Tag: bhavana

  • `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

    `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

    ನಟಿ/ರಾಜಕಾರಣಿ ಭಾವನಾ ತಾಯಿಯಾಗುತ್ತಿರುವ ಸುದ್ದಿ ಈಗ ವ್ಯಾಪಕವಾಗಿ ಹಬ್ಬಿದೆ. ಅವರೀಗ ಆರು ತಿಂಗಳ ಗರ್ಭಿಣಿಯಾಗಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. IVF (ಐವಿಎಫ್) ಮೂಲಕ ಭಾವನಾ (Bhavana Ramanna) ಗರ್ಭ ಧರಿಸಿದ್ದು ಸೋಶಿಯಲ್ ಮೀಡಿಯಾಡಲ್ಲಿ (Social Media) ಪರ ವಿರೋಧದ ಟೀಕೆ ಹೆಚ್ಚಾಗುತ್ತಿದೆ.

    ಈ ಕುರಿತು ಆಫಿಷಿಯಲ್ ಆಗಿ ಮೊದಲ ಮಾತನ್ನ ಇನ್‌ಸ್ಟಾ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. 40ರ ಆಸುಪಾಸಿನಲ್ಲಿ ತಾವು ಗರ್ಭಿಣಿಯಾಗಲು (Bhavana Ramanna Pregnant) ನಿರ್ಧರಿಸಿದ್ದು ಯಾಕೆ..? ಆ ದಾರಿ ಹೇಗಿತ್ತು..? ತಂದೆ ಇಲ್ಲದೆ ಮಕ್ಕಳು ಹೇಗೆ ಬೆಳೆಯಬಹುದು..? ಯಾಕೆ ಸೂಕ್ತ ವಯಸ್ಸಿದ್ದಾಗಲೇ ತಾಯ್ತನದ ಬಗ್ಗೆ ಆಸಕ್ತಿ ಇರಲಿಲ್ಲ, ಅನ್ನೋ ವಿಷಯಗಳ ಕುರಿತು ಅವರು ಬಹಿರಂಗವಾಗಿ ಮನದ ಮಾತನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ತಾಯಿ ಆಗುತ್ತಿರುವ ಕುರಿತು ಭಾವನಾ ಹೇಳಿದ್ದೇನು..?
    ಇದು ನನ್ನ ಹೊಸ ಅಧ್ಯಾಯ, ಹೊಸ ಲಯ, ನಾನು ಇದನ್ನು ಹೇಳುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ, ಆದರೆ ಇಲ್ಲಿ ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ನನಗೆ 20-30 ವರ್ಷ ಇದ್ದಾಗ ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. 40 ವರ್ಷ ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ, ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಸೆಂಟರ್‌ಗಳು ನನ್ನನ್ನು ತಿರಸ್ಕಾರ ಮಾಡಿದ್ದವು. ಬಳಿಕ ನಾನು ಡಾ. ಸುಷ್ಮಾರನ್ನು ಭೇಟಿಯಾದೆ. ಅವರು ನನ್ನ ಮೇಲೆ ಯಾವುದೇ ಯಾವುದೇ ಕೀಳು ಭಾವನೆ ಪಡದೇ ಸ್ವಾಗತಿಸಿದ್ರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ. ಇದನ್ನೂ ಓದಿ: ಪ್ರಜ್ವಲ್ ಹುಟ್ಟುಹಬ್ಬಕ್ಕೆ `ಮಾಫಿಯಾ’ ಟೀಮ್ ಗಿಫ್ಟ್

    ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪಕ್ಕದಲ್ಲಿ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು, ಆದರೆ ನನ್ನ ಮನಸ್ಸಿನಲ್ಲಿ ನಾನು ಎಲ್ಲದಕ್ಕೂ ಸಿದ್ಧಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ದಯೆ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಬೆಳಯುತ್ತಾರೆ. ನಾನು ರೆಬೆಲ್ ಆಗಲು ಈ ಮಾರ್ಗವನ್ನು ಆರಿಸಿಕೊಂಡಿಲ್ಲ, ನನ್ನ ಸತ್ಯವನ್ನು ಗೌರವಿಸಲು ನಾನು ಈ ಮಾರ್ಗವನ್ನ ಆಯ್ಕೆ ಮಾಡಿಕೊಂಡೆ. ನನ್ನ ಕಥೆ, ಒಬ್ಬಳೇ ಒಬ್ಬಳು ಮಹಿಳೆಯಾದರೂ ತನ್ನನ್ನು ತಾನು ನಂಬುವಂತೆ ಪ್ರೇರೇಪಿಸಿದರೆ ಸಾಕು. ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ ಹಾಗೂ ಅದೇ ಎಲ್ಲವೂ ಆಗಿರುತ್ತದೆ. ಇದನ್ನೂ ಓದಿ: ಜಾನಿ ಮಾಸ್ಟರ್ ಜೊತೆಗಿನ ಫೋಟೋ: ಟೀಕೆಗೆ ಒಳಗಾದ ನಯನತಾರಾ-ವಿಘ್ನೇಶ್

  • ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ವಿಎಫ್‌ ಮೂಲಕ 40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಖುಷಿಯಲ್ಲಿದ್ದ ನಟಿ ಭಾವನಾ ರಾಮಣ್ಣಗೆ (Bhavana Ramanna) ಆಘಾತವೂ ಆಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿ ನಟಿ ಆರೋಗ್ಯವಾಗಿದ್ದರೆ, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ.

    ನಟಿ ಭಾವನ ರಾಮಣ್ಣಗೆ ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ತಾಯಿಯದ ನಟಿ ಭಾವನಾ ಅವರು ಸದ್ಯ ಆರೋಗ್ಯವಾಗಿದ್ದಾರೆ. ಆದ್ರೆ ಒಂದು ಮಗು ನಿಧನವಾಗಿದೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ಐವಿಎಫ್ (IVF) ಮೂಲಕ ತಾಯಿ ಆದ ನಟಿ ಭಾವನಾ ಅವರು ಇತ್ತೀಚೆಗೆ ಸೀಮಂತ ಮಾಡಿಸಿಕೊಂಡಿದ್ದರು. ವೈದ್ಯರ ಸೂಚನೆಯಂತೆ ಹೆರಿಗೆ ಮಾಡಲಾಗಿದ್ದು, ಒಂದು ಮಗುವಿನಲ್ಲಿ 7 ತಿಂಗಳ ನಂತರ ಸಮಸ್ಯೆ ಕಾಣಿಸಿಕೊಂಡ ಕಾರಣ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಸದ್ಯ ಒಂದು ಮಗು, ತಾಯಿ ಇಬ್ಬರು ಕ್ಷೇಮವಾಗಿದ್ದು, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ. ಇದನ್ನೂ ಓದಿ: ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ

    40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದ ನಟಿ
    ನಟಿ ಭಾವನಾ ರಾಮಣ್ಣ, ತಮ್ಮ ಬಾಲ್ಯದಿಂದಲೂ ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿ ತಟ್ಟಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. “ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40 ತಲುಪಿದಾಗ ತಾಯಿಯಾಗಬೇಕೆಂಬ ಕರೆಯನ್ನು ತಡೆಯಲಾಗಲಿಲ್ಲ” ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

    ಭಾವನಾ ರಾಮಣ್ಣ ಸಿನಿ ಜರ್ನಿ
    ನಂದಿನಿ ರಾಮಣ್ಣ ಎಂಬ ಮೂಲ ಹೆಸರಿನ ಭಾವನಾ, ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯ ಮತ್ತು ಭರನಾಟ್ಯ ಕೌಶಲ್ಯಕ್ಕೆ ಹೆಸರಾಗಿದ್ದಾರೆ. ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭಾವನಾ, ʻಚಂದ್ರಮುಖಿ ಪ್ರಾಣಸಖಿʼ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು. ಭಾವನಾ ʻನೀ ಮುಡಿದ ಮಲ್ಲಿಗೆʼ, ʻಕ್ಷಾಮʼ, ʻಭಾಗೀರಥಿʼ ಸಿನಿಮಾಗಾಗಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟಿಯಾಗಿ ಮಾತ್ರವಲ್ಲ, ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಸದ್ಯ ಭಾವನಾ ರಾಮಣ್ಣ ಅವರ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

  • ‘ಪಿಂಕ್ ನೋಟ್ ‘ಹುಡುಕಿಕೊಂಡು ದುಬೈಗೆ ಹೊರಟು ನಿಂತ ನೆನಪಿರಲಿ ಪ್ರೇಮ್

    ‘ಪಿಂಕ್ ನೋಟ್ ‘ಹುಡುಕಿಕೊಂಡು ದುಬೈಗೆ ಹೊರಟು ನಿಂತ ನೆನಪಿರಲಿ ಪ್ರೇಮ್

    ನೆನಪಿರಲಿ ಪ್ರೇಮ್  (Nenapirali Prem) ದುಬೈಗೆ ಹಾರಿದ್ದಾರೆ. ಜೊತೆಗೆ ಜಾಕಿ ಸಿನಿಮಾ ಖ್ಯಾತಿಯ ಭಾವನಾ (Bhavana) ಅವರನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಅಷ್ಟಕ್ಕೂ ಪ್ರೇಮ್ ದುಬೈ ವಿಮಾನ ಏರಿದ್ದು, ಪಿಂಕಿ ನೋಟ್ ಹುಡುಕುವುದಕ್ಕಾಗಿ ಎನ್ನುವುದು ವಿಶೇಷ. ಅಂದರೆ, ಪಿಂಕ್ ನೋಟ್ (Pink Note) ಸಿನಿಮಾದ ಶೂಟಿಂಗ್ ದುಬೈನಲ್ಲಿ (Dubai) ನಡೆಯಲಿದ್ದು, ಭಾವನಾ ಮತ್ತು ಪ್ರೇಮ್ ಜೊತೆಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

    ಈ ಸಿನಿಮಾದ ಮೂಲಕ ಭಾವನಾ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಭಜರಂಗಿ 2 ಸಿನಿಮಾದ ನಂತರ ಅವರಿಗೆ ಮತ್ತಷ್ಟು ಅವಕಾಶಗಳು ಬರುತ್ತಿದ್ದು, ಇದೀಗ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.

    ದುಡ್ಡಿನ ಹಿಂದೆ ಬಿದ್ದಾಗ ಮನುಷ್ಯ ಏನೆಲ್ಲ ಆಗುತ್ತಾನೆ ಎನ್ನುವ ಕುರಿತಾದ ಕಥಾ ಹಂದರ ಈ ಸಿನಿಮಾದಲ್ಲಿದ್ದು, ಮಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಈ ಸಿನಿಮಾಗಾಗಿ ಬಳಸಿಕೊಂಡಿದ್ದಾರಂತೆ ನಿರ್ದೇಶಕರು. ಮಧ್ಯಮ ವರ್ಗದ ಕುಟುಂಬದಲ್ಲಿ ನಡೆದ ಘಟನೆ ಇದಾಗಿದ್ದು, ಭಾವನಾ ಕೂಡ ಮಧ್ಯಮ ವರ್ಗದ ಅಕ್ಕ-ತಂಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

    ದಿಗಂತ್ ಅಲಿಯಾಸ್ ರಕ್ಷಣ್ ಈ ಸಿನಿಮಾದ ನಿರ್ದೇಶಕರಾಗಿದ್ದು, ಅಮ್ಮ ಎಂಟರ್ ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗಲಿದೆ. ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮುಹೂರ್ತವಾಗಿದ್ದು, ಮೊದಲ ದೃಶ್ಯಕ್ಕೆ ಶಿವಮೂರ್ತಿ ಮುರಘಾ ಶರಣರು ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

     

    ‘2010ರಂದು ಮಂಗಳೂರಿನಲ್ಲಿ ನಡೆದ ಘಟನೆಯನ್ನು ನಿರ್ದೇಶಕರು ಹೇಳಿದಾಗ ಥ್ರಿಲ್ ಆಯಿತು. ದ್ವಿಪಾತ್ರ ಮಾಡುವುದು ಸವಾಲಿನ ಕೆಲಸವಾದರೂ, ಇಂತಹ ಪಾತ್ರದಲ್ಲಿ ನಟಿಸುವುದು ಥ್ರಿಲ್ ಅನಿಸುತ್ತದೆ’ ಎಂದಿದ್ದಾರೆ ಭಾವನಾ. ಪಾತ್ರದ ಹಿನ್ನೆಲೆ ಮತ್ತು ಕಥೆಯ ಗುಟ್ಟವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಶ್ರೀನಿವಾಸ್ ಪ್ರಭು, ಪದ್ಮಜರಾವ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಬಹುತೇಕ ಕಥೆಯು ಅರಬ್ ಪ್ರಾಂತ್ಯದಲ್ಲಿ ನಡೆಯುವುದರಿಂದ ದುಬೈನ ರಸಾಸೆಲ್ ಖೈಮ್ ದಲ್ಲಿ ಶೇಕಡಾ ಅರವತ್ತರಷ್ಟು ಶೂಟಿಂಗ್ ಮಾಡುತ್ತಾರಂತೆ ನಿರ್ದೇಶಕರು.

  • ಮದುವೆ ಇಷ್ಟ, ಆದ್ರೆ ಸರಿಯಾದ ಹುಡುಗ ಸಿಕ್ಕಿಲ್ಲ: ಭಾವನಾ

    ಮದುವೆ ಇಷ್ಟ, ಆದ್ರೆ ಸರಿಯಾದ ಹುಡುಗ ಸಿಕ್ಕಿಲ್ಲ: ಭಾವನಾ

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹುಡುಗಿಯರಿಗೆ ಮಾತ್ರ ಯಾಕೆ ಬ್ಯಾನ್?‌

    ಹುಡುಗಿಯರಿಗೆ ಮಾತ್ರ ಯಾಕೆ ಬ್ಯಾನ್?‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಮಾಲಿಗುಡ್ಡ- 90ರ ದಶಕದ ಮನಮಿಡಿಯುವ ಭಾವನಾತ್ಮಕ ಪಯಣ

    ಜಮಾಲಿಗುಡ್ಡ- 90ರ ದಶಕದ ಮನಮಿಡಿಯುವ ಭಾವನಾತ್ಮಕ ಪಯಣ

    ನಂಜಯ (Dhananjay) ಮತ್ತು ಅದಿತಿ ಪ್ರಭುದೇವಾ (Aditi Prabhudeva) ನಟನೆಯ Once Upon a Time In `ಜಮಾಲಿಗುಡ್ಡ’ ಡಿ.30ರಂದು ಸಿನಿಮಾ ತೆರೆಕಂಡು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಏನೀದು ಜಮಾಲಿಗುಡ್ಡ? ಚಿತ್ರದ ಕುರಿತು ಇಲ್ಲಿದೆ ಅಪ್‌ಡೇಟ್.

    ಕುಶಾಲ್ ಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ ಜಮಾಲಿಗುಡ್ಡ ಸಿನಿಮಾ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಡಿ.30ರಂದು ರಿಲೀಸ್ ಆಗಿದೆ. ಡಾಲಿ, ಅದಿತಿ, ಭಾವನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಧನಂಜಯ್ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ ಡಾಲಿ ಧನಂಜಯ. ಮಾತು ತಡವರಿಸುವ ಮುಗ್ಧ ಹುಡುಗನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಎರಡು ಶೇಡ್ ಗಳಲ್ಲಿ ಸ್ನೇಹ, ಮಮಕಾರ, ಪ್ರೀತಿಯ ಅಪ್ಪುಗೆಯನ್ನು ವ್ಯಕ್ತಪಡಿಸಿದ್ದಾರೆ.

    ನಿಹಾರಿಕಾ ಮೂವೀಸ್ (Niharika Movies) ನಿರ್ಮಾಣದ ‌ʻಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡʼ ಚಿತ್ರಕ್ಕೆ ಕುಶಾಲ್ ಗೌಡ ನಿರ್ದೇಶನ ಮಾಡಿದ್ದಾರೆ. ಇದೊಂದು 90ರ ದಶಕದ ಕಾಲ್ಪನಿಕ ಪ್ರಪಂಚದ ಭಾವನಾತ್ಮಕ ಕಥೆಯಾಗಿದ್ದು, ಧನಂಜಯ್ ಮತ್ತು ಬೇಬಿ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ಚಿಕ್ಕಮಗಳೂರು ಮತ್ತು ಬಾಬಾಬುಡನ್‌ಗಿರಿ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ.

    ಚಿತ್ರದಲ್ಲಿ ಅದ್ಭುತ ಪ್ರೇಮಕಥೆ, ಆ್ಯಕ್ಷನ್, ಬಾಂಧವ್ಯ, ಪ್ರತಿಯೊಂದನ್ನ ಕೂಡ ಗಮನದಲ್ಲಿಟ್ಟುಕೊಂಡು ಈ ಸಿನಿಮಾ ರೂಪಿಸಲಾಗಿದೆ. ಖಡಕ್ ಪಾತ್ರಗಳ ಮೂಲಕ ಡಾಲಿನ ನೋಡಿದ್ದ ಅಭಿಮಾನಿಗಳಿಗೆ ಈ ಚಿತ್ರದಲ್ಲಿನ ಡಾಲಿ ಪಾತ್ರ ಗಮನ ಸೆಳೆದಿದೆ.

    ಇನ್ನೂ ನಟಿ ಅದಿತಿ ಪ್ರಭುದೇವಾ ಕೂಡ ಮೊದಲ ಬಾರಿಗೆ ಧನಂಜಯಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅದಿತಿ ಕೂಡ ಮಧ್ಯಮ ವರ್ಗದ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿ ಸಿಗರೇಟ್ ಕೂಡ ಸೇದಿದ್ದಾರೆ. ಡಾಲಿ, ಅದಿತಿ ಜೊತೆ ಭಾವನಾ ಕೂಡ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಧನಂಜಯ್, ಅದಿತಿ, ಭಾವನಾ, ಪ್ರಕಾಶ್ ಬೆಳವಾಡಿ, ಪ್ರಾಣ್ಯ, ಯಶ್ ಶೆಟ್ಟಿ, ತ್ರಿವೇಣಿ ರಾವ್ ನಟಿಸಿದ್ದಾರೆ.

    ಡಿ.30ರಂದು ತೆರೆಕಂಡಿರುವ ಈ ಸಿನಿಮಾ ನೋಡಿರುವ ಪ್ರೇಕ್ಷಕರು, ಪಕ್ಕಾ ಪೈಸಾ ವಸೂಲ್ ಚಿತ್ರ ಎನ್ನುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಮಾಲಿಗುಡ್ಡದ ಕಥೆ ಹೇಳಲು ಡಾಲಿ, ಅದಿತಿ ರೆಡಿ

    ಜಮಾಲಿಗುಡ್ಡದ ಕಥೆ ಹೇಳಲು ಡಾಲಿ, ಅದಿತಿ ರೆಡಿ

    ಟರಾಕ್ಷಸ ಧನಂಜಯ್ ನಟನೆಯ ʻOnce Upon a Time In ಜಮಾಲಿಗುಡ್ಡʼ ಸಿನಿಮಾ ತೆರೆಗೆ ಬರಲು ಕೌಂಟ್‌ಡೌನ್ ಶುರುವಾಗಿದೆ. ಈ ವರ್ಷದ ಅಂತ್ಯಕ್ಕೆ ಡಾಲಿ ಮತ್ತು ಅದಿತಿ ಜೋಡಿ, ಮೋಡಿ ಮಾಡಲು ಸಜ್ಜಾಗಿದ್ದಾರೆ.

    ನಿಹಾರಿಕಾ ಮೂವೀಸ್ (Niharika Movies) ನಿರ್ಮಾಣದ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರಕ್ಕೆ ಕುಶಾಲ್ ಗೌಡ ನಿರ್ದೇಶನ ಮಾಡಿದ್ದಾರೆ. ಇದೊಂದು 90ರ ದಶಕದ ಕಾಲ್ಪನಿಕ ಪ್ರಪಂಚದ ಭಾವನಾತ್ಮಕ ಕಥೆಯಾಗಿದ್ದು, ಧನಂಜಯ್ ಮತ್ತು ಬೇಬಿ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ಚಿಕ್ಕಮಗಳೂರು ಮತ್ತು ಬಾಬಾಬುಡನ್‌ಗಿರಿ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ. ಇದನ್ನೂ ಓದಿ: ಬಾಲಿವುಡ್‌ನಿಂದ ಬಂತು ಬಿಗ್ ಆಫರ್: ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

    ಚಿತ್ರದಲ್ಲಿ ನಟ ಡಾಲಿ ಮುಗ್ಧ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಲುಕ್‌ನಲ್ಲಿ ಮಿಂಚಿದ್ದಾರೆ. ಅದ್ಭುತ ಪ್ರೇಮಕಥೆ, ಆ್ಯಕ್ಷನ್, ಬಾಂಧವ್ಯ, ಪ್ರತಿಯೊಂದನ್ನ ಕೂಡ ಗಮನದಲ್ಲಿಟ್ಟುಕೊಂಡು ಈ ಸಿನಿಮಾ ರೂಪಿಸಲಾಗಿದೆ. ಖಡಕ್ ಪಾತ್ರಗಳ ಮೂಲಕ ಡಾಲಿನ ನೋಡಿದ್ದ ಅಭಿಮಾನಿಗಳಿಗೆ ಈ ಚಿತ್ರದಲ್ಲಿನ ಡಾಲಿ ಪಾತ್ರ ಗಮನ ಸೆಳೆಯಲಿದೆ.

    ಇನ್ನೂ ನಟಿ ಅದಿತಿ ಪ್ರಭುದೇವಾ (Aditi Prabhudeva) ಕೂಡ ಮೊದಲ ಬಾರಿಗೆ ಧನಂಜಯ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅದಿತಿ ಕೂಡ ಮಧ್ಯಮ ವರ್ಗದ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿ ಸಿಗರೇಟ್ ಕೂಡ ಸೇದಿದ್ದಾರಂತೆ. ಡಾಲಿ, ಅದಿತಿ ಜೊತೆ ಭಾವನಾ (Bhavana) ಕೂಡ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಧನಂಜಯ್, ಅದಿತಿ, ಭಾವನಾ, ಪ್ರಕಾಶ್ ಬೆಳವಾಡಿ, ಪ್ರಾಣ್ಯ, ಯಶ್ ಶೆಟ್ಟಿ, ತ್ರಿವೇಣಿ ರಾವ್ ನಟಿಸಿದ್ದಾರೆ.

    ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಇದೇ ಡಿಸೆಂಬರ್ 30ಕ್ಕೆ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕಾಂಗ್ರೆಸ್ ಸೇರಿರೋದು ಕಾರ್ಯಕರ್ತರಿಗೆ ಗೊತ್ತಿಲ್ಲ, ಹೀಗಾಗಿ ಹಲವರು ಇಂದು ಗಾಬರಿಯಾದ್ರು: ಭಾವನಾ

    ಮತ್ತೆ ಕಾಂಗ್ರೆಸ್ ಸೇರಿರೋದು ಕಾರ್ಯಕರ್ತರಿಗೆ ಗೊತ್ತಿಲ್ಲ, ಹೀಗಾಗಿ ಹಲವರು ಇಂದು ಗಾಬರಿಯಾದ್ರು: ಭಾವನಾ

    ಬೆಂಗಳೂರು: ನಾನು ಮತ್ತೆ ಕಾಂಗ್ರೆಸ್ ಸೇರ್ಪಡೆ ಆಗಿದ್ದು ಹೆಚ್ಚು ಸುದ್ದಿ ಆಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಸೇರ್ಪಡೆ ಆಗಿದ್ದು ಪಕ್ಷದ ಕಾರ್ಯಕರ್ತರಿಗೂ ಗೊತ್ತಾಗಿಲ್ಲ ಅನ್ಸತ್ತೆ. ಹಲವರು ಇವತ್ತು ಗಾಬರಿಯಾದರು ಎಂದು ನಟಿ ಭಾವನಾ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಮಾಚಾರಿ ಧಾರಾವಾಹಿ, ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೆ. ಶಾಸ್ತ್ರೀಯ ಸಂಗೀತದಲ್ಲೂ ಬ್ಯುಸಿ ಇದ್ದೆ. ಹೀಗಾಗಿ ಕಾವೇರಿ ಪಾದಯಾತ್ರೆಗೂ ಬರಕ್ಕಾಗಿಲ್ಲ. ಇವತ್ತು ಈ ಪ್ರತಿಭಟನೆಯಲ್ಲಿ ನಾನು ಬರಲೇಬೇಕಿತ್ತು ಎಂದರು. ಇದನ್ನೂ ಓದಿ: ಹೌದು ನಾವು ಗಾಂಧಿ ಕುಟುಂಬದ ಗುಲಾಮರು, ಬಿಜೆಪಿಯವ್ರು ಸತ್ಯವನ್ನೇ ಹೇಳಿದ್ದಾರೆ: ಡಿಕೆಶಿ

    ಕಾರ್ಯಕರ್ತರೊಬ್ಬರು ನನ್ನನ್ನು ಇವತ್ತು ತಡೆದಾಗ ಬೇರೆ ನಾಯಕರು ಬೆಂಬಲಕ್ಕೆ ಬರುವ ಅಗತ್ಯ ಇರಲಿಲ್ಲ. ನಾವೇ ಸ್ವತಂತ್ರವಾಗಿ, ವೈಯಕ್ತಿಕವಾಗಿ ಎಲ್ಲವನ್ನೂ ಎದುರಿಸಬೇಕು. ಜೊತೆಗೆ ಇವತ್ತು ಅಂತಹ ಗಂಭೀರ ಘಟನೆ ಏನೂ ನಡೆಯಲಿಲ್ಲ. ನಾನು ಬಿಜೆಪಿಗೆ ಹೋಗಿದ್ದು ನನ್ನ ಬಾಲಿಷ ನಿರ್ಧಾರ. ನಾನು ಬಿಜೆಪಿಗೆ ಹೋಗಬಾರದಿತ್ತು. ನನ್ನ ತತ್ವ ಸಿದ್ಧಾಂತಗಳಿಗೆ ಬಿಜೆಪಿ ಒಗ್ಗಲ್ಲ. ಬಿಜೆಪಿಗೆ ಹೋಗಿದ್ದು ನನ್ನದೇ ನಿರ್ಧಾರ ಆಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆಗೆ ಬಂದ ನಟಿ ಭಾವನಾಗೆ ಹಿಗ್ಗಾಮುಗ್ಗ ತರಾಟೆ!

    ಕಾಂಗ್ರೆಸ್ ನಲ್ಲಿ ಸಿಎಂ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಡಿಕೆಶಿ ಪಕ್ಷದ ಹಿರಿಯ ನಾಯಕರು, ಅಗಾಧ ಅನುಭವ ಇರೋರು. ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ರೀತಿಯಲ್ಲಿ ಪರಿಸ್ಥಿತಿ ಇಲ್ಲದಿರಬಹುದು. ರಾಜಕೀಯದಲ್ಲಿ ಎಲ್ಲರೂ ಸಿಎಂ ಆಗಲು ಬಯಸುತ್ತಾರೆ, ಇದು ಸಹಜ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸರ್ಕಾರ ನಡೆಸಬೇಕು. ಯಾರು ಸಿಎಂ ಆಗ್ತಾರೆ ಅಂತ ಜನ ನಿರ್ಧಾರ ತಗೋತಾರೆ. ಇದೇ ವೇಳೆ ಈ ಸಲ ಟಿಕೆಟ್ ಕೇಳ್ತೀರಾ ಎಂಬ ಪ್ರಶ್ನೆಗೆ, ಅದರ ಬಗ್ಗೆ ಪಕ್ಷಕ್ಕೆ ಬಿಡುತ್ತೇನೆ ಎಂದು ಭಾವನಾ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಪ್ರತಿಭಟನೆಗೆ ಬಂದ ನಟಿ ಭಾವನಾಗೆ ಹಿಗ್ಗಾಮುಗ್ಗ ತರಾಟೆ!

    ಕಾಂಗ್ರೆಸ್ ಪ್ರತಿಭಟನೆಗೆ ಬಂದ ನಟಿ ಭಾವನಾಗೆ ಹಿಗ್ಗಾಮುಗ್ಗ ತರಾಟೆ!

    ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಾಯಕರು ಕೈಗೊಂಡ ಪ್ರತಿಭಟನೆಗೆ ಬಂದ ನಟಿ ಭಾವನಾರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

    ನಟಿಗೆ ಕೈ ಕಾರ್ಯಕರ್ತೆಯೊಬ್ಬರು ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಜೆಪಿಗೆ ಹೋಗಿದ್ರಿ ಈಗ ಬಂದಿದ್ದೀರಾ..? ಮುಂದೆ ಬಂದು ಕೂರೋದಕ್ಕೆ ಹೋಗ್ತೀರಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಗಲಿಬಿಲಿಯಾಗಿ ಸಮಾಧಾನ ಮಾಡಲು ಮುಂದಾಗಿದ್ದಾರೆ.  ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ರೂ ಮೌನ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿ

    ಒಟ್ಟಿನಲ್ಲಿ ಮುಂದೆ ಕೂರಲು ನಟಿಗೆ ಕಾರ್ಯಕರ್ತೆ ಅವಕಾಶ ಕೊಡಲಿಲ್ಲ. ಬಳಿಕ ಹಿಂದೆ ಹೋಗಿ ಸ್ವಲ್ಪ ಹೊತ್ತು ಕುಳಿತರು. ಅಲ್ಲಿಂದ ಎದ್ದು ಸೈಡಲ್ಲಿ ನಿಂತರು. ಆದರೆ ಹಿರಿಯ ನಾಯಕರು ಯಾವುದಕ್ಕೂ ತುಟಿ ಬಿಚ್ಚಲಿಲ್ಲ. ಈ ಮೂಲಕ ಭಾವನಾ ಬೆಂಬಲಕ್ಕೆ ಯಾವ ನಾಯಕರು ನಿಲ್ಲದೇ ಇರುವುದು ಗಮನಾರ್ಹವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಪಿಂಕ್ ನೋಟಿನ ಹಿಂದೆ ಬಿದ್ದ ಭಾವನಾ : ದ್ವಿಪಾತ್ರದಲ್ಲಿ ಜಾಕಿ ಬೆಡಗಿ

    ಪಿಂಕ್ ನೋಟಿನ ಹಿಂದೆ ಬಿದ್ದ ಭಾವನಾ : ದ್ವಿಪಾತ್ರದಲ್ಲಿ ಜಾಕಿ ಬೆಡಗಿ

    ಜಾಕಿ ಖ್ಯಾತಿಯ ಭಾವನಾ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಭಜರಂಗಿ 2 ಸಿನಿಮಾದ ನಂತರ ಅವರಿಗೆ ಮತ್ತಷ್ಟು ಅವಕಾಶಗಳು ಬರುತ್ತಿದ್ದು, ಇದೀಗ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪಿಂಕ್ ನೋಟ್ ಎಂದು ಹೆಸರು ಇಡಲಾಗಿದೆ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ದುಡ್ಡಿನ ಹಿಂದೆ ಬಿದ್ದಾಗ ಮನುಷ್ಯ ಏನೆಲ್ಲ ಆಗುತ್ತಾನೆ ಎನ್ನುವ ಕುರಿತಾದ ಕಥಾ ಹಂದರ ಈ ಸಿನಿಮಾದಲ್ಲಿದ್ದು, ಮಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಈ ಸಿನಿಮಾಗಾಗಿ ಬಳಸಿಕೊಂಡಿದ್ದಾರಂತೆ ನಿರ್ದೇಶಕರು. ಮಧ್ಯಮ ವರ್ಗದ ಕುಟುಂಬದಲ್ಲಿ ನಡೆದ ಘಟನೆ ಇದಾಗಿದ್ದು, ಭಾವನಾ ಕೂಡ ಮಧ್ಯಮ ವರ್ಗದ ಅಕ್ಕ-ತಂಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ದಿಗಂತ್ ಅಲಿಯಾಸ್ ರಕ್ಷಣ್ ಈ ಸಿನಿಮಾದ ನಿರ್ದೇಶಕರಾಗಿದ್ದು, ಅಮ್ಮ ಎಂಟರ್ ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗಲಿದೆ. ಬುಧವಾರವಷ್ಟೇ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮುಹೂರ್ತವಾಗಿದ್ದು, ಮೊದಲ ದೃಶ್ಯಕ್ಕೆ ಶಿವಮೂರ್ತಿ ಮುರಘಾ ಶರಣರು ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ‘2010ರಂದು ಮಂಗಳೂರಿನಲ್ಲಿ ನಡೆದ ಘಟನೆಯನ್ನು ನಿರ್ದೇಶಕರು ಹೇಳಿದಾಗ ಥ್ರಿಲ್ ಆಯಿತು. ದ್ವಿಪಾತ್ರ ಮಾಡುವುದು ಸವಾಲಿನ ಕೆಲಸವಾದರೂ, ಇಂತಹ ಪಾತ್ರದಲ್ಲಿ ನಟಿಸುವುದು ಥ್ರಿಲ್ ಅನಿಸುತ್ತದೆ’ ಎಂದಿದ್ದಾರೆ ಭಾವನಾ. ಪಾತ್ರದ ಹಿನ್ನೆಲೆ ಮತ್ತು ಕಥೆಯ ಗುಟ್ಟವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

    ಸದ್ಯ ನಾಯಕಿಯನ್ನು ಮಾತ್ರ ಆಯ್ಕೆ ಮಾಡಿದ್ದು, ನಾಯಕನ ಪಾತ್ರವನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಶ್ರೀನಿವಾಸ್ ಪ್ರಭು, ಪದ್ಮಜರಾವ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಬಹುತೇಕ ಕಥೆಯು ಅರಬ್ ಪ್ರಾಂತ್ಯದಲ್ಲಿ ನಡೆಯುವುದರಿಂದ ದುಬೈನ ರಸಾಸೆಲ್ ಖೈಮ್ ದಲ್ಲಿ ಶೇಕಡಾ ಅರವತ್ತರಷ್ಟು ಶೂಟಿಂಗ್ ಮಾಡುತ್ತಾರಂತೆ ನಿರ್ದೇಶಕರು.