Tag: bhopal

  • ಟೀಚರ್‌ ಮೇಲೆ ಸಿಕ್ಕಾಪಟ್ಟೆ ಲವ್‌ –  ದೂರು ನೀಡಿದ್ದಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಹಳೇ ವಿದ್ಯಾರ್ಥಿ

    ಟೀಚರ್‌ ಮೇಲೆ ಸಿಕ್ಕಾಪಟ್ಟೆ ಲವ್‌ – ದೂರು ನೀಡಿದ್ದಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಹಳೇ ವಿದ್ಯಾರ್ಥಿ

    ಭೋಪಾಲ್‌: ಟ್ರೆಂಡ್‌ ಬದಲಾದಂತೆ ಪ್ರೀತಿ (Love) ಮಾಡುವ ವಿಧಾನ ಕೂಡ ಬದಲಾಗ್ತಿದೆ. ಈಗಿನ ಕಾಲದ ಕೆಲವು ಲವ್ ಸ್ಟೋರಿಗಳು ಹೇಗಿರ್ತಾವೆ ಅಂದ್ರೆ ಬೆಳಗ್ಗೆ ವಾಟ್ಸಪ್‌ನಲ್ಲಿ ಪ್ರಪೋಸ್ ಮಾಡಿದ್ರೆ, ಮಧ್ಯಾಹ್ನ ಕೈಕೈ ಹಿಡಿದು ಸುತ್ತಾಡಿಕೊಂಡಿರ್ತಾರೆ, ಸಂಜೆ ಬ್ರೇಕಪ್ ಮಾಡಿಕೊಳ್ಳಾರೆ. ಅದಕ್ಕಾಗಿ ಖತರ್ನಾಕ್ ಪ್ಲ್ಯಾನ್‌ಗಳನ್ನೂ ಮಾಡಿರ್ತಾರೆ. ಒಂದು ವೇಳೆ ಪ್ರೇಯಸಿ ಮದ್ವೆ ಅಂತೇನಾದ್ರೂ ಪೀಡಿಸಿದ್ರೆ ಕಥೆ ಮುಗಿಸಿಯೇ ಬಿಡ್ತಾರೆ. ಪ್ರೀತಿ ವಿಚಾರದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗಿರೋದ್ರಿಂದ ನಿಜವಾದ ಪ್ರೀತಿ ಹುಡುಕುವಲ್ಲಿ ಯುವ ಮನಸ್ಸುಗಳು ಸೋಲುತ್ತಿವೆ. ಆದ್ರೆ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

    ಯೆಸ್‌. ಮಧ್ಯಪ್ರದೇಶದ (Madhya Pradesh) ನರಸಿಂಹಪುರ ಜಿಲ್ಲೆಯಲ್ಲಿ 18 ವರ್ಷದ ವಿದ್ಯಾರ್ಥಿಯೊಬ್ಬ ತಾನು ಹಿಂದೆ ಕಲಿತ ಶಾಲೆಯ 26 ವರ್ಷದ ಅತಿಥಿ ಶಿಕ್ಷಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನ ನರಸಿಂಹಪುರ ಜಿಲ್ಲೆಯ ಕೋಟವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಎಕ್ಸಲೆನ್ಸ್ ಸ್ಕೂಲ್‌ನ ಮಾಜಿ ವಿದ್ಯಾರ್ಥಿ ಸೂರ್ಯಾಂಶ್ ಕೊಚಾರ್ ಅಂತ ಗುರುತಿಸಲಾಗಿದೆ.

    ಆರೋಪಿಗೆ ಶಿಕ್ಷಕಿ ಮೇಲೆ ಒನ್ ಸೈಡ್ ಲವ್ ಇತ್ತು ಅಂತ ಹೇಳಲಾಗ್ತಿದೆ, ಆತನ ವಿರುದ್ಧ ದೂರು ನೀಡಿದ್ದರಿಂದ ಕೋಪಗೊಂಡ ಯುವಕ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ದೆಹಲಿ ಸಿಎಂಗೆ ಕಪಾಳಮೋಕ್ಷ – ತಿಹಾರ್‌ ಜೈಲಿನಲ್ಲಿದ್ದ ತನ್ನ ಸಂಬಂಧಿ ಬಿಡಿಸೋದಕ್ಕಾಗಿ ರೇಖಾ ಗುಪ್ತಾ ಭೇಟಿಗೆ ಬಂದಿದ್ದ ವ್ಯಕ್ತಿ

    ಹೌದು. ಇದೇ ಆಗಸ್ಟ್‌ 18ರಂದು ಮಧ್ಯಾಹ್ನ 3:30ರ ಆರೋಪಿ ಪೆಟ್ರೋಲ್ ತುಂಬಿದ ಬಾಟಲ್‌ ತೆಗೆದುಕೊಂಡು ಶಿಕ್ಷಕಿಯ ಮನೆಗೆ ಹೋಗಿದ್ದಾನೆ. ಆಕೆ ಮಾತನಾಡೋದಕ್ಕೂ ಅವಕಾಶ ಕೊಡದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್‌ ಆಗಿದ್ದಾನೆ. 10-15% ನಷ್ಟು ಗಾಯಗಳಾಗಿರುವ ಸಂತ್ರಸ್ತೆಯನ್ನ ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುಟ್ಟಗಾಯಗಳು ಗಂಭೀರವಾಗಿದ್ದರೂ, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂನಿಂದ 1.30 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ರಾಯರ ಏಕಶಿಲಾ ವೃಂದಾವನ ಜಲಾವೃತ

    ಈ ಕುರಿತು ಮಾತನಾಡಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ ಮನೋಜ್ ಗುಪ್ತಾ, ಆರೋಪಿ ಮತ್ತು ಶಿಕ್ಷಕಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಪರಸ್ಪರ ಪರಿಚಿತರಾಗಿದ್ದರು. ಸೂರ್ಯಾಂಶ್ ಶಿಕ್ಷಕಿ ಬಗ್ಗೆ ಒನ್ ಸೈಡ್ ಲವ್ ಬೆಳಸಿಕೊಂಡಿದ್ದ. ಆದ್ರೆ ಒಂದೆರಡು ವರ್ಷಗಳ ಹಿಂದೆ ಆರೋಪಿ ವಿದ್ಯಾರ್ಥಿಯನ್ನ ಶಿಕ್ಷಕಿ ಕಲಿಸುತ್ತಿದ್ದ ಶಾಲೆಯಿಂದ ಹೊರಹಾಕಲಾಗಿತ್ತು. ಬಳಿಕ ಆರೋಪಿ ಬೇರೆ ಶಾಲೆಯಲ್ಲಿ ಓದುತ್ತಿದ್ದ. ಇದೇ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಆರೋಪಿಯು ಶಿಕ್ಷಕಿ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊತ್ವಾಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಎಮ್ಮೆ ಕೊಡಿಸೋದಾಗಿ KD ನಿರ್ದೇಶಕನಿಗೆ ಲಕ್ಷ ಲಕ್ಷ ವಂಚನೆ – ಪ್ರೇಮ್ ಹೇಳಿದ್ದೇನು..?

  • 12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

    12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

    ಲಕ್ನೋ: 12 ದಿನಗಳ ಹಿಂದೆ ಮಧ್ಯಪ್ರದೇಶದ ರೈಲಿನಿಂದ ನಾಪತ್ತೆಯಾಗಿದ್ದ ಮಹಿಳಾ ತರಬೇತಿ ವಕೀಲೆ ಅರ್ಚನಾ ತಿವಾರಿ (Archana Tiwari) ಉತ್ತರ ಪ್ರದೇಶದ ಲಿಂಖಿಂಪುರ ಖೇರಿ ನಗರದಲ್ಲಿ (Lakhimpur Kheri City) ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭೋಪಾಲ್‌ನ (Bhopal) ಸರ್ಕಾರಿ ರೈಲ್ವೆ ಪೊಲೀಸರು (GRP) ಅರ್ಚನಾರನ್ನ ನೇಪಾಳ ಗಡಿಯಲ್ಲಿ ಪತ್ತೆಹಚ್ಚಿದ್ದು, ಭೋಪಾಲ್‌ಗೆ ಕರೆದೊಯ್ದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ `ಆನ್‌ಲೈನ್ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

    ರಕ್ಷಾಬಂಧನ ಹಬ್ಬಕ್ಕಾಗಿ ಇದೇ ಆಗಸ್ಟ್‌ 7-8ರ ತಡರಾತ್ರಿ ಅರ್ಚನಾ ಇಂದೋರ್‌ನಿಂದ ಕಟ್ನೆಗೆ ರೈಲಿನಲ್ಲಿ ಹೊರಟಿದ್ದರು. ಆದ್ರೆ ತಮ್ಮ ನಿಗದಿತ ಸ್ಥಾನ ತಲುಪದಿದ್ದಾಗ ನಾಪತ್ತೆಯಾಗಿರುವುದು ಗೊತ್ತಾಯಿತು. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

    ವಿಚಾರಣೆ ಬಳಿಕ ಹೊರ ಬರಬೇಕಿದೆ ಸತ್ಯ
    ಕಳೆದ 12 ದಿನಗಳಿಂದ ಹುಡುಕಾಟ ನಡೆಸುತ್ತಿದ್ದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಕೊನೆಗೂ ಅರ್ಚನಾರನ್ನ ಭಾರತ-ನೇಪಾಳ ಗಡಿಯಲ್ಲಿ ಪತ್ತೆಹಚ್ಚಿದ್ದಾರೆ ಎಂದು ರೈಲ್ವೆ ಎಸ್ಪಿ ರಾಹುಲ್ ಕುಮಾರ್ ಲೋಧಾ ಹೇಳಿದ್ದಾರೆ. ಪೊಲೀಸರು ಅರ್ಚನಾರನ್ನ ಭೋಪಾಲ್‌ಗೆ ಕರೆತರುತ್ತಿದ್ದು, ಹೇಳಿಕೆ ದಾಖಲಿಸಿದ ಬಳಿಕವೇ ಇಡೀ ಘಟನಾ ವಿವರ ತಿಳಿಯಲಿದೆ ಎಂದು ತಿಳಿಸಿದ್ದಾರೆ.

    ರಕ್ಷಣಾ ಬಂಧನ ಹಬ್ಬಕ್ಕೆ ನರ್ಮದಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದ ಅರ್ಚನಾ ಇಂದೊರ್‌ನಿಂದ ಹೊರಟಿದ್ದರು, ಕೊನೆಯದಾಗಿ ಇಟಾರ್ಸಿ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ಸಂಪರ್ಕ ಸಾಧ್ಯವಾಗಿರಲಿಲ್ಲ.

    ಅರ್ಚನಾ ತಿವಾರಿ ತಿವಾರಿ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದಲ್ಲಿ ಅಭ್ಯಾಸ ವಕೀಲರಾಗಿದ್ದರು. ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

  • ಬಾಸ್ ಜೊತೆ ಅಕ್ರಮ ಸಂಬಂಧದ ಶಂಕೆ – ಲಿವ್ ಇನ್ ಗೆಳತಿಯ ಹತ್ಯೆಗೈದು ಶವದೊಂದಿಗೆ ಮಲಗಿದ್ದ 2 ಮಕ್ಕಳ ತಂದೆ

    ಬಾಸ್ ಜೊತೆ ಅಕ್ರಮ ಸಂಬಂಧದ ಶಂಕೆ – ಲಿವ್ ಇನ್ ಗೆಳತಿಯ ಹತ್ಯೆಗೈದು ಶವದೊಂದಿಗೆ ಮಲಗಿದ್ದ 2 ಮಕ್ಕಳ ತಂದೆ

    ಭೋಪಾಲ್: ಬಾಸ್ ಜೊತೆ ಅಕ್ರಮ ಸಂಬಂಧವಿರಬಹುದು ಎಂದು ಶಂಕಿಸಿ ಲಿವ್ ಇನ್ ಗೆಳತಿಯನ್ನು ಕೊಂದು, ಆಕೆಯ ಮೃತದೇಹದೊಂದಿಗೆ 2 ದಿನ ಮಲಗಿದ್ದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ (Madhya Pradesh) ಭೋಪಾಲ್‌ನ (Bhopal) ಗಾಯಿತ್ರಿ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ವಿದಿಶಾದ ಸಿರೋಂಜ್ ಮೂಲದ ಸಚಿನ್ ರಜಪೂತ್ (32) ಹಾಗೂ ಮೃತ ಲಿವ್ ಇನ್ ಗೆಳತಿಯನ್ನು ರಿತಿಕಾ ಸೇನ್ (29) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ರಾಮಾಯಣ ಫಸ್ಟ್ ಗ್ಲಿಮ್ಸ್ ನೋಡಲು ತಯಾರಾಗಿ ಎಂದ ಯಶ್

    ಪ್ರಾಥಮಿಕ ಮಾಹಿತಿ ಪ್ರಕಾರ, ಕಳೆದ 3.5 ವರ್ಷಗಳಿಂದ ಸಚಿನ್ ಹಾಗೂ ರಿತಿಕಾ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಸುಮಾರು 9 ತಿಂಗಳಿಂದ ಇಬ್ಬರು ಗಾಯತ್ರಿ ನಗರದ ಮನೆಯೊಂದರಲ್ಲಿ ವಾಸವಾಗಿದ್ದರು. ರಿತಿಕಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸಚಿನ್ ನಿರುದ್ಯೋಗಿಯಾಗಿದ್ದ ಹಾಗೂ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು.

    ಜೂ.27ರಂದು ರಾತ್ರಿ ರಿತಿಕಾಳಿಗೆ ಕಂಪನಿಯ ಬಾಸ್ ಜೊತೆ ಸಂಬಂಧವಿದೆ ಎಂದು ಶಂಕಿಸಿ ಇಬ್ಬರ ನಡುವೆ ಜಗಳವಾಗಿತ್ತು. ಅದು ವಾದ-ವಿವಾದಕ್ಕೆ ತಿರುಗಿ ಅತಿರೇಕಕ್ಕೆ ಹೋಗಿತ್ತು. ಇದೇ ಕೋಪದಲ್ಲಿ ಸಚಿನ್ ರಿತಿಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಆಕೆಯ ಪಕ್ಕದಲ್ಲಿ ಎರಡು ದಿನ ಮಲಗಿದ್ದಾನೆ. ಕೊಲೆ ಮಾಡಿದ ಬಳಿಕ ಕುಡಿಯುತ್ತಾ ತೀರಾ ಆಘಾತಕ್ಕೆ ಒಳಗಾಗಿದ್ದ. ನಶೆಯಲ್ಲಿ ತನ್ನ ಸ್ನೇಹಿತ ಅನೂಜ್‌ಗೆ ಕರೆ ಮಾಡಿ, ನಡೆದಿರುವ ವಿಷಯವನ್ನು ತಿಳಿಸಿದ. ಆದರೆ ಅನೂಜ್ ಮಾತ್ರ ನಶೆಯಲ್ಲಿ ಏನೇನೋ ಮಾತಾಡುತ್ತಿದ್ದಾನೆ ಎಂದುಕೊಂಡು ನಂಬಿರಲಿಲ್ಲ.

    ಮಾರನೇ ದಿನ ಸಚಿನ್ ಮತ್ತದೇ ವಿಷಯವನ್ನು ಹೇಳಿದಾಗ ಅನೂಜ್ ಪೊಲೀಸರಿಗೆ ಮಾಹಿತಿ ನೀಡಿದ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ರಿತಿಕಾ ಮೃತದೇಹ ಪತ್ತೆಯಾಗಿತ್ತು. ಸದ್ಯ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆರೋಪಿ ಸಚಿನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ‘ಅಮೆರಿಕ ಪಾರ್ಟಿ’; ಹೊಸ ರಾಜಕೀಯ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಮಸ್ಕ್‌

  • ಪಾಕಿಸ್ತಾನದ ಗುಂಡಿಗೆ ಫಿರಂಗಿ ಗುಂಡುಗಳಿಂದಲೇ ಉತ್ತರ – ಭಯೋತ್ಪಾದಕರಿಗೆ ಮೋದಿ ಮತ್ತೆ ವಾರ್ನಿಂಗ್‌

    ಪಾಕಿಸ್ತಾನದ ಗುಂಡಿಗೆ ಫಿರಂಗಿ ಗುಂಡುಗಳಿಂದಲೇ ಉತ್ತರ – ಭಯೋತ್ಪಾದಕರಿಗೆ ಮೋದಿ ಮತ್ತೆ ವಾರ್ನಿಂಗ್‌

    – ಆಪರೇಷನ್‌ ಸಿಂಧೂರ ರಾಷ್ಟ್ರದ ಶಕ್ತಿಯ ಸಂಕೇತವಾಗಿ ನಿಂತಿದೆ; ಪ್ರಧಾನಿ
    – 15 ಸಾವಿರ ಮಹಿಳೆಯರಿಂದ ಪ್ರಧಾನಿಗಳಿಗೆ ಭೋಪಾಲ್‌ನಲ್ಲಿ ಸ್ವಾಗತ ‌
    – ಭೋಪಾಲ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ

    ಭೋಪಾಲ್: ಪಾಕಿಸ್ತಾನದ (Pakistan) ಗುಂಡಿನ ದಾಳಿಗಳಿಗೆ ಫಿರಂಗಿ ಗುಂಡುಗಳ ಮೂಲಕವೇ ನಾವು ಉತ್ತರಿಸುತ್ತೇವೆ ಎಂಬುದಕ್ಕೆ ಆಪರೇಷನ್‌ ಸಿಂಧೂರ ಸ್ಪಷ್ಟ ನಿರ್ದಶನವಾಗಿದೆ. ಇದು ರಾಷ್ಟ್ರದ ಶಕ್ತಿಯ ಸಂಕೇತವಾಗಿ ನಿಂತಿದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದರು.

    ಭೋಪಾಲ್‌ನಲ್ಲಿ (Bhopal) ಲೋಕಮಾತಾ ದೇವಿ ಅಹಲ್ಯಾಬಾಯಿ ಮಹಿಳಾ ಸಶಕ್ತಿಕರಣ ಮಹಾ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಆಪರೇಷನ್‌ ಸಿಂಧೂರ (Operation Sindoor) ಭಯೋತ್ಪಾದನೆಯ ವಿರುದ್ಧದ ಅತಿದೊಡ್ಡ ದಾಳಿಯಾಗಿದೆ. ಪಾಕಿಸ್ತಾನದ ಗುಂಡಿನ ದಾಳಿಗಳಿಗೆ ಫಿರಂಗಿ ಗುಂಡುಗಳ ಮೂಲಕವೇ ಉತ್ತರಿಸುತ್ತೇವೆ ಎಂಬುದಕ್ಕೆ ಸ್ಪಷ್ಟ ನಿರ್ದಶನ ಆಗಿದೆ. ಇದು ರಾಷ್ಟ್ರದ ಶಕ್ತಿಯ ಸಂಕೇತವಾಗಿ ನಿಂತಿದೆ ಎಂದು ʻಆಪರೇಷನ್‌ ಸಿಂಧೂರʼವನ್ನ ಬಣ್ಣಿಸಿದರು. ಇದನ್ನೂ ಓದಿ: ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

    ಭಾರತದ ಪ್ರತಿಕ್ರಿಯೆಯು ದೇಶದ ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುವ ಜೊತೆಗೆ 140 ಕೋಟಿ ಭಾರತೀಯರ ಧ್ವನಿಯಾಗಿದೆ. ನೀವು ಗುಂಡು ಹಾರಿಸಿದ್ರೆ ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿರಿ ಎಂದು ಪಾಕ್‌ ಮತ್ತು ಪಾಕ್‌ ಪ್ರಾಯೋಜಿತ ಭಯೋತ್ಪಾದಕರಿಗೆ (Terrorists) ಖಡಕ್‌ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಆರ್ಟಿಕಲ್‌-370 ರದ್ದತಿ ಬಳಿಕ ಕಾಶ್ಮೀರ ಸಮೃದ್ಧಿ ಕಂಡಿದೆ – ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್

    ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಭಾರತೀಯರ ರಕ್ತ ಹರಿಸಿದ್ದಲ್ಲದೇ, ನಮ್ಮ ಸಂಸ್ಕೃತಿಯ ಮೇಲೂ ದಾಳಿ ಮಾಡಿದ್ದಾರೆ. ಉಗ್ರರು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುವುದರ ಜೊತೆಗೆ ದೇಶದ ಮಹಿಳಾ ಶಕ್ತಿ (ನಾರಿ ಶಕ್ತಿಗೆ)ಗೆ ಸವಾಲು ಹಾಕುವ ಧೈರ್ಯ ಮಾಡಿದರು. ಇದೇ ಸವಾಲು ಉಗ್ರರು ಮತ್ತು ಅವರನ್ನು ಪೋಷಿಸುವವರಿಗೆ ಮರಣದಂಡನೆಯಾಗಿದೆ. ಪಾಕಿಸ್ತಾನ ಸೇನೆ ಊಹಿಸಲೂ ಸಾಧ್ಯವಾಗದಷ್ಟರ ಮಟ್ಟಿಗೆ ನಮ್ಮ ಸೇನೆಯು ಉಗ್ರರ ಅಡಗುತಾಣಗಳನ್ನು ನಾಶಪಡಿಸಿದೆ ಮೋದಿ ಸೇನಾ ಸಾಹಸವನ್ನ ಕೊಂಡಾಡಿದರು.

    ಇದೇ ವೇಳೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಮಹಿಳಾ ಅಧಿಕಾರಿಗಳ ಪಾತ್ರವನ್ನು ಒತ್ತಿ ಹೇಳಿದರು. ಗಡಿ ಭದ್ರತಾ ಪಡೆ (ಬಿಎಸ್‌ಎಫ್)‌ ಕೊಡುಗೆಯನ್ನು ಶ್ಲಾಘಿಸಿದರು. ಜೊತೆಗೆ ರಾಜಸ್ಥಾನದಿಂದ ಗುಜರಾತ್‌ವರೆಗೆ ನಮ್ಮ ಬಿಎಸ್‌ಎಫ್‌ ಹೆಣ್ಣುಮಕ್ಕಳು ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದರು. ಉಗ್ರರ ಗುಂಡಿ ದಾಳಿಗೆ ಸೂಕ್ತ ಉತ್ತರವನ್ನೂ ನೀಡಿದ್ರು ಅಂತ ಮಹಿಳಾ ಅಧಿಕಾರಿಗಳ ಶೌರ್ಯ, ಸಾಹಸವನ್ನು ಬಣ್ಣಿಸಿದರು. ಇದನ್ನೂ ಓದಿ: ಉಗ್ರರು ಮತ್ತೆ ಹೆಡೆ ಬಿಚ್ಚಿದರೆ, ಹುತ್ತದಿಂದ ಎಳೆದು ತುಳಿಯುತ್ತೇವೆ: ಮೋದಿ ಖಡಕ್‌ ಸಂದೇಶ

    ಮುಂದುವರಿದು.. ಇಂದು ಹೆಚ್ಚಿನ ಹೆಣ್ಣುಮಕ್ಕಳು ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ ಮತ್ತು ಪೈಲಟ್‌ಗಳಾಗುತ್ತಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ನಮ್ಮ ಅನೇಕ ಮಹಿಳಾ ವಿಜ್ಞಾನಿಗಳು ಮುಂಚೂಣಿಯಲ್ಲಿದ್ದಾರೆ. ಚಂದ್ರಯಾನ-3 ಯಶಸ್ಸಿಗೂ 100ಕ್ಕೂ ಹೆಚ್ಚು ಮಹಿಳೆಯರು ತಮ್ಮ ಕೊಡುಗೆ ನೀಡಿದ್ದಾರೆ. ಅಲ್ಲದೇ ಈ ಬಾರಿ 75 ಮಹಿಳೆಯರು ಸಂಸತ್ ಸದಸ್ಯರಾಗಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸುವುದು ನಮ್ಮ ಕರ್ತವ್ಯವಾಗಿದೆ. ಇದು ನಾರಿ ಶಕ್ತಿ ವಂದನ ಅಧಿನಿಯಮದ ಹಿಂದಿನ ಸ್ಫೂರ್ತಿ. ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

    ಅಲ್ಲದೇ ಭಾರತ ಸಂಸ್ಕೃತಿ ಮತ್ತು ಸಂಪ್ರದಾಯಗಳ ದೇಶವಾಗಿದೆ. ನಮ್ಮ ಸಂಪ್ರದಾಯದಲ್ಲಿ ‘ಸಿಂಧೂರ’ ಮಹಿಳಾ ಶಕ್ತಿಯ ಸಂಕೇತವಾಗಿದೆ. ರಾಮ ಭಕ್ತಿಯಲ್ಲಿ ಮುಳುಗಿರುವ ಹನುಮಾನ್ ಜಿ ಅವರು ಸಿಂಧೂರ ಹಚ್ಚಿಕೊಂಡಿರುವುದನ್ನು ನಾವು ನೋಡಬಹುದು. ಹಾಗೆಯೇ ಶಕ್ತಿ ಪೂಜೆಯಲ್ಲಿ ಸಿಂಧೂರ ನೀಡುತ್ತೇವೆ. ಇದೀಗ ‘ಸಿಂಧೂರ’ ಎಂಬುದು ಶೌರ್ಯದ ಸಂಕೇತವಾಗಿದೆ ಎಂದು ಬಣ್ಣಿಸಿದರು. ಇದನ್ನೂ ಓದಿ: ರಾಹುಲ್‌ ಗಾಂಧಿ ಪ್ರಧಾನಿಯಾದ ದಿನ ಪಿಒಕೆ ಭಾರತದ ಭಾಗವಾಗಲಿದೆ: ʻಕೈʼ ಸಂಸದ ಪ್ರಮೋದ್ ತಿವಾರಿ

    ಇದಕ್ಕೂ ಮುನ್ನ ಇಂದು ಭೋಪಾಲ್‌ಗೆ ಭೇಟಿ ನೀಡಿದ್ದ ಮೋದಿ ಅವರಿಗೆ 15,000 ಮಹಿಳೆಯರು ಭವ್ಯಸ್ವಾಗತ ಕೋರಿದರು. 15,000ಕ್ಕೂ ಹೆಚ್ಚು ಮಹಿಳೆಯರು ಸಿಂಧೂರ ಬಣ್ಣದ ಸೀರೆ ಧರಿಸಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು. ಬಳಿಕ ಪ್ರಧಾನಿ ಅವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಇಂದೋರ್ ಮೆಟ್ರೋದ ಹಳದಿ ಮಾರ್ಗದ ಸೂಪರ್ ಪ್ರಿಯಾರಿಟಿ ಕಾರಿಡಾರ್, ದಾಟಿಯಾ ಮತ್ತು ಸತ್ನಾ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಜೊತೆಗೆ 2028ರ ಸಿಂಹಸ್ತ ಮಹಾಕುಂಭಕ್ಕಾಗಿ ಕ್ಷಿಪ್ರಾ ನದಿಯಲ್ಲಿ 860 ಕೋಟಿ ಮೌಲ್ಯದ ಘಾಟ್ ನಿರ್ಮಾಣ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದನ್ನೂ ಓದಿ: ಮೊಬೈಲ್ ಬಳಕೆದಾರರ ಸೇರ್ಪಡೆ: ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ ರಿಲಯನ್ಸ್ Jio ನಂ.1

  • ವಕ್ಫ್‌ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ

    ವಕ್ಫ್‌ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ

    ಭೋಪಾಲ್: ವಕ್ಫ್‌ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ಭೋಪಾಲ್‌ನ ಮುಸ್ಲಿಂ ಸಮುದಾಯದ ಮಹಿಳೆಯರು ಬೀದಿಗಿಳಿದಿದ್ದಾರೆ.

    ಇಂದು ಮಧ್ಯಾಹ್ನ ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಿದರು. ಇದಕ್ಕೂ ಮೊದಲು ಪೆಕಾರ್ಡ್‌ ಹಿಡಿದು ರಸ್ತೆಗಿಳಿದ ಮುಸ್ಲಿಂ ಮಹಿಳೆಯರು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಮೋದಿ ಜೀಗೆ ನಮ್ಮ ಬೆಂಬಲ’.. ‘ಧನ್ಯವಾದಗಳು ಮೋದಿ ಜೀ’ ಎಂದು ಬರೆದಿರುವ ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸಿದ್ದಾರೆ.

    ವಕ್ಫ್‌ ತಿದ್ದುಪಡಿ ಮಸೂದೆ ಪರವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಇದೆ. ಆದರೆ, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಮಸೂದೆಗೆ ವಿರುದ್ಧವಾಗಿವೆ. ಮುಸ್ಲಿಂ ಸಮುದಾಯ ಕೂಡ ಮಸೂದೆಯನ್ನು ಬಲವಾಗಿ ವಿರೋಧಿಸಿವೆ.

    ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಸಂಸದರಿಗೆ ಮಂಗಳವಾರ ವಿಪ್‌ ಜಾರಿ ಮಾಡಿದ್ದವು.

  • ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು 15 ನಿಮಿಷ ಲೇಟ್ ಆಗಿ ಬಂದ ಮೋದಿ!

    ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು 15 ನಿಮಿಷ ಲೇಟ್ ಆಗಿ ಬಂದ ಮೋದಿ!

    ಭೋಪಾಲ್: ಸೋಮವಾರ (ಫೆ.24) ಭೋಪಾಲ್‌ನಲ್ಲಿ (Bhopal) ಆರಂಭವಾದ ಇನ್ವೆಸ್ಟ್ ಮಧ್ಯಪ್ರದೇಶ – ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು (Madhya Pradesh Global Investors Summit-2025) ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರು ಸುಮಾರು 15 ನಿಮಿಷ ತಡವಾಗಿ ಆಗಮಿಸಿದ್ದಾರೆ.

    ಈ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ, ಇಲ್ಲಿಗೆ ಬರಲು ತಡವಾಗಿದ್ದಕ್ಕಾಗಿ ನಿಮ್ಮೆಲ್ಲರಲ್ಲೂ ನಾನು ಕ್ಷಮೆಯಾಚಿಸುತ್ತೇನೆ. ನಾನು ಇಲ್ಲಿಗೆ ತಲುಪಿದಾಗ, ಇಂದು 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿವೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿತ್ತು. ಆ ಸಮಯದಲ್ಲಿ ನಾನು ಹೊರಟರೆ ಭದ್ರತಾ ಕಾರಣಗಳಿಗಾಗಿ ರಸ್ತೆಗಳನ್ನು ಮುಚ್ಚಬಹುದು ಮತ್ತು ಮಕ್ಕಳು ಪರೀಕ್ಷೆಗಳಿಗೆ ಹೋಗಲು ತೊಂದರೆಯಾಗುತ್ತದೆ ಅದಕ್ಕೆ ನನ್ನ ವೇಳಾಪಟ್ಟಿಯನ್ನು ಬದಲಾಯಿಸಿಕೊಂಡೆ ಎಂದಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವರದಿ ಸಲ್ಲಿಕೆ | 7 ಪಾಲಿಕೆ ರಚಿಸಲು ಶಿಫಾರಸು – ವರದಿಯಲ್ಲಿ ಏನಿದೆ?

    ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದು ಮತ್ತು ಅವರು ತಮ್ಮ ಪರೀಕ್ಷಾ ಕೇಂದ್ರವನ್ನು ಸಮಯಕ್ಕೆ ಸರಿಯಾಗಿ ತಲುಪಬೇಕು. ಅದಕ್ಕಾಗಿಯೇ ನಾನು 10 ರಿಂದ 15 ನಿಮಿಷಗಳ ಕಾಲ ವಿಳಂಬ ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ವಿದ್ಯಾರ್ಥಿಗಳ ಬಗ್ಗೆ ಪ್ರಧಾನಿಯವರ ಕಾಳಜಿಯನ್ನು ಶ್ಲಾಘಿಸಿದ್ದಾರೆ. ಅವರು ಯಾವಾಗಲೂ ವಿದ್ಯಾರ್ಥಿಗಳು ಮತ್ತು ಅವರ ಉಜ್ವಲ ಭವಿಷ್ಯದ ಬಗ್ಗೆ ಸೂಕ್ಷ್ಮವಾಗಿ ಯೋಚಿಸುತ್ತಾರೆ. ಕಾಲಕಾಲಕ್ಕೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೋದಿ ವಿದ್ಯಾರ್ಥಿಗಳಿಗೆ ದೈರ್ಯ ತುಂಬುತ್ತಾರೆ ಎಂದು ಹೇಳಿದ್ದಾರೆ.

    ಮೋದಿಯವರ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಮತ್ತು ಪರೀಕ್ಷಾ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡಲು ಮೋದಿ ಅವರ ಉಪಕ್ರಮವಾಗಿದೆ. ಇದನ್ನೂ ಓದಿ: ಫೆ.27ರಿಂದ ವಿಧಾನಸೌಧದ ಆವರಣದಲ್ಲಿ 4 ದಿನಗಳ ಪುಸ್ತಕ ಮೇಳ: ಯು.ಟಿ.ಖಾದರ್

  • ಮಹಿಳೆಯ ಖಾಸಗಿ ಭಾಗಕ್ಕೆ ಸುಡುವ ರಾಡ್‌ನಿಂದ ಹಲ್ಲೆ – ಮೆಣಸಿನ ಪುಡಿ ಹಾಕಿ ವಿಕೃತಿ

    ಮಹಿಳೆಯ ಖಾಸಗಿ ಭಾಗಕ್ಕೆ ಸುಡುವ ರಾಡ್‌ನಿಂದ ಹಲ್ಲೆ – ಮೆಣಸಿನ ಪುಡಿ ಹಾಕಿ ವಿಕೃತಿ

    – ಸುಮಾರು 2 ಗಂಟೆ ಚಿತ್ರಹಿಂಸೆ

    ಭೋಪಾಲ್: ತನ್ನ ಖಾಸಗಿ ಭಾಗಕ್ಕೆ ಸುಡುವ ಕಬ್ಬಿಣದ ರಾಡ್ ಇಡಲಾಗಿದ್ದು, ಬಳಿಕ ಮೆಣಸಿನ ಪುಡಿ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ತನ್ನ ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಮಧ್ಯಪ್ರದೇಶ (Madhyapradesh) ರಾಜ್‌ಗಢ್‌ನಲ್ಲಿ ನಡೆದಿದೆ. ರೋಹಿತ್ ರುಹೇಲಾ ಎಂಬ ವ್ಯಕ್ತಿ ಸಂತ್ರಸ್ಥ ಮಹಿಳೆಯ ಮನೆಗೆ ಬಂದು ಸ್ಟೀಮ್ ಯಂತ್ರವನ್ನು ಕೇಳಿದ್ದಾನೆ. ಮಹಿಳೆ ಗೇಟ್ ಬಳಿ ಕಾಯಲು ಹೇಳಿದಾಗ, ಅವನು ಬಾಗಿಲು ಮುಚ್ಚಿ, ಅವಳ ಕೋಣೆಗೆ ಪ್ರವೇಶಿಸಿ ಕಿರುಕುಳ ನೀಡಲು ಪ್ರಯತ್ನಿಸಿದನು. ಇದನ್ನು ನೋಡಿ ಮಹಿಳೆ ಮೇಲೆ ಅನುಮಾನ ಪಟ್ಟ ಪತಿಯ ಕುಟುಂಬಸ್ಥರು ಎರಡು ಗಂಟೆಗಳ ಕಾಲ ದೈಹಿಕ ದೌರ್ಜನ್ಯ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ

    ದೂರಿನ ಪ್ರಕಾರ, ಪತಿ, ಅತ್ತಿಗೆ, ಅತ್ತೆ ಮತ್ತು ಮಾವ ಸಂತ್ರಸ್ತೆಗೆ ಸುಮಾರು ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಒದೆಯುವುದು, ಗುದ್ದುವುದು ಸೇರಿದಂತೆ ವಿವಸ್ತ್ರಗೊಳಿಸಿ ದೈಹಿಕ ಹಿಂಸೆ ನೀಡಿದ್ದಾರೆ. ತನ್ನ ಖಾಸಗಿ ಭಾಗಗಳು, ತೊಡೆ ಮತ್ತು ದೇಹದ ಇತರ ಭಾಗಗಳಿಗೆ ಅತ್ತೆ ಕಾದ ಕಬ್ಬಿಣದ ರಾಡ್‌ನಿಂದ ಸುಟ್ಟಿದ್ದಾರೆ. ಮಾವ ಆಕೆಯ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಚ್ಚಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

    ಮಹಿಳೆಯ ದೂರಿನ ಅನ್ವಯ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸೆಕ್ಷನ್ 115 (2) ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದಕ್ಕಾಗಿ ಸೆಕ್ಷನ್ 74 ಮಹಿಳೆಯ ಮೇಲೆ ಹಲ್ಲೆಗಾಗಿ, ಸೆಕ್ಷನ್ 64 ಅತ್ಯಾಚಾರಕ್ಕಾಗಿ ಮತ್ತು ಸೆಕ್ಷನ್ 3(5) ಸಾಮಾನ್ಯ ಉದ್ದೇಶಗಳ ಅಡಿಯಲ್ಲಿ ದೂರು ದಾಖಲಾಗಿದೆ.ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ

  • ತಲೆಗೆ ಗುಂಡು ಹಾರಿಸಿಕೊಂಡು 17ರ ಬಾಲಕ ಆತ್ಮಹತ್ಯೆ

    ತಲೆಗೆ ಗುಂಡು ಹಾರಿಸಿಕೊಂಡು 17ರ ಬಾಲಕ ಆತ್ಮಹತ್ಯೆ

    ಭೋಪಾಲ್: ತಲೆಗೆ ಗುಂಡು ಹಾರಿಸಿಕೊಂಡು 17 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶ (Madhya Pradesh) ಭೋಪಾಲ್‌ನಲ್ಲಿರುವ (Bhopal) ಸರ್ಕಾರಿ ಶೂಟಿಂಗ್ ಅಕಾಡೆಮಿಯಲ್ಲಿ ನಡೆದಿದೆ.

    ಮೃತ ಬಾಲಕನನ್ನು ಮಧ್ಯಪ್ರದೇಶದ ಅಶೋಕ್ ನಗರ ನಿವಾಸಿಯಾಗಿರುವ 17 ವರ್ಷದ ಯಥಾರ್ಥ್ ರಘುವಂಶಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – 26.60 ಲಕ್ಷ ಸಂಗ್ರಹ

    ರಾತಿಬಾದ್ ಪೊಲೀಸ್ ಠಾಣೆಯ ಉಸ್ತುವಾರಿ ರಾಸ್ ಬಿಹಾರಿ ಶರ್ಮಾ ಮಾಹಿತಿ ಪ್ರಕಾರ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿರುವ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಅಕಾಡೆಮಿಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಭಾನುವಾರ (ನ.30) ಸಂಜೆ ಅಕಾಡೆಮಿಯಲ್ಲಿ ಪ್ರಾಯೋಗಿಕ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಹೀಗಾಗಿ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಜಾನಪದ ವಿವಿ ಘಟಿಕೋತ್ಸವಕ್ಕೆ ಆಹ್ವಾನಿಸದ್ದಕ್ಕೆ ಶಿಗ್ಗಾಂವಿಯ ನೂತನ ಕೈ ಶಾಸಕ, ಬೆಂಬಲಿಗರಿಂದ ದರ್ಪ

  • Madhya Pradesh| ಹುಲಿಸಂರಕ್ಷಿತ ಪ್ರದೇಶದಲ್ಲಿ 7 ಆನೆಗಳ ನಿಗೂಢ ಸಾವು

    Madhya Pradesh| ಹುಲಿಸಂರಕ್ಷಿತ ಪ್ರದೇಶದಲ್ಲಿ 7 ಆನೆಗಳ ನಿಗೂಢ ಸಾವು

    ಭೋಪಾಲ್: ಹುಲಿಸಂರಕ್ಷಿತ ಪ್ರದೇಶದಲ್ಲಿ 7 ಆನೆಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

    ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Bandhavgarh Tiger Reserve) ಏಳು ಆನೆಗಳು ಸಾವನ್ನಪ್ಪಿದ್ದು, ಮೂರು ಆನೆಗಳು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿವೆ ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್

    ಏಳು ಆನೆಗಳ ದಿಢೀರ್ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಜಬಲ್‌ಪುರದ (Jabalpur) ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಆರೋಗ್ಯ ಕೇಂದ್ರದಲ್ಲಿ ಏಳು ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ

    ರೈತರು ತಮ್ಮ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಿದ್ದು, ಅದನ್ನು ತಿಂದ ಪರಿಣಾಮ ಆನೆಗಳು ಸಾವನ್ನಪ್ಪಿರುವ ಸಾಧ್ಯತೆ ಇರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಇದನ್ನೂ ಓದಿ: ಉಪಚುನಾವಣೆಗೆ ಸಮಸ್ಯೆ ಮಾಡೋಕೆ ಬಿಜೆಪಿಯಿಂದ ಪ್ರತಿಭಟನೆ: ಸಿಎಂ

    ಆನೆಗಳ ಸಾವಿಗೆ ಸಂಬಂಧಪಟ್ಟಂತೆ ದೆಹಲಿ ಮೂಲದ ವನ್ಯಜೀವಿ ಅಪರಾಧ ನಿಯಂತ್ರಣ ದಳ ತನಿಖೆ ನಡೆಸಲು ಸಮಿತಿಯನ್ನು ರಚಿಸಿದ್ದು, ಅದರ ಜೊತೆಗೆ ರಾಜ್ಯ ಸರ್ಕಾರ ಕೂಡಾ ತನಿಖೆಗೆ ಆದೇಶ ನೀಡಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಜೈಲಿನಿಂದ ರಿಲೀಸ್

    ಘಟನಾ ಸ್ಥಳಕ್ಕೆ ನ್ಯಾಶನಲ್ ಟೈಗರ್ ಕನ್ಸರ್‌ವೇಷನ್ ಅಥಾರಿಟಿಯ ಸೆಂಟ್ರಲ್ ವಲಯದ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ನಂದಕಿಶೋರ್ ಕಾಳೆ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶಿಗ್ಗಾಂವಿಯ ಕಾಂಗ್ರೆಸ್ ಬಂಡಾಯ ಶಮನ- ಕೊನೆಗೂ ನಾಮಪತ್ರ ವಾಪಸ್ ಪಡೆದ ಅಜ್ಜಂಪೀರ್ ಖಾದ್ರಿ

  • 50 ದನಗಳನ್ನು ನದಿಗೆಸೆದ ದುಷ್ಕರ್ಮಿಗಳು – 20 ಸಾವು: ಪ್ರಕರಣ ದಾಖಲು

    50 ದನಗಳನ್ನು ನದಿಗೆಸೆದ ದುಷ್ಕರ್ಮಿಗಳು – 20 ಸಾವು: ಪ್ರಕರಣ ದಾಖಲು

    ಭೋಪಾಲ್: ನದಿಗೆ ಕಿಡಿಗೇಡಿಗಳು 50 ಹಸುಗಳನ್ನು ಎಸೆದಿದ್ದು, ಅದರಲ್ಲಿ 20 ಹಸುಗಳು ಮೃತಪಟ್ಟ ಘಟನೆ ಸಾತ್ನಾ ಜಿಲ್ಲೆಯ ನಾಗೋಡು (Nagod) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಹಸುಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿರುವ ಹೃದಯವಿದ್ರಾವಕ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನಿಖೆ ವೇಳೆ 15 ರಿಂದ 20 ಆಕಳು ಮೃತಪಟ್ಟಿದ್ದು ಖಚಿತವಾಗಿದೆ.ಇದನ್ನೂ ಓದಿ:ಗುಜರಾತ್‌ನಲ್ಲಿ ಮಳೆ ಅವಾಂತರ – 15 ಸಾವು, 20 ಸಾವಿರ ಮಂದಿ ಸ್ಥಳಾಂತರ

    ಬಾಮ್ಹೋರ್ (Baumer) ಹತ್ತಿರದ ರೈಲ್ವೆ ಸೇತುವೆ ಬಳಿ ಆಕಳು ನದಿಯಲ್ಲಿ ತೇಲಿ ಹೋಗುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನಾಗೋಡು ಪೊಲೀಸ್ ಅಧಿಕಾರಿ ಅಶೋಕ್ ಪಾಂಡ್ಯ ತಿಳಿಸಿದ್ದಾರೆ.

    ನಾಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ಬಂಧಿಸಲು ಶೋಧಕಾರ್ಯ ನಡೆದಿದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಪಾಕ್‌ ಸೇರಿ ಇತರ ವಿದೇಶಿ ಏಜೆಂಟರಿಗೆ ನೌಕಾದಳದ ರಹಸ್ಯ ಫೋಟೋ ಹಂಚಿಕೆ – NIAಯಿಂದ ಮೂವರು ವಶಕ್ಕೆ