Tag: Bharath Jodo Yatra

  • ನಾನೂ ಕಾಂಗ್ರೆಸ್‌ನಿಂದ ಟಿಕೆಟ್ ಕೇಳ್ತೀನಿ – ನಟಿ ಭಾವನಾ

    ನಾನೂ ಕಾಂಗ್ರೆಸ್‌ನಿಂದ ಟಿಕೆಟ್ ಕೇಳ್ತೀನಿ – ನಟಿ ಭಾವನಾ

    ಚಿತ್ರದುರ್ಗ: ನಾನೂ ಈ ಬಾರಿ ಕಾಂಗ್ರೆಸ್‌ನಿಂದ (Congress) ಟಿಕೆಟ್ ಕೇಳ್ತೀನಿ. ಜನರ ಸೇವೆಗಾಗಿ ಚುನಾವಣೆಗೆ (Election) ನಿಲ್ತೀನಿ ಎಂದು ಕನ್ನಡದ ಖ್ಯಾತ ನಟಿ ಭಾವನಾ (Actress Bhavana) ಹೇಳಿದ್ದಾರೆ.

    ಭಾರತ್ ಜೋಡೋ ಯಾತ್ರೆ (Bharath Jodo Yatra) ವೇಳೆ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಕೇಳ್ತೀನಿ. ಜನರ ಸೇವೆಗಾಗಿ ನಾನು ಚುನಾವಣೆಗೆ ನಿಲ್ತೀನಿ. ಮುಂದೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಮೋದಿಗೆ (Narendra Modi) ಅವರಿಗೆ ರಾಹುಲ್‌ಗಾಂಧಿ (Rahul Gandhi) ಸಮನಾದ ವ್ಯಕ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದೆ ಭಾರತ್ ಜೋಡೋ, ಹಿಂದೆ ಎಲೆಕ್ಷನ್ ಸರ್ವೆ – ಮಳೆಯಲ್ಲೂ ನಿಲ್ಲದ ರಾಹುಲ್ ಜೋಶ್

    ದೇಶದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಹುಲ್‌ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲೂ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14ರ ವರೆಗೆ ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಫುಲ್‌ಜೋಶ್‌ನಲ್ಲಿರೋ ರಾಹುಲ್‌ಗಾಂಧಿ ಜಡೀ ಮಳೆಯಲ್ಲೂ ಉತ್ಸಾಹ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ನಡುವೆ ಪೋಸ್ಟರ್ ವಾರ್ – ರಾರಾಜಿಸುತ್ತಿದೆ ರಾಜು, ಕುಟ್ಟಪ್ಪನ ಸ್ವಾಗತ ಪೋಸ್ಟರ್

    ಮಂಗಳವಾರ (ಅ.11) ರಾಹುಲ್ ಗಾಂಧಿ 10ನೇ ದಿನದ ಪಾದಯಾತ್ರೆ ಚಿತ್ರದುರ್ಗದ ಹರ್ತಿಕೋಟೆಯಿಂದ ಆರಂಭವಾಗುತ್ತಿದ್ದು, 22 ಕಿಮೀ ಪಾದಯಾತ್ರೆ ಮಾಡಲಿದ್ದಾರೆ. ಈ ನಡುವೆ ಅರಬಾವಿ, ಗೋಕಾಕ್, ಗೌರಿಬಿದನೂರು, ಬಾಗೇಪಲ್ಲಿ, ಚಳ್ಳಕೆರೆ, ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಶಿವಮೊಗ್ಗ, ಶಿವಾಜಿನಗರ, ಪಾವಗಡ ಕ್ಷೇತ್ರಗಳ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ (Siddramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (Dk Shivakumar) ಇನ್ನೂ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಹುಲ್‌ಗಾಂಧಿ ಪೋಸ್ಟರ್‌ಗೆ `ಚಪ್ಪಲಿ ಎಸೆಯಿರಿ’ ಆಂದೋಲನಕ್ಕೆ ಕರೆ ಕೊಟ್ಟ ಬಿಜೆಪಿ ನಾಯಕ

    ರಾಹುಲ್‌ಗಾಂಧಿ ಪೋಸ್ಟರ್‌ಗೆ `ಚಪ್ಪಲಿ ಎಸೆಯಿರಿ’ ಆಂದೋಲನಕ್ಕೆ ಕರೆ ಕೊಟ್ಟ ಬಿಜೆಪಿ ನಾಯಕ

    ಮುಂಬೈ: ಕಾಂಗ್ರೆಸ್ ನಾಯಕ (Congress Leader) ರಾಹುಲ್‌ಗಾಂಧಿ (Rahul Gandhi) ಅವರ ಪೋಸ್ಟರ್‌ಗೆ ಬಿಜೆಪಿ  ಕಾರ್ಯಕರ್ತರು ಚಪ್ಪಲಿ ಎಸೆಯುವ ಮೂಲಕ ಪ್ರತಿಭಟನೆ (Protest) ನಡೆಸಿದ್ದಾರೆ.

    `ಸಾವರ್ಕರ್ (VD Savarkar) ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಇದರಿಂದಾಗಿಯೇ ಅವರು ಪಿಂಚಣಿ ಪಡೆದುಕೊಳ್ಳುತ್ತಿದ್ದರು’ ಎಂಬ ರಾಹುಲ್‌ಗಾಂಧಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ (BJP) ಕಾರ್ಯಕರ್ತರು ಪೋಸ್ಟರ್‌ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ರಾಮ್‌ಕದಮ್ ಪಕ್ಷದ ಇತರ ಕಾರ್ಯಕರ್ತರೊಂದಿಗೆ `ಚಪ್ಪಲಿ ಎಸೆಯಿರಿ’ ಆಂದೋಲನ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ದಲಿತರ ವಿರೋಧಿ, ದ್ವೇಷ ಹಬ್ಬಿಸುವ ಸರ್ಕಾರ: ರಾಹುಲ್ ಗಾಂಧಿ

    ರಾಹುಲ್‌ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಗಾರನೊಬ್ಬನನ್ನು ಅವಮಾನಿಸಿದ್ದಾರೆ. ಪದೇ ಪದೇ ಈ ರೀತಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ಸಹಿಸಲಾಗುವುದಿಲ್ಲ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – ಬೆಂಗಳೂರಿನ ಇಬ್ಬರು ಸೇರಿದಂತೆ 29 ಮಂದಿ ಸಾವು

    ಕರ್ನಾಟಕದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharath Jodo Yatra) ವೇಳೆ ರಾಹುಲ್ ಗಾಂಧಿ ಅವರು, `ಗಾಂಧಿ, ನೆಹರು ದೇಶಕ್ಕಾಗಿ ಹೋರಾಡಿದರು. ಆರ್‌ಎಸ್‌ಎಸ್ (RSS) ಹಾಗೂ ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದರು. ಬ್ರಿಟಿಷರಿಗೆ ಸಹಾಯ ಮಾಡಿದ್ದಕ್ಕಾಗಿಯೇ ಅವರಿಗೆ ಸ್ಟೈಫಂಡ್‌ ಸಿಕ್ಕಿತ್ತು ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದೆ – ಪ್ರಹ್ಲಾದ್ ಜೋಶಿ

    ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದೆ – ಪ್ರಹ್ಲಾದ್ ಜೋಶಿ

    ಧಾರವಾಡ: ಕಾಂಗ್ರೆಸ್ (Congress) ಪಕ್ಷ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕುಟುಕಿದ್ದಾರೆ.

    ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಂಪೂರ್ಣ ಸಾಯಬಾರದು ಅನ್ನೋ ಅಪೇಕ್ಷೆ ನಮಗೂ ಇದೆ. ಏಕೆಂದರೆ ವಿರೋಧ ಪಕ್ಷ ಇರಬೇಕು. ಆದರೆ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳೋಕೆ ಹೊರಟಿದ್ರೆ ದೇವರೂ ಕಾಪಾಡೋಕಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

    ರಾಹುಲ್ ಗಾಂಧಿ (Rahul Gandhi) ಯಾತ್ರೆಯಿಂದ ಬಿಜೆಪಿಗೆ (BJP) ನಡುಕ ಹುಟ್ಟಿದೆ ಎಂಬ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಎಲ್ಲೆಲ್ಲಿ ಚುನಾವಣೆ (Election) ಬರ್ತಾವೆ ಅಲ್ಲಲ್ಲಿ ರಾಹುಲ್ ಗಾಂಧಿಯನ್ನ ಕಳಿಸಿಕೊಡುವಂತೆ ಖರ್ಗೆ ಹಾಗೂ ಕಾಂಗ್ರೆಸ್ ಮುಖಂಡರಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ. ಏಕೆಂದರೆ ರಾಹುಲ್ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತೆ. ಅವರು ಓಡಾಡಿದಷ್ಟು ಬಿಜೆಪಿಗೇ ಲಾಭ ಎಂದು ಹೇಳಿದ್ದಾರೆ.

    ಖರ್ಗೆ ಎಐಸಿಸಿ ಅಧ್ಯಕ್ಷರಾದರೇ (AICC President) ಕಾಂಗ್ರೆಸ್‌ನಲ್ಲಿ ಬದಲಾವಣೆ ಆಗಬಹುದೆಂಬ ವಿಚಾರವಾಗಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿ ಆದಾಗ ಏನಾದ್ರು ಬದಲಾವಣೆ ಆಯ್ತಾ? ರಿಮೋಟ್ ಕಂಟ್ರೋಲ್ ಅಧ್ಯಕ್ಷರು, ರಿಮೋಟ್ ಕಂಟ್ರೋಲ್ ಪ್ರಧಾನಿಗಳೇ ಇದ್ದರು. ಅವರು ಏನು ಮಾಡಬೇಕಾದರೂ, ಮನೆಯಿಂದ ಒಂದು ಹೆಜ್ಜೆ ಹೊರಗಿಡಬೇಕಾದ್ರು ಗಾಂಧಿ ಕುಟುಂಬ ಕೇಳಿ ಮಾಡಬೇಕು. ಅದನ್ನು ಶಶಿ ತರೂರ್ ಅವರೇ ಹೇಳಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ದೇವಿಗೆ ಅರ್ಪಿಸಿದ್ದ ಸೇಬು ಹಣ್ಣನ್ನು ತಿಂದಿದ್ದಕ್ಕೆ 6ರ ಬಾಲಕನನ್ನು ಥಳಿಸಿ ಕೊಲೆ

    ಪಿಎಫ್‌ಐ ಮತ್ತು ಆರ್‌ಎಸ್‌ಎಸ್ ಒಂದೇ ನಾಣ್ಯದ ಎರಡು ಮುಖ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿದ ಜೋಶಿ, ನೆಹರೂ ಕಾಲದಿಂದಲೂ ಕಾಂಗ್ರೆಸ್‌ಗೆ ತುಷ್ಟೀಕರಣದ ರಾಜಕಾರಣ ರೂಢಿಯಾಗಿಬಿಟ್ಟಿದೆ. ಇಂದಿರಾ ಗಾಂಧಿ ಕಾಲದಲ್ಲಿ ಪರಾಕಾಷ್ಠೆಗೆ ತಲುಪಿ, ಸೋನಿಯಾ ಗಾಂಧಿ ಕಾಲದಲ್ಲಿ ತುಷ್ಟೀಕರಣ ಆಕಾಶ ದಾಟಿ ಮೇಲೆ ಹೋಗಿದೆ. ಪಿಎಫ್‌ಐ ಬ್ಯಾನ್ ಮಾಡಿರುವುದು ಅವರಿಗೆ ವಿರೋಧ ಮಾಡಲು ಸಾಧ್ಯವಾಗುತ್ತಿಲ್ಲ. ವಿರೋಧ ಮಾಡಿದರೆ ಜನ ಸರಿಯಾದ ಪಾಠ ಕಲಿಸುತ್ತಾರೆ. ಅದಕ್ಕಾಗಿ ಆರ್‌ಎಸ್‌ಎಸ್ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಿ.ಕೆ.ಹರಿಪ್ರಸಾದ್ ಅವರಿಗೆ ಒಂದು ಮಾತು ಹೇಳ್ತೀನಿ. ಮನಮೋಹನ್ ಸಿಂಗ್, ಇಂದಿರಾಗಾಂಧಿ ಹಾಗೂ ನೆಹರೂ ಸರ್ಕಾರದಲ್ಲಿ ಆರ್‌ಎಸ್‌ಎಸ್ ಅನ್ನು ತುಳಿಯುವ ಕೆಲಸ ಮಾಡಿದ್ದರು. ಅದು ಸಾಧ್ಯವಾಗಲಿಲ್ಲ. ಇಂದು ಆರ್‌ಎಸ್‌ಎಸ್ ಶತಮಾನಕ್ಕೆ ತಲುಪುತ್ತಿದೆ. ನಾವೆಲ್ಲ ಆರ್‌ಎಸ್‌ಎಸ್‌ನವರು, ದೇಶದ ಪ್ರಮುಖ ಹುದ್ದೆಯಲ್ಲಿರುವವರು ಆರ್‌ಎಸ್‌ಎಸ್ ನವರು, ನೀವು ಏನು ಹೇಳಿದರೂ ಉಪಯೋಗವಿಲ್ಲ. ತುಷ್ಟೀಕರಣ ಮಾಡಿದ್ದರಿಂದ ವಿರೋಧ ಪಕ್ಷದಲ್ಲಿ ಕೂರುವ ಸ್ಥಿತಿಯಲ್ಲೂ ಇಲ್ಲ ಎಂದು ಟೀಕಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ನಿಮಗೆ ಒಂದು ಸೀಟ್ ಕೂಡ ಬಂದಿಲ್ಲ. ಉತ್ತರಾಖಂಡದಲ್ಲಿ ನಿಮ್ಮ ಪಾರ್ಟಿ ಎಲ್ಲಿದೆ ಎಂದು ಹುಡುಕಾಡಬೇಕಿದೆ. ಈಶಾನ್ಯದಲ್ಲಿ ನಿಮ್ಮ ಒಬ್ಬ ಸಂಸದರೂ ಇಲ್ಲ. ಈ ಸ್ಥಿತಿಗೆ ತಲುಪಿದ ಮೇಲೆ ನೆಹರೂ ಕುಟುಂಬ ಪ್ರಯತ್ನ ಮಾಡಿದರು ಏನೂ ಸಾಧ್ಯವಾಗಿಲ್ಲ. ಈಗ 40-50 ಸಂಸದರು ಇದ್ದೀರಿ, ರಾಜ್ಯಸಭೆಯಲ್ಲಿ ಸ್ಥಾನಕ್ಕೆ ಬಂದಿದ್ದೀರಿ. ದೇಶದ 2 ರಾಜ್ಯ ಬಿಟ್ಟರೆ ಬೇರೆಲ್ಲೂ ಇಲ್ಲ. ಈ ಬಾರಿ ಚುನಾವಣೆಯಲ್ಲಿ ಅದನ್ನೂ ಕಳೆದುಕೊಳ್ಳುತ್ತೀರಿ. ರಾಹುಲ್ ಗಾಂಧಿ ಯಾತ್ರೆಯಿಂದ ರಾಜಸ್ಥಾನವನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಸ್ವಲ್ಪ ಸದ್ಬುದ್ಧಿ, ಸ್ವವಿವೇಚನೆ ಉಪಯೋಗ ಮಾಡಿಕೊಂಡರೆ ದೇವರು ಒಳ್ಳೆಯದು ಮಾಡುತ್ತಾನೆ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]