Tag: bhima river

  • ಸ್ನೇಹಿತರೊಂದಿಗೆ ಈಜಲು ತೆರಳಿದ್ದ SSLC ವಿದ್ಯಾರ್ಥಿ ನೀರುಪಾಲು

    ಸ್ನೇಹಿತರೊಂದಿಗೆ ಈಜಲು ತೆರಳಿದ್ದ SSLC ವಿದ್ಯಾರ್ಥಿ ನೀರುಪಾಲು

    ಕಲಬುರಗಿ: ಸ್ನೇಹಿತರೊಂದಿಗೆ ಈಜಲು ತೆರಳಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ (Jevargi) ತಾಲೂಕಿನ ಹರವಾಳ ಬಳಿ ಭೀಮಾ ನದಿಯಲ್ಲಿ (Bhima River) ನಡೆದಿದೆ.ಇದನ್ನೂ ಓದಿ: ಮುಸ್ಲಿಮರಿಗೆ ಮೀಸಲಾತಿ ಮೋದಿ ಕೊಟ್ರೆ ಸರಿ, ನಾವು ಕೊಟ್ರೆ ತಪ್ಪಾ? – ಯತೀಂದ್ರ

    ಆದರ್ಶ ವಿದ್ಯಾಲಯದಲ್ಲಿ ಓದುತ್ತಿದ್ದ ಪ್ರಜ್ವಲ್ ಹರವಾಳ (16) ಮೃತ ದುರ್ದೈವಿ. ಎರಡು ದಿನಗಳ ರಜೆಯ ಕಾರಣ ಪ್ರಜ್ವಲ್ ಸ್ವಗ್ರಾಮ ಹರವಾಳಕ್ಕೆ ಬಂದಿದ್ದ. ಈ ವೇಳೆ ಸ್ನೇಹಿತರೊಂದಿಗೆ ಸೇರಿ ಭೀಮಾ ನದಿಗೆ ಈಜಲು ತೆರಳಿದ್ದ. ನೀರಿನ ಆಳ ಲೆಕ್ಕಿಸದೇ ನದಿಗೆ ಇಳಿದ ಪರಿಣಾಮ ನೀರು ಪಾಲಾಗಿದ್ದಾನೆ.

    ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ, ತೀವ್ರ ಶೋಧ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಸದ್ಯ ನೆಲೋಗಿ (Nelogi) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಬಿಜೆಪಿಯಲ್ಲೇ ಹನಿಟ್ರ್ಯಾಪ್‌ಗಳು ನಡೆದಿವೆ – ಯತೀಂದ್ರ ಸಿದ್ದರಾಮಯ್ಯ ಬಾಂಬ್‌

     

  • ಘತ್ತರಗಾ, ಗಾಣಗಾಪುರ ಸೇತುವೆ ಮೇಲೆ ನೀರು – 2 ದಿನ ರಸ್ತೆ ಸಂಚಾರಕ್ಕೆ ನಿರ್ಬಂಧ

    ಘತ್ತರಗಾ, ಗಾಣಗಾಪುರ ಸೇತುವೆ ಮೇಲೆ ನೀರು – 2 ದಿನ ರಸ್ತೆ ಸಂಚಾರಕ್ಕೆ ನಿರ್ಬಂಧ

    ಕಲಬುರಗಿ: ಭೀಮಾ ನದಿಯಲ್ಲಿ (Bhima River) ನೀರಿನ ಪ್ರಮಾಣ ಹೆಚ್ಚಾಗಿದ್ದು ಘತ್ತರಗಾ ಮತ್ತು ಗಾಣಗಾಪೂರ (Fattartaga and Gangapur) ಸೇತುವೆ ಮೇಲೆ ನೀರು ಹರಿಯುತ್ತಿದೆ.

    ಮಹಾರಾಷ್ಟ್ರದ ಉಜ್ಜನಿ ಮತ್ತು ವೀರ್ ಜಲಾಶಯದಿಂದ ಸೋಮವಾರ ಭೀಮಾ ನದಿಗೆ ಹರಿಬಿಡಲಾದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್‌ ನೀರು ಬುಧವಾರ ತಡರಾತ್ರಿ ಅಫಜಲ್ಪುರ ತಾಲೂಕಿನ ಸೊನ್ನ ಬ್ರಿಡ್ಜ್ ಮೂಲಕ ಜಿಲ್ಲೆಯ ಭೀಮಾ ನದಿಗೆ ಪ್ರವೇಶಿಸಿದೆ. ಇದರಿಂದಾಗಿ ಅಫಜಲ್ಪುರ ತಾಲೂಕಿನ ಘತ್ತರಗಾ ಹಾಗೂ ಗಾಣಗಾಪುರ ಸೇತುವೆ ಮೇಲೂ ನೀರು ಹರಿಯುತ್ತಿದ್ದು ಗುರುವಾರ ಮತ್ತು ಶುಕ್ರವಾರ ಸೇತುವೆ ಮೇಲಿನ ಸಂಚಾರವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.

    ಅಫಜಲ್ಪುರ ತಾಲೂಕಿನ ಘತ್ತರಗಾ-ಜೇರಟಗಿ ಮತ್ತು ಗಾಣಗಾಪುರ-ಇಟಗಾ ಸಂಪರ್ಕ ಕಲ್ಪಿಸುವ ಈ ಎರಡು ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿದ್ದು, ತಡರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದಂತೆ ಮುಂಜಾಗ್ರತೆಯ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರ ಬಂದ್ ಮಾಡಿದ್ದಾರೆ. ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.

    ಭೀಮಾ ನದಿಗೆ ತಡರಾತ್ರಿ ಅಪಾರ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ರಕ್ಷಣಾ ಕಾರ್ಯಚರಣೆ ಮತ್ತು ಕಾಳಜಿ ಕೇಂದ್ರ ತೆರೆಯಲು ಮೇಲುಸ್ತುವಾರಿಗೆ ನೇಮಿಸಿದ ಅಫಜಲ್ಪುರ, ಕಲಬುರಗಿ ಹಾಗೂ ಜೇವರ್ಗಿ ತಂಡದ ನೋಡಲ್ ಅಧಿಕಾರಿಗಳು ಎಚ್ಚರದಿಂದಿರಲು ಮತ್ತು ಕೂಡಲೇ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

     

    ಅಲ್ಲದೆ ತಾಲೂಕಿನ ತಹಶೀಲ್ದಾರರು, ತಾಲೂಕು ಪಂಚಾಯತ್ ಇ.ಓ ಹಾಗೂ ಪೊಲೀಸ್ ಇಲಾಖೆಯು ನೋಡಲ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಸಾಧಿಸಿ ಪ್ರವಾಹದಿಂದ ಯಾವುದೇ ಜನ, ಜಾನುವಾರು ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಅವರು ತಿಳಿಸಿದ್ದಾರೆ.

  • ಮಹಾರಾಷ್ಟ್ರದಿಂದ 1.20 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ – ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ

    ಮಹಾರಾಷ್ಟ್ರದಿಂದ 1.20 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ – ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ

    ವಿಜಯಪುರ: ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆ (Heavy Rain) ಮುಂದುವರೆದಿದ್ದು ಉಜನಿ ಹಾಗೂ ವೀರ್ ಜಲಾಶಯಗಳಿಂದ ಭೀಮಾನದಿಗೆ (Bhima River) ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.

    ಮಹಾರಾಷ್ಟ್ರದಿಂದ ಒಟ್ಟು 1,20,000 ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಸಿದ್ದರಿಂದ ವಿಜಯಪುರ (Vijayapura) ಜಿಲ್ಲೆಯಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಚಡಚಣ ತಾಲೂಕಿನಲ್ಲಿ ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ ಉಮರಾಣಿ- ಲವಗಿ ಬ್ಯಾರೇಜ್ ಮುಳುಗಡೆಯಾಗಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ – ಹಿಂದೂ ದೇವಸ್ಥಾನಗಳ ಮೇಲೆ ಪುಂಡರ ದಾಳಿ

     

    ಭಾರೀ ನೀರು ಹರಿಯುತ್ತಿರುವುದರಿಂದ ಜಿಲ್ಲೆಯ ಭೀಮಾ ನದಿ ಪಾತ್ರದ ಜನರಲ್ಲಿ ಆತಂಕ ಶುರುವಾಗಿದೆ. ಚಡಚಣ, ಇಂಡಿ, ಆಲಮೇಲ, ಸಿಂದಗಿ ತಾಲೂಕುಗಳಲ್ಲಿ ಪ್ರವಾಹದ ಭೀತಿ ಶುರುವಾಗಿದೆ.

  • ಮುಂದುವರೆದ ಮಳೆಯಾರ್ಭಟ – ಭೀಮಾ, ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ

    ಮುಂದುವರೆದ ಮಳೆಯಾರ್ಭಟ – ಭೀಮಾ, ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ

    -ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ

    ಯಾದಗಿರಿ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ (Rain) ಕೃಷ್ಣಾ (Krishna River) ಹಾಗೂ ಭೀಮಾ ನದಿ  (Bhima River) ಮೈದುಂಬಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪ್ರವಾಹದ  (Flood) ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದ್ದು, ನದಿಯ ಪಾತ್ರದ ಕಡೆ ತೆರಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಅಲ್ಲದೇ ಯಾದಗಿರಿ, ಗುರುಮಠಕಲ್, ಶಹಾಪುರ ಹಾಗೂ ವಡಗೇರಾ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

    ಗುರುಸಣಿಗಿ ಬ್ರಿಜ್ ಕಂ ಬ್ಯಾರೇಜ್ ನಿಂದ ಭೀಮಾ ನದಿಗೆ 50,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ನದಿ ಪಾತ್ರದ ವೀರಾಂಜನೇಯ ಹಾಗೂ ಕಂಗಳೇಶ್ವರ ದೇವಸ್ಥಾನಗಳು ಸಂಪೂರ್ಣ ಮುಳುಗಡೆಯಾಗಿವೆ. ಇನ್ನೊಂದೆಡೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಕೃಷ್ಣಾ ನದಿಗೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಡೆಡ್ ಸ್ಟೋರೇಜ್ ದಾಟಿ ಹೋಗಿದ್ದ ನಾರಾಯಣಪುರದ ಬಸವಸಾಗರ ಜಲಾಶಯ ಚುರುಕುಗೊಂಡ ಮಳೆಯಿಂದಾಗಿ ಈಗ 50% ರಷ್ಟು ಭರ್ತಿಯಾಗಿದೆ. ಇದರಿಂದಾಗಿ ಜಲಾಶಯದಿಂದ 20,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಎರಡೂ ನದಿ ತೀರಕ್ಕೆ ಜನರು ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಒಂದು ವಾರದಲ್ಲಿ KRS ಡ್ಯಾಂ 17 ಅಡಿ ಭರ್ತಿ – ನೀರಿನ ಮಟ್ಟ 108 ಅಡಿಗೆ ಹೆಚ್ಚಳ

    ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಸುರಿದ ಮಳೆಯ ಆರ್ಭಟಕ್ಕೆ ಜಿಲ್ಲೆಯಲ್ಲಿ 160 ಮನೆಗಳು ಕುಸಿದು ಬಿದ್ದಿವೆ. ಸುರಪುರ, ಶಹಾಪುರ, ವಡಗೇರಾ, ಗುರುಮಠಕಲ್ ಸೇರಿದಂತೆ ಮೊದಲಾದ ಭಾಗಗಳಲ್ಲಿ ಮನೆಗಳು ಬಿದ್ದಿವೆ. ಹಲವರು ಇದರಿಂದ ತೊಂದರೆಗೆ ಸಿಲುಕಿದ್ದು ಸರ್ಕಾರ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಕೆಲವು ಶಾಲೆಗಳು ಶಿಥಿಲಗೊಂಡು ಮಳೆ ಬಂದರೆ ಸೋರುತ್ತಿವೆ. ಅಲ್ಲದೇ ಕುಸಿಯುವ ಭೀತಿಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ – ಒಂದು ವಾರದಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭೀಮಾ ನದಿಯಲ್ಲಿ ನೀರು ಕುಡಿಯಲು ಹೋದ ಇಬ್ಬರು ಬಾಲಕರ ಸಾವು

    ಭೀಮಾ ನದಿಯಲ್ಲಿ ನೀರು ಕುಡಿಯಲು ಹೋದ ಇಬ್ಬರು ಬಾಲಕರ ಸಾವು

    ಕಲಬುರಗಿ: ನದಿಯ ನೀರು (River Water) ಕುಡಿಯಲು ಹೋಗಿದ್ದ ಬಾಲಕರಿಬ್ಬರು ದಾರುಣ ಸಾವಿಗೀಡಾದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋನಾಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.

    ರಾಮು ತಂದೆ ಅನಿಲಕುಮಾರ ದೊಡ್ಡಮನಿ (12) ಹಾಗೂ ದೇವು ತಂದೆ ಜೆಟ್ಟೆಪ್ಪ ಹೊಸಮನಿ (17) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇದನ್ನೂ ಓದಿ: ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚನೆ – ಗ್ಯಾಂಗ್ ಅರೆಸ್ಟ್

    ಬಾಲಕರು ನೀರು ಕುಡಿಯುವ ಸಂದರ್ಭದಲ್ಲಿ ರಾಮು ಪಾಚಿ ಮೇಲೆ ಕಾಲಿಟ್ಟು ನದಿಗೆ ಜಾರಿಗೆ ಬಿದ್ದಿದ್ದಾನೆ. ರಾಮುನನ್ನು ರಕ್ಷಿಸಲು ಹೋದ ದೇವು ಸಹ ನದಿಯಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ. ಇಬ್ಬರು ಜೇವರ್ಗಿ ತಾಲೂಕಿನ ಕೋನಾಹಿಪ್ಪರಗಿ ಗ್ರಾಮದ ನಿವಾಸಿಗಳಾಗಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಬ್ಲಾಸ್ಟ್ ಕೇಸ್‌ – ರೊಬೊಟ್‌ ಬಳಸಿ‌ ಭಾರತದಲ್ಲಿ ದಾಳಿಗೆ ಮುಂದಾಗಿದ್ದ ಐಸಿಸ್

    ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಜೇವರ್ಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಹುಡುಕಾಟ ನಡೆಸಿ ಶವವನ್ನು ಹೊರತೆಗೆದಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ (Jewargi Police Station) ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಗ್ರಾಮದಲ್ಲೇ ಶಾಸಕ ಅಜಯ್ ಸಿಂಗ್‌ಗೆ ಗ್ರಾಮಸ್ಥರಿಂದ ಕ್ಲಾಸ್

    ಸ್ವಗ್ರಾಮದಲ್ಲೇ ಶಾಸಕ ಅಜಯ್ ಸಿಂಗ್‌ಗೆ ಗ್ರಾಮಸ್ಥರಿಂದ ಕ್ಲಾಸ್

    ಕಲಬುರಗಿ: ಸ್ವ ಗ್ರಾಮದಲ್ಲೇ ಶಾಸಕ ಅಜಯ್ ಸಿಂಗ್ (Ajay Singh) ಅವರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಕಲಬುರಗಿಯ (Kalaburagi) ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಧರಮ್ ಸಿಂಗ್ (N.Dharam Singh) ಪುತ್ರ ಶಾಸಕ ಅಜಯ್ ಸಿಂಗ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಲೋಗಿ (Nelogi) ಗ್ರಾಮದ ದಡದಲ್ಲಿರುವ ಭೀಮಾ ನದಿಯಲ್ಲಿ (Bhima River) ಅಕ್ರಮ ಮರಳು ದಂಧೆ (Sand trade) ನಡೆಯುತ್ತಿದ್ದು, ಮರಳುಗಾರಿಕೆ ತಡೆಯುವಂತೆ ರಸ್ತೆಗೆ ಕಲ್ಲು ಅಡ್ಡ ಹಾಕಿ, ಶಾಸಕರ ಕಾರು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುತ್ರ ಸಿಕ್ಕಿಬಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ

    ಅಕ್ರಮ ಮರಳುಗಾರಿಕೆ ದಂಧೆಯಿಂದ ರೋಸಿ ಹೋದ ಜನ, ನಮಗೆ ಮನೆಕಟ್ಟಲು ಮರಳು ಕೊಡುತ್ತಿಲ್ಲ. ಬೇರೆಯವರು ಬಂದು ಇಲ್ಲಿ ಮರಳು ದಂಧೆ ಮಾಡುತ್ತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಅಕ್ರಮ ಮರಳುಗಾರಿಕೆ ತಡೆಯಲು ಎಸ್‌ಪಿಗೆ ತಿಳಿಸಲಾಗಿದೆ ಎಂದು ಶಾಸಕ ಅಜಯ್ ಸಿಂಗ್ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ 50 ಟಿಕೆಟ್ ಹೊಸಬರಿಗೆ ಫಿಕ್ಸ್?

  • ಭೀಮಾ ನದಿಯಲ್ಲಿ ಕೊಚ್ಚಿ ಹೋದ ಭಾಗಮ್ಮ ದೇವಿ ಭಕ್ತ

    ಭೀಮಾ ನದಿಯಲ್ಲಿ ಕೊಚ್ಚಿ ಹೋದ ಭಾಗಮ್ಮ ದೇವಿ ಭಕ್ತ

    ಕಲಬುರಗಿ: ಘತ್ತರಗಿ ಭಾಗಮ್ಮ ದೇವಿಯ (Bhagamma Devi) ಭಕ್ತರೊಬ್ಬರು (Devotee) ಭೀಮಾ ನದಿಯಲ್ಲಿ (Bhima River) ಕೊಚ್ಚಿ ಹೋದ ಘಟನೆ ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಘತ್ತರಗಿ ಗ್ರಾಮದಲ್ಲಿ ನಡೆದಿದೆ.

    ಬೆಂಗಳೂರಿನ (Bengaluru) ಜೆಸಿ ನಗರ (JCNagar) ನಿವಾಸಿ ಸುರೇಶ್ (40) ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ. ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಘತ್ತರಗಿ ಭಾಗಮ್ಮ ದೇವಿ ದರ್ಶನಕ್ಕೆ ಸುರೇಶ್ ಕುಟುಂಬ ಸಮೇತ ಬೆಂಗಳೂರಿನಿಂದ ಬಂದಿದ್ದರು. ಇದನ್ನೂ ಓದಿ: ಪ್ರೇಯಸಿಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ – ಪ್ರಶ್ನೆ ಮಾಡಿದ್ದಕ್ಕೆ ವೈದ್ಯನ ಕೊಲೆ

    ಸುರೇಶ್ ನದಿಯಲ್ಲಿ ಕೊಚ್ಚಿ ಹೋಗಿದ್ದರಿಂದ ಹೆಂಡತಿ, ಮಕ್ಕಳು ನದಿ ತಟದಲ್ಲಿ ಕಣ್ಣೀರಿಟ್ಟಿದ್ದಾರೆ. ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುರೇಶ್‍ಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲವ್, ಸೆಕ್ಸ್, ದೋಖಾ – ಮದುವೆ ನೆಪದಲ್ಲಿ ಮಹಿಳೆಯರ ನಗ್ನ ಫೋಟೋ ಇಟ್ಟುಕೊಂಡು ಬ್ಲಾಕ್‍ಮೇಲ್

    Live Tv
    [brid partner=56869869 player=32851 video=960834 autoplay=true]

  • ಈಜಲು ಹೋಗಿದ್ದ ಯುವಕ ನೀರುಪಾಲು

    ಈಜಲು ಹೋಗಿದ್ದ ಯುವಕ ನೀರುಪಾಲು

    ವಿಜಯಪುರ: ಭೀಮಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಸಿದ್ದರಾಮ ಸುತಾರ(18) ಮೃತ ದುರ್ದೈವಿ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗುಬ್ಬೇವಾಡ ಗ್ರಾಮದ ಭೀಮಾ ನದಿಯಲ್ಲಿ ಸಿದ್ದರಾಮ ಈಜಲು ಹೋಗಿದ್ದು, ನೀರುಪಾಲಾಗಿದ್ದರು. ತಕ್ಷಣ ಸ್ಥಳೀಯರು ಆತನನ್ನು ಕಾಪಾಡಲು ಯತ್ನಿಸಿದ್ದು, ಫಲಕಾರಿಯಾಗದೆ ಸಿದ್ದರಾಮ ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಕ್ರಮವಹಿಸಬೇಕು: ಕಾರಜೋಳ 

    ಸ್ಥಳದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂಡಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:  ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಗಣಿಗಾರಿಕೆ ಪ್ರದೇಶದಲ್ಲಿ ಸ್ಪೋಟಕ್ಕೆ ಜೀವಗಳು ಬಲಿ

    ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭೀಮಾ ನದಿ ಪ್ರವಾಹ ಆತಂಕ – ನದಿ ತೀರಕ್ಕೆ ತೆರಳದಂತೆ ಡಿಸಿ ರಾಗಪ್ರಿಯಾ ಸೂಚನೆ

    ಭೀಮಾ ನದಿ ಪ್ರವಾಹ ಆತಂಕ – ನದಿ ತೀರಕ್ಕೆ ತೆರಳದಂತೆ ಡಿಸಿ ರಾಗಪ್ರಿಯಾ ಸೂಚನೆ

    ಯಾದಗಿರಿ: ಮುಂದಿನ ವಾರದಿಂದ ಅಕ್ಟೋಬರ್ ಎರಡನೇ ವಾರದ ವರೆಗೆ ಭೀಮಾ ನದಿಯ ನೀರಿನ ಪ್ರಮಾಣ ಜಾಸ್ತಿಯಾಗುವ ಸಂಭವಿದ್ದು, ಮತ್ತೆ ಭೀಮಾ ನದಿ ಪ್ರವಾಹ ಆತಂಕ ಶುರುವಾಗಿದೆ. ನದಿ ತೀರಕ್ಕೆ ಸಾರ್ವಜನಿಕರು ತೆರಳದಂತೆ ಮತ್ತು ಮೀನುಗಾರಿಕೆ ಮಾಡದಂತೆ ಯಾದಗಿರಿ ಡಿಸಿ ರಾಗಪ್ರಿಯಾ ಸೂಚನೆ ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಯ ಮುಖಾಂತರ ಜಿಲ್ಲೆಯ ಜನತೆ ಡಿಸಿ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಭೀಮಾ ನದಿಗೆ ಸದ್ಯ ಒಂದು ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ, 3 ರಿಂದ 4 ಲಕ್ಷ ನೀರು ಬಂದರೆ ತೊಂದರೆಯಾಗುತ್ತದೆ. ಈಗಾಗಲೇ ಸಂಬಂಧಪಟ್ಟ ತಹಶೀಲ್ದಾರರ ಸಭೆ ನಡೆಸಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಭೀಮಾ ನದಿ ತೀರದ ಜನರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕೊಚ್ಚಿಹೋದ ಸೇತುವೆಗೆ ಡಿಸಿ, ಎಸ್ಪಿ ಭೇಟಿ, ಶೀಘ್ರ ದುರಸ್ತಿಗೆ ಆದೇಶ

    ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ, ನಾಯ್ಕಲ್ ಸೇರಿದಂತೆ ಹಲವಾರು ಗ್ರಾಮದ ಮನೆಗಳಿಗೆ ಹಾನಿಯಾಗಿದೆ, ಯಡ್ಡಳ್ಳಿ ಸೇತುವೆ ಕೊಚ್ಚಿ ಹೋಗಿದೆ, ಈ ಬಗ್ಗೆ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಕಾಳಜೀ ಕೇಂದ್ರಗಳನ್ನು ಓಪನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

  • ಈಜಲು ಹೋಗಿದ್ದ 4 ಮಕ್ಕಳು ನೀರುಪಾಲು

    ಈಜಲು ಹೋಗಿದ್ದ 4 ಮಕ್ಕಳು ನೀರುಪಾಲು

    ವಿಜಯಪುರ: ಈಜಲು ಹೋಗಿದ್ದ ನಾಲ್ಕು ಮಕ್ಕಳು ಭೀಮಾ ನದಿಯಲ್ಲಿ ಕೊಚ್ಚಿಹೋದ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ದಕ್ಷಿಣ ಸೋಲಾಪುರ ತಾಲೂಕಿನ ಲವಗಿ ಗ್ರಾಮದ ಬಳಿ ನಡೆದಿದೆ.

    ನಿನ್ನೆ ಸಂಜೆ ಘಟನೆ ನಡೆದಿದ್ದು, ನದಿಯಲ್ಲಿ ಕೊಚ್ಚಿ ಹೋದ ಮಕ್ಕಳ ಪತ್ತೆಗೆ ಶೋಧ ಕಾರ್ಯ ನಡೆದಿದೆ. ಲವಗಿ ಗ್ರಾಮದ ಶಿವಾನಂದ ಪಾರ್ಶೆಟ್ಟಿ ಅವರ ಮಕ್ಕಳಾದ ಆರತಿ(13), ವಿಠ್ಠಲ(10) ಹಾಗೂ ಶಿವಾಜಿ ತಾನವಡೆ ಅವರ ಮಕ್ಕಳಾದ ಸಮೀಕ್ಷಾ(14), ಅರ್ಪಿತಾ(13) ನೀರುಪಾಲಾದ ಮಕ್ಕಳು. ಇದನ್ನೂ ಓದಿ: ಮಳೆ ಬರದಿದ್ರೂ ಭಟ್ಕಳದಲ್ಲಿ ಮುಳಗಡೆಯಾಯ್ತು ಇಡೀ ಗ್ರಾಮ

    ಸದ್ಯ ಆರತಿ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಹುಡುಕಾಟ ಮುಂದುವರೆದಿದೆ. ಕುಟುಂಬಸ್ಥರು ಮನೆ ಕೆಲಸದಲ್ಲಿ ತೊಡಗಿದ್ದಾಗ ಮಕ್ಕಳು ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದ ಮಂದ್ರೂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.