Tag: bhommi shetty

  • ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

    ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

    – ಅಪ್ಪನ ಸ್ಥಾನ ತುಂಬಿದ್ರು ಅಂದ್ರು ಚಂದನಾ

    ಬೆಂಗಳೂರು: ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ಬಿಗ್ ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

    ರವಿ ಬೆಳಗೆರೆ ನಿಧನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರವಿ ಸರ್ ನಮ್ಮಿಂದ ದೂರ ಹೋಗಿರಬಹುದು. ಆದರೆ ಪುಸ್ತಕಗಳಲ್ಲಿ ಹಾಗೂ ನಮ್ಮಲ್ಲಿ ಅವರು ಯಾವತ್ತೂ ಅಮರರಾಗಿರುತ್ತಾರೆ. ಅವರು ಜೊತೆ ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದು ವಾರ ಅದು ಜೀವನಪರ್ಯಂತ ಅನುಭವವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

    ಒಂದು ಒಳ್ಳೆಯ ಮೆಮೊರಿ ಕೂಡ ಆಗಿದೆ. ಕೊನೆಗೆ ಉಳಿಯೋದು ಬರೀ ನೆನಪು ಮಾತ್ರ ಅಂತಾರಲ್ವ. ಅದು ಯಾವತ್ತಿಗೂ ನಿಜವಾದ ಮಾತು. ಬೇಜಾರಾಗುತ್ತದೆ, ಆದರೆ ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಚಂದನ ಅನಂತಕೃಷ್ಣ ಮಾತನಾಡಿ, ರವಿ ಸರ್ ನಿಧನದ ಬಗ್ಗೆ ಬೆಳಗ್ಗೆ ಗೊತ್ತಾಯ್ತು. ಬಿಗ್ ಬಾಸ್ ಮನೆಯಲ್ಲಿ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಮರೆಯಲಾದರಂತಹ ದಿನಗಳಾಗಿವೆ. ಅವರಿಂದ ತುಂಬಾ ಕಲಿತಿದ್ದೇವೆ. ಅಲ್ಲದೆ ಸ್ಫೂರ್ತಿ ಪಡೆದವು. ಆ ಒಂದು ವಾರ ಹೇಗೆ ಹೋಯಿತು ಅಂತಾನೇ ನಮಗೆ ಗೊತ್ತಾಗಿಲ್ಲ. ನಾವು ಅದೃಷ್ಟವಂತರು. ಅಲ್ಲಿ ಅವರು ನಮಗೆ ಅಪ್ಪನ ಸ್ಥಾನ ತುಂಬಿದ್ರು ಎಂದು ಭಾವುಕರಾದ್ರು.

    ಡಯಾಬಿಟಿಸ್ ಹಾಗೂ ಕಾಲುಗಳ ನೋವಿನಿಂದ ಬಳಲುತ್ತಿದ್ದ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಈಗಾಗಲೇ ಅವರ ಮೃತದೇಹವನ್ನು ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

  • ಗೊಬ್ಬರ ಹೊತ್ತು ಬೆವರು ಸುರಿಸಿ ಗದ್ದೆಯಲ್ಲಿ ನಾಟಿ ಮಾಡಿದ ಭೂಮಿ ಶೆಟ್ಟಿ

    ಗೊಬ್ಬರ ಹೊತ್ತು ಬೆವರು ಸುರಿಸಿ ಗದ್ದೆಯಲ್ಲಿ ನಾಟಿ ಮಾಡಿದ ಭೂಮಿ ಶೆಟ್ಟಿ

    ಉಡುಪಿ: ಕೊರೊನಾ ಎಂಬ ಮಹಾಮಾರಿ ರಾಜ್ಯಕ್ಕೆ ಕಾಲಿಟ್ಟು ಲಾಕ್‍ಡೌನ್ ಘೋಷಣೆಯಾದ ಬಳಿಕ ಉದ್ಯೋಗಕ್ಕೆಂದು ಮನೆ ಬಿಟ್ಟು ಹೊರ ಹೋದವರು ತಮ್ಮ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ. ಅಲ್ಲದೇ ತಮ್ಮನ್ನು ತಾವು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ನಟನೆ, ವಿದ್ಯಾಭ್ಯಾಸ ಎಂದು ಸಿಲಿಕಾನ್ ಸಿಟಿಗೆ ತೆರಳಿದ್ದ ಬಿಗ್‍ಬಾಸ್ 7ರ ಸ್ಪರ್ಧಿ ಭೂಮಿ ಶೆಟ್ಟಿ ಕೂಡ ಇದೀಗ ಮನೆಗೆ ಬಂದಿದ್ದು, ಗದ್ದೆ ನಾಟಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ಓದಿನ ಜೊತೆಗೆ ನಟನೆ ಮಾಡಿಕೊಂಡು ಭೂಮಿ ಶೆಟ್ಟಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೊರೊನಾ ಲಾಕ್‍ಡೌನ್ ಆದ ಪರಿಣಾಮ ಕೆಲ ಕಾಲ ಬೆಂಗಳೂರಿನಲ್ಲೇ ಇದ್ದ ಅವರು, ನಂತರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯಲ್ಲಿರುವ ತಮ್ಮ ಮನೆಗೆ ಬಂದಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್- ರಾಜಕೀಯದಿಂದ ಗದ್ದೆ ಬೇಸಾಯಕ್ಕಿಳಿದ ಶಕುಂತಲಾ ಶೆಟ್ಟಿ

    ಹೀಗೆ ಮನೆಗೆ ಬಂದಿರುವ ಭೂಮಿ ಶೆಟ್ಟಿ, ಸುಮ್ನೆ ಮನೆಯಲ್ಲೇ ಕುಳಿತು ಯಾಕೆ ಕಾಲ ಕಳೆಯುವುದು ಎಂದು ತಿಳಿದು ಅವರು ಕೂಡ ತಮ್ಮನ್ನ ತಾವು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ತಾವು ಗೊಬ್ಬರ ಹೊರುವ ಹಾಗೂ ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಭೂಮಿ ಶೆಟ್ಟಿ, ಈ ಬಾರಿ ಬೇಸಾಯ ಬೇಡ ಎಂದು ಮನೆಯವರು ಹೇಳಿದ್ದರು. ನಾವೆಲ್ಲರೂ ಮನೆಯಲ್ಲಿಯೇ ಇದ್ದು, ಯಾಕೆ ವ್ಯವಸಾಯ ಮಾಡಬಾರದು ಎಂದು ಅಂದುಕೊಂಡು ನಾನು ಸಹಾಯ ಮಾಡುವುದಾಗಿ ತಿಳಿಸಿದೆ. ಹೀಗಾಗಿ ಈ ಬಾರಿ ಕೃಷಿ ಚಟುವಟಿಕೆಯಲ್ಲಿ ನಾನೂ ಭಾಗಿಯಾಗಿದ್ದು, ಈ ಕೆಲಸ ತುಂಬಾನೆ ಖುಷಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಮೈ-ಕೈ ಕೆಸರಿನ ಫೋಟೋದ ಬಳಿಕ ಟ್ರ್ಯಾಕ್ಟರ್ ಏರಿದ ಸಲ್ಲು ಭಾಯ್- ವಿಡಿಯೋ ವೈರಲ್

    ಭೂಮಿ ಬೆಳಗ್ಗಿನಿಂದ ಸಂಜೆಯವರೆಗೂ ಗೊಬ್ಬರ ಹೊತ್ತು ಗದ್ದೆಯಲ್ಲಿ ನಾಟಿ ಮಾಡಿದ್ದು, ಈ ಮೂಲಕ ತಾನೊಬ್ಬಳು ಅಪ್ಪಟ ಕೃಷಿಕಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.