Tag: Bhindi Chutney

  • ರುಚಿಕರ ಬೆಂಡೆಕಾಯಿ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ

    ರುಚಿಕರ ಬೆಂಡೆಕಾಯಿ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ

    ಲವರಿಗೆ ಬೆಂಡೆಕಾಯಿ ಪಲ್ಯ ಇಷ್ಟ. ಆದರೆ ಅದರ ಜಿಗುಟು ಅಂಶ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ನಾವಿಂದು ಬೆಂಡೆಕಾಯಿ ಚಟ್ನಿ (Lady Finger Chutney) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಬೆಂಡೆಕಾಯಿಯಲ್ಲಿ ಜಿಗುಟು ಅಂಶವಿರುವಾಗ ಚಟ್ನಿ ಮಾಡೋದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ, ಈ ರೆಸಿಪಿ ಒಮ್ಮೆ ಓದಿ ನೋಡಿ. ಬೆಂಡೆಕಾಯಿಯ ಜಿಗುಟು ಅಂಶ ಹೋಗಿಸಿ, ಚಟ್ನಿ ಮಾಡುವುದು ಹೇಗೆ ಎಂದು ಇಲ್ಲಿಂದ ತಿಳಿದುಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಮಸಾಲೆ ಪುಡಿ ತಯಾರಿಸಲು:
    ಎಣ್ಣೆ – 2 ಟೀಸ್ಪೂನ್
    ಉದ್ದಿನಬೇಳೆ – ಅರ್ಧ ಟೀಸ್ಪೂನ್
    ಕಡಲೆಬೇಳೆ – ಅರ್ಧ ಟೀಸ್ಪೂನ್
    ಕೊತ್ತಂಬರಿ ಬೀಜ – 1 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಮೆಂತ್ಯ – ಕಾಲು ಟೀಸ್ಪೂನ್
    ಒಣ ಕೆಂಪು ಮೆಣಸಿನಕಾಯಿ – 5
    ಬೆಂಡೆಕಾಯಿ ಹುರಿಯಲು:
    ಎಣ್ಣೆ – 2 ಟೀಸ್ಪೂನ್
    ಪುಡಿಮಾಡಿದ ಬೆಳ್ಳುಳ್ಳಿ – 5 ಎಸಳು
    ಕತ್ತರಿಸಿದ ಬೆಂಡೆಕಾಯಿ – 2 ಕಪ್
    ಹೆಚ್ಚಿದ ಟೊಮೆಟೊ – 1
    ಹುಣಿಸೆಹಣ್ಣು – ಸಣ್ಣ ತುಂಡು
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಒಗ್ಗರಣೆಗೆ:
    ಎಣ್ಣೆ – 2 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಉದ್ದಿನಬೇಳೆ – ಅರ್ಧ ಟೀಸ್ಪೂನ್
    ಮುರಿದ ಒಣ ಕೆಂಪು ಮೆಣಸಿನಕಾಯಿ – 2
    ಕರಿಬೇವಿನ ಎಲೆ – ಕೆಲವು
    ಹಿಂಗ್ – ಚಿಟಿಕೆ ಇದನ್ನೂ ಓದಿ: ಫಟಾಫಟ್ ಅಂತ ಮಾಡಿ ನೆಲ್ಲಿಕಾಯಿ ಉಪ್ಪಿನಕಾಯಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, ಉದ್ದಿನಬೇಳೆ, ಕಡಲೆಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ ಮತ್ತು ಒಣ ಕೆಂಪು ಮೆಣಸಿನಕಾಯಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ.
    * ಬಳಿಕ ಪದಾರ್ಥಗಳನ್ನು ಸಂಪೂರ್ಣವಾಗಿ ತಣ್ಣಗಾಗಿಸಿ, ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.
    * ಈಗ ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
    * ಹೆಚ್ಚಿದ ಬೆಂಡೆಕಾಯಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ.
    * ಬೆಂಡೆಕಾಯಿಯ ಜಿಗುಟು ಹೋಗಿ, ಕುರುಕಲಾಗುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.
    * ಈಗ ಟೊಮೆಟೊ, ಹುಣಸೆಹಣ್ಣು, ಅರಿಶಿನವನ್ನು ಸೇರಿಸಿ, ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ.
    * ಈಗ ಹುರಿದ ಬೆಂಡೆಕಾಯಿ ಮಿಶ್ರಣವನ್ನು ಸಂಪೂರ್ಣ ತಣ್ಣಗಾಗಿಸಿ, ಮಿಕ್ಸರ್ ಜಾರ್‌ಗೆ ಹಾಕಿ, ಉಪ್ಪು ಸೇರಿಸಿ, ಒರಟಾಗಿ ರುಬ್ಬಿಕೊಳ್ಳಿ.
    * ಈಗ ಬಾಣಲೆಯಲ್ಲಿ ಮತ್ತೆ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಒಣ ಕೆಂಪು ಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆ ಮತ್ತು ಚಿಟಿಕೆ ಹಿಂಗ್ ಹಾಕಿ, ಒಗ್ಗರಣೆ ಸಿಡಿಯಲು ಬಿಡಿ.
    * ಈಗ ಒಗ್ಗರಣೆಗೆ ತಯಾರಿಸಿದ ಚಟ್ನಿಯನ್ನು ಸೇರಿಸಿ, ಚೆನ್ನಾಗಿ ಬೇಯಿಸಿ.
    * ಇದೀಗ ಬೆಂಡೆಕಾಯಿ ಚಟ್ನಿ ತಯಾರಾಗಿದ್ದು, ಬಿಸಿ ಅನ್ನ, ಇಡ್ಲಿ, ದೋಸೆಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬಾಳೆ ಹೂವಿನ ಪಲ್ಯ – ತುಂಬಾ ರುಚಿಕರ

    Live Tv
    [brid partner=56869869 player=32851 video=960834 autoplay=true]