗದಲ್ಲಿ ದೀಪಿಕಾ ಪಡುಕೋಣೆ ಕೂಡ ಕಾಣಿಸಿಕೊಳ್ಳಲಿದ್ದಾರೆ.

    ರಣ್‌ಬೀರ್ (Ranbir Kapoor) ಶಿವ ಪಾತ್ರಕ್ಕೆ ಜೀವತುಂಬಿದ್ದು, ಆಲಿಯಾ ಭಟ್ ಇಶಾ ರೋಲ್‌ನಲ್ಲಿ ನಟಿಸಿದ್ದರು. ಮೌನಿ ರಾಯ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಉಳಿದಂತೆ ಬಿಗ್ ಬಿ, ಶಾರುಖ್ ಖಾನ್, ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಬ್ರಹ್ಮಾಸ್ತ್ರʼ ಬಳಿಕ ನಟನೆಯಿಂದ ದೂರ ಸರಿದ ರಣ್‌ಬೀರ್ ಕಪೂರ್

    `ಬ್ರಹ್ಮಾಸ್ತ್ರʼ ಬಳಿಕ ನಟನೆಯಿಂದ ದೂರ ಸರಿದ ರಣ್‌ಬೀರ್ ಕಪೂರ್

    `ಬ್ರಹ್ಮಾಸ್ತ್ರ’ (Bramastra Film) ಚಿತ್ರದ ನಂತರ ರಣ್‌ಬೀರ್ ಕಪೂರ್(Ranbir Kapoor)  ಸಿನಿಮಾದಿಂದ ದೂರ ಸರಿದಿದ್ದಾರೆ. ಸಿನಿಮಾ ಒಪ್ಪಿಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ಪತ್ನಿ ಆಲಿಯಾ ಭಟ್ (Alia Bhatt) ಅವರ ಸೀಮಂತ ಶಾಸ್ತ್ರದ ನಂತರ ಸಿನಿಮಾಗಳಿಗೆ ರಣ್‌ಬೀರ್ ಬ್ರೇಕ್ ಹಾಕಿದ್ದಾರೆ.

     

    View this post on Instagram

     

    A post shared by Alia Bhatt ????☀️ (@aliaabhatt)

    ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಕಪೂರ್ ಕುಟುಂಬ(Kapoor Family), ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ʻಬ್ರಹ್ಮಾಸ್ತ್ರʼ ಚಿತ್ರದ  ನಂತರ ರಣ್‌ಬೀರ್  ಖಡಕ್ ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯದ ಮಟ್ಟಿಗೆ ನಟನೆಯಿಂದ ದೂರ ಸರಿಯಲು ಯೋಚಿಸಿದ್ದಾರೆ.

     

    View this post on Instagram

     

    A post shared by Alia Bhatt ????☀️ (@aliaabhatt)

    ಪತ್ನಿ ಆಲಿಯಾ ಭಟ್ ಅವರ ಸೀಮಂತ ಶಾಸ್ತ್ರ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತ್ತು. ತುಂಬು ಗರ್ಭಿಣಿಯಾಗಿರುವ ಆಲಿಯಾಗೆ ಇದೀಗ ಪ್ರೀತಿ ಪಾತ್ರರು ಹತ್ತಿರವಿರುವ ಅವಶ್ಯಕತೆಯಿದೆ. ಹಾಗಾಗಿ ನಟನೆಗೆ ಕೊಂಚ ಬ್ರೇಕ್ ಹಾಕಿ, ಪತ್ನಿಯ ಆರೈಕೆಯಲ್ಲಿ ರಣ್‌ಬೀರ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನ ರಣ್‌ಬೀರ್ ಇದೀಗ ಕಂಪ್ಲೀಟ್ ಮಾಡಿ ಕೊಡುತ್ತಿದ್ದಾರೆ. ಇದನ್ನೂ ಓದಿ:ರಿಷಬ್ ನಟನೆಯ `ಕಾಂತಾರ’ ಸಿನಿಮಾ ನೋಡಿ ಕಿಚ್ಚನ ರಿಯಾಕ್ಷನ್

    ಮುದ್ದು ಮಗುವಿನ ಆಗಮನದ ನಂತರ ಆಲಿಯಾ ಚೇತರಿಸಿಕೊಂಡ ಮೇಲೆ ಮತ್ತೆ ರಣ್‌ಬೀರ್ ಕಪೂರ್ ನಟನೆಯತ್ತ ಮುಖ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಬ್ರಹ್ಮಾಸ್ತ್ರʼ ಚಿತ್ರದ ಸಕ್ಸಸ್ ನಂತರ ಮೀಡಿಯಾಗೆ ಕ್ಷಮೆ ಕೇಳಿದ ಆಲಿಯಾ ಭಟ್

    `ಬ್ರಹ್ಮಾಸ್ತ್ರʼ ಚಿತ್ರದ ಸಕ್ಸಸ್ ನಂತರ ಮೀಡಿಯಾಗೆ ಕ್ಷಮೆ ಕೇಳಿದ ಆಲಿಯಾ ಭಟ್

    ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia bhatt) ಸದ್ಯ `ಬ್ರಹ್ಮಾಸ್ತ್ರ’ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಬೆನ್ನಲ್ಲೇ ಆಲಿಯಾ, ಮೀಡಿಯಾ ಬಳಿ ಕ್ಷಮೆ ಕೇಳಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಬಾಯ್ಕಾಟ್ `ಬ್ರಹ್ಮಾಸ್ತ್ರʼ (Bramhastra) ಟ್ರೆಂಡ್ ನಡುವೆಯೂ ಚಿತ್ರ ಗೆದ್ದು ಬೀಗಿದೆ. ಆಲಿಯಾ ಮತ್ತು ರಣ್‌ಬೀರ್ ಸ್ಟೋರಿ ಫ್ಯಾನ್ಸ್ ಕೂಡ ಮೆಚ್ಚಿಕೊಂಡಿದ್ದಾರೆ. ಇದೀಗ ಆಲಿಯಾ, ಮೀಡಿಯಾ ಮತ್ತು ಫೋಟೋಗ್ರಾಫರ್ ಜೊತೆ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮೀಡಿಯಾಗೆ ನಟಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ:ಹಿಂದಿ ಕಿರುತೆರೆಯಲ್ಲಿ ಬರಲಿದೆ `ಕೆಜಿಎಫ್ 2′ ಚಿತ್ರ: ರಾಕಿಭಾಯ್ ಎಂಟ್ರಿಗೆ ಕೌಂಟ್ ಡೌನ್

     

    View this post on Instagram

     

    A post shared by Manav Manglani (@manav.manglani)

    ವೈಯಕ್ತಿಕ ವಿಚಾರ ಮತ್ತು ಸಿನಿಮಾ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಆಲಿಯಾ ಈಗ ವ್ಯಕ್ತಿತ್ವದಿಂದ ಕೂಡ ಸುದ್ದಿಯಾಗಿದ್ದಾರೆ. ಕಾರಿನಲ್ಲಿ ಕುಳಿತು, ಕ್ಷಮಿಸಿ ನನಗೆ ನಡೆಯೋಕೆ ಆಗಲ್ಲಾ ಪಾಪರಾಜಿಗಳಿಗೆ ಕೈ ಬೀಸಿ ಸ್ಮೈಲ್ ಮಾಡಿದ್ದಾರೆ. ಆಲಿಯಾ ನಡೆ ಫೋಟೋಗ್ರಾಫರ್‌ಗಳ ಮನಗೆದ್ದಿದೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ʼಬ್ರಹ್ಮಾಸ್ತ್ರʼ ಚಿತ್ರದಲ್ಲಿ ನಾಯಕನ ತಾಯಿ ಪಾತ್ರ ಮಾಡಿರೋ ನಟಿ ರಣಬೀರ್‌ ಮಾಜಿ ಪ್ರೇಯಸಿ?

    ʼಬ್ರಹ್ಮಾಸ್ತ್ರʼ ಚಿತ್ರದಲ್ಲಿ ನಾಯಕನ ತಾಯಿ ಪಾತ್ರ ಮಾಡಿರೋ ನಟಿ ರಣಬೀರ್‌ ಮಾಜಿ ಪ್ರೇಯಸಿ?

    ಬಾಯ್ಕಾಟ್ ನಡುವೆಯೂ ಬಾಲಿವುಡ್‌ನಲ್ಲಿ `ಬ್ರಹ್ಮಾಸ್ತ್ರ’ (Brahmastra) ಸಿನಿಮಾ ಕೋಟಿ ಕೋಟಿ ಲೂಟಿ ಮಾಡಿ ಗೆದ್ದು ಬಿಗುತ್ತಿದೆ. ರಣ್‌ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಲವ್ ಕೆಮಿಸ್ಟ್ರಿ ಜೊತೆ ಚಿತ್ರದ ಕಂಟೆಂಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೀಗಿರುವಾಗ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ತಾಯಿಯ ಪಾತ್ರದಲ್ಲಿ ರಣ್‌ಬೀರ್‌ ಮಾಜಿ  ಗರ್ಲ್‌ಫ್ರೆಂಡ್ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

    ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರಕ್ಕೆ ಸಾಕಷ್ಟು ಅಡೆತಡೆ ಬಂದಿತ್ತು. ಇದೀಗ ರಿಲೀಸ್ ಆಗಿ ಎರಡೇ ದಿನಕ್ಕೆ 160 ಕೋಟಿ ಗಲ್ಲಾಪೆಟ್ಟಿಗೆಯಲ್ಲಿ ಲೂಟಿ ಮಾಡಿದೆ. ಈ ಗುಡ್ ನ್ಯೂಸ್ ನಡುವೆ ಶಾಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ. `ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣ್‌ಬೀರ್ ತಾಯಿಯ ಪಾತ್ರದಲ್ಲಿ ನಟನ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕಾಫಿನಾಡು ಚಂದು ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ

    ಈ ಚಿತ್ರದಲ್ಲಿ ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಶಿವ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ಇದೇ ಚಿತ್ರದಲ್ಲಿ ಸಣ್ಣ ದೃಶ್ಯವೊಂದರಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು. ಮಗು ಅವರ ಕೈಯಲ್ಲಿದೆ. ಇದರಿಂದ ಚಿತ್ರದಲ್ಲಿ ರಣಬೀರ್‌ಗೆ ತಾಯಿಯಾಗಿದ್ದಾಳೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕುರಿತ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]