Tag: bharat jodo yatre

  • ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯುತ್ತಾ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ?

    ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯುತ್ತಾ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ?

    ಬೆಂಗಳೂರು: ದೇಶಾದ್ಯಂತ ಲೋಕಸಭಾ ಚುನಾವಣೆಯ (Loksabha Elections 2024) ಕಾವು ರಂಗೇರಿದೆ. ಶುಕ್ರವಾರ ಮೊದಲ ಹಂತದ ಚುನಾವಣೆ ನಡೆಯಲಿದ್ದು, 14 ಕ್ಷೇತ್ರದಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಈ ನಡುವೆ ಕಾಂಗ್ರೆಸ್ ದೇಶದ ಜನರ ಸಮಸ್ಯೆಗಳನ್ನು ಆಲಿಸಲೆಂದು ವಿಭಿನ್ನವಾಗಿ ಯಾತ್ರೆಗಳನ್ನು ಕೈಗೊಂಡಿತ್ತು. ಈ ಯಾತ್ರೆಯಿಂದ ಕರ್ನಾಟಕದಲ್ಲಿ ಯಶಸ್ಸು ಸಿಕ್ಕಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಈ ಯಾತ್ರೆಗಳು ಕೈ ಹಿಡಿಯುತ್ತಾ ಎಂಬುದರ ಬಗ್ಗೆ ನೋಡೋಣ..

    ಹೌದು. ಕಳೆದ 10 ವರ್ಷಗಳಿಂದ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಹವಾ ಇದೆ. ಹೀಗಾಗಿ ಹೇಗಾದರೂ ಮಾಡಿ ಮೋದಿಯನ್ನು ಹವಾವನ್ನು ಕಡಿಮೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ (Congress) ಪಣತೊಟ್ಟಿದೆ. ಅದಕ್ಕಾಗಿ ಸಾಕಷ್ಟು ಬಾರಿ ಮೋದಿ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತಿದೆ. ಆದರೆ ಕಾಂಗ್ರೆಸ್‍ನ ಪ್ರಯತ್ನಗಳು ಕೈಗೂಡಲಿಲ್ಲ. ಬಿಜೆಪಿ ವೈಫಲ್ಯಗಳ ಬಗ್ಗೆ ಹೇಳಿಕೊಂಡರೂ ಯಾವುದೇ ಫಲಪ್ರದವಾಗಲಿಲ್ಲ. ದೇಶದಲ್ಲಿ ಮೋದಿ ಅಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಮೊರೆ ಹೋಯಿತು.

    ಅಂತೆಯೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ಪಾದಯಾತ್ರೆ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಮಾಡಿತ್ತು. ಇದು ಕಾಂಗ್ರೆಸ್ ಪಕ್ಷದ ಇಮೇಜ್ ವೃದ್ಧಿಗೆ ಸಹಕಾರಿಯಾಗಿದೆ. ಆದರೆ ಇದು ಮತಗಳಾಗಿ ಪರಿವರ್ತನೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

    ಪಾದಯಾತ್ರೆಯಿಂದಾಗಿ ಎಲ್ಲೋ ಮೂಲೆಯಲ್ಲಿ ಬೆಚ್ಚಗೆ ಮಲಗಿದ್ದ ಕಾರ್ಯಕರ್ತರು ಮೈಕೊಡವಿ ನಿಂತಿದ್ದು ಸಹಜ. ಯಾಕೆಂದರೆ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ (Rahul Gandhi) ಜೊತೆ ಪಕ್ಷದ ಇತರ ನಾಯಕರು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜೊತೆಗೆ ಯಾತ್ರೆಯ ವೇಳೆ ಅಲ್ಲಲ್ಲಿ ಸಂವಾದ, ಚರ್ಚೆಗಳ ಮೂಲಕ ಜನಸಾಮಾನ್ಯರ ಕಷ್ಟಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಕಾಂಗ್ರೆಸ್‍ನಿಂದ ಇದೊಂದು ಹೊಸ ಪ್ರಯತ್ನವೇ ಸರಿ. ಇದನ್ನೂ ಓದಿ: ಲೋಸಮರದ ಹೊತ್ತಲ್ಲೇ ‘ಕೈ’ಗೆ ಶಾಕ್- ಬಿಜೆಪಿ ಸೇರಿದ ಡಾ.ಶುಶ್ರುತ್ ಗೌಡ

    ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatre) ಕರ್ನಾಟಕ್ಕೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿದೆ ಎಂದು ತಪ್ಪಾಗಲಾರದು. ಕೇರಳದಿಂದ ಚಾಮರಾಜನಗರ, ಮೈಸೂರು ಮಂಡ್ಯ, ತುಮಕೂರು ಚಿತ್ರದುರ್ಗ ಹಾಗೂ ಬಳ್ಳಾರಿ ಮೂಲಕ ಈ ಪಾದಯಾತ್ರೆ ಹಾದುಹೋಗಿದೆ. ಈ ಯಾತ್ರೆ ಎಲ್ಲಾ ಜಿಲ್ಲೆಗಳಿಗೆ ಹೋಗದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಟ್ಟುಗೂಡಿಸುವ ಮೂಲಕ ಹುರಿದುಂಬಿಸುವ ಕೆಲಸ ಮಾಡಿತ್ತು. ಅಲ್ಲದೇ ಮಂಡ್ಯದ ಪಾಂಡವಪುರದಲ್ಲಿ ಸ್ವತಃ ಸೋನಿಯಾ ಗಾಂಧಿಯವರೇ ಬಂದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಜನರನ್ನು ಮತ್ತಷ್ಟು ಹುರಿದುಂಬಿಸಿದರು. ಒಟ್ಟಿನಲ್ಲಿ ಯಾತ್ರೆಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡ ಪರಿಣಾಮ 2023ರ ವಿಧಾನಸಭಾ ಚುನಾವಣೆಯಲ್ಲಿ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು.

    ದ್ವೇಷದ ಅಂಗಡಿಯಲ್ಲಿ ಪ್ರೀತಿ ಹಂಚುವ ವ್ಯಾಖ್ಯಾನ, ಇದು ಸರ್ವಜನಾಂಗದ ಶಾಂತಿಯ ತೋಟ ಎಂದು ಬಿಜೆಪಿಯ ವಿರುದ್ಧ ಭ್ರಷ್ಟಾಚಾರ, ಕೋಮುದ್ರೋಹಿ ವಿಚಾರಗಳನ್ನು ಬಳಸಿಕೊಂಡರು. ಒಟ್ಟಿನಲ್ಲಿ 2023ರಲ್ಲಿ ಪಕ್ಷದ ಸಂಘಟನೆಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದ್ದು ನಿಜ. ಕರ್ನಾಟಕ, ತೆಲಂಗಾಣ ವಿಧಾನಸಭಾ ಚುನಾವಣೆಗೆ ಕೂಡ ಸ್ವಲ್ಪ ಮಟ್ಟಿಗೆ ಲಾಭವಾಯಿತು.

    ಉತ್ತರ ಭಾರರತದಲ್ಲಿಯೂ ಕಾರ್ಯಕರ್ತರನ್ನು ಮರುಸಂಘಟಿಸಲು ಈ ಯಾತ್ರೆ ಸಹಕಾರಿಯಾಗಿದೆ ಅಂತಾನೇ ಹೇಳಬಹುದು. ಆದರೆ ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಕೈಹಿಡಿದಿಲ್ಲ. ಇಡೀ ದೇಶದ ಮತದಾರರ ಮೇಲೆ ಪರಿಣಾಮ ಬೀರಿ ಅವುಗಳನ್ನು ಮತಗಳನ್ನಾಗಿ ಪರಿವರ್ತಿಸುವವಲ್ಲಿ ಭಾರತ್ ಜೋಡ್ ಯಾತ್ರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಮಲಗಿದ್ದ ಬಹುತೇಕ ಕಾರ್ಯಕರ್ತರು ಎದ್ದು ಬೀದಿಗೆ ಬರುವಂತೆ ಮಾಡಿದ್ದು ಮಾತ್ರ ಇತಿಹಾಸ. ಇದು ಕಾಂಗ್ರೆಸ್‍ನ ಹೊಸ ಮೈಲಿಗಲ್ಲು, ಈ ಮೂಲಕ ಪಕ್ಷ ಇತಿಹಾಸ ನಿರ್ಮಿಸಿರುವುದು ಸುಳ್ಳಲ್ಲ. ಒಟ್ಟಿನಲ್ಲಿ ರಾಹುಲ್ ಗಾಂಧಿ ವರ್ಚಸ್ಸನ್ನು ಈ ಯಾತ್ರೆ ಹೆಚ್ಚಿಸಿದೆ ಎಂಬ ವಿಶ್ಲೇಷಣೆ ಬಂದಿದೆ.

    ಎರಡೇ ಪಾದಯಾತ್ರೆ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ (Bharat Jodo Nyay Yatre) ಈಶಾನ್ಯ ರಾಜ್ಯಗಳಲ್ಲಿ ಪ್ರತಿರೋಧಗಳು ವ್ಯಕ್ತವಾಯಿತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಹಕಾರ ದೊರೆಯದೆ ಪಕ್ಷಕ್ಕೆ ಸ್ವಲ್ಪ ಇರಿಸುಮುರುಸಾಯಿತು. ಆದರೆ ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ನಿರಿಕ್ಷಿತ ಬೆಂಬಲ ದೊರೆಯದಿದ್ದರೂ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬೆಂಬಲವಾಗಿ ನಿಂತಿದ್ದು, ಸ್ವಲ್ಪ ನಿರಾಳವಾಗುವಂತೆ ಮಾಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಸಿಕ್ಕಿದಂತಾಗಿದೆ.

    ಬಿಹಾರದಲ್ಲಿ ಆರ್ ಜೆಡಿ, ಯುಪಿಯಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ (Akhilesh Yadav) ಬೆಂಬಲ ಸ್ವಲ್ಪ ಮಟ್ಟಿಗೆ ಸಹಕಾರಿಯಾಯಿತು. ಆದರೆ ಗುಜರಾತ್ ಸೇರಿದಂತೆ ಹಲವೆಡೆ ನಿರೀಕ್ಷಿತ ಬೆಂಬಲ ಪಡೆಯುವಲ್ಲಿ ವಿಫಲವಾಯಿತು. ಹಲವಾರು ವಿಚಾರಗಳು ನ್ಯಾಯಯಾತ್ರೆಯ ಮೂಲಕ ಬಿಂಬಿಸಲು ಪ್ರಯತ್ನಿಸಿದರೂ ನಿರೀಕ್ಷಿತ ಜನಬೆಂಬಲ ಪಡೆಯುವಲ್ಲಿ ಕಾಂಗ್ರೆಸ್‍ಗೆ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಲಿಲ್ಲ.

    ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಪ್ರಣಾಳಿಕೆ ರಚಿಸಲು ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯ ಅನುಭವಗಳು ನೆರವಾಗಿವೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಪಾದಯಾತ್ರೆಯ ವೇಳೆ ಜನರ ಕೊಟ್ಟ ಸಲಹೆಗಳನ್ನೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಕೈ ಹಿಡಿದಿರುವ ಕಾಂಗ್ರೆಸ್ ಯಾತ್ರೆ ಇಡೀ ದೇಶದಲ್ಲಿ ಕೈ ಹಿಡಿಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

  • ಇಂದಿನಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭ

    ಇಂದಿನಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭ

    ನವದೆಹಲಿ: ಭಾರತ್ ಜೋಡೋ ಯಾತ್ರೆ (Bharat Jodo Yatre) ಮೂಲಕ ಗಮನಸೆಳೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಮತ್ತೊಂದು ಸುತ್ತಿನ ಯಾತ್ರೆಗೆ ಸಿದ್ಧರಾಗಿದ್ದಾರೆ.

    ಇಂದಿನಿಂದ ಭಾರತ್ ನ್ಯಾಯ್ ಯಾತ್ರೆ ಎಂಬ ಹೆಸರಿನಲ್ಲಿ ಮಣಿಪುರದಿಂದ (Manipura) ಮಹಾರಾಷ್ಟ್ರದ (Maharastra) ಕಡೆಗೆ ರಾಗಾ ಯಾತ್ರೆ ಮಾಡಲಿದ್ದಾರೆ. ಮಣಿಪುರದಿಂದ ಮುಂಬೈಗೆ 67 ದಿನಗಳ ಅವಧಿಯಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಇಂದಿನಿಂದ ಮಾರ್ಚ್ 20 ರವರೆಗೆ ಇಂಫಾಲ್‍ನಿಂದ ಮುಂಬೈಗೆ ಯಾತ್ರೆ ಪ್ರಯಾಣಿಸಲಿದೆ.

    ಭಾರತ್ ಜೋಡೋ ನ್ಯಾಯ್ ಯಾತ್ರೆಯು (Bharat Jodo Nyay Yatra) 66 ದಿನಗಳಲ್ಲಿ ಬಸ್ಸುಗಳು ಮತ್ತು ಕಾಲ್ನಡಿಗೆಯಲ್ಲಿ 6,713 ಕಿ.ಮೀಗಳನ್ನು ಕ್ರಮಿಸುವ ಗುರಿ ಹೊಂದಿದೆ. ಈ ಪಯಣದುದ್ದಕ್ಕೂ 14 ರಾಜ್ಯಗಳು, 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ದಾಟಿ, ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ. ಇದನ್ನೂ ಓದಿ: ನನಗೆ 92 ವಯಸ್ಸಾಯ್ತು.. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ: ಹೆಚ್‌ಡಿಡಿ

    ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ಪರವಾಗಿ ಜನ ಬೆಂಬಲವನ್ನು ಒಟ್ಟುಗೂಡಿಸುವ ಪ್ರಯತ್ನದ ಭಾಗವಾಗಿದೆ. ಭಾರತದ ಪೂರ್ವದಿಂದ ಪಶ್ಚಿಮದವರೆಗೆ ಹಾದುಹೋಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಯಾತ್ರೆಗೆ ಚಾಲನೆ ನೀಡಲಿದ್ದು ಕಾಂಗ್ರೆಸ್ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎಲ್ಲ ಪ್ರಮುಖ ಕಾಂಗ್ರೇಸ್ ನಾಯಕರು ಉಪಸ್ಥಿತರಲಿದ್ದಾರೆ.

  • 2ನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧಾರ

    2ನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧಾರ

    ನವದೆಹಲಿ: ಲೋಕಸಭೆ ಚುನಾವಣೆ (Loksabha Election) ಸನಿಹವಾಗುತ್ತಿರುವ ಬೆನ್ನಲ್ಲೇ ಎರಡನೇ ಹಂತದ ಭಾರತ್ ಜೋಡೊ ಯಾತ್ರೆ (Bharat Jodo yatre) ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ. ಜನವರಿ ಮೊದಲ ವಾರದಿಂದಲೇ ಯಾತ್ರೆ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿವೆ.

    ಪಂಚರಾಜ್ಯಗಳ ಚುನಾವಣೆ ಅಂತ್ಯವಾಗಿ ಸಂಸತ್ ಕಲಾಪವೂ ಮುಗಿದ ಹಿನ್ನಲೆ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಯಾತ್ರೆಗೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡನೇ ಹಂತದ ಭಾರತ್ ಜೋಡೋ ಯಾತ್ರೆ ಹೈಬ್ರಿಡ್ ಮೋಡ್‍ನಲ್ಲಿರಲಿದೆ, ಯಾತ್ರೆಯಲ್ಲಿ ಭಾಗವಹಿಸುವವರು ಕಾಲ್ನಡಿಗೆಯಲ್ಲಿ ಅಥಾವ ಮತ್ತು ವಾಹನ ಬಳಬಹುದಾಗಿದ್ದು ರಾಹುಲ್‍ಗಾಂಧಿ (Rahul Gandhi) ಮಾತ್ರ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಲಿದ್ದಾರೆ ಎನ್ನಲಾಗಿದೆ.

    ಈ ಆವೃತ್ತಿಯ ವಿಶೇಷ ಗಮನವು ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದ ಮೇಲೆ ಇರುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಮೊದಲ ಆವೃತ್ತಿಯಂತೆಯೇ ಪ್ರತಿ ದಿನವೂ ಸಾರ್ವಜನಿಕ ಸಭೆಗಳಲ್ಲಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ, ಜನರೊಂದಿಗೆ ಬೆರೆಯಲಿದ್ದಾರೆ. ಡಿಸೆಂಬರ್ 21 ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಉದ್ದೇಶಿತ ಯಾತ್ರೆಯನ್ನು ಚರ್ಚಿಸಿ ಅನುಮೋದಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಧನ್ಕರ್ ಬಗ್ಗೆ ಅಣಕು ಪ್ರದರ್ಶನ, ಲೇವಡಿ- ನಗುತ್ತಾ ವೀಡಿಯೋ ಮಾಡಿದ ರಾಹುಲ್

    ಭಾರತ್ ಜೋಡೋ ಯಾತ್ರೆಯ ಮೊದಲ ಹಂತವು  2022ರ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಜನವರಿ 2023 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅಂತ್ಯವಾಯಿತು. ಇದು 126 ದಿನಗಳಲ್ಲಿ 12 ರಾಜ್ಯಗಳ 75 ಜಿಲ್ಲೆಗಳ ಮೂಲಕ ಸರಿಸುಮಾರು 4,080 ಕಿಲೋಮೀಟರ್ ದೂರವನ್ನು ಕ್ರಮಿಸಿತು ಇದು ಭಾರತದ ಅತಿ ಉದ್ದದ ಪಾದಯಾತ್ರೆಯನ್ನು ಗುರುತಿಸಲಾಗಿದೆ.

  • ಭಾರತ್ ಜೋಡೊ ಯಾತ್ರೆ 2.O ಆರಂಭಿಸಿದ್ರಾ ರಾಹುಲ್ ಗಾಂಧಿ?

    ಭಾರತ್ ಜೋಡೊ ಯಾತ್ರೆ 2.O ಆರಂಭಿಸಿದ್ರಾ ರಾಹುಲ್ ಗಾಂಧಿ?

    ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ಮೂಲಕ ಯಶಸ್ವಿಯಾಗಿ ಭಾರತ್ ಜೋಡೊ ಯಾತ್ರೆ (Bharat Jodo Yatre) ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಮುಂದುವರಿದ ಭಾಗವಾಗಿ ವಿವಿಧ ವಲಯದ ಜನರನ್ನು ಭೇಟಿ ಮಾಡುತ್ತಿದ್ದಾರೆ. ಇದು ಎರಡನೇ ಹಂತದ ಭಾರತ್ ಜೋಡೊ ಯಾತ್ರೆ ಎಂದು ಕಾಂಗ್ರೆಸ್ (Congress) ವಲಯದಲ್ಲಿ ಚರ್ಚಿಸಲಾಗುತ್ತಿದೆ.

    ಮಂಗಳವಾರ ಸಂಜೆ ರಾಹುಲ್ ಗಾಂಧಿ ದೆಹಲಿಯ ಕರೋಲ್ ಬಾಗ್‍ನಲ್ಲಿರುವ ಸೈಕಲ್ ಮೋಟಾರ್ ಮೆಕ್ಯಾನಿಕ್‍ಗಳನ್ನು ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ಕೆಲಸದಲ್ಲಿ ಸಹಾಯ ಮಾಡಿದ್ದಾರೆ. ಹೀಗೆ ವಿಭಿನ್ನ ವರ್ಗದ ದೈನಂದಿನ ದುಡಿಮೆಯಲ್ಲಿರುವ ಜನರನ್ನು ಭೇಟಿ ಮಾಡುವುದು ಎರಡನೇ ಹಂತದ ಭಾರತ್ ಜೋಡೊ ಯಾತ್ರೆಯ ಉದ್ದೇಶ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ತೆರಳುತ್ತಿದ್ದ ರಾಹುಲ್ ಗಾಂಧಿಗೆ ಪೊಲೀಸರಿಂದ ತಡೆ

    ಇದಕ್ಕೆ ಪೂರಕ ಎನ್ನುವಂತೆ ರಾಹುಲ್ ಗಾಂಧಿ (Rahul Gandhi) ದೆಹಲಿಯಿಂದ ಚಂಡೀಗಢದವರೆಗಿನ ಸಂಪೂರ್ಣ ಪ್ರಯಾಣವನ್ನು ಟ್ರಕ್‍ನಲ್ಲಿ ಮಾಡಿದ್ದರು. ಅದಾದ ಬಳಿಕ ಅಮೆರಿಕಾಕ್ಕೆ ತೆರಳಿದ ವೇಳೆ ಅಲ್ಲಿಯೂ ಪಂಜಾಬಿ ಸಮುದಾಯದ ಟ್ರಕ್ ಡ್ರೈವರ್ ಜೊತೆ ಬಹುದೂರ ಪ್ರಯಾಣ ಮಾಡಿದ್ದರು. ಹೀಗೆ ರಾಹುಲ್ ಗಾಂಧಿ ಅವರನ್ನು ಜನರೊಂದಿಗೆ ನೇರವಾಗಿ ಸಂಪರ್ಕಿಸುವುದು ಆ ಮೂಲಕ ಚುನಾವಣೆಯಲ್ಲಿ ಅದರ ಲಾಭ ಪಡೆಯುವ ತಂತ್ರ ಕಾಂಗ್ರೆಸ್ ಮಾಡಿದೆ ಎನ್ನಲಾಗುತ್ತಿದೆ.

    ಮೊದಲ ಹಂತದ ಭಾರತ್ ಜೊಡೊ ಯಾತ್ರೆಯಲ್ಲಿ ಭಾಗಿಯಾಗಿದ್ದ ಸಂಪನ್ಮೂಲ ವ್ಯಕ್ತಿಗಳೇ ಎರಡನೇ ಹಂತದ ಯಾತ್ರೆಯ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಬೇರೆ ಬೇರೆ ವಲಯದ ಜನರನ್ನು ನೇರವಾಗಿ ಸಂಪರ್ಕಿಸುವ ಲೆಕ್ಕಚಾರ ಮಾಡಿದೆ. ಕೇವಲ ಚುನಾವಣೆ ರಾಜ್ಯಗಳು ಮಾತ್ರವಲ್ಲದೇ ಬಾಕಿ ರಾಜ್ಯಗಳಲ್ಲೂ ಈ ಕಸರತ್ತು ನಡೆಯಲಿದೆ. ಆ ಮೂಲಕ ರಾಹುಲ್ ಗಾಂಧಿ ರಾಜಕೀಯ ಉದ್ದೇಶಗಳಿಗೆ ಈ ಪ್ರಯತ್ನ ಮಾಡುತ್ತಿಲ್ಲ ಎನ್ನುವುದು ಮನವರಿಕೆ ಮಾಡುವ ಪ್ರಯತ್ನವಾಗಿದೆ.

    ಎರಡನೇ ಹಂತದ ಯಾತ್ರೆಯು ಮುಂದಿನ ಕೆಲವು ತಿಂಗಳುಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲೂ ವಿಭಿನ್ನ ಪ್ರಯತ್ನದ ಜೊತೆಗೆ ಜನ ಸಾಮಾನ್ಯರ ಜೊತೆಗೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯ ಪ್ರವಾಸದಲ್ಲಿದ್ರೂ ಯಾವ ನಾಯಕರಿಗೂ ಭೇಟಿಗೆ ಅವಕಾಶ ಕೊಡದ ಸೋನಿಯಾ ಗಾಂಧಿ!

    ರಾಜ್ಯ ಪ್ರವಾಸದಲ್ಲಿದ್ರೂ ಯಾವ ನಾಯಕರಿಗೂ ಭೇಟಿಗೆ ಅವಕಾಶ ಕೊಡದ ಸೋನಿಯಾ ಗಾಂಧಿ!

    ಬೆಂಗಳೂರು: ಕಾಂಗ್ರೆಸ್ (Congress) ಅಧಿನಾಯಕಿ ಸೋನಿಯಾ ಗಾಂಧಿ ಮೂರು ದಿನ ರಾಜ್ಯ ಪ್ರವಾಸದಲ್ಲಿದ್ರೂ ಯಾವ ನಾಯಕರಿಗೂ ತಮ್ಮ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂಬ ಮಾಹಿತಿ ಲಭಿಸಿದೆ.

    ಹೌದು ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಜ್ಯಕ್ಕೆ ಬಂದ ಸೋನಿಯಾ ಗಾಂಧಿ ರಾಜ್ಯದ ಯಾವ ಪ್ರಮುಖ ನಾಯಕರಿಗೂ ವೈಯಕ್ತಿಕ ಭೇಟಿಗೆ ಅವಕಾಶ ನೀಡಿಲ್ಲ. ಆ ಮೂಲಕ ಭಾರತ್ ಜೋಡೋ ಯಾತ್ರೆ ಬಿಟ್ಟರೆ ರಾಜ್ಯ ಕಾಂಗ್ರೆಸ್ ನಲ್ಲಿ ಬೇರೆ ಯಾವುದಕ್ಕೂ ಅವಕಾಶ ಇಲ್ಲಾ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

    ಸದ್ಯಕ್ಕೆ ಏನಿದ್ದರೂ ಮೊದಲ ಆಧ್ಯತೆ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ (Bharat Jodo Yatre) ಯ ಯಶಸ್ಸು. ಆನಂತರ ಚುನಾವಣೆಯಲ್ಲಿ ಗೆಲುವಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು. ಈ ಜವಾಬ್ದಾರಿಯನ್ನು ಕಾಂಗ್ರೆಸ್ (Congress) ನ ಎಲ್ಲಾ ನಾಯಕರು ಸಾಮೂಹಿಕವಾಗಿ ನಿರ್ವಹಿಸಬೇಕು. ಅದನ್ನ ಮೀರಿ ಏನಾದರು ಮಾತನಾಡುವುದು ಇದ್ದರೆ ಅದು ದೆಹಲಿಯಲ್ಲಿ ಅಷ್ಟೆ. ಇಂತದೊಂದು ಸ್ಪಷ್ಟ ಸಂದೇಶವನ್ನ ಸೋನಿಯಾ ಗಾಂಧಿ (Sonia Gandhi) ರವಾನಿಸಿದ್ದಾರೆ ಎನ್ನಲಾಗುತ್ತಿದೆ.

    ಸ್ವತಃ ಎಐಸಿಸಿ ಹೈಕಮಾಂಡ್ ರಾಜ್ಯದಲ್ಲಿ 3 ದಿನ ಉಳಿದುಕೊಂಡರೂ ರಾಜ್ಯದ ಯಾವ ನಾಯಕರಿಗೂ ಭೇಟಿಗೆ ಅವಕಾಶ ನೀಡದೆ ಅಂತರ ಕಾಯ್ದುಕೊಂಡಿರುವುದು ವಿಶೇಷವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ

    ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ

    ಮಂಡ್ಯ: 2024 ರ ಲೋಕಸಭಾ ಚುನಾವಣೆ (Loksabha Election) ದೃಷಿಯಿಂದ ಆರಂಭವಾದ ಕೈ ಪಕ್ಷದ ಭಾರತ್ ಜೋಡೋ ಯಾತ್ರೆ (Bharat Jodo yatre) ವಿರಾಮದ ಬಳಿಕ ಇಂದಿನಿಂದ ಮತ್ತೆ ಆರಂಭವಾಗಲಿದೆ. ರಾಜ್ಯದಲ್ಲಿ 18 ದಿನಗಳ ಕಾಲ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಇಂದು ರಾಹುಲ್ ಗಾಂಧಿ ಜೊತೆ ಸೋನಿಯಾಗಾಂಧಿ ಸಹ ಹೆಜ್ಜೆ ಹಾಕಲಿದ್ದಾರೆ.

    ಮೈಸೂರಿಗೆ ಬಂದಿರುವ ಕಾಂಗ್ರೆಸ್‍ (Congress) ನ ಭಾರತ್ ಜೋಡೋ ಪಾದಯಾತ್ರೆ ಇದೀಗ 2 ದಿನಗಳ ವಿರಾಮದ ಬಳಿಕ ಪುನಾರಂಭಗೊಳ್ಳಲಿದೆ. ಇಂದು ಮಂಡ್ಯದ ಪಾಂಡವಪುರದ ಮಹದೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದೆ. 11 ಗಂಟೆಗೆ ನಾಗಮಂಗಲದ ಚೌಡೇನಹಳ್ಳಿ ಬಳಿ ವಿಶ್ರಾಂತಿ ಪಡೆದು, ಸಂಜೆ 4ಕ್ಕೆ ಪಾದಯಾತ್ರೆ ಆರಂಭಿಸಲಿದ್ದಾರೆ. ಸಂಜೆ 7ಗಂಟೆಗೆ ಮಂಡ್ಯದ ಬ್ರಹ್ಮದೇವರ ಹಳ್ಳಿ ಗ್ರಾಮದಲ್ಲಿ ವ್ಯಾಸ್ತವ್ಯ ಮಾಡಲಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಟಿಆರ್‌ಎಸ್‌ ಜೊತೆ ಜೆಡಿಎಸ್‌ ಮೈತ್ರಿ – ಎಚ್‌ಡಿಕೆ ಅಧಿಕೃತ ಘೋಷಣೆ

    ಪಾದಯಾತ್ರೆಯ ನೇತೃತ್ವದ ವಹಿಸಿರುವ ರಾಹುಲ್ ಗಾಂಧಿ (Rahul Gandhi) ಭೇಟಿಯಾಗಲು ದೆಹಲಿಯಿಂದ ಬಂದ ಸೋನಿಯಾಗಾಂಧಿ ಕಬಿನಿಯ ಹಿನ್ನಿರಿನಲ್ಲಿರುವ ಆರೆಂಜ್ ಕೌಂಟಿ ರೆಸಾರ್ಟ್‍ನಲ್ಲಿ ವ್ಯಾಸ್ತವ್ಯ ಮಾಡಿದ್ರು. ಇದೇ ವೇಳೆ ಪುತ್ರನೊಂದಿಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ರು. ಪಾದಯಾತ್ರೆಯ 2 ದಿನ ವಿರಾಮ ವೇಳೆ ತಾಯಿಯೊಂದಿಗೆ ವ್ಯಾಸ್ತವ್ಯ ಮಾಡಿದ ರಾಹುಲ್ ಗಾಂಧಿ ನಿನ್ನೆ ಸಂಜೆ ಪಾದಯಾತ್ರೆ ಪುನಾರಂಭವಾಗುವ ಸ್ಥಳಕ್ಕೆ ಬಂದು ಸೇರಿದ್ರು.

    ಇಂದು ಮಂಡ್ಯದಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಪುತ್ರನೊಂದಿಗೆ ಸೋನಿಯಾ ಗಾಂಧಿ (Sonia Gandhi) ಹೆಜ್ಜೆ ಹಾಕಲಿದ್ದಾರೆ. ನೇರವಾಗಿ ಪಾದಯಾತ್ರೆಯಲ್ಲಿ ಭಾಗಿಯಾಗುವ ಸೋನಿಯಾಗಾಂಧಿ ಕೆಲ ದೂರ ಹೆಜ್ಜೆ ಹಾಕಿದ ಬಳಿಕ ದೆಹಲಿಗೆ ವಾಪಸ್ ತೆರಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಸರ್ಕಾರದ ಅಭಿವೃದ್ಧಿ ನೋಡ್ಕೊಂಡು ಬನ್ನಿ- ರಾಹುಲ್ ಭೇಟಿಗೆ ಪ್ರತಾಪ್ ಸಿಂಹ ಲೇವಡಿ

    ಬಿಜೆಪಿ ಸರ್ಕಾರದ ಅಭಿವೃದ್ಧಿ ನೋಡ್ಕೊಂಡು ಬನ್ನಿ- ರಾಹುಲ್ ಭೇಟಿಗೆ ಪ್ರತಾಪ್ ಸಿಂಹ ಲೇವಡಿ

    ಮೈಸೂರು: ಚಾಮರಾಜನಗರ ಹಿಂದುಳಿದ ಜಿಲ್ಲೆಯಗಿದ್ದು, ಅಲ್ಲಿ ಬಿಜೆಪಿ (BJP) ಮಾಡಿರುವ ಅಭಿವೃದ್ಧಿ ನೋಡಿಕೊಂಡು ಬನ್ನಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿಗೆ  ಸಂಸದ ಪ್ರತಾಪ್‌ ಸಿಂಹ (Pratap Simha) ಲೇವಡಿ ಮಾಡಿದ್ದಾರೆ.

    ಕಾಂಗ್ರೆಸ್ (Congress) ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ಯಾತ್ರೆ ವೇಳೆ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಂಡು ಬನ್ನಿ. ಮತ ಪ್ರಚಾರಕ ಪ್ಯಾಸ್ಟರ್ ಭೇಟಿ ಮಾಡಿ ಆರಂಭವಾದ ಯಾತ್ರೆ ಇದು. ಜೀಸಸ್ (Jesus) ಒಬ್ಬನೇ ದೇವರು ಅನ್ನುವವನ ಭೇಟಿಯಿಂದ ಶುರುವಾದ ಯಾತ್ರೆ ಇದು. ಇದರಲ್ಲಿಯೇ ನಿಮ್ಮ ಉದ್ದೇಶ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಇಂದು, ನಾಳೆ ಅಂತರರಾಜ್ಯ ಸಂಚಾರಕ್ಕೆ ಬದಲಿ ಮಾರ್ಗ ಬಳಸಿ

    ಜೋಡಿಸುವ ಯಾತ್ರೆ ಅಲ್ಲ ಇದು ಒಡೆಯುವ ಯಾತ್ರೆ. ರಾಜ್ಯಕ್ಕೆ ಬಂದಾಗ ಮಲೈ ಮಹದೇಶ್ವರ ದೇವಸ್ಥಾನಕ್ಕೆ ಹೋಗಿ ಬನ್ನಿ. ಯಡಿಯೂರಪ್ಪ (B S Yediyurappa) ಸರ್ಕಾರ ಕಾಲದಲ್ಲಿ ಅಲ್ಲಿನ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಅವುಗಳನ್ನು ನೋಡಿಕೊಂಡು ಬನ್ನಿ. ಚಾಮರಾಜನಗರ (Chamarajanagar) ಹಿಂದುಳಿದ ಜಿಲ್ಲೆ ಅಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ನೋಡಿಕೊಂಡು ಬನ್ನಿ. ನಂಜನಗೂಡು ಬಂದಾಗ ರಿಂಗ್ ರಸ್ತೆ ನೋಡಿ. ಮೈಸೂರು ವಿಮಾನ ನಿಲ್ದಾಣ (Mysuru Airport) ನೋಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‍ನಲ್ಲಿ ಖರ್ಗೆ – ಕಡೆಯ ಹಂತದಲ್ಲಿ ಕಣಕ್ಕಿಳಿಯುವ ಸಾಧ್ಯತೆ

    ಇನ್ನು ಐದು ವರ್ಷದ ನಂತರ ಮತ್ತೆ ಯಾತ್ರೆ ಮಾಡಿ. ಆಗ ಬಸ್‍ನಲ್ಲಿ ಬರುವುದು ಬೇಡ ಜೆಟ್‍ನಲ್ಲಿ ಬನ್ನಿ. ಅಂತಹ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿರುತ್ತೇವೆ. ಮೈಸೂರಿಗೆ ಬಂದಾಗ ಪ್ಯಾಸ್ಟರ್ ಬದಿಗಿಟ್ಟು ಚಾಮುಂಡಿ ತಾಯಿಗೆ ನಮಸ್ಕರಿಸಿ. ದಸರಾದಲ್ಲಿ ಭಾಗಿಯಾಗಿ ಮೋದಿ (Narendra Modi) ಹೈವೇ ಮೈಸೂರು-ಬೆಂಗಳೂರು ರಸ್ತೆ ನೋಡಿ. ನಾವು ಮಾಡಿರುವ ಅಭಿವೃದ್ಧಿ ಕಾರ್ಯ ನೋಡುತ್ತಾ ನಿಮ್ಮ ಯಾತ್ರೆ ಮುಂದುವರಿಸಿ ಎಂದು ರಾಹುಲ್‍ಗೆ ಪ್ರತಾಪ್ ಸಿಂಹ ಸಲಹೆ ನಿಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]