– ಈ ವಯಸ್ಸಿನಲ್ಲಿ ಕಲೆ ಗುರುತಿಸಿ ಪುರಸ್ಕಾರ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದ
ಹುಬ್ಬಳ್ಳಿ: ಸಿನಿಮಾ ಭರಾಟೆಯಲ್ಲಿ ತೊಗಲು ಬೊಂಬೆ ಕಲೆಯು ನಶಿಸಿ ಹೋಗುತ್ತಿದೆ. ಆದರೆ ಈ ಕಲೆ ಉಳಿಯಬೇಕು ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತೆ ಭೀಮವ್ವ (Bhimavva) ಹೇಳಿದರು.
ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಜನಾಂಗಕ್ಕೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಈ ತೊಗಲು ಗೊಂಬೆ (Togalu Gombe) ಕಲೆಯನ್ನು ಕಲಿಸುತ್ತೇನೆ. ಈ ವಯಸ್ಸಿನಲ್ಲಿ ಕಲೆ ಗುರುತಿಸಿ ಪುರಸ್ಕಾರ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದಗಳು. ನನಗೆ ಬಹಳಷ್ಟು ಸಂತೋಷವಾಗಿದೆ. ದೇಶ, ವಿದೇಶದಲ್ಲಿ ಕಲೆ ಪ್ರದರ್ಶನ ಮಾಡಿದ್ದೇನೆ. ಇನ್ನೂ ಮುಂದೆ ಕಲೆ ಉಳಿಸುವ ಕಾರ್ಯ ಮಾಡುವೆ ಎಂದರು. ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್ ಕಿತ್ತಾಟ
ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ (Padma Shri award) ಪಡೆದಿರುವ ಕೊಪ್ಪಳ ಜಿಲ್ಲೆಯ ಭೀಮವ್ವ ಅವರು ದೆಹಲಿಯಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದರು. ಬಳಿಕ ಹುಬ್ಬಳ್ಳಿಯಿಂದ ಕುಟುಂಬಸ್ಥರ ಜೊತೆಗೆ ಸ್ವಗ್ರಾಮಕ್ಕೆ ತೆರಳಿದರು.
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತೊಗಲು ಗೊಂಬೆ ಕಲಾವಿದೆ ಭೀಮವ್ವ ಶಿಳ್ಳೆಕ್ಯಾತರ್ ಅವರಿಗೆ ಪದ್ಮಶ್ರೀ (PadmaShri) ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಲ್ಯದಲ್ಲಿ ಅಪ್ಪ, ಮದುವೆಯ ನಂತರ ಪತಿ ಹಾಗೂ ಮಕ್ಕಳು, ಮೊಮ್ಮಕ್ಕಳೊಂದಿಗೆ ಕಲಿತ ತೊಗಲು ಗೊಂಬೆಯಾಟವನ್ನು 103 ವರ್ಷವಾದರೂ ತನ್ನ ಜೀವನಕ್ಕೆ ಆಧಾರವಾಗಿಸಿಕೊಂಡು, ಅದನ್ನೇ ಉಸಿರಾಗಿಸಿಕೊಂಡಿರುವ ಕೊಪ್ಪಳ (Koppal) ತಾಲೂಕಿನ ಮೋರನಾಳ ಗ್ರಾಮದ ಭೀಮವ್ವ ಶಿಳ್ಳೆಕ್ಯಾತರ್ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
103 ವರ್ಷವಾದರೂ, ಕಂಠ ಮಾಸಿಲ್ಲ, ಸಂಭಾಷಣೆ ಹಾಗೂ ಹಾಡುಗಳನ್ನು ಮರೆತಿಲ್ಲ. ಹೀಗೆ ಸರಾಗವಾಗಿ ಹಾಡುತ್ತಿರುವ ಪದ್ಮಶ್ರೀ ಪುರಸ್ಕೃತೆ ಭೀಮವ್ವ ಅಜ್ಜಿ, ತೊಗಲು ಗೊಂಬೆಯಾಟದ ಕಲೆಯನ್ನು ನಶಿಸಿ ಹೋಗದಂತೆ ಕಾಪಾಡಿಕೊಂಡು ಬಂದಿದ್ದಾರೆ.
President Droupadi Murmu presents Padma Shri in the field of Art to Smt. Bhimavva Doddabalappa Shilliekyatara. She is an internationally acclaimed puppet artist of Moranahalli village, Koppal district. She belongs to a nomadic tribe. She has performed leather puppetry for seven… pic.twitter.com/vZerlPlnh0
ಕಳೆದ 82 ವರ್ಷಗಳಿಂದ ತೊಗಲು ಗೊಂಬೆಯಾಟದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಕೇಂದ್ರ ಸರ್ಕಾರದ ಮೂರನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದೆ. ತಂದೆ, ಅಜ್ಜ, ಮುತ್ತಜ್ಜನ ಕಾಲದಿಂದ ಬಂದಿರುವ ತೊಗಲು ಗೊಂಬೆಯಾಟದ ಕಲೆ ಇವರಿಗೆ ರಕ್ತಗತವಾಗಿ ಬಂದಿದೆ. ಮದುವೆಯಾದ ನಂತರ ಕಲೆಯನ್ನು ಮುಂದುವರೆಸಿಕೊಂಡು, ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ಕರಗತ ಮಾಡಿಸಿದ್ದಾರೆ. ತೊಗಲು ಗೊಂಬೆಯಾಟದಿಂದ ಮಗ ಕೇಶಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಇದನ್ನೂ ಓದಿ: ಹಿಂದೂ ಧರ್ಮ, ದೇಶ ವಿರೋಧಿ ಪೋಸ್ಟ್ ಹಾಕಿದ್ದ ಮಂಗಳೂರು ಯುವತಿ ಕೆಲಸದಿಂದಲೇ ವಜಾ
ಭಾರತದಲ್ಲಿ ಮಾತ್ರವಲ್ಲದೆ, ಅಮೆರಿಕ, ಜಪಾನ್, ಸ್ವಿಡ್ಜರ್‌ಲ್ಯಾಂಡ್, ಜರ್ಮನಿ, ಇಟಲಿ, ಫ್ರಾನ್ಸ್, ಸೌದಿ ಅರೇಬಿಯಾ, ಐರ್ಲೆಂಡ್, ಪ್ಯಾರಿಸ್, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಭೀಮವ್ವ ಅವರು ತೊಗಲು ಗೊಂಬೆಯಾಟವನ್ನು ಪ್ರದರ್ಶಿಸಿದ್ದಾರೆ.
ನೂರಾರು ವರ್ಷಗಳಿಂದ ಇವರ ಅಜ್ಜ ಮುತ್ತಜ್ಜನ ಕಾಲದ ತೊಗಲುಗೊಂಬೆಗಳನ್ನು, ತೊಗಲು ಗೊಂಬೆಯಾಟ ಪ್ರದರ್ಶನಕ್ಕೆ ಬಳಸುತ್ತಾ ಬಂದಿದ್ದಾರೆ. ಅವುಗಳನ್ನು ಬದಲಾಯಿಸಿಲ್ಲ, ಅವುಗಳ ಬಣ್ಣ ಮಾಸಿಹೋಗಿದೆ. ಒಂದಿಷ್ಟು ಹರಿದುಹೋಗಿವೆ. ಹೊಸದಾಗಿ ಖರೀದಿಸಲು ಇವರ ಬಳಿ ಹಣದ ಕೊರತೆ ಇದೆ. ಖರೀದಿಸಲು ಹಾಗೂ ಅವುಗಳನ್ನು ಸಿದ್ಧಪಡಿಸಲು ಲಕ್ಷಾಂತರ ರೂಪಾಯಿ ಬೇಕಾಗಿದೆ. ಇನ್ನೂ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಕೊಪ್ಪಳದ ಗವಿಸಿದ್ದಪ್ಪಜ್ಜನ ಕಥೆಗಳನ್ನು ತೊಗಲು ಗೊಂಬೆಯಾಟದ ಮೂಲಕ ಪ್ರದರ್ಶಿಸಲು ಭೀಮವ್ವ ಅಜ್ಜಿಯ ಮಕ್ಕಳು, ಮೊಮ್ಮಕ್ಕಳು ಯೋಚಿಸಿದ್ದಾರೆ. ಆದರೆ ಇದಕ್ಕೆ ಬೇಕಾದ ತೊಗಲು ಗೊಂಬೆಗಳನ್ನು ಪಕ್ಕದ ಆಂಧ್ರದ ಅನಂತಪುರನಿಂದ ತರಬೇಕಾಗಿದೆ. ಹೀಗಾಗಿ ಸ್ವತಃ ಭೀಮವ್ವ ಅಜ್ಜಿ ಸರ್ಕಾರ ನಮಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಇದರಿಂದ ತೊಗಲು ಗೊಂಬೆಯಾಟಕ್ಕೆ ಹೊಸ ಮೆರಗನ್ನು ತರುತ್ತೇವೆ ಎಂದಿದ್ದಾರೆ.ಇದನ್ನೂ ಓದಿ: ನಕಲಿ ನಾಗಸಾಧುವಿನಿಂದ ಕಾರು ಚಾಲಕನಿಗೆ ಮಂಕುಬೂದಿ – ರುದ್ರಾಕ್ಷಿ ಕೊಟ್ಟು ಉಂಗುರ ಕಸಿದು ಎಸ್ಕೇಪ್!