Tag: Bhimashankar Patil

  • ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನೇ ಇಡುತ್ತೇವೆ: ಭೀಮಾಶಂಕರ ಪಾಟೀಲ್ ಸವಾಲು

    ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನೇ ಇಡುತ್ತೇವೆ: ಭೀಮಾಶಂಕರ ಪಾಟೀಲ್ ಸವಾಲು

     – ‘ತಾಕತ್ತಿದ್ದರೆ ತಡೆದು ನೋಡಿ’

    ದಾವಣಗೆರೆ: ಬೆಂಗಳೂರಿನ ಯಲಹಂಕ ಫ್ಲೈಓವರಿಗೆ ಸಾವರ್ಕರ್ ನಾಮಕರಣ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಕತ್ತಿದ್ದರೆ ತಡೆದು ನೋಡಿ ಎಂದು ದಾವಣಗೆರೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ವಿರೋಧಿ ಪಕ್ಷಗಳಿಗೆ ಸವಾಲೆಸೆದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಹೆಸರು ಕೇಳಿದರೆ ಏಕೆ ಚೇಳು ಕಡಿದಂತೆ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಈಗಿನ ಕಾಂಗ್ರೆಸ್ ನಾಯಕರಿಗೆ ಸಾವರ್ಕರ್ ಹೆಸರು ಕೇಳಿದರೆ ಇಷ್ಟೋಂದು ಹೆದರಿಕೆ ಆಗುತ್ತೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ನಾಯಕರು ಇನ್ನೆಷ್ಟು ಹೆದರಿರಬೇಡ ಎಂದರು.

    ಸಾರ್ವಕರ್ ರಂತಹ ದೇಶ ಭಕ್ತ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ನಾಡು-ನುಡಿ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಸಾವರ್ಕರ್ ನಾಮಕರಣದ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬೇಡ. ಬೆಂಗಳೂರು ಮಹಾನಗರ ಪಾಲಿಕೆಯಿಂದ ಅಧಿಕೃತವಾಗಿ ಪರವಾನಗಿ ಪಡೆದು ಫ್ಲೈಓವರಿಗೆ ಸಾವರ್ಕರ್ ಹೆಸರು ನಾಮಕರಣ ಮಾಡುತ್ತೇವೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟ ನಿಲುವನ್ನು ಸ್ಪಷ್ಟಪಡಿಸಿದರು.

    ಬೆಳಗಾವಿ, ಕಲಬುರಗಿ, ವಿಜಯಪುರ ಜಿಲ್ಲೆಗಳ ಹೆಸರು ಬಿಜೆಪಿ ಅಧಿಕಾರ ಅವಧಿಯಲ್ಲಿ ಮರುನಾಮಕರಣಗೊಂಡಿದ್ದು, ಇಂದಿರಾ ಕ್ಯಾಂಟೀನ್‍ಗೆ ಅಕ್ಕಮಹಾದೇವಿ ಹೆಸರು ಸೂಚಿಸಿದ್ದೇವು. ಆದರೆ ಸಿದ್ದರಾಮಯ್ಯ ಅರು ಹಠಕ್ಕೆ ಬಿದ್ದವರಂತೆ ಇಂದಿರಾ ಅವರ ಹೆಸರು ನಾಮಕರಣ ಮಾಡಿದರು. ಆದರೂ ನಾವು ವಿರೋಧ ಮಾಡಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ವಿನಾಕಾರಣ ವಿವಾದ ಎಬ್ಬಿಸುತ್ತಿದ್ದಾರೆ. ಸ್ವಾತಂತ್ರ ವೀರನಿಗೆ ವಿರೋಧ ಪಕ್ಷಗಳು ಅಪಮಾನ ಮಾಡುತ್ತಿದ್ದಾರೆ ಎಂದರು.

    ಸಾರ್ವಕರ್ ಮುಂದಾಳತ್ವ ಹೋರಾಟ ಕಾಂಗ್ರೆಸ್ ಪೂರ್ವಜರಿಗೆ ಇರಲಿಲ್ಲ. ಸಾವರ್ಕರ್ ಹೆಸರು ಇಟ್ಟ ತಕ್ಷಣ ಸಿದ್ದರಾಮಯ್ಯ ನವರಿಗೆ ಚೇಳು ಕಡಿದಂತಾಗುತ್ತದೆ. ಹೋರಾಟಗಾರರನ್ನು ಅಪಮಾನ ಮಾಡುವ ನೀಚ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ. ಸಾವರ್ಕರ್ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ. ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ ತಾಖತ್ ಇದ್ದವರು ಎದುರು ಬರಬಹುದು ಎಂದು ಸವಾಲು ಎಸೆದರು.

  • ದೊರೆಸ್ವಾಮಿ ಸಾವರ್ಕರ್ ರೋಮಕ್ಕೂ ಸಮನಿಲ್ಲ: ಭೀಮಾಶಂಕರ ಪಾಟೀಲ್

    ದೊರೆಸ್ವಾಮಿ ಸಾವರ್ಕರ್ ರೋಮಕ್ಕೂ ಸಮನಿಲ್ಲ: ಭೀಮಾಶಂಕರ ಪಾಟೀಲ್

    ಬೆಂಗಳೂರು: ಶಾಸಕ ಬಸನಗೌಡ ಯತ್ನಾಳ್ ಪರ, ವಿರುದ್ಧ ಚರ್ಚೆಗಳು ನಡೆಯುತ್ತಿರುವಾಗಲೇ ದೊರೆಸ್ವಾಮಿ ಅವರು ವೀರ ಸಾವರ್ಕರ್ ಬಗ್ಗೆ ಆಡಿದ ಮಾತು ಕಿಚ್ಚು ಎಬ್ಬಿಸಿದೆ. ದೊರೆಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ದೊರೆಸ್ವಾಮಿ ಸಾವರ್ಕರ್ ರೋಮಕ್ಕೂ ಸಮನಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಾವರ್ಕರ್ ಅಂದ್ರೆ ಸ್ಪೂರ್ತಿ, ಕಿಚ್ಚು, ಕ್ರಾಂತಿ. ಧೀಮಂತ ಸಾವರ್ಕರ್ ಬಗ್ಗ ದೊರೆಸ್ವಾಮಿ ಹೇಳಿಕೆ ಖಂಡನೀಯ. ದೊರೆಸ್ವಾಮಿ ಸ್ವಯಂ ಘೋಷಿತ ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ್ಯ ಹೋರಾಟಗಾರ ಅನ್ನೋ ಟ್ರಂಪ್ ಕಾರ್ಡ್ ಬಳಸಿಕೊಂಡು ದೇಶದ್ರೋಹಿಗಳ ಜೊತೆ ಕುಳಿತು ಪ್ರತಿಭಟನೆ ಮಾಡೋದು ಹೋರಾಟ ಅಂದುಕೊಂಡಿದ್ದಾರೆ. ದೊರೆಸ್ವಾಮಿಗೆ ಯಾವ ನೈತಿಕತೆ ಕೂಡ ಇಲ್ಲ ಅಂತ ಆಕ್ರೋಶ ಹೊರ ಹಾಕಿದರು.

    ದೊರೆಸ್ವಾಮಿ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೆ ಎಂದು ಹೇಳುತ್ತಾರೆ. ಅವರಾಗಿಯೇ 101 ವರ್ಷವಾಗಿದೆ ಅಂತ ಹೇಳಿಕೊಳ್ತಾರೆ. ಗಾಂಧೀಜಿಯವರು ಹೋರಾಟ ನಡೆಸಿದಾಗ ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಉತ್ತರ ಕರ್ನಾಟಕದ ಮನೆ ಮನೆಗಳಲ್ಲೂ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಅಂತ ತಿಳಿಸಿದರು.

    ಇದೇ ವೇಳೆ ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಅವರು ಅಡ್ರೆಸ್ ಇಲ್ಲದಿರುವ ಪಕ್ಷಗಳು ದೊರೆಸ್ವಾಮಿ ಜೊತೆ ನಿಲ್ಲುವುದು ಸೂಕ್ತವಲ್ಲ. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕೆ ಯಾವುದಾದರೂ ದಾಖಲೆ ಇದ್ಯಾ? ಕನಿಷ್ಟ ಬ್ರಿಟಷರ ಬಳಿಯಾದರೂ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕೆ ದಾಖಲೆ ಇದೆಯಾ ಅಂತ ಪ್ರಶ್ನೆ ಮಾಡಿದ್ರು. ಅಡ್ರೆಸ್ ಇಲ್ಲದಿರುವ ನಿರಾಶ್ರಿತರು ದೊರೆಸ್ವಾಮಿಗೆ ಬೆಂಬಲ ನೀಡುವಾಗ ಯೋಚನೆ ಮಾಡಲಿ ಅಂತ ಕಾಂಗ್ರೆಸ್ಸಿಗೆ ಕುಟುಕಿದರು. ಸಾವರ್ಕರ್ ತಂಟೆಗೆ ಬಂದರೆ ಯಾವ ದೊಣ್ಣೆ ನಾಯಕನಾದರೂ ನಾವು ಸುಮ್ಮನಿರುವುದಿಲ್ಲ. ಕೂಡಲೇ ದೊರೆಸ್ವಾಮಿ ಸಾವರ್ಕರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

  • ರಾಯಣ್ಣನನ್ನು ನಡುರಸ್ತೆಯಲ್ಲಿ ನಿಲ್ಲಿಸಿದವರು ಬಿಎಸ್‍ವೈ ಬಗ್ಗೆ ಮಾತಾಡಬೇಕಿಲ್ಲ – ಈಶ್ವರಪ್ಪ ವಿರುದ್ಧ ಭೀಮಾಶಂಕರ್ ಪಾಟೀಲ್ ಕಿಡಿ

    ರಾಯಣ್ಣನನ್ನು ನಡುರಸ್ತೆಯಲ್ಲಿ ನಿಲ್ಲಿಸಿದವರು ಬಿಎಸ್‍ವೈ ಬಗ್ಗೆ ಮಾತಾಡಬೇಕಿಲ್ಲ – ಈಶ್ವರಪ್ಪ ವಿರುದ್ಧ ಭೀಮಾಶಂಕರ್ ಪಾಟೀಲ್ ಕಿಡಿ

    ದಾವಣಗೆರೆ: ಸಂಗೊಳ್ಳಿರಾಯಣ್ಣರನ್ನು ನಡುರಸ್ತೆಯಲ್ಲಿ ನಿಲ್ಲಿಸಿದವರು ನೀವು, ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಹಾದಿ ಬೀದಿಯಲ್ಲಿ ವಿಚಾರಿಸಬೇಕಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಿಡಿಕಾರಿದ್ದಾರೆ.

    ನಗರದ ರೇಣುಕಾ ಮಂದಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪಕ್ಷದೊಳಗಿನ ಕುತಂತ್ರಿಗಳು ಗ್ರಾಮಪಂಚಾಯಿತಿ ಗೆಲ್ಲಲು ಆಗದವರು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಾರೆ ಅಷ್ಟೇ. ಇನ್ನು ಮುಂದೆ ಬಿಎಸ್‍ವೈ ಬಗ್ಗೆ ಮಾತನಾಡಿದರೆ ನಡು ರಸ್ತೆಯಲ್ಲಿ ನಿಲ್ಲಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನು ಓದಿ: ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ- ಭೀಮಾಶಂಕರ್ ಪಾಟೀಲ್‍ಗೆ ಕಟೀಲ್ ಆಪ್ತನಿಂದ ಎಚ್ಚರಿಕೆ

    ಕೇಂದ್ರದ ನಾಯಕರಿಗೆ ಬದ್ಧತೆ ಇದ್ದರೆ ಯಡಿಯೂರಪ್ಪ ನೇತೃತ್ವದಲ್ಲಿ ಕೆಲಸ ಮಾಡಲಿ. ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ಪೈಸೆ ಕೊಟ್ಟಿಲ್ಲ. ಯಾವ ಉದ್ದೇಶಕ್ಕೆ ಕೇಂದ್ರ ಈ ರೀತಿ ಮಾಡುತ್ತಿದೆ ಗೊತ್ತಿಲ್ಲ. ನಾವು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರು ಭಿಕ್ಷೆ ಬೇಡಿಯಾದರೂ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ. ಸ್ವಾಭಿಮಾನಕ್ಕೆ ಧಕ್ಕೆ ತಂದರೆ ನಾವು ಬಿಡುವುದಿಲ್ಲ. ಯಡಿಯೂರಪ್ಪನವರ ವಿಚಾರಕ್ಕೆ ಬಂದರೆ ಸುಟ್ಟು ಭಸ್ಮರಾಗುತ್ತೀರಿ. ಕೇಂದ್ರದವರೆಗೆ ಮುಟ್ಟಿ ನೋಡಿಕೊಳ್ಳಬೇಕು ಈ ರೀತಿ ಮಾಡುತ್ತೇವೆ ಆಕ್ರೋಶ ವ್ಯಕ್ತಪಡಿಸಿದರು.

    ಸಿಎಂ ಅವರ ಆಡಳಿತ ವಿಚಾರದಲ್ಲಿ ಮೂಗು ತೂರಿಸಿ ಅವರಿಗೆ ಭಂಗ ತರುತ್ತಿದ್ದಾರೆ. ಧರ್ಮವನ್ನು ಕಾಪಾಡಿದವರು ಬಿಎಸ್‍ವೈ, ಅವರಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಲುಂಗಿ ಕಟ್ಟಲು ಬರದವರು ರಾಜಕೀಯ ಮಾಡುತ್ತಿದ್ದಾರೆ. ಯಡಿಯೂರಪ್ಪನವರಿಗೆ ತೊಂದರೆಕೊಟ್ಟು ತೊಡೆ ತಟ್ಟಿದರೆ ನಾವು ಕೂಡ ತೊಡೆ ತಟ್ಟಲು ಸಿದ್ಧ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಬೇಳೆ ಬೇಯಿಸಿಕೊಳ್ಳಲು ಯಡಿಯೂರಪ್ಪನವರ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

  • ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ- ಭೀಮಾಶಂಕರ್ ಪಾಟೀಲ್‍ಗೆ ಕಟೀಲ್ ಆಪ್ತನಿಂದ ಎಚ್ಚರಿಕೆ

    ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ- ಭೀಮಾಶಂಕರ್ ಪಾಟೀಲ್‍ಗೆ ಕಟೀಲ್ ಆಪ್ತನಿಂದ ಎಚ್ಚರಿಕೆ

    ಬೆಂಗಳೂರು: ಆಡಳಿತ ಪಕ್ಷ ಬಿಜೆಪಿಯ ಆಂತರಿಕ ಕಲಹಗಳು ಸ್ಫೋಟಗೊಂಡು ಬಹಿರಂಗವಾಗುತ್ತಿವೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಬಲಿಗರ ಮಧ್ಯೆ ಪತ್ರ ಸಮರ ಮತ್ತಷ್ಟು ಜೋರಾಗಿದೆ.

    ಸಿಎಂ ಯಡಿಯೂರಪ್ಪ ಅವರ ಪರ ವಹಿಸಿ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಪತ್ರ ಬರೆದಿದ್ದರು. ಇದೇ ವಿಚಾರವಾಗಿ ಬಿಎಸ್‍ವೈ ಆಪ್ತ ಭೀಮಾಶಂಕರ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಆಪ್ತ, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಮಾಡಾಳು ಕೊಟ್ರೇಶ್ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ಪತ್ರದ ಮೂಲಕ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಇದನ್ನು ಓದಿ: ಯಡಿಯೂರಪ್ಪಗೆ ಚೆಕ್ ಮೇಲೆ ಚೆಕ್ ಕೊಡ್ತಿದ್ದಾರೆ ಕಟೀಲ್

    ನಿನ್ನ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರನ್ನು ಪ್ರಶ್ನೆ ಮಾಡುವ ಅಧಿಕಾರ ನಿನಗೆ ಕೊಟ್ಟಿದ್ದು ಯಾರು? ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ. ಹಿಂದೊಮ್ಮೆ ಜನರೇ ನಿನಗೆ ಗೂಸಾ ಕೊಟ್ಟಿದ್ದರು. ಪಕ್ಷದಲ್ಲಿ ಯಾರೂ ಯಾರನ್ನೂ ಕಡೆಗಣಿಸಲ್ಲ. ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಕ್ಕೆ ಸಾಕ್ಷ್ಯ ಇದ್ದರೆ ಬಿಡುಗಡೆ ಮಾಡು. ನೀನು ಬರೆದ ಪತ್ರ ವಾಪಸ್ ಪಡೆದುಕೊಳ್ಳಬೇಕು. ಜೊತೆಗೆ ರಾಜ್ಯಾಧ್ಯಕ್ಷರ ಕ್ಷಮೆ ಕೇಳು. ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರು ನಿನ್ನ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಡಾಳು ಕೊಟ್ರೇಶ್, ಭೀಮಾಶಂಕರ್ ಪಾಟೀಲ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ಭೀಮಾಶಂಕರ್ ಪತ್ರದಲ್ಲಿ ಏನಿತ್ತು?
    ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ಅಧಿಕಾರಕ್ಕೆ ತಂದ ನಾಯಕ ಯಡಿಯೂರಪ್ಪ ಅವರು, ಅವರನ್ನು ಪಕ್ಷದ ಸಂಘಟನೆ, ಆಡಳಿತಾತ್ಮಕ ವಿಚಾರ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಕಡೆಗಣಿಸುತ್ತಿರುವ ವಿಚಾರವನ್ನು ಬಲವಾಗಿ ಖಂಡಿಸುತ್ತೇನೆ.

    ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ಜನ ನಾಯಕರಾಗಿದ್ದು, ರೈತ, ಕಾರ್ಮಿಕ, ಬಡವರ, ಸರ್ವ ಸಮುದಾಯದ ಜನರು ಬಿಎಸ್‍ವೈ ಅವರ ಸಾಮಾಜಿಕ ಕಳಕಳಿ ಮೆಚ್ಚಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಕ್ಷಕ್ಕೆ ಮತ ಹಾಕಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮುಖ್ಯಮಂತ್ರಿಯಾದ ಸಮಯದಿಂದ ಮತ್ತೆ ಅವರ ವಿರುದ್ಧ ಪಿತೂರಿಗಳು ನಡೆಯುತ್ತಿದೆ. ಪಕ್ಷ ಅಧಿಕಾರಕ್ಕೆ ಬರಲು ಬಿಎಸ್‍ವೈ ಬೇಕು. ಅಧಿಕಾರ ಸಿಕ್ಕ ನಂತರ ಬೇಡ ಎನ್ನುವ ಮನಸ್ಥಿತಿ ನಮ್ಮ ಪಕ್ಷದ ಬುದ್ಧಿವಂತರ ರೀತಿ ಮುಖವಾಡ ಧರಿಸಿರುವವರು ಮಾಡುತ್ತಿದ್ದಾರೆ. ಇಂತಹ ಕನಿಷ್ಠ ಯೋಚನೆ ಪಕ್ಷಕ್ಕೆ ನಿಜಕ್ಕೂ ಅಪಾಯ. ಇದರಿಂದ ನೀವೂ ಸಹ ಹೊರ ಬರಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಭೀಮಾಶಂಕರ್ ಅವರು, ಪಕ್ಷ ಹಾಗೂ ಬಿಎಸ್‍ವೈ ಅವರ ವಿರುದ್ಧ ನಿರಂತರವಾಗಿ ಪಿತೂರಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಿಎಸ್‍ವೈ ಅವರನ್ನು ನೋಡಿ ಪಕ್ಷಕ್ಕೆ ಮತ ನೀಡಲಾಗಿದೆ. ಇದು ಪಕ್ಷದಲ್ಲಿ ಪಿತೂರಿ ನಡೆಸುತ್ತಿರುವವರಿಗೂ ತಿಳಿದಿದೆ. ಇದರ ಬಗ್ಗೆ ಹೊಸ ರಾಜ್ಯಾಧ್ಯಕ್ಷರಿಗೆ ತಿಳಿಸಲು ಪತ್ರ ಬರೆಯಲಾಗಿದೆ. ಕೆಲವರಿಗೆ ಇದನ್ನು ನೇರವಾಗಿ ಹೇಳಿದರೆ ಮಾತ್ರ ತಲುಪುತ್ತದೆ. ಆದ್ದರಿಂದಲೇ ಬಹಿರಂಗ ಪತ್ರ ಬರೆದಿದ್ದೇವೆ. ಇದನ್ನು ಎಚ್ಚರಿಕೆ ಅಥವಾ ಸಲಹೆಯಾಗಿ ತಿಳಿದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದರು.