Tag: bhavya gowda

  • BBK 11: ನನ್ನ ಆಟಕ್ಕೆ ತ್ರಿವಿಕ್ರಮ್‌ ತೊಂದರೆ ಆಗಿದ್ದಾರೆ: ವರಸೆ ಬದಲಿಸಿದ ಭವ್ಯಾ

    BBK 11: ನನ್ನ ಆಟಕ್ಕೆ ತ್ರಿವಿಕ್ರಮ್‌ ತೊಂದರೆ ಆಗಿದ್ದಾರೆ: ವರಸೆ ಬದಲಿಸಿದ ಭವ್ಯಾ

    ‘ಬಿಗ್ ಬಾಸ್’ (Bigg Boss Kannada 11) ಮನೆಯ ಆಟ ಇನ್ನೇನು 2 ವಾರಗಳಲ್ಲಿ ಕೊನೆಗೊಳ್ಳಲಿದೆ. ಮನೆಯಲ್ಲಿ ಸ್ಪರ್ಧಿಗಳ ಆಟ ರೋಚಕವಾಗಿದೆ. ಹೀಗಿರುವಾಗ ಮನೆಯಲ್ಲಿ ತಮ್ಮ ಜರ್ನಿಗೆ ಯಾರು ಅಡ್ಡಿಯಾಗಿದ್ದಾರೆ ಎಂದು ತಿಳಿಸಬೇಕು ಎಂದು ಸುದೀಪ್ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದ್ದಾರೆ. ಆಗ ನನ್ನ ಆಟಕ್ಕೆ ತ್ರಿವಿಕ್ರಮ್ (Trivikram) ತೊಂದರೆ ಆಗಿದ್ದಾರೆ ಎಂದು ಭವ್ಯಾ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ಹಿರಿಯ ನಟ ಸರಿಗಮ ವಿಜಯ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ವಾರಾಂತ್ಯದ ಎಪಿಸೋಡ್‌ನಲ್ಲಿ ಬಣ್ಣದಿಂದಲೇ ಮಾರಿಹಬ್ಬ ಶುರುವಾಗಿದೆ. ಸುದೀಪ್‌ ಕೊಟ್ಟ ಟಾಸ್ಕ್‌ನಲ್ಲಿ ತ್ರಿವಿಕ್ರಮ್ ನನ್ನ ಆಟಕ್ಕೆ ಅಡ್ಡಿ ಎಂದಿದ್ದಾರೆ. ಅವರು ಬಳಸುವ ತಂತ್ರಗಾರಿಕೆ ಮತ್ತು ಮಾತನಾಡುವ ರೀತಿಯಾಗಿರಲಿ ಅದು ನನ್ನ ಆಟಕ್ಕೂ ತೊಂದರೆ ಆಗಿದೆ ಎಂದು ತ್ರಿವಿಕ್ರಮ್‌ ವಿರುದ್ಧ ಭವ್ಯಾ ಮಾತನಾಡಿದ್ದಾರೆ. ಸುದೀಪ್ ಎದುರಲ್ಲಿ ಮುಲಾಜಿಲ್ಲದೇ ಕೆಲವು ವಿಚಾರಗಳನ್ನು ಭವ್ಯಾ (Bhavya Gowda) ಹೇಳಿದ್ದಾರೆ. ತ್ರಿವಿಕ್ರಮ್ (Trivikram) ಮುಖಕ್ಕೆ ಬಣ್ಣದ ಬಾಂಬ್ ಸಿಡಿಸುವಂತೆ ಮಾಡಿದ್ದಾರೆ.

    ಆಗ ಭವ್ಯಾ ಮಾತು ಕೇಳಿ ತ್ರಿವಿಕ್ರಮ್ ಅವರಿಗೆ ಜ್ಞಾನೋದಯ ಆಗಿದೆ. ಮಾರಿಹಬ್ಬ ಶುರುವಾಗಿದೆ. ಅದರ ಬಣ್ಣ ಈಗ ಕಾಣಿಸುತ್ತಿದೆ ಎಂದು ತ್ರಿವಿಕ್ರಮ್ ಅವರು ಒಪ್ಪಿಕೊಂಡಿದ್ದಾರೆ. ಭವ್ಯಾ ಬಣ್ಣ ಈಗ ಗೊತ್ತಾಯ್ತು ಎಂಬರ್ಥದಲ್ಲಿ ತ್ರಿವಿಕ್ರಮ್ ಹೇಳಿದ್ದಾರೆ.

    ಆ ನಂತರ ಗೌತಮಿ, ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಅವರು ಹನುಮಂತ ಹೆಸರು ಹೇಳಿದ್ದಾರೆ. ಅವರು ನಮ್ಮ ಆಟಕ್ಕೆ ಅಡ್ಡಿ ಎಂದಿದ್ದಾರೆ. ನನ್ನ ಗೆಲವು ಅಂತ ನೋಡಿದಾಗ ಹನುಮಂತ ನನಗೆ ಅಡ್ಡವಾಗಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ ಗೌತಮಿ. ಬಳಿಕ ಚೈತ್ರಾ ಮಾತನಾಡಿ, ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಂದು ಆಗಾಗ ಸ್ವಿಚ್ ಆಫ್ ಆಗುತ್ತಿದ್ದೇನೆ ಎಂದು ಹೇಳಿ ಮನೆನೇ ಸ್ವಿಚ್ ಆಫ್ ಮಾಡುತ್ತಿದ್ದಾರೆ ಎಂದು ಹನುಮಂತಗೆ ಕೆಣಕಿದ್ದಾರೆ. ಇತ್ತ ತ್ರಿವಿಕ್ರಮ್ ಅವರು ಹನುಮಂತ ಎಲ್ಲರಿಗೂ ಹಲ್ವಾ ತಿನಿಸುತ್ತಿದ್ದಾರೆ ಎಂದಿದ್ದಾರೆ. ಇದಾದ ನಂತರ ಹನುಮಂತ ಅವರ ಮುಖಕ್ಕೂ ಬಣ್ಣದ ಬಾಂಬ್ ಸಿಡಿಸಿದ್ದಾರೆ.

    ಆಗ ನಾನು ಆಟ ಶುರು ಮಾಡಿ ಬಹಳ ದಿನ ಆಗಿದೆ ಸರ್. ಅದು ಇವತ್ತು ಇವರಿಗೆ ಗೊತ್ತಾಗಿದೆ ಎಂದು ಸುದೀಪ್ ಮುಂದೆ ಹನುಮಂತ ಮನೆ ಮಂದಿಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಮನೆ ಮಂದಿಗೆ ಹನುಮಂತ ಠಕ್ಕರ್ ಕೊಟ್ಟಿದ್ದಾರೆ.

  • BBK 11: ಗೆಲುವಿಗಾಗಿ ವರಸೆ ಬದಲಿಸಿದ ಭವ್ಯಾಗೆ ಕಿವಿಹಿಂಡಿದ ತ್ರಿವಿಕ್ರಮ್‌

    BBK 11: ಗೆಲುವಿಗಾಗಿ ವರಸೆ ಬದಲಿಸಿದ ಭವ್ಯಾಗೆ ಕಿವಿಹಿಂಡಿದ ತ್ರಿವಿಕ್ರಮ್‌

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ (Bigg Boss Kannada 11) ತ್ರಿವಿಕ್ರಮ್ ಹಾಗೂ ಭವ್ಯಾ (Bhavya Gowda) ನಡುವೆ ಉತ್ತಮ ಒಡನಾಟವಿದೆ. ಈ ಗೆಳೆತನ ಇತ್ತೀಚೆಗೆ ದೂರಾದಂತೆ ಕಂಡರೂ ಮತ್ತೆ ಇಬ್ಬರೂ ಒಂದಾಗುತ್ತಿದ್ದಾರೆ. ಇಷ್ಟು ದಿನ ಗೆಳತಿ ಭವ್ಯಾ ತಪ್ಪುಗಳನ್ನು ತ್ರಿವಿಕ್ರಮ್‌ (Trivikram) ಹೇಳುತ್ತಿರಲಿಲ್ಲ. ಈಗ ಅವರು ಓಪನ್ ಆಗಿ ತ್ರಿವಿಕ್ರಮ್ ತಪ್ಪುಗಳನ್ನು ಭವ್ಯಾಗೆ ಹೇಳುತ್ತಿದ್ದಾರೆ. ಭವ್ಯಾ ಮಾಡಿದ ತಪ್ಪುವೊಂದನ್ನು ಎತ್ತಿ ತೋರಿಸಿದ್ದಾರೆ.

    ನಿನ್ನೆಯ ಸಂಚಿಕೆಯಲ್ಲಿ ಟಾಸ್ಕ್ ಆಡುವಾಗ ಭವ್ಯಾ ಮೇಲೆ ಅಟ್ಯಾಕ್ ಮಾಡಲು ಸಹಸ್ಪರ್ಧಿಗಳು ಬಂದರು. ಆಗ ಅವರು ಹೊಟ್ಟೆ ನೋವಿದೆ ಎಂದು ರಾಗ ತೆಗೆದರು. ಇದಾದ ಮರುಕ್ಷಣವೇ ಗೌತಮಿ ಮೇಲೆ ಭವ್ಯಾ ಅಟ್ಯಾಕ್ ಮಾಡಲು ಮುಂದಾದರು. ಈಗ ಹೊಟ್ಟೆ ನೋವು ಎಲ್ಲೋಯ್ತು ಎಂದು ಗೌತಮಿ ಗುಡುಗಿದರು. ಆಗ ಭವ್ಯಾ ಅವರು ನಾಟಕ ಮಾಡುತ್ತಿದ್ದಾರೆ ಎಂದು ಮನೆ ಮಂದಿಗೆ ಅನಿಸಿದೆ. ಈ ವಿಚಾರವಾಗಿ ತ್ರಿವಿಕ್ರಮ್ ಹಾಗೂ ಭವ್ಯಾ ನಡುವೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ:ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ – ಡಿವೋರ್ಸ್‌ ವದಂತಿ ಬೆನ್ನಲ್ಲೇ ಮೌನ ಮುರಿದ ಧನಶ್ರೀ

    ನನಗೆ ಆಟದಿಂದಾಗಿ ಫ್ರಸ್ಟ್ರೇಷನ್ ಆಯಿತು. ನಾನು ಏನು ಮಾಡುತ್ತಿದ್ದೇನೆ ಎಂಬುದು ನನ್ನ ಅರಿವಿಗೆ ಬರಲಿಲ್ಲ. ಡಾಕ್ಟರ್ ಬಳಿ ಹೋದಾಗ ಅವರು ಎಲ್ಲವೂ ಚೆನ್ನಾಗಿಯೇ ಇದೆ ಎಂದರು. ನನಗೇನು ಆಗಿಲ್ಲ ಎಂದು ಹೇಳಿ ನಾನು ಬಂದೆ ಎಂದು ಭವ್ಯಾ ಹೇಳಿಕೊಂಡರು. ನೀನು ಮಾಡಿದ್ದು ನಾಟಕ ಎಂದು ಎಲ್ಲರಿಗೂ ಅನಿಸಿತು ಎಂದು ತಪ್ಪನ್ನು ತಿದ್ದುವ ಕೆಲಸ ಮಾಡಿದರು ತ್ರಿವಿಕ್ರಮ್. ಹತಾಶೆಯಿಂದ ಈ ರೀತಿ ಆಯಿತು ಎಂದು ಭವ್ಯಾ ಮತ್ತೆ ತ್ರಿವಿಕ್ರಮ್‌ಗೆ ಸ್ಪಷ್ಟನೆ ಕೊಡುವ ಕೆಲಸ ಮಾಡಿದರು.

    ಭವ್ಯಾ, ತ್ರಿವಿಕ್ರಮ್, ಚೈತ್ರಾ, ಮೋಕ್ಷಿತಾ, ಧನರಾಜ್ ಕೂಡ ನಾಮಿನೇಷನ್ ಲಿಸ್ಟ್‌ನಲ್ಲಿದ್ದಾರೆ. ವೀಕೆಂಡ್‌ನಲ್ಲಿ ಒಬ್ಬರು ದೊಡ್ಮನೆಯಿಂದ ಹೊರಹೋಗುವುದು ಖಚಿತ. ಎಲ್ಲದಕ್ಕೂ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.

  • BBK 11: ಭವ್ಯಾ ಇಲ್ಲಿಯವರೆಗೆ ಬರಲು ನಾನೇ ಕಾರಣ- ವರಸೆ ಬದಲಿಸಿದ ತ್ರಿವಿಕ್ರಮ್

    BBK 11: ಭವ್ಯಾ ಇಲ್ಲಿಯವರೆಗೆ ಬರಲು ನಾನೇ ಕಾರಣ- ವರಸೆ ಬದಲಿಸಿದ ತ್ರಿವಿಕ್ರಮ್

    ಬಿಗ್‌ ಬಾಸ್‌ ಮನೆಯಲ್ಲಿ (BBK 11) ಪ್ರೇಮ ಪಕ್ಷಿಗಳಾಗಿದ್ದ ಭವ್ಯಾ (Bhavya Gowda) ಮತ್ತು ತ್ರಿವಿಕ್ರಮ್‌ (Trivikram) ದೂರ ದೂರ ಆಗಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು ಸ್ಪರ್ಧಿಗಳ ಫ್ಯಾಮಿಲಿ ಎಂಟ್ರಿ. ತ್ರಿವಿಕ್ರಮ್ ತಾಯಿ ಆಗಮಿಸಿ ಭವ್ಯಾನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ತ್ರಿವಿಕ್ರಮ್ ಅವರು ಭವ್ಯಾರಿಂದ ದೂರ ಆಗುವ ಪ್ರಯತ್ನದಲ್ಲಿದ್ದಾರೆ. ಈ ಮಧ್ಯೆ ಅವರು ಆಡಿದ ಮಾತೊಂದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ:ಮದುವೆ ಯಾವಾಗ? ಎಂದಿದ್ದಕ್ಕೆ ನಾಚಿ ನೀರಾದ ರಮ್ಯಾ

    ಭವ್ಯಾ ಹಾಗೂ ತ್ರಿವಿಕ್ರಮ್ ಮಧ್ಯೆ ಉತ್ತಮ ಒಡನಾಟ ಇತ್ತು. ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದರು. ಒಬ್ಬರ ನೆರಳು ಒಬ್ಬರ ಮೇಲೆ ಇತ್ತು. ಇತ್ತೀಚೆಗೆ ಕುಟುಂಬದವರು ಬಂದಾಗ ತ್ರಿವಿಕ್ರಮ್‌ಗೆ ಅವರ ತಾಯಿ ಬುದ್ಧಿ ಮಾತು ಹೇಳಿ ಹೋಗಿದ್ದರು. ಅಲ್ಲದೆ, ಸುದೀಪ್ ಕಡೆಯಿಂದಲೂ ಈ ವಿಚಾರವಾಗಿ ಸಾಕಷ್ಟು ಸಲಹೆ ನೀಡಿದ್ದರು. ಈಗ ತ್ರಿವಿಕ್ರಮ್ ಅವರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

    ಭವ್ಯಾಗೆ ಏನೇ ವಿಚಾರ ಇದ್ದರೂ ನೇರವಾಗಿ ಹೇಳುವ ಕೆಲಸವನ್ನೂ ಮಾಡಿದ್ದಾರೆ. ಇದು ಭವ್ಯಾಗೆ ಬೇಸರ ಮೂಡಿಸಿದೆ.  ಹಾಗಾದರೆ ಭವ್ಯಾ ಇಲ್ಲಿಯವರೆಗೆ ಬರೋಕೆ ತ್ರಿವಿಕ್ರಮ್ ಅವರು ಕಾರಣವಾ? ಹೀಗೊಂದು ಪ್ರಶ್ನೆ ಹುಟ್ಟುಹಾಕುವಂಥ ಮಾತು ಅವರ ಕಡೆಯಿಂದ ಬಂದಿದೆ. ನಿನ್ನೆಯ (ಜ.6) ಸಂಚಿಕೆಯಲ್ಲಿ ತ್ರಿವಿಕ್ರಮ್ ಹಾಗೂ ರಜತ್ ಅವರು ಕುಳಿತು ಮಾತನಾಡುತ್ತಿದ್ದರು. ಮನೆಗೆ ಬಂದು ಕಾಂಪಿಟೇಟರ್‌ನ ರೆಡಿ ಮಾಡಿ ನನಗೆ ಎದುರಾಳಿಯಾಗಿ ಬಿಟ್ಟುಕೊಂಡಂತೆ ಆಯಿತು ಎಂದರು ತ್ರಿವಿಕ್ರಮ್. ಅಂದರೆ, ಭವ್ಯಾನ ಒಳ್ಳೆಯ ಎದುರಾಳಿಯನ್ನಾಗಿ ಮಾಡಿ ಈಗ ಅವರ ಎದುರೇ ನಿಲ್ಲುವಂತೆ ಮಾಡಿಕೊಂಡಿದ್ದಾರೆ ಎಂಬರ್ಥದಲ್ಲಿ ತ್ರಿವಿಕ್ರಮ್‌ ಮಾತನಾಡಿದ್ದಾರೆ ಎಂದು ಫ್ಯಾನ್ಸ್‌ ಊಹಿಸಿದ್ದಾರೆ. ಒಟ್ನಲ್ಲಿ ಚೆನ್ನಾಗಿದ್ದ ಜೋಡಿಗಳ ನಡುವೆ ಬಿರುಕು ಮೂಡಿದೆ.

  • BBK 11: ಟಾಸ್ಕ್‌ನಲ್ಲಿ ರೊಚ್ಚಿಗೆದ್ದ ಸ್ಪರ್ಧಿ- ಹನುಮಂತನ ಬೆನ್ನಿಗೆ ಬಾರಿಸಿದ ಭವ್ಯಾ

    BBK 11: ಟಾಸ್ಕ್‌ನಲ್ಲಿ ರೊಚ್ಚಿಗೆದ್ದ ಸ್ಪರ್ಧಿ- ಹನುಮಂತನ ಬೆನ್ನಿಗೆ ಬಾರಿಸಿದ ಭವ್ಯಾ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇದೀಗ 100ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆಗೆ ಟಿಕೆಟ್ ಬಾಚಿಕೊಳ್ಳಲು 9 ಸ್ಪರ್ಧಿಗಳ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಇದೀಗ ಬಾಲ್ ಟಾಸ್ಕ್‌ನಲ್ಲಿ ಭವ್ಯಾ (Bhavya Gowda) ರೊಚ್ಚಿಗೆದ್ದಿದ್ದಾರೆ. ಆಟ ಆಡುವ ಭರದಲ್ಲಿ ಹನುಮಂತನ (Hanumantha) ಬೆನ್ನಿಗೆ ಭವ್ಯಾ ಬಾರಿಸಿದ್ದಾರೆ. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

    ಸಾಕಷ್ಟು ಚೆಂಡುಗಳನ್ನು ಸಂಗ್ರಹಿಸಿದ್ದ ಅವರು ಒಂದಷ್ಟು ತಂತ್ರಗಳನ್ನು ಬಳಸಲು ಪ್ರಯತ್ನಿಸಿದರು. ಬಟ್ಟೆಯಿಂದ ಬಾಸ್ಕೆಟ್ ಮುಚ್ಚಿಕೊಳ್ಳುವಂತಿಲ್ಲ ಎಂದು ಕ್ಯಾಪ್ಟನ್ ರಜತ್ ಹೇಳಿದರು. ಹಾಗಾಗಿ ಚೆಂಡುಗಳನ್ನು ಕಾಪಾಡಿಕೊಳ್ಳುವುದು ಇನ್ನಷ್ಟು ಕಷ್ಟ ಆಯಿತು. ಆ ಸಂದರ್ಭವನ್ನು ಬಳಸಿಕೊಂಡು ಹನುಮಂತ ಟಾಸ್ಕ್ ವೇಳೆ, ಭವ್ಯಾ ಸಂಗ್ರಹಿಸಿದ್ದ ಬಾಲ್ ಕಸಿಯಲು ಬಂದಿದ್ದಾರೆ. ಇದರಿಂದ ಹನುಮಂತ ಹಾಗೂ ಭವ್ಯಾ ಅವರ ಮಧ್ಯೆ ನಡೆದ ಗಲಾಟೆ ಕೈ, ಕೈ ಮಿಲಾಯಿಸೋ ಹಂತಕ್ಕೆ ತಲುಪಿದೆ.

    ಚೈತ್ರಾ, ಗೌತಮಿ, ಭವ್ಯಾ, ಧನರಾಜ್, ಹನುಮಂತ ಅವರಲ್ಲಿ ಬಾಲ್‌ಗಳನ್ನು ಬುಟ್ಟಿಗೆ ಹಾಕುವ ಹೋರಾಟ ನಡೆದಿದೆ. ಇದರಲ್ಲಿ ಪ್ರತಿಯೊಬ್ಬರು ಎದುರಾಳಿಯ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಕಿತ್ತುಕೊಳ್ಳಲು ಮುಂದಾಗುತ್ತಾರೆ. ಇದೇ ವೇಳೆ, ಹನುಮಂತ ಅವರು ಭವ್ಯಾ ಅವರ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಹಿಡಿದು ಎಳೆಯುತ್ತಾರೆ. ಹನುಮಂತ ತನ್ನ ಬುಟ್ಟಿಗೆ ಕೈ ಹಾಕಿದ್ದಕ್ಕೆ ಸಿಟ್ಟಿಗೆದ್ದ ಸ್ಪರ್ಧಿ ಭವ್ಯಾ ಅವರ ಟಾಸ್ಕ್ನಲ್ಲಿ ಹನುಮಂತು ಅವರ ಬೆನ್ನಿನ ಮೇಲೆ ಬಾರಿಸಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಕಾಲ್ತುಳಿತ ಪ್ರಕರಣ: ಮೃತ ರೇವತಿ ಪುತ್ರನನ್ನು ಭೇಟಿಯಾದ ಅಲ್ಲು ಅರ್ಜುನ್

    ಭವ್ಯಾ ಅವರು ಹೊಡೆದಿದ್ದಕ್ಕೆ ಖಂಡಿಸಿದ ಹನುಮಂತ ಅದನ್ನ ಕ್ಯಾಪ್ಟನ್ ರಜತ್ ಅವರ ಗಮನಕ್ಕೆ ತರುತ್ತಾರೆ. ರಜತ್ ಅವರು ಭವ್ಯಾ ನೀವು ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದು, ಆಟದಲ್ಲಿ ಪಾಜ್ ಕೊಡುತ್ತಾರೆ. ಇಷ್ಟಾದರೂ ಭವ್ಯಾ ಅವರು ಹನುಮಂತು ಮೇಲೆ ಕೈ ಮಾಡಿದ್ದು, ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ.

    ಇನ್ನೂ ಟಾಸ್ಕ್ ಮುಗಿದ ಬಳಿಕ ಭವ್ಯಾ ಹನುಮಂತನ ಬಳಿ ಹೋಗಿ ಕಾಲಿಗೆ ನಮಿಸುತ್ತಾರೆ. ತಪ್ಪಾಯ್ತು ಕ್ಷಮಿಸಿ ಬೇಕಂತ ಮಾಡಿದ್ದಲ್ಲ ಎಂದು ಹನುಮಂತನ ಬಳಿ ಭವ್ಯಾ ಕ್ಷಮೆಯಾಚಿಸಿದ್ದಾರೆ. ಈ ಕುರಿತು ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ನಡೆಯೇನು? ಎಂದು ಕಾಯಬೇಕಿದೆ.

  • BBK 11: ತ್ರಿವಿಕ್ರಮ್‌ ಡೇಂಜರ್‌ ಎಂದ ಭವ್ಯಾ ಗೌಡ

    BBK 11: ತ್ರಿವಿಕ್ರಮ್‌ ಡೇಂಜರ್‌ ಎಂದ ಭವ್ಯಾ ಗೌಡ

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಈ ವಾರ ಫ್ಯಾಮಿಲಿ ರೌಂಡ್‌ನಿಂದ ಜಾಲಿ ಮೂಡ್‌ನಲ್ಲಿದ್ದ ಸ್ಪರ್ಧಿಗಳಿಗೆ ಸುದೀಪ್ ಶಾಕ್ ಕೊಟ್ಟಿದ್ದಾರೆ. ಎಂದಿನಂತೆ ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ ಈ ವಾರವು ಸ್ಪರ್ಧಿಗಳಿಗೆ ಚಟುವಟಿಕೆ ಒಂದನ್ನು ಕೊಟ್ಟಿದ್ದಾರೆ. ಅದುವೆ ಈ ಬಿಗ್ ಬಾಸ್ ಮನೆಯಲ್ಲಿ ಯಾರು ಡೇಂಜರ್, ಯಾರು ಜೋಕರ್? ಎಂದು ಮನೆ ಮಂದಿಗೆ ಕಿಚ್ಚ ಕೇಳಿದ್ದಾರೆ. ಈ ವೇಳೆ, ಕಿಚ್ಚನ  ಮುಂದೆ ತ್ರಿವಿಕ್ರಮ್‌ (Trivikram) ಡೇಂಜರ್‌ ಎಂದು ಹೇಳಿದ್ದಾರೆ.

    ಹೌದು, ಈ ಜರ್ನಿಯಲ್ಲಿ ನೀವು ಯಾರು ಅಂತ ಇನ್ನೊಬ್ಬರಿಗೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಒಂದು ಬೋರ್ಡ್ ಮೇಲೆ ಸ್ಪರ್ಧಿಗಳು ಈ ಮನೆಯಲ್ಲಿ ಯಾರು ಡೇಂಜರ್? ಯಾರು ಜೋಕರ್? ಹಾಗೂ ಯಾರು ಕಾಂಪಿಟೆಟರ್? ಅಂತ ಬರೆಯಲಾಗಿದೆ. ಅದರಂತೆ ಈ ಮನೆಯಲ್ಲಿರೋ ಸ್ಪರ್ಧಿಗಳಿಗೆ ಏನೇನೂ ಹೋಗುತ್ತೆ ಅಂತ ಬಾಣದ ಮೂಲಕ ಚುಚ್ಚಬೇಕು. ಅದರಂತೆ ಭವ್ಯಾ ಗೌಡ ಅವರು ‘ಡೇಂಜರ್’ ಜಾಗಕ್ಕೆ ತ್ರಿವಿಕ್ರಮ್ ಫೋಟೋವನ್ನು ಅಂಟಿಸಿದ್ದಾರೆ. ತ್ರಿವಿಕ್ರಮ್‌ ಡೇಂಜರ್‌ ಎಂದು ಭವ್ಯಾ ಹೇಳಿದ್ದಾರೆ.

    ಉಳಿದಂತೆ ರಜತ್ ಹಾಗೂ ಹನುಮಂತ ಚೈತ್ರಾಗೆ ಜೋಕರ್ ಪಟ್ಟ ಕೊಟ್ಟಿದ್ದಾರೆ. ಚೈತ್ರಕ್ಕಾಗೆ ನಾನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅಂತ ಹನುಮಂತ ಹೇಳಿದ್ದಾರೆ. ಬಳಿಕ ಮಾತಾಡಿ ರಜತ್ ಅವರು ಚೈತ್ರಾ ಅವರು ಬಂದು 14 ವಾರ ಆಗಿದೆ. ಇಲ್ಲಿತನಕ ಅವರು ಇಷ್ಟು ಸಂಪಾದನೆ ಮಾಡಿದ್ದಾರೆ ಎಂದು ಈ ಚಟುವಟಿಕೆಯಿಂದ ತಿಳಿಯುತ್ತಿದೆ. ಹೀಗಾಗಿ ಅವರನ್ನು ಜೋಕರ್ ತರ ನೋಡುತ್ತಿದ್ದೇನೆ ಅಂತ ಹೇಳಿದ್ದಾರೆ.

    ರಜತ್ ಮಾತಿಗೆ ಕೂಡಲೇ ಮಾತಾಡಿದ ಚೈತ್ರಾ ಕುಂದಪುರ, ಅದೇ ಜೋಕರ್ ಆಸ್ಕರ್ ಗೆದ್ದಿದ್ದನ್ನು ನಾನು ಕೇಳಿದ್ದೀನಿ, ಹೀಗಾಗಿ ಇವರುಗಳ ಅಭಿಪ್ರಾಯ ನನಗೆ ದೊಡ್ಡದು ಅಂತ ಅನಿಸುವುದೇ ಇಲ್ಲ ಅಂತ ಹೇಳಿದ್ದಾರೆ. ಬೇಕಾದ್ರೇ ಚೈತ್ರಾ ಆಸ್ಕರ್ ಗೆದ್ದುಕೊಳ್ಳಲಿ, ನಾನು ಬಿಗ್ ಬಾಸ್ ಕಪ್ ಗೆದ್ದುಕೊಂಡು ಮನೆಗೆ ಹೋಗುತ್ತೇನೆ ಅಂತ ರಜತ್ ಠಕ್ಕರ್ ಕೊಟ್ಟಿದ್ದಾರೆ.

  • ನಿಮಗೆ ಕಪ್‌ ಗೆಲ್ಲಲು ಸಾಮರ್ಥ್ಯ ಇಲ್ವಾ?: ಭವ್ಯಾಗೆ ಸುದೀಪ್ ಕ್ಲಾಸ್

    ನಿಮಗೆ ಕಪ್‌ ಗೆಲ್ಲಲು ಸಾಮರ್ಥ್ಯ ಇಲ್ವಾ?: ಭವ್ಯಾಗೆ ಸುದೀಪ್ ಕ್ಲಾಸ್

    ನ್ನಡದ ‘ಬಿಗ್ ಬಾಸ್’ (Bigg Boss Kannada 11) ಆಟ ಇನ್ನು 3 ವಾರಗಳು ನಡೆಯಲಿದೆ. 9 ಸ್ಪರ್ಧಿಗಳು ರೇಸ್‌ನಲ್ಲಿದ್ದಾರೆ. ಯಾರಿಗೆ ಗೆಲುವಿನ ಪಟ್ಟ ಸಿಗಲಿದೆ ಎಂದು ಫ್ಯಾನ್ಸ್ ಕಾತರದಿಂದ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಟಾಸ್ಕ್‌ವೊಂದರಲ್ಲಿ ತಮ್ಮ ಬದಲು ಹನುಮಂತ ಆಟ ಆಡಲು ಭವ್ಯಾ ನೀಡಿರುವ ಕಾರಣಕ್ಕೆ ಸುದೀಪ್ ಸಿಟ್ಟಾಗಿದ್ದಾರೆ. ನಿಮಗೆ ಕಪ್ ಗೆಲ್ಲಲು ಸಾಮರ್ಥ್ಯ ಇಲ್ವಾ? ಅಂತ ಸುದೀಪ್ ಭವ್ಯಾಗೆ (Bhavya Gowda) ಪ್ರಶ್ನೆ ಮಾಡಿದ್ದಾರೆ.

    ಗ್ರಾಸರಿ ಟಾಸ್ಕ್‌ಗೆ ಬರೋಣ. ಭವ್ಯಾ ಅವರೊಂದು ಕಾರಣ ಕೊಡ್ತಾರೆ. ಹಾಡು, ಮನರಂಜನೆ ವಿಚಾರದಲ್ಲಿ ಹನುಮಂತ ಮುಂದೆ ಇದ್ದಾರೆ. ಈ ಟಾಸ್ಕ್ ಅವರು ಆಡಿದ್ರೆ ಬೆಟರ್ ಅನಿಸುತ್ತದೆ ಎಂದು ಭವ್ಯಾ ಕಾರಣ ನೀಡಿದ್ರು. ಇದು ಸಿಲ್ಲಿಯಾಗಿತ್ತು ಎಂದು ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ಕುರಿತು ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ:ಮಾವನಿಂದ ಸೊಸೆಗೆ ತೊಟ್ಟಿಲು ಗಿಫ್ಟ್‌ – ಧನರಾಜ್‌ಗೆ ಕೊಟ್ಟ ಮಾತನ್ನು ಉಳಿಸಿದ ಗೋಲ್ಡ್‌

    ಭವ್ಯಾ ಕೊಟ್ಟಿರುವ ಕಾರಣದ ಬಗ್ಗೆ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಭವ್ಯಾ ನೀವು ಕೊಟ್ಟಿದ್ದ ಕಾರಣ ಸೂಟ್ ಆಗಲಿಲ್ಲ. ಕಾರಣ ಕೊಡೋದಕ್ಕೆ ನೀವು ಸಾವಿರ ಹೇಳಬಹುದಿತ್ತು. ಇಲ್ಲಾಂದ್ರೆ ಆಟ ಆಡೋಕೆ ನನಗೆ ಆಸಕ್ತಿ ಇಲ್ಲ ಅಂತ ಹೇಳಿದ್ರು ಮುಗಿದು ಹೋಗಿರೋದು. ಗ್ರಾಸರಿ ಟಾಸ್ಕ್‌ನಲ್ಲಿ ಎಂದೂ ಹಾಡು & ಡ್ಯಾನ್ಸ್‌ಗೆ ಸಂಬಂಧಪಟ್ಟ ಟಾಸ್ಕ್ ಬಂದೇ ಇಲ್ಲ ಅಂತ ಸುದೀಪ್ (Sudeep) ಸ್ಪಷ್ಟನೆ ನೀಡಿದರು. ಬ್ಯಾಲೆನ್ಸ್ ಅಂತ ಬಂದಾಗ ನನಗಿಂತ ಹನುಮಂತ (Hanumantha) ಬೆಸ್ಟ್ ಇದ್ದಾರೆ ಎಂದು ಹೇಳಿದ ಭವ್ಯಾಗೆ, ಹನುಮಂತನೇ ಕಪ್ ಗೆಲ್ಲಲಿ ಇದನ್ನು ನೀವು ಒಪ್ಪುತ್ತೀರಾ ಎಂದು ಸುದೀಪ್ ಖಡಕ್ ಆಗಿ ಕೇಳಿದ್ದಾರೆ. ಆಟ ಬಿಟ್ಟು ಕೊಡುವ ಸಲುವಾಗಿ ಕೊಟ್ಟಿರುವ ಸಿಲ್ಲಿ ಕಾರಣಕ್ಕೆ ಸುದೀಪ್‌ ಭವ್ಯಾಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ಎಲ್ಲಾ ವಿಷಯದಲ್ಲೂ ಸಾಮರ್ಥ್ಯ ಇರೋರು ಈ ಕಪ್ ಗೆಲ್ಲಬೇಕು ಭವ್ಯಾ. ಹಾಗಾಗಿ, ಬಿಗ್‌ ಬಾಸ್‌ಗೆ ನೀವು ಫಿಟ್ ಇಲ್ಲ ಎಂಬುದನ್ನು ನೀವೇ ಡಿಕ್ಲೇರ್ ಮಾಡಿದ್ರಿ ಎಂದು ಭವ್ಯಾಗೆ ಸುದೀಪ್ ಬೆಂಡೆತ್ತಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಭವ್ಯಾ ಗೌಡ (Bhavya Gowda) ಜೊತೆಗೆ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ.

  • BBK 11: ತ್ರಿವಿಕ್ರಮ್‌ನಿಂದ ದೂರವಿರಲು ಪರೋಕ್ಷವಾಗಿ ಭವ್ಯಾಗೆ ಅಕ್ಕ ಸಲಹೆ

    BBK 11: ತ್ರಿವಿಕ್ರಮ್‌ನಿಂದ ದೂರವಿರಲು ಪರೋಕ್ಷವಾಗಿ ಭವ್ಯಾಗೆ ಅಕ್ಕ ಸಲಹೆ

    ಬಿಗ್ ಬಾಸ್ ಮನೆಯ ಆಟ (Bigg Boss Kannada 11) 94 ದಿನಗಳು ಪೂರೈಸಿವೆ. ಇದೀಗ ಸ್ಪರ್ಧಿಗಳ ಕುಟುಂಬದವರು ಮನೆಗೆ ಬರುತ್ತಿದ್ದಾರೆ. ಹೀಗೆ ಬರುವ ಕುಟುಂಬದವರು ಸ್ಪರ್ಧಿಗಳಿಗೆ ಒಂದೊಂದು ಟಿಪ್ಸ್ ನೀಡುವ ಕೆಲಸ ಮಾಡುತ್ತಾ ಇದ್ದಾರೆ. ಯಾವ ರೀತಿಯಲ್ಲಿ ಆಡಬೇಕು ಎಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇದೀಗ ಭವ್ಯಾ (Bhavya Gowda) ಅವರ ಅಕ್ಕ ದಿವ್ಯಾ ಬಿಗ್‌ ಬಾಸ್‌ಗೆ ಬಂದಿದ್ದಾರೆ. ಅವರು ತ್ರಿವಿಕ್ರಮ್‌ನಿಂದ ದೂರ ಇರುವಂತೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ. ಇದನ್ನೂ ಓದಿ:ಇಲಿಯಾನಾ ಮತ್ತೆ ಪ್ರೆಗ್ನೆಂಟಾ?- ಹೊಸ ವರ್ಷದಂದು ಸುಳಿವು ಕೊಟ್ರಾ ನಟಿ?

    ಭವ್ಯಾಗೆ ಕನ್ಫೆಷನ್ ಕೊಠಡಿಗೆ ಬರುವಂತೆ ಬಿಗ್ ಬಾಸ್ ಹೇಳಿದ್ದಾರೆ. ದಿವ್ಯಾ (Divya Gowda) ಅವರು ಕನ್‌ಫೆಷನ್ ರೂಂನಲ್ಲೇ ಇದ್ದರು. ಅವರು ವೈದ್ಯರ ಡ್ರೆಸ್‌ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಕುಳಿತಿದ್ದರು. ಭವ್ಯಾ ಹೋಗಿ ಕುಳಿತ ಬಳಿಕ, ಹೇಗಿದ್ದೀರಿ ಎಂದು ಕೇಳಿದರು. ಭವ್ಯಾ ಒಮ್ಮೆ ಗೊಂದಲಕ್ಕೆ ಒಳಗಾದರು. ಆ ನಂತರ ಅಕ್ಕ ಬಂದಿರುವ ರಿಯಾಲಿಟಿ ಅರಿತುಕೊಂಡ ಅವರು ಖುಷಿಯಿಂದ ಕುಣಿದಾಡಿದರು. ಅಕ್ಕನನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ಇದನ್ನೂ ಓದಿ:BBK 11: ಅಕ್ಕನ ಮರೆತ ವಿಶೇಷ ಚೇತನ ಸಹೋದರ- ಮೋಕ್ಷಿತಾ ಕಣ್ಣೀರು

    ಬಳಿಕ ಭವ್ಯಾ ಅವರು ನಾನು ಏನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಅಕ್ಕ ದಿವ್ಯಾಗೆ ಕೇಳಿದರು. ಇದಕ್ಕೆ ಉತ್ತರಿಸಿದ ದಿವ್ಯಾ, ಜನರು ಕಡಿಮೆ ಆಗುತ್ತಿದ್ದಾರೆ. ನೀನು ಎಲ್ಲರ ಜೊತೆಯೂ ಬೆರೆಯಬೇಕು. ಕಂಫರ್ಟ್ ಜೋನ್‌ನಲ್ಲಿ ಇದ್ದೀಯಾ, ತೊಂದರೆ ಇಲ್ಲ. ಎಲ್ಲದಕ್ಕೂ ಒಂದು ಬ್ಯಾರಿಕೇಡ್ ಇರಬೇಕು. ನೀನು ಇರೋದು ತಪ್ಪು ಎನ್ನುತ್ತಿಲ್ಲ. ವೈಯಕ್ತಿಕವಾಗಿ ಹೇಗೆ ಆಟ ಆಡಬೇಕು ಎಂಬುದನ್ನು ಯೋಚನೆ ಮಾಡು. ಗೇಮ್ ಕಡೆ ಫೋಕಸ್ ಮಾಡು. ಬೇರೆ ಅವರಿಗೆ ಸಲಹೆ ಕೇಳಬಾರದು. ನೀನೇ ನಿರ್ಧಾರ ತೆಗೆದುಕೊಳ್ಳಬೇಕು. ನೀನು ನಿರ್ಧಾರ ತೆಗೆದುಕೊಳ್ಳಲು ಅಪ್ರಬುದ್ಧ ಎಂದು ಕಾಣಿಸಬಾರದು ಎಂದರು.

    ಭವ್ಯಾಗೆ ಅಕ್ಕ ದಿವ್ಯಾ ಕೊಟ್ಟಿರುವ ಟಿಪ್ಟ್‌ ನೋಡಿ ಪ್ರೇಕ್ಷಕರು, ತ್ರಿವಿಕ್ರಮ್‌ನಿಂದ ದೂರ ಇರು ಎಂದು ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ ಎಂದು  ಅಭಿಪ್ರಾಯಪಟ್ಟಿದ್ದಾರೆ.

  • BBK 11: ‘ರಾಧಾ ಕೃಷ್ಣ’ರಂತೆ ಇದ್ದೀರಾ: ಭವ್ಯಾಗೆ ನೇರವಾಗಿ ಹೇಳಿದ ತ್ರಿವಿಕ್ರಮ್‌ ತಾಯಿ

    BBK 11: ‘ರಾಧಾ ಕೃಷ್ಣ’ರಂತೆ ಇದ್ದೀರಾ: ಭವ್ಯಾಗೆ ನೇರವಾಗಿ ಹೇಳಿದ ತ್ರಿವಿಕ್ರಮ್‌ ತಾಯಿ

    ‘ಬಿಗ್ ಬಾಸ್ ಕನ್ನಡ 11’ರ ಶೋ (Bigg Boss Kannada 11) ಇದೀಗ 100ನೇ ದಿನದತ್ತ ಮುನ್ನುಗ್ಗುತ್ತಿದೆ. ದೊಡ್ಮನೆಯಲ್ಲಿ ಈಗ ಫ್ಯಾಮಿಲಿ ರೌಂಡ್‌ ಶುರುವಾಗಿದೆ. ಎಲ್ಲರ ಮುಖದಲ್ಲಿ ಖುಷಿ ಮೂಡಿದ್ದು, ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಟಾಸ್ಕ್‌ ಗೆದ್ದವರಿಗೆ ತಮ್ಮ ಮನೆಯವರನ್ನು ಭೇಟಿ ಮಾಡುವ ಅವಕಾಶ ಕೊಡುತ್ತಾರೆ ಬಿಗ್‌ ಬಾಸ್. ಈ ಮೂಲಕ ‘ಬಿಗ್‌ ಬಾಸ್‌’ ಸ್ಪರ್ಧಿಗಳಿಗೆ ಟ್ವಿಸ್ಟ್‌ ಕೊಟ್ಟಿದ್ದಾರೆ.

    ಮನೆಯಲ್ಲಿ ‘ಬಿಗ್ ಬಾಸ್’ ವಿಶೇಷ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ, ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ತ್ರಿವಿಕ್ರಮ್ (Trivikram) ಅವರು, ಒಂದು ಚಿತ್ರವನ್ನು ಜೋಡಿಸುವ ಟಾಸ್ಕ್ ಅನ್ನು ಫುಲ್ ಟೆನ್ಷನ್‌ನಲ್ಲಿ ಬೇಗ ಪೂರ್ಣಗೊಳಿಸಿದರು. ಟಾಸ್ಕ್ ಮುಗಿದಿದ್ದೆ ತಡ ಮುಖ್ಯದ್ವಾರ ಓಪನ್ ಆಗಿದೆ. ಮುಖ್ಯ ಬಾಗಿಲಿನಿಂದ ತ್ರಿವಿಕ್ರಮ್ ಅವರ ತಾಯಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್, ಯಶ್, ಉಪ್ಪಿ ಸರ್, ಶಿವಣ್ಣ ಸೇರಿದ್ರೆನೆ ಕನ್ನಡ ಚಿತ್ರರಂಗ – ಸುದೀಪ್‌

    ಈ ವೇಳೆ ತ್ರಿವಿಕ್ರಮ್, ಅವರ ತಾಯಿಯ ಆಶೀರ್ವಾದವನ್ನು ಎಲ್ಲಾ ಸ್ಪರ್ಧಿಗಳು ಪಡೆದರು. ತ್ರಿವಿಕ್ರಮ್‌ ಅವರ ತಾಯಿಯನ್ನು ಭವ್ಯಾ ತಬ್ಬಿಕೊಂಡು ಖುಷಿಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನಿಗೆ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಬೆಂಬಲವಾಗಿ ನಿಂತಿದ್ದೀಯಾ. ರಾಧಾ ಕೃಷ್ಣನ ತರ ಇದ್ದೀರಿ ಎಂದು ತ್ರಿವಿಕ್ರಮ್ ತಾಯಿ ಭವ್ಯಾರನ್ನು (Bhavya Gowda) ಮೆಚ್ಚಿದ್ದಾರೆ. ಅವರ ಮಾತಿನಿಂದ ಭವ್ಯಾ ನಾಚಿ ನೀರಾಗಿದ್ದಾರೆ.

    ಇನ್ನು ಅಮ್ಮ ಮನೆಯಿಂದ ಹೊರ ಹೋಗುವಾಗ ತ್ರಿವಿಕ್ರಮ್ ಅವರು ಇನ್ನು 10 ನಿಮಿಷ ಅನುಮತಿ ಕೊಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಬಿಗ್ ಬಾಸ್ ನೀಡದ ಹಿನ್ನೆಲೆ ಅವರ ತಾಯಿ ಮನೆಯಿಂದ ಹೊರನಡೆದರು. ಆಗ ತ್ರಿವಿಕ್ರಮ್ ಕಣ್ಣೀರು ಹಾಕಿದ್ದಾರೆ. ಅದಷ್ಟೇ ಅಲ್ಲ, ಬಿಗ್ ಬಾಸ್ ಮನೆಗೆ ಭವ್ಯಾ ಅವರ ತಾಯಿ ಮತ್ತು ಸಹೋದರಿ ಕೂಡ ಎಂಟ್ರಿ ಕೊಟ್ಟಿದ್ದಾರೆ.

  • ತ್ರಿವಿಕ್ರಮ್‌ ವಿಚಾರಕ್ಕೆ ಕಾಲೆಳೆದ ಕಿಚ್ಚ- ನಾಚಿ ನೀರಾದ ಭವ್ಯಾ

    ತ್ರಿವಿಕ್ರಮ್‌ ವಿಚಾರಕ್ಕೆ ಕಾಲೆಳೆದ ಕಿಚ್ಚ- ನಾಚಿ ನೀರಾದ ಭವ್ಯಾ

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ 90 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿ ತ್ರಿವಿಕ್ರಮ್ ಬಗ್ಗೆ ಮಾತನಾಡುತ್ತಾ ಕಿಚ್ಚನ ಮುಂದೆ ಭವ್ಯಾ ನಾಚಿ ನೀರಾಗಿದ್ದಾರೆ. ಭವ್ಯಾ ಆಡಿದ ಮಾತಿಗೆ ಸುದೀಪ್ (Sudeep) ನಕ್ಕಿದ್ದಾರೆ.‌ ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ.

    ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಹೊಸ ವರ್ಷಕ್ಕೆ ನಿಮ್ಮ ಪರ್ಸನಲ್ ವಸ್ತುವನ್ನು ಯಾರಿಗೆ ಕೊಡುತ್ತೀರಾ ಎಂದು ಸುದೀಪ್‌  ಹೇಳಿದ್ದರು. ನಾನು ಐಶುಗೆ ಗಿಫ್ಟ್ ಕೊಡುತ್ತೇನೆ. ಆ ಹುಡುಗಿ ಅಮ್ಮ ಇರದೇ ಹೇಗಿರಬಹುದು ಅನಸ್ತು? ಎಂದು ಚೈತ್ರಾ ಅವರು ಐಶ್ವರ್ಯಾ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಇದಾದ ಮೇಲೆ ಭವ್ಯಾಗೆ ನೀವು ಯಾರಿಗೆ ಗಿಫ್ಟ್ ಕೊಡಬೇಕು ಎಂದು ಕೇಳಿದಾಗ, ತ್ರಿವಿಕ್ರಮ್‌ಗೆ ಕೊಡಲು ಇಷ್ಟಪಡುತ್ತೇನೆ ಎಂದು ಭವ್ಯಾ ಹೇಳಿದ್ದಾರೆ. ಈ ವೇಳೆ, ಸುದೀಪ್ ಇದು ಎಂತಹ ಸರ್ಪ್ರೈಸ್ ಅಲ್ವಾ? ಎಂದು ಭವ್ಯಾ ಕಾಲೆಳೆದಿದ್ದಾರೆ. ಇದನ್ನೂ ಓದಿ:ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ವಾರ್ನಿಂಗ್‌

    ನಾಚುತ್ತಲೇ ತ್ರಿವಿಕ್ರಮ್ ಕುರಿತು ಮಾತನಾಡಿದ ಭವ್ಯಾ, ಈ ವ್ಯಕ್ತಿ ನೋಡುವುದಕ್ಕೆ ತುಂಬಾ ಒರಟ ಅನಿಸ್ತಾರೆ. ಆದರೆ ಅವರು ವೇರಿ ಸ್ವೀಟ್ ಎಂದು ಹೇಳಿದ್ದಾರೆ. ಆಗ ತಮಾಷೆಯಾಗಿ ಸುದೀಪ್ ಸಾರಿ ಏನ್ ಹೇಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಭವ್ಯಾ ನಿಂತಲ್ಲೇ ನಾಚಿ ನೀರಾಗಿದ್ದಾರೆ. ತ್ರಿವಿಕ್ರಮ್‌ರನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಸರ್. ಅರ್ಥ ಮಾಡಿಕೊಂಡ ಮೇಲೆ ತ್ರಿವಿಕ್ರಮ್‌ನಿಂದ ದೂರ ಆಗೋದು ಕಷ್ಟ ಎಂದ ಭವ್ಯಾ ಮಾತಿಗೆ ನಕ್ಕಿದ್ದಾರೆ.

    ಶೋ ಶುರುವಾದ ದಿನದಿಂದ ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಉತ್ತಮ ಒಡನಾಟವಿದೆ. ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಎಂದು ಮನೆ ಮಂದಿ ಊಹಿಸಿದ್ದಾರೆ. ಆದರೆ ನಮ್ಮೀಬ್ಬರ ನಡುವೆ ಏನಿಲ್ಲ ಎಂದು ಇಬ್ಬರೂ ಆಗಾಗ ಸ್ಪಷ್ಟನೆ ನೀಡುವ ಕೆಲಸ ಕೂಡ ಮಾಡಿದ್ದು ಇದೆ. ಬಿಗ್‌ ಬಾಸ್‌ ಆಟ ಮುಗಿದ್ಮೇಲೆ ಈ ಜೋಡಿ ಹಕ್ಕಿ ರಿಯಲ್‌ ಆಗಿಯೂ ಜೋಡಿಯಾಗ್ತಾರಾ? ಎಂದು ಕಾದುನೋಡಬೇಕಿದೆ.

  • ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ವಾರ್ನಿಂಗ್‌

    ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ವಾರ್ನಿಂಗ್‌

    ಬಿಗ್‌ ಬಾಸ್‌ ಮನೆಯ ಆಟ (Bigg Boss Kannada 11) ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. 90 ದಿನಗಳನ್ನು ಪೂರೈಸಿ ಮುನ್ನಗ್ಗುತ್ತಿರುವ ಆಟ ಮತ್ತಷ್ಟು ರೋಚಕವಾಗಿದೆ. 3ನೇ ಬಾರಿ ಭವ್ಯಾ (Bhavya Gowda) ಕ್ಯಾಪ್ಟನ್ ಆಗಿದ್ದಾರೆ. ಆದರೆ ಈ ಬಾರಿ ಅವರು ಮೋಸದಿಂದ ಕ್ಯಾಪ್ಟನ್ ಆಗಿದ್ದಾರೆ.ಈ ಮೋಸದಾಟವನ್ನು ಸುದೀಪ್ ಹೊರಗೆಳೆದರು. ಆದರೆ ಭವ್ಯಾ ಸಿಕ್ಕಿಬಿದ್ದರೂ ಸುಳ್ಳು ಹೇಳುವುದು ಬಿಟ್ಟಿರಲಿಲ್ಲ. ಆಗ ಸುದೀಪ್ ತಮ್ಮದೇ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಟಾಸ್ಕ್‌ವೊಂದರಲ್ಲಿ 9ನೇ ಸಂಖ್ಯೆಯ ಬುಟ್ಟಿಯಲ್ಲಿರುವ ಚೆಂಡುಗಳನ್ನು ಬುಟ್ಟಿಗೆ ಹಾಕುವ ಟಾಸ್ಕ್ ಅನ್ನು ಕ್ಯಾಪ್ಟೆನ್ಸಿ ಟಾಸ್ಕ್ ಆಗಿ ನೀಡಲಾಗಿತ್ತು. ರಜತ್, ಮೋಕ್ಷಿತಾ, ಭವ್ಯಾ, ತ್ರಿವಿಕ್ರಮ್, ಧನರಾಜ್ ಅವರುಗಳು ಆಟದ ರೇಸ್‌ನಲ್ಲಿದ್ದರು. ಉಗ್ರಂ ಮಂಜು, ಚೈತ್ರಾ ಅವರುಗಳು ಉಸ್ತುವಾರಿ ಆಗಿದ್ದರು. ಈ ವೇಳೆ ಭವ್ಯಾ, ಬೇರೆ ಸಂಖ್ಯೆಯ ಡಬ್ಬಿಯಿಂದ ಬಿದ್ದ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕಿ ಟಾಸ್ಕ್ ಗೆದ್ದರು ಮಾತ್ರವಲ್ಲದೆ ಮನೆಯ ಕ್ಯಾಪ್ಟನ್ ಸಹ ಆದರು. ಭವ್ಯಾ ರೂಲ್ಸ್‌ ಬ್ರೇಕ್‌ ಮಾಡಿದನ್ನು ರಜತ್ ನೋಡಿದರೂ ಸಹ ಹೇಳಿರಲಿಲ್ಲ. ಈಗ ಎಲ್ಲರೆದುರು ಸುದೀಪ್ (Sudeep) ವಿಡಿಯೋ ತೋರಿಸಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ಸಾಕ್ಷಿ ಸಮೇತ ತೋರಿಸಿದರೂ ಸಹ ಸುದೀಪ್‌ ಮುಂದೆ ಭವ್ಯಾ ಅದೇ ಸುಳ್ಳುಗಳನ್ನು ಮುಂದುವರೆಸಿದರು. ಆ ಚೆಂಡು ಎಲ್ಲಿಂದ ಬಿದ್ದಿದ್ದು ಎಂಬುದನ್ನು ನಾನು ನೋಡಿರಲಿಲ್ಲ ಎಂದರು. ಆ ನಂತರ ಇನ್ನೊಂದು ವಿಡಿಯೋ ಅನ್ನು ಸುದೀಪ್ ಹಾಕಿದರು. ಅದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಉಸ್ತುವಾರಿಗಳಾದ ಚೈತ್ರಾ ಹಾಗೂ ಮಂಜು ಕೇಳಿದ ಪ್ರಶ್ನೆಗಳಿಗೆ ಭವ್ಯಾ ಬೇಕೆಂದೇ ಸುಳ್ಳು ಹೇಳಿದರು. ಮೋಸ ಮಾಡಿ ಕ್ಯಾಪ್ಟನ್ ಆಗಿದ್ದಲ್ಲದೆ, ಸುದೀಪ್ ಎದುರು ಆ ಸುಳ್ಳನ್ನೇ ಸತ್ಯ ಮಾಡುವ ಪ್ರಯತ್ನ ಮಾಡಿದರು.

    ಸುಮ್ಮನೆ ಇರು ಎಂದು ನೀವು ಹೇಳಿದ್ದು, ಬೇರೆ ಕಾರಣಕ್ಕೆ ಅಲ್ಲ ಬದಲಿಗೆ ನಾನು ಮೋಸ ಮಾಡುತ್ತಿದ್ದೀನಿ, ನೀನು ನೋಡಿದರೂ ನೋಡದಂತೆ ಇರು ಎಂದು ಸುಮ್ಮನೆ ಇರು, ಸುಮ್ಮನೆ ಇರು ಎಂದು ಮೆಲುದನಿಯಲ್ಲಿ ರಜತ್‌ಗೆ ಹೇಳಿದ್ದು ಎಂದು ಸ್ಪಷ್ಟವಾಗಿ ಸುದೀಪ್‌ ಹೇಳಿದರು. ಇಷ್ಟ ಆದರೂ ತಪ್ಪನ್ನು ಒಪ್ಪಿಕೊಳ್ಳದ ಭವ್ಯಾಗೆ ಸರಿಯಾಗಿ ಸುದೀಪ್‌ ಕ್ಲಾಸ್‌ ತೆಗೆದುಕೊಂಡರು. ಜೊತೆಗೆ ಭವ್ಯಾ ಪರ ನಿಂತಿದ್ದಕ್ಕೆ ರಜತ್‌ಗೂ ಸುದೀಪ್‌ ತರಾಟೆಗೆ ತೆಗೆದುಕೊಂಡರು.