Tag: Bharat JodoYatra

  • ಮೊದಲ ಬಾರಿಗೆ ಲೈಫ್‌ ಪಾರ್ಟ್ನರ್‌ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ

    ಮೊದಲ ಬಾರಿಗೆ ಲೈಫ್‌ ಪಾರ್ಟ್ನರ್‌ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ

    ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಲೈಫ್‌ ಪಾರ್ಟ್ನರ್‌ (Life Partner) ಕುರಿತು ಕೇಳಿದ ಪ್ರಶ್ನೆಗೆ ರಾಹುಲ್‌ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

    ನನ್ನ ಬಾಳ ಸಂಗಾತಿಯಾಗುವವರಿಗೆ ತಾಯಿ ಸೋನಿಯಾ ಗಾಂಧಿ (Sonia Gandhi) ಮತ್ತು ಅಜ್ಜಿ ಇಂದಿರಾ ಗಾಂಧಿ (Indira Gandhi) ಇಬ್ಬರ ಗುಣಗಳು ಇರಬೇಕು. ಅಂತಹ ಸಂಗಾತಿಯೊಂದಿಗೆ ಜೀವನ ನಡೆಸಲು ನಾನು ಬಯಸುತ್ತೇನೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಧರಿಸಿದ್ದ ಖಾಸಿ ಉಡುಗೆ ಬಗ್ಗೆ ವ್ಯಂಗ್ಯ – ಕೀರ್ತಿ ಆಜಾದ್ ವಿರುದ್ಧ ಎಫ್‍ಐಆರ್

    ಇದೇ ವೇಳೆ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸ್ಮರಿಸಿರುವ ರಾಹುಲ್‌ ಗಾಂಧಿ, ಅವರು ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಎಂದು ತಿಳಿಸಿದ್ದಾರೆ.

    ಅನೇಕ ಹೆಸರುಗಳಿಂದ ತಮ್ಮನ್ನು ನಿಂದಿಸುವವರ ಕುರಿತು ಮಾತನಾಡಿದ ಕಾಂಗ್ರೆಸ್‌ ನಾಯಕ, ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಏನು ಹೇಳಿದರೂ ಪರವಾಗಿಲ್ಲ. ನಾನು ಯಾರನ್ನೂ ದ್ವೇಷಿಸುವುದಿಲ್ಲ. ನನ್ನನ್ನು ನಿಂದಿಸಿದರೂ, ಹೊಡೆದರೂ ನಾನು ಯಾರನ್ನೂ ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಸ್ಪತ್ರೆ ಸೇರಿರೋ ಪ್ರಧಾನಿ ತಾಯಿ – ನಿಮ್ಮೊಂದಿಗೆ ನಾನಿದ್ದೇನೆ ಎಂದು ಮೋದಿಗೆ ರಾಹುಲ್‌ ಗಾಂಧಿ ಅಭಯ

    ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ನೇತೃತ್ವದಲ್ಲಿ ʼಭಾರತ್‌ ಜೋಡೋ ಯಾತ್ರೆʼ (Bharat Jodo Yatra) ನಡೆಸುತ್ತಿದ್ದಾರೆ. ಪಾದಯಾತ್ರೆಯು ಸದ್ಯ ದೆಹಲಿ ತಲುಪಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈ ಪಾದಯಾತ್ರೆ ಕೈಗೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಡಿಕೆ ಬ್ರದರ್ಸ್‍ಗೆ ಸಂಕಷ್ಟ – ನಾಳೆ ವಿಚಾರಣೆಗೆ ಹಾಜರಾಗಿ ಎಂದ ED

    ಡಿಕೆ ಬ್ರದರ್ಸ್‍ಗೆ ಸಂಕಷ್ಟ – ನಾಳೆ ವಿಚಾರಣೆಗೆ ಹಾಜರಾಗಿ ಎಂದ ED

    ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ (National Herald Case) ಸಂಬಂಧಿಸಿದಂತೆ ವಿಚಾರಣೆಗೆ ನಾಳೆ ಅ.7ರಂದು ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ D.K Shivakumar ಮತ್ತು ಸಂಸದ ಡಿ.ಕೆ ಸುರೇಶ್‍ಗೆ (D.K Suresh)  ಜಾರಿ ನಿರ್ದೇಶನಾಲಯ (ED) ನೋಟಿಸ್ ನೀಡಿದೆ.

    ಡಿ.ಕೆ ಶಿವಕುಮಾರ್‌ಗೆ ಇಡಿಯಿಂದ ಸಮನ್ಸ್ ಬಂದಿದ್ದು, ನಾಳೆ ದೆಹಲಿಗೆ ವಿಚಾರಣೆಗೆ ಬರಲೇಬೇಕು ಎಂದು ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ನಡುವೆ ನಾಳೆ ವಿಚಾರಣೆಗೆ ಹಾಜರಾಗದಿರಲು ಡಿ.ಕೆ.ಶಿವಕುಮಾರ್ ಹಾಗೂ ಡಿಕೆ.ಸುರೇಶ್ ನಿರ್ಧರಿಸಿದ್ದಾರೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ (Rahul Gandhi)  ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ಕರ್ನಾಟಕ್ಕೆ ತಲುಪಿ ಮುನ್ನಡೆಯುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಲಿರುವ ಕಾರಣದಿಂದಾಗಿ ವಿಚಾರಣೆಗೆ ಬೇರೆ ದಿನಾಂಕ ನಿಗದಿ ಮಾಡುವಂತೆ ಡಿಕೆ ಬ್ರದರ್ಸ್ ಇಡಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್

    ನಾಳೆ ಪಾದಯಾತ್ರೆ ಆದಿಚುಂಚನಗಿರಿ ಸಮೀಪ ತೆರಳಲಿದೆ ಮಠಕ್ಕೆ ರಾಹುಲ್ ಗಾಂಧಿ ಭೇಟಿ ಇದೆ. ಆ ಸಂದರ್ಭದಲ್ಲಿ ನಾವು ಇರಲೇಬೇಕಾಗುತ್ತದೆ ಎಂದು ಇಡಿಗೆ ಇಮೇಲ್‌ (Email) ಮೂಲಕ ಡಿಕೆ ಬ್ರದರ್ಸ್ ಮನವಿ ಮಾಡಿಕೊಂಡಿದ್ದಾರೆ. ಡಿ.ಕೆ.ಸಹೋದರರ ಮನವಿಗೆ ಇಡಿಯಿಂದ ಯಾವುದೇ ಸಮರ್ಪಕ ಪ್ರತಿಕ್ರಿಯೆ ಬಂದಿಲ್ಲ. ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ಸಂದೇಶವು ಬಂದಿಲ್ಲ. ಆದ್ದರಿಂದ ಕಾನೂನು ತಜ್ಞರ ಸಲಹೆಯಂತೆ ವಿಚಾರಣೆಗೆ ಹಾಜರಾಗದಿರಲು ಡಿಕೆ ಬ್ರದರ್ಸ್ ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಕೋಳಿ ಕೇಳಿ ಮಸಾಲೆ ಅರೆಯಲ್ಲ – ಜನಸಂಖ್ಯಾ ನೀತಿ ವಿರೋಧಿಸಿದ ಅಸಾವುದ್ದೀನ್ ಓವೈಸಿಗೆ ಸಿ.ಟಿ.ರವಿ ತಿರುಗೇಟು

    ಈ ಮೊದಲು ಒಂದು ಸಮನ್ಸ್ ಬಂದಿತ್ತು. ಆಗ ಇಮೇಲ್‌ ಮೂಲಕ, ಕಾಲಾವಕಾಶ ಕೊಡಿ ಎಂದು ಡಿಕೆಶಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ಡಿಕೆಶಿ ಮನವಿಗೆ ಸ್ಪಂದಿಸದ ಇಡಿ ಅಧಿಕಾರಿಗಳು ಇಂದು ಮತ್ತೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಪಾದಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದೇನೆ. ನಾಳೆ ವಿಚಾರಣೆಗೆ ಬರೋಕ್ಕೆ ಆಗಲ್ಲ ಅಂತ ಕೇಳಿಕೊಂಡಿದ್ದೆ. ಇಡಿಯವರು ಒಪ್ಪಿಕೊಳ್ಳದೆ ನಾಳೆ ಬರಲೇಬೇಕೆಂದು ಸಮನ್ಸ್ ಕೊಟ್ಟಿದ್ದಾರೆ. ಈ ಕುರಿತು ಈಗ ನಮ್ಮ ನಾಯಕರ ಜೊತೆ ಸಭೆ ನಡೆಸುತ್ತೇನೆ. ನಾಯಕರು ಹೋಗು ಅಂದ್ರೆ ಹೋಗುತ್ತೇನೆ ಎಂದರು.

    Live Tv
    [brid partner=56869869 player=32851 video=960834 autoplay=true]