Tag: Bharat Jodo Nyay Yatra

  • ಯುಪಿಯಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ; ಅಖಿಲೇಶ್‌ ಯಾದವ್‌ ಜೊತೆ ರಾಹುಲ್‌ ಗಾಂಧಿ ಸೆಲ್ಫಿ

    ಯುಪಿಯಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ; ಅಖಿಲೇಶ್‌ ಯಾದವ್‌ ಜೊತೆ ರಾಹುಲ್‌ ಗಾಂಧಿ ಸೆಲ್ಫಿ

    ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಂದು (ಭಾನುವಾರ) ಆಗ್ರಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದರು. ಇಬ್ಬರು ನಾಯಕರ ನಡುವಿನ ಆತ್ಮೀಯತೆಯನ್ನು ಎತ್ತಿ ತೋರಿಸುವ ಹಲವಾರು ಫೋಟೋಗಳು ವೈರಲ್‌ ಆಗಿವೆ.

    ಯಾತ್ರೆ ವೇಳೆ ಅಖಿಲೇಶ್‌ ಯಾದವ್ (Akhilesh Yadav) ಜೊತೆ ರಾಹುಲ್ ಗಾಂಧಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರು ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಫೋಟೊಗಳು ಗಮನ ಸೆಳೆಯುತ್ತಿವೆ. ಇದನ್ನೂ ಓದಿ: ಹರಿಯಾಣದ ಮಾಜಿ ಶಾಸಕನಿಗೆ ಗುಂಡಿಕ್ಕಿ ಹತ್ಯೆ

    ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಜೊತೆ ಅಖಿಲೇಶ್‌ ಯಾದವ್‌ ಪಾಲ್ಗೊಂಡಿದ್ದರು. ಇಬ್ಬರೂ ನಾಯಕರು ಕೆಂಪು ಜೀಪಿನ ಮೇಲೆ ಒಟ್ಟಿಗೆ ಪೋಸ್ ನೀಡುತ್ತಿರುವುದು ಫೋಟೊದಲ್ಲಿ ಇದೆ.

    ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರು ಅಖಿಲೇಶ್‌ ಯಾದವ್ ಮತ್ತು ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಇಬ್ಬರು ನಾಯಕರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಯಾತ್ರೆಗೆ ನೆರೆದಿದ್ದ ಜನರತ್ತ ಕೈ ಬೀಸಿದ ಫೋಟೊಗಳು ಸಹ ವೈರಲ್‌ ಆಗಿವೆ. ಇದನ್ನೂ ಓದಿ: ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತೆ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತೆ: ಪ್ರಧಾನಿ ಅಭಯ

  • ಪ್ರಿಯಾಂಕಾ ಗಾಂಧಿ ಆಸ್ಪತ್ರೆಗೆ ದಾಖಲು

    ಪ್ರಿಯಾಂಕಾ ಗಾಂಧಿ ಆಸ್ಪತ್ರೆಗೆ ದಾಖಲು

    ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ (Priyanaka Gandhi Vadra) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆ ಶುಕ್ರವಾರ ಉತ್ತರಪ್ರದೇಶದ (Uttar Pradesh) ಚಂದೌಲಿಯಲ್ಲಿ (Chandauli) ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.

    ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಸ್ವತಃ ಪ್ರಿಯಾಂಕ ಗಾಂಧಿ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಬಿಹಾರದಿಂದ ಉತ್ತರಪ್ರದೇಶಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆ (Bharat Jodo Nyay Yatra) ತಲುಪುವ ವೇಳೆ ತಾನೂ ಅದರಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದ್ದೆ. ಆದರೆ ಅನಾರೋಗ್ಯದಿಂದಾಗಿ ನಾನು ಆಸ್ಪತ್ರೆ ಸೇರಬೇಕಾಯಿತು. ಅನಾರೋಗ್ಯದಿಂದ ಚೇತರಿಸಿಕೊಂಡ ತಕ್ಷಣ ಮತ್ತೆ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪ್ರತಿಭಟನಾ ನಿರತರ ಮೇಲೆ ಮತ್ತೆ ಅಶ್ರುವಾಯು ದಾಳಿ – ಹೃದಯಾಘಾತದಿಂದ ರೈತ ಸಾವು!

    ಯಾತ್ರೆಯಲ್ಲಿ ತಾನು ಭಾಗಿಯಾಗದ ಹಿನ್ನೆಲೆ ಭಾರತ್ ನ್ಯಾಯ್ ಯಾತ್ರೆಯಲ್ಲಿ ಶ್ರಮಿಸಿದ ಎಲ್ಲಾ ನನ್ನ ಸಹೋದ್ಯೋಗಿಗಳು, ಯಾತ್ರಿಗಳು ಹಾಗೂ ನನ್ನ ಸಹೋದರನಿಗೆ ಶುಭಹಾರೈಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಣ್ಣದ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ – 11 ಮಂದಿ ಸಜೀವ ದಹನ

  • ಸಮಸ್ಯೆ ಏನು ಅಂತ ಅರ್ಥವಾಗ್ತಿಲ್ಲ: ‘ನಾಯಿ ಬಿಸ್ಕೆಟ್‌’ ಟೀಕೆಗೆ ರಾಹುಲ್‌ ಗಾಂಧಿ ಕಿಡಿ

    ಸಮಸ್ಯೆ ಏನು ಅಂತ ಅರ್ಥವಾಗ್ತಿಲ್ಲ: ‘ನಾಯಿ ಬಿಸ್ಕೆಟ್‌’ ಟೀಕೆಗೆ ರಾಹುಲ್‌ ಗಾಂಧಿ ಕಿಡಿ

    ನವದೆಹಲಿ: ನಾಯಿ ಬಿಸ್ಕೆಟ್‌ (Dog Biscuit) ವಿಚಾರವಾಗಿ ತಮ್ಮ ವಿರುದ್ಧ ಟೀಕೆ ವ್ಯಕ್ತಪಡಿಸಿರುವ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಕಿಡಿಕಾರಿದ್ದಾರೆ.

    ನಾಯಿ ಬಿಸ್ಕೆಟ್‌ ಕುರಿತು ಸ್ಪಷ್ಟನೆ ನೀಡಿರುವ ರಾಹುಲ್‌ ಗಾಂಧಿ, ನಾಯಿಗೆ ನಾನು ಬಿಸ್ಕೆಟ್‌ ತಿನ್ನಿಸಲು ಪ್ರಯತ್ನಿಸಿದೆ. ಆದರೆ ಅದು ಸ್ವೀಕರಿಸಲಿಲ್ಲ, ನಡುಗುತ್ತಿತ್ತು. ಹೀಗಾಗಿ ಅದರ ಮಾಲೀಕರಿಗೆ ನಾನು ಬಿಸ್ಕೆಟ್‌ ನೀಡಿದೆ. ಮಾಲೀಕನ ಕೈ ಸೇರುತ್ತಿದ್ದಂತೆ ನಾಯಿ ಬಿಸ್ಕೆಟ್‌ಗಳನ್ನು ತಿಂದಿತು. ಅದರಲ್ಲಿ ಏನು ಸಮಸ್ಯೆ ಇದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ನಾಯಿ ತಿರಸ್ಕರಿಸಿದ ಬಿಸ್ಕೆಟ್ ಅನ್ನು ರಾಹುಲ್‌ ಗಾಂಧಿ ವ್ಯಕ್ತಿಯೊಬ್ಬರಿಗೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಟೀಕೆ ಕೂಡ ವ್ಯಕ್ತವಾಗಿತ್ತು. ರಾಹುಲ್‌ ಗಾಂಧಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಈ ರೀತಿ ನಡೆಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಇದನ್ನೂ ಓದಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ಭಾರತ್ ಜೋಡೊ ನ್ಯಾಯ ಯಾತ್ರಾ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರಾಹುಲ್‌ ಗಾಂಧಿ, ನಾಯಿಗೆ ಬಿಸ್ಕೆಟ್ ನೀಡಿದ್ದಾರೆ. ಆದರೆ ನಾಯಿ ಅದನ್ನು ತಿನ್ನಲು ನಿರಾಕರಿಸಿದೆ. ನಂತರ ಅದರ ಮಾಲೀಕನಿಗೆ ಬಿಸ್ಕೆಟ್‌ನ್ನು ರಾಹುಲ್‌ ಗಾಂಧಿ ನೀಡಿದ್ದಾರೆ. ಈ ದೃಶ್ಯದ ವೀಡಿಯೋ ವೈರಲ್‌ ಆಗಿದೆ.

    ನಾಯಿ ತಿನ್ನಲು ನಿರಾಕರಿಸಿದ ಬಿಸ್ಕೆಟ್‌ ಅನ್ನು ಕಾರ್ಯಕರ್ತನಿಗೆ ರಾಹುಲ್‌ ಗಾಂಧಿ ನೀಡಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ. ಇದಕ್ಕೆ ಪ್ರತಿಯಾಗಿ ರಾಹುಲ್‌ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

  • ಭಾರತ್‌ ಜೋಡೊ ನ್ಯಾಯ ಯಾತ್ರೆ ವೇಳೆ ರಾಹುಲ್‌ ಗಾಂಧಿ ಕಾರಿನ ಗಾಜು ಪುಡಿಪುಡಿ

    ಭಾರತ್‌ ಜೋಡೊ ನ್ಯಾಯ ಯಾತ್ರೆ ವೇಳೆ ರಾಹುಲ್‌ ಗಾಂಧಿ ಕಾರಿನ ಗಾಜು ಪುಡಿಪುಡಿ

    ಕೋಲ್ಕತ್ತ: ಭಾರತ್‌ ಜೋಡೊ ನ್ಯಾಯ ಯಾತ್ರೆಯು (Bharat Jodo Nyay Yatra) ಬಿಹಾರದಿಂದ ಪಶ್ಚಿಮ ಬಂಗಾಳ ಪ್ರವೇಶಿಸುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಗದ್ದಲ ಸೃಷ್ಟಿಯಾದ್ದರಿಂದ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ಕಾರಿನ ಹಿಂಬದಿಯ ಗಾಜು ಪುಡಿಯಾಗಿರುವ ಘಟನೆ ನಡೆದಿದೆ.

    ರಾಹುಲ್‌ ಗಾಂಧಿ ನೇತೃತ್ವದ ಯಾತ್ರೆಯನ್ನು ವೀಕ್ಷಿಸಲು, ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಲಾಭಾ ಸೇತುವೆಗೆ ಸಾವಿರಾರು ಜನರು ಸೇರಿದ್ದರು. ಈ ವೇಳೆ ರಾಹುಲ್‌ ಗಾಂಧಿ ಇದ್ದ ಕಾರಿನ ಗಾಜು ಒಡೆದಿದೆ. ಘಟನೆ ನಡೆದಾಗ ಕಾಂಗ್ರೆಸ್‌ ನಾಯಕ ಬಸ್ಸಿನಲ್ಲಿದ್ದರು ಎನ್ನಲಾಗಿದೆ. ಇದು ಭದ್ರತಾ ಲೋಪ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಅಡ್ಡಿಪಡಿಸುವವರನ್ನು ಯಾರೂ ನೆನಪಿಸಿಕೊಳ್ಳಲ್ಲ: ಅಧಿವೇಶನಕ್ಕೂ ಮುನ್ನ ಸಂಸದರಿಗೆ ಮೋದಿ ಸಲಹೆ

    ಮಾಲ್ಡಾದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಹೆಚ್ಚಿನ ಭದ್ರತೆಗೆ ಗಮನ ಕೇಂದ್ರೀಕರಿಸಲಾಗಿದೆ. ಈ ಸಮಾರಂಭಕ್ಕೆ ಕೆಲವೇ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಟೀಕಿಸಿದ್ದಾರೆ.

    ರಾಹುಲ್ ಗಾಂಧಿಯವರ ಯಾತ್ರೆ ಹೊರಟಿರುವ ಮಣಿಪುರ, ಅಸ್ಸಾಂ, ಮೇಘಾಲಯ, ಬಿಹಾರ, ಪಶ್ಚಿಮ ಬಂಗಾಳದಂತಹ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲ. ಕೆಲವೆಡೆ ರಾಹುಲ್ ಪೋಸ್ಟರ್ ಹರಿದಿದೆ. ಮತ್ತೊಂದು ಕಡೆ ಅವರ ಕಾರಿನ ಗಾಜು ಒಡೆದಿದೆ. ಒಂದಂತೂ ಸ್ಪಷ್ಟ. ಏನೇ ಆಗಲಿ ಯಾತ್ರೆ ನಿಲ್ಲುವುದಿಲ್ಲ. ಇದು ಮುಂದುವರಿಯಲಿದೆ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಹೇಳಿದ್ದಾರೆ. ಇದನ್ನೂ ಓದಿ: ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವನೆ – ಇದು ಪಿಕ್ನಿಕ್‌ ಸ್ಪಾಟ್‌ ಅಲ್ಲ ಎಂದು ಕೋರ್ಟ್‌ ಗರಂ

    ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಆಡಳಿತವು ರಾಹುಲ್ ಗಾಂಧಿಗೆ ಮಾಲ್ಡಾ ಜಿಲ್ಲೆಯ ಭಾಲುಕಾ ನೀರಾವರಿ ಬಂಗಲೆಯಲ್ಲಿ ತಂಗಲು ಅನುಮತಿ ನಿರಾಕರಿಸಿತ್ತು. ನಂತರ ಕಾಂಗ್ರೆಸ್ ಯಾತ್ರೆಯ ವೇಳಾಪಟ್ಟಿಯನ್ನು ಬದಲಾಯಿಸಲಾಯಿತು.

  • ನಮಗೆ ನಿತೀಶ್‌ ಕುಮಾರ್‌ ಅಗತ್ಯವಿಲ್ಲ: ಮೈತ್ರಿ ಮುರಿದ ಬಳಿಕ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

    ನಮಗೆ ನಿತೀಶ್‌ ಕುಮಾರ್‌ ಅಗತ್ಯವಿಲ್ಲ: ಮೈತ್ರಿ ಮುರಿದ ಬಳಿಕ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

    ನವದೆಹಲಿ: ಮಹಾಘಟಬಂಧನ್‌ ಮೈತ್ರಿಕೂಟ ತೊರೆದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಬಳಿಕ ಬಿಹಾರ ಸಿಎಂ ನಿತೀಶ್‌ ಕುಮಾರ್‌ (Nitish Kumar) ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಮೌನ ಮುರಿದಿದ್ದಾರೆ. ನಮಗೆ ನಿತೀಶ್‌ ಕುಮಾರ್‌ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

    ಭಾರತ್‌ ಜೋಡೊ ನ್ಯಾಯ ಯಾತ್ರೆ (Bharat Jodo Nyay Yatra) ಕೈಗೊಂಡಿರುವ ರಾಹುಲ್‌ ಗಾಂಧಿ ಅವರು, ಬಿಹಾರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಮಗೆ ನಿತೀಶ್‌ ಕುಮಾರ್‌ ಅಗತ್ಯವಿಲ್ಲ. ಒತ್ತಡಕ್ಕೆ ಒಳಗಾಗಿ ಅವರು ಯೂ-ಟರ್ನ್‌ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿತೀಶ್ ಸಿಎಂ ಆದ ಬಳಿಕ ಮೊದಲ ಬಾರಿ ಭಾರತ್ ಜೋಡೋ ಯಾತ್ರೆ ಬಿಹಾರಕ್ಕೆ ಎಂಟ್ರಿ

    ರಾಜ್ಯಪಾಲರಿಗೆ ಬಹಳ ಆಶ್ಚರ್ಯವಾಯಿತು. ‘ಏನು ನಿತೀಶ್-ಜಿ ನೀವು ಇಷ್ಟು ಬೇಗ ಹಿಂತಿರುಗಿದ್ದೀರಿ?’ ಅವರು ಕೇಳಿದ್ದರು. ನಿತೀಶ್‌ ಕುಮಾರ್‌ ಅವರು ಹಾಗೆಯೇ ಎಂದು ರಾಹುಲ್‌ ಗಾಂಧಿ ಚಾಟಿ ಬೀಸಿದ್ದಾರೆ.

    ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದಿಂದ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಈಚೆಗೆ ನಿರ್ಗಮಿಸಿದರು. ಬಳಿಕ ಆರ್‌ಜೆಡಿ ಜೊತೆಗಿನ ಮಹಾಘಟಬಂಧನ್‌ ಮೈತ್ರಿ ಮುರಿದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಇದನ್ನೂ ಓದಿ: 9ನೇ ಬಾರಿಗೆ ಬಿಹಾರ ಸಿಎಂ ಆಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕಾರ

    ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜ.28 ರಂದು 9 ನೇ ಬಾರಿಗೆ ಸಿಎಂ ಆಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕರಿಸಿದರು. ಇದರ ಜೊತೆ ಬಿಹಾರದ ಸಂಪುಟ ದರ್ಜೆಯ ಸಚಿವರಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್‌ ಕುಮಾರ್‌ ಸಿನ್ಹಾ ಪ್ರಮಾಣ ವಚನ ಸ್ವೀಕರಿಸಿದರು.

  • ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಗೆ ದೇಣಿಗೆ ಕೋರಿದ ಕಾಂಗ್ರೆಸ್‌

    ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಗೆ ದೇಣಿಗೆ ಕೋರಿದ ಕಾಂಗ್ರೆಸ್‌

    – 670 ರೂ. ದೇಣಿಗೆ ಕೊಟ್ಟವರಿಗೆ ಸಿಗುತ್ತೆ ರಾಗಾ ಸಹಿಯಿರುವ ಟಿ-ಶರ್ಟ್‌

    ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ನ್ಯಾಯ ಯಾತ್ರೆಗಾಗಿ (Bharat Jodo Nyay Yatra) ದೇಣಿಗೆ ನೀಡುವಂತೆ ಕೋರಲಾಗಿದೆ. ಅದಕ್ಕಾಗಿ ‘ನ್ಯಾಯಕ್ಕಾಗಿ ದೇಣಿಗೆ’ ಅಭಿಯಾನ ಆರಂಭಿಸಲಾಗಿದೆ.

    6,700 ಕಿಮೀ ಭಾರತ್ ಜೋಡೋ ನ್ಯಾಯ ಯಾತ್ರೆಗೆ 670 ರೂ. ದೇಣಿಗೆ ಕೊಟ್ಟವರಿಗೆ ರಾಹುಲ್‌ ಗಾಂಧಿ ಸಹಿ ಇರುವ ಟಿ-ಶಿಟ್ ನೀಡಲಾಗುವುದು. 67,000 ರೂ. ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವವರಿಗೆ ಟಿ-ಶರ್ಟ್, ಬ್ಯಾಗ್, ಬ್ಯಾಂಡ್, ಬ್ಯಾಡ್ಜ್ ಮತ್ತು ಸ್ಟಿಕ್ಕರ್ ಒಳಗೊಂಡಿರುವ ‘ನ್ಯಾಯ ಕಿಟ್’ ಎಂದು ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ಗೆ  75 ವರ್ಷದ ಸಂಭ್ರಮ- ಪ್ರಧಾನಿಯಿಂದ ಜ.28ಕ್ಕೆ ವಜ್ರ ಮಹೋತ್ಸವ ಉದ್ಘಾಟನೆ

     

    ಯಾರಾದರೂ ದಾನ ಮಾಡುವ ಯಾವುದೇ ವಿಷಯಕ್ಕೆ, ಅವರು ರಾಹುಲ್ ಜಿಯವರ ಸಹಿ ಇರುವ ಪತ್ರ ಮತ್ತು ದೇಣಿಗೆ ಪ್ರಮಾಣಪತ್ರವನ್ನು ಪಡೆಯುತ್ತಾರೆ. ದೇಣಿಗೆ ಸಂಗ್ರಹವು, ಚುನಾವಣಾ ಪ್ರಚಾರವನ್ನು ಬೆಂಬಲಿಸಲು ಕಳೆದ ವರ್ಷ ಪ್ರಾರಂಭಿಸಿದ ಕ್ರೌಡ್‌ಫಂಡಿಂಗ್ ಅಭಿಯಾನದ ಭಾಗವಾಗಿದೆ.

    ಘೋಷಣೆಯಾದ ಎರಡು ಗಂಟೆಗಳಲ್ಲಿ 2 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿತ್ತು. ಕ್ರೌಡ್‌ಫಂಡಿಂಗ್ ಅಭಿಯಾನವು ಇಲ್ಲಿಯವರೆಗೆ 20 ಕೋಟಿ ಮೌಲ್ಯದ ಹಣವನ್ನು ಗಳಿಸಿದೆ ಎಂದು ಪಕ್ಷ ಹೇಳಿದೆ. ರಾಹುಲ್ ಗಾಂಧಿಯವರು ಉತ್ತರ-ದಕ್ಷಿಣ ಭಾರತ ಜೋಡೊ ಯಾತ್ರೆ ನಡೆಸಿದದ್ದರು. ಈಗ ಮತ್ತೆ ಜನವರಿಯಲ್ಲಿ ಪೂರ್ವ-ಪಶ್ಚಿಮ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: Loksabha Elections: ಬಿಜೆಪಿ ರಾಜ್ಯವಾರು ಚುನಾವಣಾ ಉಸ್ತುವಾರಿಗಳ ಪಟ್ಟಿ ಪ್ರಕಟ

    ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್, ಜನರು ತಮ್ಮ ಕೈಲಾದಷ್ಟು ಕೊಡುಗೆ ನೀಡುವಂತೆ ಕೋರಿದ್ದಾರೆ. ಕೆಲವು ನಾಯಕರು ಪ್ರತಿ ಕಿಮೀಗೆ 20-100 ರೂ. ದೇಣಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

  • ದೇಗುಲ ಪ್ರವೇಶಿಸಲು ಅನುಮತಿ ನಿರಾಕರಣೆ – ನಾನೇನು ಅಪರಾಧ ಮಾಡಿದ್ದೇನೆ: ರಾಗಾ ಪ್ರಶ್ನೆ

    ದೇಗುಲ ಪ್ರವೇಶಿಸಲು ಅನುಮತಿ ನಿರಾಕರಣೆ – ನಾನೇನು ಅಪರಾಧ ಮಾಡಿದ್ದೇನೆ: ರಾಗಾ ಪ್ರಶ್ನೆ

    ದಿಸ್ಪುರ್:‌ ಭಾರತ್‌ ಜೋಡೋ ನ್ಯಾಯ ಯಾತ್ರೆ (Bharat Jodo Nyay yatra) ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ರಾಜ್ಯದಲ್ಲಿ ದೇಗುಲವೊಂದರ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವ ಘಟನೆ ನಡೆದಿದೆ. ಇದರಿಂದ ಅಸಮಾಧಾನಗೊಂಡ ರಾಹುಲ್‌ ಗಾಂಧಿ (Rahul Gandhi) ನಾನೇನು ಅಂತಹ ಅಪರಾಧ ಮಾಡಿದ್ದೇನೆ ಎಂದು ಪ್ರಶ್ನಿಸಿದ್ದಾರೆ.

    ಅಸ್ಸಾಂ ರಾಜ್ಯದ ನಾಗೋನ್‌ನಲ್ಲಿರುವ ಬಟದ್ರವ ಸತ್ರಾ ದೇಗುಲಕ್ಕೆ (Batadrava Satra Temple) ರಾಹುಲ್ ಗಾಂಧಿ ತೆರಳಿದ್ದರು. ಆದರೆ, ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಯಿತು. ಈ ವೇಳೆ ದೇಗುಲದ ಆಡಳಿತ ಮಂಡಳಿಗೆ ಪ್ರಶ್ನೆ ಮಾಡಿದ ರಾಹುಲ್ ಗಾಂಧಿ, ನನಗೆ ನಿರ್ಬಂಧ ವಿಧಿಸಿರೋದು ಏಕೆ? ಎಂದು ಪ್ರಶ್ನಿಸಿದರು. ನಾವು ದೇಗುಲಕ್ಕೆ ಭೇಟಿ ನೀಡಲು ಬಯಸಿದ್ದೇವೆ. ಆದರೆ, ನಮಗೆ ಅವಕಾಶ ನೀಡುತ್ತಿಲ್ಲ. ನಾವು ಮಾಡಿದ ಅಪರಾಧವಾದ್ರೂ ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

    ನಾವು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಸಮಸ್ಯೆ ಸೃಷ್ಟಿಸಲು ಬಂದಿಲ್ಲ. ನಾವು ಕೇವಲ ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೆ ಬಂದಿದ್ದೆವು ಎಂದು ರಾಹುಲ್ ಗಾಂಧಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ಧಾರೆ. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ 

    ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಇರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದಾಗಿ ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಯ ಮಾರ್ಗ ಬದಲಾವಣೆ ಮಾಡಬೇಕೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮನವಿ ಮಾಡಿದ್ದರು. ಆದರೆ, ತಮ್ಮ ಯಾತ್ರೆಯ ಮಾರ್ಗ ಬದಲಾವಣೆ ಮಾಡಲು ರಾಹುಲ್ ಗಾಂಧಿ ಒಪ್ಪಿರಲಿಲ್ಲ.

    ಅಸ್ಸಾಂ ಸರ್ಕಾರದ ಮನವಿಯನ್ನು ಪರಿಗಣಿಸದೇ ತಮ್ಮ ನಿಗದಿತ ಮಾರ್ಗದಲ್ಲೇ ಯಾತ್ರೆ ಮುಂದುವರಿಸಿದ್ದರು, ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರಿಗೆ ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಯಿತು. ಈ ನಿಲುವನ್ನ ಖಂಡಿಸಿ ನಾಗೋನ್‌ನಲ್ಲಿ ಪ್ರತಿಭಟನೆ ನಡೆಸಿದರು. ದೇಗುಲಕ್ಕೆ ಯಾರು ಭೇಟಿ ನೀಡಬೇಕು? ಯಾರು ಭೇಟಿ ನೀಡಬಾರದು ಎಂದು ಪ್ರಧಾನಿ ಮೋದಿ ಅವರು ನಿರ್ಧರಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಬೆಳ್ಳಿಯ ರಾಮಮಂದಿರ ಪ್ರತಿರೂಪ ಗಿಫ್ಟ್‌!

  • ಕಾಂಗ್ರೆಸ್‌ನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಘೋಷವಾಕ್ಯ, ಲೋಗೋ ಅನಾವರಣ

    ಕಾಂಗ್ರೆಸ್‌ನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಘೋಷವಾಕ್ಯ, ಲೋಗೋ ಅನಾವರಣ

    ನವದೆಹಲಿ: ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಮುಂಬರುವ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ (Bharat Jodo Nyay Yatra) ಲೋಗೋ ಮತ್ತು ಘೋಷವಾಕ್ಯವನ್ನು ಕಾಂಗ್ರೆಸ್ ಶನಿವಾರ ಅನಾವರಣಗೊಳಿಸಿದೆ.

    ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ನಡೆದ ಅನಾವರಣ ಕಾರ್ಯಕ್ರಮಕ್ಕೆ ಕಾಂಗ್ರೆಸ್ ರಾಷ್ಟ್ರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು. ಇದನ್ನೂ ಓದಿ: ಇಸ್ರೋದಿಂದ ದಿಟ್ಟ ಹೆಜ್ಜೆ – ಇಂದು ನಿಗದಿತ ಕಕ್ಷೆಗೆ ಸೇರಲಿದೆ ಆದಿತ್ಯ ಎಲ್1

    “ನ್ಯಾಯ್ ಕಾ ಹಕ್ ಮಿಲ್ನೆ ತಕ್” (ನಮಗೆ ನ್ಯಾಯ ಸಿಗುವವರೆಗೆ) ಎಂಬುದು ಯಾತ್ರೆಯ ಘೋಷವಾಕ್ಯವಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಾವು ಜನವರಿ 14 ರಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಪ್ರಾರಂಭಿಸುತ್ತಿದ್ದೇವೆ. ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ದೇಶದ ಜನರಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಒದಗಿಸುವ ನಮ್ಮ ಬಲವಾದ ಹೆಜ್ಜೆಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಜನಾಂಗೀಯ ಹಿಂಸಾಚಾರ ಕಂಡ ಮಣಿಪುರಕ್ಕೆ ಅವರು ಭೇಟಿ ನೀಡಿಲ್ಲ. ಬೇರೆ ದಾರಿಯಿಲ್ಲ ಎಂದು ಜನರ ಮಧ್ಯೆ ಹೋಗುತ್ತಿದ್ದೇವೆ. ಸಂಸತ್ತಿನಲ್ಲಿ ಮಾತನಾಡಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಪ್ರಯತ್ನಿಸಿದೆವು. ಆದರೆ ಸರ್ಕಾರ ನಮಗೆ ಅವಕಾಶ ನೀಡಲಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಅವರು ಕನಿಷ್ಠ ಲೋಕಸಭೆಗೆ ಬಂದರು ಆದರೆ ಒಮ್ಮೆಯೂ ರಾಜ್ಯಸಭೆಯತ್ತ ಇಣುಕಿಯೂ ನೋಡಲಿಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೇರ್ಪಡೆಯಾದ 10 ದಿನದಲ್ಲೇ ವೈಎಸ್‌ಆರ್‌ ಕಾಂಗ್ರೆಸ್‌ಗೆ ಅಂಬಟಿ ರಾಯಡು ಗುಡ್‌ಬೈ

    ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಜನವರಿ 14 ರಂದು ಇಂಫಾಲ್‌ನಿಂದ ಪ್ರಾರಂಭವಾಗಲಿದೆ. 6,713 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. 100 ಲೋಕಸಭಾ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ವ್ಯಾಪಿಸಿ 110 ಜಿಲ್ಲೆಗಳನ್ನು ಒಳಗೊಂಡಿದೆ. ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ.