Tag: Bheema teerada Assassin

  • ಭೀಮಾತೀರದ ಹಂತಕನಿಗೆ ಸಿಕ್ತು ಗೌರವ ಡಾಕ್ಟರೇಟ್

    ಭೀಮಾತೀರದ ಹಂತಕನಿಗೆ ಸಿಕ್ತು ಗೌರವ ಡಾಕ್ಟರೇಟ್

    ವಿಜಯಪುರ: ಭೀಮಾತೀರದ ಹಂತಕ ಮಹದೇವ ಸಾಹುಕಾರನಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಲಾಗಿದೆ.

    ಏಷಿಯನ್ ಇಂಟರನ್ಯಾಶನಲ್ ಇಂಡೋನೇಷಿಯಾ ಯುನಿವರ್ಸಿಟಿಯವರು ಖುದ್ದಾಗಿ, ಮಹದೇವ ಸಾಹುಕಾರನ ಸ್ವಗ್ರಾಮವಾದ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೆರೂರಿನ ಗ್ರಾಮಕ್ಕೆ ತೆರಳಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದ್ದಾರೆ.

    ಮಹದೇವ ಸಾಹುಕಾರ ಒಡೆತನದ ಭೈರವನಾಥ ಶಿಕ್ಷಣ ಸಂಸ್ಥೆಯಿಂದ ಬಡಮಕ್ಕಳಿಗೆ ಶಿಕ್ಷಣ ಮತ್ತು ಹಲವು ಸಾಮಾಜಿಕ ಸೇವೆಯನ್ನು ಗುರುತಿಸಿದ ಏಷಿಯನ್ ಇಂಟರನ್ಯಾಶನಲ್ ಇಂಡೋನೇಷಿಯಾ ಯುನಿವರ್ಸಿಟಿಯ ಕರ್ನಾಟಕದ ಸಂಯೋಜಕ ಡಾ. ರಾಜು ರೋಖಡೆಯವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ.

    ಭೀಮಾ ತೀರದ ಹಂತದ ಧರ್ಮರಾಜ ಚಡಚಣ ನಕಲಿ ಎನಕೌಂಟರ್ ಹಾಗೂ ಆತನ ತಮ್ಮ ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪ ಈ ಎರಡೂ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಸೇರಿ ಮೂವರಿಗೆ ಏಪ್ರಿಲ್ ತಿಂಗಳಿನಲ್ಲಿ ಕಲಬುರಗಿ ಸಂಚಾರಿ ಹೈಕೋರ್ಟ್ ಪೀಠ ಜಾಮೀನು ನೀಡಿತ್ತು.

  • ನನ್ ತಂಟೆಗೆ ಬಂದ್ರೆ ಹಣೆಗೆ ಗುಂಡು ಹೊಡೀತೀನಿ: ಭೀಮಾತೀರದ ಹಂತಕನ ಬಲಗೈ ಬಂಟ

    ನನ್ ತಂಟೆಗೆ ಬಂದ್ರೆ ಹಣೆಗೆ ಗುಂಡು ಹೊಡೀತೀನಿ: ಭೀಮಾತೀರದ ಹಂತಕನ ಬಲಗೈ ಬಂಟ

    ವಿಜಯಪುರ: ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ. ಹಣೆಗೆ ಬಂದೂಕು ಹಚ್ಚಿ ಹೊಡೆಯುತ್ತೇನೆಂದು ವಿಜಯಪುರದಲ್ಲಿ ಭೀಮಾತೀರದ ಹಂತಕನ ಬಲಗೈ ಬಂಟ ಬಾಗಪ್ಪ ಹರಿಜನ ಅವಾಜ್ ಹಾಕಿದ್ದಾನೆ.

    ಭೀಮಾತೀರದ ಹಂತಕ ಚಂದಪ್ಪ ಹರಿಜನ ಬಲಗೈ ಬಂಟನಾಗಿದ್ದ ಬಾಗಪ್ಪ ಈ ರೀತಿ ಆವಾಜ್ ಹಾಕಿದ್ದಾನೆ. ಚಂದಪ್ಪ ಹರಿಜನ ಸಂಬಂಧಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ. ಚಂದಪ್ಪನ ಸಂಬಂಧಿಕರಿಂದ ತೊಂದರೆಯಾಗುತ್ತಿದೆ ಎಂದು ಬಾಗಪ್ಪ ಆರೋಪಿಸಿದ್ದಾನೆ.

    ಯಾರ ಸಹವಾಸ ಬೇಡ ಎಂದು ನಾನಿದ್ದೇನೆ. ನನ್ನ ವಿಚಾರಕ್ಕೆ ಬಂದರೆ 24 ಗಂಟೆಗಳಲ್ಲಿ ಬಂದೂಕು ಹಿಡಿಯುತ್ತೇನೆ. ಪೊಲೀಸ್ ಇಲಾಖೆ ಮತ್ತು ಸಮಾಜಕ್ಕೆ ತೊಂದರೆ ಆಗಬಾರದು ಎಂದು ಉದ್ದೇಶದಿಂದ ಎಲ್ಲ ವಿಚಾರಗಳಿಂದಲೂ ದೂರವಾಗಿದ್ದೇನೆ. ಈ ಬದಲಾವಣೆಯನ್ನು ನನ್ನ ಅಶಕ್ತನೆಂದು ತಿಳಿಯಬೇಡಿ ಎಂದು ಬಾಗಪ್ಪ ವೈರಿಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾನೆ.