Tag: bhoomige banda bhagawantha

  • ಸ್ಪಂದನಾ ಇಲ್ಲ ಅನ್ನೋ ರಾಘು ನೋವು ಮಾಯ ಆಗಲ್ಲ- ನವೀನ್‌ ಕೃಷ್ಣ

    ಸ್ಪಂದನಾ ಇಲ್ಲ ಅನ್ನೋ ರಾಘು ನೋವು ಮಾಯ ಆಗಲ್ಲ- ನವೀನ್‌ ಕೃಷ್ಣ

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Exclusive: ಸ್ಪಂದನಾ ಇಲ್ಲ ಅನ್ನೋ ರಾಘು ನೋವು ಮಾಯ ಆಗಲ್ಲ- ನವೀನ್ ಕೃಷ್ಣ ಭಾವುಕ

    Exclusive: ಸ್ಪಂದನಾ ಇಲ್ಲ ಅನ್ನೋ ರಾಘು ನೋವು ಮಾಯ ಆಗಲ್ಲ- ನವೀನ್ ಕೃಷ್ಣ ಭಾವುಕ

    ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಗಲಿ ಒಂದು ತಿಂಗಳು ಕಳೆದಿದೆ. ವಿಜಯ ಕುಟುಂಬಕ್ಕೆ, ಆಪ್ತರಿಗೆ ಸ್ಪಂದನಾ ಅಗಲಿಕೆಯ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ಈ ವೇಳೆ ‘ಭೂಮಿಗೆ ಬಂದ ಭಗವಂತ’ ಸೀರಿಯಲ್ ನಟ ನವೀನ್ ಕೃಷ್ಣ (Naveen Krishna) ಸ್ಪಂದನಾ ವಿಜಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಸ್ಪಂದನಾ ನಿರ್ಮಾಣದ (Produce) ವಿಜಯ ನಟನೆಯ ‘ಕಿಸ್ಮತ್’ (Kismat Film) ಸಿನಿಮಾದಲ್ಲಿ ನವೀನ್ ಕೃಷ್ಣ (Naveen Krishna) ಅವರು ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನ ಬರೆದಿದ್ದಾರೆ. ಈ ವೇಳೆ ರಾಘು ಅವರಿದ್ದ ಸ್ಪಂದನಾ ಮೇಲಿನ ಪ್ರೀತಿ, ಗೌರವದ ಬಗ್ಗೆ ನವೀನ್ ಕೃಷ್ಣ ಬಿಚ್ಚಿದ್ದಾರೆ. ಇದನ್ನೂ ಓದಿ:‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ

    ‘ಕಿಸ್ಮತ್’ ಚಿತ್ರಕ್ಕೆ ನಾನೇ ಸಂಭಾಷಣೆ ಬರೆದಿದ್ದೆ, ಸ್ಪಂದನಾ ಅವರಿಲ್ಲ ಅಂತಾ ನಾನು ಅನಿಸಿಕೊಳ್ಳೋಕೆ ನಾನು ಇಷ್ಟಪಡಲ್ಲ. ಅವರ ನಿಧನರಾದ ದಿನದಿಂದ ರಾಘು ಹತ್ತಿರ ನಾನು ಮಾತನಾಡಲಿಲ್ಲ. ಆ ಧೈರ್ಯ ನನಗಿಲ್ಲ. ರಾಘು, ಮಗ ಶೌರ್ಯ ಅವರು ಸಂತೋಷವಾಗಿರಲಿ ಎಂದು ಆಶಿಸುತ್ತೇನೆ. ಆದರೆ ಅವರ ನೋವು ಏನೀದೆ ಅದು ಮಾಯ ಆಗಲ್ಲ. ಆದರೂ ಜೀವನ ಮುಂದೆವರಿಯಬೇಕು. ಹಾಗಾಗಿ ರಾಘುಗೆ ಟೇಕ್ ಕೇರ್ ಎಂದು ಹೇಳುತ್ತೇನೆ.

    ‘ಕಿಸ್ಮತ್’ ಚಿತ್ರದಲ್ಲಿ ನಾನು ಡೈಲಾಗ್ ಬರಿಬೇಕಾದ್ರೆ, ಆ್ಯಕ್ಚುಲಿ ಹೀರೋಯಿನ್‌ಗೆ ಸ್ಪಂದನಾ ಎಂದು ಹೆಸರಿಟ್ಟೆ. ಡೈಲಾಗ್ ಕೊಡುವಾಗ ವಿಜಯ ಸಖತ್ ಎಂಜಾಯ್ ಮಾಡಿ ಹೇಳ್ತಿದ್ದರು. ಆ ಹೀರೋಯಿನ್‌ಗೆ ಬೇರೆ ಪಾತ್ರಧಾರಿ ಫ್ಲರ್ಟ್ ಮಾಡೋ ತರಹ ಸೀನ್ ಇತ್ತು. Hai Baby Whats Your Name ಎಂದು ಕೇಳ್ತಾನೆ. ಹೀರೋಯಿನ್ ಸ್ಪಂದನಾ ಎನ್ನುತ್ತಾರೆ. ಆತ ನೋ ಡೌಂಟ್ ಯು ಸೋ ಬ್ಯೂಟಿಫುಲ್, ನಿಮ್ಮ ಹೆಸರಲ್ಲೇ ಸ್ಪಾ.. ಇದೆ ಎಂದು ಡೈಲಾಗ್ ಹೊಡಿತ್ತಾನೆ.

    ಈ ಡೈಲಾಗ್ ರಾಘು ಕೇಳಿ, ಹೇ ಬೇಡ ಬೇಡ ನನ್ನ ಹೆಂಡ್ತಿ ಹೆಸರನ್ನ ಹೀರೋಯಿನ್‌ ಇಡಬೇಡ ಅಂದಿದ್ರು. ಎಷ್ಟು ಚೆನ್ನಾಗಿದೆ ಈ ಡೈಲಾಗ್ ಹೇಳಿದ್ರೆ ಎನಾಗುತ್ತೆ ಎಂದು ಹೇಳಿದ್ದೆ. ಅದಕ್ಕೆ ರಾಘು ನನ್ನ ಹೆಂಡ್ತಿ ಕೇಳಿ ಬೈತಾರೆ ಬೇಡ ಅಂದಿದ್ದರು. ಅವತ್ತು ಹೀರೋಯಿನ್‌ ಹೆಸರನ್ನ ಚೇಂಜ್ ಮಾಡಿದ್ವಿ.

    ಈ ಘಟನೆ ನಡೆದ ಮೇಲೆ ಸ್ಪಂದನಾನೇ ಬಂದು ತುಂಬಾ ಚೆನ್ನಾಗಿ ಸಂಭಾಷಣೆ ಬರೆದಿದ್ದೀರಾ ಎಂದು ಹೇಳಿದ್ದರು. ನನ್ನ ಕೆಲಸಕ್ಕೆ ಸ್ಪಂದನಾ ಬೆಂಬಲಿಸಿದ್ದರು. ತುಂಬಾ ಒಳ್ಳೆಯ ಹೆಣ್ಣು ಮಗಳು, ಒಳ್ಳೆಯ ಗೃಹಿಣಿ, ಎಲ್ಲಾ ರೀತಿಯ ಒಳ್ಳೆಯತನ ಇದ್ದಂತಹ ಹೃದಯ ಸ್ಪಂದನಾ ಅವರದ್ದು. ಆದರೆ ಇವತ್ತು ಅವರು ನಮ್ಮ ಜೊತೆ ಇಲ್ಲ ಎಂದು ನಟ ನವೀನ್ ಕೃಷ್ಣ ಭಾವುಕರಾಗಿದ್ದಾರೆ.

    ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ (Spandana) ಆಗಸ್ಟ್ 6ರಂದು ಥೈಲ್ಯಾಂಡ್‌ನಲ್ಲಿ ಹೃದಯಾಘಾತದಿಂದ (Heart Attack) ನಿಧನರಾದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಿತು.

    ಶೃತಿ ನಾಗೇಶ್‌, ಪಬ್ಲಿಕ್‌ ಟಿವಿ ಡಿಜಿಟಲ್‌

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಕಿರುತೆರೆ ಮರಳಿದ ʻಬಿಗ್‌ ಬಾಸ್‌ʼ ಖ್ಯಾತಿಯ ಕೃತ್ತಿಕಾ ರವೀಂದ್ರ

    ಮತ್ತೆ ಕಿರುತೆರೆ ಮರಳಿದ ʻಬಿಗ್‌ ಬಾಸ್‌ʼ ಖ್ಯಾತಿಯ ಕೃತ್ತಿಕಾ ರವೀಂದ್ರ

    ಕಿರುತೆರೆಯಲ್ಲಿ ರಾಧೆಯಾಗಿ ಗಮನ ಸೆಳೆದ ಕೃತ್ತಿಕಾ ರವೀಂದ್ರ (Kruttika Ravindra) ಮತ್ತೆ ಟಿವಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ರಾಧಾ ಕಲ್ಯಾಣದ (Radha Kalyana) ರಾಧೆ ಆಗಿ ಮಿಂಚಿದ್ದ ಪ್ರತಿಭಾನ್ವಿತ ನಟಿ ಕೃತ್ತಿಕಾ ಈಗ `ಭೂಮಿಗೆ ಬಂದ ಭಗವಂತ’ ಸೀರಿಯಲ್ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

    ಮಲೆನಾಡಿನ ಸುಂದರಿ ಕೃತ್ತಿಕಾ ರವಿಂದ್ರ `ಪಟ್ರೆ ಲವ್ಸ್ ಪದ್ಮಾ’ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಲಿಫ್ಟ್ ಕೊಡ್ಲಾ, ಕೆಂಗುಲಾಬಿ, ಯಾರಿಗೆ ಯಾರುಂಟು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನೂ ಕೃತ್ತಿಕಾ ಅಂದಾಕ್ಷಣ ಪ್ರೇಕ್ಷಕರಿಗೆ ನೆನಪಾಗೋದು `ರಾಧಾ ಕಲ್ಯಾಣ’ದ ರಾಧೆಯಾಗಿ ಕರ್ನಾಟಕ ಜನತೆಯ ಮನ ಗೆದ್ದಿದ್ದರು.

    ರಾಧಾ ಕಲ್ಯಾಣ, ಬಿಗ್ ಬಾಸ್ ರಿಯಾಲಿಟಿ ಶೋ ಬಳಿಕ ಇದೀಗ `ಭೂಮಿಗೆ ಬಂದ ಭಗವಂತ’ ಸೀರಿಯಲ್ ಮೂಲಕ ನಟಿ ಕಿರುತೆರೆಗೆ ಮರಳಿದ್ದಾರೆ. ಈ ಹಿಂದೆ ನಟಿಸಿದ್ದ ರಾಧೆ ಪಾತ್ರಕ್ಕೆ ವಿರುದ್ಧವಾಗಿರುವ ವಿಭಿನ್ನ ಪಾತ್ರದ ಮೂಲಕ ಬರಲಿದ್ದಾರೆ.

    `ಭೂಮಿಗೆ ಬಂದ ಭಗವಂತ’ (Bhoomige Banda Bhagawantha) ಸೀರಿಯಲ್‌ನಲ್ಲಿ ಅಪ್ಪಟ ಗೃಹಿಣಿಯಾಗಿ ನಟ ನವೀನ್ ಕೃಷ್ಣ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಕನಸು, ಆಸೆ ಹೊತ್ತಿರುವ ಗೃಹಿಣಿಯಾಗಿ, ದೈವ ಭಕ್ತೆಯ ಪಾತ್ರದಲ್ಲಿ ನಟಿ ಜೀವತುಂಬಲಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾ

    ಅಶ್ವಿನಿ ನಕ್ಷತ್ರ, ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಜೋಡಿಹಕ್ಕಿ ಸೇರಿದಂತೆ ಹಲವು ಹಿಟ್ ಸೀರಿಯಲ್‌ಗಳನ್ನ ನೀಡಿರುವ ಆರೂರು ಜಗದೀಶ್ (Aroor Jagadeesh) ಅವರು ಇದೀಗ `ಭೂಮಿಗೆ ಬಂದ ಭಗವಂತʼ ಧಾರಾವಾಹಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಕೃತ್ತಿಕಾ ಮತ್ತು ನವೀನ್ ಕೃಷ್ಣ (Naveen Krishna) ಕಾಂಬಿನೇಷನ್ ಕಿರುತೆರೆಯಲ್ಲಿ ಆದ್ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

    ಇನ್ನೂ ನಟಿ ಕೃತ್ತಿಕಾ ಮತ್ತು ಶಿವಾನಿ ಸೇರಿ `ಸುಕೃಷಿ ಕ್ರಿಯೇಷನ್ಸ್’ ಎಂಬ ನಿರ್ಮಾಣ ಸಂಸ್ಥೆಯ ಅಡಿ `ಉತ್ತರಾಂಗ’ ಚಿತ್ರವನ್ನು ಕೂಡ ನಿರ್ಮಾಣ ಮಾಡ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಮತ್ತಷ್ಟು ಅಪ್‌ಡೇಟ್‌ ನೀಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k