Tag: Bharat Jodo

  • ಹೈಕಮಾಂಡ್ ಟಿಕೆಟ್ ಫೈನಲ್ ಮಾಡುತ್ತೆ- ಡಿಕೆ ವಿರುದ್ಧ ಮುಗಿಬಿದ್ದ ಸಿದ್ದು ಬಣ

    ಹೈಕಮಾಂಡ್ ಟಿಕೆಟ್ ಫೈನಲ್ ಮಾಡುತ್ತೆ- ಡಿಕೆ ವಿರುದ್ಧ ಮುಗಿಬಿದ್ದ ಸಿದ್ದು ಬಣ

    ಬೆಂಗಳೂರು: ಚುನಾವಣಾ ವರ್ಷದಲ್ಲಿ(Election Year) ರಾಜ್ಯ ಕಾಂಗ್ರೆಸ್‍ನ(Congress) ಪರಿಸ್ಥಿತಿ ಪಂಜಾಬ್ ಕಾಂಗ್ರೆಸ್‍ನ ಸ್ಥಿತಿಯಂತಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಬೇಗುದಿ ಹೆಚ್ಚಾಗುತ್ತಿದೆ. ಸಿದ್ದರಾಮೋತ್ಸವದ ವೇದಿಕೆಯಲ್ಲಿ ಸಿದ್ದು-ಡಿಕೆ ದೋಸ್ತಿ ತೋರಿಸಿದ್ದರು. ಈಗ ರಾಹುಲ್ ಗಾಂಧಿಯ(Rahul Gandhi) ಭಾರತ್ ಜೋಡೋ(Bharat Jodo) ಪಾದಯಾತ್ರೆ ವಿಚಾರದಲ್ಲಿ ದಂಗಲ್‍ಗೆ ಕಾರಣವಾಗುತ್ತಿದೆ.

    ಕಾಂಗ್ರೆಸ್‍ನಲ್ಲಿ ನಾನೇ ಬಾಸ್ ಎನ್ನುವ ರೀತಿ ವರ್ತಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ವಿರುದ್ಧ ಸಿದ್ದರಾಮಯ್ಯ(Siddaramaiah) ಬಣ ಮುಗಿಬಿದ್ದಿದೆ. ಯಾರೇ ಒಬ್ಬರು ನನ್ನಿಂದ ಟಿಕೆಟ್ ಘೋಷಣೆ ಅಂತ ಹೇಳಿದರೆ ಅದು ಕಾಂಗ್ರೆಸ್‍ನಲ್ಲಿ ಸಾಧ್ಯವಿಲ್ಲ. ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ ಎಂದು ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಸೈಕಲ್‍ಗೆ ಬೈಕ್ ಡಿಕ್ಕಿ- ಪಲ್ಸರ್ ಸವಾರ ಸ್ಥಳದಲ್ಲೇ ಸಾವು

    ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು. ಸಿಎಂ ಯಾರು ಆಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಸಮನ್ವಯತೆಯಿಂದ ಓಡಾಡಬೇಕು ಎಂದು ಡಿಕೆಶಿಗೆ ಸಲಹೆಯನ್ನು ಕೊಟ್ಟಿದ್ದಾರೆ.

    ಡಿಕೆಶಿ ಹೇಳಿಕೆಯನ್ನು ದೇಶಪಾಂಡೆ ಸಮರ್ಥಿಸಿಕೊಂಡಿದ್ದಾರೆ. ಡಿಕೆಶಿ ಒನ್ ಮ್ಯಾನ್ ಶೋ ತರಹ ಏನು ಮಾಡುತ್ತಿಲ್ಲ. ಉತ್ತಮವಾಗಿ ಸಂಘಟನೆ ಮಾಡುತ್ತಿದ್ದಾರೆ. ನಾನು ದೂರ ಇದೆ ಊರು. ಹೆಚ್ಚು ಜನ ಆಗಲ್ಲ ಅಂದಿದ್ದೆ. ಅದಕ್ಕೆ ಅವರು ಒಪ್ಪಿದ್ದರು. ಯಾವುದೇ ತಪ್ಪು ಉದ್ದೇಶದಿಂದ ಅವರು ಹೇಳಿಲ್ಲ. ಏನೇ ಭಿನ್ನಾಭಿಪ್ರಾಯ ಇದ್ದರೂ ಸರಿ ಮಾಡಿಕೊಂಡು ಒಟ್ಟಾಗಿ ಹೋಗಬೇಕು. ಟಿಕೆಟ್ ಫೈನಲ್ ಮಾಡೋದು ಹೈಕಮಾಂಡ್ ಅಂದಿದ್ದಾರೆ.

    ಸಿದ್ದರಾಮೋತ್ಸವ ಹೊಣೆ ಹೊತ್ತಿದ್ದ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿ, ಅಧ್ಯಕ್ಷರಾಗಿ ಡಿಕೆಶಿ ಹೇಳಿಕೆ ಕೊಟ್ಟಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಭಾರತ್ ಜೋಡೋಗಾಗಿ ನೇಮಿಸಿರುವ 18 ಸಮಿತಿಗಳಲ್ಲಿ ಸಿದ್ದರಾಮಯ್ಯ ಬಣಕ್ಕೆ ಮಣೆ ಹಾಕಲಾಗಿದೆ. ಆದರೆ ಆರ್‌ವಿ ದೇಶಪಾಂಡೆಗೆ ಕೊಕ್ ಕೊಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದು, ಡಿಕೆಶಿ ಮಧ್ಯೆ ಮತ್ತೆ ಪವರ್ ವಾರ್ – ಅತ್ತ ಭಾರತ್ ಜೋಡೋ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಜೋಡೋ ಸ್ಥಿತಿ!

    ಸಿದ್ದು, ಡಿಕೆಶಿ ಮಧ್ಯೆ ಮತ್ತೆ ಪವರ್ ವಾರ್ – ಅತ್ತ ಭಾರತ್ ಜೋಡೋ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಜೋಡೋ ಸ್ಥಿತಿ!

    ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದ ಶಿಸ್ತು ಕಾಪಾಡಬೇಕಿದ್ದ ಅಧ್ಯಕ್ಷರೆ ಪಕ್ಷದ ಶಿಸ್ತು ತಪ್ಪಿದ್ರಾ? ಬೇರೆಯವರಿಗೆ ಶಿಸ್ತಿನ ಪಾಠ ಮಾಡಬೇಕಿದ್ದ ಪಕ್ಷದ ಅಧ್ಯಕ್ಷರಿಂದ ಅಶಿಸ್ತು ಪ್ರದರ್ಶನವಾಯ್ತಾ? ಅಧ್ಯಕ್ಷ ಸ್ಥಾನದ ಪವರ್ ಬಳಸಿ ಬೇರೆಯವರರಿಗೆ ಶಿಸ್ತಿನ ಪಾಠ ಮಾಡೋಕೆ ಮುಂದಾದ್ರಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೀಗೆ ಹಲವು ಅನುಮಾನಗಳು ನಿನ್ನೆ ಭಾರತ್ ಜೋಡೋ ಸಭೆಯಲ್ಲಿ ಡಿಕೆಶಿ ಮಾತಿನ ಬಳಿಕ ಕೇಳಿ ಬರುತ್ತಿದೆ. ಡಿ.ಕೆ.ಶಿವಕುಮಾರ್ ನಡೆಗೆ ಕೈ ಪಾಳಯದಲ್ಲೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.

    ಹೌದು ನಿನ್ನೆ ಬೆಂಗಳೂರಿನ ಅಂಬೇಡ್ಕರ್ ಭಾರತ್ ಜೋಡೋ (Bharat Jodo) ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಕ್ಷದ ಒಳಗಿನ ತಮ್ಮ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದಾರೆ. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಪರೋಕ್ಷವಾಗಿ ಸವಾಲು ಹಾಕಿದ್ದಾರೆ. ನೇರ ನೇರವಾಗಿ ಪಕ್ಷದ ಕೆಲವು ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಶಿಸ್ತು ಪಾಲನೆಗೆ ಸವಾಲು ಹಾಕುವಂತೆ ಕೆಲವು ಶಾಸಕರ ಹಾಗೂ ನಾಯಕರ ನಡೆ ಪ್ರಶ್ನಿಸಿದ್ದಾರೆ. ಪಾರ್ಟಿ ಪ್ರೆಸಿಡೆಂಟ್ ನಾನೇ. ಹಾಗಾಗಿ ರಾಜ್ಯ ಕಾಂಗ್ರೆಸ್‍ನಲ್ಲಿ ಎಲ್ಲವೂ ನನ್ನದೆ ಎಂಬಂತೆ ನಿನ್ನೆ ಮಾತನಾಡಿದ್ದಾರೆ. ಕೆಲವರು ನನಗೆ ಸಹಕರಿಸುತ್ತಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯರನ್ನು ಕೆಣಕಿದ್ದಾರೆ. ಪದೇ ಪದೇ ಹೈಕಮಾಂಡ್, ಪಕ್ಷ ನಿಷ್ಠೆಯ ಕುರಿತು ಮಾತನಾಡಿ ಸಿದ್ದರಾಮೋತ್ಸವ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಪರೋಕ್ಷವಾಗಿ ಟೀಕಿಸಿ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ಇದನ್ನೆಲ್ಲಾ ನೋಡಿದರೆ ಎಐಸಿಸಿಯ ಭಾರತ್ ಜೋಡೋಗಿಂತ ರಾಜ್ಯ ಕಾಂಗ್ರೆಸ್‍ನಲ್ಲಿ ಕಾಂಗ್ರೆಸ್ ಜೋಡೋ ಹೆಚ್ಚು ಅಗತ್ಯ ಎಂಬಂತಿದೆ. ಇದನ್ನೂ ಓದಿ: ಕಾಣೆಯಾಗಿದ್ದ ಮಹಿಳಾ ಪೊಲೀಸ್ ಪೇದೆ ಶವವಾಗಿ ಪತ್ತೆ

    ರಾಜ್ಯ ಕಾಂಗ್ರೆಸ್‍ನಲ್ಲಿ ಹಳೆ ಗಲಾಟೆ ಮತ್ತೆ ಜೋರಾಗುತ್ತಾ? ಕಾಂಗ್ರೆಸ್ ಮುಖ್ಯಮಂತ್ರಿ ಕುರ್ಚಿ ಕದನ ಮತ್ತೆ ಜೀವ ಪಡೆಯುತ್ತಾ ಎಂಬ ಪ್ರಶ್ನೆ ಎದ್ದಿದ್ದು, ಭಾರತ್ ಜೋಡೋ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‍ನಲ್ಲಿ ಕಾಂಗ್ರೆಸ್ ಜೋಡೋ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‍ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಅಸಮಾಧಾನಕ್ಕೆ ಡಿಕೆಶಿ ತುಪ್ಪ ಸುರಿದಿದ್ದು, ಇದು ಮುಂದಿನ ದಿನಗಳಲ್ಲಿ ಹೇಗೆ ಪರಿಣಾಮ ಬೀರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರೊಂದಿಗೆ ಮತ್ತೆ ರಾಜ್ಯ ಕಾಂಗ್ರೆಸ್‍ನಲ್ಲಿ ಶಿಸ್ತು ಹಳಿ ತಪ್ಪುವ ಸಾಧ್ಯತೆ ಇದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಲ್ಲಿ ವಿವಾದಾತ್ಮಕ ಪೋಸ್ಟ್ – ಆರೋಪಿಗಳ ವಿರುದ್ಧ ದೂರು

    Live Tv
    [brid partner=56869869 player=32851 video=960834 autoplay=true]

  • 100 ಕಿಲೋಮೀಟರ್ ಕ್ರಮಿಸಿದ ಭಾರತ್ ಜೋಡೋ ಯಾತ್ರೆ – 7ನೇ ದಿನ ಮುಂದುವರಿದ ರಾಗಾ ಪಾದಯಾತ್ರೆ

    100 ಕಿಲೋಮೀಟರ್ ಕ್ರಮಿಸಿದ ಭಾರತ್ ಜೋಡೋ ಯಾತ್ರೆ – 7ನೇ ದಿನ ಮುಂದುವರಿದ ರಾಗಾ ಪಾದಯಾತ್ರೆ

    ನವದೆಹಲಿ: ಕಾಂಗ್ರೆಸ್‍ನ ಬಹು ನಿರೀಕ್ಷಿತ ಭಾರತ್ ಜೋಡೋ ಯಾತ್ರೆಯ ಏಳನೇ ದಿನದ ಪಾದಯಾತ್ರೆ ಆರಂಭವಾಗಿದ್ದು, ಇಂದು 100 ಕಿಲೋ ಮೀಟರ್ ಹಾದಿಯನ್ನು ಯಾತ್ರೆ ಕ್ರಮಿಸಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಹೊರಟಿರುವ ಯಾತ್ರೆ ಕೇರಳದ ಕಣಿಯಾಪುರಂ ತಲುಪಿದೆ.

    ಇಂದು ಕಣಿಯಾಪುರಂನಿಂದ ಪಾದಯಾತ್ರೆ ಹೊರಟಿದ್ದು, ಮುಂದಿನ 17 ದಿನಗಳ ಕಾಲ ಕೇರಳದ ಬೇರೆ ಬೇರೆ ನಗರಗಳ ಮೂಲಕ ಯಾತ್ರೆ ಸಾಗಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತದ ಕನಸು ಭಗ್ನಗೊಂಡಿದೆ, ಚದುರಿಹೋಗಿಲ್ಲ. ಕನಸನ್ನು ನನಸಾಗಿಸಲು ನಾವು ಭಾರತವನ್ನು ಸಂಪರ್ಕಿಸುತ್ತಿದ್ದೇವೆ. 100 ಕಿಮೀ ಮುಗಿದಿದೆ, ನಾವು ಈಗಷ್ಟೇ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಇಲಾಖೆಯಲ್ಲಿ ಕಳ್ಳ ಅಧಿಕಾರಿಗಳಿದ್ದಾರೆ; ಅವರಿಗೆ ನಾನೇ ಸರ್ದಾರ – ಬಿಹಾರ ಸಚಿವ

    ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಲೋಮೀಟರ್ ಮೆರವಣಿಗೆಯು 150 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯಾತ್ರೆ 12 ರಾಜ್ಯಗಳಲ್ಲಿ ಸಂಚರಿಸಲಿದೆ. ಸದ್ಯ ಕೇರಳದಲ್ಲಿರುವ ಯಾತ್ರೆ, ಮುಂದಿನ 18 ದಿನಗಳ ಕಾಲ ಸಂಚರಿಸಲಿದ್ದು, ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಇದನ್ನೂ ಓದಿ: ಎರಡನೇ ಬಾರಿಗೆ ಅಟಾರ್ನಿ ಜನರಲ್ ಆಗಿ ಮುಕುಲ್ ರೊಹಟಗಿ ಆಯ್ಕೆ

    ನಿನ್ನೆ ಭಾರತ್ ಜೋಡೋ ಯಾತ್ರೆ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಆರ್‌ಎಸ್‍ಎಸ್ ಪ್ರತಿಬಿಂಬಿಸುವ ಖಾಕಿ ಚಡ್ಡಿಗೆ ಬೆಂಕಿ ಹತ್ತಿರುವ ಫೋಟೋ ಪೋಸ್ಟ್ ಮಾಡಿತ್ತು. ಈ ಪೋಸ್ಟ್‌ಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ರಿ ಟ್ವೀಟ್ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯಾ ಕಾಂಗ್ರೆಸ್ ಈ ಹಿಂದೆ ಹೊತ್ತಿಸಿದ ಬೆಂಕಿಯು ದೇಶದಲ್ಲಿ ಅವರ ರಾಜಕೀಯ ಭವಿಷ್ಯವನ್ನು ಸುಟ್ಟುಹಾಕಿದೆ ಎಂದು ವ್ಯಂಗ್ಯವಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಾರತ್‌ ಜೋಡೋ ಯಾತ್ರೆಯನ್ನು ಪಾಕಿಸ್ತಾನದಿಂದ ಆರಂಭಿಸಬೇಕಿತ್ತು: ಹಿಮಾಂತ ಬಿಸ್ವಾ ಶರ್ಮಾ

    ಭಾರತ್‌ ಜೋಡೋ ಯಾತ್ರೆಯನ್ನು ಪಾಕಿಸ್ತಾನದಿಂದ ಆರಂಭಿಸಬೇಕಿತ್ತು: ಹಿಮಾಂತ ಬಿಸ್ವಾ ಶರ್ಮಾ

    ದಿಸ್ಪುರ್‌: ಭಾರತ್‌ ಜೋಡೋ ಯಾತ್ರೆಯನ್ನು(Bharat Jodo Yatra )ಕಾಂಗ್ರೆಸ್‌ ಪಾಕಿಸ್ತಾನದಿಂದ ಆರಂಭಿಸಬೇಕಿತ್ತು ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ(Himanta Biswa Sarma) ಹೇಳಿದ್ದಾರೆ.

    ಕಾಂಗ್ರೆಸ್‌(Congress) ಭಾರತ್‌ ಜೋಡೋ ಯಾತ್ರೆಯನ್ನು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1947ರಲ್ಲಿ ಕಾಂಗ್ರೆಸ್‌ ಅವಧಿಯಲ್ಲಿ ಭಾರತ ವಿಭಜನೆಯಾಯಿತು. ಹೀಗಾಗಿ ಭಾರತದಲ್ಲಿ ಈ ಅಭಿಯಾನವನ್ನು ಆರಂಭಿಸುವ ಬದಲು ರಾಹುಲ್‌ ಗಾಂಧಿ ಪಾಕಿಸ್ತಾನದಲ್ಲಿ ಆರಂಭಿಸಿದರೆ ಉತ್ತಮವಾಗಿರುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಹಿಂಬದಿ ಸವಾರರಿಗೂ ಸೀಟ್‌ಬೆಲ್ಟ್ ಕಡ್ಡಾಯ, ತಪ್ಪಿದರೆ ದಂಡ

    ಭಾರತ ಈಗ ಒಗ್ಗಟ್ಟಾಗಿದೆ. ಭಾರತದಲ್ಲಿ ಈ ಯಾತ್ರೆಯನ್ನು ಕೈಗೊಂಡರೆ ಏನು ಪ್ರಯೋಜನವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    150 ದಿನಗಳ ಕಾಲ ನಡೆಯಲಿರುವ ಭಾರತ್‌ ಜೋಡೋ ಯಾತ್ರೆಗೆ ಇಂದು ಚಾಲನೆ ಸಿಗಲಿದೆ. ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ 3,570 ಕಿ.ಮೀ ಪಾದಯಾತ್ರೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]