Tag: bhavana belagere

  • ಯಾರಾದರೂ ಪೊಲೀಸ್ ಸ್ನೇಹಿತರಿದ್ದೀರಾ? ವ್ಯಕ್ತಿಯೊಬ್ಬನ ಕಿರುಕುಳದ ಬಗ್ಗೆ ಭಾವನಾ ಬೆಳಗೆರೆ ಪೋಸ್ಟ್

    ಯಾರಾದರೂ ಪೊಲೀಸ್ ಸ್ನೇಹಿತರಿದ್ದೀರಾ? ವ್ಯಕ್ತಿಯೊಬ್ಬನ ಕಿರುಕುಳದ ಬಗ್ಗೆ ಭಾವನಾ ಬೆಳಗೆರೆ ಪೋಸ್ಟ್

    ಬೆಂಗಳೂರು: ಯಾರಾದರೂ ಪೊಲೀಸ್ ಸ್ನೇಹಿತರಿದ್ದೀರಾ? ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿರುವುದರ ಬಗ್ಗೆ ಒಂದು ಕಂಪ್ಲೇಟ್ ಕೊಡಬೇಕಿದೆ. ಹೀಗೆಂದು ಬಿಗ್‍ಬಾಸ್ ಸೀಸನ್-4ರ ಸ್ಫರ್ಧಿ, ನಿರೂಪಕಿ ಭಾವನ ಬೆಳಗೆರೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಪ್ರದೀಪ್ ಎಂಬಾತ ನನಗೆ ಅಶ್ಲೀಲ ಸಂದೇಶವನ್ನು, ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸುತ್ತಿದ್ದಾನೆ. ಅಶ್ಲೀಲ ಸಂದೇಶದ ಜೊತೆಗೆ ಕೆಟ್ಟ ಕೆಟ್ಟ ಫೋಟೋಸ್ ಹಾಗೂ ವಿಡಿಯೋಸ್‍ನ ಕಳುಹಿಸುತ್ತಿದ್ದಾನೆ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಪ್ರದೀಪ್ ಯಾರು ಎಲ್ಲಿಯವನು ಎನ್ನುವ ವಿಚಾರದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಬೇಕಿದೆ.



  • ರವಿ ಬೆಳಗೆರೆ ಸುಪಾರಿ ಪ್ರಕರಣ: ಮಗಳು ಭಾವನಾ, ಮಗ ಕರ್ಣ ಹೀಗಂದ್ರು

    ರವಿ ಬೆಳಗೆರೆ ಸುಪಾರಿ ಪ್ರಕರಣ: ಮಗಳು ಭಾವನಾ, ಮಗ ಕರ್ಣ ಹೀಗಂದ್ರು

    ಧಾರವಾಡ/ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆ ವಿರುದ್ಧದ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಮಾತನಾಡಿದ್ದು, ಗೌರಿ ಹತ್ಯೆ ತನಿಖೆ ದಿಕ್ಕು ತಪ್ಪಿಸುವ ಉದ್ದೇಶದಿಂದ ನಮ್ಮ ತಂದೆಯನ್ನು ಸಿಲುಕಿಸಲಾಗ್ತಿದೆ ಎಂದು ಹೇಳಿದ್ದಾರೆ.

    ಇಂತಹ ತೀರಾ ಕಳಪೆ ಆರೋಪ ಅವರ ಮೇಲೆ ಬಂದಿದೆ ಅನ್ನೋದು ಶಾಕಿಂಗ್. ಸುಮಾರು ವಿಷಯಗಳಲ್ಲಿ ಅವರ ಮೇಲೆ ಆರೋಪಗಳು ಬಂದಿವೆ. ಆದ್ರೆ ಚಿಲ್ಲರೆ ಕೆಲಸ ಮಾಡುವಂತ ಆರೋಪವಿದು ಎಂಬುದು ಶಾಕಿಂಗ್. ನಮ್ಮ ಅಪ್ಪ ದೊಡ್ಡ ಮನುಷ್ಯ. ಅವರು ಇಂತಹ ಕೆಟ್ಟ ಕೆಲಸ ಮಾಡೋರಲ್ಲ. ಇದು ಕೇವಲ ಆರೋಪ ಅಷ್ಟೇ. ಆದರೆ ಯಾವುದೇ ಬಲವಾದ ಸಾಕ್ಷ್ಯ ಇಲ್ಲ. ನಾವು ಕಾನೂನು ಬ್ರೇಕ್ ಮಾಡಿ ನಾವೇ ಸರಿ ಅಂತಾ ಹೇಳೋಕೆ ಆಗಲ್ಲ. ನಾಲ್ಕು ದಿವಸ ಕಾಯಲೇಬೇಕು, ಕಾಯುತ್ತೇವೆ. ಅವರ ಆರೋಗ್ಯ ಸರಿ ಇಲ್ಲ. ನಮ್ಮಪ್ಪನಿಗೆ ಕ್ಲಿನ್ ಚಿಟ್ ಸಿಗುತ್ತೆ. ನಮ್ಮ ತಂದೆ ಯಾವುದೇ ಗಿಲ್ಟಿ ಇಲ್ಲದೇ ಹೊರಗೆ ಬರ್ತಾರೆ ಅಂತ ಭಾವನಾ ಬೆಳಗೆರೆ ಹೇಳಿದ್ದಾರೆ.

    ಸುನೀಲ್ ಅಪ್ಪನ ಕೆಳಗೆ ಪಳಗಿರೋದು, ಅವರು ಹೇಳಿಕೊಟ್ಟ ದಾರಿಯಲ್ಲೇ ಪತ್ರಿಕೋದ್ಯಮ ಮಾಡಿರೋದು. ಒಳ್ಳೇ ವರದಿಗಾರರೂ ಹೌದು. ಅವರ ನಡುವಿನ ಮನಸ್ತಾಪದಿಂದ ಕೆಲಸ ಬಿಟ್ಟು ಹೋಗಿದ್ದರು. ಅಪ್ಪನೇ ಫೋನ್ ಮಾಡಿ, ಬಾ ನೀನು ಅಂತ ಒತ್ತಡ ಕೊಟ್ಟು ಕರೆಸಿಕೊಂಡರು. ಏನಾಯಿತು ಅನ್ನೋದು ಅವರಿಬ್ಬರ ವೈಯಕ್ತಿಕ ವಿಷಯ. ಅದರ ಬಗ್ಗೆ ಮಾಹಿತಿಯೂ ಸರಿಯಾಗಿ ಗೊತ್ತಿಲ್ಲ. ಈಗ ಸುನೀಲ್ ಜೀವ ಭಯ ಅಂತ ಹೇಳ್ತಿರೋದು ಶಾಕ್ ಆಗಿದೆ ಅಂದ್ರು.

    ಬೆಂಗಳೂರಿನಲ್ಲಿ ಮಾತನಾಡಿದ ಪತ್ರಕರ್ತ ರವಿಬೆಳೆಗೆರೆ ಪುತ್ರ ಕರ್ಣ, ಮನೆಗೆ ಪೊಲೀಸರು ಬಂದು ವಿಚಾರಣೆಗೆ ಸ್ಪಂದಿಸುವಂತೆ ಕೇಳಿಕೊಂಡಿದ್ರು. ನಮ್ಮ ಕಡೆಯಿಂದ ಸ್ಪಂದಿಸಿದ್ದೇವೆ. ಪ್ರಕರಣದ ಬಗ್ಗೆ ಈಗಲೂ ನಮ್ಮ ಫ್ಯಾಮಿಲಿಗೆ ಗೊಂದಲವಿದೆ. ಯಾಕೆ? ಹೇಗೆ? ಈ ಪ್ರಕರಣ ಹುಟ್ಟಿಕೊಳ್ತು ಗೊತ್ತಿಲ್ಲ. ಸುಪಾರಿ ಕಿಲ್ಲರ್ ಶಶಿಧರ್ ಯಾರು ಅಂತ ಗೊತ್ತಿಲ್ಲ. ತಂದೆಯವರು ಡಯಾಬಿಟಿಸ್ ನಿಂದ ಬಳಲುತ್ತಿದ್ದಾರೆ. ಒಂದು ವೇಳೆ ಡಯಾಬಿಟಿಸ್ ಜಾಸ್ತಿಯಾದ್ರೆ ಆಸ್ಪತ್ರೆ ಸೇರಿಸಲೇಬೇಕಾಗುತ್ತೆ. ಸದ್ಯ ಸಿಸಿಬಿಯಲ್ಲೇ ಇರ್ತಾರೆ ಅಂತ ಹೇಳಿದ್ರು.

    https://www.youtube.com/watch?v=86k-IW3-boE

    https://www.youtube.com/watch?v=lgEoaxQ1l44

    https://www.youtube.com/watch?v=tvAkOpM6ZZo