Tag: bharat jodo yatra

  • ಮಕ್ಕಳೊಂದಿಗೆ ಕೇರಳದ ಬೀದಿಗಳಲ್ಲಿ ಫುಟ್‍ಬಾಲ್ ಆಡಿದ ರಾಹುಲ್

    ಮಕ್ಕಳೊಂದಿಗೆ ಕೇರಳದ ಬೀದಿಗಳಲ್ಲಿ ಫುಟ್‍ಬಾಲ್ ಆಡಿದ ರಾಹುಲ್

    ತಿರುವನಂತಪುರಂ: ರಾಜಸ್ಥಾನದಲ್ಲಿ (Rajasthan) ರಾಜಕೀಯ ಬಿಕ್ಕಿಟ್ಟು ಎದುರಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕೇರಳದ (Kerala) ಬೀದಿಗಳಲ್ಲಿ ಮಕ್ಕಳೊಂದಿಗೆ ಫುಟ್‍ಬಾಲ್ ಆಟ ಆಡಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಾವು ಈ ಮಕ್ಕಳ ಭವಿಷ್ಯವನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲಾ ಕಷ್ಟಗಳನ್ನು ಎದುರಿಸಬೇಕು ಎಂದು ವೀಡಿಯೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಗೋವಾಕ್ಕೆ ಚೋರ್ಲಾ ಘಾಟ್ ಮೂಲಕ ತೆರಳುವ ರಾಜ್ಯದ ಭಾರೀ ವಾಹನಗಳಿಗೆ ತಡೆ

    40 ಸೆಕೆಂಡ್ ಇರುವ ವೀಡಿಯೋದಲ್ಲಿ ನೇರಳೆ ಬಣ್ಣದ ಟೀ ಶರ್ಟ್ ಮತ್ತು ಬಿಳಿ ಬಣ್ಣದ ಶಾಟ್ರ್ಸ್ ಧರಿಸಿರುವ ಮಕ್ಕಳೊಂದಿಗೆ ಪಾಲಕ್ಕಾಡ್‍ನ (Palakkad) ಬೀದಿಗಳಲ್ಲಿ ಫುಟ್‍ಬಾಲ್ ಆಡಿರುವುದನ್ನು ಕಾಣಬಹುದಾಗಿದೆ. ಮಕ್ಕಳೊಂದಿಗೆ (Children) ಕಾಲ್ನಡಿಗೆಯಲ್ಲಿ ಮಾತನಾಡುತ್ತಾ, ಹುಡುಗನೊಬ್ಬನಿಗೆ ತಾವು ಎಸೆಯುವ ಬಾಲ್ ಹಿಡಿದುಕೊಳ್ಳುವಂತೆ ತಿಳಿಸಿ ಬಾಲ್ ಅನ್ನು ಎಸೆದು ಆಟವಾಡಿ ಸಂತೋಷಪಟ್ಟಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಈ ವೀಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಸಾಕಷ್ಟು ಲೈಕ್ಸ್ ಬಂದಿದೆ.

    150 ದಿನಗಳಲ್ಲಿ 3,570 ಕಿ.ಮೀವರೆಗೂ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹೆಜ್ಜೆಹಾಕಲಿದ್ದು, ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ಅಭಿಯಾನ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಇದನ್ನೂ ಓದಿ: ತಾಲೂಕು, ಗ್ರಾಮ ಮಟ್ಟದಲ್ಲೂ `PayCM’ ಅಭಿಯಾನ- ಕಾಂಗ್ರೆಸ್ ನಿಂದ ಮಾಸ್ಟರ್ ಪ್ಲ್ಯಾನ್

    Live Tv
    [brid partner=56869869 player=32851 video=960834 autoplay=true]

  • ಗಾಂಧಿ ಕುಟುಂಬದ ಯಾರೊಬ್ಬರೂ AICC ಅಧ್ಯಕ್ಷರಾಗಬಾರದೆಂದು ರಾಹುಲ್ ನಿರ್ಧರಿಸಿದ್ದಾರೆ – ಅಶೋಕ್ ಗೆಹ್ಲೋಟ್

    ಗಾಂಧಿ ಕುಟುಂಬದ ಯಾರೊಬ್ಬರೂ AICC ಅಧ್ಯಕ್ಷರಾಗಬಾರದೆಂದು ರಾಹುಲ್ ನಿರ್ಧರಿಸಿದ್ದಾರೆ – ಅಶೋಕ್ ಗೆಹ್ಲೋಟ್

    ನವದೆಹಲಿ/ತಿರುವನಂತಪುರಂ: ಗಾಂಧಿ ಕುಟುಂಬದ (Gandhi Family) ಯಾರೊಬ್ಬರೋ ಕಾಂಗ್ರೆಸ್ (Congress) ಮುಖ್ಯಸ್ಥರಾಗಬಾರದೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸ್ಪಷ್ಟಪಡಿರುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ತಿಳಿಸಿದ್ದಾರೆ.

    ಭಾರತ್ ಜೋಡೋ ಯಾತ್ರೆ (Bharat Jodo Yatra) ಯಲ್ಲಿ ಪಾಲ್ಗೊಂಡಿರುವ ಸಿಎಂ (Rajasthan Chief Minister), ಕೇರಳದಲ್ಲಿ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಎಲ್ಲರ ಆಶಯದಂತೆ ಕಾಂಗ್ರೆಸ್ (Congress) ಅಧ್ಯಕ್ಷರಾಗಿ ಮರಳಲು ಸಾಕಷ್ಟು ಬಾರಿ ಅವರಲ್ಲಿ ವಿನಂತಿಸಿದೆ. ಆದರೆ ರಾಹುಲ್ ಜೀ ಅವರು, ನಾನು ಎಲ್ಲರ ಆಶಯವನ್ನು ಗೌರವಿಸುತ್ತೇನೆ. ಆದರೆ ಒಂದೇ ಒಂದು ಕಾರಣಕ್ಕಾಗಿ ಗಾಂಧಿ ಕುಟುಂಬೇತರರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ನಿರ್ಧರಿಸಿದ್ದೇನೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    ಬಿಜೆಪಿಯ (BJP) ಸ್ವಜನ ಪಕ್ಷಪಾತದ ಆರೋಪವೇ ರಾಹುಲ್ ಗಾಂಧಿ ಈ ನಿರ್ಧಾರಕ್ಕೆ ಕಾರಣ ಎಂದು ಪ್ರಶ್ನಿಸಿದ ಮಾಧ್ಯಮಗಳಿಗೆ ಉತ್ತರಿಸಿದ ಅವರು, 2019 ರಲ್ಲಿ ಯಾವುದೇ ಹುದ್ದೆಗಳಿಲ್ಲದೇ ಕೆಲಸ ಮಾಡುವುದಾಗಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ತಿಳಿಸಿದ್ದರು. ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ

    ಈ ಹಿಂದೆ ಉದಯಪುರದಲ್ಲಿ ನಡೆದಿದ್ದ ಕಾಂಗ್ರೆಸ್‌ನ ಚಿಂತನಾ ಶಿಬಿರದಲ್ಲಿ `ಒಬ್ಬ ವ್ಯಕ್ತಿ – ಒಂದು ಹುದ್ದೆ’ ನಿಯಮವನ್ನೂ ಅಳವಡಿಸಿಕೊಂಡಿದೆ. ಇದನ್ನೂ ಓದಿ: ಬೆಂಗಳೂರು ಬಳಿಕ ಈಗ ಜಿಲ್ಲೆಗಳಿಗೂ ನುಗ್ಗಿದ ಬುಲ್ಡೋಜರ್‌ – ವಿಜಯನಗರದಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್‌

    ಅಶೋಕ್ ಗೆಹ್ಲೋಟ್ ಸಹ ನಿನ್ನೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

    ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ (Congress Presidential Election) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ಅಕ್ಟೋಬರ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನಾಂಕವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಲ್ಲಿ, ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ – ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್

    ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ – ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್

    ತಿರುವನಂತಪುರಂ: ಸಾವರ್ಕರ್ (Savarkar) ಅವರನ್ನು ಸ್ವಾತಂತ್ರ್ಯ ಹೋರಾಟಗಾರ (Freedom Fighter) ಎಂದು ಪರಿಗಣಿಸದ ಕಾಂಗ್ರೆಸ್ (Congress) ಇಂದು ಒಂದು ನಿರೀಕ್ಷೆಯೇ ಮಾಡಿರದ ಪ್ರಮಾದವನ್ನು ಎದುರಿಸಿದೆ. ಕಾಂಗ್ರೆಸ್ ಜೋಡೋ ಯಾತ್ರೆಯ (Bharat Jodo Yatra) ಹಿನ್ನೆಲೆ ಮಾಡಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್‌ನಲ್ಲಿ (Poster) ಸಾವರ್ಕರ್ ಅವರ ಚಿತ್ರವೂ ಕಂಡುಬಂದಿದೆ. ಆದರೆ ಕಾಂಗ್ರೆಸ್ ಇದನ್ನು ಪ್ರಿಂಟಿಂಗ್ ಮಿಸ್ಟೇಕ್ (Printing Mistake) ಎಂದು ಸಮರ್ಥಿಸಿಕೊಂಡಿದೆ.

    ಕಾಂಗ್ರೆಸ್‌ನ ಮಹಾತ್ವಾಕಾಂಕ್ಷೆಯ ರ‍್ಯಾಲಿ ಭಾರತ್ ಜೋಡೋ ಯಾತ್ರೆ ಕೇರಳದ (Kerala) ಎರ್ನಾಕುಲಂ ಜಿಲ್ಲೆ ತಲುಪಿದಾಗ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ ಬಳಸಿರುವುದು ಕಂಡುಬಂದಿದೆ. ಆದರೆ ಕಾಂಗ್ರೆಸ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ಅವರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು ಅವರಿಗೆ ಕ್ಷಮೆ ಯಾಚಿಸಿದವರು ಎಂದು ವಾದಿಸಿದ್ದಾರೆ.

    ಕೇರಳದ ಸ್ವತಂತ್ರ ಶಾಸಕ ಪಿ.ವಿ ಅನ್ವರ್ ಅವರು ಈ ಪೋಸ್ಟರ್ ಅನ್ನು ಗಮನಿಸಿ, ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಚೆಂಗಮನಾಡಿನಲ್ಲಿ ಇರಿಸಲಾದ ಪೋಸ್ಟರ್‌ನಲ್ಲಿ ಸಾವರ್ಕರ್ ಅವರ ಫೋಟೋವನ್ನು ಹಾಕಲಾಗಿದೆ. ಈ ವಿಚಾರ ಕಾರ್ಯಕರ್ತರ ಗಮನಕ್ಕೆ ಬರುತ್ತಿದ್ದಂತೆ ಸಾವರ್ಕರ್ ಅವರ ಫೋಟೋ ಮೇಲೆ ಮಹಾತ್ಮ ಗಾಂಧೀಜಿಯವರ ಚಿತ್ರವನ್ನು ಅಂಟಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೃದಯ ಸಮಸ್ಯೆ- ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್

    ತಕ್ಷಣವೇ ಈ ಬಗ್ಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್, ಇದು ಪ್ರಿಂಟಿಂಗ್ ಮಿಸ್ಟೇಕ್‌ನಿಂದ ಆಗಿದೆ. ನಾವು ಮುದ್ರಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳಿರುವ ಪೋಸ್ಟರ್ ತಯಾರಿಸಲು ಹೇಳಿದಾಗ ಅವರು ಕ್ರಾಸ್ ಚೆಕ್ ಮಾಡದೇ ಆನ್‌ಲೈನ್‌ನಲ್ಲಿ ಲಭ್ಯವಿದ್ದ ಎಲ್ಲಾ ಫೋಟೋಗಳನ್ನೂ ಹಾಕಿ ಪೋಸ್ಟರ್ ಮಾಡಿದ್ದಾರೆ. ಬಳಿಕ ಸಾವರ್ಕರ್ ಫೋಟೋ ಮೇಲೆ ಗಾಂಧೀಜಿಯವರ ಚಿತ್ರವನ್ನು ಹಾಕುವ ಮೂಲಕ ತಪ್ಪನ್ನು ಸರಿಪಡಿಸಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ

    Live Tv
    [brid partner=56869869 player=32851 video=960834 autoplay=true]

  • ನಾನು ಸುಸ್ತಾಗಿದ್ದೇನೆ, ಜ್ವರ 100 ಡಿಗ್ರಿಗೆ ಬಂದಿದೆ – 11 ದಿನದಿಂದ ಮನೆಗೇ ಹೋಗಿಲ್ಲ ಅಂದ ಡಿಕೆಶಿ

    ನಾನು ಸುಸ್ತಾಗಿದ್ದೇನೆ, ಜ್ವರ 100 ಡಿಗ್ರಿಗೆ ಬಂದಿದೆ – 11 ದಿನದಿಂದ ಮನೆಗೇ ಹೋಗಿಲ್ಲ ಅಂದ ಡಿಕೆಶಿ

    ಮೈಸೂರು: ನಾನು ಮನೆ ಬಿಟ್ಟು 11 ದಿನ ಆಯ್ತು. ಈಗ ಸ್ವಲ್ಪ ಸುಸ್ತಾಗಿದ್ದೇನೆ. ಜ್ವರ (Fever) 100 ಡಿಗ್ರಿಗೆ ಬಂದಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಮೈಸೂರಿನಲ್ಲಿಂದು (Mysuru) ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಸ್ವಲ್ಪ ಸುಸ್ತಾಗಿದ್ದೇನೆ. ಡಾಕ್ಟರ್ (Doctor) ಬಂದು ಚೆಕ್ ಮಾಡಿದ್ರು. ಜ್ವರ 100 ಡಿಗ್ರಿಗೆ ಬಂದಿದೆ. 11 ದಿನವಾಯ್ತು ನಾನು ಮನೆ ಬಿಟ್ಟು. ಸಿದ್ದರಾಮಯ್ಯ (Siddaramaiah) ಅವರು ಸದನದಲ್ಲಿ ಇದ್ದ ಕಾರಣ ನಾನೇ ಎಲ್ಲಾ ಕಡೆ ಓಡಾಡುತ್ತಿದ್ದೆನೆ ಎಂದು ತಿಳಿಸಿದ್ದಾರೆ.

    ಕರ್ನಾಟಕ (Karnataka) ಭ್ರಷ್ಟಾಚಾರ ರಾಜಧಾನಿಯಾಗಿದೆ. ಗಾಂಧಿ (Gandhi Family) ಕುಟುಂಬಕ್ಕೆ ಕೇಂದ್ರ ಸರ್ಕಾರ (Central Government) ಬಹಳ ಕಿರುಕುಳ ನೀಡುತ್ತಿದೆ. ಕಿರುಕುಳ ಕೊಟ್ಟರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ (Rahul Gandhi) ಅದಕ್ಕೆ ಹೆದರಲ್ಲ. `ಡಿಕೆ ನಾನು ಜೈಲಿಗೆ ಹೋಗಲು ರೆಡಿಯಾಗಿದ್ದೇನೆ? ಹೇಗಿತ್ತು ನಿನಗೆ ಜೈಲಿನ ಅನುಭವ ಹೇಳು? ನನ್ನ ಇಡೀ ಕುಟುಂಬ ತ್ಯಾಗದ ಕುಟುಂಬ ನನ್ನದೇನಿದೆ? ಇವರಿಗೆ ಹೆದರಲ್ಲ ನಾನು ಅಂತಾ ರಾಹುಲ್ ಗಾಂಧಿ ನನಗೆ ಹೇಳಿದರು. ಎಂದು ರಾಹುಲ್‌ಗಾಂಧಿ ಅವರೊಂದಿಗಿನ ಸಂಭಾಷಣೆಯನ್ನು ಬಿಚ್ಚಿಟ್ಟಿದ್ದಾರೆ.

    ಮೈಸೂರಿಗೆ ಬರ್ತಾರೆ ಮಹಾ ನಾಯಕಿ: ಮೈಸೂರು ಭಾಗಕ್ಕೆ ಯಾವತ್ತೂ ಬಾರದ ದೊಡ್ಡ ಮಹಿಳಾ ನಾಯಕಿ ಬರುತ್ತಾರೆ. ಆವತ್ತು ಕಾಂಗ್ರೆಸ್ ಮಹಿಳೆಯರ ಶಕ್ತಿ ಪ್ರದರ್ಶನ ಮಾಡಬೇಕು. ಈ ಭಾಗಕ್ಕೆ ಬರ್ತಿರೋ ನಾಯಕಿ ಯಾರು ಅಂತಾ ನಾನು ಈಗ ಹೇಳಲ್ಲ. ಆ ನಾಯಕಿ ಬಂದ ದಿನ ದೊಡ್ಡ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಟಿಕೆಟ್ ಫೈನಲ್ ಮಾಡುತ್ತೆ- ಡಿಕೆ ವಿರುದ್ಧ ಮುಗಿಬಿದ್ದ ಸಿದ್ದು ಬಣ

    ಎಲ್ಲದಕ್ಕೂ ಲೆಕ್ಕ ಇಡುತ್ತೇನೆ: ಮೈಸೂರು ಜಿಲ್ಲೆಯ ಶಾಸಕರು, ಮಾಜಿ ಶಾಸಕರು ತಲಾ 15 ಸಾವಿರ ಜನರನ್ನ ಕರೆದುಕೊಂಡು ಬರಬೇಕು. ಸಿದ್ದರಾಮಯ್ಯ ಅವರು 5 ಸಾವಿರ ಜನ ಹೇಳಿದ್ದು ದೂರದ ಪ್ರದೇಶದ ಶಾಸಕರಿಗೆ ಮಾತ್ರ. ಮೈಸೂರು ಭಾಗದ ಶಾಸಕರು, ಮಾಜಿ ಶಾಸಕರು 15 ಸಾವಿರ ಜನ ಕರೆದುಕೊಂಡು ಬರಲೇಬೇಕು. ನೀವೇ ಟೀ ಶರ್ಟ್ ಮಾಡಿಸಿ. ಅದರಲ್ಲಿ ನನ್ನ ಫೋಟೋ, ಸಿದ್ದರಾಮಯ್ಯ ಅವರ ಫೋಟೋ ಬೇಡ. ನಿಮ್ಮ ಫೋಟೋ, ರಾಹುಲ್ ಗಾಂಧಿ ಫೋಟೋ ಹಾಕಿಸಿಕೊಳ್ಳಿ ಸಾಕು. ಕೆಲಸ ಮಾಡದೇ ಇದ್ದರೆ ಅಂಥವರ ಜಾಗಕ್ಕೆ ಬೇರೆಯವರನ್ನ ಸಿದ್ದ ಮಾಡಿ. ಯಾರು ಎಷ್ಟು ಜನ ಕರೆದು ಕೊಂಡು ಬಂದರು ಅನ್ನೋ ಲೆಕ್ಕವನ್ನು ಸರಿಯಾಗಿ ಮಾಡಿಸುತ್ತೇನೆ, ಎಲ್ಲದಕ್ಕೂ ಲೆಕ್ಕ ಇಡುತ್ತೇನೆ ಎಂದು ಡಿಕೆಶಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿ ಕಾಲಿಗೆ ಚಪ್ಪಲಿ ತೊಡಿಸಿದ ರಾಹುಲ್‌ ಗಾಂಧಿ – ಸರಳಜೀವಿ ಎಂದ ನೆಟ್ಟಿಗರು

    ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿ ಕಾಲಿಗೆ ಚಪ್ಪಲಿ ತೊಡಿಸಿದ ರಾಹುಲ್‌ ಗಾಂಧಿ – ಸರಳಜೀವಿ ಎಂದ ನೆಟ್ಟಿಗರು

    ತಿರುವನಂತಪುರಂ: ʼಭಾರತ್‌ ಜೋಡೋ ಯಾತ್ರೆʼ(Bharat Jodo Yatra) ವೇಳೆ ಜೊತೆಯಲ್ಲಿ ಸಾಗುತ್ತಿದ್ದ ಬಾಲಕಿಯ ಕಾಲಿಗೆ ಪಾದರಕ್ಷೆ ಧರಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಸಹಾಯ ಮಾಡುತ್ತಿರುವ ದೃಶ್ಯದ ವೀಡಿಯೋ ಸಖತ್‌ ವೈರಲ್‌ ಆಗುತ್ತಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

    ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಕೇರಳದ ಹರಿಪಾದ್‌ನಿಂದ ಭಾನುವಾರ ತನ್ನ ಪ್ರಯಾಣವನ್ನು ಪುನರಾರಂಭಿಸಿತು. ಬೆಳಗ್ಗೆ 6:30ರ ನಂತರ ಪ್ರಾರಂಭವಾದ ಯಾತ್ರೆಯ ಹಲವಾರು ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಕೆಲವೆಡೆ ರಾಹುಲ್‌ ಗಾಂಧಿಯವರು ರಸ್ತೆಯ ಇಕ್ಕೆಲಗಳಲ್ಲಿ ಕಾಯುತ್ತಿರುವ ಜನರನ್ನು ಸ್ವಾಗತಿಸುತ್ತಿರುವುದು ಕಂಡುಬಂದರೆ, ಇನ್ನು ಕೆಲವೆಡೆ ಅವರು ಮೆರವಣಿಗೆಯಿಂದ ವಿರಾಮ ತೆಗೆದುಕೊಂಡು ಮಾರ್ಗದುದ್ದಕ್ಕೂ ಹೋಟೆಲ್‌ಗಳಲ್ಲಿ ಚಹಾ ಸವಿಯುತ್ತಿರುವುದನ್ನು ಕಾಣಬಹುದು.

    ಯಾತ್ರೆಯ 11ನೇ ದಿನದ ವೀಡಿಯೋವೊಂದರಲ್ಲಿ, ಬಾಲಕಿಯೊಬ್ಬಳಿಗೆ(Little Girl) ರಾಹುಲ್‌ ಗಾಂಧಿ ಪಾದರಕ್ಷೆ ತೊಡಿಸುತ್ತಿರುವ ದೃಶ್ಯ ಕಂಡುಬಂದಿದೆ. ಈ ವೀಡಿಯೋವನ್ನು ಮಹಿಳಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ʼಸರಳತೆ ಮತ್ತು ಪ್ರೀತಿ. ದೇಶವನ್ನು ಒಗ್ಗೂಡಿಸಲು ಎರಡೂ ಅಗತ್ಯವಿದೆʼ ಎಂದು ಡಿಸೋಜಾ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಒಬ್ಬರೇ ಎಂಎಲ್‌ಎ ಟಿಕೆಟ್‌ ನೀಡಲು ನಿರ್ಧಾರ ಮಾಡೋಕೆ ಸಾಧ್ಯವಿಲ್ಲ: ದಿನೇಶ್‌ ಗುಂಡೂರಾವ್‌

    ʻಮಾನವೀಯ ಸ್ಪರ್ಶದ ನಾಯಕʼ, ʼಹೃದಯವಂತʼ ಎಂದು ಅನೇಕರು ಸೋಷಿಯಲ್‌ ಮೀಡಿಯಾದಲ್ಲಿ ರಾಹುಲ್‌ ಗಾಂಧಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಪಕ್ಷ ಮುಖ್ಯ, ಸಣ್ಣ ವಿಚಾರ ದೊಡ್ಡದು ಮಾಡೋದು ಬೇಡ: ಆರ್.ವಿ.ದೇಶಪಾಂಡೆ

    Live Tv
    [brid partner=56869869 player=32851 video=960834 autoplay=true]

  • ಜೋಡೋ ಯಾತ್ರೆ ಬಳಿಕ ಕೈ ಪಡೆ ಕೃಷ್ಣ ಯಾತ್ರೆ – ನಾನೇ ನೇತೃತ್ವ ವಹಿಸುತ್ತೇನೆ ಅಂದ ಡಿಕೆಶಿ

    ಜೋಡೋ ಯಾತ್ರೆ ಬಳಿಕ ಕೈ ಪಡೆ ಕೃಷ್ಣ ಯಾತ್ರೆ – ನಾನೇ ನೇತೃತ್ವ ವಹಿಸುತ್ತೇನೆ ಅಂದ ಡಿಕೆಶಿ

    ಮಂಡ್ಯ: ನಗರದ ಖಾಸಗಿ ಸಮುದಾಯ ಭವನದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಮತ್ತೊಂದು ಪಾದಯಾತ್ರೆಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

    ಮೇಕೆದಾಟು (Mekedatu) ಪಾದಯಾತ್ರೆ ಬಳಿಕ ಮತ್ತೊಂದು ಪಾದಯಾತ್ರೆಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ (Bharat Jodo Yatra) ಬಳಿಕ ಕೃಷ್ಣ ನೀರಾವರಿ (Krishna River) ಯೋಜನೆಗೆ ಸಂಬಂಧಿಸಿದಂತೆ `ಕೃಷ್ಣ ಯಾತ್ರೆ’ (Krishna Yatra) ಹಮ್ಮಿಕೊಳ್ಳಲಾಗುತ್ತದೆ. ಈ ಬಗ್ಗೆ ಸ್ಥಳೀಯ ನಾಯಕರಿಗೂ ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಸೆ.30ರಿಂದ ಮೈಶುಗರ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಗೋಪಾಲಯ್ಯ

    ಹೂವಿನ ಹಾರ ತರಬೇಡಿ:
    ಇನ್ನೂ ಅದರ ತಯಾರಿ ಆರಂಭವಾಗಿಲ್ಲ. ಭಾರತ್ ಜೋಡೋ (Bharat Jodo) ಯಾತ್ರೆ ಮುಗಿದ ನಂತರ ನಾನೇ ನೇತೃತ್ವ ತೆಗೆದುಕೊಳ್ಳುತ್ತೇನೆ. ಕೃಷ್ಣ ನೀರಾವರಿ ಯೋಜನೆಗಾಗಿ ಪಾದಯಾತ್ರೆ ಮಾಡ್ತೇವೆ. ಈಗ ಭಾರತ್ ಜೋಡೋ ಯಾತ್ರೆ ಮುಗಿದ ನಂತರ ಅದರ ಚಿತ್ರಣ ಆ ಮೇಲೆ ಹೇಳ್ತೀನಿ. ಈಗ ನಮ್ಮದು 22 ದಿನಗಳ ಭಾರತ್ ಜೋಡೋ ಯಾತ್ರೆ. ಯಾತ್ರೆಗೆ ಯಾವ ಕಾರ್ಯಕರ್ತನೂ (Congress Workers) ಹೂವಿನ ಹಾರ ತರಬೇಡಿ, ಯಾರಿಗೂ ಹೂವಿನ ಹಾರ ಹಾಕಬೇಡಿ. ಹೂವಿನ ಹಾರ ಹಾಕಿಸಿಕೊಳ್ಳಲು ಪೊಲೀಸ್ (Police) ಹಾಗೂ ಸೆಕ್ಯೂರಿಟಿ ಬಿಡಲ್ಲ. ನಿಮ್ಮ ಅಭಿಮಾನ ಪ್ರೀತಿ ಜನ ಸಂಘಟನೆಯಲ್ಲಿ ಇರಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ ಎಟಿಎಂಗೆ ಹಣ ತುಂಬುವ ವಾಹನ ಕಳ್ಳತನ- ಕರ್ನಾಟಕದಲ್ಲಿ 53.5 ಲಕ್ಷ ನಗದು ಸೀಜ್

    ಶಾಂತಿ, ನೆಮ್ಮದಿಗಾಗಿ ಜೋಡೋ ಯಾತ್ರೆ:
    ದೇಶದ ಭವಿಷ್ಯ, ನೆಮ್ಮದಿ, ಶಾಂತಿಗಾಗಿ ನಡೆಯುತ್ತಿರುವ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಇವಾಗ ಕರ್ನಾಟಕ ಭ್ರಷ್ಟ ರಾಜ್ಯ ಅಂತಾ ಹೆಸರು ತಕೊಂಡಿದೆ. ಹಿಂದೆ ಮೋದಿ ಬಂದು ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ ಅಂದಿದ್ರು. ಆದರೆ ಈಗ ನಾವು ಆರೋಪ ಮಾಡುತ್ತಿಲ್ಲ. ಗುತ್ತಿಗೆದಾರರೇ 40 ಪರ್ಸೆಂಟ್ ಸರ್ಕಾರ ಅಂತಿದ್ದಾರೆ. ಯಾವ ಕಚೇರಿಗೆ ಹೋದರೂ ಲಂಚ, ಹಣ, ಹಣ ಅಂತಿದ್ದಾರೆ. ಇದು ನಿಮ್ಮ ಮನೆಗೆ ಬಂದ ಭಾಗ್ಯ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ದೇಹದಾನ ಮಾಡಿ ಸಾರ್ಥಕತೆ ಮೆರೆದ ಅಭಿಮಾನಿ ಶಿಲ್ಪಾ

    ಕಾಸುಕೊಟ್ಟು ಯಾರನ್ನೂ ಕರೆತರಬೇಡಿ:
    7 ಸೀಟ್ ಗೆದ್ದಾಗ ದಳದವರು ಸ್ಥಳೀಯ ಸಂಸ್ಥೆ, ಪದವೀಧರರ ಕ್ಷೇತ್ರ ಗೇಲ್ಲೋಕೆ ಆಗಲಿಲ್ಲ. ನೀವೆಲ್ಲರೂ ಒಟ್ಟಾಗಿ ದುಡಿದಿದ್ದಕ್ಕೆ ಅದು ಸಾಧ್ಯವಾಯ್ತು. ಈ ಪಾದಯಾತ್ರೆಯಿಂದ ಸಂಘಟನೆಗೂ ಸಹಕಾರಿಯಾಗಲಿದೆ. ನಾಳೆಯಿಂದಲೇ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಸಂಘಟನೆ ಮಾಡಬೇಕು. ಮಂಡ್ಯ ಜಿಲ್ಲೆಯಿಂದಲೇ ಕನಿಷ್ಠ 10 ಸಾವಿರ ಜನ ಬರಬೇಕು. ಆದರೆ ಕಾಸು ಕೊಟ್ಟು ಯಾರನ್ನೂ ಕರೆತರಬೇಡಿ, ವಾಹನ ವ್ಯವಸ್ಥೆ ಬೇಕಿದ್ರೆ ನಾವೇ ಮಾಡಿಕೊಡ್ತೇವೆ. ಬದ್ಧತೆ, ನಾಯಕತ್ವ ಇರೋರನ್ನ ಯಾತ್ರೆಗೆ ಕರೆತನ್ನಿ. ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಆನ್ ಲೈನ್ ನೋಂದಣಿ ಆರಂಭವಾಗಿದೆ. ಈ ಕೂಡಲೇ ನೋಂದಣಿ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಕೆಜಿಎಫ್ ಬಾಬು ಬಗ್ಗೆ ಕೆಂಡಮಂಡಲವಾದ ಡಿಕೆಶಿ, ಅವನ್ನಾ ಸಸ್ಪೆಂಡ್ ಮಾಡಿ ಬಿಡ್ತೀನಿ. ನಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆ ಬೈದ್ರೆ ಸಸ್ಪೆಂಡ್ ಮಾಡ್ತೀನಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಬೆದರಿಕೆ ಪ್ರಕರಣ – ಮೂವರು ಕಾಂಗ್ರೆಸ್ ಕಾರ್ಯಕರ್ತರು ಅಮಾನತು

    ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಬೆದರಿಕೆ ಪ್ರಕರಣ – ಮೂವರು ಕಾಂಗ್ರೆಸ್ ಕಾರ್ಯಕರ್ತರು ಅಮಾನತು

    ತಿರುವನಂತಪುರಂ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆರಂಭಿಸಿರುವ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) 2,000 ರೂ. ದೇಣಿಗೆ ನೀಡುವಂತೆ ತರಕಾರಿ ವ್ಯಾಪಾರಿ ಬಳಿ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಾರ್ಯಕರ್ತರನ್ನು ಅಮಾನತುಗೊಳಿಸಲಾಗಿದೆ.

    ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಸಂಗ್ರಹಿಸುತ್ತಿದ್ದರು. ಈ ವೇಳೆ ಕೊಲ್ಲಂನ (Kollam) ತರಕಾರಿ ಅಂಡಿಯೊಂದಕ್ಕೆ ತೆರಳಿ ಅಂಗಡಿ ಮಾಲೀಕನೊಂದಿಗೆ 2,000 ರೂ. ದೇಣಿಗೆ ನೀಡುವಂತೆ ಕೇಳಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ನಾನು 500 ರೂ. ಕೊಡುವುದಾಗಿ ತಿಳಿಸಿದ್ದಾರೆ. ಆ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ದಮ್ಕಿ ಹಾಕಿ ಬೆದರಿಕೆ ಹಾಕಿರುವುದಾಗಿ ದೂರು ದಾಖಲಾಗಿತ್ತು. ಆ ಬಳಿಕ ಘಟನೆ ಕುರಿತಾಗಿ ಕಾಂಗ್ರೆಸ್ ಕ್ರಮಕ್ಕೆ ಮುಂದಾಗಿದೆ. ಅಂಗಡಿ ಮಾಲೀಕನಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ. ಇವರು ನಮ್ಮ ಸಿದ್ಧಾಂತದ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇಂತಹ ನಡವಳಿಕೆಯನ್ನು ಪಕ್ಷ ಸಹಿಸಿಕೊಳ್ಳುವುದಿಲ್ಲ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ (K. Sudhakaran) ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ದೇಣಿಗೆಯಾಗಿ 2,000 ರೂ. ಕೊಡದ ತರಕಾರಿ ವ್ಯಾಪಾರಿಗೆ ಬೆದರಿಕೆ

    ಏನಿದು ಘಟನೆ?
    ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಸಂಗ್ರಹಿಸುತ್ತಿದ್ದರು. ಈ ವೇಳೆ ಕೊಲ್ಲಂನ ತರಕಾರಿ ಅಂಡಿಯೊಂದಕ್ಕೆ ತೆರಳಿ ಅಂಗಡಿ ಮಾಲೀಕನೊಂದಿಗೆ 2,000 ರೂ. ದೇಣಿಗೆ ನೀಡುವಂತೆ ಕೇಳಿದ್ದಾರೆ. ಅಂಗಡಿ ಮಾಲೀಕ ನಾನು 500 ರೂ. ಕೊಡುವುದಾಗಿ ತಿಳಿಸಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಅಂಗಡಿಯ ತೂಕದ ಯಂತ್ರಕ್ಕೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದರಲ್ಲಿ ವರದಿಯಾಗಿದೆ. 

    ಅಲ್ಲದೆ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ದೃಶ್ಯಾವಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕರ ಬಳಿ ಬಂದು ದೇಣಿಯಾಗಿ 2,000 ರೂ. ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಅಂಗಡಿ ಮಾಲೀಕರು ಒಪ್ಪದೆ ತಾವು 500 ರೂ. ಕೊಡುವುದಾಗಿ ತಿಳಿಸಿದ್ದಾರೆ. ಬಳಿಕ ಜಗಳ ಆರಂಭಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಏರು ಧ್ವನಿಯಲ್ಲಿ ಅಂಗಡಿ ಮಾಲೀಕನಿಗೆ ದಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ – ಉಗ್ರರಿಗೆ ಗುಲಾಂ ನಬಿ ಆಜಾದ್‌ ಮನವಿ

    ಘಟನೆಯ ಬಳಿಕ ಅಂಗಡಿ ಮಾಲೀಕ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಇನ್ನೊಂದು ಪ್ರತಿದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಗ್ಯಾಂಬ್ಲಿಂಗ್ ಗೇಮ್‍ಗಳ ನಿಷೇಧ – ಗೇಮಿಂಗ್ ಕಂಪನಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್

    ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು, ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಯಾತ್ರೆಯು 3,500 ಕಿ.ಮೀ ದೂರವನ್ನು ಕ್ರಮಿಸುತ್ತಿದ್ದು 12 ರಾಜ್ಯಗಳನ್ನು ಹಾದುಹೋಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಯಾತ್ರೆಗೆ ದೇಣಿಗೆಯಾಗಿ 2,000 ರೂ. ಕೊಡದ ತರಕಾರಿ ವ್ಯಾಪಾರಿಗೆ ಬೆದರಿಕೆ

    ಭಾರತ್ ಜೋಡೋ ಯಾತ್ರೆಗೆ ದೇಣಿಗೆಯಾಗಿ 2,000 ರೂ. ಕೊಡದ ತರಕಾರಿ ವ್ಯಾಪಾರಿಗೆ ಬೆದರಿಕೆ

    ತಿರುವನಂತಪುರಂ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆರಂಭಿಸಿರುವ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) 2,000 ರೂ. ದೇಣಿಗೆ (Donation) ನೀಡುವಂತೆ ತರಕಾರಿ ವ್ಯಾಪಾರಿ (Vegetable Shop) ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಗಳವಾಡಿರುವ ಘಟನೆ ಕೇರಳದ ಕೊಲ್ಲಂ (Kerala’s Kollam) ಜಿಲ್ಲೆಯಲ್ಲಿ ನಡೆದಿದೆ.

    ಸ್ಥಳೀಯ ಪೊಲೀಸರೊಬ್ಬರು ತಿಳಿಸಿದ ಮಾಹಿತಿ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಸಂಗ್ರಹಿಸುತ್ತಿದ್ದರು. ಈ ವೇಳೆ ಕೊಲ್ಲಂನ ತರಕಾರಿ ಅಂಡಿಯೊಂದಕ್ಕೆ ತೆರಳಿ ಅಂಗಡಿ ಮಾಲೀಕನೊಂದಿಗೆ 2,000 ರೂ. ದೇಣಿಗೆ ನೀಡುವಂತೆ ಕೇಳಿದ್ದಾರೆ. ಅಂಗಡಿ ಮಾಲೀಕ ನಾನು 500 ರೂ. ಕೊಡುವುದಾಗಿ ತಿಳಿಸಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಅಂಗಡಿಯ ತೂಕದ ಯಂತ್ರಕ್ಕೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದರಲ್ಲಿ ವರದಿಯಾಗಿದೆ. ಇದನ್ನೂ ಓದಿ: ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ

    ಅಲ್ಲದೆ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ದೃಶ್ಯಾವಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕರ ಬಳಿ ಬಂದು ದೇಣಿಯಾಗಿ 2,000 ರೂ. ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಅಂಗಡಿ ಮಾಲೀಕರು ಒಪ್ಪದೆ ತಾವು 500 ರೂ. ಕೊಡುವುದಾಗಿ ತಿಳಿಸಿದ್ದಾರೆ. ಬಳಿಕ ಜಗಳ ಆರಂಭಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಏರು ಧ್ವನಿಯಲ್ಲಿ ಅಂಗಡಿ ಮಾಲೀಕನಿಗೆ ದಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ – ಉಗ್ರರಿಗೆ ಗುಲಾಂ ನಬಿ ಆಜಾದ್‌ ಮನವಿ

    ಘಟನೆಯ ಬಳಿಕ ಅಂಗಡಿ ಮಾಲೀಕ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಇನ್ನೊಂದು ಪ್ರತಿದೂರು ದಾಖಲಿಸಿದ್ದಾರೆ.

    ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು, ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಯಾತ್ರೆಯು 3,500 ಕಿ.ಮೀ ದೂರವನ್ನು ಕ್ರಮಿಸುತ್ತಿದ್ದು 12 ರಾಜ್ಯಗಳನ್ನು ಹಾದುಹೋಗಲಿದೆ.

    Live Tv
    [brid partner=56869869 player=32851 video=960834 autoplay=true]

  • ತಮಿಳುನಾಡು ಹುಡುಗಿಯನ್ನು ಮದುವೆಯಾಗಲು ರಾಹುಲ್ ಸಿದ್ಧವಂತೆ!

    ತಮಿಳುನಾಡು ಹುಡುಗಿಯನ್ನು ಮದುವೆಯಾಗಲು ರಾಹುಲ್ ಸಿದ್ಧವಂತೆ!

    ಚೆನ್ನೈ: ರಾಹುಲ್ ಗಾಂಧಿ (Rahul Gandhi) ಅವರು ತಮಿಳುನಾಡನ್ನು ಪ್ರೀತಿಸುತ್ತಾರೆ. ಹೀಗಾಗಿ ಅವರು ತಮಿಳು ಹುಡುಗಿಯನ್ನು(Tamil girl) ಮದುವೆಯಾಗಲು (Marriage) ಸಿದ್ಧರಾಗಿದ್ದಾರೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಇದೊಂದು ಉಲ್ಲಾಸದ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ಪಕ್ಷ ಕೈಗೊಂಡಿರುವ ‘ಭಾರತ್ ಜೋಡೋ ಯಾತ್ರೆ’ (Bharat Jodo Yatra) ಭರದಿಂದ ಸಾಗುತ್ತಿದ್ದು, ತಮಿಳುನಾಡಿನಲ್ಲಿ(Tamil Nadu) ಭಾರತ್ ಜೋಡೋ ಯಾತ್ರೆಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಸ್ಥಳೀಯ ಮಹಿಳಾ ಎಂಜಿಎನ್‍ಆರ್‌ಇಜಿಎ (MGNREGA) ಕಾರ್ಯಕರ್ತೆಯೊಬ್ಬರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ತಮಿಳುನಾಡು ಹುಡುಗಿಯನ್ನು ಮದುವೆಯಾಗಲು ಆಫರ್ ನೀಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಎಲಿಜಬೆತ್ ನಿಧನಕ್ಕೆ ಇಂದು ದೇಶಾದ್ಯಂತ ಶೋಕಾಚರಣೆ

    ಶನಿವಾರ ಮಧ್ಯಾಹ್ನ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯ(Kanyakumari) ಮಾರ್ತಾಂಡಂನಲ್ಲಿ ಮಹಿಳಾ ಎಂಜಿಎನ್‍ಆರ್‌ಇಜಿಎ ಕಾರ್ಯಕರ್ತರನ್ನು ಭೇಟಿಯಾದರು. ಈ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂದಿ ಅವರು ತಮಿಳುನಾಡನ್ನು ಪ್ರೀತಿಸುತ್ತಾರೆ. ಹೀಗಾಗಿ ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆಂದು ಹೇಳಿದ್ದಾರೆ. ಇದನ್ನು ಗಮನಿಸಿದ ಜೈರಾಮ್ ರಮೇಶ್(Jairam Ramesh ) ಅವರು ಇದೊಂದು ‘ಉಲ್ಲಾಸದ ಕ್ಷಣ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆಯಲ್ಲಿ ಗಲಾಟೆ- ಯುವಕನ ಕೊಲೆಯಲ್ಲಿ ಅಂತ್ಯ

    ಜೈರಾಮ್ ರಮೇಶ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿ ಅವರ ಫೋಟೋವನ್ನು ಹಂಚಿಕೊಂಡಿದ್ದು, ಇಂದು ಮಧ್ಯಾಹ್ನ ಮಾರ್ತಾಂಡಂನಲ್ಲಿ ಮಹಿಳಾ ಎಂಜಿಎಎನ್‍ಆರ್‌ಇಜಿಎ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿಯವರು ಸಂವಾದ ನಡೆಸುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂಧಿ ತಮಿಳುನಾಡನ್ನು ಪ್ರೀತಿಸುತ್ತಾರೆ ಎಂದು ತಿಳಿದಿದೆ ಮತ್ತು ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಅಂತ ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಫಾರಿನ್‌ ಟೀ-ಶರ್ಟ್‌ ಹಾಕ್ಕೊಂಡು ಭಾರತ್‌ ಜೋಡೋ ಯಾತ್ರೆ ಮಾಡ್ತಿದ್ದಾರೆ – ರಾಹುಲ್‌ ಗಾಂಧಿ ಕಾಲೆಳೆದ ಅಮಿತ್‌ ಶಾ

    ಫಾರಿನ್‌ ಟೀ-ಶರ್ಟ್‌ ಹಾಕ್ಕೊಂಡು ಭಾರತ್‌ ಜೋಡೋ ಯಾತ್ರೆ ಮಾಡ್ತಿದ್ದಾರೆ – ರಾಹುಲ್‌ ಗಾಂಧಿ ಕಾಲೆಳೆದ ಅಮಿತ್‌ ಶಾ

    ಜೈಪುರ್‌: ವಿದೇಶಿ ಟೀ-ಶರ್ಟ್‌ (t-shirt) ಧರಿಸಿ, ಭಾರತ್‌ ಜೋಡೋ ಯಾತ್ರೆ (Bharat Jodo Yatra) ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ವ್ಯಂಗ್ಯವಾಡಿದ್ದಾರೆ.

    ‘ಭಾರತ್ ಜೋಡೋ ಯಾತ್ರೆ’ ವೇಳೆ ಹಣದುಬ್ಬರ ವಿಷಯವನ್ನು ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ (Rahul Gandhi) ಅವರು ಸ್ವತಃ ವಿದೇಶಿ ಬ್ರ್ಯಾಂಡ್‌ನ 41,257 ರೂ. ಮೌಲ್ಯದ ಟೀ ಶರ್ಟ್ ಧರಿಸಿದ್ದರು ಎಂದು ಬಿಜೆಪಿ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾಲೆಳೆದಿತ್ತು. ಇದು ಕಾಂಗ್ರೆಸ್‌ (Congress) ಮತ್ತು ಬಿಜೆಪಿ (BJP) ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೇ ವೇಳೆ ಅಮಿತ್‌ ಶಾ ಅವರು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

    ರಾಹುಲ್ ಗಾಂಧಿ ಅವರು ವಿದೇಶಿ ಟೀ-ಶರ್ಟ್ ಧರಿಸಿ ಭಾರತ್ ಜೋಡೋ ಯಾತ್ರೆಗೆ ಹೊರಟಿದ್ದಾರೆ. ನಾನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ನೆನಪಿಸುತ್ತೇನೆ. ರಾಹುಲ್ ಬಾಬಾ ʻಭಾರತ ರಾಷ್ಟ್ರವಲ್ಲʼ ಎಂದು ಹೇಳಿದ್ದರು. ರಾಹುಲ್ ಗಾಂಧಿ, ನೀವು ಯಾವ ಪುಸ್ತಕದಲ್ಲಿ ಓದಿದ್ದೀರಿ? ಇದು ಲಕ್ಷಗಟ್ಟಲೆ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ರಾಷ್ಟ್ರವಾಗಿದೆ. ರಾಹುಲ್ ಗಾಂಧಿ ಅವರು ಭಾರತದ ಇತಿಹಾಸವನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಜೋಧ್‌ಪುರದಲ್ಲಿ ನಡೆದ ಬೂತ್ ಅಧ್ಯಕ್ಷ ಸಂಕಲ್ಪ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡುವಾಗ ಶಾ ತಿಳಿಸಿದ್ದಾರೆ.

    ಇಂಧನ ಬೆಲೆ ಏರಿಕೆ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ರಸ್ತೆ ನಿರ್ಮಿಸಲು ಸಾಧ್ಯವಿಲ್ಲ, ವಿದ್ಯುತ್ ನೀಡಲು ಸಾಧ್ಯವಿಲ್ಲ, ಉದ್ಯೋಗ ನೀಡಲು ಸಾಧ್ಯವಿಲ್ಲ. ಗೆಹ್ಲೋಟ್ ಸರ್ಕಾರವು ಕೇವಲ ವೋಟ್ ಬ್ಯಾಂಕ್ ಮತ್ತು ಓಲೈಕೆ ರಾಜಕಾರಣವನ್ನು ಮಾತ್ರ ಮಾಡಬಲ್ಲದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ರಾಹುಲ್ ಗಾಂಧಿ ವಿಶ್ರಾಂತಿಗೆ ವಾಹನದಲ್ಲಿ ಬೆಡ್, ಎಸಿ ವ್ಯವಸ್ಥೆ

    Live Tv
    [brid partner=56869869 player=32851 video=960834 autoplay=true]