Tag: Bhatkal

  • ಭಟ್ಕಳ| ಮದುವೆ ಮಂಟಪದಲ್ಲಿ ಪಾರ್ಕಿಂಗ್ ವಿಷಯಕ್ಕೆ ನಡುರಸ್ತೆಯಲ್ಲೇ ಮಾರಾಮಾರಿ

    ಭಟ್ಕಳ| ಮದುವೆ ಮಂಟಪದಲ್ಲಿ ಪಾರ್ಕಿಂಗ್ ವಿಷಯಕ್ಕೆ ನಡುರಸ್ತೆಯಲ್ಲೇ ಮಾರಾಮಾರಿ

    ಕಾರವಾರ: ಮದುವೆ ರಿಸಷ್ಷನ್‌ಗಾಗಿ ಬಂದ ಯುವಕರು ಪಾರ್ಕಿಂಗ್ ವಿಷಯದಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹನೀಫಾಬಾದ್‌ನ ಕಸ್ನುಮ್ ಮದುವೆ ಹಾಲ್ ಎದುರು ನಡೆದಿದೆ.

    ಘಟನೆಯಲ್ಲಿ ಐದಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಮೊನ್ನೆ ನಡೆದಿದ್ದ ಈ ಘಟನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಂಟು ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಭಟ್ಕಳದಲ್ಲಿ ನಡೆದ ಘಟನೆ ಏನು?
    ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹನೀಫಾಬಾದ್‌ನ ಕಸ್ನುಮ್ ಮದುವೆ ಹಾಲ್‌ನಲ್ಲಿ ರಿಸಪ್ಷನ್ ಇದ್ದು, ಈ ವೇಳೆ ಎರಡು ಗುಂಪುಗಳು ಅಲ್ಲಿ ಪಾರ್ಕಿಂಗ್ ಮಾಡುವಾಗ ಮಾತಿಗೆ ಮಾತು ನಡೆದಿದೆ.

    ಆರೋಪಿತರು ಗುಂಪಾಗಿ ಸೇರಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ, ಬಳಿಕ ಕೈ ಕೈ ಮಿಲಾಯಿಸಿ ಹೊಡೆದಾಟ ನಡೆಸಿದರೆಂಬ ಮಾಹಿತಿ ಲಭಿಸಿದೆ. ಘಟನಾ ಸ್ಥಳಕ್ಕೆ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಸಿಬ್ಬಂದಿಯೊಂದಿಗೆ ಧಾವಿಸಿ ಜಗಳ ಶಮನಕ್ಕೆ ಮುಂದಾದರು. ಆರೋಪಿತರು ಅವರ ಮಾತು ಕೇಳದೆ ಹೊಡೆದಾಟ ಮುಂದುವರಿಸಿದ್ದು, ಇದರಿಂದ ಕೆಲವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಗಲಭೆಯ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕ ಶಾಂತಿ ಭಂಗವಾಗಿತ್ತು.

    ಇದೀಗ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಸಂಬಂಧ ಹನೀಫಾಬಾದ್‌ನ ಉಜೇಪ ಸೈದ ಅಬ್ದುಲ್ ಖಾದರ, ಸೈಯ್ಯದ ಉಮೇರ, ಸೈಯ್ಯದ ಅಬ್ದುಲ್ ಖಾದಿರ, ಉಮೇರ ರುಕ್ಕುದ್ದೀನ್ ಉಬೇದುಲ್ಲಾ, ಮುಗೇರ್ ಎಂ.ಜೆ.ಮಂಜೂರ, ಆಹಾದನಗರ ಆನೇ ಕ್ರಾಸ್‌ನ ಇಬಾದುಲ್ಲಾ ಸಾದೀಕಟಾನ, ದೇವಿನಗರ ಜಾಲಿಯ ಅಬ್ದುಲ್ ರಹೀಮ ಮಹಮ್ಮದ್ ಹುಸೇನ್, ಮೂಸಾನಗರದ ಮುಸ್ತಾಕ್ ಮಕ್ಖುಲ್ ಹಾಗೂ ದೇವಿನಗರದ ತಾಹೀರ ಮಹಮ್ಮದ್ ಹುಸೇನ್ ವಿರುದ್ಧ ಭಟ್ಕಳ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಲಾಗಿದೆ.

  • ಭಟ್ಕಳ ಅರಣ್ಯದಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆ ಕೇಸ್ – ಇಬ್ಬರ ಬಂಧನ

    ಭಟ್ಕಳ ಅರಣ್ಯದಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆ ಕೇಸ್ – ಇಬ್ಬರ ಬಂಧನ

    ಕಾರವಾರ: ಭಟ್ಕಳ ಅರಣ್ಯದಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಭಟ್ಕಳದ ಚೌಥನಿ ಕಾಲೊನಿಯ ಮೊಹ್ಮದ್ ರಾಯನ್ ಅಲಿಯಾಸ್ ಮಹ್ಮದ್ ರಿಜ್ವಾನ್, ಮಗ್ದೂಂ ಕಾಲೊನಿಯ ಮಹ್ಮದ್ ಸಂವನ್ ಬಂಧಿತ ಆರೋಪಿಗಳು. ಇಬ್ಬರೂ ಗೋವುಗಳನ್ನು ಕಳ್ಳತನ ಮಾಡಿ ಭಟ್ಕಳಕ್ಕೆ ತಂದು ಮಾಂಸ ಬೇರ್ಪಡಿಸಿ ನಂತರ ಮಗ್ದೂ ಕಾಲೊನಿ ಸಮೀಪದ ಅರಣ್ಯದಲ್ಲಿ ಸುರಿಯುತ್ತಿದ್ದರು.

    ಮಗ್ದೂಂ ಕಾಲೊನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಅರಣ್ಯ ಭಾಗದಲ್ಲಿ ದೊಡ್ಡಮಟ್ಟದ ಗೋವುಗಳ ಮೂಳೆಗಳ ರಾಶಿ ಪತ್ತೆಯಾಗಿತ್ತು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ದೂರು ದಾಖಲಿಸಿ ಎರಡು ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ್ ನೇತೃತ್ವದಲ್ಲಿ ಪಿಎಸ್‌ಐ ನವೀನ್ ಅವರ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು.

  • ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? – ನೂರಾರು ಗೋವುಗಳ ಎಲುಬುಗಳು ಪತ್ತೆ; ಪೊಲೀಸರಿಂದ ತನಿಖೆ

    ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? – ನೂರಾರು ಗೋವುಗಳ ಎಲುಬುಗಳು ಪತ್ತೆ; ಪೊಲೀಸರಿಂದ ತನಿಖೆ

    ಕಾರವಾರ: ಆ ಅರಣ್ಯದಲ್ಲಿ ನೂರಾರು ಬುರುಡೆಗಳು, ಸಾವಿರಾರು ಎಲುಬುಗಳು (Cow Bones) ಪತ್ತೆಯಾಗಿವೆ. ಪೊಲೀಸರು ಇದೀಗ ಇದರ ರಹಸ್ಯ ಹೊರಗೆಳೆಯಲು ತನಿಖೆಗಿಳಿದಿದ್ದಾರೆ.

    ಉತ್ತರ ಕನ್ನಡ (Uttara kannada) ಜಿಲ್ಲೆಯ ಭಟ್ಕಳದ ಮುಗ್ದಮ್ ಕಾಲೋನಿ ಬಳಿಯ ಅರಣ್ಯ ಇಲಾಖೆಗೆ ಸೇರಿದ ಬೆಳ್ನೆ ಅರಣ್ಯದ ಸರ್ವೇ ನಂಬರ್ 74ರ ಜಾಗದಲ್ಲಿ ನೂರಾರು ಗೋವುಗಳ ಕಳೇಬರದ ರಾಶಿಯೇ ಪತ್ತೆಯಾಗಿದೆ. ಸ್ಥಳೀಯರು ಈ ಕಾಡಿನ ಭಾಗದಲ್ಲಿ ರಾಶಿ ರಾಶಿ ಬಿದ್ದ ಗೋವುಗಳ ಅಸ್ಥಿಪಂಜರವನ್ನು ನೋಡಿ ಹಿಂದೂ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇದು ತಿಳಿಯುತ್ತಿದ್ದಂತೆ ರಾಶಿ ರಾಶಿ ಬಿದ್ದಿದ್ದ ಅಸ್ಥಿಪಂಜರಗಳನ್ನ ಆ ಸ್ಥಳದಿಂದ ಅನಾಮಿಕ ವ್ಯಕ್ತಿಗಳು ಬೇರೆಡೆ ಸಾಗಿಸಿದ್ದಾರೆ. ಸಾಗಿಸುವ ವೇಳೆ ಅವಸರದಲ್ಲಿ ಪಕ್ಕದಲ್ಲಿದ್ದ ಪುರಸಭೆಯ ವೇಸ್ಟ್ ಡಂಪಿಂಗ್ ಟ್ಯಾಂಕ್‌ಗೂ ಅಸ್ಥಿಪಂಜರಗಳನ್ನು ಹಾಕಲಾಗಿದೆ.

    ಇನ್ನು ಭಟ್ಕಳದಲ್ಲಿ ನಿರಂತರ ಗೋವಧೆ ನಡೆಯುತ್ತಿರುವ ಬಗ್ಗೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮವಾಗಿ ಗೋವುಗಳನ್ನು ಭಟ್ಕಳಕ್ಕೆ ತಂದು ವಧಿಸಲಾಗುತ್ತಿದೆ, ಇದಕ್ಕೆ ಪೊಲೀಸ್ ಇಲಾಖೆಯೂ ಸೇರಿಕೊಂಡಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮೇಲೆ ಬಂದಿರುವ ಅಪವಾದಗಳು ಓಡಿ ಹೋಗುತ್ತವೆ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ಇನ್ನು ಮೊದಲು ಪೊಲೀಸರು ಇದು ಹಳೆಯ ವಿಡಿಯೋ ಎಂದು ಘಟನೆಯನ್ನು ತಳ್ಳಿಹಾಕಿದ್ದರು. ಆದರೆ ಘಟನೆಯ ಸೂಕ್ಷ್ಮತೆ ಅರಿತ ಪೊಲೀಸರು, ಅರಣ್ಯ ಇಲಾಖೆ, ಪುರಸಭೆ ಅಧಿಕಾರಿಗಳು, ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೋವುಗಳ ವಧೆಯಾಗಿರುವುದನ್ನು ಮನಗಂಡು ಭಟ್ಕಳ ಶಹರ ಠಾಣೆಯಲ್ಲಿ ಉಪ ಅವಲಯ ಅರಣ್ಯಾಧಿಕಾರಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಕೇಸ್‌ – ಪಾತ್ರವೇ ಇಲ್ಲದ ಪೊಲೀಸ್‌ ಅಧಿಕಾರಿ ವರ್ಗಾವಣೆ

  • ಅಲೆಗಳ ಹೊಡೆತಕ್ಕೆ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಪರ್ಷಿಯನ್ ಬೋಟ್ – 25 ಮೀನುಗಾರರ ರಕ್ಷಣೆ

    ಅಲೆಗಳ ಹೊಡೆತಕ್ಕೆ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಪರ್ಷಿಯನ್ ಬೋಟ್ – 25 ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಷಿಯನ್ ಬೋಟ್ (Persian Boat) ಅಲೆಗಳ ಹೊಡೆತಕ್ಕೆ ಭಟ್ಕಳ (Bhatkal) ತಾಲೂಕಿನ ನೇತ್ರಾಣಿ ಬಳಿ ಮುಳುಗಿದೆ. ಅದರಲ್ಲಿದ್ದ 25 ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

    ಭಟ್ಕಳದ ಅಣ್ಣಪ್ಪ ಮೊಗೇರ್ ಎಂಬವರಿಗೆ ಸೇರಿದ ಮಹಾ ಮುರುಡೇಶ್ವರ ಹೆಸರಿನ ಪರ್ಷಿಯನ್ ಬೋಟ್ ಇದಾಗಿದೆ. ಮೀನುಗಾರಿಕೆಗೆ ಅರಬ್ಬಿ ಸಮುದ್ರದಲ್ಲಿ ಹೋಗುತ್ತಿರುವಾಗ ಅಲೆಗಳ ಅಬ್ಬರಕ್ಕೆ ಬೋಟ್ ಮುಳುಗಡೆಯಾಗಿದೆ. ತಕ್ಷಣ ಕರಾವಳಿ ಕಾವಲುಪಡೆ ಕಂಟ್ರೋಲ್ ರೂಮ್‌ಗೆ ಕರೆಮಾಡಿದ್ದು, ಸ್ಥಳೀಯ ವೆಲ್ಲನ್ಕಿಣಿ ಮತ್ತು ಮಚ್ಚೆದುರ್ಗ ಎಂಬ ಎರಡು ಬೋಟ್ ಗಳು ಸಹಾಯಕ್ಕೆ ಆಗಮಿಸಿ 25 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ನೋಡನೋಡುತ್ತಿದ್ದಂತೆ ಮುಳುಗಿದ ಬೋಟ್ – 6 ಮೀನುಗಾರರ ರಕ್ಷಣೆ

    ಬೋಟ್ ಮುಳುಗಿದ್ದರಿಂದ ಅಂದಾಜು 80 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

  • ಜೋಕಾಲಿ ಆಡುವ ವೇಳೆ ಚೂಡಿದಾರ್ ವೇಲ್ ಸಿಲುಕಿ 12ರ ಬಾಲಕಿ ಸಾವು

    ಜೋಕಾಲಿ ಆಡುವ ವೇಳೆ ಚೂಡಿದಾರ್ ವೇಲ್ ಸಿಲುಕಿ 12ರ ಬಾಲಕಿ ಸಾವು

    ಕಾರವಾರ: ಚೂಡಿದಾರ ವೇಲ್ ಸಿಲುಕಿ 12 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಭಟ್ಕಳ (Bhatkal) ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ.

    ತೆರ್ನಮಕ್ಕಿ ಸಬ್ಬತ್ತಿ ನಿವಾಸಿ ಪ್ರಣಿತಾ ಜಗನ್ನಾಥ ನಾಯ್ಕ(12) ಮೃತ ಬಾಲಕಿ. ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ಮನೆಯಲ್ಲಿ ಜೋಕಾಲಿ ಆಟ ಆಡುತ್ತಿದ್ದಳು. ಇದನ್ನೂ ಓದಿ: ಕಂಡಕ್ಟರ್ ಯಡವಟ್ಟು, ಹೋಟೆಲ್‍ಗೆ ನುಗ್ಗಿದ ಬಿಎಂಟಿಸಿ ಬಸ್ ಐವರಿಗೆ ಗಾಯ

     

    ಆಡುವಾಗ ಪ್ರಣಿತಾ ಕುತ್ತಿಗೆಯಲ್ಲಿದ್ದ ವೇಲ್‌ ಜೋಕಾಲಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗಲೇ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಟ್ಕಳ ನಗರವನ್ನು 24 ಗಂಟೆಯಲ್ಲಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು ವಶಕ್ಕೆ

    ಭಟ್ಕಳ ನಗರವನ್ನು 24 ಗಂಟೆಯಲ್ಲಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು ವಶಕ್ಕೆ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ (Bhatkal) ನಗರವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಭಟ್ಕಳ ಶಹರ ಠಾಣೆಗೆ ಇಮೇಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಕಣ್ಣನ್ ಎಂಬಾತನನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ತನಿಖೆ ವೇಳೆ, ಕಣ್ಣನ್ ಮೊಬೈಲ್‌ನಿಂದ ಮತ್ತೊಬ್ಬ ವ್ಯಕ್ತಿ ಈ ಕೃತ್ಯ ಮಾಡಿರುವುದು ಬಯಲಿಗೆ ಬಂದಿದೆ. ಮೋಬೈಲ್‌ನ್ನು ಹೇಗೆ ಆತ ತೆಗೆದುಕೊಂಡ ಎಂಬುವುದರ ಬಗ್ಗ ಮಾಹಿತಿ ಕಲೆ ಹಾಕಿರುವ ಪೊಲೀಸರು, ಕಣ್ಣನ್ ಮತ್ತು ಮೋಸ್ಟ್ ವಾಂಟೆಡ್ ವ್ಯಕ್ತಿಯ ನಡುವಿನ ಭೇಟಿಯ ಕುರಿತು ತನಿಖೆ ಬಳಿಕ ಮಾಹಿತಿ ನೀಡುವುದಾಗಿ ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ಎಂ.ನಾರಾಯಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: 24 ಗಂಟೆಯೊಳಗೆ ಭಟ್ಕಳ ಪಟ್ಟಣವನ್ನ ಸ್ಫೋಟಿಸುತ್ತೇವೆ – ಪೊಲೀಸ್‌ ಠಾಣೆಗೆ ಬೆದರಿಕೆ ಸಂದೇಶ

    ಕಣ್ಣನ್ ಮೊಬೈಲ್ ಮೂಲಕ ಪೋಸ್ಟ್ ಮಾಡಿದ ಮೋಸ್ಟ್ ವಾಂಟೆಡ್ ವ್ಯಕ್ತಿ ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಮೈಸೂರು, ಬಳ್ಳಾರಿ, ಕೇರಳ ಸೇರಿದಂತೆ ಬೇರೆ ಕಡೆಗೂ ಬಾಂಬ್ ಸ್ಫೋಟಿಸುವ ಬೇದರಿಕೆ ಹಾಕಿದ್ದ ಈ ಮೋಸ್ಟ್ ವಾಂಟೆಡ್ ವ್ಯಕ್ತಿಯನ್ನು ಕರ್ನಾಟಕ ಮತ್ತು ಕೇರಳ ಪೊಲೀಸರ ಕಾರ್ಯಾಚರಣೆಯಿಂದ ಪತ್ತೆ ಮಾಡಲಾಗಿದೆ. ಆತನನ್ನು ಪೊಲೀಸರು ಮೈಸೂರಿನಿಂದ ಸೋಮವಾರ ಕಾರವಾರಕ್ಕೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಇದನ್ನೂ ಓದಿ: Uttara Kannada | ದಟ್ಟ ಅರಣ್ಯದ ಗುಹೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ವಾಸ – ರಷ್ಯಾ ಮೂಲದ ಮಹಿಳೆಯ ರಕ್ಷಣೆ

  • 24 ಗಂಟೆಯೊಳಗೆ ಭಟ್ಕಳ ಪಟ್ಟಣವನ್ನ ಸ್ಫೋಟಿಸುತ್ತೇವೆ – ಪೊಲೀಸ್‌ ಠಾಣೆಗೆ ಬೆದರಿಕೆ ಸಂದೇಶ

    24 ಗಂಟೆಯೊಳಗೆ ಭಟ್ಕಳ ಪಟ್ಟಣವನ್ನ ಸ್ಫೋಟಿಸುತ್ತೇವೆ – ಪೊಲೀಸ್‌ ಠಾಣೆಗೆ ಬೆದರಿಕೆ ಸಂದೇಶ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ (Bhatkal) ನಗರವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬೆದರಿಕೆಯ ಇ-ಮೇಲ್ ಸಂದೇಶವನ್ನು ಕಳುಹಿಸಲಾಗಿದೆ.

    ಜು.10 ರ ಬೆಳಗ್ಗೆ 7:22 ಕ್ಕೆ ಈ ಇ-ಮೇಲ್ ಸಂದೇಶವನ್ನು ಎರಡು ಬಾರಿ ಕಳುಹಿಸಲಾಗಿದ್ದು, kannnannandik@gmail.com ನಿಂದ ಭಟ್ಕಳ ಶಹರ ಠಾಣೆಯ bhatkaltownkwr@ksp.gov.in ಸಂದೇಶ ರವಾನಿಸಲಾಗಿದೆ. ಜುಲೈ 10 ರ ಬೆಳಗ್ಗೆ ಬಂದ ಮೊದಲ ಇ-ಮೇಲ್ ಸಂದೇಶದಲ್ಲಿ ‘ವಿ ವಿಲ್ ಪ್ಲಾಂಟ್ ಬಾಂಬ್ ಇನ್ ಭಟ್ಕಳ ಟೌನ್’ ಎಂದು ಸಂದೇಶ ಕಳುಹಿಸಲಾಗಿದ್ದು, ನಂತರ ‘ಆಲ್ ದ ಬಾಂಬ್ ವಿಲ್ ಬ್ಲಾಸ್ಟ್ ಇನ್ 24 ಹಾರ್ಸ್’ ಎಂದು ಸಂದೇಶ ಕಳುಹಿಸಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು – ತಿರುಪತಿ ರೈಲಿಗೆ ಸೋಮಣ್ಣ ಚಾಲನೆ

    ಈ ಕುರಿತು ಭಟ್ಕಳ ಶಹರ ಠಾಣೆಯ ಪಿಎಸ್‌ಐ ನವೀನ್ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಇಂದು ಮುಂಜಾಗೃತ ಕ್ರಮವಾಗಿ ಭಟ್ಕಳ ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಜನನಿಬಿಡ ಪ್ರದೇಶದಲ್ಲಿ ಶ್ವಾನ ದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಯಿತು.

    ಇದಲ್ಲದೇ, ಡ್ರೋನ್ ಕ್ಯಾಮೆರಾ ಮೂಲಕವೂ ಕಣ್ಗಾವಲಿಟ್ಟು ತಪಾಸಣೆ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಭಟ್ಕಳ ನಗರ ಸ್ಫೋಟಿಸುವ ಸಂದೇಶ ಬಂದಿದ್ದು, ಪೊಲೀಸರು ಅಲರ್ಟ್‌ ಆಗಿದ್ದು, ತಪಾಸಣೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕಾಮಗಾರಿ ಪರಿಶೀಲನೆ ವೇಳೆ ರಸ್ತೆ ಕುಸಿದು ಉರುಳಿ ಬಿತ್ತು ಟ್ರಕ್‌ – ಓಡಿ ಪಾರಾದ ಜನ

  • ಮಳೆ ಅಬ್ಬರ – ಮುರುಡೇಶ್ವರದಲ್ಲಿ ಕಡಲ ತೀರಕ್ಕೆ ನಿಷೇಧ

    ಮಳೆ ಅಬ್ಬರ – ಮುರುಡೇಶ್ವರದಲ್ಲಿ ಕಡಲ ತೀರಕ್ಕೆ ನಿಷೇಧ

    – ಮುಟ್ಟಳ್ಳಿಯಲ್ಲಿ 8 ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಳೆಯ (Rain) ಅಬ್ಬರ ಮುಂದುವರಿದಿದ್ದು, ಜೂ.26ರವರೆಗೂ ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗುವ ಸೂಚನೆ ನೀಡಿದೆ. ಹಲವು ಕಡೆ ಭೂ ಕುಸಿತವಾಗುವ ಸಾಧ್ಯತೆ ಹಿನ್ನೆಲೆ ಜನವಸತಿ ಪ್ರದೇಶಗಳಲ್ಲಿ ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ.

    8 ಕುಟುಂಬಗಳಿಗೆ ಸ್ಥಳಾಂತರ ನೋಟಿಸ್:
    ಭಟ್ಕಳದ (Bhatkal) ಮುಟ್ಟಳ್ಳಿ ಗ್ರಾಮದಲ್ಲಿ ಭೂಕುಸಿತದ ಅಪಾಯ ಹೆಚ್ಚಿದ್ದು, ಬೆಟ್ಟದಂಚಿನ 8 ಕುಟುಂಬಗಳಿಗೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಮುಟ್ಟಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಚಂದಾವರ ನೋಟಿಸ್ ಜಾರಿ ಮಾಡಿದ್ದಾರೆ. ಪ್ರದೇಶವು ವಾಸಕ್ಕೆ ಯೋಗ್ಯವಲ್ಲ ಎಂಬ ವರದಿಯ ಹಿನ್ನೆಲೆ ನೋಟಿಸ್ ನೀಡಲಾಗಿದೆ. ಆದರೆ ಪರ್ಯಾಯ ವ್ಯವಸ್ಥೆಗಳಿಲ್ಲದೆ ಎಲ್ಲಿಗೆ ಹೋಗಬೇಕು ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ನೋಟಿಸ್ ನೀಡಿದ್ದರಿಂದ ಇದೀಗ ಜನರು ತಮ್ಮ ಸಂಬಂಧಿಗಳ ಮನೆಗೆ ಸ್ಥಳಾಂತರಗೊಳ್ಳುತಿದ್ದು, ಮಳೆ ಮುಗಿಯುವವರೆಗಾದರೂ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಈಶ್ವರ್ ಖಂಡ್ರೆ

    ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿಷೇಧ:
    ಮಳೆಗಾಲ ಪ್ರಾರಂಭದಲ್ಲೇ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಆದರೇ ಭಟ್ಕಳದ ಮುರುಡೇಶ್ವರದಲ್ಲಿ (Murudeshwara) ಪ್ರವಾಸಿಗರು ಹೆಚ್ಚು ಬರುತಿದ್ದು ನಿರ್ಬಂಧವಿದ್ದರೂ ಕಡಲಿಗಿಳಿಯುತಿದ್ದರು. ಈ ಹಿನ್ನೆಲೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಪ್ರವಾಸೋದ್ಯಮ ಇಲಾಖೆ ಮತ್ತು ಗ್ರಾಮ ಪಂಚಾಯತ್ ಮಾವಳ್ಳಿ ಇವರ ಸಹಯೋಗದೊಂದಿಗೆ ಕಡಲ ತೀರದಲ್ಲಿ ಸೂಚನಾ ಫಲಕ ಅಳವಡಿಸಲಾಯಿತು. ಸೆಪ್ಟೆಂಬರ್ ಅಂತ್ಯದವರೆಗೂ ಕಡಲತೀರದಲ್ಲಿ ನಿಷೇಧ ಮುಂದುವರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಕಡಲ ತೀರದಲ್ಲಿ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮಕ್ಕಳ ಕಾಲೇಜು ಫೀಸ್‌ಗೆ ಸಾಲ ಮಾಡಿ ತಂದಿಟ್ಟ ಹಣವನ್ನೇ ದೋಚಿದ ಖದೀಮರು

    ಭಟ್ಕಳ ತಾಲೂಕಿನಲ್ಲಿ ಜೋರಾಗಿ ಬೀಸಿದ ಮಳೆಗಾಳಿಯ ರಭಸಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನದಿಂದ ಭೀಕರ ಬಿರುಗಾಳಿಯಿಂದಾಗಿ 18ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಸುಮಾರು 8 ಲಕ್ಷ ರೂಪಾಯಿಗೂ ಹೆಚ್ಚಿನ ಆರ್ಥಿಕ ನಷ್ಟ ಸಂಭವಿಸಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಹಲವೆಡೆ ವಿದ್ಯುತ್ ಕಡಿತಗೊಂಡಿದ್ದು, ಸ್ಥಳೀಯರಿಗೆ ತೊಂದರೆಯಾಗಿದೆ. ಕಂಬಗಳನ್ನು ಸರಿಪಡಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ದಾಖಲೆಗೆ ಸಿದ್ಧವಾಗ್ತಿದೆ ಕೆಆರ್‌ಎಸ್ – ಡ್ಯಾಂ ಸಂಪೂರ್ಣ ಭರ್ತಿಗೆ 5 ಅಡಿ ಬಾಕಿ

  • Uttara Kannada | ಪೋಷಕರ ನಿರ್ಲಕ್ಷ್ಯ – 2 ವರ್ಷದ ಮಗು ನಾಲೆಗೆ ಬಿದ್ದು ಸಾವು

    Uttara Kannada | ಪೋಷಕರ ನಿರ್ಲಕ್ಷ್ಯ – 2 ವರ್ಷದ ಮಗು ನಾಲೆಗೆ ಬಿದ್ದು ಸಾವು

    – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಕಾರವಾರ: ಪೋಷಕರ ನಿರ್ಲಕ್ಷ್ಯದಿಂದ ಆಟವಾಡುತಿದ್ದ ಎರಡು ವರ್ಷದ ಹೆಣ್ಣುಮಗು ನಾಲೆಗೆ (Canal) ಮಗು ಬಿದ್ದು ಸಾವು ಕಂಡ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ (Bhatkal) ಜಾಲಿ ಪಟ್ಟಣ ವ್ಯಾಪ್ತಿಯ ಆಝಾದ್ ನಗರದಲ್ಲಿ ನಡೆದಿದೆ.

    ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಹೆಣ್ಣುಮಗು ಶನಿವಾರ ಮಧ್ಯಾಹ್ನದ ವೇಳೆ ಮನೆಯ ಹೊರಗೆ ಆಟವಾಡುತಿದ್ದ ವೇಳೆ ಎದುರಿಗಿದ್ದ ಕಾಲುವೆಯೊಳಗೆ ಬಿದ್ದಿದೆ. ಸ್ಥಳೀಯರು ತಕ್ಷಣ ಮಗುವನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದರೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅಸುನೀಗಿದೆ. ಇದನ್ನೂ ಓದಿ: Kolar | ಜಮೀನು ವಿವಾದ – ಅಣ್ಣಂದಿರಿಂದಲೇ ತಮ್ಮನ ಕೊಲೆ

    ಘಟನೆ ಕುರಿತು ಪೋಷಕರು ಇದುವರೆಗೂ ಠಾಣೆಗೆ ದೂರು ನೀಡಿಲ್ಲ. ಇದೀಗ ಸಿಸಿ ಕ್ಯಾಮೆರಾದ ವಿಡಿಯೋ ತುಣುಕು ಹೊರಬಿದ್ದಿದ್ದು ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು

  • ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಪ್ರಜೆಗಳು – ಸದ್ಯಕ್ಕಿಲ್ಲ ಗಡಿಪಾರು

    ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಪ್ರಜೆಗಳು – ಸದ್ಯಕ್ಕಿಲ್ಲ ಗಡಿಪಾರು

    ಕಾರವಾರ: ಭಟ್ಕಳದಲ್ಲಿ (Bhatkal) 14 ಮಂದಿ ಪಾಕಿಸ್ತಾನ (Pakistan) ಪ್ರಜೆಗಳು ನೆಲೆಸಿದ್ದು ಅವರು ಅವರು ದೀರ್ಘಾವಧಿ ವೀಸಾ (Visa) ಹೊಂದಿದ್ದು ಭಾರತದಲ್ಲೇ (India) ಇರಲಿದ್ದಾರೆ.

    ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನೆಲಸಿರುವ 14 ಜನ ಪಾಕಿಸ್ತಾನ ಮೂಲದ ಮಹಿಳೆಯರಿದ್ದು ದೀರ್ಘಾವಧಿ ವೀಸಾ ಇರುವ ಕಾರಣ ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

     

    ಭಟ್ಕಳ ಹಾಗೂ ಪಾಕಿಸ್ತಾನದ ನಡುವೆ ಸ್ವತಂತ್ರ ಪೂರ್ವದಲ್ಲೇ ವೈವಾಹಿಕ (Marriage) ಸಂಬಂಧಗಳು ನಡೆಯುತ್ತಿದ್ದು ಭಟ್ಕಳದ ಮುಸ್ಲಿಂ ಹೆಣ್ಣನ್ನು ಪಾಕಿಸ್ತಾನದ ವರನಿಗೆ ನೀಡಿದರೆ ಪಾಕಿಸ್ತಾನದ ಹೆಣ್ಣನ್ನು ಭಟ್ಕಳಕ್ಕೆ ನೀಡುವುದು ನಡೆದುಕೊಂಡು ಬಂದಿದೆ. ಇದನ್ನೂ ಓದಿ: ಉಗ್ರರು ದಾಳಿ ಮಾಡಿಲ್ಲ ಎಂದ ನ್ಯೂಯಾರ್ಕ್‌ ಟೈಮ್ಸ್‌ – ವರದಿಯನ್ನು ಸರಿ ಮಾಡಿದ ಅಮೆರಿಕ ಸರ್ಕಾರ

    ಈಗಾಗಲೇ ಹಲವು ವರ್ಷದಿಂದ 10 ಪಾಕಿಸ್ತಾನ ಮೂಲದ ಮಹಿಳೆಯರಿದ್ದು ಇವರಲ್ಲಿ ನಾಲ್ಕು ಜನ ಭಾರತದಲ್ಲೇ ಮಕ್ಕಳು ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಣವಾಗುತ್ತದೆ.

     

    ಈ ಮಹಿಳೆಯರು ಭಾರತದ ಪೌರತ್ವಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಇವರಿಗಾಗಲಿ ಭಾರತದಲ್ಲಿ ಹುಟ್ಟಿದ ಇವರ ಮಕ್ಕಳಿಗೆ ಪೌರತ್ವ ನೀಡಿಲ್ಲ. ದೀರ್ಘಾವಧಿ ವೀಸಾ ಹಾಗೂ ಭಾರತೀಯ ಪುರುಷರನ್ನು ವಿವಾಹವಾಗಿದ್ದರಿಂದ ಸದ್ಯ ಈ 14 ಮಹಿಳೆಯರು ಭಟ್ಕಳದಲ್ಲೇ ಇರಲಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಭಾರತ ಪಾಕ್‌ ಮಧ್ಯೆ ಗುಂಡಿನ ಚಕಮಕಿ

    ಕೆಲವು ವರ್ಷದ ಹಿಂದೆ ಬಾಂಗ್ಲಾದ ಮಹಿಳೆ ಸಹ ಗಡಿ ಉಲ್ಲಂಘಿಸಿ ಭಟ್ಕಳಕ್ಕೆ ಬಂದು ಇಲ್ಲಿನ ಯುವಕನನ್ನು ವಿವಾಹವಾಗಿದ್ದು ಈಕೆ ಸದ್ಯ ಜೈಲಿನಲ್ಲಿದ್ದು ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ.

    ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಮಹಿಳೆಯರಲ್ಲದೇ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇರುವ ಸಾಧ್ಯತೆ ಇದ್ದು ಈ ಕುರಿತು ಮಾಹಿತಿ ಕಲೆಹಾಕಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಭಟ್ಕಳಕ್ಕೆ ತೆರಳಿದ್ದು ಮಾಹಿತಿ ಕಲೆಹಾಕುತಿದ್ದಾರೆ.