ಅಭಿಮಾನಿಗಳ ಆರಾಧ್ಯ ದೈವ, ಸಾಹಸಸಿಂಹ ಬಿರುದಾಂಕಿತ ನಟ ದಿ. ಡಾ.ವಿಷ್ಣುವರ್ಧನ್‌ರಿಗೆ (Vishnuvardhan) ಮರಣೋತ್ತರ ʻಕರ್ನಾಟಕ ರತ್ನʼ ಪ್ರಶಸ್ತಿ (Karnataka Ratna Award) ನೀಡಬೇಕೆಂಬ ಒತ್ತಾಯ ಹೆಚ್ಚಾಗಿದೆ. ಬಹುಶಃ ನಾಳೆ (ಸೆ.4) ಈ ಕುರಿತು ಸರ್ಕಾರ ತೀರ್ಮಾನಿಸಿ, ನಾಳೆಯೇ ಘೋಷಣೆ ಮಾಡುವ ಸಾಧ್ಯತೆ ಇದೆ.
ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ವಿಷ್ಣುವರ್ಧನ್, ನಾಡು, ನುಡಿ, ಕಲೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಈ ಕಲಾವಿದನಿಗೆ ಗೌರವ ಸೂಚಕವಾಗಿ ʻಕರ್ನಾಟಕ ರತ್ನʼ ಪ್ರಶಸ್ತಿ ನೀಡುವಂತೆ ಹಿಂದಿನಿಂದಲೂ ಒತ್ತಾಯ ಕೇಳಿ ಬರುತ್ತಿತ್ತು. ಇದೀಗ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಹಾಗೂ ಅಳಿಯ ಅನಿರುದ್ಧ ಜಟ್ಕರ್ ಬುಧವಾರ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನ ಭೇಟಿಮಾಡಿ ಅಭಿಮಾನ್ ಸ್ಡುಡಿಯೋ ಜಾಗದ ವಿಚಾರ ಪ್ರಸ್ತಾಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ತಾರೆಯರ ಒತ್ತಾಯದ ಮೇರೆಗೆ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ʻಕರ್ನಾಟಕ ರತ್ನʼ ಕೊಡುವ ವಿಚಾರವನ್ನ ಸರ್ಕಾರ ಭಾರತಿಯವರ ಗಮನಕ್ಕೆ ತಂದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ
ಒಂದು ದಿನದ ಹಿಂದಷ್ಟೇ ಮಾಜಿ ಸಚಿವೆ ಜಯಮಾಲಾ, ಹಿರಿಯ ನಟಿ ಶ್ರುತಿ, ನಟಿ ಮಾಳವಿಕಾ ಅವಿನಾಶ್ ಸೇರಿ ಅನೇಕರು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ವಿಷ್ಣುವರ್ಧನ್ ಅವರಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು. ಇದೇ ತಿಂಗಳು ಸೆ. 18ರಂದು ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವಿದೆ. ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ವಿಷ್ಣುವರ್ಧನ್ ಅವರಿಗೆ ಪ್ರಶಸ್ತಿ ಘೋಷಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಗ್ ಬಾಸ್ ಪ್ರೋಮೋ ರಿಲೀಸ್ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್
ನಟ ಅನಿರುದ್ಧ ಹೇಳಿದ್ದೇನು?
ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಅನಿರುದ್ಧ (Aniruddha Jatkar), ಅಭಿಮಾನ್ ಸ್ಟುಡಿಯೋದಲ್ಲಿರುವ 19 ಗುಂಟೆ ಜಾಗಕ್ಕಾಗಿ ಮನವಿ ಮಾಡಿದ್ದೇವೆ. ಆ ಜಾಗದಲ್ಲಿ ಮಂಟಪ ನಿರ್ಮಿಸಲು ಅನುಮತಿ ಕೊಡಿ ಎಂದು ಕೇಳಿದ್ದೇವೆ. ಹಿಂದೆ ಅಲ್ಲಿ ಮಂಟಪವನ್ನು ನಾವು ಕಟ್ಟಿದ್ವಿ. ಈಗಲೂ ಜಾಗ ಕೊಟ್ಟರೆ ನಾವೇ ಮಂಟಪ ಕಟ್ಟಿಕೊಳ್ತೇವೆ. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೆಪ್ಟೆಂಬರ್ 18ರ ಒಳಗೆ ಜಾಗಕ್ಕೆ ಅನುಮತಿ ಸಿಗೋ ಸಾಧ್ಯತೆಯಿದೆ. ಅಲ್ಲದೇ ನಾಳೆಯ ಕ್ಯಾಬಿನೆಟ್‌ನಲ್ಲಿ ʻಕರ್ನಾಟಕ ರತ್ನʼದ ಬಗ್ಗೆ ಸಿಎಂ ಚರ್ಚೆ ಮಾಡೋದಾಗಿ ಹೇಳಿದ್ದಾರೆ. ನಾಳೆಯೇ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ
-ವಿಷ್ಣುವರ್ಧನ್ ಅವ್ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಸಿನಿಗಣ್ಯರಿಂದ ಮನವಿ
ಬೆಂಗಳೂರು: ಡಾ.ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಬುಧವಾರ (ಸೆ.3) ಹಿರಿಯ ನಟಿ ಭಾರತಿ ವಿಷ್ಣುವರ್ಧನ್ (Bharati Vishnuvardhan) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಲಿದ್ದಾರೆ.
ಸಿಎಂ ಕಾವೇರಿ ನಿವಾಸದಲ್ಲಿ ನಾಳೆ (ಸೆ.3) 10:30ಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ ಭೇಟಿಯಾಗಲಿದ್ದಾರೆ. ಈ ವೇಳೆ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಕನಿಷ್ಠ 10 ಗುಂಟೆ ಜಮೀನನ್ನು ಮೀಸಲಿಡಬೇಕು ಹಾಗೂ ಅಭಿಮಾನಿಗಳು ಗೌರವ ಸಮರ್ಪಿಸಲು ಮೀಸಲಿಡುವಂತೆ ಮನವಿ ಮಾಡಲಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್
ಇನ್ನೂ ಮಂಗಳವಾರ (ಸೆ.2) ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ದಿವಂಗತ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದರು. ಜೊತೆಗೆ ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ.ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರದ ಮನೆಗೂ ನಾಮಕರಣ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಡಾ.ವಿಷ್ಣುವರ್ಧನ್ ಅವರ ಕನಸಿನ ಮನೆಗೆ ಇಂದು ಗೃಹಪ್ರವೇಶ. ಜಯನಗರದಲ್ಲಿ ನಿರ್ಮಾಣವಾಗಿರುವ ಆ ಭವ್ಯ ಮನೆಯಲ್ಲಿ ಹಳೆಯ ನೆನಪುಗಳನ್ನೇ ಉಳಿಸಿಕೊಂಡು ಹೊಸ ಮನೆಯನ್ನು ನಿರ್ಮಾಣ ಮಾಡಿದ್ದಾರೆ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್. ಸಿಂಹ ನೆಲೆಸಿದ್ದ ಆ ಮನೆಯನ್ನು ಅವರ ಕುಟುಂಬ ಇದೀಗ ಹೊಸ ರೀತಿಯಲ್ಲಿ ಕಟ್ಟಿಸಲಾಗಿದೆ.
ನವ ಗೃಹಕ್ಕೆ ಪ್ರವೇಶಿಸುವುದು ಹಲವರ ಕನಸು. ಇಂದು ಚಂದನವನದ ಮೇರುನಟ ದಿ. ವಿಷ್ಣುವರ್ಧನ್ ಅವರ ಕುಟುಂಬ ಇಂತಹದ್ದೇ ಸಂತಸದಲ್ಲಿದೆ. ಈ ಶುಭ ದಿನದಂದು ವಿಷ್ಣು ಅವರ ನೂತನ ನಿವಾಸದ ಗೃಹಪ್ರವೇಶಕ್ಕೆ ಸಜ್ಜಾಗಿದ್ದು, ವಿಷ್ಣು ಅವರು ಆಸೆ ಪಟ್ಟಂತೆಯೇ ಪತ್ನಿ ಭಾರತಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಮನೆ ಗೃಹಪ್ರವೇಶ ನಡೆದಿದೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ
ಸಾಹಸಸಿಂಹ ವಿಷ್ಣುವರ್ಧನ್ ಅವರ ಕನಸಿನ ಮನೆ ಇರುವುದು ಜಯನಗರದ ಟಿ ಬ್ಲಾಕ್ ನಲ್ಲಿ 90/90 ಚದರಡಿಯಲ್ಲಿ ಭವ್ಯವಾಗಿ ಈ ಮನೆ ನಿರ್ಮಾಣ ಮಾಡಲಾಗಿದೆ. ‘ವಲ್ಮೀಕ’ ಹೆಸರಿನಲ್ಲಿ, ಗೇಟ ಮೇಲೆ ಸಿಂಹದ ಮುಖದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಂತಹ ಮನೆಗೆ ಇಂದು ವಿಷ್ಣು ಕುಟುಂಬ ಗೃಹ ಪ್ರವೇಶ ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.
ವಲ್ಮೀಕ ಎಂದರೆ ಹಾವಿನ ಹುತ್ತ ಎಂದರ್ಥ. ನಾಗರಹಾವು ಚಿತ್ರದ ಯಶಸ್ಸಿನ ನಂತರ ಇಲ್ಲೆ ಇದ್ದ ವಿಷ್ಣುವರ್ಧನ್ ಹಳೆಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದರು. 1976 ರಲ್ಲಿ ವಿಷ್ಣುವರ್ಧನ್ ಈ ಜಾಗ ಖರೀದಿ ಮಾಡಿದ್ದರಂತೆ. ಆದರೆ, ಇದು ನಮ್ಮ ಜಾಗ ಅಂತ ಅದರ ಮಾಲಿಕರು ಆಗ ಬಂದಿದ್ದರು. ವಿಷ್ಣುವರ್ಧನ್ ಇದನ್ನು ಇಷ್ಟ ಪಟ್ಟಿದ್ದಾರೆ ಅಂತ ಆ ಜಾಗದಲ್ಲಿ ಅರ್ಧ ಜಾಗ ಹಾಗೆಯೇ ಕೊಟ್ಟಿದ್ದರಂತೆ ಮಾಲೀಕರು. 6 ಬೆಡ್ ರೂಂನ ಈ ಮನೆ ಮುಂಭಾಗ ಒಂದು ಕೃಷ್ಣನ ವಿಗ್ರಹವಿದೆ. ಅದನ್ನ ವಿಷ್ಣು ಅವ್ರೆ ಇಲ್ಲಿ ಸ್ಥಾಪಿಸಿದ್ದರಂತೆ. ಅದನ್ನ ಹಾಗೆಯೆ ಇಟ್ಟು ಕಲ್ಲಿನ ಮಂಟಪ ಮಾಡಿ ಮತ್ತೆ ಪ್ರತಿಷ್ಠಾಪನೆ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
ಡಾ.ರಾಜ್ ಕುಮಾರ್ ಅಭಿನಯದ, ಸಿದ್ಧಲಿಂಗಯ್ಯ ನಿರ್ದೇಶನದ ‘ಬಂಗಾರದ ಮನುಷ್ಯ’ ಸಿನಿಮಾ ಬಿಡುಗಡೆ ಆಗಿದ್ದು 31.03. 1972ರಲ್ಲಿ. ಆ ಸಿನಿಮಾ ರಿಲೀಸ್ ಆಗಿ ಇಂದಿಗೆ 50 ವರ್ಷಗಳು ತುಂಬಿವೆ. ಈ ನೆಪದಲ್ಲಿ ಹಿರಿಯ ಪತ್ರಕರ್ತ ಮಹೇಶ್ ದೇವಶೆಟ್ಟಿ ಅವರು ಬರೆದ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಪುಸ್ತಕದ ಆಯ್ದ ಭಾಗ ಇಲ್ಲಿದೆ.
ಕೆಲವರು ಮುಖ ಸ್ತುತಿಗೆ ಮತ್ತು ಗೌಡರನ್ನು ಓಲೈಸಲು ಎದುರಿಗೆ ಸಿನಿಮಾ ಚೆನ್ನಾಗಿದೆ ಎಂದು ಹೇಳಿದರು. ವರದಪ್ಪ ಹೆಚ್ಚು ಮಾತಾಡುತ್ತಿರಲಿಲ್ಲ. ‘ಚೆನ್ನಾಗಿದೆ…ಚೆನ್ನಾಗಿದೆ…’ ಎಂದು ಮಾತು ಮುಗಿಸಿದರು. ಆದರೆ ಯಾವಾಗ ರಾಜ್ ಕೂಡ ಇದು ಐದಾರು ವಾರದ ಸಿನಿಮಾ ಎಂದು ಹೇಳಿದರೋ ಗೌಡರಿಗೆ ನಿಜಕ್ಕೂ ಗೊಂದಲ ಮತ್ತು ಆತಂಕ ಶುರುವಾಯಿತು. ರಾಜ್ ಹಾಗೆ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಅದಕ್ಕೆ ಕಾರಣ ಇಲ್ಲಿದೆ ಕೇಳಿ. ಅಲ್ಲಿವರೆಗೆ ರಾಜ್ ನಟಿಸಿದ್ದ ಚಿತ್ರಗಳಾದರೂ ಎಂಥದ್ದೆಂದು ನೀವೇ ನೋಡಿ. ಕಿಲಾಡಿ ರಂಗ, ಭೂಪತಿ ರಂಗ, ಭಲೇ ಹುಚ್ಚ, ಭಲೇ ಜೋಡಿ, ಎಮ್ಮೆ ತಮ್ಮಣ್ಣ , ಬೀದಿ ಬಸವಣ್ಣ, ಗೋವಾದಲ್ಲಿ ಸಿಐಡಿ 999…ಇದರಲ್ಲಿ ಎಂಥಾ ಕಿಕ್ ಇದೆ ಎಂದು ನಿಮಗೇ ಗೊತ್ತಾಗುತ್ತದೆ. ಅದರಲ್ಲೂ ಆ ಚಿತ್ರಗಳಲ್ಲಿ ರಾಜ್ ಸಕತ್ತಾಗಿ ಫೈಟ್ ಮಾಡಿ ವಿಲನ್‌ಗಳನ್ನು ಉರುಳಿಸುತ್ತಿದ್ದರು. ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಚಗುಳಿ ಇಡುತ್ತಿದ್ದರು, ನಾಯಕಿಗೆ ತರಲೆ ಮಾಡುವ ಮೂಲಕ ನಗಿಸುತ್ತಿದ್ದರು, ‘ ಭೂಪತಿ ರಂಗ ನಾನು…’ ಎಂದು ಹಾಡುತ್ತಾ ಬಂದರೆ ಸಾಕು ಜನರು ಎದ್ದು ನಿಂತು ಕೇಕೆ ಹಾಕುತ್ತಿದ್ದರು. ಆದರೆ ಬಂಗಾರದ ಮನುಷ್ಯದಲ್ಲಿ ಇಂಥದ್ದು ಏನೂ ಇರಲಿಲ್ಲ. ಗಂಭೀರವಾದ ರಾಜೀವಪ್ಪನ ಪಾತ್ರದಲ್ಲಿ ಹೆಚ್ಚು ಕಾಮಿಡಿ ತುರುಕಲು ಆಗುತ್ತಿರಲಿಲ್ಲ. ನಾಯಕಿಯೊಂದಿಗಿನ ರೊಮ್ಯಾನ್ಸ್ ದೃಶ್ಯಗಳೂ ಸರಳವಾಗಿದ್ದವು. ಕಲರ್ ಫುಲ್ ಡ್ರೆಸ್‌ನಲ್ಲಿ ರಾಜ್ ಮಿಂಚುತ್ತಾರೆಂದರೆ ಅದೂ ಇಲ್ಲ. ಹೆಚ್ಚು ಕಮ್ಮಿ ಲುಂಗಿ, ಪಂಚೆ, ಅಂಗಿಯಲ್ಲಿ ಕಾಣಿಸಿಕೊಂಡಿದ್ದರು. ಇದ್ದದ್ದು ಒಂದು ಗದ್ದೆ ಫೈಟು, ಇನ್ನು ಕತೆಯ ವಿಷಯಕ್ಕೆ ಬಂದರೆ ಅದೂ ಅಲ್ಲಿವರೆಗೆ ರಾಜ್ ಮಾಡಿದ ಚಿತ್ರಗಳ ಮಾದರಿಯಲ್ಲಿ ಇರಲಿಲ್ಲ. ಅಕ್ಕನ ಮಕ್ಕಳನ್ನು ಓದಿಸಲು, ಅದೇ ಊರಿನಲ್ಲಿ ನೆಲೆ ನಿಂತು, ಸಾಲ ಮಾಡಿ ತೋಟ ಮಾಡುತ್ತಾರೆ. ಕಲ್ಲು ಬಂಡೆಗಳನ್ನು ಕೊರೆದು ಅದೇ ಮಣ್ಣಲ್ಲಿ ಹಸಿರು ಬೆಳೆಯುತ್ತಾರೆ. ದಿನದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತಾರೆ. ಅಕ್ಕನ ಮಕ್ಕಳ ಸಹಿತ ಅವರ ಗೆಳೆಯನನ್ನು ಓದಿಸುತ್ತಾರೆ. ಇನ್ನೊಂದು ಕಡೆ ಅಕ್ಕನ ಗಂಡನಿಗೆ ಇದ್ದ ಇನ್ನೊಂದು ಸಂಬಂಧವನ್ನು ಗುಟ್ಟಾಗಿ ಕಾಪಾಡಿಕೊಂಡು ಬರುತ್ತಾ, ಆರತಿ ಮತ್ತು ಆಕೆಯ ಮಗನಿಗೂ ಹಣದ ಸಹಾಯ ಮಾಡುತ್ತಾರೆ. ಮೊದಲು ಅಕ್ಕನ ಮಕ್ಕಳ ಮದುವೆಯಾಗಲಿ ಆಮೇಲೆ ನನ್ನದು ಎಂದು ಅಲ್ಲಿಯೂ ತ್ಯಾಗವನ್ನು ಮೆರೆಯುತ್ತಾರೆ. ಮದುವೆಯ ಸುಖ ಅನುಭವಿಸುವ ಮುಂಚೆಯೇ ನಾಯಕಿ ಭಾರತಿ ಅಕಸ್ಮಿಕವಾಗಿ ಬಾವಿಗೆ ಬಿದ್ದು ಸಾಯುತ್ತಾರೆ. ಅದೇ ನೋವಿನಲ್ಲಿ ಇರುವಾಗ, ವಜ್ರಮುನಿ , ರಾಜ್‌ಗೆ ಇನ್ನೊಂದು ಅನೈತಿಕ ಸಂಬಂಧ ಇದೆ ಎಂದು ಅನುಮಾನ ಪಡುತ್ತಾರೆ. ವಜ್ರಮುನಿ ಎಂಥಾ ಒಳ್ಳೆಯ ಪಾತ್ರವನ್ನು ಮಾಡಿದರೂ ಕೊನೇ ಗಳಿಗೆಯಲ್ಲಿ ವಿಲನ್ ಆಗಲೇಬೇಕಿತ್ತಲ್ಲ….!
‘ನಿನ್ನ ತಮ್ಮನಿಗೆ ಇನ್ನೊಂದು ಸಂಬಂಧ ಇದೆ. ಆತನ ಒಳ್ಳೆತನ ಬೆಳಗಾವಿಯಲ್ಲಿ ಹೊಳೆಯುತ್ತಿದೆ…’ ಎನ್ನುತ್ತಾನೆ. ಅಷ್ಟೇ ಅಲ್ಲ, ನಮ್ಮ ಪಾಲು ಕೊಡು ಎನ್ನುತ್ತಾನೆ. ರಾಜ್ ಕೊಡುವುದಿಲ್ಲ ಎಂದಾಗ, ತಿನ್ನೋದು ನಮ್ಮ ಅನ್ನ , ಉಡೋದು ನಮ್ಮ ಬಟ್ಟೆ…’ ಎಂದು ಹೇಳಿಯೇ ಬಿಡುತ್ತಾನೆ. ಇನ್ನೇನು ಊಟದ ತಟ್ಟೆ ಮುಂದೆ ಕೂತ ರಾಜ್ ತುತ್ತನ್ನು ಬಾಯಿಗೆ ಇಡಬೇಕೆನ್ನಷ್ಟರಲ್ಲಿ ವಜ್ರಮುನಿ ಮಾತು ಎದೆಗೆ ತಿವಿಯುತ್ತದೆ. ತಟ್ಟೆಗೆ ನಮಸ್ಕಾರ ಮಾಡಿ, ಚಪ್ಪಲಿಯನ್ನೂ ಹಾಕಿಕೊಳ್ಳದೆ ರಾಜ್ ಮನೆಯಿಂದ ಹೊರಡುತ್ತಾರೆ. ತೋಟಕ್ಕೆ ಬಂದು ಮಣ್ಣನ್ನು ಕೈಗೆತ್ತಿಕೊಂಡು, ಕಣ್ಣಿಗೆ ಒತ್ತಿಕೊಂಡು ಹೇಳುತ್ತಾರೆ. ‘ ನೀನು ನಂಬಿದವರಿಗೆ ಎಂದೆಂದೂ ಕೈ ಬಿಡುವುದಿಲ್ಲ…ನನ್ನನ್ನು ಕಾಪಾಡಿದಂತೆ, ನಮ್ಮ ಅಕ್ಕ ಮತ್ತು ಮಕ್ಕಳನ್ನು ಕಾಪಾಡು ತಾಯೇ…’ ಎಂದು ಕೈ ಮುಗಿಯುತ್ತಾರೆ. ಮೈಮೇಲಿದ್ದ ಶಾಲ್ ಅನ್ನು ಗಿಡದ ಕೆಳಗೆ ಚಳಿಯಿಂದ ಮಲಗಿದ್ದ ಮುದುಕನಿಗೆ ಹೊದ್ದಿಸಿ….ಸೂರ್ಯಾಸ್ತ ಗುಂಟ ಒಂಟಿ…ಒಂಟಿಯಾಗಿ ಬಹು ದೂರ ದೂರ… ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ
ಉಫ್…ರಾಜ್ ಈ ಹಿಂದೆ ಮಾಡಿದ ಮಾಸ್ ಎಲಿಮೆಂಟ್‌ಗಳೇ ಇಲ್ಲದ ಈ ಚಿತ್ರವನ್ನು ಜನರು ಒಪ್ಪುತ್ತಾರಾ ? ಹೀಗಾಗಿಯೇ ಎಲ್ಲರಿಗೂ ಇದು ಅನ್ನಿಸಿತ್ತು. ಕ್ಲೈಮ್ಯಾಕ್ಸ್ ಚೇಂಜ್ ಮಾಡಿದರೆ ಜನ ನೋಡಬಹುದು. ಇದಕ್ಕೆ ಸಿದ್ದಲಿಂಗಯ್ಯ ಬಿಲ್ ಕುಲ್ ಒಪ್ಪಲಿಲ್ಲ. ಚಿತ್ರ ಕತೆ ಮಾಡಿದ್ದು ನಾನು, ಜನರಿಗೆ ಇದರ ಮೂಲಕ ಹೊಸ ಸಂದೇಶವನ್ನೂ ಕೊಟ್ಟಿದ್ದೇನೆ. ಎಲ್ಲರನ್ನೂ ಹೊಡೆದು ಮತ್ತೆ ಅದೇ ಮನೆಯಲ್ಲಿ ರಾಜ್ ಇದ್ದರೆ ಇಡೀ ಪಾತ್ರವೇ ಬಿದ್ದು ಹೋಗುತ್ತದೆ. ನಾನಂತೂ ಏನೂ ಮಾಡಲ್ಲ. ಬೇಕಾದರೆ ಇನ್ನೊಬ್ಬರಿಂದ ಕ್ಲೈಮ್ಯಾಕ್ಸ್ ಬದಲಿಸಿ…’ ಎನ್ನುತ್ತಾ ಹೊರಟು ಹೋದರು. ಮುಂದೇನು ಮಾಡಬೇಕು? ಗೌಡರು ಮತ್ತೆ ಮತ್ತೆ ಯೋಚಿಸಿದರು. ಅಷ್ಟರಲ್ಲಿ ಸುದ್ದಿ ಹೊರಬಿದ್ದಾಗಿತ್ತು.‘ ಸಿನಿಮಾ ಅಷ್ಟಕ್ಕಷ್ಟೇ ಅಂತೆ….ಗೌಡರು ಅಂಗಡಿ ಮುಚ್ಚಿಕೊಂಡು ಹೋಗುತ್ತಾರೆ…ಮೊದಲೇ ಹೇಳಿದ್ದೇವು…ಕಲರ್ ಚಿತ್ರವನ್ನು ಮಾಡಬೇಡಿ ಅಂತ…’ ತಲೆಗೊಬ್ಬರು ಮಾತಾಡಿದರು. ನಿರ್ಮಾಪಕ ಚಂದೂಲಾಲ್ ಜೈನ್ ಕೂಡ, ಭಾರ್ಗವ ಬಳಿ ಇದೇ ಮಾತನ್ನು ಕೇಳಿದರು. ಆದರೆ ಭಾರ್ಗವ ಸಿನಿಮಾದ ಬಗ್ಗೆ ಪಕ್ಕಾ ಆಗಿದ್ದರು. ‘ ನೂರು ದಿನ ಓಡುವುದರಲ್ಲಿ ಅನುಮಾನ ಇಲ್ಲ…ಪಕ್ಕಾ…’ ಎಂದರು. ಗಾಂಧಿನಗರದಲ್ಲೂ ಇದೇ ವಿಷಯದ ಬಗ್ಗೆ ಚರ್ಚೆಗಳು ಶುರುವಾದವು. ಆದರೆ ಈಗೇನೂ ಮಾಡುವಂತಿರಲಿಲ್ಲ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್
ಕೊನೆಗೂ ಗೌಡರು ಜನರ ಮೇಲೆ ಭಾರ ಚಿತ್ರವನ್ನು ತೆರೆ ಕಾಣಿಸಲು ರೆಡಿಯಾದರು. ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ. ದುಡ್ಡನ್ನು ನೀರಿನಂತೆ ಸುರಿದಿದ್ದೇವೆ. ರಾಜ್ ನಾಮಬಲವೂ ಚಿತ್ರಕ್ಕಿದೆ, ಈಸ್ಟ್ ಮನ್ ಕಲರ್ ಚಿತ್ರ ಎನ್ನುವುದು ಜನರನ್ನು ಖಂಡಿತ ಸೆಳೆಯುತ್ತದೆ, ರಾಜ್ ಭಾರತಿ ಜೋಡಿ ಅಂದರೆ ನಿಜ ಜೀವನದಲ್ಲೂ ಗಂಡ ಹೆಂಡತಿ ಎಂಬಂತೆ ಜನರು ಭಾವಿಸಿದ್ದಾರೆ…ಇದರಲ್ಲಿ ಒಂದಲ್ಲ ಒಂದು ವಿಷಯ ಜನರಿಗೆ ಕನೆಕ್ಟ್ ಆದರೆ ಸಾಕು. ನಮ್ಮ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನ ಇಲ್ಲ….ಎಂದು ಗೌಡರು ತಮಗೇ ಹೇಳಿಕೊಂಡರು. ಆಗಿದ್ದು ಆಗೇ ಬಿಡಲಿ ಎಂದು ತಮ್ಮ ಸೋದರರಿಗೆ ಎಲ್ಲವನ್ನೂ ವಿವರಿಸಿ. ಚಿತ್ರದ ಬಿಡುಗಡೆ ತಯಾರಿ ಮಾಡಿಕೊಳ್ಳುವಂತೆ ಹೇಳಿದರು. ಅದಕ್ಕೂ ಮುನ್ನ ಸೆನ್ಸಾರ್ ಮಂಡಳಿಗೆ ಚಿತ್ರವನ್ನು ತೋರಿಸಬೇಕಿತ್ತು. ಅದಕ್ಕೂ ಒಂದು ದಿನ ನಿಗದಿಯಾಯಿತು. ಮಂಡಳಿ ಸದಸ್ಯರು ಸಿನಿಮಾ ನೋಡಿದ್ದೇ ತಡ, ಎಲ್ಲರ ಕಣ್ಣಲ್ಲಿ ಹೊಸ ಮಿಂಚು ಸುಳಿದಂತಾಯಿತು. ‘ಗೌಡರೇ…ಎಂಥಾ ಒಳ್ಳೆ ಸಿನ್ಮಾ ಮಾಡಿದೀರಿ…ನಮಗಂತೂ ಸಿಕ್ಕಾಪಟ್ಟೆ ಇಷ್ಟವಾಯಿತು. ಬರೀ ಮನರಂಜನೆ ಮಾತ್ರವಲ್ಲ…ಜನರಿಗೆ ಒಳ್ಳೆಯ ಸಂದೇಶವನ್ನೂ ಕೊಟ್ಟಿದ್ದೀರಿ. ಗ್ಯಾರಂಟಿ ಹಿಟ್ ಅಗುತ್ತೆ…ಯು ಸರ್ಟಿಫಿಕೇಟ್ ಕೊಡ್ತಿವಿ…’ ಎಂದು ಅವರ ಬಾಯಿಂದ ಮಾತು ಹೊರ ಬೀಳುತ್ತಿದ್ದಂತೆಯೇ…ಗೌಡರು ಒಮ್ಮೆ ಉಸಿರನ್ನು ಒಳಗೆ ಎಳೆದುಕೊಂಡು ಹೊರಗೆ ಬಿಟ್ಟರು. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?
ಅದರಲ್ಲಿ ಅಲ್ಲಿವರೆಗೆ ಇದ್ದ ಆತಂಕ, ನೋವು, ಅಸಹನೆ ಎಲ್ಲವೂ ಕೊಚ್ಚಿ ಹೋಯಿತು… ಬಂಗಾರದ ಮನುಷ್ಯನಿಗೆ ಮೊಟ್ಟ ಮೊದಲ ಗೆಲುವು ಸಿಕ್ಕಿತ್ತು…
13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.3 ರಿಂದ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಚಿತ್ರೋತ್ಸವವನ್ನು ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಜಿ.ಕೆ.ವಿ.ಕೆ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಎಂ.ರಾಜೀವ್ ಚಂದ್ರಶೇಖರ್ ಗೌರವಾನ್ವಿತ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್, ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್, ಆಹಾರ, ನಾಗರೀಕ ಸರಬರಾಜು ಸಚಿವ ಕೆ.ಗೋಪಾಲಯ್ಯ, ತೋಟಗಾರಿಕೆ ಸಚಿವ ಮುನಿರತ್ನ, ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್, ಶಾಸಕರಾದ ಎಸ್.ಆರ್. ವಿಶ್ವನಾಥ್, ಎಂ.ಕೃಷ್ಣಪ್ಪ, ಎಂ.ಸತೀಶ್ ರೆಡ್ಡಿ, ಬಿ.ಕೆ ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿದ್ದಾರೆ. ಇದನ್ನೂ ಓದಿ : ಅದ್ಧೂರಿ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಲಾಂಚ್
ನಟ ದರ್ಶನ್ ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರೆ, ವಿಶೇಷ ಅತಿಥಿಯಾಗಿ ಹಿರಿ ನಟಿ ಭಾರತಿ ವಿಷ್ಣುವರ್ಧನ್ ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪ್ರಿಯದರ್ಶನ್ ಆಗಮಿಸುತ್ತಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್
ಚಿತ್ರೋತ್ಸವದ ಕುರಿತು ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರೆ, ನಟಿ ಪ್ರಣೀತಾ ಸುಭಾಷ್, ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್.ಜೈರಾಜ್ ಮತ್ತು ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿರಲಿದ್ದಾರೆ.
– ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಷ್ಠಾನವನ್ನು ಮುಂದುವರಿಸುತ್ತೇನೆ – ನಿಮ್ಮ ಫೇವರೆಟ್ ನಟಿಯಾಗಿರುವುದು ನಮ್ಮ ಭಾಗ್ಯ ಅಂದ್ರು ಭಾರತಿ
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಪ್ರತಿಷ್ಠಾನದ ಕೆಲಸವನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ನಟಿ ಭಾರತಿ ವಿಷ್ಣುವರ್ಧನ್‍ರವರಿಗೆ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಸವರಾಜ ಬೊಮ್ಮಾಯಿಯವರು ನನಗೆ ಕನ್ನಡದಲ್ಲಿ ಆಲ್ ಫೇವರೆಂಟ್ ನಟ ಎಂದರೆ ಡಾ. ರಾಜ್ ಕುಮಾರ್ ಮತ್ತು ಮೂವರು ನಟಿಯರೆಂದರೆ ಬಹಳ ಇಷ್ಟ. ಅದರಲ್ಲಿ ಭಾರತಿಯವರು ಕೂಡ ಒಬ್ಬರು ಎಂಬ ವಿಚಾರ ಬಹಿರಂಗಪಡಿಸಿದ್ದರು. ಅಲ್ಲದೇ ಡಾ. ರಾಜ್ ಕುಮಾರ್ ಹಾಗೂ ಭಾರತಿಯವರ ಕಾಂಬಿನೇಷನ್‍ನಲ್ಲಿ ಬಂದ ಬಂಗಾರದ ಮನುಷ್ಯ ಸಿನಿಮಾವನ್ನು ಹಲವಾರು ಬಾರಿ ವೀಕ್ಷಿಸಿರುವುದಾಗಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಮಂತ್ರಾಲಯದಿಂದ ವಾಪಸ್ಸಾಗ್ತಿದ್ದಾಗ ಕಾರು ಅಪಘಾತ- ಮದ್ವೆಯಾಗ್ಬೇಕಿದ್ದ ಜೋಡಿ ಸಾವು
ಹೀಗಾಗಿ ಪಬ್ಲಿಕ್ ಟಿವಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಬೊಮ್ಮಾಯಿಯವರಿಗೆ ಸಪ್ರ್ರೈಸ್ ಆಗಿ ಹಿರಿಯ ನಟಿ ಭಾರತೀಯವರು ಕರೆ ಮಾಡಿ ಮಾತನಾಡಿದರು. ನೀವು ಮುಖ್ಯಮಂತ್ರಿಯಾಗಿರುವ ಬಗ್ಗೆ ನಮಗೆ ಬಹಳ ಸಂತೋಷವಿದೆ. ನಿಮ್ಮನ್ನು ಭೇಟಿಯಾಗಬೇಕೆಂದು ಬಹಳಷ್ಟು ಬಾರಿ ಪ್ರಯತ್ನಿಸಿದೆ. ಆದರೆ ಈವರೆಗೂ ಭೇಟಿಯಾಗಲು ಅವಕಾಶ ಸಿಗಲಿಲ್ಲ. ನೀವು ನಿಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತೀರಾ ಎಂದು ನಾನು ಕೂಡ ತೊಂದರೆ ನೀಡಲಿಲ್ಲ ಎಂದಿದ್ದಾರೆ. ಆಗ ಬೊಮ್ಮಾಯಿಯವರು ನಾನು ಕೂಡ ನಿಮ್ಮನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಶಿಷ್ಯ ಸಂತೋಷ್ ಲಾಡ್ ಅಸಮಾಧಾನ
ಇದೇ ಸಂದರ್ಭದಲ್ಲಿ ಸಾಹಸ ಸಿಂಹ ಡಾ. ವಿಷ್ಟುವರ್ಧನ್ ಪ್ರತಿಷ್ಠಾನಕ್ಕೆ ನೀವು ಅಧ್ಯಕ್ಷರಾಗಿದ್ದೀರಾ, ಇದರಿಂದ ನಿಮ್ಮ ಜೊತೆ ಕೆಲಸ ಮಾಡುವಂತಹ ಸೌಭಾಗ್ಯ ನಮಗೆ ಸಿಕ್ಕಿದೆ. ಇದೇ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್‍ರವರ ಹುಟ್ಟುಹಬ್ಬವಿರುವುದಾಗಿ ತಿಳಿಸಿದ ಅವರು, ವಿಷ್ಣುವರ್ಧನ್ ಅವರ ಪ್ರತಿಷ್ಠಾನದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ. ಆಗ ನಾನು ಪ್ರತಿಷ್ಠಾನದ ಕೆಲಸವನ್ನು ನಾನು ಮುಂದುವರಿಸಿ ಮಾಡಿಕೊಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸುದೀಪ್ ಒಬ್ಬ ನಟರಾಗುತ್ತಾರೆ ಅಂತ ಅಂದುಕೊಂಡಿರಲಿಲ್ಲ: ಬೊಮ್ಮಾಯಿ
ನಿಮ್ಮ ಅಂದಿನ ಹಳೆಯ ಸಿನಿಮಾಗಳು ಇಂದಿಗೂ ಸಹ ಹಿಟ್ ಸಿನಿಮಾವಾಗಿದೆ. ನೀವೆಲ್ಲರೂ ಕನ್ನಡ ಚಿತ್ರರಂಗವಷ್ಟೇ ಅಲ್ಲದೇ ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದೀರಾ. ಹೀಗಾಗಿ ನಿಮ್ಮೆಲ್ಲರ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಬೊಮ್ಮಾಯಿಯವರು ನುಡಿದಿದ್ದಾರೆ. ಕೊನೆಗೆ ನಿಮ್ಮ ಫೇವರೆಟ್ ನಟಿಯಾಗಿರುವುದು ನಮ್ಮ ಭಾಗ್ಯ. ಭಗವಂತ ನಿಮಗೆ ಉತ್ತಮ ಕೆಲಸಗಳನ್ನು ಮಾಡುವಂತ ಶಕ್ತಿ ಕೊಡಲಿ ಎಂದು ಭಾರತಿಯವರು ಶುಭ ಹಾರೈಸಿದ್ದಾರೆ.
ಬೆಂಗಳೂರು: ಡಾ. ವಿಷ್ಣುವರ್ಧನ್ ಬಗ್ಗೆ ಮಾತನಾಡುವವರು ಇರಬೇಕು. ಹಾಗಿದ್ದಲ್ಲಿ ಮಾತ್ರ ಅವರ ಇರುವಿಕೆ ಗೊತ್ತಾಗುತ್ತೆ. ಪುತ್ಥಳಿ ಧ್ವಂಸವನ್ನ ಅವಮಾನ ಅಂದುಕೊಳ್ಳಬಾರದು. ಅದನ್ನ ಆಶೀರ್ವಾದ ಅಂದುಕೊಳ್ಳೋಣ ಎಂದು ಸಾಹಸಿಂಹ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.
ಮೈಸೂರಿನಲ್ಲಿ ವಿಷ್ಣು ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ಇಡೀ ಚಿತ್ರರಂಗ ಪ್ರತಿಕ್ರಿಯಿಸಿದೆ. ಘಟನೆಗೆ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದವನ್ನು ಹೇಳುತ್ತೇನೆ. ಎಲ್ಲರ ಮನದಲ್ಲಿಯೂ ವಿಷ್ಣು ಇದ್ದಾರೆ ಎಂದರು.
ಯಾರೋ ಕೆಲವರು ಅವರ ಬಗ್ಗೆ ಮಾತನಾಡುತ್ತಾರೆ. ಮಾತನಾಡುವವರು ಇದ್ದಾಗಲೇ ನಮ್ಮವರು ಇದ್ದಾರೆ ಎನಿಸುತ್ತದೆ. ಪುತ್ಥಳಿ ಧ್ವಂಸವನ್ನು ಅವಮಾನ ಅಂದುಕೊಳ್ಳಬಾರದು. ಅದನ್ನು ಆಶೀರ್ವಾದ ಅಂದುಕೊಳ್ಳೋಣ. ಇಂಹತ ಕೆಲಸ ಮಾಡಿದಂತವರಿಗೆ ನಾನು ಏನೂ ಹೇಳುವುದಿಲ್ಲ. ಅಂತವರ ಬಗ್ಗೆ ಏನು ಮಾತನಾಡದೇ ಇರುವುದೇ ಉತ್ತಮ ಎಂದು ಹೇಳಿದ್ದಾರೆ. ಇದನ್ನು ಓದಿ: ಸಿಂಹ ಯಾವತ್ತಿದ್ರೂ ಸಿಂಹವೇ- ವಿಷ್ಣು ಪುತ್ಥಳಿ ಧ್ವಂಸಗೊಳಿಸಿದವ್ರ ವಿರುದ್ಧ ಪುತ್ರಿ ಕಿಡಿ
ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಿರುವ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ಸ್ಥಾಪನೆ ಮಾಡಿದ್ದ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಈ ಸಂಬಂಧ ಅಳಿಯ ಅನಿರುದ್ಧ್, ನಟರಾದ ದರ್ಶನ್, ಸುದೀಪ್ ಸೇರಿದಂತೆ ವಿಷ್ಣು ಅಭಿಮಾನಿಗಳು ಕೂಡ ಕಿಡಿಗೇಡಿಗಳ ವಿರುದ್ಧ ಕಿಡಿಕಾರಿದ್ದರು. ಇದೀಗ ಅದೇ ವೃತ್ತದಲ್ಲಿ ವಿಷ್ಣುದಾದಾನ ಪ್ರತಿಮೆ ಮತ್ತೆ ನಿರ್ಮಾಣವಾಗುತ್ತಿದೆ.
ಬೆಂಗಳೂರು: ಇದೇ ತಿಂಗಳ 15ರಂದು ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಲಿದೆ ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ಭೇಟಿ ಮಾಡಿ ವಿಷ್ಣು ಸ್ಮಾರಕ ನಿರ್ಮಾಣದ ಗುದ್ದಲಿ ಪೂಜೆ ನೆರೆವೇರಿಸುವಂತೆ ಮನವಿ ಮಾಡಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ, 11ನೇ ವರ್ಷದ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿಂಎಂ ಅವರನ್ನ ಕರೆಯಲು ಬಂದಿದ್ದೇವೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಗುತ್ತಿದೆ. ಈ ತಿಂಗಳ 15ರಂದು ಸ್ಮಾರಕದ ಗುದ್ದಲಿ ಪೂಜೆ ಕಾರ್ಯಕ್ರಮವಿದೆ. ಸೂಕ್ತ ಭದ್ರತೆಗಾಗಿ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಸಿಎಂಗೆ ಮನವಿ ಮಾಡಿದ್ದೇವೆ ಎಂದರು.
ಕೋವಿಡ್ ಇರೋ ಕಾರಣ ಸಿ.ಎಂ ಗುದ್ದಲಿಪೂಜೆಗೆ ಬರಲು ಆಗುತ್ತಿಲ್ಲ. ಹೀಗಾಗಿ ಅವರು ಆನ್ ಲೈನ್ ಮೂಲಕ ವಿಷ್ಣು ಸ್ಮಾರಕದ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಇದೇ ವೇಳೆ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ ಅನಿರುದ್ಧ, ನಮಗೆ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಜಾಲದ ಬಗ್ಗೆ ಅರಿವಿಲ್ಲ. ಈ ವಿಚಾರ ಮನಸ್ಸಿಗೆ ತುಂಬಾ ಬೇಜಾರಾಗುತ್ತಿದೆ. ಇಡೀ ಜಗತ್ತಿನಲ್ಲೇ ಈ ಮಾಫಿಯಾ ಇರಬಾರದು. ಯುವ ಪೀಳಿಗೆಯನ್ನ ಇದರಿಂದ ರಕ್ಷಿಸಬೇಕು ಎಂದು ಇದೇ ವೇಳೆ ಮನವಿ ಮಾಡಿಕೊಂಡರು.
ಬೆಂಗಳೂರು: ಇಂದು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ಭಾರತಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟ ಅನಿರುದ್ಧ್ ಸೋಶಿಯಲ್ ಮೀಡಿಯಾದಲ್ಲಿ ಭಾರತಿ ಅವರಿಗೆ ಶುಭಾಶಯ ಕೋರಿದ್ದಾರೆ.
ನಟ ಅನಿರುದ್ಧ್ ಫೇಸ್‍ಬುಕ್‍ನಲ್ಲಿ ಭಾರತಿ ಅಮ್ಮನವರ ಬಗ್ಗೆ ಬರೆದುಕೊಳ್ಳುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. “ಸದಾ ನನ್ನ ಜೀವನದ ದೇವತೆ ಎನ್ನುತ್ತಿದ್ದರು ಅಪ್ಪಾವ್ರು. ಯಾವ ಜನ್ಮದ ಪುಣ್ಯವೋ ಏನೋ ಆ ದೇವತೆ ನನಗೆ ತಾಯಿಯಾದರು. ಅಂದಿನಿಂದ ಇಂದಿನವರೆಗೂ ಅದೇ ಪ್ರೀತಿ, ಮಮತೆ, ವಾತ್ಸಲ್ಯ, ಮತ್ತೇನು ಹೇಳಲಿ ನಿಮ್ಮ ಬಗ್ಗೆ” ಎಂದು ಅಮ್ಮನ ಬಗ್ಗೆ ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ, “ನನ್ನ ಪ್ರತಿ ಪ್ರಾರ್ಥನೆಯಲ್ಲಿಯೂ ನೀವು ಸದಾ ಸಂತೋಷವಾಗಿರಲೆಂಬ ಕೋರಿಕೆ ಇದ್ದೇ ಇರುತ್ತದೆ. ನನ್ನ ಮುಂದಿನ ಜನ್ಮದಲ್ಲಿಯೂ ಈ ತಾಯಿಯ ಪ್ರೀತಿ ನನಗೆ ಸಿಗುವಂತಾಗಲಿ ಎಂದಷ್ಟೇ ಕೇಳಿಕೊಳ್ಳಬಲ್ಲೆ. ಹುಟ್ಟುಹಬ್ಬದ ಶುಭಾಶಯಗಳು ಅಮ್ಮ” ಎಂದು ಪ್ರೀತಿಯಿಂದ ಭಾರತಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಅನಿರುದ್ಧ್ ಅವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ನಂತರ ಅಭಿಮಾನಿಗಳು ಕೂಡ ಕಮೆಂಟ್ ಮಾಡುವ ಮೂಲಕ ಭಾರತಿ ಅವರಿಗೆ ಶುಭ ಕೋರುತ್ತಿದ್ದಾರೆ. ನಟ ಅನಿರುದ್ಧ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಈ ಸೀರಿಯಲ್‍ನಲ್ಲಿ ಅನಿರುದ್ಧ್ ಆರ್ಯ ವರ್ಧನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಭಾರತಿ ವಿಷ್ಣುವರ್ಧನ್ ಅವರು 1960ರಲ್ಲಿ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟಿದ್ದು, 80ರ ದಶಕದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರು ಮನಗೆದ್ದಿದ್ದಾರೆ. ಡಾ.ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಅನಂತ್‍ನಾಗ್ ಸೇರಿದಂತೆ ಅನೇಕ ಮೇರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸುಮಾರು 100ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದಾರೆ.
ಮೈಸೂರು: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 10ನೇ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಹೊರವಲಯದ ವಿಷ್ಣು ಸ್ಮಾರಕ ಸ್ಥಳದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿದರು.
ಸ್ಮಾರಕ ಸ್ಥಳದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಹತ್ತು ವರ್ಷಗಳ ನಂತರ ಒಳ್ಳೆಯದಾಗುತ್ತಿದೆ. ಇನ್ನೊಂದು ವಾರದಲ್ಲಿ ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.
ವಿಷ್ಣು ನಿಧನರಾಗಿ ಹತ್ತು ವರ್ಷಗಳಾಗಿವೆ. ಅಭಿಮಾನಿಗಳ ಪ್ರೀತಿ, ವಿಶ್ವಾಸ ಇನ್ನು ಕಡಿಮೆಯಾಗಿಲ್ಲ. ಅವರ ಘನತೆಗೆ ಯಾವುದೇ ಧಕ್ಕೆಯಾಗಿಲ್ಲ. ವಿಷ್ಣು ಇನ್ನೂ ನಮ್ಮೊಂದಿಗೆ ಇದ್ದಾರೆ. ಸ್ಮಾರಕ ವಿಷ್ಣು ಅವರ ಕನಸು. ಸ್ಮಾರಕ ಜಾಗದಲ್ಲಿ ಜನಪರ ಕೆಲಸಗಳಾಬೇಕು ಎಂಬುದು ಅವರ ಬಯಕೆಯಾಗಿತ್ತು. ಕಟ್ಟಡದ ರೂಪುರೇಷೆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದರು. ಸಿಎಂ ಯಡಿಯೂರಪ್ಪ ಅವರು ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.