Tag: bhavya gowda

  • ಉಗ್ರಂ ಮಂಜು ಅಬ್ಬರಕ್ಕೆ ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್

    ಉಗ್ರಂ ಮಂಜು ಅಬ್ಬರಕ್ಕೆ ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್

    ದೊಡ್ಮನೆಯ ಆಟ 90ನೇ ದಿನದತ್ತ ಮುನ್ನುಗ್ಗುತ್ತಿದೆ. ಪ್ರತಿವಾರ ವಿಭಿನ್ನ ಟಾಸ್ಕ್‌ಗಳನ್ನೇ ಕೊಡೋ ‌ʻಬಿಗ್‌ ಬಾಸ್’ (Bigg Boss Kannada 11) ಈ ಬಾರಿ ದೊಡ್ಮನೆಯನ್ನು ರೆಸಾರ್ಟ್ ಆಗಿ ಬದಲಿಸಿದ್ದಾರೆ. ಈ ರೆಸಾರ್ಟ್‌ನಲ್ಲಿ ಮೋಜು, ಮಸ್ತಿ ಮಾಡಲು ಭವ್ಯಾ ಗೌಡ (Bhavya Gowda) ಹಾಗೂ ಚೈತ್ರಾ ಕುಂದಾಪುರ (Chaithra Kundapura) ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಭವ್ಯಾ ಟೀಮ್‌, ರೆಸಾರ್ಟ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಾಗಿದ್ದು, ಚೈತ್ರಾ ಟೀಮ್ ಗೆಸ್ಟ್‌ಗಳಾಗಿದ್ದಾರೆ. ಅತಿಥಿಗಳು ತಮಗೆ ಬೇಕಾದ ರೀತಿಯಲ್ಲಿ ಕೆಲಸಗಾರರನ್ನು ನಡೆಸಿಕೊಳ್ತಿದ್ದಾರೆ. ಚೈತ್ರಾ ತಂಡದಲ್ಲಿರುವ ಉಗ್ರಂ ಮಂಜು ಕೊಡ್ತಿರುವ ಕಾಟಕ್ಕೆ, ಟಾರ್ಚರ್‌ಗೆ ಸೇವೆ ಮಾಡುವ ಸಿಬ್ಬಂದಿ ಸುಸ್ತಾಗಿದ್ದಾರೆ. ಇವರ ಕಾಟ ತಾಳಲಾರದೇ ರಜತ್‌ ಅವರು ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ್ದಾರೆ.

    ಇತ್ತ ಎದುರಾಳಿ ತಂಡದ ವಿಪರಿತ ಕಾಟ ತಾಳಲಾರದೇ ರೆಸಾರ್ಟ್ ಮ್ಯಾನೇಜರ್ ಭವ್ಯಾ ಕಣ್ಣೀರಿಟ್ಟಿದ್ದಾರೆ. ಮಧ್ಯರಾತ್ರಿ ಏನೇ ಕೇಳಿದ್ರೂ ಮಾಡಿಕೊಡಬೇಕು ಎದುರಾಳಿ ತಂಡ ಹೇಳಿದ್ದಕ್ಕೆ ಭವ್ಯಾ ಅತ್ತಿದ್ದಾರೆ. ಇತ್ತ ಚೈತ್ರಾ ತಮ್ಮ ದರ್ಬಾರ್ ನಡೆಸಿದ್ದಾರೆ. ರಾತ್ರಿ ಲೈಟ್ಸ್ ಆಫ್ ಆದರೂ ನೀವು ನಮ್ಮ ಸೇವೆ ಮಾಡಬೇಕು. ಇನ್ನೂ ಐಶ್ವರ್ಯಾ ನನ್ನ ತಲೆ ಒತ್ತಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಮಂಜು ನನಗೆ ಇವತ್ತು ಮ್ಯೂಜಿಕಲ್ ನೈಟ್ ಬೇಕು ಎಂದಿದ್ದಾರೆ. ಇತ್ತ ರೊಚ್ಚಿಗೆದ್ದಿರುವ ರಜತ್, ನಮಗೂ ಅವಕಾಶ ಸಿಗುತ್ತದೆ. ನಿಮ್ಮನ್ನು ಹಣ್ಣುಗಾಯಿ, ನೀರುಗಾಯಿ ಮಾಡಿಲ್ಲ ಅಂದ್ರೆ ನನ್ನ ಹೆಸರು ಬುಜ್ಜಿ ಅಲ್ಲ ನೋಡಿಕೋ ಎಂದು ಉಗ್ರಂ ಮಂಜುಗೆ ಖಡಕ್‌ ಆಗಿ ವಾರ್ನಿಂಗ್‌ ಕೊಟ್ಟಿದ್ದಾರೆ. ಒಟ್ನಲ್ಲಿ ಅಧಿಕಾರದ ದರ್ಪದಿಂದ ಮರೆಯುತ್ತಿರುವ ಚೈತ್ರಾ ಟೀಮ್ ಎದುರು ಭವ್ಯಾ ತಂಡ ಸೋತು ಸುಣ್ಣವಾಗಿರೋದಂತೂ ಗ್ಯಾರಂಟಿ.

  • ಎಲಿಮಿನೇಷನ್ ಹೈಡ್ರಾಮಾ: ಬಿಗ್ ಬಾಸ್‌ನಿಂದ ಹೊರಬಂದ ತ್ರಿವಿಕ್ರಮ್!

    ಎಲಿಮಿನೇಷನ್ ಹೈಡ್ರಾಮಾ: ಬಿಗ್ ಬಾಸ್‌ನಿಂದ ಹೊರಬಂದ ತ್ರಿವಿಕ್ರಮ್!

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟದಲ್ಲಿ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ ಬಿಗ್ ಬಾಸ್. ಮನೆಯ ಸ್ಟ್ರಾಂಗ್ ಸ್ಪರ್ಧಿ ತ್ರಿವಿಕ್ರಮ್ ಹೊರನಡೆದಿರುವ ಹೈಡ್ರಾಮಾ ನಡೆದಿದೆ. ತ್ರಿವಿಕ್ರಮ್ (Trivikram) ನಿಜಕ್ಕೂ ಎಲಿಮಿನೇಟ್ ಆದರು ಎಂದು ಭಾವಿಸಿದ ಭವ್ಯಾ (Bhavya Gowda) ಅವರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಕಿಚ್ಚ

    ಈ ವಾರ ಯಾವುದೇ ವೋಟಿಂಗ್ ಲೈನ್ ತೆರೆದಿರಲಿಲ್ಲ. ಆದರೂ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಅಂತಿಮವಾಗಿ ತ್ರಿವಿಕ್ರಮ್ ಅವರು ದೊಡ್ಮನೆಯಿಂದ ಹೊರ ಹೋಗುತ್ತಿದ್ದಾರೆ ಎಂದು ಸುದೀಪ್ ಘೋಷಣೆ ಮಾಡಿದರು. ನಿಮಗೆ ನನ್ನ ಜೊತೆ ಬಂದು ಸೇರಲು ಐದು ನಿಮಿಷ ಕಾಲಾವಕಾಶ ಇದೆ ಎಂದರು. ಎಲ್ಲರೂ ಇದು ಪ್ರ‍್ಯಾಂಕ್ ಇರಬಹುದು ಎಂದುಕೊಂಡಿದ್ದರು. ತ್ರಿವಿಕ್ರಮ್ ಕೂಡ ಹಾಗೆಯೇ ಅಂದುಕೊಂಡಂತೆ ಇತ್ತು. ಆದರೆ, ಹಾಗಾಗಲಿಲ್ಲ.

    ಮನೆಯ ಗಾರ್ಡನ್ ಏರಿಯಾಗೆ ಬರುತ್ತಿದ್ದಂತೆ ಮುಖ್ಯದ್ವಾರ ಓಪನ್ ಆಯಿತು. ಆದರಿಂದ ಹೊರಕ್ಕೆ ಹೋದರು. ಆಗ ಭವ್ಯಾ ಗೌಡ ಅವರು ಅಳೋಕೆ ಆರಂಭಿಸಿದರು. ತ್ರಿವಿಕ್ರಮ್‌ ಎಲಿಮಿನೇಷನ್‌ ಶಾಕ್‌ ಆಗಿದೆ. ಗೆಲ್ಲಬೇಕಿದ್ದ ಸ್ಪರ್ಧಿ ಈ ರೀತಿ ಎಲಿಮಿನೇಟ್ ಆದರಲ್ಲ ಎಂದು ಎಲ್ಲರೂ ಶಾಕ್ ಆದರು. ಈ ಬಗ್ಗೆ ದೊಡ್ಮನೆ ಒಳಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇಂದಿನ ಸಂಚಿಕೆಯಲ್ಲಿ ತ್ರಿವಿಕ್ರಮ್ ಮರಳಿ ದೊಡ್ಮನೆ ಸೇರಲಿದ್ದಾರೆ.

    ಈ ವಾರ ತ್ರಿವಿಕ್ರಮ್‌ರನ್ನು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ತಮ್ಮ ತಂಡದವರನ್ನು ಉಳಿಸಲು ಹೋಗಿ ಅವರು ಈ ರೀತಿ ಮಾಡಿದ್ದರು. ಈ ಬಗ್ಗೆ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ, ತ್ರಿವಿಕ್ರಮ್‌ಗೆ ತಾವು ಇದ್ದೇ ಇರುತ್ತೇವೆ ಎನ್ನುವ ಓವರ್ ಕಾನ್ಫಿಡೆನ್ಸ್ ಇತ್ತು. ಅದನ್ನು ಬ್ರೇಕ್ ಮಾಡಬೇಕು ಎನ್ನುವ ಕಾರಣಕ್ಕೆ ಈ ವಾರ ಎಲಿಮಿನೇಷನ್ ಡ್ರಾಮಾ ಮಾಡಲಾಗಿದೆ.

    ಭಾನುವಾರದ ಸಂಚಿಕೆಯನ್ನು ಸೋಮವಾರದವರೆಗೂ ಮುಂದುವರಿದೆ. ಅದರ ಪ್ರೋಮೋವನ್ನು ಕೂಡ ತೋರಿಸಲಾಗಿದೆ. ಸುದೀಪ್ ಅವರು, ಎಷ್ಟು ಮಂದಿಗೆ ತ್ರಿವಿಕ್ರಮ್ ಅವರು ಹೋಗಿದ್ದು ಅಚ್ಚರಿ ಮೂಡಿಸಿದೆ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಅದರರ್ಥ ಸೋಮವಾರದ ಸಂಚಿಕೆಯಲ್ಲಿ ಸುದೀಪ್ ಅವರು ಒಂದಷ್ಟು ಕ್ಲಾಸ್ ತೆಗೆದುಕೊಂಡ ಬಳಿಕ, ಪುನಃ ತ್ರಿವಿಕ್ರಮ್‌ರನ್ನು ವಾಪಸ್ ಮನೆಯೊಳಗೆ ಕಳಿಸುವ ಸಾಧ್ಯತೆ ಇದೆ. ಅಲ್ಲಿವರೆಗೂ ಕಾದುನೋಡಬೇಕು.

  • BBK 11: ಕತ್ತಲೆ ಬೆಳಕಿನ ಆಟದಲ್ಲಿ ಗೆಲ್ಲೋದು ಯಾರು?- ಐಶ್ವರ್ಯಾ, ಭವ್ಯಾಗೆ ಬಿಗ್ ಟಾಸ್ಕ್

    BBK 11: ಕತ್ತಲೆ ಬೆಳಕಿನ ಆಟದಲ್ಲಿ ಗೆಲ್ಲೋದು ಯಾರು?- ಐಶ್ವರ್ಯಾ, ಭವ್ಯಾಗೆ ಬಿಗ್ ಟಾಸ್ಕ್

    ನ್ನಡದ ‘ಬಿಗ್ ಬಾಸ್ 11’ರ (Bigg Boss Kannada 11) ಆಟ ರೋಚಕವಾಗಿದೆ. ಕ್ಯಾಪ್ಟನ್ ಪಟ್ಟ ಏರಲು ಐಶ್ವರ್ಯಾ, ಭವ್ಯಾ (Bhavya Gowda) ನಡುವೆ ಪೈಪೋಟಿ ನಡೆದಿದೆ. ಬಿಗ್ ಬಾಸ್ ಕೊಟ್ಟ ಕತ್ತಲೆ ಬೆಳಕಿನ ಆಟದಲ್ಲಿ ಟ್ವಿಸ್ಟ್ ಕೊಡಲಾಗಿದೆ. ಸದ್ಯ ಕುತೂಹಲ ಮೂಡಿಸುವಂತಹ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:ಸ್ಪೆಷಲ್ ಸಾಂಗ್‌ಗೆ ನೇಹಾ ಶೆಟ್ಟಿ ಗ್ರೀನ್ ಸಿಗ್ನಲ್

    ನಿನ್ನೆ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಕಡೆಯದಾಗಿ ಸಹ ಸ್ಪರ್ಧಿಗಳನ್ನು ಸೋಲಿಸಿ ಐಶ್ವರ್ಯಾ ಮತ್ತು ಭವ್ಯಾ ಉಳಿದುಕೊಂಡಿದ್ದರು. ಇದೀಗ ಇವರಿಬ್ಬರ ನಡುವೆ ಕ್ಯಾಪ್ಟನ್ಸಿಗಾಗಿ ಟಫ್ ಫೈಟ್ ನಡೆದಿದೆ. ಆ್ಯಕ್ಟಿವಿಟಿ ರೂಮ್‌ನಲ್ಲಿ ಕಾಲ ಕಾಲಕ್ಕೆ ಲೈಟ್ ಆನ್ ಮತ್ತು ಆಫ್ ಆಗುತ್ತದೆ. ಆಗ ಒಂದೊಂದೇ ಬಣ್ಣಗಳನ್ನು ಆಯಾ ಬಣ್ಣವನ್ನು ಸೂಚಿಸುವ ಪೆಡಾಸ್ಟಲ್‌ಗಳ ಮೇಲೆ ಇಡಬೇಕು. ಈ ಕತ್ತಲೆ ಬೆಳಕಿನ ಆಟದಲ್ಲಿ ಭವ್ಯಾ, ಐಶ್ವರ್ಯಾ (Aishwarya) ಇವರಲ್ಲಿ ಯಾರು ಗೆಲ್ತಾರೆ ಎಂಬುದು ಕ್ಯೂರಿಯಸ್ ಆಗಿದೆ.

    ಗೆದ್ದವರು ಮನೆಯ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಲಿದ್ದಾರೆ. ಇನ್ನೂ ಭವ್ಯಾ ಈಗಾಗಲೇ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಐಶ್ವರ್ಯಾ ಒಮ್ಮೆ ತ್ರಿವಿಕ್ರಮ್ ಜೊತೆ ಜೋಡಿ ಕ್ಯಾಪ್ಟನ್ ಆಗಿದ್ದರು. ಈ ಬಾರಿ ಸಿಂಗಲ್ ಕ್ಯಾಪ್ಟನ್ ಆಗಿ ದರ್ಬಾರ್ ಮಾಡಬೇಕು ಎಂಬುದು ಅಭಿಮಾನಿಗಳ ಆಶಯ. ಆದರೆ ಈ ಬಾರಿ ಭವ್ಯಾ ಕ್ಯಾಪ್ಟನ್ ಪಟ್ಟ ಏರಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಎಲ್ಲದ್ದಕ್ಕೂ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

  • BBK 11: ತ್ರಿವಿಕ್ರಮ್‌ ಮೇಲೆ ಡಿಪೆಂಡ್‌ ಆಗ್ತೀರಾ ಎಂದ ಮೋಕ್ಷಿತಾ ಮೇಲೆ ಭವ್ಯಾ ಕೆಂಡ

    BBK 11: ತ್ರಿವಿಕ್ರಮ್‌ ಮೇಲೆ ಡಿಪೆಂಡ್‌ ಆಗ್ತೀರಾ ಎಂದ ಮೋಕ್ಷಿತಾ ಮೇಲೆ ಭವ್ಯಾ ಕೆಂಡ

    ದೊಡ್ಮನೆಯ (Bigg Boss Kannada 11)  ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಮನೆಯ ಪಕ್ಷಪಾತಿ, ಅಶಕ್ತ ಎಂಬ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಈ ವೇಳೆ, ಉಗ್ರಂ ಮಂಜುಗೆ (Ugramm Manju) ರಜತ್ (Rajath) ಚೀಪ್ ಎಂದು ಕುಟುಕಿದ್ದಾರೆ. ಇತ್ತ ಮೋಕ್ಷಿತಾ (Mokshitha) ಕೂಡ ಭವ್ಯಾ ಮೇಲೆ ಎಗರಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ಚಾನ್ಸ್‌ಗಾಗಿ ಸೆಕ್ಸ್ ಮಾಡಿದ್ದೀರಾ? ಎಂದವನಿಗೆ ಚೈತ್ರಾ ಆಚಾರ್ ತಿರುಗೇಟು

    ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ನನ್ನಿಂದಲೇ ಈ ಟಾಸ್ಕ್ ಗೆಲ್ತು. ನನ್ನಿಂದಲೇ ಈ ಆಟ ಗೆದ್ದರು ಅಂದುಕೊಳ್ಳುವ ಚೀಪ್ ಮೆಂಟಾಲಿಟಿ ಮಂಜಣ್ಣನದ್ದು ಎಂದು ರಜತ್ ಹೇಳಿದ್ದಾರೆ. ರಜತ್ ಮಾತು ಕೇಳಿ, ಮಂಜು ಗರಂ ಆಗಿದ್ದಾರೆ. ನಾನು ಮಾಡಿರೋ ಕೆಲಸನಾ ನಾನೇ ಹೇಳಿಕೊಳ್ಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಬಿಗ್ ಬಾಸ್‌ನ ಟಾಸ್ಕ್ ರೂಲ್ಸ್‌ನಂತೆಯೇ ಸ್ಪರ್ಧಿ ಮಂಜುರನ್ನು ರಜತ್ ನೀರಿಗೆ ತಳ್ಳಿದ್ದಾರೆ.

    ಭವ್ಯಾ ಎಲ್ಲರ ಜೊತೆ ಮಿಂಗಲ್ ಆಗೋದಿಲ್ಲ. ನೀವು ತ್ರಿವಿಕ್ರಮ್ ಜೊತೆ ಡಿಪೆಂಡ್ ಆಗ್ತೀರಾ. ತುಂಬಾ ನಿಷ್ಠುರವಾಗಿ ಮಾತಾಡ್ತೀರಾ ಎಂದು ಮೋಕ್ಷಿತಾ ಹೇಳಿದರು. ಮೋಕ್ಷಿತಾರ ಪ್ರತಿ ಮಾತಿಗೂ ಭವ್ಯಾ ತಿರುಗೇಟು ನೀಡಿದ್ದಾರೆ. ನಾನು ಎಲ್ಲರ ಬಳಿ ಹೋಗಿ ಕಷ್ಟ ಸುಖ ಹೇಳಬೇಕಾಗಿಲ್ಲ. ತ್ರಿವಿಕ್ರಮ್ ನನ್ನ ಆಟವನ್ನ ಆಡುತ್ತಿಲ್ಲ. ನಾನು ಈ ಮನೆಗೆ ಸಂಬಂಧಗಳನ್ನು ಬೆಳೆಸಲು ಬಂದಿಲ್ಲ. ಯಾರ ಬಳಿ ಕೂಡ ಸರ್ಟಿಫಿಕೇಟ್ ಬೇಕಿಲ್ಲ ಎಂದು ಭವ್ಯಾ ಕೆಂಡಕಾರಿದ್ದಾರೆ. ಆ ನಂತರ ಭವ್ಯಾರನ್ನು (Bhavya Gowda) ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ.

    ಇನ್ನೂ ಶಿಶಿರ್ ಎಲಿಮಿನೇಷನ್ ಮತ್ತು ಗೋಲ್ಡ್ ಸುರೇಶ್ ನಿರ್ಗಮನದ ನಂತರ ಈ ವಾರಾಂತ್ಯ ಯಾರು ಮನೆಯಿಂದ ಹೊರಬರುತ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ. ಈ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆಯಿದೆ.

  • BBK 11: ‘ಪಾರು’ನ ಕೆಣಕಿದ ಭವ್ಯಾ- ದೊಡ್ಮನೆಯಲ್ಲಿ ನಾಮಿನೇಷನ್‌ ಬಿಸಿ

    BBK 11: ‘ಪಾರು’ನ ಕೆಣಕಿದ ಭವ್ಯಾ- ದೊಡ್ಮನೆಯಲ್ಲಿ ನಾಮಿನೇಷನ್‌ ಬಿಸಿ

    ಅಂತೂ ಇಂತೂ ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಭುಡಕ್ಕೆ ಬೆಂಕಿ ಬಿದ್ದಾಗಲೇ ಅಲ್ವಾ? ಎಚ್ಚೆತ್ತಿಕೊಳ್ಳೋದು. ಹಾಗೆಯೇ ನಾಮಿನೇಷನ್ ಪ್ರಕ್ರಿಯೆ ಬಂದಾಗಲೇ ತಾವು ಸೇಫ್ ಆಗೋಕೆ ಸ್ಪರ್ಧಿಗಳ ಮೈಂಡ್‌ ಗೇಮ್‌ ಶುರುವಾಗೋದು. ಇಲ್ಲೂ ಹಾಗೇ ಆಗಿದೆ. ಸೈಲೆಂಟ್ ಆಗಿರೋ ‘ಪಾರು’ ಮೋಕ್ಷಿತಾರನ್ನು (Mokshitha Pai) ಭವ್ಯಾ ಗೌಡ ಕೆಣಸಿದ್ದಾರೆ.

    ದೊಡ್ಮನೆಯಲ್ಲಿ (Bigg Boss Kannada 11) ಮೊದಲ ಎಲಿಮಿನೇಷನ್‌ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇಡೀ ಮನೆ ಚೈತ್ರಾ ಕುಂದಾಪುರ ಅನ್ನ ನಾಮಿನೇಟ್ ಮಾಡಿದ್ರೆ, ಇತ್ತ ಭವ್ಯ ಗೌಡ ಅದ್ಯಾಕೋ ಏನೋ? ಮೋಕ್ಷಿತಾ ಪೈ ಹಿಂದೆ ಬಿದ್ದಿದ್ದಾರೆ. ಆದರೆ, ನಾಮಿನೇಟ್ ಮಾಡಿರೋದಕ್ಕೆ ಕೊಟ್ಟ ಕಾರಣ ಏನು ಗೊತ್ತಾ? ಮೋಕ್ಷಿತಾ ಪೈ ಮಾತು ಆಡೋದಿಲ್ಲ. ತುಂಬಾನೆ ಸೈಲೆಂಟ್ ಆಗಿದ್ದಾರೆ ಅನ್ನೋದೇ ಭವ್ಯಾರ ವಾದ. ಅದನ್ನೇ ಗುರಿಯಾಸಿಕೊಂಡು ಮೋಕ್ಷಿತಾರನ್ನು ನಾಮಿನೇಟ್‌ ಮಾಡಿದ್ದಾರೆ ಭವ್ಯಾ. ಇದನ್ನೂ ಓದಿ:4ನೇ ಮದುವೆಗೆ ಸಜ್ಜಾದ ತಮಿಳು ನಟಿ ವನಿತಾ ವಿಜಯ್ ಕುಮಾರ್

    ಮೋಕ್ಷಿತಾ ನೀವು ತುಂಬಾನೇ ಸೈಲೆಂಟ್ ಆಗಿದ್ದೀರಿ. ಯಾರ ಜೊತೆಗೂ ನೀವು ಇನ್ನೂ ಬರೆಯುತ್ತಿಲ್ಲ. ನಾನು ನೋಡ್ತಾನೇ ಇದ್ದೇನೆ. ನನ್ನ ಜೊತೆಗೆ ಕೂಡ ಮಾತನಾಡುತ್ತಿಲ್ಲ. ನೀವು ಸೈಲೆಂಟ್ ಆಗಿರೋದ್ದಕ್ಕೆ ನಾನು ನಿಮ್ಮ ಹೆಸರು ನಾಮಿನೇಟ್ ಮಾಡುತ್ತಿದ್ದೇನೆ ಅಂತಲೇ ಭವ್ಯಾ ನೇರವಾಗಿ ಹೇಳಿದ್ದಾರೆ.

    ಭವ್ಯಾ (Bhavya Gowda) ಮಾತಿಗೆ ಮೋಕ್ಷಿತಾ ಕೂಡ ಪ್ರತಿಯುತ್ತರ ನೀಡಿದ್ದಾರೆ. ನಾನು ಎಲ್ಲರ ಜೊತೆಗೆ ಮಾತನಾಡುತ್ತೇನೆ. ಸ್ವರ್ಗದಲ್ಲಿರೋರ ಜೊತೆಗೂ ಮಾತನಾಡಿದ್ದೇನೆ. ಆದರೆ, ನೀವೇ ನನ್ನ ಎದುರು ಬಂದಿಲ್ಲ. ಬರದೇ ಹೇಗೆ ಮಾತನಾಡೋಕೆ ಸಾಧ್ಯ ಆಗುತ್ತದೆ ಹೇಳಿ? ಹೀಗೆ ಪ್ರಶ್ನೆ ಮಾಡಿರೋ ಮೋಕ್ಷಿತಾ ನಾಮಿನೇಷನ್ ಮಾಡಿದಕ್ಕೆ ಬೇಸರ ಏನೂ ಇಲ್ಲ. ಅದು ನಿಮ್ಮ ಅಭಿಪ್ರಾಯವೇ ಆಗಿದೆ. ಅದನ್ನು ನಾನು ಗೌರವಿಸುತ್ತೇನೆ ಅಂತಲೂ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಇದನ್ನೆಲ್ಲ ನೋಡಿದ್ರೆ, ಈ ಸ್ಪರ್ಧಿಗಳು ಒಳ್ಳೆಯ ಫ್ರೆಂಡ್ಸ್ ಆಗುತ್ತಾರಾ? ದೊಡ್ಮನೆ ಕಿಚ್ಚು ಹೆಚ್ಚಾಗುತ್ತಾ? ಎಂದು ಕಾದುನೋಡಬೇಕಿದೆ.

    ಅಂದಹಾಗೆ, ಮೋಕ್ಷಿತಾ ಪೈ ಅವರು ‘ಪಾರು’ ಸೀರಿಯಲ್‌ (Paaru Serial) ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಭವ್ಯಾ ಗೌಡ ಅವರು ‘ಗೀತಾ’ (Geetha Serial) ಸೀರಿಯಲ್‌ನಲ್ಲಿ ನಟಿಸಿದ್ದರು.

  • BBK 11: ವಿಶೇಷ ಅಧಿಕಾರದೊಂದಿಗೆ ಸ್ವರ್ಗದ ಮನೆಗೆ ಕಾಲಿಟ್ಟ ಭವ್ಯಾ, ಯಮುನಾ

    BBK 11: ವಿಶೇಷ ಅಧಿಕಾರದೊಂದಿಗೆ ಸ್ವರ್ಗದ ಮನೆಗೆ ಕಾಲಿಟ್ಟ ಭವ್ಯಾ, ಯಮುನಾ

    ಬಿಗ್ ಬಾಸ್ ಮನೆಗೆ ಭವ್ಯಾ (Bhavya Gowda) ಮತ್ತು ಯಮುನಾ (Yamuna Srinidhi) ಕಾಲಿಟ್ಟಿದ್ದಾರೆ. ಮೊದಲ ಇಬ್ಬರೂ ಸ್ವರ್ಧಿಗಳಾಗಿರುವ ಭವ್ಯಾ ಮತ್ತು ಯಮುನಾಗೆ ದೊಡ್ಮನೆಯ ಸ್ವರ್ಗಕ್ಕೆ ಎಂಟ್ರಿ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಡೆಲಿವರಿ ಬಳಿಕ ಮಗನ ಜೊತೆಗಿನ ಫೋಟೋ ಹಂಚಿಕೊಂಡ ಪ್ರಣೀತಾ ಸುಭಾಷ್

    ಭವ್ಯಾ ಮೊದಲ ಸ್ವರ್ಧಿಯಾಗಿದ್ರೆ, ಎರಡನೇ ಸ್ವರ್ಧಿಯಾಗಿ ಬಿಗ್ ಬಾಸ್‌ಗೆ (Bigg Boss Kannada 11) ಎಂಟ್ರಿ ಕೊಟ್ಟಿದ್ದಾರೆ. ಮೊದಲ ಎರಡು ಸ್ಪರ್ಧಿಗಳಾಗಿರುವ ಕಾರಣ ಇಬ್ಬರೂ ಸೀದಾ ದೊಡ್ಮನೆಯ ಸ್ವರ್ಗಕ್ಕೆ ಕಾಲಿಡಲು ಅವಕಾಶ ನೀಡಲಾಗಿದೆ. ಭವ್ಯಾ ಮತ್ತು ಯಮುನಾ ಅವರು ಬಿಗ್ ಬಾಸ್ ಮನೆಯ ಅದ್ಧೂರಿತನ ನೋಡಿ ಸಂಭ್ರಮಿಸಿದ್ದಾರೆ.

    ಜೊತೆಗೆ ಇಬ್ಬರಿಗೂ ವಿಶೇಷ ಅಧಿಕಾರವನ್ನು ಕೊಟ್ಟಿದ್ದಾರೆ. ಬರುವ ಸ್ಪರ್ಧಿಗಳು ನಡೆ, ನುಡಿ ನೋಡಿ ಅವರು ಸ್ವರ್ಗಕ್ಕೆ ಹೋಗಬೇಕೋ? ನರಕಕ್ಕೆ ಎಂದು ಅಭಿಪ್ರಾಯ ತಿಳಿಸಬೇಕು. ಇನ್ನೂ ಇಬ್ಬರೂ ಕೂಡ ಗಟ್ಟಿ ಸ್ಪರ್ಧಿಗಳಾಗಿದ್ದು, ದೊಡ್ಮನೆಯ ಆಟ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಅಂದಹಾಗೆ, ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಧನರಾಜ್ ಆಚಾರ್, ಐಶ್ವರ್ಯಾ ಸಿಂದೋಗಿ, ಯಮುನಾ ಶ್ರೀನಿಧಿ, ತ್ರಿವಿಕ್ರಮ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ. ಅಧಿಕೃತವಾಗಿ ಇನ್ನೂ ಅನಾವರಣ ಆಗಬೇಕಿದೆ.

  • ದೊಡ್ಮನೆ ಶೋಗೂ ಮೊದಲೇ ಸ್ವರ್ಗ, ನರಕದ ಲುಕ್ ರಿವೀಲ್- ಸ್ಪರ್ಧಿಗಳು ಶಾಕ್

    ದೊಡ್ಮನೆ ಶೋಗೂ ಮೊದಲೇ ಸ್ವರ್ಗ, ನರಕದ ಲುಕ್ ರಿವೀಲ್- ಸ್ಪರ್ಧಿಗಳು ಶಾಕ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ರ ಶೋಗೆ (Bigg Boss Kannada 11) ಇಂದು (ಸೆ.29) ಸಂಜೆ ಪ್ರಾರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ದೊಡ್ಮನೆಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಶೋ ಪ್ರಸಾರಕ್ಕೂ ಮೊದಲೇ ದೊಡ್ಮನೆಯ ಸ್ಬರ್ಗ ಮತ್ತು ನರಕ ಝಲಕ್ ಅನ್ನು ವಾಹಿನಿ ರಿವೀಲ್ ಮಾಡಿದೆ.

    ಕಳೆದ 10 ಸೀಸನ್‌ಗಳಿಂದ ಬಿಗ್ ಬಾಸ್ ಮನೆ ಒಂದರಕ್ಕಿಂತ ಒಂದು ಅದ್ಧೂರಿಯಾಗಿ ತೋರಿಸಲಾಗಿತ್ತು. ಈ ಬಾರಿಯು ಮತ್ತಷ್ಟು ವಿಜೃಂಭಣೆಯಿಂದ ಬಿಗ್ ಬಾಸ್ ಮನೆಯನ್ನು ರೆಡಿ ಮಾಡಲಾಗಿದೆ. ಹೊಸ ಸಮಾಚಾರ ಏನೆಂದರೆ, ಈ ಬಾರಿ ಸ್ವರ್ಗ ಮತ್ತು ನರಕ ಎಂದು 2 ಕಾನ್ಸೆಸ್ಟ್‌ಗಳು ಇರುತ್ತವೆ.

    ಈ ಬಾರಿ ಕೂಡ ಹೊಸ ಥೀಮ್‌ನೊಂದಿಗೆ ದೊಡ್ಮನೆಯನ್ನು ವಾಹಿನಿ ಸ್ವರ್ಗ ಮತ್ತು ನರಕದಂತೆಯೇ ಸಿದ್ಧಪಡಿಸಿದ್ದಾರೆ. ಸ್ವರ್ಗದ ಮನೆ ಐಷರಾಮಿಯಾಗಿದ್ರೆ, ಇತ್ತ ನರಕದ ಮನೆ ಭಯಾನಕವಾಗಿದೆ. ಸದ್ಯದ ಕುತೂಹಲ ಏನಪ್ಪಾ ಅಂದರೆ, ಬಂದಿರುವ 17 ಸ್ಪರ್ಧಿಗಳು ಸ್ವರ್ಗಕ್ಕೆ ಯಾರು? ನರಕಕ್ಕೆ ಯಾರು ಎಂದು ಕಾದುನೋಡಬೇಕಿದೆ.

    ಇದೆಲ್ಲದರ ನಡುವೆ ಸುದೀಪ್ (Sudeep) ಸನ್‌ಗ್ಲಾಸ್ ಧರಿಸಿ `ಬಿಗ್ ಬಾಸ್’ ವೇದಿಕೆ ಸ್ಟೈಲೀಶ್ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳ ಡ್ಯಾನ್ಸ್‌ನ ಸಣ್ಣ ಝಲಕ್ ಶೇರ್ ಮಾಡಿದ್ದಾರೆ. ಮುಖ ತೋರಿಸದೇ ಇದ್ದರೂ ಡ್ಯಾನ್ಸ್ ಸಣ್ಣ ತುಣುಕು ಎಲ್ಲರ ಗಮನ ಸೆಳೆಯುತ್ತಿದೆ.

    ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಧನರಾಜ್ ಆಚಾರ್, ಐಶ್ವರ್ಯಾ ಸಿಂದೋಗಿ, ಯಮುನಾ ಶ್ರೀನಿಧಿ, ತ್ರಿವಿಕ್ರಮ್, ಶೀಶಿರ್, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ. ಇಂದು ಸಂಜೆ ಅಧಿಕೃತವಾಗಿ ವಾಹಿನಿ ಮೂಲಕ ಅನಾವರಣ ಆಗಬೇಕಿದೆ.

    ಇನ್ನೂ ಬಿಗ್ ಬಾಸ್ ಕಾರ್ಯಕ್ರಮವು ಪ್ರತಿದಿನ ರಾತ್ರಿ 9:30ಕ್ಕೆ ಪ್ರಸಾರವಾಗಲಿದ್ದು, ಈ ಬಾರಿ ವಿವಾದಿತ ಸ್ಪರ್ಧಿಗಳು ಕೂಡ ದೊಡ್ಮನೆಯಲ್ಲಿದ್ದಾರೆ. ಕಳೆದ ಬಾರಿ ಸೀಸನ್ 10 ಹೊಸ ಕ್ರಾಂತಿ ಹುಟ್ಟುಹಾಕಿತ್ತು. ಅದರಂತೆ ಬಿಗ್ ಬಾಸ್ ಸೀಸನ್ 11 ಯಾವ ಮಟ್ಟದಲ್ಲಿ ಸದ್ದು ಮಾಡಲಿದೆ ಕಾದುನೋಡಬೇಕಿದೆ.

  • Bigg Boss Kannada 11: ವೈರಲ್‌ ಆಗ್ತಿದೆ ದೊಡ್ಮನೆ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

    Bigg Boss Kannada 11: ವೈರಲ್‌ ಆಗ್ತಿದೆ ದೊಡ್ಮನೆ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

    ಟಿವಿ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸುದೀಪ್ (Sudeep) ನಿರೂಪಣೆಯ ಪವರ್‌ಫುಲ್ ಪ್ರೋಮೋ ಕೂಡ ರಿಲೀಸ್ ಆಗಿದೆ. ಈ ಬೆನ್ನಲ್ಲೇ, ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ವೈರಲ್ ಆಗ್ತಿದೆ. ಇದನ್ನೂ ಓದಿ:ರೆಬೆಲ್ ಸ್ಟಾರ್ ಸೊಸೆ ಅವಿವಗೆ ಸೀಮಂತ ಸಂಭ್ರಮ

    ಇದೇ ಸೆ.29ಕ್ಕೆ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಹೊಸ ಸೀಸನ್‌ನಲ್ಲಿ ಯಾರೆಲ್ಲಾ ದೊಡ್ಮನೆಗೆ ಬರಬಹುದು ಎಂದು ಒಂದಿಷ್ಟು ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದರಲ್ಲಿ ‘ಗಿಚ್ಚಿ ಗಿಲಿಗಿಲಿ 3’ ವಿನ್ನರ್ ಆದ ಹುಲಿ ಕಾರ್ತಿಕ್ (Huli Karthik) ಹೆಸರು ಸದ್ದು ಮಾಡುತ್ತಿದೆ. ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.

    ‘ಬೃಂದಾವನ’ ಸೀರಿಯಲ್ ನಟಿ ಅಮೂಲ್ಯ ಭಾರದ್ವಾಜ್ (Amulya Bharadwaj) ನಟನೆ ಮೂಲಕ ಮನಗೆದ್ದಿದ್ದಾರೆ. ಅವರು ಬೋಲ್ಡ್ ಫೋಟೋಶೂಟ್‌ಗಳ ಮೂಲಕ ಪಡ್ಡೆಹುಡುಗರ ನಿದ್ದೆಕದ್ದಿದ್ದಾರೆ. ಅವರು ಬಿಗ್‌ ಬಾಸ್‌ ಶೋಗೆ ಬರಲಿದ್ದಾರೆ ಎನ್ನಲಾಗಿದೆ.

    ‘ಒಲವಿನ ನಿಲ್ದಾಣ’ ಸೀರಿಯಲ್‌ನ ಹೀರೋ ಅಕ್ಷಯ್ ಕುಮಾರ್ ‘ಬಿಗ್’ ಮನೆಗೆ ಬರುವ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಲವರ್ ಬಾಯ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದನ್ನೂ ಓದಿ:ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?

    ಕಿರುತೆರೆ ನಟಿ ಭವ್ಯಾ ಗೌಡ (Bhavya Gowda) ಅವರು `ಗೀತಾ’ ಸೀರಿಯಲ್ ಮುಗಿದ ಮೇಲೆ ಬ್ರೇಕ್ ತೆಗೆದುಕೊಂಡಿದ್ದಾರೆ. ಫೋಟೋಶೂಟ್, ಬ್ರ್ಯಾಂಡ್ ಪ್ರಮೋಷನ್ ಅಂತ ಬ್ಯುಸಿಯಾಗಿದ್ದಾರೆ. ಇವರು ಬಿಗ್ ಬಾಸ್ ಬರುವ ಬಗ್ಗೆ ಗುಮಾನಿ ಹಬ್ಬಿದೆ. ಇನ್ನೊಂದು ಇವರು ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Amulya) ಅವರ ಸಂಬಂಧಿಯಾಗಿದ್ದಾರೆ.

    ಇನ್ನೂ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಹಾಡಿ ಸೈ ಎನಿಸಿಕೊಂಡಿರುವ ಗಾಯಕಿ ಐಶ್ವರ್ಯಾ ರಂಗರಾಜನ್ ಬರಲಿದ್ದಾರೆ ಎನ್ನಲಾಗಿದೆ. ಗೌರವ್ ಶೆಟ್ಟಿ, ದೀಪಕ್ ಗೌಡ, ತುಕಾಲಿ ಮಾನಸ, ವರುಣ್ ಆರಾಧ್ಯ ಸೇರಿದಂತೆ ಅನೇಕರ ಹೆಸರು ಚಾಲ್ತಿಯಲ್ಲಿದೆ. ಆದರೆ ಎಲ್ಲದಕ್ಕೂ ಶೋ ಶುರುವಾಗುವವರೆಗೂ ಕಾದುನೋಡಬೇಕಿದೆ.

  • ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ರೆಡಿ ಎಂದ ಕ್ವೀನ್ಸ್

    ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ರೆಡಿ ಎಂದ ಕ್ವೀನ್ಸ್

    ನ್ನಡ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳಿಗಾಗಿ ಹಲವರು ಕ್ರಿಕೆಟ್ ಪಂದ್ಯಾವಳಿಗಳಿವೆ. ಸಿಸಿಎಲ್, ಕೆಸಿಸಿ, ಟಿಪಿಎಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ರಿಕೆಟ್ ಟೂರ್ನಮೆಂಟ್‌ಗಳಿವೆ. ಆದರೆ ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗಳಿಲ್ಲ. ಹೀಗಾಗಿ ಕ್ರಿಯೇಟಿವ್ ಫ್ರೆಂಡ್ಸ್ ಕಂಪನಿ ‘ಕ್ವೀನ್ ಪ್ರೀಮಿಯರ್ ಲೀಗ್’ (Queens Premiere League) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಮಾಡೆಲ್ ಭಾಗವಹಿಸಲು ವೇದಿಕೆ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ ತಂಡದ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್‌ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಲೋಗೋ ಬಿಡುಗಡೆ ಮಾಡಿದ ಪುಷ್ಪಕುಮಾರಿ, ಕ್ರಿಕೆಟ್ ಹುಡುಗರಿಗೆ ಮಾತ್ರ ಎನ್ನುವ ಕಾಲವಿತ್ತು. ಆದರೆ ನಾವು ಅಂದು ಛಲ ಬಿಡದೆ ಆಡಿದ್ದೇವೆ. ಮಹಿಳೆಯರಿಗಾಗಿ ಈ ರೀತಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಖುಷಿ ಎಂದರು. ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಜೂನ್ ತಿಂಗಳಲ್ಲಿ ಈ ಪಂದ್ಯಾವಳಿ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಕಲಾವಿದರ ಜೊತೆಗೆ ಆ್ಯಂಕರ್ಸ್, ಮಾಡೆಲ್‌ಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶವಿದೆ. ಇವರನ್ನು ನೋಡಿಕೊಂಡು ಹೊಸ ಜನರೇಷನ್ ಕ್ರಿಕೆಟ್ ಆಡಲು ಪ್ರೇರಣೆಯಾಗಲಿ. ಈ ಪಂದ್ಯಾವಳಿ ನಾವು ಮಾಡುತ್ತಿಲ್ಲ. ಇದರಿಂದ ಬಂದ ದುಡ್ಡನ್ನು ನನ್ನ ತಂಡ ರಂಗಸೌರಭಕ್ಕೆ ಮೀಸಲು ಇಡಲಾಗುತ್ತದೆ. ಶಾಲಾ ಕಾಲೇಜು ಮಟ್ಟದಿಂದಲೇ ಹಲವು ಪ್ರತಿಭೆಗಳನ್ನು ರಂಗಭೂಮಿಗೆ ಕರೆತಂದು ನಟನೆಯನ್ನು ಕಲಿಸುವ ಕೆಲಸವನ್ನು ರಂಗಸೌರಭ ಮಾಡುತ್ತಿದೆ. ಹೀಗಾಗಿ ಈ ಕ್ರಿಕೆಟ್ ತಂಡದಿಂದ ಬಂದ ಲಾಭವನ್ನು ಇಲ್ಲಿಗೆ ನೀಡಲಾಗುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲು ಹೆಚ್ಚು ನಟಿಮಣಿಯರು ಹೆಚ್ಚಾಗಿ ಕೈ ಜೋಡಿಸಬೇಕು ಎಂದರು.

    ನಟಿ ಭವ್ಯಾ ಗೌಡ (Bhavya Gowda) ಮಾತನಾಡಿ, ಈ ಕಾನ್ಸೆಪ್ಟ್ ನನ್ನ ಮೈಂಡ್‌ನಲ್ಲಿ ತುಂಬಾ ತಿಂಗಳಿನಿಂದ ಇತ್ತು. ಆರ್‌ಸಿಬಿ ಹುಡುಗಿಯರು ಯಾವಾಗ ಕಪ್ ಎತ್ತಿದರೋ ಆಗ ನಮ್ಮ ಜೋಶ್ ಜಾಸ್ತಿಯಾಯ್ತು. ಹೆಣ್ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸಲು ಶುರು ಮಾಡಿದ್ದೇವೆ. ಈ ಕ್ರಿಕೆಟ್ ಪಂದ್ಯಾವಳಿಯನ್ನೂ ಒಂದೊಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡುತ್ತಿದ್ದೇವೆ. ಹೆಣ್ಮಕ್ಕಳಿಗೆ ಬ್ಯಾಟು ಬಾಲ್ ಹಿಡಿದು ಫೀಲ್ಡ್‌ಗೆ ಇಳಿಯುತ್ತಿದ್ದೇವೆ. ಗಂಡು ಮಕ್ಕಳು ಚಿಯರ್ ಅಪ್ ಮಾಡಲು ರೆಡಿಯಾಗಿ ಎಂದರು.

    ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಕ್ವೀನ್ಸ್ ಗಳ ಮನರಂಜನೆಗಾಗಿ ಹಾಗೂ ಒಂದೊಳ್ಳೆ ಉದ್ದೇಶ ಇಟ್ಟುಕೊಂಡು ಈ ಪಂದ್ಯಾವಳಿ ನಡೆಸಲಾಗುತ್ತಿದೆ. ಕ್ವೀನ್ ಪ್ರೀಮಿಯರ್ ಲೀಗ್ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಸದ್ಯ ತಂಡದ ಲೋಗೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮುಂದಿನ ದಿನಗಳಲ್ಲಿ ಜೆರ್ಸಿ ಲಾಂಚ್, ಟ್ರೋಫಿ ಬಿಡುಗಡೆ ಮಾಡಲಾಗುತ್ತದೆ.

  • ಟಿಪಿಎಲ್ ಆಯ್ತು ಈಗ IPT12ಗೆ ಚಾಲನೆ ಕೊಟ್ಟ ಎನ್ 1 ಕ್ರಿಕೆಟ್ ಅಕಾಡೆಮಿ

    ಟಿಪಿಎಲ್ ಆಯ್ತು ಈಗ IPT12ಗೆ ಚಾಲನೆ ಕೊಟ್ಟ ಎನ್ 1 ಕ್ರಿಕೆಟ್ ಅಕಾಡೆಮಿ

    ಕಿರುತೆರೆ ಕಲಾವಿದರಿಗಾಗಿ ಟಿಪಿಎಲ್-ಟೆಲಿವಿಷನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನ್‌ಮೆಂಟ್ ನಡೆಸಿಕೊಂಡು ಬರುತ್ತಿರುವ ಎನ್ 1 ಕ್ರಿಕೆಟ್ ಅಕಾಡೆಮಿ ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಯಶಸ್ವಿಯಾಗಿ ಮೂರು ಟಿಪಿಎಲ್ ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ.ಆರ್ ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ಕೊಟ್ಟಿದ್ದಾರೆ. ಇದನ್ನೂ ಓದಿ:ಫಹಾದ್ ಫಾಸಿಲ್ ಸಿನಿಮಾ ನೋಡಿ ಹೊಗಳಿದ ಸಮಂತಾ

    ಡಾಕ್ಟರ್ಸ್, ಲಾಯರ್ಸ, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್. ಈ ಪಂದ್ಯಾವಳಿ ಆರಂಭಕ್ಕೂ ಮುನ್ನ ಲೋಗೋ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಈ ಕಾರ್ಯಕ್ರಮ ನೆರವೇರಿದೆ. ನಟಿಯರಾದ ತನಿಷಾ ಕುಪ್ಪಂಡ, ಭವ್ಯಾ ಗೌಡ, ಎನ್ 1 ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸುನಿಲ್ ಕುಮಾರ್, ಶೈಲೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಬಳಿಕ ನಟಿ ತನಿಷಾ ಕುಪ್ಪಂಡ (Tanisha Kuppanda) ಮಾತನಾಡಿ, ಎನ್ 1 ಕ್ರಿಕೆಟ್ ಅಕಾಡೆಮಿ ಮೂಲಕ ಹಲವು ಟೂರ್ನಮೆಂಟ್ ಮಾಡುವ ಮೂಲಕ ಸುನಿಲ್ ಅವರು ಖ್ಯಾತಿ ಪಡೆದಿದ್ದಾರೆ. ನಾನು ಇದಕ್ಕೂ ಮುನ್ನ ಟಿಪಿಎಲ್ ಸೀಸನ್ ಒಂದರಲ್ಲಿ ಟೀಂ ಒಂದಕ್ಕೆ ಬ್ರ‍್ಯಾಂಡ್ ಅಂಬಾಸಿಡರ್ ಆಗಿದ್ದೆ. ಯಾವುದೇ ಪ್ರೊಫೆಷನ್ ಆಗಲಿ ಕ್ರಿಕೆಟ್ ಅಂದರೆ ಪ್ರಾಣ ಕೊಡುವವರು ಬಹಳಷ್ಟು ಜನ ಇದ್ದಾರೆ. ಈ ಟೂರ್ನಮೆಂಟ್ ವಿಶೇಷತೆ ಏನೆಂದರೆ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಇದರಲ್ಲಿ ಭಾಗಿಯಾಗಬಹುದು. ಎನ್ 1 ಕ್ರಿಕೆಟ್ ಅಕಾಡೆಮಿ ಅಂದರೆ ಹೊಸ ಪ್ರಯತ್ನ. ಈ ಮೂಲಕ ಮಾಧ್ಯಮದವರು, ಡಾಕ್ಟರ್ಸ್, ಲಾಯರ್ಸ, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರಿಗೆ ಏರ್ಪಡಿಸಲಾಗಿದೆ ಎಂದರು.

    ಶೈಲೇಶ್ ಅವರು ಮಾತನಾಡಿ, ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಚೆನ್ನಾಗಿ ಆಡುವ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ತಂಡಗಳು, ಸೇರಿದಂತೆ ಮತ್ತಿತರ ಅಪ್ ಡೇಟ್ ನೀಡಲಾಗುತ್ತದೆ.