Tag: Bharti Singh

  • ಗಡ್ಡಧಾರಿ ವ್ಯಕ್ತಿಗಳ ವಿರುದ್ಧ ಅಪಹಾಸ್ಯ – ಹಾಸ್ಯ ನಟಿ ಭಾರತಿ ಸಿಂಗ್ ವಿರುದ್ಧ FIR

    ಗಡ್ಡಧಾರಿ ವ್ಯಕ್ತಿಗಳ ವಿರುದ್ಧ ಅಪಹಾಸ್ಯ – ಹಾಸ್ಯ ನಟಿ ಭಾರತಿ ಸಿಂಗ್ ವಿರುದ್ಧ FIR

    ಮುಂಬೈ: ಗಡ್ಡಧಾರಿ ವ್ಯಕ್ತಿಗಳನ್ನು ಅಪಹಾಸ್ಯ ಮಾಡಿದ ಹಳೆಯ ವೀಡಿಯೋವೊಂದರ ಕುರಿತಂತೆ ಬಾಲಿವುಡ್ ಹಾಸ್ಯನಟಿ ಭಾರತಿ ಸಿಂಗ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಭಾರತಿ ಸಿಂಗ್ ಅವರಿಂದ ಸಿಖ್ಖರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಪಂಜಾಬ್‍ನ ಅಮೃತಸರದಲ್ಲಿ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ನೀಡಿದ ದೂರಿನ ಆಧಾರದ ಮೇರೆಗೆ ಸೋಮವಾರ ರಾತ್ರಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ವೈರಲ್ ಆದ ಹಳೆಯ ವೀಡಿಯೋದಲ್ಲಿ, ಗಡ್ಡ-ಮೀಸೆಯಿಂದ ಅನೇಕ ಪ್ರಯೋಜನಗಳಿವೆ. ಹಾಲು ಕುಡಿಯುವಾಗ ನಿಮ್ಮ ಗಡ್ಡವನ್ನು ನಿಮ್ಮ ಬಾಯಿಯೊಳಗೆ ಹಾಕಿಕೊಳ್ಳಿ. ಅದು ನಿಮಗೆ ಶಾವಿಗೆ ಪಾಯಸದಷ್ಟೇ ರುಚಿಯನ್ನು ನೀಡುತ್ತದೆ ಎಂದು ಭಾರತಿ ಸಿಂಗ್ ಅಪಹಾಸ್ಯ ಮಾಡಿದ್ದರು. ಈ ವಿಚಾರವಾಗಿ ಸಿಖ್ಖರು ನಮ್ಮ ಧಾರ್ಮಿಕ ನಂಬಿಕೆಯ ಭಾಗವಾದ ಗಡ್ಡದ ಬಗ್ಗೆ ಭಾರತಿ ಸಿಂಗ್ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ಅಮೃತಸರದಲ್ಲಿ ಭಾರತಿ ಸಿಂಗ್ ವಿರುದ್ಧ ಸಿಖ್ ಗುಂಪುಗಳು ಪ್ರತಿಭಟನೆ ನಡೆಸಿದ್ದವು.

     

    View this post on Instagram

     

    A post shared by Bharti Singh (@bharti.laughterqueen)

    ನಂತರ ಸೋಮವಾರ ಈ ಕುರಿತಂತೆ ವೀಡಿಯೋವೊಂದನ್ನು ಪೋಸ್ಟ್ ಮಾಡಿ ಭಾರತಿ ಸಿಂಗ್ ಅವರು ಕ್ಷಮೆಯಾಚಿಸಿದ್ದಾರೆ ಮತ್ತು ತಾವು ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ

    ಕಳೆದ ಮೂರ್ನಾಲ್ಕು ದಿನಗಳಿಂದ ನಾನು ಗಡ್ಡಧಾರಿಗಳನ್ನು ಗೇಲಿ ಮಾಡಿದ್ದೇನೆ ಎಂಬ ವೀಡಿಯೋ ಹರಿದಾಡುತ್ತಿದೆ. ಆದರೆ ದಯವಿಟ್ಟು ವೀಡಿಯೋವನ್ನು ಸರಿಯಾಗಿ ನೋಡಿ. ನಾನು ಅದರಲ್ಲಿ ಏನನ್ನು ಹೇಳಿಲ್ಲ. ಅಲ್ಲದೇ ಯಾವುದೇ ಧರ್ಮ ಅಥವಾ ಜಾತಿ, ಸಿಖ್ಖರನ್ನು ಅಪಹಾಸ್ಯ ಮಾಡಿಲ್ಲ. ದಾಡಿಯಿಂದ ಯಾವ ರೀತಿ ಸಮಸ್ಯೆಗಳು ಬರಬಹುದು ಎಂದು ಹೇಳಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.

  • 12 ದಿನದ ಮಗು ಬಿಟ್ಟು ಶೂಟಿಂಗ್‍ಗೆ ಮರಳಿದ ಭಾರತಿ ಸಿಂಗ್ – ಮಗು ನೆನೆದು ಕಣ್ಣೀರು

    12 ದಿನದ ಮಗು ಬಿಟ್ಟು ಶೂಟಿಂಗ್‍ಗೆ ಮರಳಿದ ಭಾರತಿ ಸಿಂಗ್ – ಮಗು ನೆನೆದು ಕಣ್ಣೀರು

    ಬಾಲಿವುಡ್ ಡ್ರಾಮಾ ಕ್ವೀನ್, ನಿರೂಪಕಿ ಮತ್ತು ಹಾಸ್ಯ ನಟಿ ಭಾರತಿ ಸಿಂಗ್ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಏಪ್ರಿಲ್ 3ರಂದು ಭಾರತಿ ಸಿಂಗ್ ಹಾಗೂ ಹರ್ಷ್ ಲಿಂಬಾಣಿಯಾ ತಮ್ಮ ಮುದ್ದು ಮಗನನ್ನು ವೆಲ್‍ಕಮ್ ಮಾಡಿಕೊಂಡಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕ್ಯಾಮೆರಾ ಕಣ್ಣಿಗೂ ಬಿದ್ದಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

    ಇದೀಗ ಮಗುವಾದ 12 ದಿನಕ್ಕೇ ಭಾರತಿ ಸಿಂಗ್ ಕೆಲಸಕ್ಕೆ ಮರಳಿದ್ದು, ತಮ್ಮ ಮಗುವನ್ನು ನೆನಪಿಸಿಕೊಂಡು ತುಂಬಾ ಭಾವುಕರಾಗಿದ್ದಾರೆ. ಸಾಮಾನ್ಯವಾಗಿ ಮಗು ಜನಿಸಿದ ನಂತರ ಕನಿಷ್ಠ ಐದಾರು ತಿಂಗಳುಗಳ ಕಾಲ ತಾಯಂದಿರು ಮಗುವನ್ನು ಬಿಟ್ಟು ಎಲ್ಲೂ ಬರುವುದಿಲ್ಲ. ಆದರೆ ಭಾರತಿ ಸಿಂಗ್ ಹಸುಗೂಸಿಟ್ಟುಕೊಂಡು ಕೆಲಸಕ್ಕೆ ಮರಳಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ನಿರೂಪಕಿಯಾಗಿ ಭಾರತಿ ಸಿಂಗ್ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಅವರು ಈ ಕಾರ್ಯಕ್ರಮದ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾರೆ.  ಇದನ್ನೂ ಓದಿ: ಬೇಬಿ ಬಂಪ್ ಫೋಟೋಗೆ ಮಜವಾದ ಕ್ಯಾಪ್ಷನ್ ಕೊಟ್ಟ ಭಾರತಿ ಸಿಂಗ್

     

    View this post on Instagram

     

    A post shared by Viral Bhayani (@viralbhayani)

    ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ‘ನಾನು ಇಂದು ತುಂಬಾ ಅಳುತ್ತಿದ್ದೆ. ಮಗುವಿಗೆ ಕೇವಲ 12 ದಿನಗಳಾಗಿವೆ. ಆದರೆ ಕೆಲಸ ಕೂಡ ಬಹಳ ಮುಖ್ಯವಾಗಿದೆ’ ಎಂದು ಕಣ್ಣೀರು ಹಾಕಿದ್ದಾರೆ.  ಇದನ್ನೂ ಓದಿ: ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ

    ಈ ಮುನ್ನ ಭಾರತಿ ಸಿಂಗ್ ಅವರು ಗರ್ಭಿಣಿಯಾಗಿದ್ದಾಗಲೂ ಮಗುವಿಗೆ ಜನ್ಮ ನೀಡುವವರೆಗೂ ಕೆಲಸ ಮಾಡಿದ್ದರು. ನಂತರ ಡೆಲಿವರಿ ಸಮಯದಲ್ಲಿ ಭಾರತಿ ಸಿಂಗ್ ಬದಲಾಗಿ ಸುರಭಿ ಚಂದನಾ ಈ ಕಾರ್ಯಕ್ರಮ ಹೋಸ್ಟ್ ಮಾಡಿದ್ದರು. ಇದೀಗ ಮಗುವಾಗಿ 12 ದಿನಗಳಲ್ಲಿಯೇ ಭಾರತಿ ಸಿಂಗ್ ಮತ್ತೆ ಕೆಲಸಕ್ಕೆ ಮರಳಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ

    ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ

    ಬಾಲಿವುಡ್ ಡ್ರಾಮಾ ಕ್ವೀನ್, ಹಾಸ್ಯ ಕಲಾವಿದೆ ಭಾರತಿ ಸಿಂಗ್ ಗಂಡು ಮಗುವಿನ ಜನ್ಮ ನೀಡಿದ್ದಾರೆ. ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ದಂಪತಿ ಈ ಖುಷಿ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈಗ ಮತ್ತೆ ಅಭಿಮಾನಿಗಳಿಗೆ ತಮ್ಮ ಹೆರಿಗೆ ಸಮಯದಲ್ಲಿ ಆದ ಅನುಭವಗಳನ್ನು ಅವರು ಶೇರ್ ಮಾಡಿದ್ದಾರೆ.


    ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ದಂಪತಿ ಏಪ್ರಿಲ್ 3 ರಂದು ಗಂಡು ಮಗುವಿನ ಪೋಷಕರಾಗಿದ್ದಾರೆ. ದಂಪತಿ ಎಲ್ಒಎಲ್(ಲೈಫ್ ಆಫ್ ಲಿಂಬಾಚಿಯಾಸ್) ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಈ ಚಾನೆಲ್ನಲ್ಲೇ ತಮ್ಮ ಎಲ್ಲ ಅಪ್ಡೇಟ್ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಈ ಚಾನಲ್‌ನಲ್ಲಿಯೇ ಭಾರತಿ ತಾಯ್ತನದ ಪ್ರಯಾಣವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

    ವೀಡಿಯೋದಲ್ಲಿ ನನ್ನ ಮಗ ಕೊನೆಗೂ ನನ್ನ ಕೈಗೆ ಬಂದಿದ್ದಾನೆ. ಅವನು ಆರೋಗ್ಯವಾಗಿದ್ದಾನೆ. ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದೆಲ್ಲ ಕನಸಿನಂತಿದೆ. ಈ ಅನುಭವವು ತುಂಬಾ ಭಾವನಾತ್ಮಕವಾದ್ದು. ಇದು ನನಗೆ ತುಂಬಾ ಸಂತೋಷದ ಸಂಗತಿಯಾಗಿದೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.

    ನನ್ನ ಮಗುವನ್ನು ಮೊದಲ ಬಾರಿಗೆ ಹಿಡಿದುಕೊಂಡಾಗ ನನಗೆ ಏನೋ ಒಂದು ರೀತಿ ಖುಷಿಯ ಅನುಭವವಾಯಿತು. ದಯವಿಟ್ಟು ನಿಮ್ಮ ಪ್ರೀತಿಯನ್ನು ನಮ್ಮ ಮಗುವಿನ ಮೇಲೂ ತೋರಿಸಿ ಎಂದು ಕೇಳಿದ್ದಾರೆ.

    ಭಾರತಿ ಅವರು ಮೊದಲು ತಮ್ಮ ಬೆನ್ನುನೋವಿನ ಬಗ್ಗೆ ಮಾತನಾಡುವುದರೊಂದಿಗೆ ವೀಡಿಯೊ ಆರಂಭಿಸುತ್ತಾರೆ. ಈ ವೇಳೆ ಅವರು, ನಾನು ಕಾರಿನಲ್ಲಿ ಕುಳಿತಾಗ ಹೆರಿಗೆ ನೋವು ಆಗಿದೆಯೋ ಇಲ್ಲವೋ ಎಂದು ಖಚಿತವಾಗಿರಲಿಲ್ಲ. ನನಗೆ ಭಯವಾಗಿತ್ತು. ಆದರೂ ಉತ್ಸಾಹದಲ್ಲೇ ಇದ್ದೆ. ಇದಕ್ಕೂ ಮೊದಲು ನಾನು ಈ ಭಯವನ್ನು ಅನುಭವಿಸಿರಲಿಲ್ಲ ಎಂದು ವಿವರಿಸಿದ್ದಾರೆ.

    ಇದೇ ವೇಳೆ ಹರ್ಷ್, ಇದು ನಿಮ್ಮ ಮೊದಲ ಗರ್ಭಧಾರಣೆ. ಅದಕ್ಕಾಗಿಯೇ ನೀವು ಭಯಪಡುತ್ತೀರಿ. ಮುಂದಿನ ಬಾರಿ ನಿಮಗೆ ಏನು ಆಗುವುದಿಲ್ಲ. ನನಗೆ ಇನ್ನೂ 6 ಮಕ್ಕಳು ಬೇಕು ಎಂದಿದ್ದಾರೆ. ಇದನ್ನೂ ಓದಿ: ಕಳುವಾದ ನವಜಾತ ಶಿಶು 21 ದಿನಗಳ ಬಳಿಕ ಪತ್ತೆ – ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ

    ವಿಡಿಯೋ ಕೊನೆಯಲ್ಲಿ ಭಾರತಿ ಅವರು 4:30ಕ್ಕೆ ನನಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆ ಸಮಯದಲ್ಲಿ ನಾನು ನನ್ನ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಈ ವೇಳೆಯೂ ನಾನು ನನ್ನ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

  • ಗಂಡು ಮಗುವಿನ ತಾಯಿಯಾದ ಕಾಮಿಡಿ ಕ್ವೀನ್ ಭಾರತಿ

    ಗಂಡು ಮಗುವಿನ ತಾಯಿಯಾದ ಕಾಮಿಡಿ ಕ್ವೀನ್ ಭಾರತಿ

    ಕಾಮಿಡಿಯನ್, ನಿರೂಪಕಿ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿರುವ ಕಾಮಿಡಿ ಕ್ವೀನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಹರ್ಷ ಲಿಂಬಾಚಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇಟ್ಸ್ ಎ ಬಾಯ್ (ಇದು ಗಂಡು ಮಗು) ಎಂದು ಬರೆದಿರುವ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೂ ಸರ್ಪೈಸ್ ನೀಡಿದ್ದಾರೆ. ಇದನ್ನೂ ಓದಿ: ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ಯಾಗಿ ಅಗ್ನಿಸಾಕ್ಷಿ ವೈಷ್ಣವಿ ಮೋಡಿ

    ಇತ್ತೀಚೆಗೆ ಭಾರತಿ ಸಿಂಗ್ ತಮ್ಮ ಗರ್ಭಾವಸ್ಥೆ ಕ್ಷಣಗಳ ಫೊಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಭಾರೀ ಸುದ್ದಿಯಾಗಿದ್ದರು. ಆನೆ ವಾಲೇ ಬೇಬಿ ಕಿ ಮಮ್ಮಿ(ಬರಲಿರುವ ಮಗುವಿನ ತಾಯಿ) ಎಂಬ ಮಜವಾದ ಶೀರ್ಷಿಕೆ ನೀಡಿದ ಪೋಸ್ಟ್ ಅನ್ನು ಅಭಿಮಾನಿಗಳು ಅತಿಯಾಗಿ ಮೆಚ್ಚಿಕೊಂಡಿದ್ದರು. ಇದನ್ನೂ ಓದಿ: ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    ಜನಪ್ರಿಯ ಶೋಗಳನ್ನು ನಿರೂಪಣೆ ಮಾಡುವ ಭಾರತಿ ತುಂಬು ಗರ್ಭಿಣಿಯಾಗಿದ್ದಾಗಲೂ ಹೆರಿಗೆ ವರೆಗೂ ಆ್ಯಕ್ಟಿವ್ ಆಗಿರಲು ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ ಎಂದು ತಿಳಿಸಿದ್ದರು.

  • ಹೊಟ್ಟೆಯಲ್ಲಿ ಕಂದನನಿಟ್ಟುಕೊಂಡೆ ಶೋ ನಡೆಸಿಕೊಡುವ ಭಾರತಿ ಸಿಂಗ್

    ಹೊಟ್ಟೆಯಲ್ಲಿ ಕಂದನನಿಟ್ಟುಕೊಂಡೆ ಶೋ ನಡೆಸಿಕೊಡುವ ಭಾರತಿ ಸಿಂಗ್

    ನಪ್ರಿಯ ಶೋಗಳ ನಿರೂಪಣೆ ಮಾಡುವ ಮೂಲಕ ಹೆಸರಾದವರು ನಿರೂಪಕಿ ಭಾರತಿ ಸಿಂಗ್. ಈಕೆ ಇದೀಗ ತುಂಬು ಗರ್ಭಿಣಿಯಾಗಿದ್ದರೂ ಹೆರಿಗೆ ಆಗುವವರೆಗೂ ತಾವು ಆ್ಯಕ್ಟಿವ್ ಆಗಿರಲು ಕೆಲಸದಲ್ಲಿ ತೊಡಗಿ ಕೊಂಡಿದ್ದಾರೆ. ಮೊದಲ ಬಾರಿ ತಮ್ಮ ಮಗು ಕುರಿತಾಗಿ ಮಾಧ್ಯಮದೊಂದಿಗೆ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

    ಭಾರತಿ ಸಿಂಗ್ ಈಗ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಏಪ್ರಿಲ್‌ನಲ್ಲಿ ಅವರಿಗೆ ಹೆರಿಗೆ ಆಗಲಿದೆಯಂತೆ. ಹೆರಿಗೆ ಆಗುವವರೆಗೂ ಕೆಲಸ ಮಾಡಲು ನಿರ್ಧರಿಸಿರುವ ಭಾರತಿ ಸಿಂಗ್ ಸದ್ಯ ‘ದಿ ಖತ್ರಾ ಖತ್ರಾ’ ಶೋ ಮತ್ತು ‘ಹುನರ್ಬಾಝ್’ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ.

    ನನ್ನ ಮಗು ಹೊಟ್ಟೆಯಲ್ಲಿ ತುಂಬಾ ಎಂಜಾಯ್ ಮಾಡುತ್ತಿದೆ. ದಿ ಖತ್ರಾ ಖತ್ರಾ ಶೋ ಹಾಗೂ ಹುನಾರ್ಬಾಝ್ ಶೋ ನಡೆಸಿಕೊಡುತ್ತಿದ್ದೇನೆ. ಮಗು ಸೂಪರ್ ಟ್ಯಾಲೆಂಟೆಡ್ ಆಗಿರಲಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ಶೋಗೆ ಸಚಿನ್ ತೆಂಡುಲ್ಕರ್, ಧೋನಿ ಬರಬೇಕು ಅಂತ ನನಗೆ ತುಂಬಾ ಆಸೆ ಇದೆ ಅಂತಲೂ ಭಾರತಿ ಸಿಂಗ್ ಹೇಳಿದ್ದಾರೆ.

    ಭಾರತಿ ಸಿಂಗ್ ಪ್ರೆಗ್ನೆನ್ಸಿಯ ದಿನದ ವಿಶೇಷ ಕ್ಷಣವನ್ನು ಕವರ್ ಮಾಡಲು ಭಾರತಿ ಸಿಂಗ್ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

     

  • ಬೇಬಿ ಬಂಪ್ ಫೋಟೋಗೆ ಮಜವಾದ ಕ್ಯಾಪ್ಷನ್ ಕೊಟ್ಟ ಭಾರತಿ ಸಿಂಗ್

    ಬೇಬಿ ಬಂಪ್ ಫೋಟೋಗೆ ಮಜವಾದ ಕ್ಯಾಪ್ಷನ್ ಕೊಟ್ಟ ಭಾರತಿ ಸಿಂಗ್

    ಮ್ಮದೇ ಆಗಿರುವ ನಿರೂಪಣಾ ಶೈಲಿಯ ಮೂಲಕವಾಗಿ ಜನಮನ್ನಣೆ ಪಡೆದಿರುವವರು ಕಾಮಿಡಿ ಕ್ವೀನ್ ಭಾರತಿ ಸಿಂಗ್. ಇವರ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಲಿದೆ. ಪ್ರೆಗ್ನೆನ್ಸಿಯ ದಿನದ ವಿಶೇಷ ಕ್ಷಣವನ್ನು ಕವರ್ ಮಾಡಲು ಭಾರತಿ ಸಿಂಗ್ ಫೋಟೋಶೂಟ್ ಮಾಡಿದ್ದಾರೆ.

    ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಏಪ್ರಿಲ್‍ನಲ್ಲಿ ತಮ್ಮ ಮನೆಗೆ ಮಗುವನ್ನು ಸ್ವಾಗತಿಸಲಿದ್ದಾರೆ. ಎಂಟನೇ ತಿಂಗಳನಲ್ಲೂ ಭಾರತಿ ಸಿಂಗ್ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಮಜವಾದ ಕ್ಯಾಪ್ಷನ್ ಕೊಡುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

     

    View this post on Instagram

     

    A post shared by Bharti Singh (@bharti.laughterqueen) 

    ಫೋಟೋಶೂಟ್‍ನಲ್ಲಿ ಪೆಸ್ಟಲ್ ಸ್ಕೈ ರೋಸಿ ಬಣ್ಣದ ರಫಲ್ಡ್ ಡ್ರೆಸ್ ಧರಿಸಿದ್ದಾರೆ. ಈ ಡ್ರೆಸ್‍ಗೆ ಹೊಂದಿಕೆಯಾಗುವ ಮೇಕಪ್, ಹೇರ್ ಸ್ಟೈಲ್ ಚೆನ್ನಾಗಿ ಮ್ಯಾಚ್ ಮಾಡಿಕೊಂಡಿದ್ದಾರೆ. ಫೋಟೋವನ್ನು ಹಂಚಿಕೊಳ್ಳುವಾಗ ಆನೆ ವಾಲೇ ಬೇಬಿ ಕಿ ಮಮ್ಮಿ ಎಂದು ಭಾರತಿ ಶೀರ್ಷಿಕೆಯಲ್ಲಿ ಹೇಳಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದನ್ನೂ ಓದಿ: ಹಸೆಮಣೆ ಏರಲಿದ್ದಾರೆ ನಟಿ ತೇಜಸ್ವಿನಿ ಪ್ರಕಾಶ್

    ಭಾರತಿ ಸಿಂಗ್ ಅವರು ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದಲ್ಲಿ ತಾಯಿಯಾಗಲಿದ್ದಾರೆ. ಫೋಟೋಗಳನ್ನು ಕಂಡ ನೆಟ್ಟಿಗರು ಭಾರತಿ ಅವರಿಗೆ ವಿಶ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

  • ಯೂಟ್ಯೂಬ್‍ನಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಬಾಲಿವುಡ್ ನಟಿ

    ಯೂಟ್ಯೂಬ್‍ನಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಬಾಲಿವುಡ್ ನಟಿ

    ಮುಂಬೈ: ಬಾಲಿವುಡ್ ಹಾಸ್ಯ ನಟಿ ಭಾರತಿ ಸಿಂಗ್ ಹಾಗೂ ಹರ್ಷ ಲಿಂಬಾಚಿಯಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿಶೇಷವೆಂದರೆ ಈ ಸಂತಸ ವಿಚಾರವನ್ನು ಭಾರತಿ ಸಿಂಗ್ ಪತಿಗೆ ತಿಳಿಸುತ್ತಿರುವ ವೀಡಿಯೋವೊಂದನ್ನು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದಾರೆ.

    ವೀಡಿಯೋದಲ್ಲಿ ಮೊದಲು ಭಾರತಿ ಬಾತ್ ರೂಮ್‍ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ನಡೆಸುತ್ತಾರೆ. ನಂತರ ಪ್ರೆಗ್ನೆನ್ಸಿ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದ್ದನ್ನು ಕ್ಯಾಮೆರಾಗೆ ತೋರಿಸಿ ತಾವು ಗರ್ಭಿಣಿಯಾಗುತ್ತಿರುವ ವಿಚಾರ ತಿಳಿದು ಸಂತಸ ಪಡುತ್ತಾರೆ. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್

    ನಂತರ ನಾನು ಗರ್ಭಿಣಿಯಾಗುತ್ತಿರುವ ವಿಚಾರವನ್ನು ಹೇಗೆ ಹೇಳುವುದು ಎಂದು ತಡವರಿಸುತ್ತಾ ಮಲಗಿರುವ ಹರ್ಷ ಅವರ ಬಳಿ ಹೋಗಿ ತಾವು ಗರ್ಭಿಣಿಯಾಗುತ್ತಿರುವ ವಿಚಾರವನ್ನು ತಿಳಿಸುತ್ತಾರೆ. ಆಗ ಹರ್ಷ ಅವರು ಭಾರತಿ ಅವರನ್ನು ಬಿಗಿದಪ್ಪಿಕೊಂಡು, ಇದನ್ನೆಲ್ಲಾ ರೆಕಾರ್ಡ್ ಮಾಡುತ್ತಿರುವುದು ಒಳ್ಳೆಯದೇ ಆಯಿತು. ನಾವು ತಾಯಿಯಾಗುತ್ತಿದ್ದೇವೆ ಎಂದು ಹೇಳುತ್ತಾ, ಕ್ಷಮಿಸಿ ಭಾರತಿ ಅಮ್ಮ ಆಗುತ್ತಿದ್ದಾಳೆ. ನಾನು ಅಪ್ಪ ಆಗುತ್ತಿದ್ದೇನೆ. ನಮಗೆ ಮಗು ಆಗುತ್ತಿರುವುದರಿಂದ ನಿಮಗೆಲ್ಲರಿಗೂ ತೊಂದರೆಯಾಗುತ್ತದೆ. ಏಕೆಂದರೆ ನಾನು ತೊಂದರೆ ಪಡುತ್ತೇವೆ ಎಂದು ಹಾಸ್ಯಮಯವಾಗಿ ನುಡಿಯುತ್ತಾ, ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸುದೀಪ್ ಕುಟುಂಬ ಸಮೇತರಾಗಿ ಭೇಟಿ

    2013ರಲ್ಲಿ ತೆರೆಕಂಡ ನಟ ಪ್ರದೀಪ್ ಅಭಿನಯದ ರಂಗನ್ ಸ್ಟೈಲ್ ಸಿನಿಮಾದ ಗಂಗಮ್ ಸ್ಟೈಲ್ ಹಾಡೋಂದರಲ್ಲಿ ಭಾರತಿ ಹೆಜ್ಜೆ ಹಾಕಿದ್ದರು. ಇದನ್ನೂ ಓದಿ:  ಅಪ್ಪು ಕನಸು ನನಸು – ರಾಜ್ ಮನೆ ಇದೀಗ ಮ್ಯೂಸಿಯಂ

  • ಭಾರತಿ ಸಿಂಗ್ ಡ್ರಗ್ಸ್ ಪ್ರಕರಣ- ಇಬ್ಬರು ಎನ್‍ಸಿಬಿ ಅಧಿಕಾರಿಗಳ ಅಮಾನತು

    ಭಾರತಿ ಸಿಂಗ್ ಡ್ರಗ್ಸ್ ಪ್ರಕರಣ- ಇಬ್ಬರು ಎನ್‍ಸಿಬಿ ಅಧಿಕಾರಿಗಳ ಅಮಾನತು

    – ಜಾಮೀನಿಗೆ ಸಹಕರಿಸಿರುವ ಆರೋಪ
    – ಬೇರೆ ಅಧಿಕಾರಿಗಳ ನೇಮಕ

    ನವದೆಹಲಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜಾಮೀನು ಸಿಗಲು ಸಹಕರಿಸಿದ್ದಾರೆ ಎಂಬ ಆರೋಪಿದ ಮೇಲೆ ಇಬ್ಬರು ಎನ್‍ಸಿಬಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ಮುಂಬೈ ವಲಯ ಘಟಕದ ಇಬ್ಬರು ಎನ್‍ಸಿಬಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಅವರ ಜಾಗಕ್ಕೆ ಹೊಸ ಅಧಿಕಾರಿಗಳನ್ನು ನೇಮಿಸಲಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಜಾಮೀನು ಪಡೆಯಲು ಸಹಕಾರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

    ಹಾಸ್ಯ ಕಲಾವಿದೆ ಭಾರತಿ ಸಿಂಗ್ ಹಾಗೂ ಇವರ ಪತಿ ಹರ್ಷ್ ಲಿಂಬಾಚಿಯಾ ಹಾಗೂ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಈ ಇಬ್ಬರು ತನಿಖಾಧಿಕಾರಿ(ಐಒ)ಗಳ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಇಬ್ಬರು ಅಧಿಕಾರಿಗಳು ಮಾತ್ರವಲ್ಲದೆ ಎನ್‍ಸಿಬಿಯ ಪ್ರಾಸಿಕ್ಯೂಟರ್ ಪಾತ್ರದ ಕುರಿತು ಸಹ ತನಿಖೆ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಎರಡೂ ಪ್ರಕರಣಗಳಲ್ಲಿ ನಿಗದಿತ ಜಾಮೀನು ವಿಚಾರಣೆ ವೇಳೆ ತನಿಖಾಧಿಕಾರಿಗಳು ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ಹಾಜರಾಗಲು ವಿಫಲರಾಗಿದ್ದಾರೆ ಎನ್ನಲಾಗಿದೆ.

    ಬಂಧನಕ್ಕೊಳಗಾಗಿದ್ದ ಡ್ರಗ್ ಪೆಡ್ಲರ್ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಅಕ್ಟೋಬರ್ 27ರಂದು ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಪ್ರಕಾಶ್ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅಕ್ಕಪಕ್ಕದವರ ಸಮ್ಮುಖದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ 2.7 ಗ್ರಾಂ. ಹಶಿಶ್ ವಶಪಡಿಸಿಕೊಳ್ಳಲಾಗಿತ್ತು.

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾಗೆ ನ್ಯಾಯಾಲಯ ನವೆಂಬರ್ 23ರಂದು ಷರತ್ತು ಬದ್ಧ ಜಾಮೀನು ನೀಡಿದೆ. ನ.21ರಂದು ಭಾರತಿ ಸಿಂಗ್ ನಿವಾಸ ಮತ್ತು ಕಚೇರಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿ ದಂಪತಿಯನ್ನು ಬಂಧಿಸಿದ್ದರು. ಭಾನುವಾರ ಇಬ್ಬರನ್ನ ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

    ಇದೇ ವೇಳೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಮತ್ತಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ದಂಪತಿಗೆ ಡಿಸೆಂಬರ್ 4ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಭಾರತಿ ಕಲ್ಯಾಣದ ಜೈಲಿಗೂ ಮತ್ತು ಹರ್ಷ್ ಟಲೇಜಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದಾದ ಬಳಿಕ ದಂಪತಿ ಜಾಮೀನು ಕೋರಿ ಕಿಲಾ ನ್ಯಾಯಾಲಯದ ಮೊರೆ ಹೋಗಿದ್ದರು.

    ನ.21ರಂದು ಬೆಳಗ್ಗೆ ಭಾರತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಎರಡೂ ಸ್ಥಳಗಳಿಂದ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು. ಈ ಹಿನ್ನೆಲೆ ವಿಚಾರಣೆಗಾಗಿ ದಂಪತಿಯನ್ನ ಎನ್‍ಸಿಬಿ ಕಚೇರಿಗೆ ಕರೆತರಲಾಗಿತ್ತು. 15 ಗಂಟೆ ವಿಚಾರಣೆ ನಡೆಸಿದ ಬಳಿಕ ರಾತ್ರಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿತ್ತು.

  • ಜೈಲಿನಿಂದ ಬಂದ ಬಳಿಕ ಭಾರತಿ ಸಿಂಗ್ ಮೊದಲ ಪ್ರತಿಕ್ರಿಯೆ

    ಜೈಲಿನಿಂದ ಬಂದ ಬಳಿಕ ಭಾರತಿ ಸಿಂಗ್ ಮೊದಲ ಪ್ರತಿಕ್ರಿಯೆ

    ಮುಂಬೈ: ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಏಳು ದಿನಗಳ ನಂತರ ಹಾಸ್ಯ ಕಲಾವಿದೆ ಭಾರತಿ ಸಿಂಗ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾರನ್ನ ನವೆಂಬರ್ 21ರಂದು ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಬಂಧಿಸಿತ್ತು. ನವೆಂಬರ್ 23ರಂದು ದಂಪತಿಗೆ ಜಾಮೀನು ಸಿಕ್ಕಿತ್ತು.

    ಇನ್‍ಸ್ಟಾಗ್ರಾಂನಲ್ಲಿ ಪತಿ ಹರ್ಷ್ ಜೊತೆಗಿನ ಸುಂದರ ಫೋಟೋಗಳನ್ನ ಹಂಚಿಕೊಂಡಿರುವ ಭಾರತಿ ಸಿಂಗ್ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಕೆಲವೊಮ್ಮೆ ನಮ್ಮಲ್ಲಿರುವ ಆತ್ಮಸ್ಥೈರ್ಯವನ್ನ ಪ್ರದರ್ಶಿಸಲು ಕೆಲ ಪರೀಕ್ಷೆಗಳು ಎದುರಾಗುತ್ತವೆ. ಈ ಪರೀಕ್ಷೆಗಳಲ್ಲಿ ನಮ್ಮ ನ್ಯೂನ್ಯತೆಗಳನ್ನ ಪಕ್ಕಕ್ಕಿರಿಸಿ ಹೋರಾಡಬೇಕಾಗುತ್ತದೆ. ನನ್ನ ಶಕ್ತಿ, ಆತ್ಮಸ್ಥೈರ್ಯ, ಬೆನ್ನಲುಬು, ಬೆಸ್ಟ್ ಫ್ರೆಂಡ್ ಎಲ್ಲವೂ ಒನ್ ಆ್ಯಂಡ್ ಓನ್ಲಿ ಪತಿ ಹರ್ಷ್ ಲಿಂಬಾಚಿಯಾ. ಐ ಲವ್ ಯು ಎಂದು ಬರೆದು ಪತಿಯ ಮೇಲಿನ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.

    ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ ಬಳಿಕ ಭಾರತಿಯನ್ನ ಕಪಿಲ್ ಶರ್ಮಾ ಶೋನಿಂದ ಕೈ ಬಿಡಲಾಗುವುದು ಎಂದು ವರದಿಯಾಗುತ್ತಿದ್ದು, ಆದ್ರೆ ಈ ಕುರಿತು ವಾಹಿನಿ ಸ್ಪಷ್ಟನೆ ನೀಡಿಲ್ಲ. ಈ ವದಂತಿಗಳ ಬೆನ್ನಲ್ಲೇ ಭಾರತಿ ಸಿಂಗ್ ಬೆಂಬಲಕ್ಕೆ ನಿಂತಿರುವ ಕೃಷ್ಣ ಅಭಿಷೇಕ್ ಆಕೆಗೆ ಎರಡನೇ ಅವಕಾಶ ನೀಡಬೇಕು. ಕಪಿಲ್ ಮತ್ತು ನಾನು ಸದಾ ಭಾರತಿ ಸಿಂಗ್ ಜೊತೆಯಲ್ಲಿರುತ್ತೇವೆ. ವಾಹಿನಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾರದು ಎಂಬ ನಮಗಿದೆ ಎಂದು ಹೇಳಿದ್ದಾರೆ.

  • ಕಪಿಲ್ ಶೋನಿಂದ ಹೊರ ಹೋಗ್ತಾರಾ ಭಾರತಿ? – ಎರಡನೇ ಅವಕಾಶ ನೀಡಿ ಎಂದ ಕೃಷ್ಣ

    ಕಪಿಲ್ ಶೋನಿಂದ ಹೊರ ಹೋಗ್ತಾರಾ ಭಾರತಿ? – ಎರಡನೇ ಅವಕಾಶ ನೀಡಿ ಎಂದ ಕೃಷ್ಣ

    ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ಹಾಸ್ಯ ನಟಿ ಭಾರತಿ ಸಿಂಗ್ ಗೆ ವಾಹಿನಿ ಎರಡನೇ ಅವಕಾಶ ನೀಡಬೇಕೆಂದು ನಟ ಕೃಷ್ಣ ಅಭಿಷೇಕ್ ಒತ್ತಾಯಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋನಿಂದ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರನ್ನ ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ವಾಹಿನಿ ಅಧಿಕೃತ ಹೇಳಿಕೆ ನೀಡಿಲ್ಲ.

    ಕಪಿಲ್ ಮತ್ತು ನಾನು ಸದಾ ಭಾರತಿ ಜೊತೆಯಲ್ಲಿ ನಿಲ್ಲುತ್ತೇವೆ. ಯಾರು ಬೇಕಾದ್ರೂ ಏನಾದ್ರೂ ತಿಳಿದುಕೊಳ್ಳಲಿ. ಒಂದು ವೇಳೆ ಭಾರತಿ ಸಿಂಗ್ ಶೋನಿಂದ ಕೈಬಿಡುವ ವಿಚಾರ ಬಂದ್ರೆ ನಾನು ಮತ್ತು ಕಪಿಲ್ ಆಕೆಗೆ ಬೆಂಬಲ ನೀಡುತ್ತೇನೆ. ಆದ್ರೆ ವಾಹಿನಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲ್ಲ ಎಂಬ ವಿಶ್ವಾಸ ನನಗಿದೆ ಎಂದು ಕೃಷ್ಣ ಹೇಳಿದ್ದಾರೆ.

    ನವೆಂಬರ್ 21ರಂದು ಬೆಳಗ್ಗೆ ಭಾರತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಎರಡೂ ಸ್ಥಳಗಳಿಂದ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು. ಈ ಹಿನ್ನೆಲೆ ವಿಚಾರಣೆಗಾಗಿ ದಂಪತಿಯನ್ನ ಎನ್‍ಸಿಬಿ ಕಚೇರಿಗೆ ಕರೆತರಲಾಗಿತ್ತು. 15 ಗಂಟೆ ವಿಚಾರಣೆ ನಡೆಸಿದ ಬಳಿಕ ರಾತ್ರಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿತ್ತು. ನವೆಂಬರ್ 23ರಂದು ಬಂಧಿತರಾಗಿದ್ದ ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿತ್ತು.

    ಇದಕ್ಕೂ ಮೊದಲು ಮುಂಬೈನ ಖಾರದಂಡಾ ಇಲಾಖೆಯ 21 ವರ್ಷದ ಯುವಕನ ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು. ಯುವಕನಿಂದ 40 ಗ್ರಾಂ ಗಾಂಜಾ ಮತ್ತು ಇನ್ನಿತರ ನಶೆ ಪದಾರ್ಥಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೇ ಯುವಕ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದ. ಯುವಕನ ಹೇಳಿಕೆಯನ್ನಾಧರಿಸಿ ಅಧಿಕಾರಿಗಳು ಭಾರತಿ ನಿಒವಾಸದ ಮೇಲೆ ದಾಳಿ ನಡೆಸಿದ್ದರು ಎಂದು ವರದಿಯಾಗಿದೆ.