Tag: Bharat Jodo

  • 1 ಕಿ.ಮಿಗೆ 1.59 ಲಕ್ಷ,  ದಿನಕ್ಕೆ 50 ಲಕ್ಷ – ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು

    1 ಕಿ.ಮಿಗೆ 1.59 ಲಕ್ಷ, ದಿನಕ್ಕೆ 50 ಲಕ್ಷ – ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು

    ನವದೆಹಲಿ: ಕಳೆದ ವರ್ಷ ರಾಹುಲ್‌ ಗಾಂಧಿ (Rahul Gandhi) ನಡೆಸಿದ್ದ ಭಾರತ್‌ ಜೋಡೋ (Bharat Jodo) ಯಾತ್ರೆಗೆ ಕಾಂಗ್ರೆಸ್‌ ಬರೋಬ್ಬರಿ 71.8 ಕೋಟಿ ರೂ. ಖರ್ಚು ಮಾಡಿದೆ.

    ಕಾಂಗ್ರೆಸ್‌ (Congress) ಪಕ್ಷ ಚುನಾವಣಾ ಆಯೋಗಕ್ಕೆ 2022-23ನೇ ಹಣಕಾಸು ವರ್ಷದ ವಾರ್ಷಿಕ ಲೆಕ್ಕಪರಿಶೋಧನಾ ವರದಿ ಸಲ್ಲಿಸಿದೆ. 2022- 23ನೇ ಸಾಲಿನಲ್ಲಿ ಕಾಂಗ್ರೆಸ್‌ 452 ಕೋಟಿ ರೂ. ಆದಾಯಗಳಿಸಿದ್ದರೆ 467 ಕೋಟಿ ರೂ. ಖರ್ಚು ಮಾಡಿದೆ.

    ತಮಿಳುನಾಡಿನ ಕನ್ಯಾಕುಮಾರಿಯಿಂದ 2022ರ ಸೆಪ್ಟೆಂಬರ್ 7 ರಂದು ಆರಂಭಗೊಂಡ ಯಾತ್ರೆ 4 ಸಾವಿರ ಕಿಲೋಮೀಟರ್‌ ಕ್ರಮಿಸಿ ಜನವರಿ 30 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಂಡಿತ್ತು. ಒಟ್ಟು 145 ದಿನಗಳ ಯಾತ್ರೆಯ ವೆಚ್ಚವನ್ನು ಪರಿಗಣಿಸಿದರೆ ದಿನಕ್ಕೆ ಅಂದಾಜು 50 ಲಕ್ಷ ರೂ. ಮತ್ತು ಪ್ರತಿ ಕಿ.ಮೀಗೆ ಅಂದಾಜು 1.59 ಲಕ್ಷ ರೂ. ಹಣವನ್ನು ಕಾಂಗ್ರೆಸ್‌ ಖರ್ಚು ಮಾಡಿದೆ. ಜೋಡೋ ಯಾತ್ರೆಯ ಒಟ್ಟು ವೆಚ್ಚವು ಕಾಂಗ್ರೆಸ್ ಒಟ್ಟು ಆದಾಯದ 15.3% ರಷ್ಟಿದೆ. ಇದನ್ನೂ ಓದಿ: ಸಾಮೂಹಿಕ ವಿವಾಹದಲ್ಲಿ ಗೋಲ್ಮಾಲ್ – ಹಣಕ್ಕೆ ದಂಪತಿಯಾದ ಜೋಡಿಗಳು, 15 ಮಂದಿ ಸೇರಿ ಇಬ್ಬರು ಅಧಿಕಾರಿಗಳ ಬಂಧನ

    ಹಿಂದಿನ ವರ್ಷಕ್ಕೆ ಹೋಲಿಸಿದರೆ, 2022-23ರಲ್ಲಿ ‘ಆಡಳಿತ ಮತ್ತು ಸಾಮಾನ್ಯ ವೆಚ್ಚಗಳ’ ಅಡಿಯಲ್ಲಿ ಕಾಂಗ್ರೆಸ್ ಪಕ್ಷದ ವೆಚ್ಚ 2.6% ಪಟ್ಟು ಹೆಚ್ಚಾಗಿದೆ.

    ಒಟ್ಟಾರೆ ವೆಚ್ಚ 2021-22 ಮತ್ತು 2022-23 ಹೋಲಿಕೆ ಮಾಡಿದರೆ 400 ಕೋಟಿ ರೂ. ನಿಂದ 467 ಕೋಟಿ ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ ಪಕ್ಷದ ಆದಾಯವು ಕುಸಿದಿದ್ದು, 2021-22 ರಲ್ಲಿ 541 ಕೋಟಿ ರೂ. ಇದ್ದರೆ 2022-23 ರಲ್ಲಿ 452 ಕೋಟಿ ರೂ.ಗೆ ಇಳಿದಿದೆ. ಇದನ್ನೂ ಓದಿ: ಮಲೆ ಮಹದೇಶ್ವರನಿಗೆ ಹಣದ ಮಳೆ – 1 ತಿಂಗಳಲ್ಲಿ ಕೋಟಿ ಕೋಟಿ ಆದಾಯ, ವಿದೇಶಿ ಕರೆನ್ಸಿಗಳು ಪತ್ತೆ

    ಪಕ್ಷಕ್ಕೆ ನೀಡಿದ ದೇಣಿಗೆಗಳು, ಅನುದಾನಗಳು ಮತ್ತು ಕೊಡುಗೆಗಳು ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, 2021-22 ರಲ್ಲಿ 347 ಕೋಟಿ ರೂ. ಗಳಿಸಿದ್ದರೆ 2022-23 ರಲ್ಲಿ 268 ಕೋಟಿ ರೂ.ಗೆ ಕುಸಿದಿದೆ.

    2022-23 ರಲ್ಲಿ 192 ಕೋಟಿ ರೂ. ಹಣವನ್ನು ಚುನಾವಣೆಗೆ ಖರ್ಚು ಮಾಡಿದ್ದರೆ ಚುನಾವಣಾ ಸರ್ವೆಗಾಗಿ 40 ಕೋಟಿ ರೂ. ವೆಚ್ಚ ಮಾಡಿದೆ. 2021-22ರಲ್ಲಿ ಕಾಂಗ್ರೆಸ್‌ 279.5 ಕೋಟಿ ರೂ. ಹಣವನ್ನು ಚುನಾವಣೆಗೆ ಖರ್ಚು ಮಾಡಿದ್ದರೆ ಸಮೀಕ್ಷೆ ನಡೆಸಲು 23 ಲಕ್ಷ ಹಣ ವೆಚ್ಚ ಮಾಡಿತ್ತು.

  • ಭಾರತ್ ಜೋಡೋ ಎಂಟ್ರಿಗೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‍ಗೆ ಮುಜುಗರ

    ಭಾರತ್ ಜೋಡೋ ಎಂಟ್ರಿಗೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‍ಗೆ ಮುಜುಗರ

    ಶ್ರೀನಗರ: ಜಮ್ಮು-ಕಾಶ್ಮೀರ (Jammu Kashmir) ಕ್ಕೆ ಭಾರತ್ ಜೋಡೋ ಯಾತ್ರೆ (Bharat Jodo Yatre) ತಲುಪುವ ಒಂದು ದಿನದ ಮೊದಲು ಕಾಂಗ್ರೆಸ್‍ಗೆ ತೀವ್ರ ಹಿನ್ನಡೆಯಾಗಿದೆ. ಸಂಸದ ರಾಹುಲ್ ಗಾಂಧಿ ನಡೆ ಖಂಡಿಸಿರುವ ರಾಜ್ಯ ವಕ್ತಾರೆ ದೀಪಿಕಾ ಪುಷ್ಕರ್ ನಾಥ್ (Deepika PushkarNath), ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ (Rahul Gandhi) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಥುವಾ ಅತ್ಯಾಚಾರ ಆರೋಪಿಯನ್ನು ಬೆಂಬಲಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಅವರನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಸಿಕೊಂಡಿರುವುದು, ಪಕ್ಷ ಸೇರ್ಪಡೆ ಪ್ರಸ್ತಾಪ ಗಮನಿಸಿದರೆ ರಾಜೀನಾಮೆ ಹೊರೆತು ಬೇರೆ ಆಯ್ಕೆ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    2018 ರಲ್ಲಿ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಕ್ರೂರ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಲಾಲ್ ಸಿಂಗ್ (Lal singh) ಅವರು ಹಿಂದಿನ ಬಿಜೆಪಿ-ಪಿಡಿಪಿ ಸರ್ಕಾರದಲ್ಲಿ ಜಮ್ಮು ಮತ್ತು ಕಾಶ್ಮೀರ ಅರಣ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಎರಡು ಬಾರಿ ಸಂಸದ ಹಾಗೂ ಮೂರು ಬಾರಿ ಶಾಸಕರಾಗಿದ್ದ ಲಾಲ್ ಸಿಂಗ್ 2014ರಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು. 2018 ರಲ್ಲಿ ಬಲವಂತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರು 2019 ರಲ್ಲಿ ಬಿಜೆಪಿ ತೊರೆದು ರಾಜಕೀಯ ಸಂಘಟನೆಯಾದ ಡೋಗ್ರಾ ಸ್ವಾಭಿಮಾನ್ ಸಂಘಟನೆ (DSSP) ಸೇರಿದ್ದರು.

    ಜಮ್ಮು ಮೂಲದ ಮಾನವ ಹಕ್ಕುಗಳ ವಕೀಲರಾದ ದೀಪಿಕಾ ಪುಷ್ಕರ್ ನಾಥ್, ಕಥುವಾ ಅತ್ಯಾಚಾರ ಸಂತ್ರಸ್ತೆಯ ಪರ ಪ್ರಕರಣವನ್ನು ಮುನ್ನಡೆಸಿದ್ದರು. ಆರಂಭದಲ್ಲಿ ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸಿದ್ದರು. ಇದೇ ಕಾರಣಕ್ಕೆ ದೀಪಿಕಾ ಪುಷ್ಕರ್ ನಾಥ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ಹತ್ತಿದ್ದವರಿಗೆ ನಡುಕ – ಸ್ಟೇ ತರಲು ಮುಂದಾದ ಕೆಲ ಪೊಲೀಸ್‌ ಅಧಿಕಾರಿಗಳು

    ಜನವರಿ 2018 ರ ಮೊದಲ ವಾರದಲ್ಲಿ ಅಲೆಮಾರಿ ಮುಸ್ಲಿಂ ಬ್ಯಾಕರ್‍ವಾಲ್ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಗ್ರಾಮದಿಂದ ಅಪಹರಿಸಲಾಗಿತ್ತು. ಅವಳನ್ನು ಒಂದು ಸಣ್ಣ ಸ್ಥಳೀಯ ದೇವಸ್ಥಾನದಲ್ಲಿ ಬಂಧಿಸಿ ಮಾದಕವಸ್ತು ನೀಡಿ ಅತ್ಯಾಚಾರ ಮಾಡಲಾಯಿತು, ಬಳಿಕ ಕೊನೆಗೆ ಆಕೆಯ ಕತ್ತು ಹಿಸುಕಿ ಕೊಲ್ಲಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿ, ಆರ್‌ಎಸ್‌ಎಸ್ ನನ್ನ ಗುರು – ರಾಹುಲ್ ಗಾಂಧಿ

    ಬಿಜೆಪಿ, ಆರ್‌ಎಸ್‌ಎಸ್ ನನ್ನ ಗುರು – ರಾಹುಲ್ ಗಾಂಧಿ

    ನವದೆಹಲಿ: ಬಿಜೆಪಿ (BJP) ಮತ್ತು ಆರ್‌ಎಸ್‌ಎಸ್ (RSS) ತಮ್ಮ ಆಕ್ರಮಣಕಾರಿ ದಾಳಿಗಳ ಮೂಲಕ ಕಾಂಗ್ರೆಸ್ ತನ್ನ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿವೆ. ಆದ್ದರಿಂದ ಬಿಜೆಪಿ, ಆರ್‌ಎಸ್‌ಎಸ್ ನನ್ನ ಗುರು ಎಂದು ಪರಿಗಣಿಸುತ್ತೇನೆ ಎಂಬುದಾಗಿ ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಹೇಳಿದರು.

    ದೆಹಲಿಯಲ್ಲಿಂದು (Newdelhi) ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಮತ್ತು ಆರ್‌ಎಸ್‌ಸ್ ನಮ್ಮ ಮೇಲೆ ಆಕ್ರಮಣಕಾರಿ ದಾಳಿ ಮಾಡಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಅವರ ದಾಳಿಯಿಂದ ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾನು ಅವರನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ. ಅವರು ನನಗೆ ದಾರಿ ತೋರಿಸುತ್ತಿದ್ದಾರೆ. ಜೊತೆಗೆ ಏನು ಮಾಡಬಾರದು ಅನ್ನೋದರ ಬಗ್ಗೆಯೂ ತರಬೇತಿ ನೀಡುತ್ತಿದ್ದಾರೆ ಎಂದು ಕುಟಕುಕಿದರು.

    ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಕೋವಿಡ್ ನಿಯಮ (Covid Rules) ಉಲ್ಲಂಘನೆಯಾಗುತ್ತದೆ, ಕೊರೊನಾ ಸೋಂಕು ಹರಡುತ್ತದೆ ಎಂದು ಬಿಜೆಪಿ ಸರ್ಕಾರ ಹೇಳುತ್ತದೆ. ಆದರೆ ಬಿಜೆಪಿ ನಡೆಸುವ ರೋಡ್ ಶೋಗಳು, ಯಾತ್ರೆಗಳಿಂದ ಕೊರೊನಾ ಹರಡೋದಿಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗಲ್ಲವೆಂದು ಸ್ಮಶಾನದಲ್ಲೇ ಬೆಂಕಿ ಹಚ್ಚಿಕೊಂಡ ಯುವಕ!

    ಬಿಜೆಪಿಯ (BJP) ಬಳಿ ಸಾಕಷ್ಟು ಹಣವಿದೆ. ಅವರು ಏನೇ ಮಾಡಿದ್ರೂ ಸತ್ಯದ ಜೊತೆಗೆ ಹೋರಾಟ ಮಾಡಿ ಗೆಲ್ಲೋದಕ್ಕೆ ಆಗೋದಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಿಎಂ ಮುಖಾಂತರ ಕೊನೆಗೂ ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ!

    ಇದೇ ವೇಳೆ ಭಾರತ್ ಜೋಡೋ ಯಾತ್ರೆ ಕುರಿತು ಮಾತನಾಡಿ, ಪಕ್ಷಕ್ಕೆ ಪಾದಯಾತ್ರೆ ಯಶಸ್ವಿಯಾಗಿದೆ. ನಾನು ಆರಂಭದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸಾಮಾನ್ಯ ಯಾತ್ರೆಯಾಗಿ ತೆಗೆದುಕೊಂಡಿದ್ದೆ, ಆದ್ರೆ ನಿಧಾನವಾಗಿ ಜನರ ಭಾವನೆ, ಧ್ವನಿ ಎಲ್ಲವೂ ನನಗೆ ಅರ್ಥವಾಯಿತು. ಭಾರತ್ ಜೋಡೋ ಯಾತ್ರೆಯ ಬಾಗಿಲು ಎಲ್ಲರಿಗೂ ತೆರೆದಿದೆ, ನಮ್ಮೊಂದಿಗೆ ಸೇರುವ ಯಾರನ್ನೂ ನಾವು ತಡೆಯುವುದಿಲ್ಲ ಎಂದು ಭಾವುಕರಾದರು.

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್‌ ಸಿಂಗ್

    ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್‌ ಸಿಂಗ್

    ಭೋಪಾಲ್: ಕಾಂಗ್ರೆಸ್ (Congress) ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಭಾಗವಹಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್‌ ಸಿಂಗ್ (Digvijaya Singh) ಕೆಳಗೆ ಬಿದ್ದಿದ್ದಾರೆ. ಇನ್ನೂ ಈ ಘಟನೆಗೆ ಕಾರಣ ಬಿಜೆಪಿ (BJP) ಎಂದು ಕಾಂಗ್ರೆಸ್ ಆರೋಪಿಸಿದೆ.

    ಹೌದು, ಭಾರತ್ ಜೋಡೋ ಪಾದಯಾತ್ರೆ ನಡುವೆ ಚಹಾ ವಿರಾಮಕ್ಕೆಂದು ರಸ್ತೆಬದಿಯ ರೆಸ್ಟೋರೆಂಟ್‍ಗೆ ಚಲಿಸುತ್ತಿದ್ದಾಗ ದಿಗ್ವಿಜಯ್‌ ಸಿಂಗ್ ಅವರು ಕೆಳಗೆ ಬಿದ್ದು, ಗಾಯಗೊಂಡಿದ್ದಾರೆ. ಈ ವೇಳೆ ತಕ್ಷಣವೇ ಕಾಂಗ್ರೆಸ್ ಕಾರ್ಯಕರ್ತರು ದಿಗ್ವಿಜಯ್‌ ಸಿಂಗ್ ಅವರ ಕೈ ಹಿಡಿದು ಮೇಲಕ್ಕೆತ್ತಿ ಸಹಾಯ ಮಾಡಿದ್ದಾರೆ.

    ಭಾರತ್ ಜೋಡೋ ಯಾತ್ರೆಯಲ್ಲಿ ಇಲ್ಲಿಯವರೆಗೂ ದಿಗ್ವಿಜಯ್‌ ಸಿಂಗ್ ಅವರು ನಾಲ್ಕು ಬಾರಿ ಕೆಳಗೆ ಬಿದ್ದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ (Madhya Pradesh) ಬಿದ್ದಿದ್ದಾರೆ. ಇದಕ್ಕೆ ಕಾರಣ ರಾಜ್ಯದಲ್ಲಿ ಹದಗೆಟ್ಟಿ ಹೋಗಿರುವ ರಸ್ತೆಗಳು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್ (Jairam Ramesh) ಆರೋಪಿಸಿದ್ದಾರೆ. ಇದನ್ನೂ ಓದಿ: ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ 108 ಅಂಬುಲೆನ್ಸ್‌ನಲ್ಲಿ ಡೀಸೆಲ್‌ ಖಾಲಿ – ದಾರಿ ಮಧ್ಯೆ ಅಸುನೀಗಿದ ಬಡ ಜೀವ

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿ, ಅಮೆರಿಕದ ವಾಷಿಂಗ್ಟನ್ ರಸ್ತೆಗಳಿಗಿಂತ ಸಂಸದರು ನಿರ್ಮಾಣ ಮಾಡಿರುವ ರಸ್ತೆಗಳು ಉತ್ತಮವಾಗಿವೆ ಎಂದು ಹೇಳುತ್ತಾರೆ. ಆದರೆ ಮಧ್ಯಪ್ರದೇಶದ ರಸ್ತೆಗಳು ಕೊಲೆಗಡುಕ ರಸ್ತೆಗಳು ಮತ್ತು ವಾಷಿಂಗ್ಟನ್‍ನಲ್ಲಿರುವ ರಸ್ತೆಗಳಷ್ಟು ಉತ್ತಮವಾಗಿಲ್ಲ. ಈ ಕೆಟ್ಟ ರಸ್ತೆಗಳಿಂದ ಬೀಳುತ್ತಿದ್ದ ನನ್ನನ್ನು ಮೂರು ಬಾರಿ ರಕ್ಷಿಸಿಕೊಂಡಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.

    ಈ ಘಟನೆಯ ವೀಡಿಯೋಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ನರೇಂದ್ರ ಸಲೂಜಾ (Narendra Saluja) ಅವರು, ರಸ್ತೆಯ ಸ್ಥಿತಿಗಿಂತ ಹೆಚ್ಚಾಗಿ ಕಾಂಗ್ರೆಸ್ ಕಾರ್ಯಕರ್ತರ ನೂಕುನುಗ್ಗಲಿನಿಂದ ದಿಗ್ವಿಜಯ್‌ ಸಿಂಗ್ ಕೆಳಗೆ ಬಿದ್ದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಕಮಲ ಅರಳಿಸಲು ಪ್ಲಾನ್ – ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆ

    Live Tv
    [brid partner=56869869 player=32851 video=960834 autoplay=true]

  • ಸೋನಿಯಾ ಗಾಂಧಿ ಬಗ್ಗೆ ಟ್ವೀಟ್‌ ಮಾಡಿ ಕುತೂಹಲ ಮೂಡಿಸಿದ ಮೋಹಕ ತಾರೆ ರಮ್ಯಾ

    ಸೋನಿಯಾ ಗಾಂಧಿ ಬಗ್ಗೆ ಟ್ವೀಟ್‌ ಮಾಡಿ ಕುತೂಹಲ ಮೂಡಿಸಿದ ಮೋಹಕ ತಾರೆ ರಮ್ಯಾ

    ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತರಾಗಿರುವ ರಮ್ಯಾ (Ramya,) ನಡೆ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಸಿನಿಮಾದಿಂದ (Cinema) ರಾಜಕೀಯಕ್ಕೆ ಹೋಗಿ, ರಾಜಕೀಯದಿಂದ ಮತ್ತೆ ಸಿನಿಮಾ ರಂಗಕ್ಕೆ ಬಂದಿರುವ ರಮ್ಯಾ, ಇತ್ತೀಚಿನ ದಿನಗಳಲ್ಲಿ ಪಾಲಿಟಿಕ್ಸ್ ನಿಂದ ದೂರವೇ ಸರಿದಿದ್ದರು. ಅವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಕೇವಲ ಸಿನಿಮಾ ಸುದ್ದಿಗಳು ಮಾತ್ರ ಕಾಣುತ್ತಿದ್ದವು. ಇದೀಗ ಮತ್ತೆ ರಾಜಕೀಯ ನಡೆ ಕುರಿತು ರಮ್ಯಾ ಟ್ವೀಟ್ ಮಾಡುತ್ತಿದ್ದಾರೆ.

    ಮಂಡ್ಯದಲ್ಲಿ ರಮ್ಯಾ ಸೋತ ನಂತರ ರಾಜಕೀಯ ಕ್ಷೇತ್ರದಿಂದ ಒಂದೊಂದೆ ಹೆಜ್ಜೆಯನ್ನು ಹಿಂದಿಡುತ್ತಾ ಬಂದರು. ಅದರಲ್ಲೂ ಇತ್ತೀಚಿನ ತಿಂಗಳಲ್ಲಿ ಅವರು ಯಾವತ್ತೂ ರಾಜಕೀಯ ಮಾತನಾಡಲಿಲ್ಲ. ಮತ್ತೆ ಸಿನಿಮಾ ರಂಗಕ್ಕೆ ಬರುವ ಸುಳಿವು ಕೊಟ್ಟ ತಕ್ಷಣವೇ, ಸಿನಿಮಾ ರಂಗದ ಸಾಕಷ್ಟು ಚಟುವಟಿಕೆಗಳಲ್ಲಿ ಅವರು ಭಾಗಿಯಾದರು. ನಿರ್ಮಾಣ ಸಂಸ್ಥೆ ತೆರೆದು, ಸಿನಿಮಾದಲ್ಲೂ ನಟಿಸುವ ಕುರಿತು ಮಾತನಾಡಿದರು. ಈಗ ಮತ್ತೆ ರಾಜಕೀಯದತ್ತ ಮುಖ ಮಾಡುವಂತೆ ಕಾಣುತ್ತಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಸಿನಿಮಾಗೆ ಬೇರೊಬ್ಬ ನಾಯಕಿ ಬಂದಾಗಿದೆ. ರಮ್ಯಾ ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ಕಾರಣ, ಮತ್ತೆ ರಾಜಕಾರಣದಲ್ಲಿ ರಮ್ಯಾ ಸಕ್ರಿಯರಾಗಲಿದ್ದಾರೆ ಎನ್ನಲಾಗುತ್ತಿದೆ.

    ಮೊನ್ನೆಯಷ್ಟೇ ರಾಹುಲ್ ಗಾಂಧಿ (Rahul Gandhi) ಜೊತೆ ಭಾರತ್ ಜೋಡೋ (Bharat Jodo) ಯಾತ್ರೆಯಲ್ಲಿ ರಮ್ಯಾ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು. ಇದೀಗ ಸೋನಿಯಾ ಗಾಂಧಿ (Sonia Gandhi) ಪರ ಬ್ಯಾಟ್ ಬೀಸುವಂತಹ ಟ್ವೀಟ್‌ವೊಂದನ್ನು ರಮ್ಯಾ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಇಟಲಿಯವರೇ ಆಗಿರಬಹುದು. ಆದರೆ ಸಾಕಷ್ಟು ಭಾರತೀಯರಿಗಿಂತ ಇವರು ನೈಜ ಭಾರತೀಯರಾಗಿದ್ದಾರೆ. ಅದು ಸತ್ಯ’ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಕ್ಯಾನ್‌ಮಾಡಿ `ಸಿದ್ರಾಮುಲ್ಲನ ಉಗ್ರಭಾಗ್ಯ’ ಲೀಲೆ ನೋಡಿ – PayCM ಅಭಿಯಾನಕ್ಕೆ ಬಿಜೆಪಿ ಟಕ್ಕರ್

    ಸ್ಕ್ಯಾನ್‌ಮಾಡಿ `ಸಿದ್ರಾಮುಲ್ಲನ ಉಗ್ರಭಾಗ್ಯ’ ಲೀಲೆ ನೋಡಿ – PayCM ಅಭಿಯಾನಕ್ಕೆ ಬಿಜೆಪಿ ಟಕ್ಕರ್

    ಬೆಂಗಳೂರು: ಕಾಂಗ್ರೆಸ್‌ನಿಂದ (Congress) ನಡೆಯುತ್ತಿರುವ ಪೇ-ಸಿಎಂ (PayCM) ಅಭಿಯಾನಕ್ಕೆ ಟಕ್ಕರ್ ಕೊಡಲು ಬಿಜೆಪಿ (BJP) ಸಿದ್ದರಾಮಯ್ಯ (Siddaramaiah) ವಿರುದ್ಧ ಪೋಸ್ಟರ್ ರಿಲೀಸ್ ಮಾಡಿದೆ.

    ಪಿಎಫ್‌ಐ ಭಾಗ್ಯ (PFI Bhagya) ಹ್ಯಾಟ್‌ಟ್ಯಾಗ್‌ನೊಂದಿಗೆ `ಸಿದ್ರಾಮುಲ್ಲಮನ ಉಗ್ರಭಾಗ್ಯ ಲೀಲೆಗಳನ್ನು ತಿಳಿಯಲು ಕ್ಯೂಆರ್‌ಕೋಡ್ ಸ್ಕ್ಯಾನ್‌ ಮಾಡಿ ಎಂದು ಸಿದ್ದರಾಮಯ್ಯ ಅವರು ಪಿಎಫ್‌ಐ (PFI) ಚಿನ್ಹೆ ಹಿಡಿದಿರುವಂತೆ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಕ್ಯೂರ್ ಕೋಡ್ ಸ್ಕ್ಯಾನ್‌  ಮಾಡಿದರೆ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ ಸುದ್ದಿಗಳಿರುವ ಪೇಜ್ ಕಾಣಿಸುತ್ತದೆ.

    ಟ್ವೀಟ್‌ನಲ್ಲಿ ಏನಿದೆ?
    `ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಈ ಪರಿಯ ಒಂಟಿತನ ಯಾವತ್ತೂ ಕಾಡಿರಲಾರದು. ಪಿಎಫ್‌ಐ ಸ್ನೇಹಿತರು ಜೈಲಿಗೆ ಹೋದಾಗಿನಿಂದ ಸಿದ್ದರಾಮಯ್ಯ ಅವರು ಒಬ್ಬಂಟಿಯಾಗಿದ್ದಾರೆಯೇ? ಜಿಹಾದಿಗಳ ಜೊತೆ ಕಾಂಗ್ರೆಸ್ (Congress) ಹೊಂದಿರುವ ಸಂಬಂಧ ತಿಳಿಯಲು ಈ ಕ್ಯೂಆರ್‌ಕೋಡ್ (QR Code)  ‌ಸ್ಕ್ಯಾನ್‌ ಮಾಡಿ. ಇದನ್ನೂ ಓದಿ: ಔಷಧಿ ನಕಲಿಯೋ? ಅಸಲಿಯೋ? – ಇನ್ಮುಂದೆ ನೀವೇ ಚೆಕ್ ಮಾಡಬಹುದು

    ಇತ್ತ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಪಿಎಫ್‌ಐ ಜಿಹಾದಿಗಳನ್ನು ಸಂಬಂಧಿಗಳಂತೆ ಸಾಕುತ್ತಿದ್ದರೆ, ಅತ್ತ ಕಾಂಗ್ರೆಸ್ ಪಕ್ಷ ಕಾಶ್ಮೀರದ ಕಣಿವೆಯಲ್ಲಿ ಉಗ್ರರನ್ನು ಬೆಂಬಲಿಸುತ್ತಿತ್ತು. ಜಿಹಾದಿಗಳ ಜೊತೆ ಕಾಂಗ್ರೆಸ್ ಹೊಂದಿರುವ ನಂಟಿನ ಬಗ್ಗೆ ತಿಳಿಯಲು ಈ ಕೆಳಗಿನ ಕ್ಯುಆರ್ ಕೋಡ್ ಸ್ಕ್ಯಾನ್‌ ಮಾಡಿ.

    ತುಕಡೆ ತುಕಡೆ ಗ್ಯಾಂಗಿನ ನಾಯಕರಾಗಿರುವ ರಾಹುಲ್ ಗಾಂಧಿ (Rahul Gandhi) ಹಾಗೂ ಜಿಹಾದಿ ಬೆಂಬಲಿಗ ಸಿದ್ದರಾಮಯ್ಯಅವರ ಪ್ರೀತಿ ಹಾಲು ಜೇನಿನಂತೆ. ಜಿಹಾದಿಗಳ ಜೊತೆ ಕಾಂಗ್ರೆಸ್ ಹೊಂದಿರುವ ನಂಟಿನ ಬಗ್ಗೆ ತಿಳಿಯಲು ಈ ಕೆಳಗಿನ ಕ್ಯುಆರ್ ಕೋಡ್ ಸ್ಕ್ಯಾನ್‌ ಮಾಡಿ ಎಂದು ಕುಟುಕಿದೆ. ಇದನ್ನೂ ಓದಿ: ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ಇದರೊಂದಿಗೆ ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಸೋನಿಯಾಗಾಂಧಿ ಆಗಮನವನ್ನು ಟೀಕಿಸಿದ್ದು, `ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ಕರ್ನಾಟಕಕ್ಕೆ ಸ್ವಾಗತ. ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಆಗಮನದಿಂದ ಜೈಲುಹಕ್ಕಿ ಡಿಕೆಶಿ (DK Shivakumar) ಹಾಗೂ ಭ್ರಷ್ಟರಾಮಯ್ಯ ಅವರಿಗೆ ಶಕ್ತಿ ಬಂದಿದ್ದು ಸುಳ್ಳಲ್ಲ. ಭ್ರಷ್ಟರೆಲ್ಲ ಒಂದೆಡೆ ಸೇರುವಾಗ ಹುರುಪು, ಶಕ್ತಿ ಸಹಜವಾದದ್ದೇ’ ಎಂದು ಲೇವಡಿ ಮಾಡಿದೆ.

    ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 34 ಕೋಟಿ ಪರಿಶಿಷ್ಟ ಸಮುದಾಯದ ಫಲಾನುಭವಿಗಳು ತಲಾ 10 ಲಕ್ಷ ಸಾಲ ಪಡೆಯುತ್ತಿದ್ದಾರೆ. ಶ್ರೀಮಂತರ ಪರವಾದ ಸರ್ಕಾರ ಎನ್ನುವ ನಿರುದ್ಯೋಗಿ ರಾಹುಲ್ ಗಾಂಧಿ ಅವರಿಗೆ ಇದೆಲ್ಲಾ ಏಕೆ ಕಾಣಿಸುತ್ತಿಲ್ಲ? ಅಂಬಾನಿ ಅದಾನಿಗಳೆಲ್ಲಾ ಮೋದಿ ಸರ್ಕಾರದ ಅವಧಿಯಲ್ಲಿ ಶ್ರೀಮಂತರಾಗಿದ್ದೇ? ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

    Live Tv
    [brid partner=56869869 player=32851 video=960834 autoplay=true]

  • 40 ಪರ್ಸೆಂಟ್ ಕಮಿಷನ್ ಲೋಕಾಯುಕ್ತದಲ್ಲಿ ತನಿಖೆಯಾಗಲಿ – ಶ್ರೀರಾಮುಲು

    40 ಪರ್ಸೆಂಟ್ ಕಮಿಷನ್ ಲೋಕಾಯುಕ್ತದಲ್ಲಿ ತನಿಖೆಯಾಗಲಿ – ಶ್ರೀರಾಮುಲು

    ದಾವಣಗೆರೆ: 40 ಪರ್ಸೆಂಟ್ ಕಮಿಷನ್ (40 Percent Commission) ಬಗ್ಗೆ ಲೋಕಾಯುಕ್ತದಲ್ಲಿ (Karnataka Lokayukta) ತನಿಖೆಯಾಗಬೇಕು ಎಂದರೆ ತನಿಖೆಯಾಗಲಿ ಎಂದು ಸಚಿವ ಬಿ.ಶ್ರೀರಾಮುಲು (SriRamulu) ಹೇಳಿದ್ದಾರೆ.

    ದಾವಣಗೆರೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಸರ್ಕಾರಿ ಬಸ್ ನಿಲ್ದಾಣ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಅನ್ನೋ ನೋವಿದೆ, ಆದ್ರೆ ನಾನು ಹಿಂದೆ ಸರಿಯೋಲ್ಲ: ಶ್ರೀ ರಾಮುಲು

    40 ಪರ್ಸೆಂಟ್ ಕಮಿಷನ್ ತನಿಖೆ ನಡೆಸುವಂತೆ ಸಿದ್ದರಾಮಯ್ಯ (Siddaramaiah) ಒತ್ತಾಯ ಹೇರಿದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕನ್ನಡಕ ಸರಿಯಾಗಿ ಹಾಕಿಕೊಂಡು ನೋಡಲಿ. ಯಾರನ್ನು ಪಕ್ಕದಲ್ಲಿ ಇಟ್ಟುಕೊಂಡು ಪೇ ಸಿಎಂ (PayCm) ಎಂದು ಹೋರಾಟ ಮಾಡ್ತಾ ಇದ್ದಾರೆ ನೋಡಿಕೊಳ್ಳಲಿ. ಅವರ ಪಕ್ಷದ ಡಿಕೆ ಶಿವಕುಮಾರ್ (Dk Shivakumar) ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬೇಲ್ ಮೇಲೆ ಇರುವ ವ್ಯಕ್ತಿ. ರಾಹುಲ್ ಗಾಂಧಿ (Rahul Gandhi) ಕೂಡ ಬೇಲ್ ಮೇಲೆ ಇರುವವರು ಎಂದು ಟಕ್ಕರ್ ನೀಡಿದ್ದಾರೆ.

    ಅಂಥವರನ್ನ ಪಕ್ಕದಲ್ಲಿ ಇಟ್ಟುಕೊಂಡು ಪೇ ಸಿಎಂ (PayCm) ಅಭಿಮಾನ ಮಾಡ್ತಾ ಇದ್ದಾರೆ. ಅವರಂತೆ ನಾನು ಕರುಣಾಕರ್ ರೆಡ್ಡಿ, ಬೊಮ್ಮಯಿಯವರು ಜೈಲಿಗೆ ಹೋಗಿ ಬಂದಿಲ್ಲ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವಾಗದೇ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ. ಲೋಕಾಯುಕ್ತದಲ್ಲಿ ತನಿಖೆಯಾಗಬೇಕು ಎಂದರೆ ತನಿಖೆಯಾಗಲಿ. ಯಾರು ಬೇಡ ಅನ್ನುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು: ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು

    ಭಾರತ್ ಜೋಡೋ ಯಾತ್ರೆ  (Bharat Jodo Yatra) ಬಗ್ಗೆ ವ್ಯಂಗ್ಯ ಮಾಡಿದ ಶ್ರೀರಾಮುಲು, ಭಾರತ್ ಜೋಡೋ ಮೂಲಕ ಬೃಹತ್ ಸಮಾವೇಶ ಮಾಡಿ ಇತಿಹಾಸ ಸೃಷ್ಠಿ ಮಾಡಲು ರಾಹುಲ್ ಗಾಂಧಿ ಹೊರಟಿದ್ದಾರೆ. ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕಾಲಿಟ್ಟ ಕಡೆಯೆಲ್ಲಾ ಕಾಂಗ್ರೆಸ್ ಪಕ್ಷ ಮಾಯವಾಗುತ್ತಿದೆ. ಇದು ಅವರು ಸೃಷ್ಠಿ ಮಾಡ್ತಾ ಇರೋ ಇತಿಹಾಸ  ಎಂದು ವ್ಯಂಗ್ಯವಾಡಿದ್ದಾರೆ.

    ಈಗ ಪಾದಯಾತ್ರೆ ಮಾಡುತ್ತಿರುವ ತಮಿಳುನಾಡು, ಕೇರಳ ಕಡೆಗಳಲ್ಲಿ ಕಾಂಗ್ರೆಸ್ (Congress) ಮಟ್ಯಾಶ್ ಆಗ್ತಿದೆ. ಬಹುಶಃ ಬಳ್ಳಾರಿ ಜಿಲ್ಲೆಗಳಲ್ಲೂ ಕಾಂಗ್ರೆಸ್ ಅದೇ ಪರಿಸ್ಥಿತಿಗೆ ಬರುತ್ತೆ. ಈಗ ಭಾರತ್ ಜೋಡೋ ಯಾತ್ರೆ ಮಾಡ್ತಾ ಇದ್ದಾರೆ. ಭಾರತದ ಯಾವ ಭಾಗ ತೆಗೆದು ಯಾವ ಭಾಗಕ್ಕೆ ಜೋಡಿಸುತ್ತಾರೋ ಗೊತ್ತಾಗುತ್ತಿಲ್ಲ. ಆದರೆ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಹುಲ್ ಗಾಂಧಿ ಸೂಜಿಯಿದ್ದಂತೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದಾರೆ: ಡಿಕೆಶಿ

    ರಾಹುಲ್ ಗಾಂಧಿ ಸೂಜಿಯಿದ್ದಂತೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದಾರೆ: ಡಿಕೆಶಿ

    ಚಾಮರಾಜನಗರ: ರಾಹುಲ್ ಗಾಂಧಿ ಐರನ್ ಲೆಗ್, ಬಿಜೆಪಿಗೆ ಇದರಿಂದ ಲಾಭ ಎಂಬ ಬಿಜೆಪಿಗರ ವ್ಯಂಗ್ಯಕ್ಕೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಹುಲ್ ಗಾಂಧಿ ಕಬ್ಬಿಣದ ಸೂಜಿ ಇದ್ದಂತೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದಾರೆ, ಬಿಜೆಪಿಗರು ಕತ್ತರಿ ಇದ್ದಂತೆ ಎಲ್ಲರನ್ನು ಇಬ್ಭಾಗ ಮಾಡುತ್ತಿದ್ದಾರೆ, ನಾವು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.

    ಇದೇ 30 ರಿಂದ ರಾಜ್ಯದಲ್ಲಿ ಆರಂಭಗೊಳ್ಳುವ ಭಾರತ್ ಜೋಡೋ ಯಾತ್ರೆಯ ಮಾರ್ಗವನ್ನು ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹರಿಪ್ರಸಾದ್ ಪರಿಶೀಲನೆ ನಡೆಸಿದರು. ಯಾತ್ರೆ ಆರಂಭಗೊಳ್ಳುವ ಗುಂಡ್ಲುಪೇಟೆಯ ಅಂಬೇಡ್ಕರ್ ಭವನ ರಸ್ತೆ, ನಂಜನಗೂಡು ರಸ್ತೆ ಮತ್ತು ಬದನವಾಳು ಖಾದಿ ಕೇಂದ್ರಕ್ಕೆ ಕೈಪಡೆ ನಾಯಕರುಗಳು ಭೇಟಿ ನೀಡಿ ಭಾರತ್ ಜೋಡೋ ಯಾತ್ರೆಗಾಗಿ ಸಜ್ಜುಗೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ರಾಹುಲ್ ಗಾಂಧಿ ಆಪ್ತ ಸಹಾಯಕರ ತಂಡವೂ ಭೇಟಿಕೊಟ್ಟು ಮಾರ್ಗ ಪರಿಶೀಲನೆ ನಡೆಸಿದ್ದು ಕೈಪಡೆ ನಾಯಕರು ನಡೆಸುತ್ತಿರುವ 4 ಸುತ್ತಿನ ಪರಿಶೀಲನೆ ಇದಾಗಿದೆ. ಇದನ್ನೂ ಓದಿ: ಪಾಕ್ ಆರ್ಥಿಕ ಬಿಕ್ಕಟ್ಟು – 4 ವರ್ಷದಲ್ಲಿ ಐವರು ಹಣಕಾಸು ಸಚಿವರ ರಾಜೀನಾಮೆ

    ರಾಗಾ ಸೂಜಿ-ಬಿಜೆಪಿ ಕತ್ತರಿ
    ಮಾರ್ಗ ಪರಿಶೀಲನೆ ಬಳಿಕ ಮಾಧ್ಯಮವರೊಟ್ಟಿಗೆ ಮಾತನಾಡಿದ ಡಿಕೆ. ಶಿವಕುಮಾರ್ ಅವರು, ತಮಿಳುನಾಡಿನ ಗೂಡ್ಲೂರಿನಿಂದ ಕರ್ನಾಟಕ ಬರಲಿರುವ ರಾಹುಲ್ ಗಾಂಧಿ ಗುಂಡ್ಲುಪೇಟೆಯಲ್ಲಿ 9 ಗಂಟೆಗೆ ಸಾರ್ವಜನಿಕ ಸಭೆ ನಡೆಸಿ ಪಾದಯಾತ್ರೆ ನಡೆಸಲಿದ್ದಾರೆ. ರಾಜ್ಯದ ಎಲ್ಲಾ ನಾಯಕರುಗಳು ಅಂದು ರಾಗಾ ಜೊತೆ ಹೆಜ್ಜೆ ಹಾಕಲಿದ್ದಾರೆ. ಆಕ್ಸಿಜನ್ ದುರಂತದ ಸಂತ್ರಸ್ತರೊಟ್ಟಿಗೆ ಸಂವಾದ ನಡೆಸಲು ಯೋಜಿಸಲಾಗುತ್ತಿದೆ. ಜನರು ಪಾದಯಾತ್ರೆ ನಡೆಸಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.

    ರಾಹುಲ್ ಗಾಂಧಿ ಐರನ್ ಲೆಗ್, ಬಿಜೆಪಿಗೆ ಇದರಿಂದ ಲಾಭ ಎಂಬ ಬಿಜೆಪಿಗರ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಕಬ್ಬಿಣದ ಸೂಜಿ ಇದ್ದಂತೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದಾರೆ, ಬಿಜೆಪಿಗರು ಕತ್ತರಿ ಇದ್ದಂತೆ ಎಲ್ಲರನ್ನು ಇಬ್ಭಾಗ ಮಾಡುತ್ತಿದ್ದಾರೆ, ನಾವು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹರಿಹಾಯ್ದಿದ್ದಾರೆ.  ಇದನ್ನೂ ಓದಿ: ವಿಧವೆಯ ಹಿಂದೆ ಬಿದ್ದು ಮಸಣ ಸೇರಿದ ವಿಚ್ಚೇದಿತ – ಅವಳು ನನ್ನ ಮಾತು ಕೇಳ್ತಿಲ್ಲ ಅಂತ ಆತ್ಮಹತ್ಯೆಗೆ ಶರಣಾದ

    Live Tv
    [brid partner=56869869 player=32851 video=960834 autoplay=true]

  • PFI, SDPI, ಭಜರಂಗದಳ ಬ್ಯಾನ್ ಮಾಡಿ: ನಲಪಾಡ್

    PFI, SDPI, ಭಜರಂಗದಳ ಬ್ಯಾನ್ ಮಾಡಿ: ನಲಪಾಡ್

    ರಾಯಚೂರು: ಪಿಎಫ್‌ಐ (PFI), ಎಸ್‌ಡಿಪಿಐ (SDPI) ಹಾಗೂ ಭಜರಂಗದಳ (Bajrang Dal) ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಯುವ (Youth Congress) ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) ಒತ್ತಾಯಿಸಿದ್ದಾರೆ.

    ಭಾರತ್ ಜೋಡೊ (Bharat Jodo) ಯಾತ್ರೆ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ರಾಯಚೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ನಾವು ಮೊದಲಿನಿಂದಲೂ ಈ ಸಂಘಟನೆಗಳನ್ನ ಬ್ಯಾನ್ ಮಾಡಿ ಅಂತಲೇ ಹೇಳುತ್ತಿದ್ದೇವೆ. ಅಷ್ಟೇ ಅಲ್ಲ ಕೋಮು ಸೌಹಾರ್ದ ಕೆಡಿಸುವ ಯಾವುದೇ ಸಂಘಟನೆಯನ್ನಾಗಲಿ ಬ್ಯಾನ್ ಮಾಡಲೇಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಭಯೋತ್ಪಾದನೆಗೆ (Terrorism) ನಿರುದ್ಯೋಗವೇ (Unemployment) ಕಾರಣ ಅಂತ ನಾನು ಹೇಳಿಲ್ಲ, ಆದರೆ ನನ್ನ ಹೇಳಿಕೆಯನ್ನ ತಿರುಚಲಾಗಿದೆ. ನಾನು ಹೇಳಿದ್ದರ ಉದ್ದೇಶ ಬೇರೆಯಿತ್ತು, ಕೆಲಸ ಇಲ್ಲದಿರೋದಕ್ಕೆ ಯುವಕರು ದಾರಿ ತಪ್ಪುತ್ತಿದ್ದಾರೆ. ಕೆಲವರ ಬೌದ್ಧಿಕ ಮಟ್ಟ ಹಾಗೇ ಇರುತ್ತದೆ. ಅಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ಕೊಡಿ, ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

    ಪರ್ಸೆಂಟೇಜ್ ವಿಚಾರ ನಾವು ಹೇಳಿರೋದಲ್ಲ:
    ಗುತ್ತಿಗೆದಾರ ಸಂತೋಷ್ ಪಾಟೀಲ್ ಜೀವ ಕಳೆದುಕೊಂಡಿದ್ದಾನೆ. ಪಿಎಸ್‌ಐ (PSI) ಹಗರಣ ಮಾಡಿದ್ದು ನಾವಾ? `ಪೇ-ಸಿಎಂ’ (Pay CM) ಪೋಸ್ಟರ್ ಹಾಕಿದ್ದಕ್ಕೆ ನಮ್ಮನ್ನ ಅರೆಸ್ಟ್ ಮಾಡ್ತಾರೆ. ರಾತ್ರಿ 1 ಗಂಟೆ ಸಮಯದಲ್ಲಿ ಕಚೇರಿ ಮೇಲೆ ರೇಡ್ ಮಾಡ್ತಾರೆ. ಆರೋಪ ಸುಳ್ಳು ಅನ್ನೋದಾದ್ರೆ ನೀವೆಕೆ ಟೆನ್ಷನ್ ತೆಗೆದುಕೊಳ್ತೀರಿ? ಜನರೇ ಸರಿ ತಪ್ಪು ತೀರ್ಮಾನ ಮಾಡುತ್ತಾರೆ. ಆರೋಪ ಸತ್ಯ ಆಗಿರೋದಕ್ಕೆ ನೀವು ಹೀಗೆ ಮಾಡುತ್ತಿದ್ದೀರಿ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರು ಸುರಕ್ಷಿತವಾಗಿದ್ದರೆ ಮಾತ್ರ ಭಾರತದ ಪ್ರಗತಿ ಸಾಧ್ಯ – ರಾಹುಲ್ ಗಾಂಧಿ

    ಮಹಿಳೆಯರು ಸುರಕ್ಷಿತವಾಗಿದ್ದರೆ ಮಾತ್ರ ಭಾರತದ ಪ್ರಗತಿ ಸಾಧ್ಯ – ರಾಹುಲ್ ಗಾಂಧಿ

    ನವದೆಹಲಿ: ಉತ್ತರಪ್ರದೇಶದ (UttarPradesh) ಮೊರದಾಬಾದ್ ಅತ್ಯಾಚಾರ ಪ್ರಕರಣ ಹಾಗೂ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಯುವತಿ ಹತ್ಯೆ ಪ್ರಕರಣಗಳ ಬಗ್ಗೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆತಂಕ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸುರಕ್ಷಿತವಾಗಿ ಇದ್ದರೆ ಮಾತ್ರವೇ ಭಾರತ ಪ್ರಗತಿ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಘಟನೆಗೆ ಟ್ವೀಟ್ (Twitter) ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, `ಮೊರಾದಾಬಾದ್ ಮತ್ತು ಉತ್ತರಾಖಂಡದಲ್ಲಿ ನಡೆದ ಘಟನೆಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ. ಭಾರತ್ ಜೋಡೋ (Bharath Jodo Yatra) ಯಾತ್ರೆಯಲ್ಲಿ ಅನೇಕ ಪ್ರತಿಭಾವಂತ ಮಹಿಳೆಯರು ಹಾಗೂ ಯುವತಿಯರನ್ನು ಭೇಟಿಯಾಗುತ್ತಿದ್ದೇನೆ. ಅವರೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇದ್ದಾಗ ಮಾತ್ರವೇ ನಮ್ಮ ಭಾರತ ಪ್ರಗತಿಯಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಏನಿದು ಘಟನೆ?
    ಇದೇ ಸೆಪ್ಟೆಂಬರ್ 1 ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ 15ರ ಹುಡುಗಿಯನ್ನು ಕಾಡಿಗೆ ಎಳೆದೊಯ್ದು ಗ್ಯಾಂಗ್ ರೇಪ್ (Gang Rape) ನಡೆಸಲಾಗಿತ್ತು. ಹುಡುಗಿ ಕಾಡಿನಿಂದ ತಪ್ಪಿಸಿಕೊಂಡು ಬೆತ್ತಲಾಗಿಯೇ ಓಡಿಬಂದಿದ್ದರು. ಸಿಸಿಟಿವಿಯಲ್ಲಿ (CCTV) ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಕೆ ಪೋಷಕರೊಡನೆ ಘಟನೆ ಹೇಳಿಕೊಂಡ ಬಳಿಕ ಪೊಲೀಸ್ ಠಾಣೆಗೆ (Police Station) ಕರೆದೊಯ್ದು ದೂರು ದಾಖಲಿಸಲಾಯಿತು. ಇದಾದ 13 ದಿನಗಳ ನಂತರ ಪೊಲೀಸರು ಮೊದಲ ಆರೋಪಿಯನ್ನಷ್ಟೇ ಬಂಧಿಸಿದ್ದಾರೆ. ಈ ಘಟನೆ ನಿನ್ನೆಯಷ್ಟೇ ಬೆಳಕಿಗೆ ಬಂದಿದೆ.

    ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಅಂಕಿತಾ ಭಂಡಾರಿ ಎಂಬ ಯುವತಿ ತಾನು ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಜುಲಾ ಪ್ರದೇಶದ ಖಾಸಗಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ, ಮ್ಯಾನೇಜರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇದರಲ್ಲಿ ಬಿಜೆಪಿ ಮುಖಂಡನೊಬ್ಬ ಇದ್ದಾನೆ.

    Live Tv
    [brid partner=56869869 player=32851 video=960834 autoplay=true]