Tag: Bhaskar Rao

  • ಪೊಲೀಸ್ ಆಯುಕ್ತ ಭಾಸ್ಕರ್ ರಾವ್‍ಗೆ ಕೊರೊನಾ ನೆಗೆಟಿವ್

    ಪೊಲೀಸ್ ಆಯುಕ್ತ ಭಾಸ್ಕರ್ ರಾವ್‍ಗೆ ಕೊರೊನಾ ನೆಗೆಟಿವ್

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.

    ಭಾಸ್ಕರ್ ರಾವ್ ಕಳೆದ 5 ದಿನದಿಂದ ಹೋಂ ಕ್ವಾರಂಟೈನ್‍ನಲ್ಲಿದ್ದರು. ಇಂದು ಬೆಳಗ್ಗೆ ಕೊರೊನಾ ವರದಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗುವುದಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    “ನನ್ನ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದೆ. ಇಂದಿನಿಂದ ಕೆಲಸಕ್ಕೆ ಹಾಜರಾಗುತ್ತೀನಿ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಗಳಿಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಕಾರು ಚಾಲಕನಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿದ್ದರು.

    ಭಾಸ್ಕರ್ ರಾವ್ ಕಾರು ಚಾಲಕ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಪಾಸಿಟಿವ್ ಎಂದು ಗೊತ್ತಾದ ಬಳಿಕ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಭಾಸ್ಕರ್ ರಾವ್, “ಚಾಲಕನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಲಿದ್ದೇನೆ. 3 ತಿಂಗಳ ನಂತರ ಐದನೇ ಬಾರಿಗೆ ಸೋಮವಾರ ಮತ್ತೆ ಪರೀಕ್ಷೆಗೆ ಒಳಗಗಾಗಲಿದ್ದೇನೆ. ಹಲವಾರು ಪಾಸಿಟಿವ್ ಪ್ರಕರಣ ಹೊಂದಿದವರ ಜೊತೆ ಸಂವಹನ ಮಾಡಿದ್ದೇನೆ. ನಿಮ್ಮ ಶುಭ ಹಾರೈಕೆಗಳಿಂದ ಪಾಸಿಟಿವ್ ಆಗಿಲ್ಲ ಎಂದು ಬರೆದುಕೊಂಡಿದ್ದರು.

  • ಬೆಂಗಳೂರು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೋಂ ಕ್ವಾರಂಟೈನ್‌

    ಬೆಂಗಳೂರು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೋಂ ಕ್ವಾರಂಟೈನ್‌

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೋಂ ಕ್ವಾರಂಟೈನ್‌ ಆಗಿದ್ದಾರೆ. ಕಾರು ಚಾಲಕನಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟ ಹಿನ್ನೆಲೆಯಲ್ಲಿ ಭಾಸ್ಕರ್‌ ರಾವ್‌ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

    ಭಾಸ್ಕರ್‌ ‌ ರಾವ್‌ ಕಾರು ಚಾಲಕ ಕೋವಿಡ್‌ ಪರೀಕ್ಷೆ ಮಾಡಿಸಿದ್ದರು. ಇಂದು ಪಾಸಿಟಿವ್‌ ಎಂದು ಗೊತ್ತಾದ ಬಳಿಕ ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಭಾಸ್ಕರ್‌ ರಾವ್‌, ಚಾಲಕನಿಗೆ ಕೊರೊನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಹೋಂ ಕ್ವಾರಂಟೈನ್‌ ಆಗಲಿದ್ದೇನೆ. 3 ತಿಂಗಳ ನಂತರ ಐದನೇ ಬಾರಿಗೆ ಸೋಮವಾರ ಮತ್ತೆ ಪರೀಕ್ಷೆಗೆ ಒಳಗಗಾಗಲಿದ್ದೇನೆ. ಹಲವಾರು ಪಾಸಿಟಿವ್‌ ಪ್ರಕರಣ ಹೊಂದಿದವರ ಜೊತೆ ಸಂವಹನ ಮಾಡಿದ್ದೇನೆ. ನಿಮ್ಮ ಶುಭ ಹಾರೈಕೆಗಳಿಂದ ಪಾಸಿಟಿವ್‌ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ.

     

    ಕಳೆದ ವಾರ ಕೃಷ್ಣಾ ಕಚೇರಿಯ ಕೆಲ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಿಂದ ಇಂದಿನಿಂದ ಕೆಲ ದಿನಗಳ ಕಾಲ ನಾನು ಮನೆಯಿಂದಲೇ ಕರ್ತವ್ಯ ನಿರ್ವಹಿಸಲಿದ್ದೇನೆ. ಪ್ರಸ್ತುತ ನಾನು ಆರೋಗ್ಯವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಹೇಳಿದ್ದರು.

    ತಮ್ಮ ಆರೋಗ್ಯ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದ ಅವರು, ಕಚೇರಿಯ ಸಿಬ್ಬಂದಿಯಲ್ಲಿ ರೋನಾ ಪತ್ತೆಯಾಗಿದೆ. ಹೀಗಾಗಿ ಕೆಲ ದಿನಗಳ ಕಾಲ ಮನೆಯಿಂದಲೇ ಕರ್ತವ್ಯ ನಿರ್ವಹಿಸಲಿದ್ದೇನೆ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆಂದು ಎಂದು ತಿಳಿಸಿದ್ದರು.

  • ‘ಯಾರಿಗೂ ಯಾವುದೇ ಪಾಸ್ ನೀಡಿಲ್ಲ’ – ಠಾಣೆಗಳಿಗೆ ಕಮೀಷನರ್ ಭಾಸ್ಕರ್ ರಾವ್ ಸೂಚನೆ

    ‘ಯಾರಿಗೂ ಯಾವುದೇ ಪಾಸ್ ನೀಡಿಲ್ಲ’ – ಠಾಣೆಗಳಿಗೆ ಕಮೀಷನರ್ ಭಾಸ್ಕರ್ ರಾವ್ ಸೂಚನೆ

    ಬೆಂಗಳೂರು: ಏಳು ದಿನ ಬೆಂಗಳೂರು ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಮೀಷನರ್ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.

    ಕಮೀಷನರ್ ಭಾಸ್ಕರ್ ರಾವ್ ಕಂಟ್ರೋಲ್ ರೂಂ ಮೂಲಕ ಪೊಲೀಸ್ ಠಾಣೆಗಳಿಗೆ ಸೂಚನೆ ಕೊಟ್ಟಿದ್ದಾರೆ. ಇಂದಿನಿಂದ ಜುಲೈ 22ರ ಬೆಳಗಿನ ಜಾವ 5 ಗಂಟೆಯವರೆಗೆ ಲಾಕ್‍ಡೌನ್ ಇರುತ್ತೆ. ಈ ವೇಳೆ ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತೆ ಅವರಿಗೆ ಅವಕಾಶ ಮಾಡಿ ಕೊಡಬೇಕು. ಅಲ್ಲದೇ ಲಾಕ್‍ಡೌನ್ ವೇಳೆ ಸಾರ್ವಜನಿಕರ ಜೊತೆ ಮೃದುವಾಗಿ ವರ್ತನೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ.

    ಕಮೀಷನರ್ ಸೂಚನೆಗಳು:
    * ಲಾಕ್ ಡೌನ್ ವೇಳೆ ಸಾರ್ವಜನಿಕರ ಜೊತೆ ಮೃದುವಾಗಿ ವರ್ತನೆ ಮಾಡಬೇಕು.
    * ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತೆ ಅವರಿಗೆ ಅವಕಾಶ ಮಾಡಿ ಕೊಡಬೇಕು.
    * ಇದು ಏಳು ದಿನದ ಲಾಕ್ ಡೌನ್ ಆಗಿದ್ದು ಯಾರಿಗೂ ಯಾವುದೇ ಪಾಸ್ ಕೊಡ್ತಿಲ್ಲ.
    * ಪೊಲೀಸರು ತಪಾಸಣೆ ವೇಳೆ ಅವರ ಐಡಿ ಕಾರ್ಡ್ ಪರಿಶೀಲನೆ ಮಾಡಿ ಬಿಡಬೇಕು.
    * ಸರ್ಕಾರ ಬೆಳಗಿನ ಜಾವ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅವಕಾಶ ಕೊಟ್ಟಿದೆ.
    * ಆ ಬಳಿಕ ಮೆಡಿಕಲ್ ಸಂಬಂಧಪಟ್ಟವು ಹೊರತುಪಡಿಸಿ ಉಳಿದೆಲ್ಲ ಬಂದ್ ಆಗಬೇಕು.
    * ಯಾರ ಜೊತೆ ಜಗಳ ಮಾಡಬಾರದು, ಅವಾಚ್ಯ ಶಬ್ದ ಬಳಸಬಾರದು.
    * ಎಲೆಕ್ಟ್ರಾನಿಕ್ ಮೀಡಿಯಾ, ಫೋಟೋ ಜನರ್ಲಿಸ್ಟ್, ಪತ್ರಿಕೆ ವಿತರಕರ ಐಡಿ ಕಾರ್ಡ್ ಇದ್ದರೆ ಸಾಕು ಪಾಸ್ ಬೇಕಿಲ್ಲ.

    * ಹಣ್ಣು, ಹಂಪಲು , ತರಕಾರಿ ಮಾರಾಟ ಮಾಡುವವರಿಗೆ ಪಾಸ್ ಬೇಡ. ಆದ್ರೆ ಅನವಶ್ಯಕವಾಗಿ ಓಡಾಡೋದಕ್ಕೆ ಬಿಡಬಾರದು.
    * ಅನವಶ್ಯಕವಾಗಿ ಜಗಳ, ಚೆಕ್ ಮಾಡಬಾರದು, ಜನರ ಜೊತೆ ಜವಾಬ್ದಾರಿಯುತವಾಗಿ ವರ್ತನೆ ಮಾಡಬೇಕು..
    * ಕೊರೊನಾದಿಂದ ಸಿಬ್ಬಂದಿ ಕೊರತೆ ಇದೆ. ಆದ್ದರಿಂದ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ವೈಟ್ ಫೀಲ್ಡ್ ಡಿಸಿಪಿ ಎಲ್ಲ ಸ್ಟೇಷನ್‍ಗೆ ಮ್ಯಾನೇಜ್ ಮಾಡುತ್ತಾರೆ. ಅವರನ್ನ ಕೆಲಸಕ್ಕೆ ಬಳಸಿಕೊಳ್ಳಬೇಕು. ನನಗೆ ಗೊತ್ತಿಲ್ಲ ಹಾಗೇ ಹೀಗೆ ಅನ್ನಬಾರದು.
    * ಸ್ವಯಂಸೇವಕರಿಗೆ ಒಂದು ಜಾಕೆಟ್ ಮತ್ತು ಕ್ಯಾಪ್ ಕೊಡಲಾಗುವುದು.
    * ಬ್ಯಾರಿಕೇಡ್ ಬಳಿ, ಕಂಪ್ಯೂಟರ್ ಆಪರೇಟಿಂಗ್, ಬಂದೋಬಸ್ತ್‌ಗೆ ಸ್ವಯಂ ಸೇವಕರನ್ನು ಬಳಸಿಕೊಳ್ಳಬಹುದು. ಸ್ವಯಂ ಸೇವಕರನ್ನು ಕಂಟೈನ್ಮೆಂಟ್ ಝೋನ್‍ಗೆ ಕರೆದುಕೊಂಡು ಹೋಗಬಾರದು.

    ಇಂದಿನಿಂದ ಒಂದು ವಾರಗಳು ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್‍ಡೌನ್ ಮಾಡಲಾಗಿದೆ. ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿತ್ತು. ಹೀಗಾಗಿ ಕೊರೊನಾ ಚೈನ್ ಕಟ್ ಮಾಡುವ ದೃಷ್ಟಿಯಿಂದ ಮತ್ತೆ ಒಂದು ವಾರ ಲಾಕ್‍ಡೌನ್ ಮಾಡಲಾಗಿದೆ.

  • ‘ಸುಳ್ಳು ನೆಪ ಹೇಳಿಕೊಂಡು ರಸ್ತೆಗೆ ಬರುವುದು ಇನ್ಮುಂದೆ ನಡೆಯಲ್ಲ’ – ಬೆಂಗ್ಳೂರಿಗರಿಗೆ ಆಯುಕ್ತರಿಂದ ವಾರ್ನಿಂಗ್

    ‘ಸುಳ್ಳು ನೆಪ ಹೇಳಿಕೊಂಡು ರಸ್ತೆಗೆ ಬರುವುದು ಇನ್ಮುಂದೆ ನಡೆಯಲ್ಲ’ – ಬೆಂಗ್ಳೂರಿಗರಿಗೆ ಆಯುಕ್ತರಿಂದ ವಾರ್ನಿಂಗ್

    – 12 ಗಂಟೆಯ ನಂತ್ರ ಸಂಪೂರ್ಣ ಕ್ಲೋಸ್
    – ಪೊಲೀಸರು ಜೊತೆ ಗಲಾಟೆ ಮಾಡಿದ್ರೆ ಕ್ರಮ
    – ವಾಹನ ಜಪ್ತಿ, ಮಾಲೀಕರ ಮೇಲೆ ಕೇಸ್

    ಬೆಂಗಳುರು: ಇಂದಿನಿಂದ ಒಂದು ವಾರಗಳ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‍ಡೌನ್ ಆಗಿದೆ. ಇಂದು ಲಾಕ್‍ಡೌನ್ ಮೊದಲ ದಿನದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬೆಳ್ಳಂಬೆಳಗ್ಗೆ ಸಿಟಿ ರೌಂಡ್ಸ್ ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭಾಸ್ಕರ್ ರಾವ್, ಇಷ್ಟು ದೊಡ್ಡ ನಗರವನ್ನು ಲಾಕ್‍ಡೌನ್ ಮಾಡುವುದು ಎಂದರೆ ಸಾಧ್ಯವಿಲ್ಲ. ಇದು ಸಾರ್ವಜನಿಕರ ಸಹಕಾರದಿಂದ ಮಾಡಲು ಸಾಧ್ಯ. ಈಗಾಗಲೇ ಜನರಿಗೆ ಈ ಕೊರೊನಾ ಬಗ್ಗೆ ಗೊತ್ತಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮತ್ತೆ ಒಂದು ವಾರ ಲಾಕ್‍ಡೌನ್ ಮಾಡಿದೆ. ಆದ್ದರಿಂದ ಅದನ್ನು ಯಶಸ್ವಿ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದರು.

    ಕರ್ತವ್ಯದಲ್ಲಿರುವ ಪೊಲೀಸರು ಜೊತೆ ಗಲಾಟೆ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಸುಮ್ಮಸುಮ್ಮನೆ ರಸ್ತೆಯಲ್ಲಿ ಬಂದು ನಿಂತಿಲ್ಲ. ನಿಮ್ಮ ಸುರಕ್ಷತೆಗಾಗಿ ನಾವು ಬಂದು ನಿಂತಿರುವುದು. ಅನಾವಶ್ಯಕವಾಗಿ ರೋಡಿಗಿಳಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಾಕರ್ಸ್ ಕೂಡ ಮನೆಯ ಅಕ್ಕಪಕ್ಕದಲ್ಲೇ ವಾಕ್ ಮಾಡಬೇಕು. ಸುಳ್ಳು ನೆಪಗಳು ಹೇಳಿಕೊಂಡು ರಸ್ತೆಗೆ ಬರುವುದು ಇನ್ಮುಂದೆ ನಡೆಯಲ್ಲ ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.

    12 ಗಂಟೆಯೊಳಗೆ ಅಗತ್ಯ ವಸ್ತುಗಳ ಖರೀದಿ ಮಾಡಬೇಕು. ಈಗ ಬಿಟ್ಟಿರುವ ಪ್ರಮುಖ ರಸ್ತೆಗಳನ್ನು ಕೂಡ 12 ಗಂಟೆಯ ನಂತರ ಕ್ಲೋಸ್ ಮಾಡುತ್ತೇವೆ. ಆಮೇಲೆ ಬೆಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ. ಕೇವಲ ಅಂಬುಲೆನ್ಸ್ ಮತ್ತು ತುರ್ತು ಪರಿಸ್ಥತಿ ಇದ್ದರೆ ಮಾತ್ರ ಅವಕಾಶ ಮಾಡಿಕೊಡುತ್ತೇವೆ. ಕೊರೊನಾ ಪರಿಸ್ಥಿತಿ ಹೇಗಿದೆ ಅನ್ನೋದು ಜನ ಅರ್ಥ ಮಾಡಿಕೊಳ್ಳಬೇಕು. ಕಳೆದ ಬಾರಿಯಂತೆ ವಾಹನ ಸವಾರರು ಅಡ್ಡಾದಿಡ್ಡಿ ಓಡಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಮಿಷನರ್ ಎಚ್ಚರಿಕೆ ನೀಡಿದರು.

    ಜನರು ಸುಮ್ಮಸುಮ್ಮನೇ ಓಡಾಡುತ್ತಾರೆ. ರಸ್ತೆಯಲ್ಲಿ ಓಡಾಡಿ ಮನೆಗೆ ಸೋಕು ತೆಗೆದುಕೊಂಡು ಹೋಗುತ್ತಾರೆ. ಜನರು ಮನೆಯಲ್ಲಿದ್ದರೆ ಕೊರೊನಾ ಚೈನ್ ಬ್ರೇಕ್ ಆಗುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ. ಈ ಬಾರಿ ಪಾಸ್ ಇಲ್ಲ. ಈ ಬಾರಿ ಕಾರಣವಿಲ್ಲದೆ 12 ಗಂಟೆಯ ನಂತರ ರಸ್ತೆಯಲ್ಲಿ ಓಡಾಡಿದರೆ ವಾಹನ ಜಪ್ತಿ ಮಾಡುತ್ತೇವೆ. ಆ ವ್ಯಕ್ತಿಯ ಮೇಲೆ ಕೇಸ್ ದಾಖಲಿಸುತ್ತೇವೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಇನ್ನಾದರೂ ಗಂಭೀರವಾಗಿ ತೆಗೆದುಕೊಂಡು ಲಾಕ್‍ಡೌನ್ ವೇಳೆ ಮನೆಯಲ್ಲಿರಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು.

  • ಬೆಂಗ್ಳೂರು ಜನತೆಗೆ ಧನ್ಯವಾದ ಅರ್ಪಿಸಿದ ಭಾಸ್ಕರ್ ರಾವ್

    ಬೆಂಗ್ಳೂರು ಜನತೆಗೆ ಧನ್ಯವಾದ ಅರ್ಪಿಸಿದ ಭಾಸ್ಕರ್ ರಾವ್

    – ಏನೇ ಸಮಸ್ಯೆಯಾದಲ್ಲಿ 100ಕ್ಕೆ ಕರೆ ಮಾಡಿ

    ಬೆಂಗಳೂರು: ರಾಜ್ಯದಲ್ಲಿ ಮೊದಲ ಸಂಡೇ ಲಾಕ್‍ಡೌನ್ ಯಶಸ್ವಿಯಾಗಿ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬೆಂಗಳೂರು ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.

    ಭಾಸ್ಕರ್ ರಾವ್ ಅವರು ಟ್ವೀಟ್ ಮಾಡುವ ಮೂಲಕ ಸಂಡೇ ಲಾಕ್‍ಡೌನ್ ಅನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ. “36 ಗಂಟೆಗಳ ಲಾಕ್‍ಡೌನ್ ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ನಿಮಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

    ಅಷ್ಟೇ ಅಲ್ಲದೇ “ಇನ್ನು ಮುಂದೆ ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಮಗೆ ನಾವೇ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು. ನಿಮಗೆ ಏನೇ ಸಮಸ್ಯೆಯಾದಲ್ಲಿ 100 ನಂಬರಿಗೆ ಫೋನ್ ಮಾಡಿ. ತಕ್ಷಣ ನಿಮ್ಮ ಪಕ್ಕದಲ್ಲಿರುವ ಹೊಯ್ಸಳ ಅವರು ಬಂದು ಸ್ಪಂದಿಸುತ್ತಾರೆ” ಎಂದು ಜನತೆಗೆ ಭರವಸೆ ನೀಡಿದ್ದಾರೆ.

    ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸುನಾಮಿ ಸ್ಫೋಟಕ್ಕೆ ಬ್ರೇಕ್ ಹಾಕಲು ಸಂಡೇ ಲಾಕ್‍ಡೌನ್ ಅಸ್ತ್ರಕ್ಕೆ ಜನರಿಂದ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಹಂತದಲ್ಲಿ ಮಹಾಮಾರಿ ಕೊರೊನಾ ಕಂಟ್ರೋಲ್‍ಗೆ ಸರ್ಕಾರ ಆದೇಶಿಸಿದ್ದ ಫಸ್ಟ್ ಸಂಡೇ ಲಾಕ್‍ಡೌನ್ ಇಂದು ಬೆಳಗ್ಗೆ 5 ಗಂಟೆಗೆ ಯಶಸ್ವಿಯಾಗಿ ಅಂತ್ಯವಾಗಿದೆ. ಈ ಹಿಂದಿನ ಲಾಕ್‍ಡೌನ್‍ಗಳಿಗೆ ಹೋಲಿಸಿದರೆ 33 ಗಂಟೆಗಳ ಸಂಡೇ ಲಾಕ್‍ಡೌನ್‍ಗೆ ಜನ ಸಹಕರಿಸಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರು ಬಹುತೇಕ ಸ್ತಬ್ಧವಾಗಿತ್ತು. ಜನರ ಓಡಾಟ ಭಾರೀ ವಿರಳವಾಗಿತ್ತು. ಮನೆಯಲ್ಲೇ ಇದ್ದ ಬೆಂಗಳೂರಿಗರು ಸಂಡೇ ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ದರು.

  • ಲಾಕ್‍ಡೌನ್‍ನಿಂದ ವಿನಾಯಿತಿ ಕೇಳಬೇಡಿ- ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ

    ಲಾಕ್‍ಡೌನ್‍ನಿಂದ ವಿನಾಯಿತಿ ಕೇಳಬೇಡಿ- ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ

    ಬೆಂಗಳೂರು: ನಾಳೆ ಇರುವ ಲಾಕ್‍ಡೌನ್‍ನಿಂದ ವಿನಾಯಿತಿ ಕೇಳಬೇಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೇ ಹೆಚ್ಚುತ್ತಿರುವ ಕಾರಣ, ಸರ್ಕಾರ ಸಂಡೇ ಲಾಕ್‍ಡೌನ್ ನಿಯಮವನ್ನು ಜಾರಿಗೆ ತಂದಿದೆ. ಈ ಮೂಲಕ ಕೊರೊನಾ ನಿಯಂತ್ರಣ ಮಾಡಲು ಪ್ರಯತ್ನಿಸುತ್ತಿದೆ. ಈಗ ನಾಳೆ ಮೊದಲ ಸಂಡೇ ಲಾಕ್‍ಡೌನ್ ಮಾಡುತ್ತಿದ್ದು, ಜನತೆ ಸ್ವಯಂ ಪ್ರೇರಿತವಾಗಿ ಬೆಂಬಲ ಕೊಡುವಂತೆ ಭಾಸ್ಕರ್ ರಾವ್ ಅವರು ಕೇಳಿಕೊಂಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಬೆಂಗಳೂರು ಸಿಟಿಯಲ್ಲಿ ಲಾಕ್‍ಡೌನ್ ಇಂದು ರಾತ್ರಿ 8ಗಂಟೆಗೆ ಪ್ರಾರಂಭವಾಗಿ ಸೋಮವಾರ ಬೆಳಿಗ್ಗೆ 5ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಗೌರವಾನ್ವಿತ ನಾಗರಿಕರೇ, ಮನೆಯಲ್ಲಿಯೇ ಇರಿ ಮತ್ತು ಎಲ್ಲರ ಹಿತದೃಷ್ಟಿಯಿಂದ ಲಾಕ್‍ಡೌನ್ ಮಾಡಲಾಗುತ್ತಿರುವುದರಿಂದ ವಿನಾಯಿತಿಗಳನ್ನು ಕೇಳಬೇಡಿ. ನೀವು ಒಂದು ದಿನ ನಿಮ್ಮ ಕೆಲಸ ಮುಂದೂಡಿದರೆ ಯಾವುದೇ ನಷ್ಟವಾಗುವುದಿಲ್ಲ. ದಯವಿಟ್ಟು ನೀವೇ ಸ್ವಯಂ ಪ್ರೇರಿತವಾಗಿ ಸಹಕಾರ ನೀಡಿ. ಹ್ಯಾಪಿ ಸಂಡೇ ಎಂದು ಹೇಳಿದ್ದಾರೆ.

    ನಾಳೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಲಾಕ್‍ಡೌನ್ ವಿನಾಯಿತಿ ನೀಡಲಾಗಿದೆ. ಈ ಮೂಲಕ ಏರ್ ಟಿಕೆಟ್ ಮತ್ತು ಐಡಿ ಕಾರ್ಡ್ ತೋರಿಸಿ ಸಂಚರಿಸಲು ಅನುಮತಿ ನೀಡಲಾಗಿದೆ. ನಾಳೆ ಅಗತ್ಯ ಸೇವೆ ಹೊರತುಪಡಿಸಿ ಖಾಸಗಿ ವಾಹನಗಳು, ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಅನುಮತಿಯಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

  • ಗರಿಷ್ಟ 20 ಮಂದಿಗೆ ಮಾತ್ರ ಅವಕಾಶ- ಬೆಂಗ್ಳೂರಿನಲ್ಲಿ ಜುಲೈ 26 ರವರೆಗೆ 144 ಸೆಕ್ಷನ್ ಜಾರಿ

    ಗರಿಷ್ಟ 20 ಮಂದಿಗೆ ಮಾತ್ರ ಅವಕಾಶ- ಬೆಂಗ್ಳೂರಿನಲ್ಲಿ ಜುಲೈ 26 ರವರೆಗೆ 144 ಸೆಕ್ಷನ್ ಜಾರಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಸ್ಫೋಟವಾಗುತ್ತಿದ್ದಂತೆ ಮತ್ತೆ ಒಂದು ತಿಂಗಳು ಬೆಂಗಳೂರಿನಲ್ಲಿ 144 ಸೆಕ್ಷನ್ ಮುಂದುವರಿಕೆ ಮಾಡಲಾಗಿದೆ. ಜುಲೈ 26 ರವರೆಗೆ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಆದೇಶ ಹೊರಡಿಸಿದ್ದಾರೆ.

    ಬೆಂಗಳೂರು ನಗರದಲ್ಲಿ ಕೋವಿಡ್ 19 ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಮತ್ತೆ ಕಟ್ಟುನಿಟ್ಟಾಗಿ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.
    1. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ ವ್ಯಕ್ತಿಯು ಕಡ್ಡಾಯವಾಗಿ ಮಾಸ್ಕ್ ಧರಿಸುವುದು
    2. ಸಾರ್ವಜನಿಕ ಸ್ಥಳದಲ್ಲಿ ಒಂದು ಮೀಟರ್ ಅಂತರ ಪಾಲನೆ ಮಾಡಬೇಕು
    3. ಯಾವುದೇ ಕಾರ್ಯಕ್ರಮಗಳಲ್ಲಿ ಗರಿಷ್ಠ 20 ಮಂದಿಯಷ್ಟೇ ಭಾಗವಹಿಸಲು ಅವಕಾಶ

    ಸೋಂಕು ಹರಡುವಿಕೆ ತಡೆಯಲು ಮೂರು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಕಮೀಷನರ್ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳು ನಿಷೇಧಾಜ್ಞೆ ಜಾರಿದ್ದಾರೆ. ಕೋವಿಡ್ ನಿಯಮಗಳ ಉಲ್ಲಂಘನೆಯಾದಲ್ಲಿ ಎನ್‍ಡಿಎಂಎ ಅಡಿಯಲ್ಲಿ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

    ಯಾವುದೇ ವ್ಯಕ್ತಿ ಈ ಮೇಲಿನ ನಿಯಂತ್ರಣ ಕ್ರಮಗಳನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 ರಿಂದ 60ರ ಜೊತೆಗೆ ಐಪಿಸಿ ಸೆಕ್ಷನ್ 188 ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು. ಈ ಪ್ರತಿಬಂಧಕಾಜ್ಞೆಯೂ ಜೂನ್ 26 ರಿಂದ ಜುಲೈ 26ರ ಮಧ್ಯರಾತಿ ವರೆಗೆ ಅಂದರೆ 30 ದಿನಗಳ ಅನ್ವಯವಾಗುತ್ತದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

  • ಹೋಟೆಲ್, ಮಾಲ್, ಶಾಪ್ ಮಾಲೀಕರಿಗೆ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ

    ಹೋಟೆಲ್, ಮಾಲ್, ಶಾಪ್ ಮಾಲೀಕರಿಗೆ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಕೆಲ ದಿನಗಳಿಂದ ಉಲ್ಬಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೋಟೆಲ್, ಮಾಲ್, ಶಾಪ್ ಮಾಲೀಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ಟ್ವೀಟ್ ಮಾಡಿರುವ ಅವರು, ಅಂಗಡಿ, ಮಾಲ್, ಬ್ಯಾಂಕ್, ಹೋಟೆಲ್, ಕಚೇರಿ ಹಾಗೂ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ನೀವು ಮಾಸ್ಕ್ ಧರಿಸುವುದನ್ನು ಕಾರ್ಯಗತಗೊಳಿಸದಿದ್ದರೆ ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳದಿದ್ದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದು ಈಗಾಗಲೇ ಕಾರ್ಯಗತಕ್ಕೆ ಬಂದಿದ್ದು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುತ್ತಿದೆ ಎಂದು ತಿಳಿಸಿದ್ದಾರೆ.

    ನಗರದ ಅಂಗಡಿ, ಮಾಲ್, ಬ್ಯಾಂಕ್, ಹೋಟಲ್ ಸೇರಿದಂತೆ ವಿವಿಧ ಕಡೆಯ ಸಿಬ್ಬಂದಿ ಹಾಗೂ ಗ್ರಾಹಕರು ಮಾಸ್ಕ್ ಧರಿಸುತ್ತಿಲ್ಲ. ಅಷ್ಟೇ ಅಲ್ಲದೆ ಗ್ರಾಹಕರಿಗೆ ಸ್ಯಾನಿಟೈಜರ್ ವ್ಯವಸ್ಥೆ ಕಲ್ಪಿಸಿಲ್ಲ. ಸಾಕಷ್ಟು ಕಡೆ ಅಂಗಡಿ ಮಾಲೀಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಜೂನ್ ತಿಂಗಳ ಆರಂಭದಲ್ಲಿ ಬೆಂಗಳೂರಿನಲ್ಲಿ ಕೊರೊನಾ ಸ್ವಲ್ಪ ನಿಯಂತ್ರಣಕ್ಕೆ ಸಿಕ್ಕಿತ್ತು. ಆದರೆ ಕಳೆದ ಕೆಲ ದಿನಗಳಿಂದ ಸೋಂಕಿತರು ಹಾಗೂ ಮೃತರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.

  • ದಯಮಾಡಿ ಕೊರೊನಾಗೆ ಹೆದರಿ ತಮ್ಮ ಪ್ರಾಣ ಕಳ್ಕೋಬೇಡಿ: ಭಾಸ್ಕರ್ ರಾವ್ ಮನವಿ

    ದಯಮಾಡಿ ಕೊರೊನಾಗೆ ಹೆದರಿ ತಮ್ಮ ಪ್ರಾಣ ಕಳ್ಕೋಬೇಡಿ: ಭಾಸ್ಕರ್ ರಾವ್ ಮನವಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಈ ಮಹಾಮಾರಿ ವೈರಸ್‍ಗೆ ಬೆದರಿ ಕೆಲವರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಯಮಾಡಿ ತಮ್ಮ ಅಮೂಲ್ಯವಾದ ಪ್ರಾಣಗಳನ್ನು ಕಳೆದುಕೊಳ್ಳಬೇಡಿ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿಕೊಂಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಭಯ ಬಿದ್ದು ದಯಮಾಡಿ ತಮ್ಮ ಪ್ರಾಣ ಕಳೆದುಕೊಳ್ಳಬೇಡಿ. ಇಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ನಮ್ಮ ಸಿಬ್ಬಂದಿಯೊಬ್ಬರು ಬಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ದಯಮಾಡಿ ಹಾಗೆಲ್ಲ ಮಾಡಬೇಡಿ, ಸರ್ಕಾರ ನಿಮ್ಮ ಜೀವಕ್ಕೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಯಾವುದಕ್ಕೂ ಹೆದರಬೇಡಿ ಇದೊಂದು ಕಾಯಿಲೆ ಅಷ್ಟೆ. ಕಾಯಿಲೆ ಅಂತೆಯೇ ನೋಡಿ. ಸದ್ಯ ಅದಕ್ಕೆ ಔಷಧ ಸಿಗದೇ ಇರಬಹುದು ಎಂದು ಪೊಲೀಸ್ ಆಯುಕ್ತರು ಜನರಲ್ಲಿ ಕೇಳಿಕೊಂಡಿದ್ದಾರೆ.

    ಇದೇ ಸಂದರ್ಭದಲ್ಲಿ ಪೊಲೀಸರಲ್ಲಿ ಕೊರೊನಾ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಸುಮಾರು ಜನ ಪೊಲೀಸ್ ಸಿಬ್ಬಂದಿ ಜೊತೆ ಮಾತಾನಾಡಿದ್ದೇನೆ. ವಾಟ್ಸಾಪ್ ಗ್ರೂಪ್ ಕೂಡ ಮಾಡಿದ್ದೇವೆ. ಅವರ ಕಾಂಟಾಕ್ಟ್ ಮಾಡಿ ಮನೋಸ್ಥೈರ್ಯ ಮೂಡಿಸುತ್ತಿದೇವೆ. ಎಲ್ಲಾರೂ ಟ್ರೀಟ್ಮೆಂಟ್‍ನಲ್ಲಿದ್ದಾರೆ. ಯಾರೂ ಐಸಿಯುನಲ್ಲಿಲ್ಲ. ಅಲ್ಲದೆ ಎಲ್ಲಾ ರಿಕವರಿ ಆಗ್ತಿದ್ದಾರೆ ಎಂದರು.

    ನಮ್ಮವರು ಎಲ್ಲಾ ಕಡೆ ಹೋಗಿದ್ದಾರೆ. ತುಂಬಾ ಸೆನ್ಸಿಟವ್ ಕಡೆಯೂ ತೆರಳಿದ್ದಾರೆ. ಸಿಸಿಸಿ ಕೊರೊನಾ ಕೇರ್ ಸೆಂಟರ್ ಅಂತ ಸರ್ಕಾರ ಘೋಷಣೆ ಮಾಡಿದೆ. ಅಲ್ಲಿ ನಮ್ಮವರನ್ನ ಇರಿಸಲಾಗಿದೆ. ಅಲ್ಲಿ ಬೇರೆ ತರ ಟ್ರಿಟ್ಮೆಂಟ್ ಇದೆ ಎಂದು ತಿಳಿಸಿದರು.

  • ಕೊರೊನಾ ಭೀತಿ- ಬೆಂಗ್ಳೂರಿನ ಠಾಣೆಗಳಿಗೆ 10 ಸೂಚನೆ ರವಾನಿಸಿದ ಭಾಸ್ಕರ್ ರಾವ್

    ಕೊರೊನಾ ಭೀತಿ- ಬೆಂಗ್ಳೂರಿನ ಠಾಣೆಗಳಿಗೆ 10 ಸೂಚನೆ ರವಾನಿಸಿದ ಭಾಸ್ಕರ್ ರಾವ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ಕೊರೊನಾ ವಾರಿಯರ್ಸ್ ಪೊಲೀಸರಿಗೂ ಸೋಂಕು ತಗುಲುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

    ಬೆಂಗಳೂರು ನಗರದಲ್ಲಿ ಪೊಲೀಸರಿಗೆ ಸೋಂಕು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಆಯುಕ್ತ ಭಾಸ್ಕರ್ ರಾವ್ ಅವರು ಠಾಣೆಗಳಿಗೆ ಹತ್ತು ಸೂಚನೆ ರವಾನಿಸಿದ್ದಾರೆ. ಈ ಮೂಲಕ ಕೊರೊನಾ ವೈರಸ್‍ಗೆ ಇಲಾಖೆ ಮತ್ತಷ್ಟು ಸಿಬ್ಬಂದಿ ಒಳಗಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

    ಏನು ಸೂಚನೆ?:
    1. ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಬೇಕು. ಗಾಬರಿಯಾಗಬೇಡಿ, ಸರ್ಕಾರ ಸಮಾಜ ನಮ್ಮನ್ನ ನಂಬಿದೆ. ಎಲ್ಲಾ ಸ್ಟೇಷನ್‍ಗಳಲ್ಲಿ 55 ವರ್ಷ ಮೇಲ್ಪಟ್ಟವರು ಮನೆಯಲ್ಲಿ ಇರಬೇಕು. ಬೆಂಗಳೂರು ಬಿಡುವಂತಿಲ್ಲ. ಅಧಿಕಾರಿಗಳು ಮಾನಿಟರ್ ಮಾಡಬೇಕು.
    2. ಸಾಧ್ಯವಾದಷ್ಟು ಯುವ ಹೋಂ ಗಾರ್ಡ್ ಬಳಕೆ ಮಾಡಿಕೊಳ್ಳಬೇಕು. ಜಂಟಿ ಸಿಪಿ ಡಿಸಿಪಿಗಳು ಮಾರ್ಗದರ್ಶನ ಮಾಡುತ್ತಾರೆ.
    3. ಶಾಮಿಯಾನ ಹಾಕಿಕೊಂಡು ಠಾಣೆ ಹೊರಗಡೆಯಲ್ಲೆ ವಿಲೇವಾರಿ ಮಾಡಬೇಕು. ಆರೋಪಿಗಳು ಇರಲಿ ಯಾರೇ ಆಗಲಿ ಯಾರನ್ನೂ ಮುಟ್ಟಬಾರದು.

    4. ಹೊಯ್ಸಳ ಮತ್ತು ಚೀತಾ ಅನವಶ್ಯಕವಾಗಿ ಸುತ್ತಾಡಬಾರದು. ಸಮಸ್ಯೆ ಇದ್ದರೆ, ಕರೆ ಬಂದ್ರೆ ಹೋಗಬೇಕು. ಸುಮ್ಮನೆ ಸ್ಟೇಷನ್‍ಗೆ ಬರಬಾರದು.
    5. ಮುಖ್ಯ ಕೇಸ್‍ಗಳಲ್ಲಿ ಮಾತ್ರ ಆರೋಪಿಗಳನ್ನ ಬಂಧಿಸಬೇಕು. ಸುಮ್ಮನೆ ಬಂಧಿಸುವ ಅವಶ್ಯಕತೆ ಇಲ್ಲ, ಠಾಣೆಗೆ ಯಾರನ್ನೂ ಕರೆ ತಂದು ಕೂರಿಸಬಾರದು.
    6. ಎಲ್ಲಾ ಠಾಣೆ ವ್ಯಾಪ್ತಿಯಲ್ಲಿ ಒಂದು ಕಲ್ಯಾಣ ಮಂಟಪ ಸಿದ್ಧಗೊಳಿಸಬೇಕು. ಸೋಂಕು ಮನೆಗೆ ತಗೊಂಡು ಹೋಗಬಾರದು.

    7. ಪ್ರತಿ ಠಾಣೆಯಲ್ಲಿ ಬಿಸಿ ನೀರಿನ ವ್ಯವಸ್ಥೆ ಇರಬೇಕು. ಕುಡಿಯಲು, ಸ್ನಾನ, ಕೈಕಾಲು ತೊಳೆಯಲು, ಮಾಸ್ಕ್ ಸ್ಯಾನಿಟೈಸರ್, ಪೇಸ್ ಶೀಲ್ಡ್ ಇರಬೇಕು.
    8. ನೀವು ಉಪಯೋಗಿಸುವ ವಾಹನಗಳು ಪ್ರತಿದಿನ ಸ್ಯಾನಿಟೈಸ್ ಆಗಬೇಕು. ಬೆಂಕಿ ಅನಾಹುತ ಆಗದಂತೆ ಸ್ಯಾನಿಟೈಸ್ ಮಾಡಬೇಕು. ಕ್ವಾರಂಟೈನ್ ಆಗಿದ್ದೀವಿ ಅಂತ ಸಾರ್ವಜನಿಕರಿಗೆ ನಮ್ಮ ಸೇವೆಯಿಂದ ಕೊರತೆ ಆಗಬಾರದು.
    9. ಸಾರ್ವಜನಿಕರಿಗೆ ಅಗತ್ಯ ಸೇವೆಗಳು ಒದಗಿಸಬೇಕು. ಗ್ಲೌಸ್ ಹಾಕಬೇಕು, ದೂರದಲ್ಲಿ ನಿಂತು ಮಾತನಾಡಬೇಕು.
    10. ಎಂಒಬಿ ಕಾರ್ಡ್ ಬಂಧಿಸುವುದು ಬೇಡ, ತಾಂತ್ರಿಕವಾಗಿ ಅವರ ಮೇಲೆ ನಿಗಾ ಇಟ್ಟಿರಿ. ಅವರ ಮೇಲೆ ಇನ್ನೂ ನಿಗಾ ಹೆಚ್ಚಾಗಿರಬೇಕು. ನಾವು ಸುಮ್ಮನೆ ಇದ್ದೀವಿ ಅಂತ ಸಮಾಜಘಾತುಕ ಶಕ್ತಿಗಳಿಗೆ ಅವಕಾಶ ಕೊಡಬಾರದು, ಇನ್ಸ್‍ಪೆಕ್ಟರ್, ಪಿಎಸ್‍ಐಗಳು ಗಮನ ಇಡಬೇಕು.

    ನಮ್ಮ ಸಿಬ್ಬಂದಿಗೆ ಊಟ ತಿಂಡಿ ಸರಿಯಾಗಿ ಆಗಬೇಕು. ಶನಿವಾರ ಆಸ್ಪತ್ರೆಯಲ್ಲಿ ಊಟದ ರೀತಿ ಮತ್ತೆ ಆಗಬಾರದು. ನಮ್ಮದು ಶಿಸ್ತಿನ ಇಲಾಖೆ. ಮುಖ್ಯ ಕಾರ್ಯದರ್ಶಿಗಳು ಇಲಾಖೆಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಪೊಲೀಸ್ ಕ್ವಾಟ್ರಸ್‍ಗಳು ಸ್ವಚ್ಛವಾಗಿರಬೇಕು. ಎಲ್ಲ ಮನೆಗಳಿಗೆ ಸ್ಯಾನಿಟೈಸರ್, ಮಾಸ್ಕ್ ಕೊಡಬೇಕು ಎಂದು ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.