Tag: Bharat Rashtra Samithi

  • ಪ್ರಚಾರದ ವೇಳೆ ಬಿಆರ್‌ಎಸ್‌ ಸಂಸದನಿಗೆ ಚಾಕು ಇರಿತ

    ಪ್ರಚಾರದ ವೇಳೆ ಬಿಆರ್‌ಎಸ್‌ ಸಂಸದನಿಗೆ ಚಾಕು ಇರಿತ

    ಹೈದರಾಬಾದ್: ಪ್ರಚಾರದ ವೇಳೆ ಭಾರತ್ ರಾಷ್ಟ್ರ ಸಮಿತಿ (BRS) ಸಂಸದ ಕೋಠಾ ಪ್ರಭಾಕರ ರೆಡ್ಡಿಗೆ (Kotha Prabhakar Reddy) ಅಪರಿಚಿತನೊಬ್ಬ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

    ಸೋಮವಾರ ಸಿದ್ದಿಪೇಟೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಅಪರಿಚಿತನೊಬ್ಬ ಸಂಸದರ ಹೊಟ್ಟೆಗೆ ಇರಿದಿದ್ದಾರೆ ಎಂದು ಸಿದ್ದಿಪೇಟೆ ಪೊಲೀಸರು ತಿಳಿಸಿದ್ದಾರೆ. ದೌಲತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೆಡ್ಡಿ ಅವರು ದುಬ್ಬಾಕ್ ವಿಧಾನಸಭಾ ಕ್ಷೇತ್ರದ ಬಿಆರ್‌ಎಸ್ ಅಭ್ಯರ್ಥಿ. ಇದನ್ನೂ ಓದಿ: ಮುಂದಿನ 15 ದಿನ ನಿತ್ಯ ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಬಿಡಿ – ಕರ್ನಾಟಕಕ್ಕೆ CWRC ನಿರ್ದೇಶನ

    ಬಿಆರ್‌ಎಸ್ ಸಂಸದರನ್ನು ಗಜ್ವೇಲ್‌ಗೆ ಸ್ಥಳಾಂತರಿಸಲಾಗಿದ್ದು, ಈಗ ಸುರಕ್ಷಿತವಾಗಿದ್ದಾರೆ ಎಂದು ಸಿದ್ದಿಪೇಟೆ ಕಮಿಷನರ್ ಎನ್.ಶ್ವೇತಾ ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆಯನ್ನು ಆರಂಭಿಸಲಾಗಿದೆ ಎಂದು ಸಿದ್ದಿಪೇಟೆ ಕಮಿಷನರ್ ತಿಳಿಸಿದ್ದಾರೆ.

    ಚೂರಿ ಇರಿತ ಘಟನೆ ಕುರಿತು ಪ್ರತಿಕ್ರಿಯಿಸಿರುವ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್, ದೌಲತಾಬಾದ್ ಮಂಡಲದ ಸೂರಂಪಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಅವರ ಮೇಲೆ ನಡೆದ ಹಲ್ಲೆಯ ಬಗ್ಗೆ ತಿಳಿದು ಆಘಾತವಾಯಿತು. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ. ಅಂತಹ ಘಟನೆಗಳು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅಪಾಯವನ್ನುಂಟುಮಾಡುತ್ತವೆ ಎಂಬುದನ್ನು ಪ್ರತಿಬಿಂಬಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತದ ನೆಲದಲ್ಲಿ ಹಮಾಸ್‌ ಕಾರ್ಯಕ್ರಮ ಬೇಕಿತ್ತಾ? – ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ

    ಚುನಾವಣಾ ಅವಧಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಪ್ರಚಾರಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡುತ್ತೇನೆ ಎಂದು ಸೌಂದರರಾಜನ್ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ್ ರಾಷ್ಟ್ರ ಸಮಿತಿ – ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ KCR

    ಭಾರತ್ ರಾಷ್ಟ್ರ ಸಮಿತಿ – ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ KCR

    ಹೈದರಾಬಾದ್: 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ರಾಷ್ಟ್ರ ಸಮಿತಿ (TRS) ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrasekhar Rao) ಅವರು ಬುಧವಾರ ರಾಷ್ಟ್ರೀಯ ಪಕ್ಷವನ್ನು (national party) ಪ್ರಾರಂಭಿಸಿದ್ದಾರೆ. ಹೊಸದಾಗಿ ಪ್ರಾರಂಭವಾದ ರಾಷ್ಟ್ರೀಯ ಪಕ್ಷಕ್ಕೆ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) ಎಂದು ಹೆಸರಿಡಲಾಗಿದೆ.

    ಇಂದು ತೆಲಂಗಾಣ ಭವನದಲ್ಲಿ ನಡೆದ ಟಿಆರ್‌ಎಸ್ ಪಕ್ಷದ ಮುಖಂಡರ ಸಭೆಯಲ್ಲಿ ಈ ಘೋಷಣೆಯನ್ನು ಮಾಡಲಾಯಿತು. ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭಾರತ್ ರಾಷ್ಟ್ರ ಸಮಿತಿ (BRS) ಎಂದು ಮರುನಾಮಕರಣ ಮಾಡಲಾಗಿದೆ. ಟಿಆರ್‌ಎಸ್ ಅನ್ನು ಭಾರತ ರಾಷ್ಟ್ರ ಸಮಿತಿಯಾಗಿ ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತಿಸುವುದನ್ನು ಪಕ್ಷದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಚಂದ್ರಶೇಖರ್ ರಾವ್ ತಿಳಿಸಿದರು.

    ಟಿಆರ್‌ಎಸ್ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾದರೂ ಅದರ ಧ್ವಜ ಅದೇ ಈ ಹಿಂದಿನ ಕಾರಿನ ಚಿಹ್ನೆಯನ್ನೇ ಉಳಿಸಿಕೊಳ್ಳಲಿದೆ. ಆದರೆ ಭಾರತದ ನಕ್ಷೆಯ ರೂಪರೇಖೆಯನ್ನು ಹೊಂದಿರುತ್ತದೆ ಎಂದು ತೆಲಂಗಾಣ ಗೃಹ ಸಚಿವ ಮಹಮ್ಮದ್ ಅಲಿ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]