Tag: Bhishma

  • ರಶ್ಮಿಕಾ ಹುಟ್ಟುಹಬ್ಬಕ್ಕೆ #VNRTrio ಸಿನಿಮಾದ ಹೊಸ ಪೋಸ್ಟರ್ ರಿಲೀಸ್

    ರಶ್ಮಿಕಾ ಹುಟ್ಟುಹಬ್ಬಕ್ಕೆ #VNRTrio ಸಿನಿಮಾದ ಹೊಸ ಪೋಸ್ಟರ್ ರಿಲೀಸ್

    ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅಡಿ ಇಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ನ್ಯಾಷನಲ್ ಕ್ರಶ್ ಆಗಿ ಬೆಳೆದಿದ್ದಾರೆ. ಸ್ಯಾಂಡಲ್ ವುಡ್ ನಿಂದ ಸಿನಿ ಬದುಕು ಶುರು ಮಾಡಿ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಭೀಷ್ಮ ಬ್ಯೂಟಿಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ.. ರಶ್ಮಿಕಾ ಬರ್ತ್ ಡೇ ಪ್ರಯುಕ್ತ ಅಭಿಮಾನಿಗಳು ಸ್ಪೆಷಲ್ ಸಿಡಿಪಿ ರಿಲೀಸ್ ಮಾಡಿ ಪ್ರೀತಿಯಿಂದ ಶುಭಾಯ ಕೋರಿದ್ದಾರೆ. ಸೆಲೆಬ್ರಿಟಿಗಳು ಸಾನ್ವಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ರಶ್ಮಿಕಾ ಜನುಮದಿನದ ಸ್ಪೆಷಲ್ ಆಗಿ #VNRTrio ಸಿನಿಮಾ ತಂಡ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದೆ.

    ಭೀಷ್ಮ (Bhishma) ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಯಂಗ್ ಟಾಲಿವುಡ್ ಹೀರೋ ನಿತಿನ್ (Nitin) ಹಾಗೂ ರಶ್ಮಿಕಾ ಮಂದಣ್ಣ #VNRTrio ಸಿನಿಮಾ ಮೂಲಕ ಮತ್ತೆ ಒಂದಾಗ್ತಿದೆ. ಭೀಷ್ಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ವೆಂಕಿ ಕುದುಮುಲ ಮತ್ತೊಮ್ಮೆ ಈ ಜೋಡಿಗೆ  ನಿರ್ದೇಶನ ಮಾಡ್ತಿದ್ದು, ಸೌತ್ ಇಂಡಸ್ಟ್ರೀಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ #VNRTrioಗೆ ಬಂಡವಾಳ ಹೂಡಿದೆ. ಈ ಚಿತ್ರತಂಡ ರಶ್ಮಿಕಾ ಹುಟ್ಟಹಬ್ಬಕ್ಕೆ ಸ್ಪೆಷಲ್ ಉಡುಗೊರೆ ನೀಡಿದೆ. ಈ ಹಿಂದಿ ನಿತಿನ್ ಬರ್ತ್ ಡೇ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿದ್ದ #VNRTrio ಟೀಂ ಈಗ ರಶ್ಮಿಕಾ ಜನ್ಮದಿನಕ್ಕೆ ಪೋಸ್ಟರ್ ಅನಾವರಣ ಮಾಡಿದೆ. ಸ್ಟೈಲೀಶ್ ಔಟ್ ಫಿಟ್ ನಲ್ಲಿ ರಶ್ಮಿಕಾ ಗ್ಲಾಮರ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ. ಇದನ್ನೂ ಓದಿ: ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

    ಮೈತ್ರಿ ಮೂವೀ ಮೇಕರ್ಸ್ ಸಾರಥಿಗಳಾದ ನವೀನ್ ಯೆರ್ನೇನಿ ಹಾಗೂ ವೈ ರವಿ ಶಂಕರ್ ದೊಡ್ಡ ಕ್ಯಾನ್ವನ್ ನಲ್ಲಿ ಚಿತ್ರ ನಿರ್ಮಾಣ ಮಾಡ್ತಿದ್ದು, ನಟ ಕಿರೀಟಿ ರಾಜೇಂದ್ರ ಪ್ರಸಾದ್ ಹಾಗೂ ವಿನ್ನೆಲ ಕಿಶೋರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ. ಸಾಯಿ ಶ್ರೀರಾಮ್ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ, ರಾಮ್ ಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ. #VNRTrio ಸಿನಿಮಾದ ಮತ್ತಷ್ಟು ವಿವರಗಳನ್ನು ಶೀಘ್ರದಲ್ಲಿ ರಿವೀಲ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಹೈದ್ರಾಬಾದ್ ನಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದ್ದು, ಮೆಗಾಸ್ಟಾರ್ ಚಿರಂಜೀವಿ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು.

  • ಕುರುಕ್ಷೇತ್ರ: ದುರ್ಯೋಧನನ ಜೊತೆ ಮಿಂಚುತ್ತಿರೋ ಭೀಷ್ಮ!

    ಕುರುಕ್ಷೇತ್ರ: ದುರ್ಯೋಧನನ ಜೊತೆ ಮಿಂಚುತ್ತಿರೋ ಭೀಷ್ಮ!

    ಬೆಂಗಳೂರು: ಕುರುಕ್ಷೇತ್ರ ಬಿಡುಗಡೆಯಾಗಲು ದಿನಗಣನೆ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ವಿಜೃಂಭಿಸಿರೋ ಈ ಸಿನಿಮಾ ಅವರ ಅಭಿಮಾನಿಗಳಿಗೂ ಸ್ಪೆಷಲ್. ಇನ್ನೇನು ತೆರೆಯ ಮೇಲೆ ಕುರುಕ್ಷೇತ್ರ ಮೂಡಿಕೊಳ್ಳೋ ಕ್ಷಣಗಳು ಹತ್ತಿರಾಗುತ್ತಲೇ ಥೇಟರ್‌ಗಳ ಮುಂದೆ ಕಟೌಟ್ ಭರಾಟೆಯೂ ಜೋರಾಗಿದೆ. ಹೇಳಿಕೇಳಿ ಇದು ದೊಡ್ಡ ಕ್ಯಾನ್ವಾಸಿನ ಚಿತ್ರ. ಇದರಲ್ಲಿ ಹಲವಾರು ಸ್ಟಾರ್ ನಟ ನಟಿಯರೂ ನಟಿಸಿದ್ದಾರೆ. ಒಂದು ವೇಳೆ ಅವರೆಲ್ಲರ ಕಟೌಟ್ ಹಾಕಿದರೆ ಆಯಾ ಥೇಟರ್ ಇರೋ ಏರಿಯಾವೆಲ್ಲ ಕಟೌಟ್ ಮಯವಾಗಿ ಬಿಡುತ್ತದೆ. ಯಾಕೆಂದರೆ ಅಷ್ಟು ದೊಡ್ಡ ತಾರಾಗಣ ಕುರುಕ್ಷೇತ್ರದಲ್ಲಿದೆ!

    ಹೀಗಿರೋದರಿಂದಲೇ ಇದೀಗ ಥೇಟರ್‌ಗಳ ಮುಂದೆ ಪ್ರಧಾನವಾಗಿ ಇಬ್ಬರ ಕಟೌಟುಗಳು ರಾರಾಜಿಸುತ್ತಿವೆ. ದುರ್ಯೋಧನನಾಗಿ ನಟಿಸಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಭೀಷ್ಮ ಅಂಬರೀಶ್ ಅವರ ಕಟೌಟ್ ಬಹುತೇಕ ಚಿತ್ರಮಂದಿರಗಳ ಮುಂದೆ ಜನರನ್ನು ಸೆಳೆಯುತ್ತಿವೆ. ರವಿಚಂದ್ರನ್, ಅರ್ಜುನ್ ಸರ್ಜಾ ಸೇರಿದಂತೆ ಅನೇಕ ಹೀರೋಗಳು ಈ ಚಿತ್ರದಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ದರ್ಶನ್ ಮತ್ತು ಅಂಬರೀಶ್ ಅವರ ಕಟೌಟುಗಳನ್ನು ಚಿತ್ರಮಂದಿರಗಳ ಮುಂದೆ ನಿಲ್ಲಿಸಲಾಗುತ್ತಿದೆ.

    ಹಾಗಂತ ಇದರ ಹಿಂದೆ ಯಾವ ಉದ್ದೇಶಗಳೂ ಇಲ್ಲ. ಈ ಬಗ್ಗೆ ಕುರುಕ್ಷೇತ್ರದಲ್ಲಿ ನಟಿಸಿರೋ ಸಕಲ ಕಲಾವಿದರಿಗೂ ಸಹಮತವಿದೆ. ಅಷ್ಟಕ್ಕೂ ಈ ಹಿಂದೆ ಖುದ್ದು ದರ್ಶನ್ ಅವರೇ ಯಾರ ಕಟೌಟುಗಳನ್ನು ನಿಲ್ಲಿಸೋದೂ ಬೇಡ, ಅಂಬರೀಶ್ ಅವರ ಕಟೌಟ್ ಒಂದಿದ್ದರೆ ಸಾಕು ಎಂದಿದ್ದರು. ಆದರೂ ಇದು ದರ್ಶನ್ ಅವರ ಐವತ್ತನೇ ಚಿತ್ರ. ಇನ್ನು ಅಂಬರೀಶ್ ಅವರನ್ನು ಅಪ್ಪಾಜಿ ಎಂದೇ ಕರೆಯುತ್ತಾ ಅವರ ಬಗ್ಗೆ ವಿಶೇಷವಾದ ಅಕ್ಕರಾಸ್ಥೆ ಹೊಂದಿರುವವರು ದರ್ಶನ್. ಈ ಕಾರಣದಿಂದಲೇ ಭೀಷ್ಮನ ಜೊತೆ ದುರ್ಯೋಧನನ ಕಟೌಟುಗಳನ್ನೂ ಹಾಕಲಾಗುತ್ತಿದೆ.

    ಚಿತ್ರಮಂದಿರಗಳ ಎದುರು ಹೀಗೆ ಭೀಷ್ಮ ಮತ್ತು ದುರ್ಯೋಧನನ ಕಟೌಟುಗಳು ರಾರಾಜಿಸುತ್ತಿರೋದನ್ನು ಕಂಡು ಅಭಿಮಾನಿಗಳು ಮಾತ್ರವಲ್ಲದೇ ಜನರೆಲ್ಲ ಖುಷಿಗೊಳ್ಳುತ್ತಿದ್ದಾರೆ. ಕುರುಕ್ಷೇತ್ರ ಬಿಡುಗಡೆಯಾಗಲು ಎರಡು ದಿನ ಬಾಕಿ ಇರುವಾಗಲೇ ರಾಜ್ಯಾದ್ಯಂತ ಇಂಥಾ ಕಟೌಟ್ ನಿರ್ಮಿಸೋ ಕಾರ್ಯ ಭರದಿಂದ ಸಾಗುತ್ತಿದೆ. ಪ್ರೇಕ್ಷಕರಂತೂ ತಮ್ಮಿಷ್ಟದ ನಟರನ್ನು ಒಂದೇ ತೆರೆಯ ಮೇಲೆ ನೋಡಲು ಕಾತರರಾಗಿದ್ದಾರೆ.

  • ಸಿನಿಮಾದಲ್ಲಿ ಮರಣಶಯ್ಯೆಯಲ್ಲಿ ‘ಭೀಷ್ಮ’ – ನಿಜಜೀವನದಲ್ಲಿ ಚಿತೆಯ ಮೇಲೆ ಅಂಬಿ

    ಸಿನಿಮಾದಲ್ಲಿ ಮರಣಶಯ್ಯೆಯಲ್ಲಿ ‘ಭೀಷ್ಮ’ – ನಿಜಜೀವನದಲ್ಲಿ ಚಿತೆಯ ಮೇಲೆ ಅಂಬಿ

    ಬೆಂಗಳೂರು: ‘ಕುರುಕ್ಷೇತ’ ಸಿನಿಮಾ ಕಲಿಯುಗದ ಕರ್ಣ ಅಂಬರೀಶ್ ಅಭಿನಯಿಸಿರುವ ಕೊನೆಯ ಸಿನಿಮಾವಾಗಿದೆ. ಈ ಸಿನಿಮಾ ತೆರೆಗೆ ಬರುವ ಮುನ್ನವೇ ಅಂಬಿ ಅಸ್ತಂಗತರಾಗಿದ್ದಾರೆ.

    ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’ ದಲ್ಲಿ ಅಂಬರೀಶ್ ಅವರು ತಾತಾ ಭೀಷ್ಮಾಚಾರ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾಭಾರತದಲ್ಲಿ ಅರ್ಜುನನಿಂದ ಸೃಷ್ಟಿಯ ಬಾಣಗಳ ಶಯ್ಯೆಯಲ್ಲಿ ಭೀಷ್ಮ ಪಾತ್ರದಲ್ಲಿ ಅಭಿನಯಿಸಿರುವ ಅಂಬರೀಶ್, ಆಡುವ ಕಡೆಯ ಮಾತಿನ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸೋಮವಾರ ನಟ ಅಂಬರೀಶ್ ಅವರು ಕಂಠೀರವ ಸ್ಟುಡಿಯೋದಲ್ಲಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಂದು ಅವರ ಅಂತ್ಯಕ್ರಿಯೆ ನಡೆಯುವ ಸಮಯದಲ್ಲಿ ಸಿನಿಮಾ ತಂಡ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಅಂಬರೀಶ್, ಭೀಷ್ಮನ ಪಾತ್ರಧಾರಿಯಾಗಿ ಮರಣಶಯ್ಯೆಯಲ್ಲಿ ಮಲಗಿರುವ ವಿಡಿಯೋವನ್ನು ಲೀಕ್ ಮಾಡಿದ್ದಾರೆ.

    ಮಹಾಭಾರತದಲ್ಲಿ ಭೀಷ್ಮ ಸತ್ಯವತಿಯಿಂದ ಇಚ್ಛಾಮರಣ ಹೊಂದುವ ವರವನ್ನು ಪಡೆದುಕೊಂಡಿದ್ದನು. ಅದರಂತೆಯೇ ಮಹಾಭಾರತ ಯುದ್ಧ ಮುಗಿದ ಬಳಿಕ ತನ್ನ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಮಾಡಿರುತ್ತಾನೆ. ಯುದ್ಧದ ನಂತರ ತನ್ನ ಇಚ್ಛೆಯಂತೆ ಮರಣ ಹೊಂದುತ್ತಾನೆ. ಇದೇ ಸನ್ನಿವೇಶ ‘ಕುರುಕ್ಷೇತ್ರ’ ಸಿನಿಮಾದಲ್ಲೂ ಇದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಸಿನಿಮಾ ‘ಕುರುಕ್ಷೇತ್ರ’ದಲ್ಲಿ ಅಂಬರೀಶ್ ‘ಭೀಷ್ಮ’ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಳೆದ ವರ್ಷ ‘ಕುರುಕ್ಷೇತ್ರ’ ಸಿನಿಮಾದ ಅಂಬರೀಶ್ ಭಾಗದ ಶೂಟಿಂಗ್ ಮುಗಿದಿತ್ತು. ಅಂಬರೀಶ್ ‘ಭೀಷ್ಮ’ನ ಪಾತ್ರಕ್ಕೆ ಡಬ್ಬಿಂಗ್ ಕೂಡ ಮುಗಿಸಿದ್ದರು. ಆದರೆ ಸಿನಿಮಾ ಬಿಡುಗಡೆಯಾಗುವ ಮೊದಲೇ ಅಂಬಿ ವಿಧಿವಶರಾಗಿದ್ದಾರೆ.

    https://www.youtube.com/watch?v=Jaf-jLabtZI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv