Tag: Bhima

  • ದುನಿಯಾ ವಿಜಯ್ ಅರೆಸ್ಟ್: ಬೀದಿಯಲ್ಲಿ ‘ಭೀಮ’ನ ಬಂಧನ

    ದುನಿಯಾ ವಿಜಯ್ ಅರೆಸ್ಟ್: ಬೀದಿಯಲ್ಲಿ ‘ಭೀಮ’ನ ಬಂಧನ

    ನ್ನಡದ ಹೆಸರಾಂತ ನಟ ದುನಿಯಾ ವಿಜಯ್ ಅರೆಸ್ಟ್ (Arrest) ಆಗಿದ್ದಾರೆ. ಬೆಂಗಳೂರಿನ ವಿನೋವಾ ನಗರದಲ್ಲಿ ನಡುರಸ್ತೆಯಲ್ಲೇ ಪೊಲೀಸರು ದುನಿಯಾ ವಿಜಯ್ ಕೈಗೆ ಬೇಡಿ ತೋಡಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ವಿನೋವಾ ರಸ್ತೆಯಲ್ಲಿ ವಿಜಯ್ ಕಂಡು ಬಹುತೇಕರು ಗಾಬರಿಗೊಂಡಿದ್ದರು. ವಿಜಯ್ ಮೈ ತುಂಬಾ ರಕ್ತ ಬೇರೆ ಹರಿದಿದ್ದರಿಂದ ಏನಾಯಿತು ಎಂದೆಲ್ಲ ವಿಚಾರಿಸಿದ್ದರು. ಆಮೇಲೆ ಅದು ಶೂಟಿಂಗ್ ಸನ್ನಿವೇಶ ಎಂದು ಗೊತ್ತಾಗಿ ನಿಟ್ಟುಸಿರಿಟ್ಟರು.

    ಹೌದು, ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಭೀಮ (Bhima) ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯವನ್ನು ವಿಜಯ್ ಶೂಟ್ ಮಾಡುತ್ತಿದ್ದಾರೆ. ನಡು ರಸ್ತೆಯಲ್ಲಿ ವಿಜಯ್ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗುವ ದೃಶ್ಯ ಅದಾಗಿದೆ. ಈ ಮೂಲಕ ಭೀಮ ಸಿನಿಮಾದ ಕ್ಲೈಮ್ಯಾಕ್ಸ್ ಏನಾಗಿರಲಿದೆ ಎನ್ನುವ ಸಣ್ಣದೊಂದು ಸುಳಿವೂ ಸಿಕ್ಕಿದೆ.

    ವಿಜಯ್ ಮಗಳ ಎಂಟ್ರಿ

    ದುನಿಯಾ ವಿಜಯ್ (Duniya Vijay) ಈಗಾಗಲೇ ನಟ, ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಭೀಮನಾಗಿ ಅಬ್ಬರಿಸಲು ಸಜ್ಜಾಗಿರುವ ಬೆನ್ನಲ್ಲೇ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಸಿನಿ ದುನಿಯಾಗೆ ಇಬ್ಬರು ಪುತ್ರಿಯರನ್ನು ವಿಜಯ್ ಪರಿಚಯಿಸುತ್ತಿದ್ದಾರೆ.

    ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸೋದು ಖಚಿತ. ಇದನ್ನ ಸ್ವತಃ ವಿಜಯ್ ಅನೌನ್ಸ್ ಮಾಡಿದ್ದಾರೆ. ಆದರೆ ನೀವು ಗೆಸ್ ಮಾಡಿದಂತೆ ಕಿರಿ ಮಗಳು ಮೋನಿಷಾ (Monisha) ಅಲ್ಲ. ಬದಲಿಗೆ ಹಿರಿಯ ಮಗಳು ಮೋನಿಕಾ (Monica) ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಮೋನಿಕಾ ವಿಜಯ್ ಅವರ ಎಜುಕೇಷನ್ ಕಂಪ್ಲೀಟ್ ಆಗಿದೆ. ರಿಸೆಂಟ್ ಆಗಿ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್ ಸಹ ಮುಗಿಸಿ ಬಂದಿದ್ದಾರೆ. ಮುಂಬೈನ ಅನುಪಮ್ ಖೇರ್ (Anupam Kher) ನಟನಾ ಶಾಲೆಯಲ್ಲಿ ತರಬೇತಿ ಪಡೆದು ಬಂದಿರುವ ಮೋನಿಕಾ, ಸದ್ಯ ಬೆಂಗಳೂರಿನಲ್ಲಿ ಕಲಾತಂಡವೊಂದರ ಜೊತೆ ಕೆಲಸ ಮಾಡ್ತಿದ್ದಾರೆ.

    ಹಾಗಾಗಿ ಹಿರಿ ಮಗಳು ಮೋನಿಕಾ ಸಿನಿಮಾ ಎಂಟ್ರಿಗೆ ತಯಾರಾಗಿದ್ದು, ಶೀಘ್ರದಲ್ಲೇ ಸಿನಿಮಾ ಅನೌನ್ಸ್ ಆಗುವ ನಿರೀಕ್ಷೆಯಿದೆ. ಆದ್ರೆ ಕಿರಿ ಮಗಳು ಮೋನಿಷಾ ಇನ್ನೂ ಎಜುಕೇಷನ್ ಮಾಡ್ತಿದ್ದು, ಈಗ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗ್ತಿದ್ದಾರಂತೆ. ಜೊತೆಗೆ ಮೋನಿಷಾ ಸಹ ಆ್ಯಕ್ಟಿಂಗ್ ಟ್ರೈನಿಂಗ್ ಪಡೆದುಕೊಳ್ಳಲಿದ್ದು, ಅದು ಮುಗಿದು ವಾಪಸ್ ಆದ ಬಳಿಕವಷ್ಟೇ ಮೋನಿಷಾ ಬಣ್ಣದ ಜಗತ್ತಿಗೆ ಬರಲಿದ್ದಾರೆ.

     

    ವಿಜಯ್ ಅವರ ಇಬ್ಬರು ಮಕ್ಕಳಿಗೂ ಈಗಾಗಲೇ ತುಂಬಾ ಆಫರ್ಸ್ ಬಂದಿದೆ. ಆದರೆ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಇಷ್ಟು ದಿನ ನಟನೆಗೆ ಬರೋದನ್ನ ಮುಂದೂಡಲಾಗಿತ್ತು. ಆದ್ರೀಗ ಹಿರಿ ಮಗಳು ಸಿನಿಮಾ ಮಾಡೋ ಉದ್ದೇಶದಿಂದಲೇ ಸಕಲ ತಯಾರಿ ಮುಗಿಸಿದ್ದಾಳೆ. ಹೀಗಾಗಿ ಮೋನಿಕಾ ಲಾಂಚ್ ಮಾಡೋಕೆ ಇದು ಸೂಕ್ತ ಸಮಯ ಎಂದು ವಿಜಯ್ ನಿರ್ಧರಿಸಿದ್ದಾರಂತೆ. ಸದ್ಯ ಮೋನಿಕಾ ಚೊಚ್ಚಲ ಸಿನಿಮಾಗೆ ಅದ್ಭುತ ಸ್ಕ್ರಿಪ್ಟ್ ಕೂಡ ರೆಡಿಯಿದ್ದು, ಒಂದೊಳ್ಳೆ ಸಮಯ ನೋಡ್ಕೊಂಡು ಸಿನಿಮಾ ಶುರು ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಇನ್ನು ಹಿರಿಯ ಮಗಳ ಮೊದಲ ಸಿನಿಮಾಗೆ ಸ್ವತಃ ದುನಿಯಾ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.

  • ‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ

    ‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ

    ತೆಲುಗಿನ (Telugu) ಮ್ಯಾಚೋ ಸ್ಟಾರ್ ಖ್ಯಾತಿಯ ಗೋಪಿಚಂದ್ ಹಾಗೂ ಕನ್ನಡ ಎ.ಹರ್ಷ (A. Harsha) ಕಾಂಬೋದ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಗೋಪಿಚಂದ್ (Gopichand) ಜನ್ಮದಿನದ ಪ್ರಯುಕ್ತ ಫಸ್ಟ್ (First Look) ಹಾಗೂ ಟೈಟಲ್ ನ್ನು ಚಿತ್ರತಂಡ ರಿವೀಲ್ ಮಾಡಿದೆ.

    ಭೀಮನಾಗಿ (Bhima) ಮ್ಯಾಚೋ ಸ್ಟಾರ್ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನಿರ್ದೇಶಿಸಿರುವ ಎ.ಹರ್ಷಗೆ ಇದು ಮೊದಲ ಸಿನಿಮಾ. ಭೀಮ ಕೌಟುಂಬಿಕ ಹಾಗೂ ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿದೆ.‌  ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ನಡಿ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

    ಅಂದಹಾಗೇ ಭೀಮ ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ. ಸ್ವಾಮಿ.ಜೆ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ರವಿವರ್ಮಾ ಸ್ಟಂಟ್ ಚಿತ್ರಕ್ಕಿದೆ. ಹೈದರಾಬಾದ್ ನ ಅಲ್ಯೂಮಿನಿಯಂ ಫ್ಯಾಕ್ಟರ್ ಯಲ್ಲಿ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾಬಳಗ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಮಾಡಿದೆ ಭೀಮ ಚಿತ್ರತಂಡ.

  • ಭೀಮನ ಡೈಲಾಗ್ ಹೇಳಿ ಮಿಂಚಿದ ಶಾಸಕ ಶಿವಲಿಂಗೇಗೌಡ

    ಭೀಮನ ಡೈಲಾಗ್ ಹೇಳಿ ಮಿಂಚಿದ ಶಾಸಕ ಶಿವಲಿಂಗೇಗೌಡ

    ಹಾಸನ: ಸಾಮಾಜಿಕ ನಾಟಕದ ಉದ್ಘಾಟನೆಗೆ ತೆರಳಿದ್ದ ಹಾಸನ ಜಿಲ್ಲೆಯ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಡು ಹೇಳುವ ಮೂಲಕ ಜನರನ್ನು ರಂಜಿಸಿದ್ದಾರೆ.

    ಹಾಸನ ಜಿಲ್ಲೆಯ ದಿಬ್ಬೂರಿನಲ್ಲಿ ನಡೆದ ಸಾಮಾಜಿಕ ನಾಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವಲಿಂಗೇಗೌಡ ತೆರಳಿದ್ದರು. ಈ ವೇಳೆ ಭಾಷಣ ಮಾಡಿದ ನಂತರ ಪ್ರೇಕ್ಷಕರು, ಶಾಸಕರ ಬಳಿ ಕುರುಕ್ಷೇತ್ರ ನಾಟಕದ ಭೀಮನ ಪಾತ್ರ ಅಭಿನಯಿಸಿ ತೋರಿಸುವಂತೆ ಪಟ್ಟು ಹಿಡಿದರು.

    ಆಗ ಶಾಸಕ ಶಿವಲಿಂಗೇಗೌಡ ಅಲ್ಲಿ ನೆರೆದಿದ್ದ ಜನರ ಮುಂದೆ ಭೀಮನ ಪಾತ್ರವನ್ನು ಡೈಲಾಗ್ ಹೇಳುವುದರ ಜೊತೆಗೆ ಅಭಿನಯ ಮಾಡಿ ತೋರಿಸಿದ್ದಾರೆ.

  • ನದಿಗೆ ಬಿದ್ದ ಯುವಕ ಪ್ರವಾಹದಲ್ಲಿ 5 ಕಿ.ಮೀ ಈಜಿ ದಡ ಸೇರಿದ

    ನದಿಗೆ ಬಿದ್ದ ಯುವಕ ಪ್ರವಾಹದಲ್ಲಿ 5 ಕಿ.ಮೀ ಈಜಿ ದಡ ಸೇರಿದ

    ಯಾದಗಿರಿ: ಕೃಷ್ಣಾ ಮತ್ತು ಭೀಮಾ ನದಿಗಳ ಸಂಗಮದಲ್ಲಿ 5 ಕಿ.ಮೀ ಈಜಿ ದಡ ಸೇರುವ ಮೂಲಕ ಯುವಕನೋರ್ವ ಸಾವು ಗೆದ್ದು ಬಂದಿದ್ದಾನೆ.

    ಜಿಲ್ಲೆಯ ವಡಗೇರಾ ತಾಲೂಕಿನ ಶಿವಪೂರ ಗ್ರಾಮದ ಬಸವರಾಜ ಸಾವು ಗೆದ್ದ ಯುವಕ. ಬಸವರಾಜ ವಡಗೇರಾ ಗೋನಾಳ ಬಳಿ ಸಂಗಮ ದೇವಸ್ಥಾನದಲ್ಲಿ ದೀಪಾವಳಿ ಅಮಾವಾಸ್ಯೆ ನಿಮಿತ್ತ ನಡೆಯುವ ಪಲ್ಲಕ್ಕಿ ಮೇಳದ ದರ್ಶನಕ್ಕಾಗಿ ತೆರಳಿದ್ದನು. ನದಿಯ ಪೂಜೆಯ ವೇಳೆ ಬಸವರಾಜ ಆಯ ತಪ್ಪಿ ನದಿಗೆ ಬಿದ್ದಿದ್ದನು.

    ನದಿಯ ದಂಡೆಯ ಮೇಲೆ ನಿಂತಿದ್ದ ಭಕ್ತರು ನೋಡ ನೋಡುತ್ತಿದ್ದಂತೆಯೇ ನದಿ ನೀರಿನಲ್ಲಿ ಬಸವರಾಜ ಕೊಚ್ಚಿ ಹೋಗಿದ್ದಾನೆ. ಯುವಕನ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದರು. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ನದಿಗೆ ಇಳಿಯಲು ಜನರು ಹಿಂದೇಟು ಹಾಕಿದರು. ಸಾಗರದಂತೆ ನೀರು ಹರಿಯುತ್ತಿದ್ದರೂ ಧೃತಿಗೆಡದ ಬಸವರಾಜ ಸುಮಾರು 5 ಕಿ.ಮೀ ನದಿಯಲ್ಲಿ ಈಜುತ್ತಾ ಆಂಧ್ರಪ್ರದೇಶದ ಕೃಷ್ಣಾ ರೈಲ್ವೆ ಬ್ರಿಡ್ಜ್ ಬಳಿ ದಡ ಸೇರಿದ್ದಾನೆ.

    5 ಕಿ.ಮೀ ನೀರಿನಲ್ಲಿದ್ದರೂ ಬಸವರಾಜನಿಗೆ ಯಾವುದೇ ಗಾಯವಾಗಿಲ್ಲ ಮತ್ತು ಜೀವಕ್ಕೆ ಯಾವುದೇ ಹಾನಿಯಾಗಿಲ್ಲ. ಆತನನ್ನು ಉಪಚರಿಸಿದ ಆಂಧ್ರ ಪ್ರದೇಶದ ಪೊಲೀಸರು ಬಳಿಕ ವಡಗೇರಾ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಸವರಾಜ ಬದುಕುಳಿದ ಸುದ್ದಿ ಕೇಳಿ ಸಂಬಂಧಿಕರು, ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.

  • ಗದೆ ಹಿಡಿದು ಭೀಮನಾದ ಶಾಸಕ ಕೆ.ಎಂ.ಶಿವಲಿಂಗೇಗೌಡ

    ಗದೆ ಹಿಡಿದು ಭೀಮನಾದ ಶಾಸಕ ಕೆ.ಎಂ.ಶಿವಲಿಂಗೇಗೌಡ

    ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಗದೆ ಹಿಡಿದು ಭೀಮನ ಪಾತ್ರದ ಡೈಲಾಗ್ ಹೊಡೆದು ಆಭಿಮಾನಿಗಳನ್ನು ರಂಜಿಸಿದ್ದಾರೆ.

    ತಾಲೂಕಿನ ಬಾಗೇಶಪುರ ಎಂಬ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕದಲ್ಲಿ ಗದೆ ಹಿಡಿದು ಭೀಮನ ಪಾತ್ರದಲ್ಲಿ ಕೆ.ಎಂ.ಶಿವಲಿಂಗೇಗೌಡ ಅವರು ಘರ್ಜಿಸಿದ್ದಾರೆ.

    ಈ ಜಾತ್ರಾ ಮಹೋತ್ಸವಕ್ಕೆ ಕೆ.ಎಂ.ಶಿವಲಿಂಗೇಗೌಡ ಅವರನ್ನು ಮುಖ್ಯ ಆತಿಥಿಯಾಗಿ ಆಹ್ವಾನ ನೀಡಲಾಗಿತ್ತು. ಆ ಜಾತ್ರೆಯ ಪ್ರಯುಕ್ತ ಕುರುಕ್ಷೇತ್ರ ನಾಟಕವನ್ನು ಗ್ರಾಮಸ್ಥರು ಆಯೋಜಿಸಿದ್ದರು. ಜಾತ್ರೆಯಲ್ಲಿ ಭಾಗವಹಿಸಿದ ಶಾಸಕರು ನಂತರ ವೇದಿಕೆಯ ಮೇಲೆ ಹೋಗಿ ಗದೆ ಹಿಡಿದು ಭೀಮನ ಡೈಲಾಗ್ ಹೊಡೆದು ಜನರನ್ನು ರಂಜಿಸಿದ್ದಾರೆ. ತಮ್ಮ ನೆಚ್ಚಿನ ಶಾಸಕರು ಅಭಿನಯ ನೋಡಿದ ಊರಿನ ಗ್ರಾಮಸ್ಥರು ಮತ್ತು ಆಭಿಮಾನಿಗಳು ಶಿಳ್ಳೆ ಚಪ್ಪಾಳೆ ಹೊಡೆದರು.

  • ಚುರುಕುಗೊಂಡ ಮುಂಗಾರು ಮಳೆ-ತುಂಬಿದ ಡ್ಯಾಂ ನೋಡಿ ರೈತರ ಮೊಗದಲ್ಲಿ ಮಂದಹಾಸ-ಕೆಲವೆಡೆ ಪ್ರವಾಹ ಭೀತಿ

    ಚುರುಕುಗೊಂಡ ಮುಂಗಾರು ಮಳೆ-ತುಂಬಿದ ಡ್ಯಾಂ ನೋಡಿ ರೈತರ ಮೊಗದಲ್ಲಿ ಮಂದಹಾಸ-ಕೆಲವೆಡೆ ಪ್ರವಾಹ ಭೀತಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದೆ. ಮಳೆರಾಯನ ಆರ್ಭಟ ಜೋರಾಗಿದೆ. ಒಂದೆರೆಡು ನದಿಗಳಲ್ಲಿ ನೀರು ತುಂಬಿ ಡ್ಯಾಂಗಳು ತುಂಬಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮತ್ತೆ ಕೆಲವಡೆ ಭಾರೀ ಮಳೆ ಪ್ರವಾಹದ ಭೀತಿ ಜೊತೆ ಅವಾಂತರವನ್ನೇ ಸೃಷ್ಟಿಸಿದೆ.

    ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕೃಷ್ಣಾ ನದಿಗೆ ಸುರಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ. ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ತಮಟೆ ಬಾರಿಸಿ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

    ಕಲಬುರಗಿಯ ಜೇವರ್ಗಿ ಮತ್ತು ಅಫಜಲಪುರದಲ್ಲಿ ಭೀಮಾ ನದಿ ಆರ್ಭಟಿಸುತ್ತಿದ್ದು, ತಗ್ಗು ಪ್ರದೇಶದಲ್ಲಿನ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಜೇವರ್ಗಿ ತಾಲೂಕಿನ ನೇಲೋಗಿ ರಸ್ತೆ ಕಡಿತಗೊಂಡಿದೆ. ಕಾವೇರಿಕೊಳ್ಳದಲ್ಲಿ ಬರುವ ಕಬಿನಿ ಜಲಾಶಯ ಭರ್ತಿಯಾಗೋದಕ್ಕೆ ಕೇವಲ ನಾಲ್ಕಡಿಯಷ್ಟೇ ಬಾಕಿ. ಸದ್ಯ ನೀರಿನ ಮಟ್ಟ 2280 ಅಡಿಯಷ್ಟಿದೆ. ಡ್ಯಾಂನಿಂದ ಕಪಿಲ ನದಿಗೆ ಹೆಚ್ಚು ನೀರು ಬಿಡುಗಡೆಯಾಗೋ ಸಾಧ್ಯತೆ ಇದೆ.

    ಬರಗಾಲದ ನಾಡೇ ಅಂತಾ ಕರೆಸಿಕೊಳ್ಳುವ ಚಾಮರಾಜನಗರದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಐದು ವರ್ಷಗಳ ಬಳಿಕ ಭರ್ತಿಯಾಗಿವೆ. ಇನ್ನೂ ಎರಡು ದಿನಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

     

  • ಅನಾಥ ಭೀಮ ಆಗಲಿದ್ದಾನೆ ಅರ್ಜುನನ ಉತ್ತರಾಧಿಕಾರಿ!

    ಅನಾಥ ಭೀಮ ಆಗಲಿದ್ದಾನೆ ಅರ್ಜುನನ ಉತ್ತರಾಧಿಕಾರಿ!

    ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗಿಯಾಗಿರುವ ಕಿರಿಯ ಆನೆ ಭೀಮ, ಭವಿಷ್ಯದಲ್ಲಿ ಗಜಪಡೆಯ ಕ್ಯಾಪ್ಟನ್ ಆಗಲಿದ್ದಾನೆ. ಒಂದರ್ಥದಲ್ಲಿ ಕ್ಯಾಪ್ಟನ್ ಅರ್ಜುನನಿಗೆ ಉತ್ತರಾಧಿಕಾರಿಯಾಗಿ ಭೀಮನನ್ನು ಬೆಳೆಸಲಾಗುತ್ತಿದೆ.

    ಅಂಬಾರಿ ಆನೆಗೆ ಇರಬೇಕಾದ ಅಗಲವಾದ ಬೆನ್ನು, ಎತ್ತರ, ದಂತ, ತೂಕ ಎಲ್ಲವೂ ಭೀಮನಲ್ಲಿ ಕಾಣುತ್ತಿವೆ. 17 ವರ್ಷದ ಭೀಮ ಇನ್ನೂ ಆರೇಳು ವರ್ಷಕ್ಕೆ ಅಂಬಾರಿ ಆನೆ ಆಗಲು ಬೇಕಾದ ಎಲ್ಲಾ ಗುಣಗಳನ್ನು ಹೊಂದಲಿದ್ದಾನೆ.

    ಇಂಥಹ ಭೀಮನ ಜೀವನ ಕಥೆಯೇ ರೋಚಕವಾಗಿದೆ. 1 ವರ್ಷದ ಮರಿ ಇದ್ದಾಗಲೇ ತಾಯಿಯನ್ನ ಕಳೆದುಕೊಂಡು ತಬ್ಬಲಿಯಾಗಿದ್ದ ಭೀಮ ಸತತ 16 ವರ್ಷಗಳಿಂದ ಆನೆ ಶಿಬಿರದಲ್ಲೇ ಬೆಳೆದಿದ್ದಾನೆ. ಮತ್ತಿಗೂಡು ಆನೆ ಕ್ಯಾಂಪ್‍ನಲ್ಲಿ ಬೆಳೆದಿರುವ ಭೀಮ ಆನೆ, ಹುಲಿ ಸೆರೆ ಕಾರ್ಯಾಚರಣೆ, ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ನಿಪುಣತೆ ಸಾಧಿಸಿದ್ದಾನೆ.

     

    ಅಂಬಾರಿ ಹೊರುವ ಎಲ್ಲಾ ಲಕ್ಷಣಗಳನ್ನ ಹೊಂದಿರುವ ಭೀಮನಿಗೆ ದಸರಾದಲ್ಲಿ ಹೆಚ್ಚಿನ ಮಹತ್ವ ಸಿಕ್ಕಿದೆ. ಈ ಬಾರಿ ಉತ್ತಮ ರೀತಿಯಲ್ಲಿ ನಡವಳಿಕೆ ಇದ್ದರೆ ಮುಂದಿನ ವರ್ಷಗಳಲ್ಲಿ ಭೀಮನಿಗೆ ಆದ್ಯತೆ ಇನ್ನೂ ಹೆಚ್ಚಾಗಲಿದೆ. ಅನಾಥನಾದರೂ ಮಾವುತರು ಹಾಗೂ ಇಲಾಖೆ ಮೆಚ್ಚುಗೆಗೆ ಪಾತ್ರವಾಗಿರುವ ಭೀಮ, ಈ ಬಾರಿ ಮೆರವಣಿಗೆ ಹಾಗೂ ಸಿಡಿಮದ್ದಿನ ಶಬ್ದಕ್ಕೆ ಹೆದರದಿದ್ದರೆ ಪರೀಕ್ಷೆಯಲ್ಲಿ ಪಾಸಾಗಿ, ಮುಂದಿನ ಬಾರಿಯಿಂದ ಭಾರ ಹೊರಿಸಿ ತಾಲೀಮಿನಲ್ಲಿ ತೊಡಗಲಿದ್ದಾನೆ.

  • ಮಹಾಭಾರತದಲ್ಲಿ ಭೀಮ ಕೊಂದ ಬಕಾಸುರನಿಗೆ ಇಂದಿಗೂ ಬಂಡಿ ಅನ್ನ ಹಾಕೋ ಗ್ರಾಮವಿದು!

    ಮಹಾಭಾರತದಲ್ಲಿ ಭೀಮ ಕೊಂದ ಬಕಾಸುರನಿಗೆ ಇಂದಿಗೂ ಬಂಡಿ ಅನ್ನ ಹಾಕೋ ಗ್ರಾಮವಿದು!

    ಚಿಕ್ಕಮಗಳೂರು: ಮಹಾಭಾರತದಲ್ಲಿ ಭೀಮ ಕೊಂದ ಬಕಾಸುರ ಚಿಕ್ಕಮಗಳೂರು ತಾಲೂಕಿನ ಬೆಳವಾಡಿಯಲ್ಲಿ ಇಂದಿಗೂ ಜೀವಂತವಾಗಿದ್ದಾನೆ. ಈ ಗ್ರಾಮದ ಜನ ಬಕಾಸುರನಿಗೆಂದು ಒಂದು ಬಂಡಿ ಅನ್ನ, ಎಂಟು ಬಂಡಿ ಪಾನಕವನ್ನ ಎಡೆ ಮಾಡೋ ಸಂಪ್ರದಾಯವನ್ನ ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಚೈತ್ರ ಮಾಸದ ದಿನದಂದು ಆರಂಭವಾಗಿ ನಾಲ್ಕು ದಿನ ನಡೆಯೋ ಈ ಬಂಡಿಬಾನ ಜಾತ್ರೆಗೆ ಶೃಂಗೇರಿ ಮಠ ಧನಸಹಾಯ ಮಾಡ್ತಿದೆ. ಮಹಾಭಾರತದ ಕಾಲದಲ್ಲಿ ಏಕ ಚಕ್ರ ನಗರ ಎಂದು ಕರೆಯುತ್ತಿದ್ದ ಈ ಗ್ರಾಮ ಇಂದು ಬೆಳವಾಡಿ ಎಂದು ಕರೆಸಿಕೊಳ್ತಿದೆ.

    ಹೆಜ್ಜೆಗೊಂದು ತೆಂಗಿನಕಾಯಿ: ಬಕಾಸುರನಿಗೆ ಅನ್ನವನ್ನ ತೆಗೆದುಕೊಂಡು ಹೋಗುವಾಗ ಊರಿನ ಜನ ಹೆಜ್ಜೆಗೊಂದರಂತೆ ಬಂಡಿಯ ಚಕ್ರಕ್ಕೆ ತೆಂಗಿನ ಕಾಯಿಯನ್ನ ಒಡೆಯುತ್ತಾರೆ. ಸಾವಿರ ಮನೆಯ ಗ್ರಾಮವಾದ ಬೆಳವಾಡಿಯ ಪ್ರಮುಖ ಬೀದಿಗಳಲ್ಲಿ ಬಂಡಿ ಸಾಗುವಷ್ಟರಲ್ಲಿ ಸುಮಾರು ಏಳರಿಂದ ಎಂಟು ಸಾವಿರ ತೆಂಗಿನ ಕಾಯಿಯನ್ನ ಒಡೆದು ಭಕ್ತಿ ಸಮರ್ಪಿಸ್ತಾರೆ. ಬಕಾಸುರನಿಗೆ ಒಂದು ಗಾಡಿ ಅನ್ನವಾದ್ರೆ, ಎಂಟು ಗಾಡಿಗಳಲ್ಲಿ ಪಾನಕವನ್ನೂ ತೆಗೆದುಕೊಂಡು ಹೋಗ್ತಾರೆ. ಎಲ್ಲಾ ಜಾತಿ-ಧರ್ಮದೋರು ಇರೋ ಈ ಗ್ರಾಮದಲ್ಲಿ ಈ ಜಾತ್ರೆಯನ್ನ ಎಲ್ಲರೂ ಒಂದುಗೂಡಿ ವಿಜೃಂಭಣೆಯಿಂದ ಆಚರಿಸ್ತಾರೆ. ನಾಲ್ಕು ದಿನಗಳ ಕಾಲ ಯಾರೊಬ್ರು ಯಾವುದೇ ಕೆಲಸ-ಕಾರ್ಯಗಳಿಗೆ ತೆರಳದೇ ಭಕ್ತಿಪೂರ್ವಕವಾಗಿ ಜಾತ್ರೆ ನಡೆಸುತ್ತಾರೆ.

    ಬಂಡಿ ಅನ್ನದ ಮೆರವಣಿಗೆ: ಊರಿನಲ್ಲಿ ಮೆರವಣಿಗೆ ಮಾಡುವ ಹಿಂದಿನ ದಿನವೇ ಎಲ್ಲರೂ ತಮ್ಮ-ತಮ್ಮ ಮನೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸಿ ತಂದು ಒಂದೆಡೆ ಇಟ್ಟು ಎಡೆ ಮಾಡ್ತಾರೆ. ಆದ್ರೆ ವಿಶೇಷವೆಂದರೆ ವಿವಿಧ ರೀತಿಯ ಖಾದ್ಯಗಳನ್ನೆಲ್ಲಾ ಒಂದೆಡೆ ಇಟ್ಟು 24 ಗಂಟೆ ಕಳೆದ್ರೂ ಆಹಾರ ಹಾಳಾಗುವುದಿಲ್ಲ. ತದನಂತರ ಮಾರನೇ ದಿನ ಇವ್ರು ಎಲ್ಲರೂ ತಂದ ಆಹಾರವನ್ನ ಬಂಡಿಯಲ್ಲಿ ಹಾಕಿ ಮೆರವಣಿಗೆ ಮಾಡಿ ಊರಿಂದ ಹೊರಗೆ ತೆಗೆದುಕೊಂಡು ಹೋಗ್ತಾರೆ. ಊರಿನಲ್ಲಿ ಮೆರವಣಿಗೆ ಮಾಡಿದ ಬಂಡಿಯನ್ನ ಊರ ಹೊರಗೆ ಊರಿನ ಹಿರಿಯರು ಪೂಜೆ ಮಾಡಿ ಅದನ್ನ ಪ್ರಸಾದದ ರೂಪದಲ್ಲಿ ಎಲ್ಲರಿಗೂ ನೀಡ್ತಾರೆ. ಕೆಲವರು ಅಲ್ಲೇ ತಿಂದ್ರೆ, ಕೆಲವರು ಮನೆಗೆ ತಂದು ಹಾಗೇ ಇಡ್ತಾರೆ.

    ಈ ಪ್ರಸಾದವನ್ನ ತಿಂದ್ರೆ ಒಂದು ವರ್ಷಗಳ ಕಾಲ ಯಾವುದೇ ರೋಗ-ರುಜಿನಗಳು ಬರೋದಿಲ್ಲ ಅನ್ನೋದು ಸ್ಥಳೀಯರ ನಂಬಿಕೆ. ಕೆಲವರು ಈ ಪ್ರಸಾದವನ್ನ ಮನೆಯಲ್ಲಿ ತಂದು ಇಡ್ಕೊಂಡು ದೊಡ್ಡವರಿಗೆ ಅಥವಾ ಮಕ್ಕಳಿಗೆ ಆರೋಗ್ಯ ಹದಗೆಟ್ಟಾಗ ನೀರಿನಲ್ಲಿ ಕದಡಿ ಕುಡಿಯುತ್ತಾರೆ. ಆಗ ಖಾಯಿಲೆ ಮಾಯವಾಗುತ್ತೆ ಅನ್ನೋದು ಇವ್ರ ನಂಬಿಕೆ. ಜಾತ್ರೆಯ ಸಮಯದಲ್ಲಿ ಇವ್ರು ತಮ್ಮ ಗ್ರಾಮವನ್ನ ತಳಿರು-ತೋರಣಗಳಿಂದ ಅಲಂಕರಿಸುತ್ತಾರೆ. ಯಾಕೆಂದರೆ, ಬಕಾಸುರನ ಅನ್ನದ ಬಂಡಿ ಸಾಗುವಾಗ ಅದು ಕಾಡಿನೊಳಗೆ ಸಾಗುತ್ತಿದೆ ಎಂದು ಭಾಸವಾಗಬೇಕು ಅನ್ನೋದು ಇವ್ರ ಆಶಯ.

    https://youtu.be/Rle96s0s5kU