ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಖ್ಯಾತ ನಟ ಬ್ರಿಜೇಶ್ ತ್ರಿಪಾಠಿ (Brijesh Tripathi) ಮೀರತ್ ನ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ (passed away). ಭೋಜ್ ಪುರಿ (BhojPuri) ಚಿತ್ರರಂಗದಲ್ಲಿ ತ್ರಿಪಾಠಿ ಜನಪ್ರಿಯ ನಟರಾಗಿದ್ದಾರೆ.
46 ವರ್ಷಗಳ ಕಾಲ ಸಿನಿಮಾ ರಂಗದಲ್ಲೇ ಸೇವೆ ಸಲ್ಲಿಸಿರುವ ತ್ರಿಪಾಠಿ, ಭೋಜ್ ಪುರಿ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಹಿಂದಿ ಸಿನಿಮಾ ರಂಗದಲ್ಲೂ ತಮ್ಮದೇ ಆದ ಪಾತ್ರಗಳ ಮೂಲಕ ಹೆಸರು ಮಾಡಿದವರು. 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ಭೋಜ್ ಪುರಿಯ ಓಂ ಸಿನಿಮಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.
ನೆಚ್ಚಿನ ನಟನ ನಿಧನಕ್ಕೆ ಭೋಜ್ ಪುರಿ ಚಿತ್ರರಂಗ ಮತ್ತು ಫ್ಯಾನ್ಸ್ ಕಂಬನಿ ಮಿಡಿದಿದೆ. ಅವರ ಚಿತ್ರಗಳನ್ನು ಕೊಂಡಾಡಿದೆ. ಮೃತರ ಆತ್ಮಕ್ಕೆ ಅನೇಕ ನಟರು ಮತ್ತು ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.
ಭೋಜಪುರಿ ಸಿಂಗರ್ (Bhojpuri Singer) ನಿಶಾ ಉಪಾಧ್ಯಾಯ (Nisha Upadhyay) ಮೇಲೆ ಲೈವ್ ಶೋ ವೇಳೆ ಗುಂಡಿನ (Bullet) ದಾಳಿ ನಡೆದಿದೆ. ಬಿಹಾರದ ಪಾಟ್ನ ಬಳಿ ಖಾಸಗಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ನಿಶಾ ವೇದಿಕೆ ಏರಿ ಹಾಡು ಹಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಂದೂಕಿನ ಸದ್ದು ಕೇಳಿ ಬಂದಿದೆ. ಏನಾಯ್ತು ಎಂದು ನೋಡುವಷ್ಟರಲ್ಲಿ ಆಕೆಯ ಎಡಗಾಲಿನ ತೊಡೆಗೆ ಗುಂಡು ತಗುಲಿದೆ.
ಬಿಹಾರದ ಪಾಟ್ನದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಲೈವ್ ಶೋ ನೀಡಲು ಗಾಯಕಿ ನಿಶಾ ಭಾಗಿಯಾಗಿದ್ದರು. ಈ ಕಾರ್ಯಕ್ರಮ ನಡುವೆ, ಸ್ಥಳೀಯ ಜನರು ಸಂಭ್ರಮದಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಗಾಯಕಿ ನಿಶಾ ಕಾಲಿಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ಒಳಗಾದ ಗಾಯಕಿಯನ್ನು ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಗಾಯಕಿ ನಿಶಾ ಈಗ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆ ಬೆಡ್ ಮೇಲೆಯೇ ಮಾಧ್ಯಮಗಳ ಜೊತೆ ಘಟನೆ ಬಗ್ಗೆ ಮಾತನಾಡಿದ್ದಾರೆ. ಗುಂಡೇಟಿನಿಂದ ಗಾಯಕಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸದ್ಯ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಸಮಂತಾರನ್ನು ಫೇವರೇಟ್ ಗರ್ಲ್ ಎಂದ ‘ಲೈಗರ್’ ಹೀರೋ
ಗುಂಡಿನ ದಾಳಿಗೆ ಕೆಲ ನಿಮಿಷಗಳ ಮೊದಲು ನಿಶಾ ಕಾರ್ಯಕ್ರಮದಲ್ಲಿ ಡ್ರಮ್ ಬಾರಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿ, ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ. ಗುಂಡಿನ ದಾಳಿ ಹೇಗೆ ನಡೆದಿದೆ ಮತ್ತು ಗುಂಡಿನ ದಾಳಿಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಿಶಾ ಉಪಾಧ್ಯಾಯ ಬಿಹಾರದ ಖ್ಯಾತ ಗಾಯಕಿ ನಿಶಾ, ‘ಲೇ ಲೇ ಆಯೆ ಕೋಕಾ ಕೋಲಾ’, ‘ನವಕರ್ ಮಂತ್ರ’, ‘ಧೋಲಿದಾ ಧೋಲ್ ರೇ ವಾಗಡ್’ ಮತ್ತು ‘ಹಸಿ ಹಸಿ ಜಾನ್ ಮರೇಲಾ’ ಹಾಡಿರುವ ಜನಪ್ರಿಯ ಗೀತೆಗಳಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಆರತಿ ಹರೀಶ್ ಚಂದ್ರ ಮಿತ್ತಲ್ ಅವರನ್ನು ವೇಶ್ಯಾವಾಟಿಕೆ (Prostitution) ಆರೋಪದ ಅಡಿ ದೆಹಲಿ ಪೊಲೀಸರು ಬಂಧಿಸಿದ್ದರು. ರೆಡ್ ಹ್ಯಾಂಡ್ ಆಗಿಯೇ ಆ ನಟಿ ಪೊಲೀಸರ ಬಲೆಗೆ ಬಿದ್ದಿದ್ದರು. ಇದೀಗ ಮುಂಬೈ (Mumbai) ಪೊಲೀಸರು ಮತ್ತೋರ್ವ ನಟಿಯನ್ನು ಇದೇ ಆರೋಪದಡಿ ಬಂಧಿಸಿದ್ದಾರೆ (arrested). ಈ ದಂಧೆಗೆ ನಟಿ ಮಾಡೆಲ್ ಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ಭೋಜಪುರಿ (Bhojpuri) ನಟಿ ಸುಮನ್ ಕುಮಾರಿ (Suman Kumari) ಬಂಧಿತ ಆರೋಪಿಯಾಗಿದ್ದು, ಮುಂಬೈನ ಪೊಲೀಸ್ ಸೋಷಿಯಲ್ ಸರ್ವೀಸ್ ಶಾಖೆಯ ಅಧಿಕಾರಿಗಳು ಈಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಮುಂಬೈನ ಗೋರೆಗಾಂವ್ ನ ಹೋಟೆಲ್ ವೊಂದರಲ್ಲಿ ಈ ನಟಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ
ತಮಗೆ ಖಚಿತವಾದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಹೋಟೆಲ್ ಮೇಲೆ ದಾಳಿ ಮಾಡಿದ ಪೊಲೀಸರು ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ. ದಂಧೆಯ ಮುಖ್ಯ ಆರೋಪಿ ನಟಿ ಸುಮನ್ ಕುಮಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸಿನಿ ಜಗತ್ತಿಗೆ ಕನಸುಹೊತ್ತು ಬರುವ ನಟಿಯರೇ ಈಕೆಯ ಟಾರ್ಗೆಟ್ ಎಂದು ಹೇಳಲಾಗುತ್ತಿದ್ದು, ಒಂದು ಹುಡುಗಿಗೆ ಐವತ್ತು ಸಾವಿರದಿಂದ ಎಂಬತ್ತು ಸಾವಿರ ತನಕ ಚಾರ್ಜ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಪಂಜಾಬಿ, ಭೋಜಪುರಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಸುಮನ್ ಕುಮಾರಿ ನಟಿಸಿದ್ದು, ಹಲವು ಆಲ್ಬಂಗಳಲ್ಲೂ ಕಾಣಿಸಿಕೊಂಡಿದ್ದಾರೆ. ಲೈಲಾ ಮಜ್ನು, ಬೇಟಾ ದಸ್ ನಂಬರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಯುವಕನೊಬ್ಬನ ಸಹಾಯ ಪಡೆದುಕೊಂಡು ಈಕೆ ಅಡ್ಡದಾರಿ ಹಿಡಿದ್ದರು ಎಂದು ಹೇಳಲಾಗುತ್ತಿದೆ. ಆ ಯುವಕ ಸದ್ಯ ನಾಪತ್ತೆಯಾಗಿದ್ದಾನೆ.
ಬೆಂಗಳೂರು: ಕಿರುತೆರೆ ಬೆಡಗಿ, ಸ್ಯಾಂಡಲ್‍ವುಡ್ ಚೆಂದದ ನಟಿ, ಕೃಷ್ಣ ತುಳಸಿ ಸಿನಿಮಾದಲ್ಲಿ ಸಂಚಾರಿ ವಿಜಯ್ ಜೊತೆ ನಟಿಸಿ ಗಮನ ಸೆಳೆದ ಮಲೆನಾಡಿನ ಹುಡುಗಿ ಮೇಘಶ್ರೀ, ಸ್ಯಾಂಡಲ್‍ವುಡ್, ಟಾಲಿವುಡ್, ಕಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಈಕೆ ಇದೀಗ ಭೋಜ್‍ಪುರಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.
ಭೋಜ್‍ಪುರಿಯ ಖ್ಯಾತ ನಟನ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಸಂಭ್ರಮದಲ್ಲಿರುವ ಮೇಘಶ್ರೀ ಈ ಮೂಲಕ ಕನ್ನಡದ ಕಂಪು ಪಸರಿಸುತ್ತಿದ್ದಾರೆ. ಭೋಜ್‍ಪುರಿ ಚಿತ್ರರಂಗದ ಖ್ಯಾತ ನಟ ಕೇಸರಿಲಾಲ್ ಯಾದವ್ ಅಭಿನಯದ “ಅಪರಾಧಿ” ಸಿನಿಮಾದಲ್ಲಿ ಮೇಘಶ್ರೀ ನಟಿಸುತ್ತಿದ್ದಾರೆ. ಕೇಸರಿಲಾಲ್ ಯಾದವ್ ಜೊತೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿರುವ ಸಂತಸದಲ್ಲಿರುವ ಮೇಘಶ್ರೀ ತಮ್ಮ ಪಾತ್ರದ ಬಗ್ಗೆಯೂ ಸಖತ್ ಥ್ರಿಲ್ ಆಗಿದ್ದಾರೆ. ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಈ ಚಿತ್ರದ ಶೂಟಿಂಗ್ ಉತ್ತರಪ್ರದೇಶದ ಗೋರಖ್‍ಪುರ್ ನಲ್ಲಿ ಭರದಿಂದ ಸಾಗುತ್ತಿದೆ. “ಅಪರಾಧಿ” ಚಿತ್ರಕ್ಕೆ ಶೇಖರ್ ಶರ್ಮಾ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: ಎಲ್ಲಾ ಅಡೆತಡೆಗಳಿಗೂ ‘ಗ್ರೂಫಿ’ ಸಕ್ಸಸ್ ಉತ್ತರ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ
ಇದಕ್ಕೂ ಮುನ್ನ ಕೇಸರಿಲಾಲ್ ಯಾದವ್ ಜೊತೆ “ರೈಟ್” ಸಿನಿಮಾದಲ್ಲಿ ನಟಿಸಿರುವ ಮೇಘಶ್ರೀಗೆ “ಅಪರಾಧಿ” ಎರಡನೇ ಭೋಜ್‍ಪುರಿ ಸಿನಿಮಾ. “ರೈಟ್” ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಚಿತ್ರರಂಗದ ವಾತಾವರಣ, ಚಿತ್ರತಂಡದ ಸಹಕಾರ ಹಾಗೂ ಭೋಜ್ ಪುರಿ ಸಂಸ್ಕೃತಿ ವೇಷ ಭೂಷಣ ತುಂಬಾ ಖುಷಿ ಕೊಟ್ಟಿದೆ. ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ಮೇಘಶ್ರೀ.
ಕಿರುತೆರೆ, ಹಿರಿತೆರೆ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಮೇಘಶ್ರೀ ಮೂಲತಃ ಮಲೆನಾಡಿನವರು. ಕಿರುತೆರೆ ಮೂಲಕ ಪ್ರೇಕ್ಷಕರ ಮನಗೆದ್ದ ನಟಿಗೆ ಸಾಲು ಸಾಲು ಸಿನಿಮಾ ಆಫರ್ ಗಳು ಒಲಿದು ಬಂತು. ಕೃಷ್ಣ ತುಳಸಿ, ಕದ್ದುಮುಚ್ಚಿ, ಮಾರ್ಚ್ 22, ದಶರಥ, ರಾಜಾಮಾತಾರ್ಂಡ ಚಿತ್ರದಲ್ಲಿ ನಟಿಸಿರುವ ಮೇಘಶ್ರೀ ಕೈಯಲ್ಲಿ ಹಲವು ಕನ್ನಡ ಸಿನಿಮಾಗಳಿವೆ. ಇದರ ಜೊತೆಗೆ ತಮಿಳು ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ. ತಮಿಳು ಸಿನಿಮಾವೊಂದರಲ್ಲಿ ಲೀಡ್ ರೋಲ್ ನಲ್ಲಿ ಬಣ್ಣಹಚ್ಚಿದ್ದಾರೆ. ತಮಿಳಿನ ಖ್ಯಾತ ಧಾರಾವಾಹಿಯೊಂದರಲ್ಲೂ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ನಾನಿನ್ನೂ ಬದುಕುವುದಿಲ್ಲ: ನಟಿ ವಿಜಯಲಕ್ಷ್ಮೀ ಅತಂಕ
ಲಕ್ನೋ: ಬಿಹಾರ್ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಜೀವನಾಧಾರಿತ ಚಿತ್ರ ಮುಂದಿನ ವರ್ಷದ ಫೆಬ್ರವರಿಯಲ್ಲಿ ತೆರೆಮೇಲೆ ಬರಲಿದ್ದು, ರಾಷ್ಟ್ರೀಯಾ ಜನತಾ ದಳದ ಚಿಹ್ನೆ ಆಗಿರುವ ‘ಲಾಟೀನ್’ ಹೆಸರಿನಲ್ಲೇ ಚಿತ್ರ ತೆರೆಕಾಣಲಿದೆ.
ಈ ಚಿತ್ರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಪಾತ್ರವನ್ನು ಭೋಜ್ಪುರಿ ನಟ ಯಶ್ ಅಭಿನಯಿಸಲಿದ್ದು, ಲಾಲೂ ಪತ್ನಿ ಹಾಗೂ ಬಿಹಾರದ ಮಾಜಿ ಸಿಎಂ ರಾಬ್ಡಿ ದೇವಿ ಪಾತ್ರದಲ್ಲಿ ಸ್ಮೃತಿ ಸಿನ್ಹ ನಟಿಸಲಿದ್ದಾರೆ. ಈ ಚಿತ್ರವು ಮುಂದಿನ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಲಾಲೂ ಪ್ರಸಾದ್ ಯಾದವ್ ಅವರ ಜೀವನದ ವಿವಿಧ ಆಯಾಮಗಳನ್ನು ಈ ಚಿತ್ರ ತೆರೆದಿಡಲಿದೆ. ಅಲ್ಲದೆ ಈ ಚಿತ್ರವನ್ನು ಬಿಹಾರ್ ಹಾಗೂ ಗುಜರಾತ್‍ನಲ್ಲಿ ಚಿತ್ರೀಕರಿಸುವ ಸಾಧ್ಯತೆಯಿದೆ.
ಮೊದಲೆಲ್ಲಾ ಸಿನಿಮಾ ತಾರೆಯರು, ಕ್ರೀಡಾಪಟುಗಳು, ಸ್ವಾತಂತ್ರ್ಯ ಹೋರಾಟಗಾರರ ಜೀವನಾಧಾರಿತ ಸಿನಿಮಾಗಳು ಬಿಡುಗಡೆಯಾಗುತ್ತಿತ್ತು. ಆದರೇ ಇತ್ತೀಚೆಗೆ ರಾಜಕಾರಣಿಗಳ ಜೀವನಾಧಾರಿತ ಚಿತ್ರಗಳು ತೆರೆಮೇಲೆ ಸಂಚಲ ಮೂಡಿಸುತ್ತಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ರಾಜಕಾರಣಿಗಳ ಜೀವನಾಧಾರಿತ ಸಿನಿಮಾಗಳು ಬಿಡುಗಡೆಯಾಗಿದ್ದವು.
ಇದೇ ಸಾಲಿಗೆ ಈಗ ಲಾಲೂ ಪ್ರಸಾದ್ ಯಾದವ್ ಜೀವನಾಧಾರಿತ ಚಿತ್ರ ಕೂಡ ಸೇರಲಿದೆ. ಇತ್ತೀಚೆಗೆ ಮನಮೋಹನ್ ಸಿಂಗ್ ಜೀವನಾಧಾರಿತ ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರ ಬಾಲಿವುಡ್‍ನಲ್ಲಿ ಭಾರೀ ವಿವಾದ ಎಬ್ಬಿಸಿತ್ತು. ಹಲವರು ಈ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಮುಂಬೈ: ಸಾಮಾಜಿಕ ಜಾಲತಾಣದಿಂದ ವೈರಲ್ ಆದ ರಾನು ಮೊಂಡಲ್ ಅವರಿಗೆ ಇದೀಗ ಸಿನಿಮಾಗಳಲ್ಲಿ ಹಾಡಲು ಸಾಕಷ್ಟು ಅವಕಾಶಗಳು ಒದಗಿ ಬರುತ್ತಿವೆ. ಬಾಲಿವುಡ್‍ನಲ್ಲಿ ಈಗಾಗಲೇ ಒಂದು ಹಾಡನ್ನು ರೆಕಾರ್ಡ್ ಮಾಡಿದ ರಾನು ಅವರು, ಈಗ ಭೋಜ್‍ಪುರಿ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಭೋಜ್‍ಪುರಿ ನಟ ಪ್ರದೀಪ್ ಪಾಂಡೆ ಚಿಂಟು ಅವರು ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಈಗ ಕೇಳಿ ಬರುತ್ತಿರುವ ಹೆಸರು ರಾನು ಮೊಂಡಲ್. ಇಡೀ ದೇಶದ ಜನತೆ ಅಲ್ಲದೆ ಭೋಜ್‍ಪುರಿ ಅಭಿಮಾನಿಗಳ ಹೃದಯದಲ್ಲೂ ಅವರು ತಮಗೆ ಜಾಗ ಮಾಡಿಕೊಂಡಿದ್ದಾರೆ. ಅವರ ಹಾಡು ಕೇಳಿ ಸ್ವತಃ ನಾನೇ ಅವರ ಅಭಿಮಾನಿ ಆಗಿದ್ದೇನೆ. ನಾನು ಅಲ್ಲದೆ ನಮ್ಮ ಇಡೀ ಭೋಜ್‍ಪುರಿ ಚಿತ್ರರಂಗ ಕೂಡ ಅವರ ಅಭಿಮಾನಿ ಆಗಿದೆ ಎಂದರು. ಇದನ್ನೂ ಓದಿ: ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ
ಇಡೀ ಭೋಜ್‍ಪುರಿ ಚಿತ್ರರಂಗ ರಾನು ಅವರನ್ನು ಸ್ವಾಗತಿಸಬೇಕು ಎಂದುಕೊಂಡಿದೆ. ನಾನು ಅವರನ್ನು ಹುಡುಕಿ ನನ್ನ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ. ಇದು ನನ್ನ ಇಚ್ಛೆ ಕೂಡ. ಅವರ ಧ್ವನಿ ಒಬ್ಬರ ಹೃದಯವನ್ನು ಮುಟ್ಟುತ್ತದೆ. ಅವರ ಧ್ವನಿಯಲ್ಲಿ ಆತ್ಮ ಇದೆ. ಅವರು ನನ್ನ ಜೊತೆ ಭೋಜ್‍ಪುರಿ ಹಾಡು ಹಾಡಲಿ ಎಂದು ನಾನು ಬಯಸುತ್ತೇನೆ. ಶೀಘ್ರದಲ್ಲೇ ನಾನು ಎಲ್ಲರಿಗೂ ಈ ಸುದ್ದಿಯನ್ನು ನೀಡುತ್ತೇನೆ ಎಂದು ಪ್ರದೀಪ್ ಪಾಂಡೆ ಹೇಳಿದ್ದಾರೆ. ಇದನ್ನೂ ಓದಿ: 10 ವರ್ಷದ ಬಳಿಕ ರಾನು ಮೊಂಡಲ್ ಭೇಟಿಯಾದ ಮಗಳು
ರೈಲ್ವೆ ನಿಲ್ದಾಣದಲ್ಲಿ ಹಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾನು ಅವರು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ರಾನು ಮೊಂಡಲ್ ಅವರಿಗೆ ಅವಕಾಶ ನೀಡಿದ್ದರು. ಈ ವಿಷಯವನ್ನು ಸ್ವತಃ ಹಿಮೇಶ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲದೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ತಮ್ಮ ಚಿತ್ರದಲ್ಲಿ ರಾನು ಅವರಿಗೆ ಅವಕಾಶ ನೀಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಇದನ್ನೂ ಓದಿ: ಬೇಡ ಎಂದ್ರೂ ರಾನುಗೆ 7 ಲಕ್ಷ ಸಂಭಾವನೆ ನೀಡಿದ ಹಿಮೇಶ್
ಮುಂಬೈ: 29 ವರ್ಷದ ನಟಿ ಅಂಜಲಿ ಶ್ರೀವಾಸ್ತವ ಸೋಮವಾರದಂದು ಸಧೇರಿ ಅಪಾರ್ಟ್‍ಮೆಂಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದರೆ ಪೊಲೀಸರು ಈಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈಕೆ ಸತ್ತ ಜಾಗದಲ್ಲಿ ಯಾವುದೇ ಡೆತ್ ನೋಟ್‍ಗಳು ಸಿಕ್ಕಿಲ್ಲ. ಹೀಗಾಗಿ ನಟಿಯ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಸದ್ಯ ನಟಿ ಸಾವಿನ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಕರೆಗಳನ್ನು ಸ್ವೀಕರಿಸಲಿಲ್ಲ: ಮೊಬೈಲ್ ಕರೆಗಳನ್ನು ಬಹಳ ಗಂಟೆಗಳಿಂದ ಸ್ವೀಕರಿಸದಿರುವುದರಿಂದ ಅನುಮಾನಗೊಂಡ ಮನೆಯವರು ಅಪಾರ್ಟ್‍ಮೆಂಟ್ ಮಾಲೀಕರ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಅಂಜಲಿಯ ಶವ ಫ್ಯಾನ್‍ಗೆ ಹಗ್ಗ ಕಟ್ಟಿ ನೇಣಿಗೆ ಶರಣಾಗಿದ್ದ ರೀತಿಯಲ್ಲಿ ಪತ್ತೆಯಾಗಿತ್ತು.
ಹಲವು ಚಿತ್ರಗಳಲ್ಲಿ ನಟನೆ: ಇವರು ಇತ್ತೀಚಿನ ದಿನಗಳಲ್ಲಿ ಭೋಜ್‍ಪುರಿಯ ಕೆಹ ತ ದಿಲ್ ಮೇ ಬಾ ಎಂಬ ಚಿತ್ರದ ಶೂಟಿಂಗ್‍ಗೆ ಹೋಗಿದ್ದರು. ಇದಕ್ಕೂ ಮುನ್ನ ಅನೇಕ ಸಿನಿಮಾಗಳಲ್ಲಿ ಈಕೆ ನಟಿಸಿದ್ದಾರೆ.