Tag: bharat jodo yatra

  • ಬಿಜೆಪಿ ಆಡಳಿತದಲ್ಲಿ ರೈತರ ಸಂಕಷ್ಟ, ಆತ್ಮಹತ್ಯೆ ಡಬಲ್‌ ಆಗಿದೆ – ಕಾಂಗ್ರೆಸ್‌ ವಾಗ್ದಾಳಿ

    ಬಿಜೆಪಿ ಆಡಳಿತದಲ್ಲಿ ರೈತರ ಸಂಕಷ್ಟ, ಆತ್ಮಹತ್ಯೆ ಡಬಲ್‌ ಆಗಿದೆ – ಕಾಂಗ್ರೆಸ್‌ ವಾಗ್ದಾಳಿ

    ಬೆಂಗಳೂರು: ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಬಿಜೆಪಿ (BJP) ಆಳ್ವಿಕೆಯಲ್ಲಿ ರೈತರ ಸಂಕಷ್ಟ ಡಬಲ್ ಆಗಿದೆ. ರೈತರ ಆತ್ಮಹತ್ಯೆ ಡಬಲ್ ಆಗಿದೆ, ರೈತರ ಖರ್ಚು ಡಬಲ್ ಆಗಿದೆ ಎಂದು ಬಿಜೆಪಿ ವಿರುದ್ಧ ಸರಣಿ ಟ್ವೀಟ್‌ ಮೂಲಕ ಕಾಂಗ್ರೆಸ್‌ (Congress) ವಾಗ್ದಾಳಿ ನಡೆಸಿದೆ.

    ಟ್ವೀಟ್‌ನಲ್ಲೇನಿದೆ?
    ಮಂಗಳೂರಿನ ದಸರಾ ಆಚರಣೆಯಲ್ಲಿ ಯುಪಿ ಮಾಡೆಲ್ ಬುಲ್ಡೋಜರ್ ಬಿಂಬಿಸುವ ಟ್ಯಾಬ್ಲೋ ಮೆರವಣಿಗೆ. ಕರ್ನಾಟಕದಲ್ಲಿ ಯುಪಿ ಮಾದರಿಯ ಅರಾಜಕತೆ ಸೃಷ್ಟಿಸಲು ಬಿಜೆಪಿ ಯತ್ನಿಸಿದೆ. ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ವಿಕೃತಿ ಮೆರೆದ ಬಿಜೆಪಿ. ನಮ್ಮದು ಸಂವಿಧಾನಿಕ ನ್ಯಾಯ. ಬಿಜೆಪಿಯದ್ದು ಬುಲ್ಡೋಜರ್ ನ್ಯಾಯ. ಇದನ್ನೂ ಓದಿ: ರಾಹುಲ್ ಗಾಂಧಿ ತಲೆ ರೈಲ್ವೇ ಹಳಿ ಇದ್ದಂತೆ: ಸಿ.ಸಿ ಪಾಟೀಲ್ ವ್ಯಂಗ್ಯ

    ತಮ್ಮ ಹತಾಶೆ, ಸೋಲು, ನೋವುಗಳನ್ನು ಜಾಹಿರಾತು ನೀಡಿ ವ್ಯಕ್ತಪಡಿಸುವ ಏಕೈಕ ರಾಜಕೀಯ ಪಕ್ಷ ಬಿಜೆಪಿ. ಒಂದೇ ವಾರದಲ್ಲಿ ಎರಡೆರೆಡು ಭಾರಿ ಪತ್ರಿಕೆಗಳಲ್ಲಿ ಮುಖಪುಟದ ಜಾಹೀರಾತು ನೀಡುತ್ತಿರುವ ಬಿಜೆಪಿಯ ಹತಾಶೆ ಹಿಮಾಲಯದೆತ್ತರಕ್ಕೆ ಏರಿದೆ. ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ಬಾಕಿ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

    Live Tv
    [brid partner=56869869 player=32851 video=960834 autoplay=true]

  • ರಾಹುಲ್ ಗಾಂಧಿ ತಲೆ ರೈಲ್ವೇ ಹಳಿ ಇದ್ದಂತೆ: ಸಿ.ಸಿ ಪಾಟೀಲ್ ವ್ಯಂಗ್ಯ

    ರಾಹುಲ್ ಗಾಂಧಿ ತಲೆ ರೈಲ್ವೇ ಹಳಿ ಇದ್ದಂತೆ: ಸಿ.ಸಿ ಪಾಟೀಲ್ ವ್ಯಂಗ್ಯ

    ಗದಗ: ರಾಹುಲ್ ಗಾಂಧಿ (Rahul Gandhi) ಅವರ ತಲೆ ರೈಲ್ವೇ ಹಳಿ ಇದ್ದಂತೆ. ಅವರ ಬುದ್ಧಿಗೂ, ಅವರಿಗೂ ಎಲ್ಲೂ ಭೇಟಿ ಆಗೋದಿಲ್ಲ. ಪ್ಯಾರಲಲ್ ಆಗಿ ಹೋಗುವ ಹಳಿ ಎಲ್ಲಿಯೂ ಕೂಡೋದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ (CC Patil) ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ (Bharat Jodo Yatra) ಅಪಹಾಸ್ಯದ ಒಂದು ಪರಿಮಿತಿ. ಭಾರತ್ ಜೋಡೋ ಹೆಸರಿಟ್ಟವರಿಗೆ ಸತ್ಕಾರ ಮಾಡಬೇಕು. ಇವರು ಮಾಡುವ ಭಾರತ ಜೋಡೋಗೆ ಅರ್ಥ ಇದೆಯಾ? ಹರಿದಾಗ, ಮುರಿದಾಗ, ವಿಂಗಡನೆ, ವಿಭಜನೆ ಆದಾಗ ಜೋಡೋ ಬರುತ್ತದೆ. ಅಂತಹ ಪ್ರಸಂಗ ಏನಿದೆ ಇದರಲ್ಲಿ? ಯೇ ಭಾರತ್ ಜೋಡೋ? ಯಾ ತೋಡೋ? ಎಂದು ತಿರುಗೇಟು ನೀಡಿದರು.

    ರಾಹುಲ್ ತಾತ, ಮುತ್ತಾತ, ಅಜ್ಜಿಯರು ಭಾರತದಿಂದ ಜಮ್ಮು ಕಾಶ್ಮೀರವನ್ನು ಬೇರೆ ಮಾಡಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆರ್ಟಿಕಲ್ 370 ತೆಗೆದು ಭಾರತ ಜೋಡಿಸಿದರು. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಮಾಡಿದರು. ಇದು ನಿಜವಾದ ಭಾರತ್ ಜೋಡೋ. ಆದರೆ ಆಗ ಕಾಶ್ಮೀರಕ್ಕೆ ವಿಶೇಷ ರಾಷ್ಟ್ರ ಕೊಟ್ಟವರಾರು? ಅಖಂಡ ಭಾರತ ಇದ್ರೆ ಮೊಹಮ್ಮದ್ ಅಲಿ ಜಿನ್ನಾ ನನಗೆಲ್ಲಿ ಕುತ್ತು ತರ್ತಾನೆ ಅಂತ ನೆಹರೂ ಭಾರತ ವಿಭಜನೆ ಮಾಡಿದರು. ಯಾರು ಭಾರತ ವಿಭಜನೆ ಮಾಡಿದರೋ, ಅವರು ಇಂದು ಭಾರತ ಜೋಡೋಗೆ ಹೊರಟಿರುವುದು ವಿಪರ್ಯಾಸ ಎಂದರು. ಇದನ್ನೂ ಓದಿ: ಜಾನುವಾರುಗಳಿಗೆ ಡಿಕ್ಕಿ – ಕಳೆದ ವಾರ ಆರಂಭವಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂಭಾಗ ಜಖಂ

    ಹಿಂದುಸ್ಥಾನ ತುಕಡೆ ಕರೆಂಗೆ ಎನ್ನುವ ಕನ್ಹಯ್ಯಲಾಲ್ ನಂತವರು, ಭಾರತ ಭೂಮಿ ಅಪವಿತ್ರಳು, ಅದಕ್ಕೆ ಶೂ ಹಾಕಿಕೊಂಡು ಬರುತ್ತೇನೆ ಎಂದ ಪಾದ್ರಿಯಂತವರು ಈ ಯಾತ್ರೆಯಲ್ಲಿ ಪಾಲ್ಗೊಳ್ತಾರೆ. ಭಾರತವನ್ನು ವಿಭಜನೆ ಮಾಡುವಂತಹ ಇಂತಹ ಅನೇಕ ವಿಚಿತ್ರಕಾರಕರನ್ನು ಭೇಟಿಯಾಗಿ ಆ ಶಕ್ತಿಗಳನ್ನು ಒಗ್ಗೂಡಿಸುವ ಯಾತ್ರೆ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಅಂತಹ ಪುಣ್ಯಾತ್ಮನಿಗೆ ನಮ್ಮ ರಾಜ್ಯದ ಇಬ್ಬರು ದೊಡ್ಡ ನಾಯಕರು ಕುಣಿಯುತ್ತಾ ಸಾತ್ ಕೊಡ್ತಿದ್ದಾರೆ ಅಂತ ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ

    ವ್ಯಾಪಕ ಪಿಎಫ್‌ಐ ಸಂಘಟನೆ ಉದ್ಭವ, ರೈಫಲ್‌ಗಳ ಕಳ್ಳತನ, ಜೀವಂತ ಗುಂಡುಗಳ ಕಳ್ಳತನ ಎಲ್ಲಿ ಆಯಿತೋ ಅಂತಹ ಕೇರಳದಿಂದ ಭಾರತ್ ಜೋಡೋ ಆರಂಭ ಮಾಡಿದ್ದಾರೆ. ಇದು ವಿಪರ್ಯಾಸವೆಂದರು.

    ಪಂಚಮಸಾಲಿ 2-ಎ ಮೀಸಲಾತಿ ಬಗ್ಗೆ ಮಾತನಾಡಿದ ಅವರು, ಜಯಬಸವ ಮೃತ್ಯುಂಜಯ ಸ್ವಾಮಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಸರ್ಕಾರ ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕು. ಮುಖ್ಯಮಂತ್ರಿಗಳು ಪೂರಕ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಇವತ್ತೇ ಬೇಕು, ನಾಳೆಯೇ ಬೇಕು ಎಂದರೆ ಅದು ಹೇಗೆ ಸಾಧ್ಯ ಎಂದು ಸಿ.ಸಿ ಪಾಟೀಲ್ ಪ್ರಶ್ನಿಸಿದರು.

    Live Tv
    [brid partner=56869869 player=32851 video=960834 autoplay=true]

  • ಭಾರತ್‌ ಜೋಡೋ ಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ

    ಭಾರತ್‌ ಜೋಡೋ ಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ

    ಮಂಡ್ಯ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ಮಂಡ್ಯದಲ್ಲಿ ನಡೆಯುತ್ತಿರುವ ʼಭಾರತ್‌ ಜೋಡೋ ಪಾದಯಾತ್ರೆʼ (Bharat Jodo Yatra) ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ಭಾರತ್‌ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಸುದ್ದಿ ವರದಿ ಮಾಡುತ್ತಿದ್ದಾಗ ಪೊಲೀಸರು ಹಲ್ಲೆ ಮಾಡಿದ್ದಾರೆ. ವರದಿಗಾರರು, ಕ್ಯಾಮೆರಾಮ್ಯಾನ್‌ ಮೇಲೆ ಮಂಡ್ಯ (Mandya) ಜಿಲ್ಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್

    ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ಪೊಲೀಸರ ಗೂಂಡಾವರ್ತನೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಸೇರಿದಂತೆ ಅನೇಕ ಜನಪ್ರತಿನಿಧಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ.

    ಹಲ್ಲೆ ಬಗ್ಗೆ ಮಂಡ್ಯ ಎಸ್‌ಪಿ ಮಾತನಾಡಿ, ನೂಕಾಟದ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ನಮ್ಮ ಪೊಲೀಸರು ಬಿದ್ದಿದ್ದಾರೆ. ಈ ವೇಳೆ ನಾನು ಕೂಡ ಕೆಳಗೆ ಬಿದ್ದು, ಯೂನಿಫಾರ್ಮ್‌ನಲ್ಲಿದ್ದ ಹೆಸರಿನ ಪ್ಲೇಟ್‌ ಕೂಡ ಹರಿದಿದೆ. ನಮ್ಮ ಪೊಲೀಸರು ಹಲ್ಲೆ ನಡೆಸಿಲ್ಲ. ಸಾರ್ವಜನಿಕ ಸೇವೆ ಮಾಡುತ್ತಿರುವ ಪೊಲೀಸರು, ಪತ್ರಕರ್ತರು ಪರಸ್ಪರ ಸಹಕಾರದಿಂದಲೇ ಪಾದಯಾತ್ರೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹಾಗೇನಾದರೂ ನಮ್ಮ ಪೊಲೀಸರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದರೆ, ವೀಡಿಯೋಗಳಿದ್ದರೆ ಸಾಕ್ಷಿಯನ್ನು ಪರಿಗಣಿಸಿ ಸಂಬಂಧಿತ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ

    ಘಟನೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ, ಹಲ್ಲೆ ವಿಚಾರ ತಿಳಿದಿಲ್ಲ. ಸಂಬಂಧಪಟ್ಟವರಿಂದ ವಿವರಗಳನ್ನು ತರಿಸಿಕೊಂಡು ಪರಿಶೀಲಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯು ಸದ್ಯ ಮಂಡ್ಯದಲ್ಲಿ ಸಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪುತ್ರ ರಾಹುಲ್‌ ಗಾಂಧಿ ಸಾಥ್‌ ನೀಡಿದರು.

  • ಭಾರತ್ ಜೋಡೋ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್

    ಭಾರತ್ ಜೋಡೋ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್

    ಮಂಡ್ಯ: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಶೂ ಲೇಸ್‍ಗಳನ್ನು ಕಟ್ಟಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಇಂದು ಮಂಡ್ಯ (Mandya) ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಗೆ ಸೋನಿಯಾ ಗಾಂಧಿ (Sonia Gandhi) ಅವರು ಸಾಥ್ ನೀಡಿದರು. ಈ ವೇಳೆ ಅಪರೂಪದ ದೃಶ್ಯ ಕಂಡುಬಂದಿದೆ. ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ ರಾಹುಲ್ ಗಾಂಧಿ ತಮ್ಮ ತಾಯಿಯ ಶೂ ಲೇಸ್ ಅನ್ನು ಎಚ್ಚರಿಕೆಯಿಂದ ಕಟ್ಟುತ್ತಿರುವುದನ್ನು ಕಾಣಬಹುದಾಗಿದೆ. ಇದೀಗ ಈ ಫೋಟೋ ನೋಡಿ ರಾಹುಲ್ ಗಾಂಧಿ ಸರಳತೆಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ 150 ಕಂಪ್ಯೂಟರ್‌ ಕೊಡುಗೆ ನೀಡಿದ ಇನ್ಫೋಸಿಸ್‌

    ಮೆಡಿಕಲ್ ಚೆಕ್‍ಅಪ್‍ಗಾಗಿ ವಿದೇಶಕ್ಕೆ ತೆರಳಿದ್ದ ಸೋನಿಯಾ ಗಾಂಧಿ ಅವರು, ಸೋಮವಾರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಸೋನಿಯಾಗಾಂಧಿ ಅವರು ಮಡಿಕೇರಿ ಮಡಿಕೇರಿಗೆ ತೆರಳಿ ಖಾಸಗಿ ರೆಸಾರ್ಟ್‍ನಲ್ಲಿ ತಂಗಿದ್ದರು. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ಶಾಸಕ ಅರವಿಂದ ಬೆಲ್ಲದ ಚಿಕ್ಕಪ್ಪ ಚಿಕಿತ್ಸೆ ಫಲಿಸದೆ ಸಾವು

    ವೈದ್ಯಕೀಯ ತಪಾಸಣೆಗಾಗಿ ವಿದೇಶದಲ್ಲಿರುವ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಸೋಮವಾರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಿದ್ದರು. ಮೈಸೂರಿನಿಂದ (Mysuru) ಮಡಿಕೇರಿಗೆ (Madikeri) ತೆರಳಿದ ಸೋನಿಯಾಗಾಂಧಿ ಅವರು ಖಾಸಗಿ ರೆಸಾರ್ಟ್‍ನಲ್ಲಿ ತಂಗಿದ್ದರು. ಬಳಿಕ ಇಂದು ಮಂಡ್ಯದ ಬೆಳ್ಳಾಳೆಯಿಂದ ಪಾದಯಾತ್ರೆ ಪ್ರಾರಂಭ ಮಾಡಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜೊತೆ ಜೊತೆಗೆ ಹೆಜ್ಜೆ ಹಾಕಿದರು.

    ಪಾಂಡವಪುರದ ತೂಬಿನಕೆರೆಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಆದ ನಂತರ ತೂಬಿನಕೆರೆಯಿಂದ ಜಕ್ಕನಹಳ್ಳಿಗೆ ಸೋನಿಯಾ ಆಗಮಿಸಿ ಬೆಳಗ್ಗೆ 8 ಗಂಟೆಗೆ ಜಕ್ಕನಹಳ್ಳಿಯಿಂದ ಸಾಂಕೇತಿಕವಾಗಿ ಯಾತ್ರೆಯಲ್ಲಿ ಭಾಗಿಯಾದರು. ಸೋನಿಯಾ ಗಾಂಧಿ ಸುಮಾರು 10-15 ನಿಮಿಷಗಳ ಕಾಲ ನಡೆದರು. ನಂತರ ಪಾದಯಾತ್ರೆ ಮಾಡಿದ್ದು ಸಾಕು ಎಂದು ಹೇಳಿ ಸೋನಿಯಾ ಗಾಂಧಿ ಅವರನ್ನು ಕಾರಿಗೆ ರಾಹುಲ್ ಗಾಂಧಿ ಅವರು ಹತ್ತಿಸಿದರು.

    Live Tv
    [brid partner=56869869 player=32851 video=960834 autoplay=true]

  • ಗಾಂಧಿ ಕುಟುಂಬದವರೆಲ್ಲಾ ಬಂದರೂ ಏನೂ ಪರಿವರ್ತನೆ ಆಗಲ್ಲ: HDK

    ಗಾಂಧಿ ಕುಟುಂಬದವರೆಲ್ಲಾ ಬಂದರೂ ಏನೂ ಪರಿವರ್ತನೆ ಆಗಲ್ಲ: HDK

    ಬೆಂಗಳೂರು: ಭಾರತ್ ಜೋಡೋ (Bharat Jodo) ಯಾತ್ರೆಯಿಂದ ಜೆಡಿಎಸ್ (JDS) ಭದ್ರಕೋಟೆಗೆ ಏನೂ ಆಗಲ್ಲ. ಗಾಂಧಿ ಕುಟುಂಬದ (Family) ಎಲ್ಲಾ ಸದಸ್ಯರು ಬಂದರೂ ಏನೂ ಪರಿವರ್ತನೆ ಆಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಜೆಡಿಎಸ್ ಭದ್ರಕೋಟೆಯಲ್ಲಿ ಭಾರತ್ ಜೋಡೋ ಕಾರ್ಯಕ್ರಮ ಹಾಗೂ ಸೋನಿಯಾ, ರಾಹುಲ್ ಗಾಂಧಿ (Rahul Gnadhi) ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಭಾರತ್ ಜೋಡೋದಿಂದ ನಮ್ಮ ಕ್ಷೇತ್ರದ ಮೇಲೆ ಏನೂ ಪರಿಣಾಮ ಬಿರೋದಿಲ್ಲ. ಗಾಂಧಿ ಕುಟುಂಬದ ಎಲ್ಲಾ ಸದಸ್ಯರು ಬಂದರೂ ಏನೂ ಪರಿವರ್ತನೆ ಆಗೊಲ್ಲ. ಜನರ ಸಮಸ್ಯೆ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳಿಗೆ (National Party) ಕಾಳಜಿ ಇಲ್ಲ. ಇದೆಲ್ಲವೂ ಜನರಿಗೆ ಅರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಲಾವಿದರ ಕೋಟಾದಲ್ಲಿ ಎಂಎಲ್ಸಿ ಆಗಿರೋ ಯೋಗೇಶ್ವರ್‌ಗೆ 50 ಕೋಟಿ ಅನುದಾನ ಹೇಗೆ ಕೊಡ್ತಾರೆ: ನಿಖಿಲ್‌ ಪ್ರಶ್ನೆ

    ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ಕಾರ್ಯಕರ್ತರ ಮೇಲೆ ಎಫ್‌ಐಆರ್ (FIR) ದಾಖಲು ಆಗಿದೆ. ಯಾರ ಚಿತಾವಣೆ ಎಫ್‌ಐಆರ್ (FIR) ಆಗಿದೆ ಅಂತ ನನಗೆ ಗೊತ್ತಿದೆ. ಘಟನೆ ಬಗ್ಗೆ ಸಂಪೂರ್ಣ ದಾಖಲೆ ನನ್ನ ಬಳಿ ಇದೆ. ಹಿರಿಯ ಅಧಿಕಾರಿಗಳು, ಸಿಎಂಗೆ (Chief Minister) ಈ ಬಗ್ಗೆ ವಿವರಣೆ ಕೊಡ್ತೀನಿ. ಈ ಘಟನೆಗೆ ಯಾರು ಜವಾಬ್ದಾರರೋ ಅವರ ಮೇಲೆ ಕ್ರಮ ಆಗಬೇಕು. ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಯಾವ ಆಧಾರದಲ್ಲಿ ಕಾರ್ಯಕ್ರಮ ಆಯ್ತು? ಯಾರು ಕಾರ್ಯಕ್ರಮ ಮಾಡಿದ್ರು? ಅಂತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣ- 14 ಜನರ ಮೇಲೆ FIR ದಾಖಲು

    ಅಶ್ವಥ್ ನಾರಾಯಣ (CN Ashwath Naraya) ವಿರುದ್ಧ ದಾಖಲೆ ರಿಲೀಸ್ ಮಾಡಿದ್ದಕ್ಕೆ ಹೀಗಾಯಿತು ಅನ್ನೋ ಪ್ರಶ್ನೆಗೆ ಉತ್ತರಿಸಿದ ಹೆಚ್‌ಡಿಕೆ, ಬಿಎಂಎಸ್ (BMS) ಟ್ರಸ್ಟ್ ಕೇಸ್‌ಗೂ ರಾಜಕೀಯ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ಚನ್ನಪಟ್ಟಣದ ರಾಜಕೀಯ ವಿಚಾರದಲ್ಲಿ ಇದು ಆಗಿದೆ. ಅವರು ರಾಜಕೀಯವಾಗಿ ನೆಲೆಯೂರಬೇಕು, ಅಸ್ಥಿತ್ವ ಉಳಿಸಿಕೊಳ್ಳಬೇಕು ಅಂತ ಹೀಗೆ ಮಾಡಿದ್ದಾರೆ. ಅಶ್ವಥ್ ನಾರಾಯಣ 420 ಕೆಲಸವನ್ನೇ ಸಮರ್ಥಿಸಿಕೊಳ್ಳುವುದು ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೇ.. ಇದು ಬೆಂಗಳೂರು ಅಲ್ಲ – ನಲಪಾಡ್‌ಗೆ ಮಂಡ್ಯ ಕಾರ್ಯಕರ್ತನಿಂದ ತರಾಟೆ

    ಹೇ.. ಇದು ಬೆಂಗಳೂರು ಅಲ್ಲ – ನಲಪಾಡ್‌ಗೆ ಮಂಡ್ಯ ಕಾರ್ಯಕರ್ತನಿಂದ ತರಾಟೆ

    ಮಂಡ್ಯ: ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ಗೆ(Mohammed Nalapad)ಕೈ ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ನಡೆಯಿತು.

    ಮೈಸೂರಿನಿಂದ ಹೊರಟ ಭಾರತ್‌ ಜೋಡೋ ಯಾತ್ರೆ(Bharat Jodo Yatra) ಇಂದು ಮಧ್ಯಾಹ್ನ ಪಾಂಡವಪುರಕ್ಕೆ(Padavapura) ಎಂಟ್ರಿಯಾಯಿತು. ನಿಯಂತ್ರಣ ಮಾಡುವ ವಿಚಾರಕ್ಕೆ ಜನರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಸೋನಿಯಾ ಕೊಡಗು ಭೇಟಿ ರದ್ದು

    ಈ ವೇಳೆ ಓಡಿ ಬಂದ ನಲಪಾಡ್, ಕೈ ಮುಗಿದು ಜನರನ್ನು ನಿಯಂತ್ರಣ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ನಲಪಾಡ್ ಅವರನ್ನು ಮಂಡ್ಯದ ಕೈ ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಹೇ..ಇದು ಬೆಂಗಳೂರು ಅಲ್ಲಾ ಎಂದು ಕೈ ಕಾರ್ಯಕರ್ತರೊಬ್ಬರು ಅವಾಜ್‌ ಹಾಕಿದ್ದಾರೆ. ಅವಾಜ್‌ ಹಾಕಿದ ಬೆನ್ನಲ್ಲೇ ನಲಪಾಡ್‌ ಕೈ ಮುಗಿದು ವಾಪಸ್‌ ಹೋಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆ ಕ್ಷಣದಲ್ಲಿ ಸೋನಿಯಾ ಕೊಡಗು ಭೇಟಿ ರದ್ದು

    ಕೊನೆ ಕ್ಷಣದಲ್ಲಿ ಸೋನಿಯಾ ಕೊಡಗು ಭೇಟಿ ರದ್ದು

    ಮೈಸೂರು: ಭಾರತ್‌ ಜೋಡೋ ಯಾತ್ರೆಯಲ್ಲಿ(Bharat Jodo Yatra) ಭಾಗವಹಿಸಲು ರಾಜ್ಯಕ್ಕೆ ಆಗಮಿಸಿದ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರ ಕೊಡಗು ಭೇಟಿ ಕೊನೆ ಕ್ಷಣದಲ್ಲಿ ರದ್ದಾಗಿದೆ.

    ಮೈಸೂರಿನಿಂದ(Mysuru) ಹೆಲಿಕಾಪ್ಟರ್‌ ಮೂಲಕ ಕೊಡಗಿಗೆ ಬರಲು ಸಿದ್ಧತೆ ನಡೆಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡ್‌ ಆಗಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಹೆಲಿಕಾಪ್ಟರ್‌(Helicopter) ಪ್ರಯಾಣ ರದ್ದಾಗಿತ್ತು.

    ಇದಾದ ಬಳಿಕ ರಸ್ತೆ ಮಾರ್ಗದ ಮೂಲಕ ಮಡಿಕೇರಿಯ ಕೂರ್ಗ್ ವೈಲ್ಡ್ ರೆಸಾರ್ಟ್‌ಗೆ ಬರುವ ಪ್ಲ್ಯಾನ್‌ ಮಾಡಲಾಗಿತ್ತು. ಆದರೆ ಆರೋಗ್ಯ ಸಮಸ್ಯೆ ಕಾರಣ ರಸ್ತೆ ಮಾರ್ಗದಲ್ಲಿ ದೂರ ಪ್ರಯಾಣಕ್ಕೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಕೊನೆ ಕ್ಷಣದಲ್ಲಿ ರಸ್ತೆ ಪ್ರಯಾಣವೂ ರದ್ದಾಗಿದೆ. ಈಗ ಕಬಿನಿ(Kabini) ಬಳಿಯ ರೆಸಾರ್ಟ್‌ನಲ್ಲಿ ಸೋನಿಯಾ ಗಾಂಧಿ 2 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: 29 ವರ್ಷಗಳ ನಂತ್ರ ವೈಷಮ್ಯ ಶಮನ – ವೀರಶೈವ, ದಲಿತರೊಂದಿಗೆ ರಾಹುಲ್ ಸಹಭೋಜನ


    ಇಂದು ಮಧ್ಯಾಹ್ನ ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೋನಿಯಾ ಬಳಿಕ ಮೈಸೂರಿನ ವಿಂಡ್‌ ಫ್ಲವರ್‌ ಹೋಟೆಲಿಗೆ ತೆರಳಿದರು. 30 ನಿಮಿಷ ಹೋಟೆಲಿನಲ್ಲಿದ್ದ ಸೋನಿಯಾ ಗಾಂಧಿ ಬಳಿಕ ಕಬಿನಿಗೆ ಪ್ರಯಾಣಿಸಿದರು.


    ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎರಡು ದಿನಗಳ‌ ಕಾಲ ಸೋನಿಯಾ ಗಾಂಧಿ ಕಬಿನಿಯಲ್ಲಿಯೇ ಉಳಿಯುತ್ತಾರೆ. ಹವಮಾನ ವೈಪರೀತ್ಯದಿಂದಾಗಿ ಮಡಿಕೇರಿಗೆ ತೆರಳುತ್ತಿಲ್ಲ.  ವಿಮಾನ ನಿಲ್ದಾಣದಿಂದ ಹೋಟೆಲಿಗೆ ಕಾರಿನಲ್ಲಿ ಬರುವಾಗ  ಅವರ ಆರೋಗ್ಯ ವಿಚಾರಿಸಿದೆವು. ಅವರು ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನಾನು ಕಬಿನಿಗೆ ತೆರಳುತ್ತಿಲ್ಲ ಎಂದು ತಿಳಿಸಿದರು

    Live Tv
    [brid partner=56869869 player=32851 video=960834 autoplay=true]

  • ಎಐಸಿಸಿ ಅಧ್ಯಕ್ಷೀಯ ಚುನಾವಣೆ – ಮಗನ ಜೊತೆ ಚರ್ಚಿಸೋಕೆ ರಾಜ್ಯಕ್ಕೆ ಬರ್ತಿದ್ದಾರೆ ಸೋನಿಯಾ

    ಎಐಸಿಸಿ ಅಧ್ಯಕ್ಷೀಯ ಚುನಾವಣೆ – ಮಗನ ಜೊತೆ ಚರ್ಚಿಸೋಕೆ ರಾಜ್ಯಕ್ಕೆ ಬರ್ತಿದ್ದಾರೆ ಸೋನಿಯಾ

    ಬೆಂಗಳೂರು: ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಎಐಸಿಸಿ ಅಧ್ಯಕ್ಷೀಯ ಚುನಾವಣೆ (AICC President Election) ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.

    ಇಂದು ಬೆಳಗ್ಗೆ ದೆಹಲಿಯಿಂದ ಹೊರಟು ಮೈಸೂರು (Mysuru) ವಿಮಾನ ನಿಲ್ದಾಣಕ್ಕೆ ಸೋನಿಯಾ ಗಾಂಧಿ ಆಗಮಿಸಲಿದ್ದಾರೆ. ನಂತರ ಹೆಲಿಕಾಪ್ಟರ್‌ ಮೂಲಕ ಮಡಿಕೇರಿ (Madikeri) ತಲುಪಲಿದ್ದಾರೆ. ನಂತರ ರಾಹುಲ್‌ ಗಾಂಧಿ ಜೊತೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ರಾಹುಲ್‌, ಸೋನಿಯಾ ಗಾಂಧಿ ಅವರ ತ್ಯಾಗ ಬಹಳಷ್ಟಿದೆ: ಮಲ್ಲಿಕಾರ್ಜುನ ಖರ್ಗೆ

    rahul siddaramaiah dks

    ಎಐಸಿಸಿ ಅಧ್ಯಕ್ಷ ಚುನಾವಣೆಯ ರಾಜಕೀಯ ಈಗ ದೆಹಲಿಯಿಂದ ಮಡಿಕೇರಿಗೆ ಶಿಫ್ಟ್ ಆಗುತ್ತಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಸ್ಪರ್ಧಿಸಿದ್ದು, ಹೈಕಮಾಂಡ್ ಒಲವು ಮಾತ್ರ ಖರ್ಗೆ ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ಆ ಕುರಿತ ಮಹತ್ವದ ಚರ್ಚೆ ಮಡಿಕೇರಿಯ ರೆಸಾರ್ಟ್‌ನಲ್ಲಿ ನಡೆಯಲಿದೆ.

    ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ದೆಹಲಿಗೆ ಹೋಗುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರೇ ಮಗನ ಜೊತೆ ಚರ್ಚೆಗೆ ಮಡಿಕೇರಿಗೆ ಬರುತ್ತಿದ್ದಾರೆ. ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಕಾರಣ ಎರಡು ದಿನ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಬಿಡುವು ನೀಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ; ತ್ರಿಪಾಠಿ ನಾಮಪತ್ರ ತಿರಸ್ಕೃತ – ಖರ್ಗೆ, ಶಶಿ ತರೂರ್‌ ನಡುವೆ ಫೈಟ್

    ಇದೇ ವೇಳೆ ಎಐಸಿಸಿ ಚುನಾವಣೆ ಬಗ್ಗೆ ಚರ್ಚಿಸಲು ಸೋನಿಯಾ ಗಾಂಧಿ ಇಂದು ಮಧ್ಯಾಹ್ನ ಮೈಸೂರಿಗೆ ಬರಲಿದ್ದು, ಇಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಮಡಿಕೇರಿಗೆ ತೆರಳಲಿದ್ದಾರೆ. ಸಂಜೆ ವೇಳೆಗೆ ರಾಹುಲ್ ಗಾಂಧಿ ಕೂಡ ಮಡಿಕೇರಿಗೆ ಹೋಗುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್ ಮಡಿಕೇರಿಗೆ ತೆರಳಲಿದ್ದು ಮಹತ್ವದ ಚರ್ಚೆ ನಡೆಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿಕೆಶಿ- ಸಿದ್ದರಾಮಯ್ಯರನ್ನು ಜೋಡಿಸಲು ರಾಹುಲ್ ಗಾಂಧಿ ಬಂದಿದ್ದಾರೆ: ಭೈರತಿ ಬಸವರಾಜ್

    ಡಿಕೆಶಿ- ಸಿದ್ದರಾಮಯ್ಯರನ್ನು ಜೋಡಿಸಲು ರಾಹುಲ್ ಗಾಂಧಿ ಬಂದಿದ್ದಾರೆ: ಭೈರತಿ ಬಸವರಾಜ್

    ಗದಗ: ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಕಾರ್ಯಕ್ರಮಕ್ಕೆ ಬಂದಿಲ್ಲ ಬದಲಿಗೆ ಡಿಕೆಶಿ- ಸಿದ್ದರಾಮಯ್ಯರನ್ನ (Siddaramaiah) ಜೋಡಿಸಲು ಬಂದಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ (Byrathi Basavaraj) ವ್ಯಂಗ್ಯವಾಡಿದರು.

    ಓಬಿಸಿ ಸಮಾವೇಶ ಪೂರ್ವಭಾವಿ ಸಭೆಗೆ ಆಗಮಿಸಿದ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಭಾರತ ಜೋಡಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಪ್ರಧಾನಿ ಮೋದಿ ಅವರು ವಿಶ್ವ ಮಟ್ಟದಲ್ಲಿ ಭಾರತ ಹೆಸರು ಮಾಡಿ ಜೋಡಿಸುತ್ತಿದ್ದಾರೆ ಎಂದ ಅವರು, ನಮ್ಮ ಪಕ್ಷದ ಮೇಲೆ 40% ಕಾಂಗ್ರೆಸ್ ಆರೋಪ ಸರಿಯಲ್ಲ. ರಾಹುಲ್ ಗಾಂಧಿ, ಅವರ ತಾಯಿ, ಸಹಚರರು ಬೇಲ್‌ನಲ್ಲಿದ್ದಾರೆ ನೆನಪಿರಲಿ ಎಂದು ಹೇಳಿದರು.

    ಈ ವೇಳೆ ರಾಜ್ಯ ಕಾಂಗ್ರೆಸ್ (Congress) ನಾಯಕರ ವಿರುದ್ಧ ಸಹ ಹರಿಹಾಯ್ದ ಅವರು, ನಿಮ್ಮ ಅಧಿಕಾರದಲ್ಲಿ ಏನು ಮಾಡಿದ್ದಿರಿ ತಿರುಗಿ ನೋಡಿ? ಶಿಕ್ಷಣ ಇಲಾಖೆ ಹಾಗೂ ಅರ್ಕಾವತಿ ಏನಾಗಿದೆ ಎಂದು ಪ್ರಶ್ನಿಸಿದರು. ಪೇಸಿಎಂ ಟೀ ಶರ್ಟ್ ಹಾಕಿದ ಕೂಡಲೇ ರಾಜ್ಯದ ಜನತೆ ಅವರ ಕಡೆ ಹೋಗುತ್ತಾರೆ ಎಂಬುದು ಭ್ರಮೆ ಎಂದು ಕಿಡಿಕಾರಿದರು.

    ಸಿಪಿ ಯೋಗೇಶ್ವರ್‌- ಹೆಚ್‌ಡಿಕೆ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ. ಕುಮಾರಸ್ವಾಮಿಯನ್ನು ಈ ವಿಚಾರವಾಗಿ ಖಂಡಿಸುತ್ತೇನೆ. ಮಾಜಿ ಸಿಎಂ ಆಗಿ, ಅಭಿವೃದ್ಧಿ ವಿಚಾರದಲ್ಲಿ ಹೀಗೆ ಮಾಡುವುದು ಸರಿಯಲ್ಲ. ಅಭಿವೃದ್ಧಿಯೇ ಬೇರೆ ರಾಜಕಾರಣವೇ ಬೇರೆ. ಬಿಜೆಪಿ ಯಾವಾಗಲೂ ಸಿಪಿವೈ ಹಿಂದಿದೆ. ಅವರನ್ನು ನಾವ್ಯಾರೂ ಬಿಟ್ಟುಕೊಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಿಎಫ್‌ಐ ಕಾರ್ಯಕರ್ತರಿಗೆ 3 ಹಂತದ ತರಬೇತಿ – ಹಿಂದೂ ಹೆಸರಿನಲ್ಲಿ ಹಾಲ್‌ ಖರೀದಿಸಿ, ದಾನ

    ಇನ್ನು ಆರ್‌ಎಸ್‌ಎಸ್ ಬ್ಯಾನ್ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್ ದೇಶಭಕ್ತಿ ಸಂಸ್ಥೆ. ದೇಶಭಕ್ತಿ ಸಂಸ್ಥೆ ಬ್ಯಾನ್ ಮಾಡುವಂತೆ ಹೇಳುವವರ ತಲೆ ಸರಿ ಇದೆಯಾ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಖಾದಿ ಎಂಪೋರಿಯಂನಲ್ಲಿ ಲೇಡಿಸ್ ಟಾಪ್ ಡ್ರೆಸ್ ಖರೀದಿಸಿದ ಸಿಎಂ

    ಪಿಎಫ್‌ಐ ದೇಶ ದ್ರೋಹ ಮಾಡುವ ಸಂಘಟನೆಯಾಗಿದೆ. ನಮ್ಮ ದೇಶದ ಅನ್ನ, ನೀರು, ಗಾಳಿ ಕುಡಿದು ದೇಶಕ್ಕೆ ಮಾರಕವಾಗುವುದು ಎಷ್ಟು ಸರಿ? ವೋಟ್ ಬ್ಯಾಂಕ್ ರಾಜಕಾರಣ ಬಿಡಿ, ದೇಶ ಉಳಿಸುವ ಕೆಲಸ ಮಾಡಿ ಎಂದ ಅವರು, ಭಾರತ್ ಜೋಡೋ ಕಾರ್ಯಕ್ರಮಕ್ಕೆ ಹಾಕಿದ ಬ್ಯಾನರ್, ಫ್ಲೆಕ್ಸ್‌ಗಳನ್ನು ನಮ್ಮವರು ಯಾರೂ ಹರಿದಿಲ್ಲ. ಕಾಂಗ್ರೆಸ್‌ನವರೇ ಹರಿದು, ಇಲ್ಲ ಸಲ್ಲದ ವಿವಾದ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.

    Live Tv
    [brid partner=56869869 player=32851 video=960834 autoplay=true]

  • ಎರಡು ದಿನ ಮಡಿಕೇರಿಯಲ್ಲಿ ಸೋನಿಯಾ, ರಾಹುಲ್ ವಾಸ್ತವ್ಯ

    ಎರಡು ದಿನ ಮಡಿಕೇರಿಯಲ್ಲಿ ಸೋನಿಯಾ, ರಾಹುಲ್ ವಾಸ್ತವ್ಯ

    ಮೈಸೂರು : ಭಾರತ್ ಜೋಡೋ ಪಾದಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಳ್ಳಲು ರಾಹುಲ್ ಗಾಂಧಿ (Rahul Gandhi) ಜೊತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಮಡಿಕೇರಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಲಿದ್ದಾರೆ.

    ಇಂದು ಮೈಸೂರಿಗೆ ಆಗಮಿಸುತ್ತಿರುವ ಸೋನಿಯಾ ಗಾಂಧಿ ಅವರು ವಸ್ತು ಪ್ರದರ್ಶನಾ ಮೈದಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಮೈಸೂರು ನಗರದಿಂದ Ts ಛತ್ರದವರೆಗೂ ಸಾಗಲಿರುವ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. ನಂತರ ಎಸಿಸಿಸಿ ಅಧ್ಯಕ್ಷ ಚುನಾವಣೆ ಕುರಿತು ಮಗನ ಜೊತೆ ಚರ್ಚೆ ನಡೆಸಲು ಮಡಿಕೇರಿಗೆ ಸೋಮವಾರ ಮಧ್ಯಾಹ್ನ 12.30ಕ್ಕೆ ಬರಲಿದ್ದಾರೆ. ಇದನ್ನೂ ಓದಿ: 29 ವರ್ಷಗಳ ನಂತ್ರ ವೈಷಮ್ಯ ಶಮನ – ವೀರಶೈವ, ದಲಿತರೊಂದಿಗೆ ರಾಹುಲ್ ಸಹಭೋಜನ

    ಸೋನಿಯಾಗಾಂಧಿ ಅವರು ಸೋಮವಾರದ ಯಾತ್ರೆ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಮಡಿಕೇರಿಗೆ (Madikeri) ಪ್ರಯಾಣಿಸಲಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Vidhan Sabha Election) ಬೆರಳಣಿಕೆ ತಿಂಗಳು ಉಳಿದಿದೆ. ಈ ಸಮಯದಲ್ಲಿ ಸೋನಿಯಾ ಗಾಂಧಿ ಅವರ ಆಗಮನದಿಂದ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಇದನ್ನೂ ಓದಿ: ಟಿಪ್ಪು ಹಿಂದೂಗಳ ರಕ್ತ ಹರಿಸಿದ ನೆಲದಿಂದಲೇ ರಾಹುಲ್ ಯಾತ್ರೆ – ಕಾಂಗ್ರೆಸ್‌ಗೆ ರಾಹುಕಾಲ ಎಂದ BJP

    ಬಿಜೆಪಿ ನೀತಿಗಳು, ಆಡಳಿತ ವೈಖರಿ, ಸಂಘರ್ಷದ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಸೆ.30 ರಂದು ಗುಂಡ್ಲುಪೇಟೆ ಮೂಲಕ ಆರಂಭವಾಗಿದ್ದು, ಕೇರಳದ ವೈನಾಡು (ರಾಹುಲ್ ಗಾಂಧಿ ಪ್ರತಿನಿಧಿಸುವ ಸಂಸತ್ ಕ್ಷೇತ್ರ) ಮೂಲಕ ಕರ್ನಾಟಕದ ಗಡಿ ಭಾಗ ಗುಂಡ್ಲುಪೇಟೆ ತಲುಪಿದ ಭಾರತ್ ಜೋಡೋ ಯಾತ್ರೆ, ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಮೀ ಕೈಪಡೆ ಪಾದಯಾತ್ರೆ ನಡೆಸಲಿದೆ.

    Live Tv
    [brid partner=56869869 player=32851 video=960834 autoplay=true]