Tag: bharat jodo yatra

  • ಸಿದ್ದು-ಡಿಕೆಶಿಯನ್ನ ಪದೇ ಪದೇ ಜೋಡಿಸಿ ನಿಲ್ಲಿಸುವ ರಾಹುಲ್ –  ಜೋಡಣೆ ಅಸಲಿ ಆಟ ಏನ್ ಗೊತ್ತಾ?

    ಸಿದ್ದು-ಡಿಕೆಶಿಯನ್ನ ಪದೇ ಪದೇ ಜೋಡಿಸಿ ನಿಲ್ಲಿಸುವ ರಾಹುಲ್ – ಜೋಡಣೆ ಅಸಲಿ ಆಟ ಏನ್ ಗೊತ್ತಾ?

    ಬೆಂಗಳೂರು: ಜೋಡ್ಸಿ ನಿಲ್ಲಿಸೋದು.. ಇಬ್ಬರ‌ ಮುಖದಲ್ಲಿ ನಗು ಮೂಡಿಸೋದು… ನನ್ನ ಸಂದೇಶ ಅರ್ಥ ಆಗ್ತಿದೆ ಅಂತಾ ಅಂದುಕೊಳ್ಳೋದು. ಇದು ರಾಹುಲ್ ಗಾಂಧಿಯ (Rahul Gandhi) ಜೋಡೋ ತಂತ್ರ. ಅಂದಹಾಗೆ ಇದು ಭಾರತ್ ಜೋಡೋ ಯಾತ್ರೆಯಲ್ಲೇ (Bharat Jodo Yatra) ನಡೆದ ಇನ್ನೊಂದು ಭಾಗ ಸಿದ್ದು-ಡಿಕೆಶಿ ಜೋಡೋ. ಕರ್ನಾಟಕದ ಭಿನ್ನರಾಗಗಳನ್ನ ಸರಿಪಡಿಸಿ ಲಯಬದ್ಧ ರಾಗವಾಗಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದ್ರು ಅಂದರೂ ತಪ್ಪಾಗಲಾರದು. ಯಾತ್ರೆಯಲ್ಲಿ ಒಳಸುಳಿಯೊಳಗೆ ಕರ್ನಾಟಕದ ನಾಯಕತ್ವದ ಭಿನ್ನ ಧ್ವನಿಗಳನ್ನ ಹತ್ತಿಕ್ಕಲು ಸಿದ್ದು-ಡಿಕೆ (Siddaramaiah – D.K.Shivakumar) ಜೋಡೋ ಅಂತಾ ಸಂದೇಶ ರವಾನಿಸಿದ್ದು ಸ್ಪಷ್ಟವಾಗಿದೆ.

    ಕರ್ನಾಟಕ ಕಾಂಗ್ರೆಸ್ (Congress) ಪಾಲಿಗೆ ಕಲ್ಪವೃಕ್ಷ. ದೇಶದಲ್ಲಿ ಏನಾದ್ರೂ ಕಾಂಗ್ರೆಸ್ ಫಿಟ್ & ಫೈನ್ ಆಗಿದೆ ಅಂದ್ರೆ ಅದು ಕರ್ನಾಟಕದಲ್ಲಿ (Karnataka) ಅನ್ನೋದು ಗೊತ್ತು. ಆದರಲ್ಲೂ ಲೀಡರ್‌ಶಿಪ್ ವಿಚಾರದಲ್ಲಿ ಒಂಟೆತ್ತಿನ ಗಾಡಿಗಿಂತ ಜೋಡೆತ್ತಿನ ಗಾಡಿ ಅತ್ಯಾವಶ್ಯಕ ಅನ್ನುವ ಸತ್ಯವೂ ಕಾಂಗ್ರೆಸ್ ಹೈಕಮಾಂಡ್‌ಗೆ ಸ್ಪಷ್ಟವಾಗಿದೆ. ಆ ಕಾರಣಕ್ಕಾಗಿಯೇ ಸಿದ್ದು-ಡಿಕೆಶಿಯನ್ನ ಸಮನಾಗಿ ಎತ್ತಿ ಮುದ್ದಾಡಿಸುವ ಕೆಲಸಕ್ಕೆ ರಾಹುಲ್ ಗಾಂಧಿ ಕೈ ಹಾಕಿದ್ದಾರೆ ಅನ್ನುವ ಸತ್ಯ ಎಲ್ಲರಿಗೂ ಗೊತ್ತಿದೆ. ಇದನ್ನೂ ಓದಿ: ಬಚ್ಚಾ ಲಡಾಯಿ ನಡುವೆ ರಾಮ ರಾಜಕೀಯ- ಕಾಂಗ್ರೆಸ್ ರಾಮಜಪಕ್ಕೆ ಕೇಸರಿಪಡೆ ವ್ಯಂಗ್ಯ

    ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿಯೇ ಆ ಜೋಡಣೆಯ ಕೆಲಸ ಮಾಡಿದ್ರು ರಾಹುಲ್. ಸಿದ್ದರಾಮಯ್ಯ ಬಲ‌ಪ್ರದರ್ಶನದ ವೇದಿಕೆಯಲ್ಲೇ ಸಿದ್ದರಾಮಯ್ಯ ಆಲಂಗಿಸುವಂತೆ ಡಿಕೆಶಿಗೆ ರಾಹುಲ್ ಸನ್ನೆ ಮಾಡಿದಾಗಲೇ ಎಲ್ಲರಿಗೂ ಅರ್ಥವಾಗಿತ್ತು. ಜೋಡಣೆ ಕಾರ್ಯ ಪ್ರಗತಿಯಲ್ಲಿದೆ ಎಂಬ ಸಂದೇಶ ಹೊರಬಿತ್ತು. ಆದಾದ ಬಳಿಕ ಇದೊಂದು ತಾತ್ಕಾಲಿಕ ಆಲಿಂಗನ ಮುಂದೆ ಯಾವಾಗ ಡೈವೈರ್ಸ್ ಆಗುತ್ತೋ ಅಂತಾ ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದು ಉಂಟು.

    ಇನ್ನು ಬಿಜೆಪಿ ವ್ಯಂಗ್ಯಕ್ಕೆ ಇಂಬು ನೀಡುವಂತೆ ರಾಹುಲ್ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಾಗಲೇ ಮತ್ತೆ ಜೋಡೆತ್ತುಗಳು ದಿಕ್ಕಪಾಲಾಗುವ ಮುನ್ಸೂಚನೆ ಕೊಟ್ಟವು. ಎಡಕ್ಕೆ ಒಂದೆತ್ತು, ಬಲಕ್ಕೆ ಇನ್ನೊಂದೆತ್ತು ಎಳೆದಿದ್ದು ಸ್ಪಷ್ಟವಾಗಿತ್ತು. ರಾಹುಲ್ ಸ್ವಾಗತಕ್ಕೆ ಕಾಡಿನ ಮಧ್ಯೆಯೇ ಹೋಗಿ ಸಿದ್ದರಾಮಯ್ಯ ಟೀಂ ನಾವೇ ಫಸ್ಟ್ ಅಂತಾ ಬೆನ್ನು ತಟ್ಟಿಕೊಂಡ್ರೆ, ನಮಗೆ ಜವಾಬ್ದಾರಿ ಕೆಲಸ ಇವೆ, ಅಲ್ಲಿ ಹೋಗುವ ಪ್ಲ್ಯಾನ್ ಇರಲಿಲ್ಲ ಅಂತಾ ಡಿಕೆಶಿ ಗುರ್ ಅಂದಿದ್ದು ಪಕ್ಷದೊಳಗೆ ನಾನಾ ಚರ್ಚೆ ಶುರುವಾಗಿಬಿಡ್ತು. ಈ ಮೇಲ್ನೋಟದ ಆಟ ಗೊತ್ತಿರದಷ್ಟೂ ದಡ್ಡರಲ್ಲ ರಾಹುಲ್. ಕರ್ನಾಟಕದ ವಸ್ತುಸ್ಥಿತಿ ರಾಹುಲ್‌ಗೆ ಸ್ಪಷ್ಟವಾಗಿ ತಿಳಿದಿದೆ ಅನ್ನೋದನ್ನ ನನ್ನ ಗಮನಕ್ಕೆ ಬಂದಿದ್ದೇ ಅವರ ಬಳಿ ಅನೌಪಚಾರಿಕವಾಗಿ ಮಾತನಾಡಿದಾಗ. ಆ ಕಾರಣಕ್ಕೇನೋ ರಾಹುಲ್ ಅವರು ಸಿದ್ದರಾಮಯ್ಯ, ಡಿಕೆಶಿಗೆ ಸಮಾನ ಸ್ಥಾನ, ಸಮಾನ ಓಟ, ಸಮಾನ ಅವಕಾಶ ಎಂಬ ಗೇಮ್ ಪ್ಲ್ಯಾನ್ ಮಾಡಿದ್ದು. ಇದನ್ನೂ ಓದಿ: ಬನ್ನಿ, ಕರ್ನಾಟಕದಲ್ಲಿ ಬಂಡವಾಳ ಹೂಡಿ: ಆಂಧ್ರ, ತೆಲಂಗಾಣ ಉದ್ಯಮಿಗಳಿಗೆ ಸಚಿವ ನಿರಾಣಿ ಕರೆ

    ಅಂದಹಾಗೆ ಭಾರತ್ ಜೋಡೋ ಪಾದಯಾತ್ರೆ ವೇಳೆ ಮೊದಲು ಸಿದ್ದರಾಮಯ್ಯ ಅವರನ್ನ ಓಡಿಸ್ತಾರೆ.‌ ಡಿಕೆಶಿ ಇಡಿ ವಿಚಾರಣೆಗೆ ಹೋದಾಗ ಸಿದ್ದರಾಮಯ್ಯ ಓಡಿದ್ದೇ ದೊಡ್ಡ ಸುದ್ದಿಯಾಗಿತ್ತು. ಆ ಸುದ್ದಿ ಬೇರೆ ರೂಪ ಪಡೆಯುವ ಮೊದಲೇ ಮಾರನೇ ದಿನವೇ ಡಿಕೆಶಿಯನ್ನ ರಾಹುಲ್ ಓಡಿಸ್ತಾರೆ.‌ ಒಬ್ಬರು‌ ಮಾರ್ನಿಂಗ್ ಶಿಫ್ಟ್ ಬಂದು ಜಾಸ್ತಿ ಕಾಣಿಸಿಕೊಂಡ್ರೆ, ಸೆಕೆಂಡ್ ಶಿಫ್ಟ್‌ನಲ್ಲಿ ಇನ್ನೊಬ್ಬರು ಬಂದು ಜಾಸ್ತಿ ‌ಕಾಣಿಸಿಕೊಳ್ತಾರೆ.‌ ಸಿದ್ದು-ಡಿಕೆಶಿ ಇಬ್ಬರ ವಿಚಾರದಲ್ಲಿ ಯಾರೂ ಹೆಚ್ಚಿಲ್ಲ, ಯಾರೂ ಕಮ್ಮಿ ಇಲ್ಲ ಎಂಬ ಸಂದೇಶವನ್ನು ಕೊಡಲು ರಾಹುಲ್‌ ಕೂಡ ಬಹಳ ಸಲ ಪ್ರಯತ್ನಿಸಿದ್ದಾರೆ.

    ಅದರಂತೆ ಬಳ್ಳಾರಿ ಪ್ರವೇಶ ಮಾಡುವ ಮುನ್ನ ಸಿದ್ದು-ಡಿಕೆಶಿ ಇಬ್ಬರನ್ನೂ ಒಟ್ಟಿಗೆ ಕೈ ಕೈ ಹಿಡಿಸಿ ಅವರ ಭುಜದ ಮೇಲೆ ರಾಹುಲ್ ಕೈ ಹಾಕಿ ಹೆಜ್ಜೆ ಹಾಕಿಸಿದ್ರು‌. ಇದೆಲ್ಲ ರಾಹುಲ್ ಹುಡುಗಾಟಿಕೆಗೆ ಮಾಡಿದ್ದಲ್ಲ. ರಾಹುಲ್ ಬಹಳ ಮೆಚ್ಯುರ್ಡ್ ಆಗಿ ಪೊಲಿಟಿಕಲ್ ಥಿಂಕ್ ಮಾಡುವುದನ್ನ ಬಹಳ ಚೆನ್ನಾಗಿ ಕಲಿತಿದ್ದಾರೆ ಅಂತಾ ನನಗಿನಿಸಿದೆ. ಪಂಜಾಬ್ ಪೆಟ್ಟು ತಿಂದ ಹಸ್ತಕ್ಕೀಗ ಕರ್ನಾಟಕದ ಭವಿಷ್ಯ ಚೆನ್ನಾಗಿ ಗೊತ್ತಾಗಿರಬೇಕು. ಹಾಗಾಗಿಯೇ ರಾಹುಲ್ ಭಾರತ್ ಜೋಡೋ ಯಾತ್ರೆಯ ಜೊತೆ ಜೊತೆಯಲ್ಲಿ ಕರ್ನಾಟಕದಲ್ಲಿ ಸಿದ್ದು-ಡಿಕೆಶಿ ಜೋಡೋ ಸಂದೇಶವನ್ನು ಅಚ್ಚುಕಟ್ಟಾಗಿ ಮಾಡಿ‌ ಮುಗಿಸಿದ್ದಾರೆ. ಇನ್ನೇನಿದ್ದರೂ ಜೋಡಣೆ ಆಗಬೇಕಿರುವುದು ಸಿದ್ದರಾಮಯ್ಯ, ಶಿವಕುಮಾರ್ ಮನಸ್ಸುಗಳು. ಅಷ್ಟೇ ಅಲ್ಲ ಇಬ್ಬರು ನಾಯಕರ ಬೆನ್ನ ಹಿಂದಿನ ಶಕ್ತಿಗಳು, ಅಕ್ಕಪಕ್ಕದ ಕಾಣದ ಕೈಗಳು ಜೋಡಣೆ ಆಗಬೇಕು. ಆಗ ಮಾತ್ರ ರಾಹುಲ್ ಗಾಂಧಿಯ ಜೋಡಣೆ ಪ್ರಯತ್ನ ಯಶಸ್ವಿಯಾಗಲು ಸಾಧ್ಯ. ಅದಕ್ಕಾಗಿ ವರ್ಷಗಟ್ಟಲೇ ಕಾಯಬೇಕಾಗಿಲ್ಲ. ಇನ್ನು ಐದಾರು ತಿಂಗಳಲ್ಲಿ ಆ ರಿಸಲ್ಟ್ ಕೂಡ ಸಿಗುತ್ತೆ. ಅಲ್ಲಿ ತನಕ ಕಾದುನೋಡೋಣ.

    -ರವೀಶ್ ‌.ಹೆಚ್‌.ಎಸ್. ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ

    Live Tv
    [brid partner=56869869 player=32851 video=960834 autoplay=true]

  • ಒಂದೇ ಶಬ್ದದಲ್ಲಿ ಹೇಳ್ತೀನಿ, ನನ್ನ ಶಕ್ತಿ ಶಿವ: ರಾಹುಲ್ ಗಾಂಧಿ ಹೇಳಿದ ಗುಟ್ಟುಗಳು

    ಒಂದೇ ಶಬ್ದದಲ್ಲಿ ಹೇಳ್ತೀನಿ, ನನ್ನ ಶಕ್ತಿ ಶಿವ: ರಾಹುಲ್ ಗಾಂಧಿ ಹೇಳಿದ ಗುಟ್ಟುಗಳು

    ಬೆಂಗಳೂರು: ಕರ್ನಾಟಕದಲ್ಲಿ (Karnataka) ಭಾರತ್ ಜೋಡೋ ಯಾತ್ರೆ (Bharat Jodo Yatra) ಸೆಪ್ಟೆಂಬರ್ 30 ರಿಂದ ಆರಂಭ ಆಗಿದೆ. ಇಷ್ಟು ದಿನ ಬೇರೆ ಬೇರೆ ಕಡೆ ಸಂವಾದ ಮಾಡುತ್ತಿದ್ದ ರಾಗಾ (Rahul Gandhi) ಇವತ್ತು ಜರ್ನಲಿಸ್ಟ್ ಜೊತೆ ಅನೌಪಚಾರಿಕ ಚರ್ಚೆ ಮಾಡಿದ್ದಾರೆ. ಅದು ಫೋಟೋ ಶೂಟ್‌ಗೆ ಅಂತಾ ಫಿಕ್ಸ್ ಆಗಿದ್ದ ಶೆಡ್ಯೂಲ್‌ನಲ್ಲಿ 15 ನಿಮಿಷ ನಗು ನಗುತ್ತಾ ತೂರಿಬಂದ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಅದರಲ್ಲಿ ವಿಶೇಷ ಎನಿಸಿದ್ದು, ರಾಹುಲ್ ಗಾಂಧಿ ಅವರ ಸ್ಟ್ರೆಂಥ್ ಬಗ್ಗೆ ಕೇಳಿದ ಪ್ರಶ್ನೆ ಮತ್ತು ರಾಹುಲ್ ಅದಕ್ಕೆ ಕೊಟ್ಟ ಉತ್ತರ. ಭಾರತ್ ಜೋಡೋ ಯಾತ್ರೆ ಆರಂಭಕ್ಕೆ ಆ ಶಕ್ತಿ ಎಲ್ಲಿಂದ ಬಂತು? ಅದರ ಗುಟ್ಟೇನು? ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ರಾಹುಲ್ ಸ್ವಲ್ಪ ನಕ್ಕು, ನಾನು ವನ್ ವರ್ಡ್ನಲ್ಲಿ ಹೇಳ್ತೀನಿ ಅಂತ ಹೇಳಿ ಸ್ವಲ್ಪ ವಿರಾಮ ಕೊಟ್ಟರು. ಬಳಿಕ ಮತ್ತೆ ನಕ್ಕ ರಾಹುಲ್, ಶಿವ.. ಶಿವ.. ನನ್ನ ಶಕ್ತಿ ಶಿವ ಎಂದರು.

    ತಕ್ಷಣ ನಿಮಗೆ ಆಧ್ಯಾತ್ಮದಲ್ಲಿ ಆಸಕ್ತಿ ಇದೆಯಾ ಎಂಬ ಮರು ಪ್ರಶ್ನೆ ಹಾಕಿದಾಗ, ಆಧ್ಯಾತ್ಮ, ಧಾರ್ಮಿಕತೆ ಬಗ್ಗೆ ಬೇರೆ ಬೇರೆ ವ್ಯಾಖ್ಯಾನಗಳನ್ನು ಕೊಡುತ್ತಾರೆ. ಆ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ನಾನು ಶಿವನನ್ನು ನಂಬುತ್ತೇನೆ ಎಂದು ಹೇಳಿ ರಾಹುಲ್ ನಸುನಕ್ಕರು.

    ಈ ನಡುವೆ ಕರ್ನಾಟಕದ ಕಲರ್ ಫುಲ್ ಪಾಲಿಟಿಕ್ಸ್ ರಾಹುಲ್‌ಗೆ ಇಷ್ಟ ಆಗಿದೆ ಎನ್ನೋದು ಅವರ ಮಾತುಗಳಿಂದಲೇ ಸ್ಪಷ್ಟವಾಯಿತು. ಕರ್ನಾಟಕದ ರಾಜಕಾರಣವೇ ಬೇರೆ, ಕೇರಳ ರಾಜಕಾರಣವೇ ಬೇರೆ. ಕರ್ನಾಟಕದಲ್ಲೂ ಒಳ್ಳೆಯ ಲೀಡರ್‌ಗಳು ಇದ್ದಾರೆ. ಜಾತಿ ಪಾಲಿಟಿಕ್ಸ್ ಕೂಡ ಇದೆ, ಅದನ್ನು ಇಲ್ಲ ಎನ್ನಲಾಗುವುದಿಲ್ಲ ಎಂದು ರಾಹುಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದನ್ನೂ ಓದಿ: SC, ST ಮೀಸಲಾತಿ ವಿಚಾರದಲ್ಲಿ ಸರ್ಕಾರ ದಿಟ್ಟ ನಿರ್ಧಾರ: ಬೊಮ್ಮಾಯಿ

    ಬಳಿಕ ತಮ್ಮ ಹವ್ಯಾಸದ ಬಗ್ಗೆ ಕೇಳಿದಾಗ, ಡೈಲಿ ವಾಕಿಂಗ್ ಮಾಡ್ತಾ ಇದೀನಿ ಅಲ್ವಾ? ಎಂದು ನಗೆಚಟಾಕಿಯಿಟ್ಟರು. ನಾನು ವಾಕ್ ಮಾಡ್ತೀನಿ. ಸ್ವಲ್ಪ ವ್ಯಾಯಾಮ ಮಾಡುವ ಅಭ್ಯಾಸ ಇದೆ. ಮಾರ್ಷಲ್ ಆರ್ಟ್ಸ್ ಹವ್ಯಾಸ ಇದೆ. ಬುಕ್ ಓದುತ್ತೇನೆ ಎಂದು ತಿಳಿಸಿದರು.

    ಜೋಡೋ ಯಾತ್ರೆ ಬಳಿಕ ಯಾವಾಗ ವಾಪಸ್ ಕರ್ನಾಟಕಕ್ಕೆ ಬರ್ತೀರಾ ಎಂದು ಕೇಳಿದಾಗ, ನೀವು ಕರೆದಾಗ ಬರ್ತೀನಿ. ನಿಮ್ಮ ಮನೆಗೆ ಕರೆಯಿರಿ ಎಂದು ಹೇಳಿ ರಾಹುಲ್ ನಕ್ಕರು. ಅಷ್ಟೇ ಅಲ್ಲ, ಕಾಶ್ಮೀರದ ತನಕ ನಮ್ಮ ಜೊತೆ ಬನ್ನಿ, ಹೋಗೋಣ. ನಾನು ನಿಮ್ಮನ್ನು ಸ್ವಾಗತಿಸುತ್ತೇನೆ ಎಂದು ರಾಗಾ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ಕೊಟ್ಟರು.

    ಸುಮಾರು 15 ನಿಮಿಷದಲ್ಲಿ ಚುಟುಕಾಗಿ ಕೆಲ ವಿಚಾರಗಳನ್ನು ತಿಳಿಸಿದ ರಾಹುಲ್, ಕರ್ನಾಟಕದಲ್ಲಿ ಪೊಲಿಟಿಕಲ್ ಲಾಭ ನಿರೀಕ್ಷೆ ಮಾಡಿದ್ದೀರಾ ಅಂತಾ ಪ್ರಶ್ನೆ ಕೇಳಿದಾಗ ಉತ್ತರಿಸಲಿಲ್ಲ. ನಮ್ಮ ಸ್ಟೇಟ್ ಲೀಡರ್ಸ್ ಅದನ್ನು ಕೇಳ್ತಾರೆ. ಭಾರತ್ ಜೋಡೋ ದ್ವೇಷ, ಅಸೂಯೆಗಳನ್ನು ಹೋಗಲಾಡಿಸಿ ಜೋಡಿಸುವ ಕೆಲಸ ಮಾಡ್ತಿದೆ ಎಂದಷ್ಟೇ ಹೇಳಬಲ್ಲೆ ಎಂದರು. ಇದನ್ನೂ ಓದಿ: ಬ್ಯಾನ್ ಆದ್ರೂ ಸಕ್ರಿಯವಾಗಿದ್ಯಾ PFI?- ಬೇಟೆ ಮುಂದುವರಿಸಿದ ಮಂಗಳೂರು ಪೊಲೀಸರು

    Live Tv
    [brid partner=56869869 player=32851 video=960834 autoplay=true]

  • ಗಾಂಧಿ ಟೋಪಿ ಮುಂದಿಟ್ಟುಕೊಂಡು ಕಾಂಗ್ರೆಸ್ ಸಮಾಜಕ್ಕೆ ಟೋಪಿ ಹಾಕಿದೆ: ಕಟೀಲ್

    ಗಾಂಧಿ ಟೋಪಿ ಮುಂದಿಟ್ಟುಕೊಂಡು ಕಾಂಗ್ರೆಸ್ ಸಮಾಜಕ್ಕೆ ಟೋಪಿ ಹಾಕಿದೆ: ಕಟೀಲ್

    ಧಾರವಾಡ: ಕಾಂಗ್ರೆಸ್ (Congress) ಪಕ್ಷ ಗಾಂಧಿ ಟೋಪಿಯನ್ನು ಮುಂದಿಟ್ಟುಕೊಂಡು ಇಡೀ ಸಮಾಜಕ್ಕೆ ಟೋಪಿ ಹಾಕುವ ಕೆಲಸ ಮಾಡಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NalinKumar Kateel)  ವಾಗ್ದಾಳಿ ನಡೆಸಿದರು.

    ಧಾರವಾಡದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರವಾದವನ್ನು ಬದಿಗಿಟ್ಟು ಪರಿವಾರ ವಾದವನ್ನು ಮುಂದಿಟ್ಟಿತ್ತು. ಮಹಾತ್ಮ ಗಾಂಧಿಗೂ ಹಾಗೂ ರಾಹುಲ್ ಗಾಂಧಿಗೂ ಏನು ಸಂಬಂಧ, ಯಾರಾದರೂ ಹೇಳಬಲ್ಲಿರಾ?. ದೇಶವನ್ನು ಜೋಡಿಸಿದವರು ಯಾರು, ವಿಭಜನೆ ಮಾಡಿದವರು ಯಾರು ಎಂಬುದು ಜನತೆಗೆ ಗೊತ್ತಿದೆ. ಇದೀಗ ಕಾಂಗ್ರೆಸ್ ಭಾರತ್ ಜೋಡೋ (Bharat Jodo Yatra) ಯಾತ್ರೆ ಮಾಡುತ್ತಿದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಜನರಿಂದ 2.69 ಕೋಟಿ ಸಂಗ್ರಹ, ಕೇವಲ 29 ಲಕ್ಷ ಬಳಕೆ – ಅಯ್ಯೂಬ್‌ ವಿರುದ್ಧ ಇಡಿ ಚಾರ್ಜ್‌

    ಜಾತಿ ಹೆಸರಿನಲ್ಲಿ ಈ ದೇಶವನ್ನು ಇಬ್ಭಾಗ ಮಾಡಲಾಯಿತು, ಅದೇ ರೀತಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಎಂದು ಒಡೆಯಲು ಮುಂದಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಈ ದೇಶವನ್ನು ಜೋಡಿಸುವ ಕೆಲಸ ಮಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪಥ ರಸ್ತೆ ಮಾಡಿಸುವ ಮೂಲಕ ದೇಶವನ್ನು ಜೋಡಣೆ ಮಾಡಿದವರು ವಾಜಪೇಯಿ. ಈಗ ಅದೇ ರಸ್ತೆಯಲ್ಲಿ ರಾಹುಲ್ ಗಾಂಧಿ  (Rahul Gandhi) ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದಕ್ಷಿಣ ಹಾಗೂ ಉತ್ತರವನ್ನು ಮೋದಿ (Narendra Modi) ಜೋಡಿಸುತ್ತಿದ್ದಾರೆ. ಒಂದು ಕಡೆ ಡಿಕೆಶಿ (D.K Shivakumar), ಇನ್ನೊಂದು ಕಡೆ ಸಿದ್ದು, ಇಬ್ಬರನ್ನೂ ಮುಗಿಸಲು ಖರ್ಗೆ ಬಣ ರೆಡಿಯಾಗಿದೆ. ಖರ್ಗೆಯನ್ನು ಸೋಲಿಸಲು ಪ್ರಯತ್ನಿಸಿದ್ದು ಸಿದ್ದರಾಮಯ್ಯ (Siddaramaiah). ಆದರೆ, ಇದೀಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯನವರನ್ನು ಓಡಿಸಿದರು. ಬಾದಾಮಿ ಜನ ಈ ಬಾರಿ ನಮ್ಮ ಕ್ಷೇತ್ರಕ್ಕೆ ಬರಬೇಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದಾರೆ. ಸಿದ್ದರಾಮಯ್ಯ ಈಗ ಜಾಗ ಹುಡುಕುವ ಯಾತ್ರೆ ಮಾಡಬೇಕು ಎಂದರು. ಇದನ್ನೂ ಓದಿ: 19 ವರ್ಷದ ಯುವತಿ ಅನುಮಾನಸ್ಪದ ಸಾವು- ಅತ್ಯಾಚಾರ, ಕೊಲೆ ಶಂಕೆ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಯವರಿಗೆ ನನ್ನ ಕಂಡರೆ ಭಯ; ಶತ್ರುಗಳಿದ್ದಷ್ಟು ನಾವು ಹೆಚ್ಚು ಬಲಶಾಲಿಗಳಾಗ್ತೀವಿ – ಸಿದ್ದು

    ಬಿಜೆಪಿಯವರಿಗೆ ನನ್ನ ಕಂಡರೆ ಭಯ; ಶತ್ರುಗಳಿದ್ದಷ್ಟು ನಾವು ಹೆಚ್ಚು ಬಲಶಾಲಿಗಳಾಗ್ತೀವಿ – ಸಿದ್ದು

    ಚಿತ್ರದುರ್ಗ: ಬಿಜೆಪಿಯವರಿಗೆ ನನ್ನ ಕಂಡರೆ ಭಯ. ಶತ್ರುಗಳಿದ್ದಷ್ಟೂ ನಾವು ಬಲಶಾಲಿಗಳಾಗ್ತೀವಿ ಎಂದು ಬಿಜೆಪಿ (BJP) ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗುಡುಗಿದ್ದಾರೆ.

    ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಂಡಿದ್ದ ವೇಳೆ ಮಾತನಾಡಿದ ಅವರು, ಶತ್ರುಗಳಿದ್ದಷ್ಟು ಹೆಚ್ಚು ಬಲಶಾಲಿಗಳಾಗುತ್ತೇವೆ. ಕಡಿಮೆ ಶತ್ರುಗಳಿದ್ದರೆ ಕಡಿಮೆ ಬಲಶಾಲಿಗಳಾಗುತ್ತೇವೆ. ಶತ್ರುಗಳು ಇಲ್ಲದಿದ್ದರೆ ಬಲಶಾಲಿಗಳಾಗಲ್ಲ ಎಂದು ಟಾಂಗ್‌ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ 80 ಸ್ಥಾನ ಗಳಿಸಿದ್ರೆ ನನ್ನ ಬೆರಳು ಕತ್ತರಿಸಿ ಕೊಡುತ್ತೇನೆ: ಶಿವನಗೌಡ ನಾಯಕ

    ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಭಯದಿಂದ ಮಾತಾಡುತ್ತಿದ್ದಾರೆ. ಅದಕ್ಕೆಲ್ಲ ಉತ್ತರ ಕೊಡಕ್ಕಾಗುತ್ತಾ? ಏನಾದ್ರೂ ಸಮಸ್ಯೆ ಇಟ್ಟುಕೊಂಡು ಮಾತನಾಡಬೇಕಲ್ಲವಾ? ಭ್ರಷ್ಟಾಚಾರ ವ್ಯಾಪಕವಾಗಿದ್ದು, ಅದರ ಬಗ್ಗೆ ಚರ್ಚೆ ಮಾಡಬೇಕು. ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಬಾರದು. ಜನರ ಸೇವೆ ಮಾಡೋದಲ್ವಾ ರಾಜಕಾರಣ ಅಂದ್ರೆ. ನನ್ನ ಕಂಡರೂ ಭಯ ಅವರಿಗೆ. ಎಲ್ಲ ವಿಷಯದಲ್ಲೂ ಭಯ ಇದೆ ಅವರಿಗೆ ಎಂದು ಲೇವಡಿ ಮಾಡಿದ್ದಾರೆ.

    ನಮ್ಮಲ್ಲಿ ಹೊಂದಾಣಿಕೆ ಇಲ್ಲ ಅಂತಾರೆ. ಅವರಲ್ಲಿ ಹೊಂದಾಣಿಕೆ ಇದೆಯಾ? ಯತ್ನಾಳ್, ವಿಶ್ವನಾಥ್ ಅವರು ಬಾಯಿಗೆ ಬಂದಂತೆ ಮಾತಾಡ್ತಾರೆ. ಯಡಿಯೂರಪ್ಪ ಮಗನೇ ಸಬ್‌ ಇನ್ಸ್‌ಪೆಕ್ಟರ್‌ ಹಗರಣದಲ್ಲಿ ಪಾಲುದಾರ ಅಂತ ಯತ್ನಾಳ್ ಹೇಳಿಲ್ವಾ? ಭಂಡರಿಗೆ ಏನು ಒತ್ತಡ ಹಾಕೋದು. ಯಡಿಯೂರಪ್ಪ ಇಲ್ಲದೆ ಇವರಿಗೆ ಪ್ರಚಾರಕ್ಕೆ ಹೋಗಕ್ಕಾಗಲ್ಲ. ಯಡಿಯೂರಪ್ಪ ಬಿಟ್ಟರೆ ಲೀಡರ್ ಶಿಪ್ ಇಲ್ಲ ಬಿಜೆಪಿಯವರಿಗೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವಧಿಯಲ್ಲಿ ಶಾಲಾ-ಕಾಲೇಜುಗಳಲ್ಲಿಯೇ ಡ್ರಗ್ಸ್ ಸಿಗ್ತಿತ್ತು: ಕಟೀಲ್

    ರಾಹುಲ್‌ ಪಾದಯಾತ್ರೆ ಡ್ರಾಮಾ ಎಂಬ ಶ್ರೀರಾಮುಲು ಟೀಕೆ ಕುರಿತು ಪ್ರತಿಕ್ರಿಯಿಸಿ, ಶ್ರೀರಾಮುಲುಗೆ ಯಾವಾಗಲೂ ಹೋರಾಟ ಚಳವಳಿ ಮಾಡಿ ಗೊತ್ತಿಲ್ಲ. ಶ್ರೀರಾಮುಲು ಹೆಸರು ಏಕೆ ಹೇಳ್ತೀರಿ? ರಾಮುಲು, ರೆಡ್ಡಿ ಬ್ರದರ್ಸ್ ಜೊತೆ ಬಂದಿದ್ದು. ಬಳ್ಳಾರಿಯಿಂದ ಮುಂದೆ ಹೋಗ್ತೀವಿ, ಎಲ್ಲ ಹೊಸ ದಿನಗಳೇ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿದ್ರೆ ಮಾಡುತ್ತಾ ಜನರನ್ನು ಸಾಲದ ಶೂಲಕ್ಕೇರಿಸಿದ್ದು ಸಿದ್ದರಾಮಯ್ಯ – BJP ತಿರುಗೇಟು

    ನಿದ್ರೆ ಮಾಡುತ್ತಾ ಜನರನ್ನು ಸಾಲದ ಶೂಲಕ್ಕೇರಿಸಿದ್ದು ಸಿದ್ದರಾಮಯ್ಯ – BJP ತಿರುಗೇಟು

    ಬೆಂಗಳೂರು: ಅಧಿಕಾರದುದ್ದಕ್ಕೂ ನಿದ್ರೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ, ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಸಿದ್ದರಾಮಯ್ಯ (Siddaramaiah) ಎಂದು ಬಿಜೆಪಿ (BJP) ತಿರುಗೇಟು ನೀಡಿದೆ.

    ಸಾಲರಾಮಯ್ಯ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್ (Tweet) ಮಾಡಿರುವ ಬಿಜೆಪಿ, ಭಾರತ್ ಜೋಡೋ ಯಾತ್ರೆ (Bharat Jodo Yatra) ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದೆ. ಯುಪಿಎ (UPA) ಆಡಳಿತದಲ್ಲಿ ಭಯೋತ್ಪಾದಕ ದಾಳಿಗಳು ನಡೆದರೂ ಉಗ್ರವಾದದ ವಿರುದ್ಧ ಕ್ರಮ ಜರುಗಿಸಲಿಲ್ಲ. ಇದು ಕಾಂಗ್ರೆಸ್‌ನ (Congress) ನಿಜವಾದ ಗುಣ – ಇದು ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಎಂದು ಹೇಳಿದೆ. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್

    ಬಿಜೆಪಿ ಟ್ವೀಟ್‌ನಲ್ಲಿ ಏನಿದೆ?
    ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಾವು ಮಾಡಿದ ಸಾಲದ ಬಗ್ಗೆ ಜಾಣ ಮರೆವು ಏಕೆ? ನಿಮ್ಮ ಸಾಲದ ಇತಿಹಾಸ ತೆರೆದಿಡುತ್ತಿದ್ದೇವೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದ ಜನತೆಗೆ ಸಿಹಿ ಸುದ್ದಿ – ದೆಹಲಿಗೆ ನಿತ್ಯ ವಿಮಾನ

    ನಿಮಗೆ ಮರೆತು ಹೋಗಿರಬಹುದು, ರಾಜ್ಯದ ಜನತೆ ಮರೆತಿಲ್ಲ. ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ? ಕಾಂಗ್ರೆಸ್ಸಿನ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ 44,769 ರೂ. ಸಾಲದ ಹೊರೆ ಹೊರೆಸಿದ್ದನ್ನು ಮರೆತಿರಾ? ಮೋದಿ ಸರ್ಕಾರ ಸಾಲ ಮಾಡಿ ತನ್ನ ಪರಿವಾರದ ಜೋಳಿಗೆ ತುಂಬಿಸಿಕೊಂಡಿಲ್ಲ `ನಕಲಿ ಗಾಂಧಿ (Gandhi Family) ಪರಿವಾರದಂತೆ. ದೇಶವಿಂದು ವೈಭವದಿಂದ ಕಂಗೊಳಿಸುತ್ತಿದೆ, ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚೇಕೆ? ಎಂದು ಕುಟುಕಿದೆ. ಅಲ್ಲದೇ ಸಿದ್ದರಾಮಯ್ಯ ಅವರ ಅವಧಿಯಲ್ಲಾದ ಸಾಲದ ವಿವರಣೆಯನ್ನೂ ನೀಡಿದೆ.

    ಅವಧಿ- ಎಷ್ಟು ಸಾಲ?
    2013 – 20 ಸಾವಿರ ಕೋಟಿ
    2014 – 21 ಸಾವಿರ ಕೋಟಿ
    2015 – 21 ಸಾವಿರ ಕೋಟಿ
    2016 – 28 ಸಾವಿರ ಕೋಟಿ
    2017 – 35 ಸಾವಿರ ಕೋಟಿ

    Live Tv
    [brid partner=56869869 player=32851 video=960834 autoplay=true]

  • ಭಾರತ್‌ ಜೋಡೋ ಪಾದಯಾತ್ರೆ ನಡುವೆ ಸಿಲುಕಿದ್ದ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ರಾಹುಲ್‌ ಗಾಂಧಿ

    ಭಾರತ್‌ ಜೋಡೋ ಪಾದಯಾತ್ರೆ ನಡುವೆ ಸಿಲುಕಿದ್ದ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ರಾಹುಲ್‌ ಗಾಂಧಿ

    ಚಿತ್ರದುರ್ಗ: ಕೇಂದ್ರದ ಬಿಜೆಪಿ ಆಡಳಿತದ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ಭಾರತ್‌ ಜೋಡೋ ಯಾತ್ರೆ (Bharat Jodo Yatra) ನಡೆಯುತ್ತಿದೆ. ಈ ಪಾದಯಾತ್ರೆ ಸದ್ಯ ಕರ್ನಾಟಕದಲ್ಲಿ ಮುಂದುವರಿದಿದ್ದು, ರಾಜ್ಯದಲ್ಲೂ ಪಾದಯಾತ್ರೆಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದೆ. ಪಾದಯಾತ್ರೆಯುದ್ದಕ್ಕೂ ಹಲವಾರು ವಿಶೇಷತೆಗಳೊಂದಿಗೆ ರಾಹುಲ್‌ ಗಾಂಧಿಯವರು ಗಮನ ಸೆಳೆಯುತ್ತಿದ್ದಾರೆ.

    ರಾಹುಲ್‌ ಗಾಂಧಿ ನೇತೃತ್ವದ ಪಾದಯಾತ್ರೆಯು ರಾಜ್ಯಕ್ಕೆ ಬಂದು ಈವರೆಗೆ 11 ದಿನವಾಗಿದೆ. ಸದ್ಯ ಪಾದಯಾತ್ರೆಯು ಚಿತ್ರದುರ್ಗದ (Chitradurga) ಚಳ್ಳಕೆರೆ ಭಾಗದಲ್ಲಿ ಸಾಗುತ್ತಿದೆ. ಈ ವೇಳೆ ಚಳ್ಳಕೆರೆ ಹೊರಭಾಗದಿಂದ ಬರುತ್ತಿದ್ದ ಆಂಬುಲೆನ್ಸ್‌ ಪಾದಯಾತ್ರೆ ನಡುವೆ ಸಿಲುಕಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ರಾಹುಲ್‌ ಗಾಂಧಿ ಅವರು ತಕ್ಷಣ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಆಂಬುಲೆನ್ಸ್‌ ಸುಗಮವಾಗಿ ಹೋಗಲು ದಾರಿ ಬಿಟ್ಟರು. ಇದನ್ನೂ ಓದಿ: ರಾಹುಲ್ ಗಾಂಧಿ ಪಾದಕ್ಕೂ ಬಿಎಸ್‍ವೈ ಸಮ ಇಲ್ಲ ಎಂದು ನಾನು ಹೇಳಲ್ಲ: ಸಿದ್ದರಾಮಯ್ಯ

    ಪಾದಯಾತ್ರೆಯಲ್ಲಿ ರಾಹುಲ್‌ ಗಾಂಧಿ ಅವರೊಂದಿಗೆ ವಿದ್ಯಾರ್ಥಿಗಳು ಸಹ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳ ಕೈ ಹಿಡಿದು ರಾಹುಲ್‌ ಪಾದಯಾತ್ರೆ ನಡೆಸಿದರು. ಈ ವೇಳೆ ಮಕ್ಕಳಿಗೆ ರಾಹುಲ್‌ ಚಾಕೊಲೇಟ್‌ ನೀಡಿದರು.

    ಪಾದಯಾತ್ರೆಯಲ್ಲಿ ಬಾಲಕಿಯೊಬ್ಬಳು ಭರತನಾಟ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಳು. ಬಾಲಕಿಯ ಭರತನಾಟ್ಯಕ್ಕೆ ರಾಹುಲ್‌ ಮನಸೋತರು. ನಾನಾ ವಿಶೇಷತೆಗಳೊಂದಿಗೆ ಪಾದಯಾತ್ರೆ ಸಾಗುತ್ತಿದೆ. ಇದನ್ನೂ ಓದಿ: ಕನಸಲ್ಲಿ ಬರುತ್ತಿದ್ದ ವಿಗ್ರಹಗಳು ಕಣ್ಣೆದುರೇ ಪ್ರತ್ಯಕ್ಷ

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಯಾತ್ರೆಯಲ್ಲಿ ರಸ್ತೆ ಮೇಲೆ ರಾಹುಲ್, ಡಿಕೆಶಿ ಪುಷ್-ಅಪ್ಸ್‌

    ಭಾರತ್ ಜೋಡೋ ಯಾತ್ರೆಯಲ್ಲಿ ರಸ್ತೆ ಮೇಲೆ ರಾಹುಲ್, ಡಿಕೆಶಿ ಪುಷ್-ಅಪ್ಸ್‌

    ಬೆಂಗಳೂರು: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರು, ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆಗೆ ನಡುರಸ್ತೆಯಲ್ಲಿ ಪುಷ್-ಅಪ್ಸ್‌ (Push-Ups) ಮಾಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್ (KC Venugopal) ಹಾಗೂ ಚಿಕ್ಕ ಬಾಲನೋರ್ವ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ರಸ್ತೆ ಮಧ್ಯೆ ಪುಷ್-ಅಪ್ಸ್ ಮಾಡಿದ್ದಾರೆ. ಈ ಫೋಟೋವನ್ನು ರಣದೀಪ್ ಸುರ್ಜೆವಾಲಾ (Randeep Surjewala) ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಒಂದು ಪೂರ್ತಿ ಮತ್ತೆ ಎರಡು ಅರ್ಧಂಬರ್ಧ ಪುಷ್-ಅಪ್ಸ್‌ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 2ನೇ ದಿನವೂ ಒತ್ತುವರಿ ತೆರವು- ಕೆಆರ್‌ಪುರ, ಮಹದೇವಪುರದಲ್ಲಿ ಆಪರೇಷನ್

    ಈ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಕೈ ಹಿಡಿದುಕೊಂಡು ರಾಹುಲ್ ಗಾಂಧಿ ರಸ್ತೆಯಲ್ಲಿ ಓಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಂತರ ಪಕ್ಷದ ಧ್ವಜ ಹಿಡಿದುಕೊಂಡು ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಓಡಿದ್ದರು. ಇದನ್ನೂ ಓದಿ: ಊಟ, ತಿಂಡಿ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ 63ರ ವೃದ್ಧನಿಂದ ಅತ್ಯಾಚಾರ

    ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು (Sonia Gandhi) ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಿದ್ದರು. ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆ ವೇಳೆ ತಾಯಿ ಸೋನಿಯಾ ಗಾಂಧಿಯವರ ಶೂಲೇಸ್‍ಗಳನ್ನು ರಾಹುಲ್ ಗಾಂಧಿ ಕಟ್ಟುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ವಾಜಪೇಯಿ ನಿರ್ಮಾಣ ಮಾಡಿದ ರಸ್ತೆಯಲ್ಲಿ ಭಾರತ ಜೋಡೋ ಮಾಡ್ತಿದ್ದಾರೆ: ಕಟೀಲ್ ಕಿಡಿ

    ವಾಜಪೇಯಿ ನಿರ್ಮಾಣ ಮಾಡಿದ ರಸ್ತೆಯಲ್ಲಿ ಭಾರತ ಜೋಡೋ ಮಾಡ್ತಿದ್ದಾರೆ: ಕಟೀಲ್ ಕಿಡಿ

    ಹಾವೇರಿ: ಕರ್ನಾಟಕದಲ್ಲಿ (Karnataka) ಸಿದ್ದರಾಮಯ್ಯ (Siddaramaiah) ಟಿಪ್ಪು ಜಯಂತಿ ಮಾಡಿ ಹಿಂದೂ ಮುಸ್ಲಿಮರನ್ನು ಒಡೆದರು. ವೀರಶೈವ ಲಿಂಗಾಯತ ಸಮಾಜವನ್ನು ಒಡೆದರು. ಧರ್ಮ ಮತಗಳನ್ನು ಒಡೆದವರು ಕಾಂಗ್ರೆಸ್ (Congress). ಈಗ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಭಾರತ್ ಜೋಡೋ (Bharat Jodo Yatra) ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಹಾವೇರಿ (Haveri) ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಪೇಜ್ ಪ್ರಮುಖರು, ಮೇಲ್ಪಟ್ಟ ಪದಾಧಿಕಾರಿ ಹಾಗೂ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಗರೀಬಿ ಹಠಾವೋ ಅಂದರು. ಜನರು ಕಾಂಗ್ರೆಸ್ ಕುಟುಂಬ ಹಠಾವೋ, ಗಾಂಧಿ ಕುಟುಂಬ ಹಠಾವೋ ಅಂತಿದ್ದಾರೆ. ಕಾಂಗ್ರೆಸ್‌ನವರು ಭಾರತ್ ಜೋಡೋ ನಾಟಕ ಪ್ರಾರಂಭ ಮಾಡಿದ್ದಾರೆ. ಅದು ಭಾರತ್ ಜೋಡೋ ಅಲ್ಲ, ಭಾರತ್ ತೋಡೋ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಇವತ್ತು ನಾಶ ಆಗ್ತಿದೆ. ಜೋಡೋಗಳ ಮಧ್ಯೆ ಜಗಳಗಳು ಜಾಸ್ತಿ ಆಗ್ತಿದೆ. ರಾಹುಲ್ ಗಾಂಧಿ ಯಾತ್ರೆ ಪ್ರಾರಂಭ ಆಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಜಗಳವೂ ಜೋರಾಗಿದೆ. ಸಿದ್ದರಾಮಯ್ಯ ಮೀಟಿಂಗ್‌ಗೆ ಡಿಕೆಶಿ ಹೋಗೋದಿಲ್ಲ, ಡಿಕೆಶಿ ಮೀಟಿಂಗ್‌ಗೆ ಸಿದ್ದರಾಮಯ್ಯ ಹೋಗೋದಿಲ್ಲ. ಪಾದಯಾತ್ರೆಯಲ್ಲಿ ಡಿಕೆಶಿ ದಿಲ್ಲಿಗೆ, ಸಿದ್ದರಾಮಣ್ಣ ಗಲ್ಲಿಗೆ ಹೋಗುತ್ತಾರೆ. ರಾಹುಲ್ ಗಾಂಧಿ ಕೈ ಹಿಡ್ಕೊಂಡು ಓಡ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲೇ ನಿಲ್ಲಿಸುತ್ತೇವೆ- ಸಿದ್ದರಾಮಯ್ಯಗೆ ಬಿಎಸ್‍ವೈ ಎಚ್ಚರಿಕೆ

     

    ಡಿಕೆಶಿಗೆ ಅಲ್ಲಿ ಟೆನ್ಷನ್ ಶುರುವಾಗಿದೆ. ಚುನಾವಣೆಗೆ ಮುಂಚೆ ಕಾಂಗ್ರೆಸ್ ಎರಡು ಹೋಳಾಗುತ್ತದೆ ಎಂದು. ಸಿದ್ದರಾಮಯ್ಯ ಪಾರ್ಟಿ, ಡಿಕೆಶಿ ಪಾರ್ಟಿ ಎರಡು ಹೋಳಾಗುತ್ತೆ. ಇನ್ನೊಂದು ಮೂರನೇ ಶಕ್ತಿ ಕೇಂದ್ರ ನಿರ್ಮಾಣವಾಗುತ್ತಿದೆ. ಅದ್ಯಾವುದು ಅಂದರೆ ಖರ್ಗೆ ಗ್ಯಾಂಗ್. ಖರ್ಗೆ ಅಧ್ಯಕ್ಷರಾದ್ಮೇಲೆ ಸಿದ್ದರಾಮಯ್ಯನಿಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಯಾಕಂದ್ರೆ ಖರ್ಗೆಯನ್ನು ಮುಖ್ಯಮಂತ್ರಿ ಮಾಡಲಿಕ್ಕೆ ಅಡ್ಡಗಾಲಿಟ್ಟು, ಖರ್ಗೆಯನ್ನು ಸೋಲಿಸಿದ್ದವರೇ ಈ ಸಿದ್ದರಾಮಯ್ಯ. ಈ ಬಾರಿ ಸಿದ್ದರಾಮಯ್ಯನನ್ನು ಖರ್ಗೆ ಸೋಲಿಸುತ್ತಾರೆ. ಸಿದ್ದರಾಮಯ್ಯ ಕಾಡಿಗೆ, ಡಿಕೆಶಿ ಬಂಡೆ ಒಡೆಯಲಿಕ್ಕೆ, ಬಿಜೆಪಿ ಅಧಿಕಾರಕ್ಕೆ ಎಂದು ಹೇಳಿದರು.

    ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನ ಸೇರದೇ ಇದ್ದು, ಖುರ್ಚಿಗಳು ಖಾಲಿ ಖಾಲಿಯಿದ್ದವು. ಆದರೂ ಅರ್ಧ ಗಂಟೆಗೂ ಅಧಿಕ ಸಮಯ ಜೋಷ್‌ನಲ್ಲಿಯೇ ನಳೀನ್ ಕುಮಾರ್ ಕಟೀಲ್ ಭಾಷಣ ಮಾಡಿದರು. ಇದನ್ನೂ ಓದಿ: BJP ಸರ್ಕಾರವನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಮೋದಿ ಒಳ್ಳೆಯ ನಾಟಕವಾಡುತ್ತಾರೆ: ಸಿದ್ದರಾಮಯ್ಯ

    ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಮೋದಿ ಒಳ್ಳೆಯ ನಾಟಕವಾಡುತ್ತಾರೆ: ಸಿದ್ದರಾಮಯ್ಯ

    ರಾಯಚೂರು: ಬಿಜೆಪಿ (BJP) ಅಧಿಕಾರಕ್ಕೆ ಬಂದಾಗಿನಿಂದ ಸಾಮಾನ್ಯ ಜನರ ಬದುಕು ಮೂರಾಬಟ್ಟೆಯಾಗಿದೆ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಮೋದಿ (Narendra Modi) ಒಳ್ಳೆಯ ನಾಟಕವಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಹಿನ್ನೆಲೆ ರಾಯಚೂರಿನಲ್ಲಿ (Raichur) ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಚ್ಚೇ ದಿನ್ ಅಂದ್ರು, ಎಲ್ಲಿದೆ ಅಚ್ಚೆ ದಿನ್ ಎಲ್ಲಾ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ರಾಜ್ಯದಲ್ಲಿ 2ನೇ ಸರ್ಕಾರಿ ಗೋ ಶಾಲೆ ಉದ್ಘಾಟಿಸಿದ ಬಿ.ಸಿ ನಾಗೇಶ್

    ರಾಹುಲ್ ಗಾಂಧಿ ಒಬ್ಬರೇ ಪಾದಯಾತ್ರೆ ಬಗ್ಗೆ ರಾಜಕೀಯವಾಗಿ ತೀರ್ಮಾನ ಮಾಡಿಲ್ಲ. ಉದಯಪುರದಲ್ಲಿ ಎಐಸಿಸಿ ಚಿಂತನ ಮಂಥನ ಸಭೆಯಲ್ಲಿ ಪಾದಯಾತ್ರೆ ಬಗ್ಗೆ ತೀರ್ಮಾನ ಮಾಡಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ RSS ಕೈಗೊಂಬೆ- ಸಿದ್ದರಾಮಯ್ಯ ವಾಗ್ದಾಳಿ

    ರಾಯಚೂರಿಗೆ ರಾಹುಲ್ ಗಾಂಧಿ ಅಕ್ಟೋಬರ್ 21, 22ಕ್ಕೆ ಪಾದಯಾತ್ರೆಗೆ ಬರಲಿದ್ದಾರೆ. ಪಾದಯಾತ್ರೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಭಾಗವಹಿಸುತ್ತಿದ್ದೇವೆ. ಜೋಡೋ ಯಾತ್ರೆ ಹಿನ್ನೆಲೆ ಹೆಚ್ಚು ಜನ ಸಾರ್ವಜನಿಕ ಸಭೆ ಹಾಗೂ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಸಿದ್ದರಾಮಯ್ಯ ಕಾರ್ಯಕರ್ತರಲ್ಲಿ ಕೇಳಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ತೆರಳುತ್ತಿದ್ದ ಬಸ್ ಅಪಘಾತ

    ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ತೆರಳುತ್ತಿದ್ದ ಬಸ್ ಅಪಘಾತ

    ಚಿಕ್ಕಬಳ್ಳಾಪುರ: ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಕಾಂಗ್ರೆಸ್ ಕಾರ್ಯಕರ್ತರನ್ನು (Congress Worker) ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾದ ಘಟನೆ ಚಿಕ್ಕಬಳ್ಳಾಪುರ-ಗೌರಿಬಿದನೂರು (Chikkaballapura-Gowribidnur) ಮಾರ್ಗದ ಕಣಿವೆಯಲ್ಲಿ ನಡೆದಿದೆ.

    ಕಣಿವೆ ತಿರುವು ಪ್ರದೇಶದಲ್ಲಿ ಒವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬಂದ ಕೆಎಸ್‍ಆರ್‌ಟಿಸಿ (KSRTC) ಬಸ್‍ಗೆ ಮುಖಾಮುಖಿ ಡಿಕ್ಕಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಚಿತ್ರದುರ್ಗದ (Chitradurga) ಕಾಂಗ್ರೆಸ್ ಪಾದಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದೊಯ್ಯಲಾಗುತ್ತಿತ್ತು. ಅದೃಷ್ಟವಶಾತ್ ಎರಡು ಬಸ್‍ನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ

    ಘಟನೆಯಲ್ಲಿ ಖಾಸಗಿ ಬಸ್‍ನ ಮುಂಭಾಗದ ಗಾಜು ಸಂಪೂರ್ಣ ಪುಡಿ, ಪುಡಿಯಾಗಿದೆ. ಘಟನೆ ನಂತರ ಬೇರೋಂದು ಬಸ್‍ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಗೆ ತೆರಳಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ – ಪೊಲೀಸ್ ಮಹಾಸಂಘ ಸೇರಿ ಎಲ್ಲ ಅರ್ಜಿಗಳು ವಜಾ

    Live Tv
    [brid partner=56869869 player=32851 video=960834 autoplay=true]