‘ಜಾಕಿ’ (Jackie) ನಟಿ ಭಾವನಾ ಮೆನನ್ (Bhavana Menon) ಬಹುಭಾಷೆಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಆಗಾಗ ಅವರ ವೈಯಕ್ತಿಕ ಬದುಕಿನ ಬಗ್ಗೆ ನಟಿಗೆ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಭಾವನಾ ಬಗ್ಗೆ ಆಗಾಗ ಡಿವೋರ್ಸ್ (Divorce) ಕುರಿತು ವದಂತಿಗಳು ಚರ್ಚೆಯಾಗುತ್ತಲೇ ಇರುತ್ತದೆ. ಈ ಕುರಿತು ನಟಿ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ದೃಷ್ಟಿಬೊಟ್ಟು’ ಸೀರಿಯಲ್ ನಟಿ
ಇತ್ತೀಚಿನ ಸಂದರ್ಶನವೊಂದರಲ್ಲಿ ಭಾವನಾಗೆ ಡಿವೋರ್ಸ್ ವದಂತಿಗಳು ಕೇಳಿ ಬಂದಾಗ ಅದನ್ನು ಹೇಗೆ ಸ್ವೀಕರಿಸುತ್ತೀರಾ? ಎಂದು ಕೇಳಲಾಗಿದೆ. ಅದಕ್ಕೆ ನಟಿ, ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವಂತಹ ಜೋಡಿ ನಾವಲ್ಲ. ಚಿನ್ನ, ಮುದ್ದು ಅಂತ ಕ್ಯಾಪ್ಷನ್ ಕೊಡಲ್ಲ. ಏನಾದರೂ ನಾನು ಫೋಟೋವೊಂದನ್ನು ಪೋಸ್ಟ್ ಮಾಡಿದರೆ, ಅಯ್ಯೋ ಇದು ಹಳೆಯ ಫೋಟೋ ಎನ್ನುತ್ತಾರೆ. ನಿಮ್ಮ ನಡುವೆ ಸಮಸ್ಯೆ ಇದ್ಯಾ? ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಾರೆ. ಅದಕ್ಕೆ ನಾನು ಪ್ರತಿ ನಿತ್ಯ ನಾವು ಫೋಟೋ ತೆಗೆದುಕೊಳ್ಳಲ್ಲ ಎನುತ್ತೇನೆ ಎಂದಿದ್ದಾರೆ.
ಮನೆಯಲ್ಲಿ ಅಮ್ಮ, ಅಣ್ಣ ಎಲ್ಲರೂ ಇದ್ದಾರೆ. ಎಲ್ಲರೊಂದಿಗೆ ಪ್ರತಿದಿನ ಫೋಟೋ ಕ್ಲಿಕ್ಕಿಸಿಕೊಂಡು ಕೂರೋಕೆ? ಆಗುತ್ತಾ ಎಂದಿದ್ದಾರೆ. ನನ್ನ ವೈಯಕ್ತಿಕ ಜೀವನವನ್ನು ಪಬ್ಲಿಕ್ ಮಾಡಿ ಹೇಳಿಕೊಳ್ಳುವಂತಹ ವ್ಯಕ್ತಿ ನಾನಲ್ಲ. ನಾನು ಮತ್ತು ನವೀನ್ ಚೆನ್ನಾಗಿದ್ದೇವೆ. ಸದ್ಯಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ನಾವು ಚೆನ್ನಾಗಿದ್ದೇವೆ ಎಂದು ಪ್ರೂವ್ ಮಾಡಲು ಯಾವಾಗಲೂ ಫೋಟೋ ಹಾಕ್ತಾ ಕೂರುವುದಕ್ಕೆ ಆಗಲ್ಲ ಎಂದು ಡಿವೋರ್ಸ್ ವದಂತಿಗೆ ನಟಿ ತೆರೆ ಎಳೆದಿದ್ದಾರೆ.
ಅಂದಹಾಗೆ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ರೋಮಿಯೋ’ (Romeo Film) ಸಿನಿಮಾದ ನಿರ್ಮಾಪಕ ನವೀನ್ (Naveen) ಜೊತೆ ಭಾವನ್ ಮೆನನ್ 2018ರಲ್ಲಿ ಮದುವೆಯಾದರು.
ದಿ ಡೋರ್, ಶಿವಣ್ಣ ಮತ್ತು ಡಾಲಿ ಧನಂಜಯ ಜೊತೆ ಉತ್ತರಕಾಂಡ, ಪಿಂಕ್ ನೋಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಭಾವನ್ ಮೆನನ್ ಬ್ಯುಸಿಯಾಗಿದ್ದಾರೆ.
ಇನ್ನೂ ಬಚ್ಚನ್, ಜಾಕಿ, 99, ಟಗರು, ಜಾಕಿ, ಮೈತ್ರಿ, ಭಜರಂಗಿ 2, ಯಾರೇ ಕೂಗಾಡಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಭಾವನಾ ನಟಿಸಿದ್ದಾರೆ.
ಬಹು ನಿರೀಕ್ಷಿತ ಚಿತ್ರ ‘ಉತ್ತರಕಾಂಡ’ (Uttarakanda) ಇದೀಗ ಮತ್ತೊಮ್ಮೆ ಸುದ್ದಿ ಮಾಡಿದೆ. ಬಹುಭಾಷಾ ತಾರೆ ಭಾವನಾ ಮೆನನ್ (Bhavana Menon) ಉತ್ತರಕಾಂಡ ಚಿತ್ರದಲ್ಲಿ ವೀರವ್ವ (Veeravva) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾವನಾ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಇಂದು ಘೋಷಿಸಿ ಪೋಸ್ಟರ್ ಬಿಡುಗಡೆ ಮಾಡಿದೆ. ಭಾವನಾ ಅವರನ್ನು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರೊಡನೆ ತೆರೆಯ ಮೇಲೆ ಕಾಣಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ ಧನಂಜಯ, ಐಶ್ವರ್ಯ ರಾಜೇಶ್, ದಿಗಂತ್ ಮಂಚಾಲೆ, ರಂಗಾಯಣ ರಘು, ಚೈತ್ರ ಆಚಾರ್, ವಿಜಯ್ ಬಾಬು ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿರುತ್ತಾರೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಭಾವನಾ ಮೆನನ್ (Bhavana Menon) ಜೋಡಿಯಾಗಿ ನಟಿಸಿರುವ ಟಗರು (Tagaru), ಭಜರಂಗಿ-2 (Bhajarangi 2) ಸಿನಿಮಾಗಳಿಗೆ ಅಪಾರ ಅಭಿಮಾನಿಗಳಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಅದ್ಯಾವಾಗ ಸಿನಿಮಾ ಬರಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಹೊಸ ಚಿತ್ರಕ್ಕಾಗಿ ಶಿವಣ್ಣ ಮತ್ತು ಭಾವನಾ ಮತ್ತೆ ಜೋಡಿಯಾಗಿ ನಟಿಸಲಿದ್ದಾರೆ.
ಸದ್ಯ ‘ಜಾಕಿ’ ಭಾವನಾ ಕನ್ನಡದ ಜೊತೆಗೆ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಹೊಸ ಸಿನಿಮಾದಲ್ಲಿ ನಟಿಸುವ ಬಗ್ಗೆ ಸ್ವತಃ ಸಂದರ್ಶನವೊಂದರಲ್ಲಿ ಭಾವನಾ ಮಾಹಿತಿ ನೀಡಿದ್ದಾರೆ. ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರದಲ್ಲಿ ಶಿವಣ್ಣ ಜೊತೆ ತೆರೆಹಂಚಿಕೊಳ್ಳುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಸದ್ದಿಲ್ಲದೇ 2ನೇ ಚಿತ್ರದ ಶೂಟಿಂಗ್ ಮುಗಿಸಿದ ಆಮೀರ್ ಖಾನ್ ಪುತ್ರ
ಜನವರಿಯಲ್ಲಿ ‘ಉತ್ತರಕಾಂಡ’ (Uttarakaanda Film) ಚಿತ್ರದಲ್ಲಿ ಪಾತ್ರಕ್ಕಾಗಿ ತಮ್ಮ ಸಂಪರ್ಕಿಸಿರೋದಾಗಿ ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ಶೂಟಿಂಗ್ ಅಂದಿದ್ದರು. ನನ್ನ ಭಾಗದ ಚಿತ್ರೀಕರಣ ಮೇನಲ್ಲಿ ಶುರುವಾಗಲಿದೆ ಎಂದು ನಟಿ ಮಾಹಿತಿ ನೀಡಿದ್ದಾರೆ.
‘ಉತ್ತರಕಾಂಡ’ ಚಿತ್ರದಲ್ಲಿ ಶಿವರಾಜ್‌ಕುಮಾರ್ (Shivarajkumar) ಅವರ ಪತ್ನಿಯ ಪಾತ್ರದಲ್ಲಿ ಭಾವನಾ ನಟಿಸಿಲಿದ್ದಾರೆ ಎನ್ನಲಾಗುತ್ತಿದೆ. 20 ದಿನಗಳ ಶೂಟಿಂಗ್ ಇರಲಿದೆ ಭಾವನಾ ನಟಿಸಲಿರುವ ಪಾತ್ರದ ಶೂಟಿಂಗ್ ಇರಲಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಚಿತ್ರತಂಡದ ಕಡೆಯಿಂದ ಸಿಗುವವರೆಗೂ ಕಾಯಬೇಕಿದೆ.
ಶಿವಣ್ಣ ಮತ್ತು ಡಾಲಿ ನಟನೆಯ ಈ ಸಿನಿಮಾದ ಚಿತ್ರೀಕರಣ ಸದ್ಯ ಬಿಜಾಪುರದಲ್ಲಿ ಭರದಿಂದ ನಡೆಯುತ್ತಿದೆ. ಚೈತ್ರ ಆಚಾರ್, ದಿಗಂತ್, ಯೋಗರಾಜ್ ಭಟ್, ಮಲಯಾಳಂ ನಟ ವಿಜಯ್ ಬಾಬು ಸೇರಿದಂತೆ ಹಲವು ನಟಿಸುತ್ತಿದ್ದಾರೆ. ಸಿನಿಮಾಗೆ ಕೆಆರ್‌ಜಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ನಾಡಿಕಾರ್, ಡೋರ್ ಸೇರಿದಂತೆ ಹಲವು ಸಿನಿಮಾಗಳು ಭಾವನಾ ಮೆನನ್ ಕೈಯಲ್ಲಿವೆ. ಕನ್ನಡದ ಕೆಲವು ಸಿನಿಮಾಗಳಿಗೂ ನಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬಹುಭಾಷಾ ನಟಿ ಭಾವನಾ ಮೆನನ್ (Bhavana Menon) ಅವರು ಕನ್ನಡ, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಡುವ ತಂದೆಯ ಅನುಪಸ್ಥಿತಿ ಬಗ್ಗೆ ಜಾಕಿ ಭಾವನಾ ಮಾತನಾಡಿದ್ದಾರೆ. ತಂದೆ ಜೊತೆಗಿನ ನೆನಪುಗಳನ್ನ ನಟಿ ಮೆಲುಕು ಹಾಕಿದ್ದಾರೆ.
ನಟಿ ಭಾವನಾ ಮಾತನಾಡಿ, ನನ್ನ ತಂದೆಯ (Father) ಸಾವಿನ ನೋವು ಯಾವಾಗಲೂ ಹಾಗೆಯೇ ಇರುತ್ತದೆ. ಹೊರಗೆ ಎಷ್ಟೇ ಖುಷಿಯಾಗಿದ್ದರೂ ಒಳಗಿನ ನೋವು ಹಾಗೆಯೇ ಇದೆ. ಇಷ್ಟು ವರ್ಷ ಕಳೆದರೂ ಆ ದುಃಖದಿಂದ ಹೊರಬರಲು ಸಾಧ್ಯವಾಗಿಲ್ಲ. ಜೀವನ ಸಂಪೂರ್ಣವಾಗಿ ಬದಲಾಗಿದೆ. ಆದರೆ ನನ್ನ ತಂದೆ ಇಲ್ಲ ಎಂಬುದು ನನ್ನನ್ನು ಯಾವಾಗಲೂ ಕಾಡುತ್ತದೆ. ಈ ಕಾಡುವಿಕೆ ಕೆಲವೊಮ್ಮೆ ಹೆಚ್ಚಿರುತ್ತದೆ, ಕೆಲವೊಮ್ಮೆ ಕಡಿಮೆ. ಆದರೆ, ಆ ನೋವು ಇಂದಿಗೂ ಹಾಗೆಯೇ ಇದೆ ಎಂದಿದ್ದಾರೆ.
ಭಾವನಾ ಅವರ ತಂದೆಯ ಹೆಸರು ಬಾಲಚಂದ್ರ. ಅವರು 2015ರಲ್ಲಿ ನಿಧನ ಹೊಂದಿದರು. ಆಗ ಅವರಿಗೆ 59 ವರ್ಷ ವಯಸ್ಸಾಗಿತ್ತು. ಬಾಲಚಂದ್ರ ಅವರಿಗೆ ಅನಾರೋಗ್ಯ ಕಾಡಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ತಂದೆಯ ಬಗ್ಗೆ ಅವರು ಯಾವಾಗಲೂ ಪ್ರೀತಿ ವ್ಯಕ್ತಪಡಿಸುತ್ತಾ ಇರುತ್ತಾರೆ. ಅವರು ಈ ಮಟ್ಟಕ್ಕೆ ಬೆಳೆಯಲು ತಂದೆ ಕಾರಣ ಎಂದು ಅವರು ಹಲವು ಬಾರಿ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ವಿಶ್ವಕಪ್ ವೀಕ್ಷಣೆಗೆ ಗೋಲ್ಡನ್ ಟಿಕೆಟ್ ಪಡೆದ ರಜನಿಕಾಂತ್
2001ರಲ್ಲಿ ‘ನಮ್ಮಲ್’ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ನಟಿ ಭಾವನಾ, ಬ್ಯಾಕ್ ಟು ಬ್ಯಾಕ್ 6 ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಬಳಿಕ ಪರಭಾಷೆಗಳಲ್ಲೂ ನಟಿಸಿದರು. ಪುನೀತ್ (Puneeth Rajkumar) ನಟನೆಯ ಜಾಕಿ (Jackie Film) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ಬಳಿಕ ಮೈತ್ರಿ, ರೊಮಿಯೋ, ಟೋಪಿವಾಲ, ಭಜರಂಗಿ 2 (Bhajarangi 2) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು.
ಬಳಿಕ 2018ರಲ್ಲಿ ಕನ್ನಡದ ನಿರ್ಮಾಪಕ ನವೀನ್ (Producer Naveen) ಜೊತೆ ಭಾವನಾ ಪ್ರೀತಿಸಿ ಮದುವೆಯಾದರು.
ಕನ್ನಡದ ‘ಜಾಕಿ’ ಬ್ಯೂಟಿ ಭಾವನಾ ಮೆನನ್ (Bhavana Menon) ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇಯಂದು (Birthday) ಹೊಸ ಸಿನಿಮಾದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಭಾವನಾ ನಟನೆಯ 86ನೇ ಚಿತ್ರದ ಬಗ್ಗೆ ಇಲ್ಲಿದೆ ಅಪ್‌ಡೇಟ್. ʻಭಜರಂಗಿ 2ʼ (Bhajarangi 2) ಬಳಿಕ ನಟಿ ಸಿಹಿಸುದ್ದಿ ಕೊಟ್ಟಿದ್ದಾರೆ.
ಭಾವನಾ ಮೆನನ್ ಅವರು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ, ಮಲಯಾಳಂ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ (Puneeth Rajkumar) ಜೊತೆ ಜಾಕಿ, ಯಾರೇ ಕೂಗಾಡಲಿ, ಮೈತ್ರಿ ಚಿತ್ರಗಳಲ್ಲಿ ಭಾವನಾ ನಾಯಕಿಯಾಗಿ ನಟಿಸಿದ್ದಾರೆ. ಶಿವಣ್ಣ ಜೊತೆ ಭಜರಂಗಿ 2, ಟಗರು ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ
ಸದ್ಯ ನಟಿ ಭಾವನಾ ಮೆನನ್ ಅವರು ‘ದಿ ಡೋರ್’ (The Door) ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾವನಾ ಬರ್ತ್‌ಡೇ ದಿನ ಚಿತ್ರದ ಪೋಸ್ಟರ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಎಂದೂ ಕಾಣಿಸಿಕೊಂಡಿರದ ಭಿನ್ನ ರೋಲ್‌ನಲ್ಲಿ ಜಾಕಿ ಭಾವನಾ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಜೈದೇವ್ ನಿರ್ದೇಶನದ ಈ ಸಿನಿಮಾದಲ್ಲಿ ಭಾವನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ರಾಜನ್ ಬಂಡವಾಳ ಹೂಡಿದ್ದಾರೆ.
ಕನ್ನಡದ ‘ರೋಮಿಯೋ’ (Romeo) ಚಿತ್ರದ ನಿರ್ಮಾಪಕ ನವೀನ್ (Naveen) ಜೊತೆ 2018ರಲ್ಲಿ ಭಾವನಾ ಮದುವೆಯಾದರು. ದಾಂಪತ್ಯ ಜೀವನ ಮತ್ತು ಸಿನಿಮಾ ಎರಡನ್ನು ಸಮರ್ಥವಾಗಿ ನಿಭಾಯಿಸುತ್ತಾ ನಟಿ ಬ್ಯುಸಿಯಾಗಿದ್ದಾರೆ. ಸದ್ಯ ಹುಟ್ಟುಹಬ್ಬದ ಅಂಗವಾಗಿ ಭಾವನಾ, ಪತಿ ಜೊತೆ ಚೆನ್ನೈನಲ್ಲಿದ್ದಾರೆ.
`ಸೀತಾರಾಮ್ ಬಿನೋಯ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದೇವಿ ಪ್ರಸಾದ್ ಶೆಟ್ಟಿ (Devi Prasad Shetty) ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿಜಯ್ ರಾಘವೇಂದ್ರ (Vijay Raghavendra) ನಟಿಸಿದ್ದ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ದೇವಿ ಪ್ರಸಾದ್ ಶೆಟ್ಟಿ ಈಗ ಮತ್ತೊಮ್ಮೆ ಚಿನ್ನಾರಿ ಮುತ್ತನ ಜೊತೆ ಕೈ ಜೋಡಿಸಿದ್ದಾರೆ. ಬೆಂಗಳೂರಿನ ಧರ್ಮಗಿರಿ ಮಂಜುನಾಥ್ ಸ್ವಾಮಿ ದೇಗುಲದಲ್ಲಿ ಸಿನಿಮಾ `ಕೇಸ್ ಆಫ್ ಕೊಂಡಾಣ’ (Case Of Kondana) ಸರಳವಾಗಿ ಮುಹೂರ್ತ ನೆರವೇರಿಸಿದೆ.
ನಟ ವಿಜಯ್ ಮಾತನಾಡಿ, `ಸೀತಾರಾಮ್ ಬಿನೋಯ್’ ಕೇಸ್ ನಂಬರ್ 18ರ ನಂತರ ಇವರು ನನಗೆ ಮತ್ತೊಮ್ಮೆ ನಟಿಸಲು ಅವಕಾಶ ಕೊಟ್ಟಿದ್ದಾರೆ. ಸಾಧಾರಣವಾಗಿ ಒಂದೊಳ್ಳೆ ತಂಡ ಸಿಗುವುದು ಅಪರೂಪ. ದೇವಿ ಡೆಡಿಕೇಷನ್, ಕೆಲಸದ ಬಗ್ಗೆ ಇರುವ ಸೀರಿಯಸ್‌ನೆಸ್ ನೋಡಿದ್ದೇನೆ. ಪ್ರತಿಯೊಬ್ಬರೂ ಈ ಸಿನಿಮಾಗೆ ಪ್ರೋತ್ಸಾಹಿಸಿ ಎಂದರು. ಇದನ್ನೂ ಓದಿ:‘ಯಶೋದಾ’ ಟೀಸರ್ನಲ್ಲಿ ಸಮಂತಾ ಮತ್ತೊಂದು ಮುಖ ಅನಾವರಣ
ಕ್ರೈಮ್ ಸಿನಿಮಾಗಳ ಬಗ್ಗೆ ಹೆಚ್ಚು ಒಲವಿರುವ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈ ಬಾರಿ ತನಿಖಾ ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. 19/2018 ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ (Vijay Raghavendra) ಹಾಗೂ ಭಾವನಾ ಮೆನನ್ (Bhavana Menon) ಇಬ್ಬರು ಪೊಲೀಸ್ ಅಧಿಕಾರಿಗಳಾಗಿ ನಟಿಸಲಿದ್ದಾರೆ. `ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ (Kushee Ravi) ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದ ತಾರಾಬಳಗದ ಮಾಹಿತಿಯನ್ನು ಚಿತ್ರತಂಡ ಶೀಘ್ರವಾಗಿ ನೀಡಲಿದೆ.
ಸಾತ್ವಿಕ್ ಹೆಬ್ಬಾರ್ ಮತ್ತು ದೇವಿ ಪ್ರಸಾದ್ ಶೆಟ್ಟಿ ಜೊತೆಗೆ ಅರವಿಂದ್ ಶೆಟ್ಟಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ʻಕೇಸ್ ಆಫ್ ಕೊಂಡಾಣ’ಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಸೆಪ್ಟೆಂಬರ್ 28ರಿಂದ ಶೂಟಿಂಗ್ ಆರಂಭವಾಗಲಿದೆ. ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
Live Tv
[brid partner=56869869 player=32851 video=960834 autoplay=true]
ಮಲಯಾಳಂ ಮತ್ತು ಕನ್ನಡದ ಖ್ಯಾತ ನಟಿ ಭಾವನಾ ಮೆನನ್ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಆಚೆ ಬರಲು ಅವರು ಇನ್ನೂ ಹೋರಾಟ ಮಾಡುತ್ತಿದ್ದಾರೆ. ಅವರ ಮೇಲಿನ ದೌರ್ಜನ್ಯ ಕೇಸ್ ಇನ್ನೂ ಕೋರ್ಟಿನಲ್ಲಿದೆ. ಈ ನಡುವೆ ಅವರು ಕಹಿ ಘಟನೆಯಿಂದ ಆಚೆ ಬರಲು ಸಿನಿಮಾಗಳನ್ನು ಒಪ್ಪಿದ್ದಾರೆ. ಸ್ಯ ಕನ್ನಡದಲ್ಲಿ ಒಂದು ಮತ್ತು ಮಲಯಾಳಂನಲ್ಲಿ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ
ಕನ್ನಡದ ಪಿಂಕ್ ನೋಟು ಸಿನಿಮಾದ ಮುಹೂರ್ತ ಮೊನ್ನೆಯಷ್ಟೇ ನಡೆದಿದೆ. ಮಲಯಾಳಂನ ‘ದಿ ಸರ್ವೈವಲ್’ ಚಿತ್ರದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಇದೊಂದು ಕಿರುಚಿತ್ರವಾಗಿದ್ದು, ಮಹಿಳೆಯರಿಗೆ ಜಾಗೃತಿ ಮೂಡಿಸಲೆಂದು ನಿರ್ಮಾಣ ಮಾಡಿರುವ ಕಿರುಚಿತ್ರ ಎನ್ನಲಾಗುತ್ತಿದೆ. ಆದರೆ, ಈ ಚಿತ್ರದ ಬಗ್ಗೆ ಮಲಯಾಳಂನಲ್ಲಿ ಬೇರೆಯ ಮಾತೇ ಕೇಳಿ ಬರುತ್ತಿದೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ
ಭಾವನಾ ಮೆನನ್ ಜೀವನದಲ್ಲಿ ನಡೆದ ಕಹಿ ಘಟನೆಯನ್ನೇ ಆಧರಿಸಿದ ಈ ಕಿರುಚಿತ್ರ ಮಾಡಲಾಗಿದೆ ಎನ್ನುವ ಚರ್ಚೆ ಮಲಯಾಳಂ ಸಿನಿಮಾ ರಂಗದಲ್ಲಿ ಶುರುವಾಗಿದೆ. ಇಂಥದ್ದೊಂದು ಚರ್ಚೆ ಆಗಲು ಕಾರಣ ಚಿತ್ರಕ್ಕಿಟ್ಟಿರುವ ಟೈಟಲ್. ‘ದಿ ಸರ್ವೈವಲ್’ ಶೀರ್ಷಿಕೆಯೇ ಅಂಥದ್ದೊಂದು ಅನುಮಾನವನ್ನು ಹುಟ್ಟು ಹಾಕಿದೆ. ಆದರೆ, ಅದಕ್ಕೂ ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್
ಮಹಿಳೆಯ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಈ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆಯಂತೆ. ಸ್ತನ ಕ್ಯಾನ್ಸರ್ ಇರುವ ಮಹಿಳೆಯರ ಆರೋಗ್ಯದ ಕುರಿತಾಗಿ ಇಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆಯಂತೆ. ಈ ಕಿರುಚಿತ್ರದಲ್ಲಿ ಭಾವನಾ ಮೆನನ್, ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಎನ್. ರಾಜೇಶ್ ಅವರ ಕಲ್ಪನೆಯಲ್ಲಿ ಈ ಚಿತ್ರ ಮೂಡಿ ಬಂದಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಚಂದನವನ ಮೊದಲೇ ಕಲರ್ ಫುಲ್ ಜಗತ್ತು. ಈ ಜಗತ್ತನ್ನು ಮತ್ತಷ್ಟು ಕಲರ್ ಫುಲ್ ಆಗಿ ಮಾಡಿದೆ ಹೋಳಿ ಹಬ್ಬ. ಸ್ಯಾಂಡಲ್ ವುಡ್ ಮತ್ತು ಕಿರುತೆರೆಯ ಅನೇಕ ತಾರೆಯರು ಇಂದು ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಈ ಮೂಲಕ ಎಲ್ಲರ ಬದುಕೂ ಬಣ್ಣವಾಗಿರಲಿ ಎಂದು ಹಾರೈಸಿದ್ದಾರೆ
ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಕಾವ್ಯ ಶಾಸ್ತ್ರೀ ಕೂಡ ಇಂದು ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಫ್ರೆಂಡ್ಸ್ ಮತ್ತು ಕುಟುಂಬದ ಇತರ ಸದಸ್ಯರ ಜೊತೆ ಅವರು ಬಣ್ಣವನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಕಿರುತೆರೆ ನಟಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಹೋಳಿ ಹಬ್ಬಕ್ಕೆ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ವಿದೇಶದಿಂದ ವಾಪಸ್ಸಾಗಿರುವ ಅವರು ಕುಟುಂಬದೊಂದಿಗೆ ಹೋಳಿಯನ್ನು ಆಚರಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!
ಜಾಕಿ, ಭಜರಂಗಿ 2 ಸೇರಿದಂತೆ ಅನೇಕ ಕನ್ನಡ ಸಿನಿಮಾಗಳನ್ನು ಮಾಡಿರುವ, ಮಲಯಾಳಂ ನಟಿ, ಕರ್ನಾಟಕದ ಸೊಸೆ ಭಾವನಾ ಮೆನನ್ ಕೂಡ ಹೋಳಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಭಜರಂಗಿ 2 ಸಿನಿಮಾದಲ್ಲಿಯ ಹೋಳಿ ದೃಶ್ಯದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಪಾರು ಧಾರಾವಾಹಿಯ ಖ್ಯಾತಿಯ ನಟ ಶರತ್ ಪದ್ಮನಾಭ್ ಕೂಡ ಈ ಬಾರಿ ಹೋಳಿಯನ್ನು ಸಡಗರದಿಂದ ಆಚರಿಸಿದ್ದಾರೆ. ಗೆಳೆಯರು ಮತ್ತು ಆಪ್ತರೊಂದಿಗೆ ಹೋಳಿ ಆಡಿರುವ ಅವರು ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್
ಬಿಗ್ ಬಾಸ್ ಖ್ಯಾತಿಯ ತೇಜಸ್ವಿನಿ ಪ್ರಕಾಶ್ ಕೂಡ ಹೋಳಿಯನ್ನು ಕುಟುಂಬದೊಂದಿಗೆ ಆಚರಿಸಿದ್ದಾರೆ. ಆ ಫೋಟೋವನ್ನು ಅಭಿಮಾನಿಗಳಿಗಾಗಿ ಶೇರ್ ಮಾಡಿದ್ದು, ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹ ಕೂಡ ಇಂದು ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ಹೋಳಿ ಆಡಿದ್ದಾರೆ. ಮಕ್ಕಳ ಜತೆ ಮಕ್ಕಳಾಗಿ ಅವರು ಬಣ್ಣ ಹಚ್ಚಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಶುಭಾಶಯ ಹೇಳಿದ್ದಾರೆ.
ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ, ಮಲಯಾಳಿ ನಟಿ ಭಾವನಾ ಮೆನನ್ ಮೇಲಿನ ದೌರ್ಜನ್ಯ ಖಂಡಿಸಿರುವ ಸಾಲಿನಲ್ಲಿ ನಟ ಸೂರ್ಯ ಇದೀಗ ಸೇರ್ಪಡೆಗೊಂಡಿದ್ದಾರೆ. ತಮ್ಮ ಹೊಸ ಸಿನಿಮಾ ‘ಎತುರ್ಕುಂ ತೂನಿಂದವನ್’ ಸಿನಿಮಾದ ಪ್ರಚಾರಕ್ಕಾಗಿ ಕೊಚ್ಚಿಗೆ ತೆರಳಿದ್ದ ಸೂರ್ಯ, ಕೇರಳದಲ್ಲಿ ನಡೆದ ನಟಿ ಮೇಲಿನ ಹಲ್ಲೆ ಮತ್ತು ದೌರ್ಜನ್ಯವನ್ನು ಯಾವ ನಾಗರೀಕ ಸಮಾಜ ಒಪ್ಪಿಕೊಳ್ಳುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆ ನಟಿಯೊಂದಿಗೆ ನಾವೆಲ್ಲರೂ ಇದ್ದೇವೆ. ಅವರು ಧೈರ್ಯದಿಂದ ಜೀವನ ನಡೆಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಏನಾಯ್ತು? ಗುಡ್ ನ್ಯೂಸ್ ಕೊಡುತ್ತಂತೆ ಚಿತ್ರತಂಡ
ನಟಿ ಭಾವನಾ ಮೇಲೆ 2017ರಲ್ಲಿ ಕೇರಳದಲ್ಲಿ ಹಲ್ಲೆ ನಡೆಯಿತು. ಪ್ರಭಾವಿ ನಟರೊಬ್ಬರು ಇದರ ಹಿಂದೆ ಇದ್ದಾರೆ ಎಂದು ಸ್ಟಾರ್ ನಟ ದಿಲೀಪ್ ಮೇಲೆ ಆರೋಪ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಅವರ ಬಂಧನ ಕೂಡ ಆಗಿತ್ತು. ಈಗವರು ಜಾಮೀನನ ಮೇಲೆ ಆಚೆ ಬಂದಿದ್ದಾರೆ. ಈ ಪ್ರಕರಣ ಮತ್ತೆ ಇದೀಗ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ : ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡ
ಇತ್ತೀಚೆಗಷ್ಟೇ ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ಬಹಿರಂಗವಾಗಿ ಭಾವನಾ ಮಾತನಾಡಿದ್ದರು. ಅದೊಂದು ನಕರದ ಸನ್ನಿವೇಶವೆಂದು ಹೇಳಿಕೊಂಡಿದ್ದರು. ಅಂತಹ ಘಟನೆ ನನ್ನ ಜೀವನದಲ್ಲಿ ನಡೆಯಿತಲ್ಲ ಎಂದು ಮಾನಸಿಕವಾಗಿ ಕುಸಿದು ಹೋಗಿದ್ದೆ ಎಂದೂ ಅವರು ನೋವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ
ಈ ಎಲ್ಲವನ್ನೂ ಮರೆತು ಮತ್ತೆ ಸಹಜ ಜೀವನಕ್ಕೆ ಬರಲು ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದ ಭಾವನಾ ಇತ್ತೀಚೆಗಷ್ಟೇ ಬಿಡುಗಡೆಯಾದ ಭಜರಂಗಿ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾದಲ್ಲಿಯ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಇದೀಗ ಮತ್ತೆ ನಟನೆಯಲ್ಲಿ ಭಾವನಾ ಸಕ್ರೀಯರಾಗಿದ್ದಾರೆ.
ಬೆಂಗಳೂರು: ಕನ್ನಡದಲ್ಲಿ ‘ಜಾಕಿ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ದಕ್ಷಿಣದ ಖ್ಯಾತ ತಾರೆ ಭಾವನಾ ಮೆನನ್ (Bhavana Menon) ತಮ್ಮ ವೃತ್ತಿ ಜೀವನದಲ್ಲಿ ನಡೆದ ಕಹಿ ಘಟನೆಯ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ತಮಗಾದ ದೌರ್ಜನ್ಯದ ಆ ಕರಾಳ ಅಧ್ಯಾಯವನ್ನು ಎಳೆಎಳೆಯಾಗಿ ಅವರು ಬಿಚ್ಚಿಟ್ಟಿದ್ದಾರೆ.
2017ರ ಫೆಬ್ರವರಿಯಲ್ಲಿ ಚಲಿಸುವ ಕಾರಿನಲ್ಲೇ ನಟಿ ಭಾವನಾ ಅವರ ಮೇಲೆ ದೈಹಿಕ ಹಲ್ಲೆ ಮಾಡುವುದರ ಜೊತೆಗೆ ಕಿರುಕುಳ ನೀಡಲಾಗಿದೆ ಎನ್ನುವ ಆರೋಪ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಅವರ ಮೇಲಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಅವರೇ ಎನ್ನುವ ಕಾರಣಕ್ಕಾಗಿ ದಿಲೀಪ್ ಬಂಧನ ಕೂಡ ಆಗಿದ್ದರು. ಸದ್ಯ ಪ್ರಕರಣ ನ್ಯಾಯಲಯದ ವಿಚಾರಣೆಯಲ್ಲಿದೆ. ಹಾಗಾಗಿ ಭಾವನಾ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ
ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ “ವಿ ದಿ ವುಮೆನ್” ಕಾರ್ಯಕ್ರಮದಲ್ಲಿ ಆ ಕರಾಳ ಘಟನೆಯ ಕುರಿತು ಮೌನ ಮುರಿದಿದ್ದು, ನನ್ನ ಜೀವನದಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲ. ನಾನು ಜೀವಂತವಾಗಿ ಉಳಿದಿರುವುದೇ ಪುಣ್ಯ ಎಂದು ಭಾವನಾತ್ಮಕವಾಗಿಯೇ ಭಾವನಾ ಮಾತನಾಡಿದ್ದಾರೆ. ಕೋರ್ಟ್‍ನಲ್ಲಿ ಇನ್ನೂ ಪ್ರಕರಣ ನಡೆಯುತ್ತಿರುವುದರಿಂದ ಕೆಲ ವಿವರಗಳನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ಅಂತಹ ಕರಾಳ ಘಟನೆ ಅದಾಗಿದೆ ಎಂದು 2017ರಲ್ಲಿ ನಡೆದ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ.
ಅಪ್ಪ ಬದುಕಿದ್ದರೆ ಹೀಗೆ ಆಗುತ್ತಿರಲಿಲ್ಲ : ಘಟನೆ ನಡೆಯುವ ಎರಡು ವರ್ಷಗಳ ಮುಂಚೆ 2015ರಲ್ಲಿ ತೀರಿಕೊಂಡರು. ಒಂದು ವೇಳೆ ನನ್ನ ತಂದೆ ಬದುಕಿದ್ದರೆ, ಈ ಕಹಿ ಘಟನೆಯು ನಡೆಯುವುದಕ್ಕೆ ಸಾಧ್ಯವೇ ಇರಲಿಲ್ಲ. “ಈ ಘಟನೆ ಹೇಗಾಯಿತು? ಯಾಕಾಯಿತು? ನನಗೇ ಯಾಕಾಯಿತು ಎಂದು ಹಲವಾರು ಬಾರಿ ನನಗೆ ನಾನೇ ಪ್ರಶ್ನೆ ಮಾಡಿಕೊಂಡಿದ್ದೇನೆ. ಅವತ್ತೊಂದು ದಿನ ಶೂಟಿಂಗ್ ಇರದೇ ಇದ್ದರೆ, ಅದು ನನ್ನ ಬಾಳಿನಲ್ಲಿ ನಡೆಯುತ್ತಿರಲಿಲ್ಲ ಎಂದು ಊಹಿಸಿಕೊಂಡಿದ್ದೇನೆ. ನನ್ನ ಊಹೆಯ ಆಚೆಗೂ ನಡೆದು ಹೋಯಿತು. ಅದರಿಂದ ಆಚೆ ಬರಲು ನಾನು ಪಡಬಾರದ ಕಷ್ಟಪಟ್ಟೆ. ಸಾಮಾನ್ಯ ಜೀವನಕ್ಕೆ ಮರಳಲು ಒದ್ದಾಡಿದೆ. ಅದರ ಬಗ್ಗೆ ಯೋಚಿಸಿದರೆ ಇವತ್ತಿಗೂ ಡಿಪ್ರೆಸ್‍ಗೆ ಹೋಗುತ್ತೇನೆ. ಈ ಹೋರಾಟ ಯಾವ ಹುಡುಗಿಗೂ ಬರಬಾರದು” ಎಂದು ಉತ್ತರಿಸಿದ್ದಾರೆ ಭಾವನಾ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?
ಕೋರ್ಟ್ ಕಟಕಟೆಯಲ್ಲಿ 15 ದಿನ : ಈ ಘಟನೆ 2017ರಲ್ಲಿ ನಡೆದರೂ, ಆರೋಪ ಪ್ರತ್ಯಾರೋಪ ನಡೆದೇ ಇತ್ತು. ತನಿಖಾಧಿಕಾರಿಗಳು ತಮ್ಮ ಪಾಡಿಗೆ ತಾವು ತನಿಖೆ ನಡೆಸುತ್ತಿದ್ದರು. ಕೋರ್ಟ್ ವಿಚಾರಣೆ ಮಾಡುತ್ತಿತ್ತು. ನ್ಯಾಯಾಧೀಶರ ಮುಂದೆ ಘಟನೆಯ ಬಗ್ಗೆ ಹೇಳಿಕೊಳ್ಳುವಂತಹ ಅವಕಾಶ ಮತ್ತು ಕೋರ್ಟ್ ಕಟಕಟೆಯಲ್ಲಿ ವಕೀಲರ ಪ್ರಶ್ನೆಗೂ ಉತ್ತರಿಸುವಂತ ಸಮಯ ಬಂದಿದ್ದು 2020ರಲ್ಲಿ. ಒಟ್ಟು 15 ದಿನಗಳ ಕಾಲ ನಾನು ಕೋರ್ಟ್ ಸುತ್ತಿದೆ. ನನ್ನ ನೋವು ಹಂಚಿಕೊಂಡೆ. ದುರುಳರ ಅಟ್ಟಹಾಸ ಬಿಚ್ಚಿಟ್ಟೆ. ಅಲ್ಲಿಂದ ಆಚೆ ಬಂದಾಗ ಮತ್ತೊಂದು ನಿರಾಳತೆ. ನಾನೇ ಬಲಿಪಶುವಾಗುತ್ತೇನಾ ಎನ್ನುವ ಆತಂಕ. 15 ದಿನಗಳ ಹೋರಾಟದ ನಂತರ ನನ್ನಲ್ಲೂ ಛಲ ಹುಟ್ಟಿಕೊಂಡಿತು. ನನಗಾದ ಅನ್ಯಾಯಕ್ಕೆ ಮಾತ್ರವಲ್ಲ, ಬೇರೆಯವರ ಅನ್ಯಾಯದ ವಿರುದ್ಧವೂ ಧ್ವನಿ ಎತ್ತಲು ನಿರ್ಧರಿಸಿದೆ ಎಂದಿದ್ದಾರೆ ಭಾವನಾ. ಇದನ್ನೂ ಓದಿ : ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?
ನನ್ನ ಬಗ್ಗೆಯೇ ಆರೋಪ ಮಾಡಿದರು : ಇಂತಹ ಘಟನೆ ನಡೆದಾಗ ಸಹಜವಾಗಿಯೇ ಮಹಿಳೆಯರ ವಿರುದ್ಧವೇ ಟೀಕೆ ಮಾಡುತ್ತಾರೆ. ನನಗೂ ಹಾಗೆಯೇ ಆಯಿತು. ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಬರೆದರು. ಸೋಷಿಯಲ್ ಮೀಡಿಯಾದಲ್ಲಿ ಅವಮಾನ ಆಗುವಂತೆ ಟೀಕಿಸಿದರು. ನಾನೇಕೆ ಅವರೊಂದಿಗೆ ಕಾರಿನಲ್ಲಿ ಹೋದೆ ಎಂದು ಪ್ರಶ್ನೆ ಮಾಡಿದರು. ತಪ್ಪಾಗಿದ್ದು ನನ್ನಿಂದಲೇ ಅಂತ ಜರಿದರು. ಅದೊಂದು ರೀತಿಯ ಅವಮಾನ. ಈ ಘಟನೆಯಿಂದ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದೇನೆ ಎನ್ನುವಷ್ಟರಲ್ಲಿ ಯಾವುದೇ ಪತ್ರಿಕೆ ಸುಳ್ಳು ಬರೆದಿರೋದು, ಇನ್ನ್ಯಾರೋ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆಯೇ ಕೆಟ್ಟದ್ದಾಗಿ ಕಮೆಂಟ್ ಮಾಡಿರೋರು. ಮತ್ತೆ ನಾನು ಕುಸಿಯುತ್ತಿದ್ದೆ. ಇಂತಹ ವೇಳೆಯಲ್ಲಿ ನನ್ನ ಬೆಂಬಲಕ್ಕೆ ನಿಂತದ್ದು ಸ್ನೇಹಿತರು, ನನ್ನ ಕುಟುಂಬ ಮತ್ತು ಅಭಿಮಾನಿಗಳು. ಇವತ್ತು ನಾನು ಜೀವಂತವಾಗಿ ಇರುವುದಕ್ಕೆ ಅವರೇ ಕಾರಣ. ಇಲ್ಲದೇ ಇದ್ದರೆ, ನನ್ನ ಸ್ಥಿತಿ ಮೊದಲಿನಂತೆ ಆಗುತ್ತಿರಲಿಲ್ಲ ಎಂದು ಆ ಸನ್ನಿವೇಶವನ್ನೂ ಭಾವನಾ ಹಂಚಿಕೊಂಡಿದ್ದಾರೆ.
ಪ್ರಕರಣ ಕೈ ಬಿಡಬೇಕು ಎಂದುಕೊಂಡಿದ್ದೆ : ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ಕೆಟ್ಟ ಕೆಟ್ಟದ್ದಾಗಿ ಬರೆಯುತ್ತಿದ್ದರು. ನೀನೇಕೆ ಸತ್ತು ಹೋಗಬಾರದು ಅನ್ನುವ ಕಾಮೆಂಟ್ಸ್ ಕೂಡ ಅದರಲ್ಲಿದ್ದವು. ಬೆದರಿಕೆಯ ಕರೆಗಳು ಬೇರೆ. ನನ್ನಿಂದಾಗಿಯೇ ಬೇರೆಯವರು ತೊಂದರೆ ಆಗುತ್ತಿದೆ ಎಂದು ಗೂಬೆ ಕೂರಿಸಿದರು. ಅವರ ವಿರುದ್ಧ ನನ್ನಿಂದ ಹೋರಾಡುವುದಕ್ಕೆ ಸಾಧ್ಯವೇ ಇಲ್ಲವೇನೋ ಎನ್ನುವಂತಹ ವಾತಾವರಣ ಸೃಷ್ಟಿಸಿದ್ದರು. ಆ ವೇಳೆಯಲ್ಲಿ ಈ ಪ್ರಕರಣದಿಂದ ನಾನು ಹಿಂದೆ ಸರಿಯಬೇಕು ಅನಿಸೋದು. ಆದರೆ, ಆಗಿರುವ ಅನ್ಯಾಯವನ್ನು ಸುಮ್ಮನೆ ಬಿಟ್ಟರೆ, ಅದರ ವಿರುದ್ಧ ಧ್ವನಿ ಎತ್ತೋರು ಯಾರು? ಅಂತ ಅನಿಸೋದು. ಹಾಗಾಗಿ ನನಗೆ ನಾನೇ ಸಮಾಧಾನ ಪಡಿಸಿಕೊಂಡು ಹೋರಾಟಕ್ಕೆ ಇಳಿದೆ. ನನ್ನ ಘನತೆಯನ್ನು ಚೂರು ಚೂರು ಮಾಡಿದ್ದಾರೆ. ಪ್ರಕರಣವನ್ನು ಗೆಲ್ಲುವ ಮೂಲಕವೇ ಆ ಘನತೆಯನ್ನು ನಾನು ಪಡೆದುಕೊಳ್ಳಬೇಕು ಎಂದು ಸಿದ್ಧವಾದೆ” ಎಂದಿದ್ದಾರೆ ಭಾವನಾ.
ಚಿತ್ರೋದ್ಯಮದಿಂದಲೇ ದೂರವಾದೆ: ಈ ಪ್ರಕರಣದ ನಂತರ ಜೀವ ಬೆದರಿಕೆ ಕರೆಗಳು ಬರುವುದಕ್ಕೆ ಶುರುವಾದವು. ಚಿತ್ರೀಕರಣಕ್ಕೆ ಹೋಗಲು ಭಯ ಆಗುವುದು. ಮಲಯಾಳಂನಲ್ಲೇ ನಟಿಸಲು ಸಾಕಷ್ಟು ಆಫರ್ಸ್ ಬಂದರೂ, ಅವುಗಳನ್ನು ಬಿಟ್ಟುಬಿಟ್ಟೆ. ನಾನು ಸಿನಿಮಾ ರಂಗದಿಂದ ದೂರವಾಗುತ್ತೇನೆ ಎನ್ನುವ ವಿಷಯ ಚಿತ್ರರಂಗ ತಲುಪಿತು. ಅಭಿಮಾನಿಗಳು ನನ್ನ ಬೆಂಬಲಕ್ಕೆ ನಿಂತರು. ಸಿನಿಮಾ ರಂಗ ಬಿಟ್ಟು ಹೋಗಬೇಡಿ ಅಂದರು. ವಾಸ್ತವ ಸ್ಥಿತಿ ನನಗೆ ಮಾತ್ರ ಗೊತ್ತಿತ್ತು. ಹಾಗಾಗಿ ಯಾವ ಸಿನಿಮಾಗಳನ್ನು ಒಪ್ಪಲಿಲ್ಲ. ಸಿನಿಮಾ ರಂಗದಿಂದ ದೂರವಾಗುವಂತಹ ಅನಿವಾರ್ಯತೆ ನನಗಿತ್ತು. ಹಾಗಾಗಿ ಚಿತ್ರೋದ್ಯಮದಿಂದ ದೂರವಾದೆ ಎನ್ನುವುದು ಭಾವನಾ ಮಾತು.