Tag: Bhavya narasimhamurthy

  • ಭವ್ಯ ನರಸಿಂಹಮೂರ್ತಿ ಈಗ ಭಾರತೀಯ ಸೇನೆಯ ಆಫೀಸರ್

    ಭವ್ಯ ನರಸಿಂಹಮೂರ್ತಿ ಈಗ ಭಾರತೀಯ ಸೇನೆಯ ಆಫೀಸರ್

    ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಸಂಯೋಜಕಿ ಭವ್ಯ ನರಸಿಂಹ ಮೂರ್ತಿಯವರು (Bhavya Narasimhamurthy) ಭಾರತೀಯ ಪ್ರಾದೇಶಿಕ ಸೇನೆಯಲ್ಲಿ (Indian Army) ಕಮಿಷನಡ್ ಆಫೀಸರ್ (Territorial army Commissioned Officer) ಆಗಿ ನಿಯೋಜನೆಗೊಂಡಿದ್ದಾರೆ. ಅವರು ಕಾಶ್ಮೀರದಲ್ಲಿ ಭಾರತ, ಪಾಕಿಸ್ಥಾನ ಗಡಿಯ ಬಳಿಯಿರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಭವ್ಯ ನರಸಿಂಹಮೂರ್ತಿ, ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಹಾಗೂ 2022 ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿದ್ದೇನೆ. ಇನ್ನು ಮುಂದೆ ನಾನು ದೇಶದ ಒಳಗೆ ರಾಜಕಾರಣಿಯಾಗಿ ನನ್ನ ಜನರ ಸೇವೆ ಮಾಡುವುದರ ಜೊತೆಗೆ ಭಾರತೀಯ ಸೇನಾಧಿಕಾರಿಯಾಗಿ ನನ್ನ ದೇಶ ಕರೆದಾಗ ಗಡಿಯಲ್ಲಿ ದೇಶದ ರಕ್ಷಣೆ ಮಾಡಲೂ ಸಿದ್ಧಳಿದ್ದೇನೆ ಎಂದಿದ್ದಾರೆ.

    ಪ್ರಸ್ತುತ ಪ್ರಾದೇಶಿಕ ಸೇನೆಯಲ್ಲಿರುವ ಕೆಲವು ಪ್ರಮುಖ ವ್ಯಕ್ತಿಗಳಲ್ಲಿ ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಮಂತ್ರಿ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಅನುರಾಗ ಠಾಕುರ್ ಸೇರಿದ್ದಾರೆ.

  • ಟಿಕೆಟ್ ವಿಚಾರದಲ್ಲಿ ಕಚ್ಚಾಟ – KPCC ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

    ಟಿಕೆಟ್ ವಿಚಾರದಲ್ಲಿ ಕಚ್ಚಾಟ – KPCC ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

    ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಕಾರ್ಯಕರ್ತರ ನಡುವೆ ಜಟಾಪಟಿ ಶುರುವಾಗಿದ್ದು, ಕೈ-ಕೈ ಮೀಲಾಯಿಸಿದ್ದಾರೆ.

    ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ (KPCC) ಕಚೇರಿಯಲ್ಲಿ ರಾಜಾಜಿನಗರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದನ್ನೂ ಓದಿ: ನನ್ನ ಜೊತೆ ಬಿಸಿನೆಸ್ ಮಾಡಲು ಯಾರೂ ಮುಂದೆ ಬರುತ್ತಿಲ್ಲ: ಡಿಕೆ ಶಿವಕುಮಾರ್‌ ಬೇಸರ

    ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೂರು ಬಣಗಳ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮೇಯರ್ ಪದ್ಮಾವತಿ, ಮನೋಹರ್, ಮಾಜಿ ಉಪ ಮೇಯರ್ ಪುಟ್ಟರಾಜು ಬಣಗಳ ನಡುವೆ ಮಾತಿಗೆ ಮಾತು ಬೆಳೆದು ಕಿತ್ತಾಟ ಶುರುವಾಗಿದೆ. ಇದನ್ನೂ ಓದಿ: ಟಿಕೆಟ್‍ಗಾಗಿ ಕಾಂಗ್ರೆಸ್ ಕಾರ್ಯಕರ್ತರ ಸಮರ- ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭುಗಿಲೆದ್ದ ಆಕ್ರೋಶ

    ಈಗಾಗಲೇ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿರುವುದಾಗಿ ಕಾರ್ಯಕರ್ತರು ಹೇಳಿದ್ದಾರೆ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಪಂಚರ್ ಆಗಿರೋ ಆರ್ಥಿಕತೆಯನ್ನು ಸರಿ ಮಾಡಲು ನಾವೆಲ್ಲ ಪಂಚರ್ ವಾಲಾಸ್ ಆಗಿದ್ದೇವೆ: ಭವ್ಯ ನರಸಿಂಹಮೂರ್ತಿ

    ಪಂಚರ್ ಆಗಿರೋ ಆರ್ಥಿಕತೆಯನ್ನು ಸರಿ ಮಾಡಲು ನಾವೆಲ್ಲ ಪಂಚರ್ ವಾಲಾಸ್ ಆಗಿದ್ದೇವೆ: ಭವ್ಯ ನರಸಿಂಹಮೂರ್ತಿ

    ಧಾರವಾಡ: ನಾವು ಪಂಚರ್ ತೆಗೆಯುವವರು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದೊಂದು ಕೋಮು ಶಬ್ದ. ನಾವೆಲ್ಲ ಪಂಚರ್ ವಾಲಾಸ್. ಅವರು ನಮ್ಮ ಆರ್ಥಿಕತೆಯನ್ನು ಪಂಚರ್ ಮಾಡುತ್ತಿದ್ದಾರೆ. ಅದನ್ನು ರಿಪೇರಿ ಮಾಡಲು ನಾವು ಪಂಚರ್ ವಾಲಾಸ್ ಆಗಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಭವ್ಯಾ ನರಸಿಂಹಮೂರ್ತಿ ವಾಗ್ದಾಳಿ ನಡೆಸಿದ್ದಾರೆ.

    ಎನ್‌ಆರ್‌ಸಿ, ಸಿಎಎ ಮತ್ತು ಎನ್‍ಪಿಆರ್ ಖಂಡಿಸಿ ಧಾರವಾಡದಲ್ಲಿ ‘ವಿ ದಿ ಪೀಪಲ್ ಆಫ್ ಇಂಡಿಯಾ’ ಸಂಘಟನೆಯಿಂದ ಮಹಿಳಾ ಸಮಾವೇಶವನ್ನು ಏರ್ಪಡಿಸಲಾಗಿತ್ತು. ನಗರದ ಅಂಜುಮನ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಸಮಾವೇಶದ ವೇದಿಕೆ ಮೇಲೆ ಕವಿತಾ ರೆಡ್ಡಿ, ಬಿ. ಆರ್ ಅಪರ್ಣಾ, ಭವ್ಯಾ ನರಸಿಂಹಮೂರ್ತಿ ಸೇರಿ ಹಲವರು ಕೇಂದ್ರ ಸರ್ಕಾರದ ಎನ್‌ಆರ್‌ಸಿ, ಸಿಎಎ ಹಾಗೂ ಎನ್‍ಪಿಆರ್ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಭವ್ಯಾ ನರಸಿಂಹಮೂರ್ತಿ ಮಾತನಾಡಿ, ಈ ಕಾಯ್ದೆಗೆ ಬೆಂಬಲ ನೀಡಲು ಅಮಿತ್ ಶಾ ಅವರು ಒಂದು ನಂಬರ್ ಕೊಟ್ಟು ಮಿಸ್ ಕಾಲ್ ಕೊಡಲು ಹೇಳಿದ್ದರು. ಬಳಿಕ ಅದಕ್ಕೆ 52 ಲಕ್ಷ ಮಿಸ್ ಕಾಲ್ ಬಂದಿದೆ ಎಂದರು. ಸರ್ಕಾರದ ಬಳಿ ಬಹುಮತವಿದೆ. ಅದಕ್ಕೆ ನಾವು ಈ ಕಾಯ್ದೆಯನ್ನು ತರುತ್ತೇವೆ ಎಂದು ಅವರು ಅಂತಿದ್ದಾರೆ. ಈ ಸರ್ಕಾರ ಬರಲು ನಾವೇ ಕಾರಣ ಎಂಬುದನ್ನು ಅವರು ಮರೆತಿದ್ದಾರೆಂದು ಹರಿಹಾಯ್ದರು.

    ಸಿಎಎ, ಎನ್‌ಆರ್‌ಸಿ ಕಾಯ್ದೆಗೆ ದೊಡ್ಡ ತಜ್ಞರು ಹಾಗೂ ಮೈಕ್ರೋಸಾಫ್ಟ್ ಸಿಇಒ ಕೂಡಾ ವಿರೋಧ ಮಾಡಿದ್ದಾರೆ. ಈ ಕಾಯ್ದೆ ಬಂದರೆ ಈ ದೇಶಕ್ಕೆ ಎಂಥ ಅಪಘಾತ ಕಾದಿದೆ ಎಂದು ಅವರಿಗೆ ಗೊತ್ತು ಎಂದು ಮಾತಿನ ಚಾಟಿ ಬೀಸಿದರು.