Tag: bhoje gowda

  • ನಕ್ಸಲರಿಗಿಂತ ಸಿ.ಟಿ ರವಿಯೇ ಡೇಂಜರ್: ಎಸ್.ಎಲ್ ಭೋಜೇಗೌಡ

    ನಕ್ಸಲರಿಗಿಂತ ಸಿ.ಟಿ ರವಿಯೇ ಡೇಂಜರ್: ಎಸ್.ಎಲ್ ಭೋಜೇಗೌಡ

    ಚಿಕ್ಕಮಗಳೂರು: ನಕ್ಸಲರಿಗಿಂತ ಸಿ.ಟಿ ರವಿ (CT Ravi) ಯೇ ಡೇಂಜರ್ ಎಂದು ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಾಗ್ದಾಳಿ ನಡೆಸಿದ್ದಾರೆ.

    ಸಿ.ಟಿ ರವಿಯ ಅರ್ಬನ್ ನಕ್ಸಲ್ ಹೇಳಿಕೆಗೆ ಭೋಜೇಗೌಡ (Bhoje Gowda) ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನ ಬದಲಾವಣೆ, ರಾಷ್ಟ್ರಧ್ವಜ ಇಳಿಸಿ ಭಗವಧ್ವಜ, ಹಿಂದೂ ರಾಷ್ಟ್ರದ ಹೇಳಿಕೆಗಳು ನಕ್ಸಲರಿಗಿಂತ ಡೇಂಜರಸ್ ಪದಗಳು. ಒಂದು ಜಾತಿ, ಒಂದು ಧರ್ಮ ಇಟ್ಟುಕೊಂಡು ದೇಶವನ್ನು ರಕ್ಷಣೆ ಮಾಡೋಕಾಗುತ್ತಾ?. ಸಿ.ಟಿ ರವಿ ನಾಲಿಗೆ ಹರಿಬಿಟ್ಟ ಪರಿಣಾಮ ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದರು.

    ಚಿಕ್ಕಮಗಳೂರು ಕ್ಷೇತ್ರ (Chikkamagaluru Constituency) ಕ್ಕೆ ಮಾತ್ರ ಕಾಂಗ್ರೆಸ್ ಜೊತೆಗೆ ಹೊಂದಣಿಕೆ ಇತ್ತು. ನಾನು ಜೆಡಿಎಸ್ ಪಕ್ಷದಿಂದಲೇ ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ನಾನು ಕಾಂಗ್ರೆಸ್ ಸೇರ್ಪಡೆ ಬರೀ ವದಂತಿ ಅಷ್ಟೇ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ: ಸಿಟಿ ರವಿ

    ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು. ಪಠ್ಯಪುಸ್ತಕ ವಿಚಾರದಲ್ಲಿ ಎಂಎಲ್‍ಎಗಳಿಗೆ ಏನು ಕೆಲಸ..?. ಪಠ್ಯ ಪುಸ್ತಕಗಳನ್ನು ಯಾರು ತಯಾರು ಮಾಡುತ್ತಾರೆ, ಯಾರು ಪರಿಪಕ್ವವಾಗಿದ್ದಾರೆ ಅವರಿಗೆ ಬಿಟ್ಟ ವಿಚಾರ ಎಂದು ಭೋಜೇಗೌಡ ತಿಳಿಸಿದ್ದಾರೆ.

    ಸಿ.ಟಿ ರವಿ ಹೇಳಿದ್ದೇನು..?: ನಕ್ಸಲ್ ಚಟುವಟಿಕೆ ಒಡಿಶಾ ಕಡೆ ಸೀಮಿತ ಆಗಿತ್ತು. ಈಗ ಕರ್ನಾಟಕದಲ್ಲಿ ಶುರು ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ ಎಂದು  ಸಿಟಿ ರವಿ ಹೇಳಿಕೆ ನೀಡಿದ್ದರು.

  • ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ

    ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ

    – ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ

    ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಯವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ ನಡೆಸಲಾಯಿತು.

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಪರಮಾಪ್ತ ಭೋಜೇಗೌಡ, ಜೆಡಿಎಸ್ ಅಭ್ಯರ್ಥಿ ಇದ್ದರೂ ಸಿ.ಟಿ ರವಿ ವಿರುದ್ಧ ಭೋಜೇಗೌಡ (Bhoje Gowda) ಅಖಾಡಕ್ಕಿಳಿದಿದ್ದರು. ಈ ಮೂಲಕ ಸಿ.ಟಿ.ರವಿ ಸೋಲಿನ ಮಾಸ್ಟರ್ ಮೈಂಡ್ ಆಗಿದ್ದಾರೆ. ಹೀಗಾಗಿ ಜೆ.ಡಿ.ಎಸ್ ಕಾರ್ಯಕರ್ತರು ಭೋಜೇಗೌಡರಿಗೆ ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯಲ್ಲಿ ಸನ್ಮಾನ ಹಾಗೂ ಅಭಿಷೇಕ ಮಾಡಿದ್ದಾರೆ. ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದ ಭೋಜೇಗೌಡ, ಜೆಡಿಎಸ್ ನಿಂದ ಗೆದ್ದು ಕಾಂಗ್ರೆಸ್ಸಿನ ತಮ್ಮಯ್ಯ ಪರ ಮತಯಾಚಿಸಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ 5 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜಯ – ಬಿಜೆಪಿಗೆ ಹೀನಾಯ ಸೋಲು

    ಬಳಿಕ ಸಿ.ಟಿ.ರವಿ ಬುದ್ಧಿವಂತರಿದ್ದಾರೆ ಎಂದು ಹಾಡಿ ಹೊಗಳಿದ ಭೋಜೇಗೌಡ, ಸಿ.ಟಿ.ರವಿ ಬಹಳ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದ್ದರು. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು. ಟೀಕೆಗಳು ತಪ್ಪಲ್ಲ, ಆದರೆ ಅದಕ್ಕೊಂದು ಇತಿಮಿತಿ ಇರುತಿತ್ತು. ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ. ಸಿ.ಟಿ ರವಿ ಸದನದ ಒಳಗೆ-ಹೊರಗೆ ಎರಡೂ ಕಡೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಟೀಕೆ ಮಾಡುವಾಗ ವ್ಯಕ್ತಿತ್ವ, ರಾಜಕೀಯ ಮುತ್ಸದ್ದಿತನವನ್ನ ಯೋಚನೆ ಮಾಡಬೇಕು ಎಂದರು.

    ಯಾರನ್ನೋ ಮೆಚ್ಚಿಸಲು, ಕ್ಷಣಿಕ ಸುಖಕ್ಕೆ, ಕಾರ್ಯಕರ್ತರ ಮೆಚ್ಚಿಸಲು ವೈಯಕ್ತಿಕ ಟೀಕೆ ಸರಿಯಲ್ಲ. ದೇವೇಗೌಡ (HD Devegowda) ರಿಗೆ ಸಾಬರಾಗಿ ಹುಟ್ಲಿ ಅನ್ನೋದು, ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಅನ್ನೋದು. ಸಿ.ಟಿ.ರವಿ ಯಾರನ್ನ ಬಿಟ್ಡಿದ್ದಾರೆ. ಯಾರನ್ನೂ ಬಿಟ್ಟಿಲ್ಲ. ಟೀಕೆ ಮಾಡುವಾಗಲು ರಾಜಕೀಯ ಸ್ಟ್ಯಾಂಡರ್ಡ್ ನಲ್ಲಿ ಟೀಕೆ ಮಾಡಬೇಕು. ಕುಲದ ಕುತ್ತಿಗೆ ಉದ್ದ ಸರ್… ಅಷ್ಟು ಸುಲಭ ಇಲ್ಲ. ಬ್ಲಡ್ ಇಸ್ ಥಿಕ್ಕರ್ ದೆನ್ ವಾಟರ್. ಕುಲದ ಬಗ್ಗೆ ಮಾತನಾಡುವಾಗ ಜನ ಆತನ ಹಮ್ಮಿನ ಬಗ್ಗೆ ಯೋಚಿಸ್ತಾರೆ ಎಂದು ಹೇಳಿದರು.

    ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ. ದುರಾಡಳಿತ, ದುರಾಂಕಾರ, ನಾಲಿಗೆ ಎಲ್ಲವೂ ಸೇರಿ ಕೂಡಿ ಸೋಲಿಸಿವೆ ಎಂದು ತಿಳಿಸಿದರು. ಇದನ್ನೂ ಓದಿ: ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ: ಕೈ ನಾಯಕರಿಗೆ ಸೂರ್ಯ ತಿರುಗೇಟು

  • MLC ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ

    MLC ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ

    ಬೆಂಗಳೂರು: ವಿಧಾನಪರಿಷತ್ ಸದಸ್ಯರ ಕಾರಿನ ನಂಬರ್ ಪ್ಲೇಟ್ (Number Plate) ಬಳಸಿ ವಂಚಕರು ಕದ್ದ ಕಾರುಗಳನ್ನು ಮಾರಾಟ ಮಾಡಲು ಮಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಜೆಡಿಎಸ್ (JDS) ಎಂಎಲ್‍ಸಿ ಭೋಜೇಗೌಡರ (Bhoje Gowda) ಕಾರಿನ ನಂಬರನ್ನು ಬಳಸಿ ಕದ್ದ ಕಾರನ್ನು (Car) ಮಾರಾಟ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿ ನಡೆದಿದೆ. ಕಾರ್ ಶೋ ರೂಂವೊಂದರಲ್ಲಿ ಭೋಜೇಗೌಡರ ಇನೋವಾ ಕಾರಿನ ನಂಬರ್ ಹಾಕಿ ಮಾರಾಟಕ್ಕೆ ನಿಲ್ಲಿಸಲಾಗಿತ್ತು. ಈ ಕಾರಿನ ನಂಬರ್ ನೋಡಿದ ಭೋಜೆಗೌಡರ ಪಿಎ ಮಾದೇಶ್ ಒಮ್ಮೆಲೇ ಶಾಕ್ ಆಗಿದ್ದಾರೆ. ಇದರಿಂದ ಅನುಮಾನಗೊಂಡು ಶೋರೂಂನಲ್ಲಿ ಆ ಕಾರಿನ ಬಗ್ಗೆ ವಿಚಾರಿಸಿದ್ದಾರೆ.

    ಈ ವೇಳೆ ಶೋರೂಂನವರು ಕಾರನ್ನು ಮಾರಾಟಕ್ಕೆ ಇರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಮಾದೇಶ್ ಕೂಡಲೇ ಭೋಜೇಗೌಡರಿಗೆ ಕರೆ ಮಾಡಿ ಇನೋವಾ ಕಾರನ್ನು ಮಾರಾಟಕ್ಕೆ ಇಟ್ಟಿದ್ದೀರಾ ಎಂದು ವಿಚಾರಿಸಿದ್ದಾರೆ. ಈ ವೇಳೆ ಭೋಜೇಗೌಡರು ನನ್ನ ಇನೋವಾ ಕಾರು ಮನೆಯಲ್ಲೇ ಇದೆ. ಇದನ್ನು ಮಾರಾಟಕ್ಕೆ ಇಟ್ಟಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಮೂವರು ಮೃತಪಟ್ಟರೂ ಅಧಿಕಾರಿಗಳು ಡೋಂಟ್ ಕೇರ್!

    ಇದಾದ ಬಳಿಕ ಕೂಡಲೇ ಮಾದೇಶ್ ಘಟನೆಗೆ ಸಂಬಂಧಿಸಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿ ಹೈಗ್ರೌಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕದ್ದ ಕಾರುಗಳಿಗೆ ನಂಬರ್ ಬದಲಾಯಿಸಿ, ಮಾರಾಟ ಮಾಡುತ್ತಿದ್ದುದ್ದು ಯಾಕೆ ಎನ್ನುವುದನ್ನು ಪತ್ತೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಓಟಿಪಿ ಬರದೇ ವೋಟಿಲ್ಲ- ಮೊಬೈಲ್ ಟವರ್‌ಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಅಭಿಯಾನ

  • ಎತ್ತಿನಹೊಳೆ ಪೂರ್ಣ ಆದ್ರೆ ನೇಣು ಹಾಕಿಕೊಳ್ಳುತ್ತೇನೆ: ಭೋಜೇಗೌಡ

    ಎತ್ತಿನಹೊಳೆ ಪೂರ್ಣ ಆದ್ರೆ ನೇಣು ಹಾಕಿಕೊಳ್ಳುತ್ತೇನೆ: ಭೋಜೇಗೌಡ

    ಬೆಂಗಳೂರು: ಎತ್ತಿನಹೊಳೆ ಯೋಜನೆ ಪೂರ್ಣ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಜೆಡಿಎಸ್‍ನ ಸದಸ್ಯ ಭೋಜೇಗೌಡ ಸವಾಲ್ ಹಾಕಿದ ಘಟನೆ ನಡೆಯಿತು.

    ನಿಯಮ 72ರ ಅಡಿ ಕಾಂಗ್ರೆಸ್‍ನ ರಾಜೇಂದ್ರ ರಾಜಣ್ಣ ಎತ್ತಿನಹೊಳೆ ಯೋಜನೆ ವಿಷಯ ಪ್ರಸ್ತಾಪ ಮಾಡಿದರು. ಬಯಲು ಸೀಮೆಯ 7 ಜಿಲ್ಲೆಗಳಿಗೆ ನೀರು ಕೊಡಲು ಎತ್ತಿನಹೊಳೆ ಯೋಜನೆ ಸ್ಥಗಿತಗೊಂಡಿದೆ. ಈ ಯೋಜನೆ ಕೂಡಲೇ ಪ್ರಾರಂಭ ಮಾಡಬೇಕು ಎಂದು ಒತ್ತಾಯ ಮಾಡಿದರು. ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಬೇಕು. ಇನ್ನು ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಕೂಡಲೇ ಪರಿಹಾರ ಕೊಟ್ಟು ಕುಡಿಯುವ ನೀರಿನ ಯೋಜನೆಗೆ ಸಹಕಾರ ಮಾಡಿ ಎಂದು ಒತ್ತಾಯ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಎತ್ತಿನಹೊಳೆ ಯೋಜನೆಗೆ 12,912.36 ಕೋಟಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಎರಡು ಹಂತದಲ್ಲಿ ಈ ಯೋಜನೆ ನಡೆಯುತ್ತಿದೆ. ಮೊದಲ ಹಂತದ ಲಿಫ್ಟ್ ಕಾಮಗಾರಿ 5 ಪ್ಯಾಕೇಜ್‍ಗಳಲ್ಲಿ 2014ರಲ್ಲಿ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಅರಣ್ಯ ಪರಿಸರ ಇಲಾಖೆಯಿಂದ ಅನುಮತಿ ಪಡೆದು ಕಾಮಗಾರಿ ಚಾಲನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

    ಭೈರಗೊಂಡ್ಲ ಜಲಾಶಯದ ಕಾಮಗಾರಿಗಳನ್ನು 35 ಪ್ಯಾಕೇಜ್ ಕೈಗೊಳ್ಳಲಾಗಿದೆ. ಯೋಜನೆ ಪ್ರಾರಂಭದಿಂದ ಜನವರಿ 2022 ಅಂತ್ಯದವರೆಗೆ 9268.76 ಕೋಟಿ ಸಂಚಿತ ವೆಚ್ಚ ಮಾಡಲಾಗಿರುತ್ತದೆ. ಭೂಸ್ವಾಧೀನ ಸಮಸ್ಯೆ, ಪರಿಸರ, ಅರಣ್ಯ ತೀರುವಳಿ, ಗ್ರೀನ್ ಟ್ರುಬ್ಯುನಲ್, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಕೋವಿಡ್‍ನಿಂದಾಗಿ ಯೋಜನೆ ವಿಳಂಬವಾಗಿದೆ. ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ ಯೋಜನೆ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

    ಎತ್ತಿನಹೊಳೆಗೆ ಸಮಸ್ಯೆ ಆಗಿರೋದು ಭೂಸ್ವಾಧೀನ ಪ್ರಕ್ರಿಯೆ. ಸುಮಾರು 12 ಸಾವಿರ ಎಕರೆ ಭೂಸ್ವಾಧೀನ ಆಗಬೇಕು. ಎತ್ತಿನಹೊಳೆ ಯೋಜನೆ ಅನುಷ್ಠಾನ ಮಾಡಿದ್ದು ಬಿಜೆಪಿ ಸರ್ಕಾರ. ಇದು ನಮ್ಮ ಬದ್ಧತೆ. ಪ್ರತಿಯೊಂದು ಹಳ್ಳಿಗೆ ಭೂಮಿಯ ಮೌಲ್ಯ ಬೇರೆ ಬೇರೆ ಇರುತ್ತದೆ. ಪರಮೇಶ್ವರ್ ಮಂತ್ರಿಯಾದಾಗ ಯಾಕೆ ಇದನ್ನು ಹೆಚ್ಚು ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು. ಎತ್ತಿನಹೊಳೆ ಯೋಜನೆಗೆ ಪೂರ್ಣ ಮಾಡುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದರು.

    ಈ ವೇಳೆ ಎದ್ದು ನಿಂತ ಜೆಡಿಎಸ್‍ನ ಭೋಜೇಗೌಡ, ಎತ್ತಿನಹೊಳೆ ಯೋಜನೆ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲ್ ಹಾಕಿದರು. 22 ಸಾವಿರ ಕೋಟಿ ಅಲ್ಲ 50 ಸಾವಿರ ಕೋಟಿ ಖರ್ಚು ಮಾಡಿದರು ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಇದು ನನ್ನ ಚಾಲೆಂಜ್. ಎತ್ತಿನಹೊಳೆ ಕೆಲವರಿಗೆ ಕಾಮಧೇನು. ಯಾರ್ ಯಾರಿಗೆ ಇದು ಕಾಮಧೇನು ಅಂತ ನಮಗೆ ಗೊತ್ತಿದೆ. 50 ಸಾವಿರ ಕೋಟಿ ಖರ್ಚು ಮಾಡಿದರು ಈ ಯೋಜನೆ ಪೂರ್ಣ ಆಗೊಲ್ಲ. ಒಂದು ವೇಳೆ ಈ ಯೋಜನೆ ಆದರೆ ನಾನು ನೇಣು ಹಾಕಿಕೊಳ್ತೀನಿ ಅಂತ ಸವಾಲ್ ಹಾಕಿದರು. ಇದನ್ನೂ ಓದಿ: ನವೀನ್ ಬೆಳಗ್ಗೆ ನಮ್ಮೊಂದಿಗೆ ಬರುತ್ತಿದ್ದರೆ ಉಳಿಯುತ್ತಿದ್ದ: ಸ್ನೇಹಿತೆ ವರ್ಷಿತಾ

    ಇದಕ್ಕೆ ಉತ್ತರ ನೀಡಿದ ಸಚಿವರು, ನಮ್ಮ ಸರ್ಕಾರಕ್ಕೆ ಬದ್ಧತೆ ಇರುವುದಕ್ಕೆ ಎತ್ತಿನಹೊಳೆ ಯೋಜನೆಗೆ ಬಜೆಟ್‍ನಲ್ಲಿ 3 ಸಾವಿರ ಕೋಟಿ ಇಟ್ಟಿದ್ದೇವೆ. ಎತ್ತಿನಹೊಳೆ ಯೋಜನೆ ಪೂರ್ಣ ಮಾಡೋದಕ್ಕೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ ಎಂದು ತಿಳಿಸಿದರು.