Tag: bharat jodi yatre

  • ತಿಂಗಳಿಗೊಂದು ಹೋರಾಟಕ್ಕೆ ಕಾಂಗ್ರೆಸ್ ಪ್ಲಾನ್!

    ತಿಂಗಳಿಗೊಂದು ಹೋರಾಟಕ್ಕೆ ಕಾಂಗ್ರೆಸ್ ಪ್ಲಾನ್!

    ಬೆಂಗಳೂರು: ಕಾಂಗ್ರೆಸ್‍ನಲ್ಲಿ ಸಿದ್ದರಾಮೋತ್ಸವವು ಆಯ್ತು ಸ್ವಾತಂತ್ರ್ಯ ದಿನಾಚರಣೆಯ ಫ್ರೀಡಂ ಮಾರ್ಚ್ ಮುಗಿಯಿತು ಮುಂದೇನು..? ಸಹಜವಾಗಿಯೇ ಕೈ ಪಾಳಯವನ್ನ ಕಾಡುವ ಪ್ರಶ್ನೆಯಾಗಿದೆ. ಸೆಪ್ಟೆಂಬರ್‍ನಲ್ಲಿ ಕಾಂಗ್ರೆಸ್‍ನಿಂದ ಮತ್ತೊಂದು ಮೆಗಾ ಶೋಗೆ ಸಿದ್ಧತೆ ಈಗಲೇ ಆರಂಭವಾಗಿದೆ.

    ಹೌದು. ಸೆಪ್ಟಂಬರ್‌ ನಲ್ಲಿ ರಾಹುಲ್ ಗಾಂಧಿಯ ಭಾರತ್ ಜೋಡೋ ಪಾದಯಾತ್ರೆ ರಾಜ್ಯಕ್ಕೆ ಬರಲಿದೆ. ರಾಜ್ಯದಲ್ಲಿ ಇದೇ ರೀತಿ ಲಕ್ಷ ಲಕ್ಷ ಜನರನ್ನ ಸೇರಿಸಿ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಯಶಸ್ವಿಗೊಳಿಸಲು ಕಾಂಗ್ರೆಸ್ ಪಾಳಯದ ಸಿದ್ಧತೆ ನಡೆಸಿದೆ. ಅದೇ ಪಾದಯಾತ್ರೆ ಮಾದರಿಯಲ್ಲಿ ಆ ನಂತರವು ತಿಂಗಳಿಗೊಂದು ಶಕ್ತಿ ಪ್ರದರ್ಶನ ಮಾಡಬೇಕು ಅನ್ನೋದು ಕಾಂಗ್ರೆಸ್ ಪಾಳಯದ ಲೆಕ್ಕಾಚಾರ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ರಾಜ್ಯದ ನಾಲ್ಕು ಭಾಗಗಳಲ್ಲಿ ಬಸ್ ಯಾತ್ರೆ. ಅಗತ್ಯ ಇರುವಲ್ಲಿ ಪಾದಯಾತ್ರೆ ಹೀಗೆ ಇನ್ನುಳಿದ 9 ತಿಂಗಳು ಕಾರ್ಯಕರ್ತರಿಗೆ ಹುರುಪು ತುಂಬಲು ಇಂತಹ ಕಾರ್ಯಕ್ರಮದ ರೂಪುರೇಶೆ ಸಿದ್ಧಪಡಿಸಲು ಕೆಪಿಸಿಸಿ ಯಿಂದ ಸಿದ್ದತೆ ಆರಂಭಿಸಿದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ಗೆ ಶರಣಾದ ಸಿಎಂ ಮಾತಿನ ಮರ್ಮ ಏನು..?

    Live Tv
    [brid partner=56869869 player=32851 video=960834 autoplay=true]