Tag: Bharat Biotech

  • ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ಆರಂಭದಲ್ಲೇ ಹಿನ್ನಡೆ – ಮತ್ತಷ್ಟು ತಡ ಸಾಧ್ಯತೆ

    ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ಆರಂಭದಲ್ಲೇ ಹಿನ್ನಡೆ – ಮತ್ತಷ್ಟು ತಡ ಸಾಧ್ಯತೆ

    ನವದೆಹಲಿ: ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೂ ನೀಡಬಹುದು ಎಂದು  ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ತಜ್ಞರು ಶಿಫಾರಸು ಮಾಡಿದ ಬಳಿಕವೂ ಅನುಮತಿ ನೀಡಲು ಭಾರತಿಯ ಔಷಧ ನಿಯಂತ್ರಣ ಪ್ರಾಧಿಕಾರ(ಡಿಸಿಜಿಐ) ಹಿಂದೇಟು ಹಾಕಿದೆ.

    ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಈ ನಡೆ ಮಕ್ಕಳ ಲಸಿಕೆ ವಿಚಾರದಲ್ಲಿ ಆರಂಭಿಕ ಹಿನ್ನಡೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಡಿಸಿಜಿಐ ಅನುಮತಿ ವಿಳಂಬ ಮಾಡುತ್ತಿರುವ ಹಿನ್ನಲೆ ಮಕ್ಕಳಿಗೆ ಲಸಿಕೆ ನೀಡುವ ಸಮಯ ಮತ್ತಷ್ಟು ವಿಳಂಬವಾಗಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಚೀನಾ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ – ಶಕ್ತಿಶಾಲಿ ಹೆರಾನ್ ಡ್ರೋನ್ ನಿಯೋಜನೆ

    ಸಾಧಾರಣವಾಗಿ ಸಿಡಿಎಸ್‍ಸಿಒ ತಜ್ಞರು ಶಿಫಾರಸು ಮಾಡಿದ ಎರಡು, ಮೂರು ದಿನಗಳಲ್ಲಿ ವ್ಯಾಕ್ಸಿನ್ ಬಳಕೆಗೆ ಡಿಸಿಜಿಐ ಅನುಮತಿ ನೀಡುತ್ತಿತ್ತು. ಆದರೆ ಈ ಬಾರಿ ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ಗಂಭೀರವಾಗಿರುವ ಡಿಸಿಜಿಐ ವಾರ ಕಳೆದರೂ ಅನುಮತಿ ನೀಡಲು ಇನ್ನೂ ತೀರ್ಮಾನಿಸಿಲ್ಲ. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್‌?

    ಮೂಲಗಳ ಪ್ರಕಾರ ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ತಜ್ಞರ ಶಿಫಾರಸು ಬಳಿಕವೂ ಡಿಸಿಜಿಐ ಹೆಚ್ಚುವರಿ ತಾಂತ್ರಿಕ ವರದಿ ಪಡೆಯುತ್ತಿದೆ ಎಂದು ವರದಿಯಾಗಿದೆ. ಮೊದಲ ಬಾರಿಗೆ 2-18 ವರ್ಷದೊಳಗಿನ ಮಕ್ಕಳಿಗೆ ಭಾರತೀಯ ವ್ಯಾಕ್ಸಿನ್ ನೀಡಲು ಅನುಮತಿ ನೀಡಲಾಗುತ್ತಿದೆ. ಈ ಹಿನ್ನಲೆ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಲು ಮತ್ತಷ್ಟು ಮಾಹಿತಿ ಸಂಗ್ರಹ ಮಾಡಲು ತೀರ್ಮಾನಿಸಿದ್ದು, ಪೂರ್ಣ ವರದಿಯ ಬಳಿಕ ಡಿಸಿಜಿಐನಿಂದ ಅನುಮತಿ ನೀಡುವ ಸಾಧ್ಯತೆ ಇದೆ.

  • ಡೆಲ್ಟಾ ಪ್ಲಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ: ಐಸಿಎಂಆರ್

    ಡೆಲ್ಟಾ ಪ್ಲಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ: ಐಸಿಎಂಆರ್

    ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ, ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ವಿರುದ್ಧ ಪರಿಣಾಮಕಾರಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಇತ್ತೀಚಿನ ಅಧ್ಯಯನ ತಿಳಿಸಿದೆ.

    ಕೊವ್ಯಾಕ್ಸಿನ್ ಲಸಿಕೆಯನ್ನು ಐಸಿಎಂಆರ್ ಮತ್ತು ರಾಷ್ಟ್ರೀಯ ವೈರಾಲಜಿ ಇನ್‍ಸ್ಟಿಟ್ಯೂಟ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಕೋವಿಡ್-19 ವೈರಸ್ ವಿರುದ್ಧ ಶೇ.77.8ರಷ್ಟು ಮತ್ತು ಡೆಲ್ಟಾ ವೈರಾಣು ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿತ್ತು. ಆದರೆ ಕೊವೀಡ್-19 ರೂಪಾಂತರಿ ತಳಿಯಾದ, ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿರುವ ಡೆಲ್ಟಾ ಪ್ಲಸ್ ವೈರಾಣು ವಿರುದ್ಧವೂ ಇದು ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಐಸಿಎಂಆರ್‍ ನ ಸದ್ಯದ ಅಧ್ಯಯನದಿಂದ ತಿಳಿದುಬಂದಿದೆ. ಇದನ್ನೂ ಓದಿ: ವುಹಾನ್‌ ಲ್ಯಾಬ್‌ನಿಂದ ಕೊರೊನಾ ವೈರಸ್‌ ಸೋರಿಕೆಯಾಗಿಲ್ಲ – ಡಬ್ಲ್ಯುಎಚ್‌ಒ ನಿಯೋಗ

    ಕೊವ್ಯಾಕ್ಸಿನ್ ಮೂರು ಹಂತದ ಕ್ಲಿನಿಕಲ್ ಪ್ರಯೋಗ ಆಗದಿದ್ದರೂ ಭಾರತದಲ್ಲಿ ತುರ್ತು ಬಳಕೆಗೆ ಅವಕಾಶ ನೀಡಲಾಗಿತ್ತು. ಇತ್ತೀಚೆಗಷ್ಟೇ ಭಾರತ್ ಬಯೋಟೆಕ್ ಸಂಸ್ಥೆ, ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶ ಘೋಷಿಸಿತ್ತು. ಅದರ ಅನ್ವಯ ಈ ಲಸಿಕೆ ಲಕ್ಷಣ ಸಹಿತ ಕೊವೀಡ್-19 ಸೋಂಕಿನ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿ ಎಂದು ತಿಳಿಸಿತ್ತು. ಇದೀಗ ಡೆಲ್ಟಾ ಪ್ಲಸ್ ವಿರುದ್ಧವು ಪರಿಣಾಮಕಾರಿ ಎಂದು ವರದಿಯಾಗಿದೆ.

  • ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೋವಿಡ್ ಲಸಿಕೆ – ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ

    ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೋವಿಡ್ ಲಸಿಕೆ – ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ

    ಬೆಂಗಳೂರು: ದೇಶದಲ್ಲಿ ಮೂರನೇ ಅಲೆ ಭೀತಿ ಹೆಚ್ಚಾಗ್ತಿದೆ. ದೇಶದ ಕೆಲ ರಾಜ್ಯಗಳಲ್ಲಿ ಕೇಸ್ ಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೊಂಕು ತಗುಲುತ್ತೆ ಅಂತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಕ್ಕಳಿಗೆ ವ್ಯಾಕ್ಸಿನ್ ಇಲ್ಲದ ಕಾರಣ ಮಕ್ಕಳಿಗೆ ಸೋಂಕು ಹೆಚ್ಚುವ ಸಾಧ್ಯತೆಗಳಿವೆ. ಈ ಮಧ್ಯೆ ಮಕ್ಕಳಿಗೆ ಕೋವಿಡ್ ಲಸಿಕೆ ಸೆಪ್ಟೆಂಬರ್ ವೇಳೆಗೆ ಸಿಗಬಹುದು ಅಂತಾ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಭಾರತ್ ಬಯೋಟೆಕ್‍ನ ಕೋವಾಕ್ಸಿನ್ ಪ್ರಯೋಗಗಳು ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಮುಗಿಯಬೇಕು ಮತ್ತು ಆ ಹೊತ್ತಿಗೆ ನಾವು ವ್ಯಾಕ್ಸಿನ್ ಬಳಕೆಗೆ ಅನುಮೋದನೆ ಪಡೆಯಬೇಕು. ಫೈಜರ್ ಲಸಿಕೆಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಸೆಪ್ಟೆಂಬರ್ ವೇಳೆಗೆ ನಾವು ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಬೇಕು. ಚೈನ್ ಲಿಂಕ್ ಕಟ್ ಮಾಡಬೇಕಾದ್ರೆ ಇದು ತುಂಬಾ ಸಹಕಾರಿ ಆಗುತ್ತೆ ಅಂತಾ ಡಾ.ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

    ರಾಜ್ಯದಲ್ಲಿ ತಜ್ಞರು ಕೂಡ ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಕಾಣಿಸಿಕೊಳ್ಳಬಹುದು ಅಂತಾ ಹೇಳುತ್ತಿದ್ದಾರೆ. ಮಕ್ಕಳಿಗೆ ಲಸಿಕೆ ಸೆಪ್ಟೆಂಬರ್ ಗೆ ಬಂದರೆ ಕೋವಿಡ್ ನಿಂದ ಪಾರು ಮಾಡಬಹುದು ಅಂತಾ ರಾಜ್ಯದ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಡಿಸಿ ಖಾತೆಯಲ್ಲಿ 950 ಕೋಟಿ ಮೀಸಲು: ಸಚಿವ ಆರ್.ಅಶೋಕ್

  • ಭಾರತದ ಕೊವಾಕ್ಸಿನ್ ತುರ್ತು ಬಳಕೆಗೆ ಫಿಲಿಪೈನ್ಸ್ ಅನುಮೋದನೆ

    ಭಾರತದ ಕೊವಾಕ್ಸಿನ್ ತುರ್ತು ಬಳಕೆಗೆ ಫಿಲಿಪೈನ್ಸ್ ಅನುಮೋದನೆ

    ಮನಿಲಾ: ಭಾರತದ ಸ್ವದೇಶಿ ಲಸಿಕೆ ಕೊವಾಕ್ಸಿನ್ ತುರ್ತು ಬಳಕೆಗೆ ಫಿಲಿಪೈನ್ಸ್ ದೇಶದ ಆಹಾರ ಮತ್ತು ಔಷಧ ಸಂಸ್ಥೆ (ಎಫ್‍ಡಿಎ)ಶುಕ್ರವಾರ ಅನುಮೋದನೆ ನೀಡಿದೆ.

    ತಾನು ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಕೊರೊನಾ ಲಸಿಕೆ ಶೇ.77.8 ರಷ್ಟು ಪರಿಣಾಮಕಾರಿ ಎಂದು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಭಾರತ ಸರ್ಕಾರಕ್ಕೆ ವರದಿ ನೀಡಿದ ಬೆನ್ನಲ್ಲೇ ಫಿಲಿಪೈನ್ಸ್ ಸರ್ಕಾರ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

    ಭಾರತ್ ಬಯೋಟೆಕ್ ಕಂಪನಿ ನೀಡಿದ ದಾಖಲೆಗಳನ್ನು ಪೂರ್ಣವಾಗಿ ಪರಿಶೀಲಿಸಿದ ಬಳಿಕ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಎಫ್‍ಡಿಎ ಮುಖ್ಯಸ್ಥ ಎನ್ರಿಕ್ ಡೊಮಿಂಗೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಇದನ್ನೂ ಓದಿ: ಚೀನಿ ಲಸಿಕೆ ಪಡೆದ ರಾಷ್ಟ್ರಗಳಲ್ಲಿ ಕೊರೊನಾ ಕೇಸ್ ಭಾರೀ ಹೆಚ್ಚಳ

    ಭಾರತ್ ಬಯೋಟೆಕ್ ತನ್ನ ಮೂರನೇ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ವಿಷಯ ತಜ್ಞರ ಸಮಿತಿಗೆ(ಎಸ್‍ಇಸಿ)ಗೆ ಮಂಗಳವಾರ ಸಲ್ಲಿಸಿತ್ತು. ಭಾರತದಾದ್ಯಂತ ನಡೆಸಿದ 3ನೇ ಹಂತದ ಪ್ರಯೋಗಗಳಲ್ಲಿ ಕೋವಾಕ್ಸಿನ್ ಶೇ. 77.8 ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ವರದಿಯಾಗಿದೆ.

    ಲಸಿಕೆ ಪಡೆಯದವರನ್ನು ಜೈಲಿಗೆ ಹಾಕಲಾಗುತ್ತದೆ. ಇಲ್ಲವೇ ನೀವೇ ದೇಶಬಿಟ್ಟು ಭಾರತ ಅಥವಾ ಅಮೆರಿಕಕ್ಕೆ ತೊಲಗಿ ಎಂದು  ಕೋವಿಡ್ ಲಸಿಕೆ ವಿರೋಧಿಗಳಿಗೆ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಈ ವಾರ ಖಡಕ್ ಎಚ್ಚರಿಕೆ ನೀಡಿದ್ದರು.

    ಕೋವಿಡ್ ಲಸಿಕೆ ವಿಚಾರವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಅವರು, ಕೊರೋನಾ ನಿಯಂತ್ರಿಸಲು ಲಸಿಕೆ ಅನಿವಾರ್ಯ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಲೇಬೇಕು. ಕೋವಿಡ್‌ ಲಸಿಕೆ ಪಡೆಯಲು ನಿರಾಕರಿಸುವವರನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.

  • ಕೊವಾಕ್ಸಿನ್ ಶೇ.77.8ರಷ್ಟು ಪರಿಣಾಮಕಾರಿ – 3ನೇ ಕ್ಲಿನಿಕಲ್ ಟ್ರಯಲ್ ವರದಿ ಸಲ್ಲಿಕೆ

    ಕೊವಾಕ್ಸಿನ್ ಶೇ.77.8ರಷ್ಟು ಪರಿಣಾಮಕಾರಿ – 3ನೇ ಕ್ಲಿನಿಕಲ್ ಟ್ರಯಲ್ ವರದಿ ಸಲ್ಲಿಕೆ

    ನವದೆಹಲಿ: ತಾನು ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಕೊರೊನಾ ಲಸಿಕೆ ಶೇ.77.8 ರಷ್ಟು ಪರಿಣಾಮಕಾರಿ ಎಂದು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಹೇಳಿದೆ.

    ಭಾರತ್ ಬಯೋಟೆಕ್ ತನ್ನ ಮೂರನೇ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ವಿಷಯ ತಜ್ಞರ ಸಮಿತಿಗೆ (ಎಸ್‍ಇಸಿ) ಮಂಗಳವಾರ ಸಲ್ಲಿಸಿದೆ ಎಂದು ವರದಿಯಾಗಿದೆ. ಭಾರತದಾದ್ಯಂತ ನಡೆಸಿದ 3ನೇ ಹಂತದ ಪ್ರಯೋಗಗಳಲ್ಲಿ ಕೋವಾಕ್ಸಿನ್ ಶೇ. 77.8 ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಮೂಲಗಳು ತಿಳಿಸಿವೆ.

    ಕೊವಾಕ್ಸಿನ್ 3ನೇ ಹಂತದ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಸ್ವೀಕರಿಸಿದ್ದೇವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ವರದಿಗಳ ಪ್ರಕಾರ ಮೂರನೇ ಹಂತದ ದತ್ತಾಂಶವನ್ನು ಪರಿಶೀಲಿಸಲು ವಿಷಯ ತಜ್ಞರ ಸಮಿತಿ ಮಂಗಳವಾರ ಸಭೆ ಸೇರುವ ಸಾಧ್ಯತೆ ಇದೆ. ಇದನ್ನೂ ಓದಿ: ಮೂಗಿನ ಮೂಲಕ ಲಸಿಕೆ – 10 ಮಂದಿಯ ಮೇಲೆ ಪ್ರಯೋಗ

    ಭಾರತ್ ಬಯೋಟೆಕ್ ಕಂಪನಿ ಮೂರನೇ ಹಂತದ ವರದಿಯನ್ನು ಜೂನ್ ನಲ್ಲಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿತ್ತು. ಆದರೆ ಜೂನ್ ತಿಂಗಳಿನಲ್ಲಿ ವರದಿ ಸಲ್ಲಿಕೆಯಾಗದ್ದನ್ನು ಹಲವು ಮಂದಿ ಪ್ರಶ್ನಿಸಿದ್ದರು. ವಿವಾದ ಎದ್ದ ಬೆನ್ನಲ್ಲೇ ಈಗ ಭಾರತ್ ಬಯೋಟೆಕ್ ಈಗ ತನ್ನ ವರದಿಯನ್ನು ಸಲ್ಲಿಸಿದೆ.

  • ಪಾಟ್ನಾದ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ಆರಂಭ

    ಪಾಟ್ನಾದ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ಆರಂಭ

    ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ಮಕ್ಕಳ ಮೇಲೆ ಭಾರತ್ ಬಯೋಟೆಕ್ ಕಂಪನಿಯ ಕೊವಾಕ್ಸಿನ್ ಲಸಿಕೆಯ ಪ್ರಯೋಗ ಆರಂಭವಾಗಿದೆ.

    ಮೇ 18 ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್, ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ 10-12 ದಿನಗಳಲ್ಲಿ ಆರಂಭವಾಗಲಿದೆ ಎಂದು ತಿಳಿಸಿದ್ದರು.

    ಕೊವಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ ಎಂದು ವಿವರಿಸಿದ್ದರು. ಭಾರತದ ಹಲವು ವೈದ್ಯಕೀಯ ಸಂಸ್ಥೆಗಳಲ್ಲಿ 525 ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಸಿದ್ಧತೆ ನಡೆದಿದೆ.

    ಕೆಲವು ಷರತ್ತುಗಳನ್ನು ವಿಧಿಸಿ ಲಸಿಕೆಯ ಪ್ರಯೋಗಕ್ಕೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಶಿಫಾರಸಿನ ಹಿನ್ನೆಲೆಯಲ್ಲಿ ಮೇ 11 ರಂದು ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಡಿಸಿಜಿಐ ಕೊವಾಕ್ಸಿನ್ ಲಸಿಕೆಗೆ ಅನುಮತಿ ನೀಡಿತ್ತು. ಇದನ್ನು ಓದಿ:ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ 35,000 ಕೋಟಿ ಏನಾಯ್ತು? ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ

    5 ರಿಂದ 18 ವರ್ಷದ ಒಳಗಿನವರಲ್ಲಿ ಲಸಿಕೆ ಪ್ರಯೋಗ ನಡೆಸಲು ಅನುಮತಿ ನೀಡುವಂತೆ ಫೆಬ್ರುವರಿಯಲ್ಲಿ ಭಾರತ್ ಬಯೋಟೆಕ್ ಮನವಿ ಮಾಡಿತ್ತು. ಈ ಸಮಯದಲ್ಲಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಯಸ್ಕರ ಮೇಲೆ ಈ ಲಸಿಕೆಯ ಪರಿಣಾಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.

    ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಬೀಳಲಿದೆ. ಹೀಗಾಗಿ ಕೂಡಲೇ ಮಕ್ಕಳಿಗೆ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಆಗ್ರಹಕ್ಕೆ ಕೇಂದ್ರ ಸರ್ಕಾರ ಕಳೆದ ವಾರ ಸ್ಪಷ್ಟನೆ ನೀಡಿತ್ತು.

    ವಿಶ್ವದ ಯಾವುದೇ ದೇಶವು ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿಲ್ಲ. ಅಲ್ಲದೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಶಿಫಾರಸು ಮಾಡಿಲ್ಲ. ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿದೆ ಎಂದು ತಿಳಿಸಿತ್ತು. ಇದನ್ನು ಓದಿ:ರಾಜ್ಯದಲ್ಲಿ 1 ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ: ಶಾಸಕ ಡಾ.ಅಜಯ್ ಸಿಂಗ್

    ಭಾರತದಲ್ಲಿ ಮಕ್ಕಳ ಮೇಲೆ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಪ್ರಯೋಗಗಳ ಆಧಾರದ ಮೇಲೆ ಸಾಕಷ್ಟು ದತ್ತಾಂಶಗಳು ಲಭ್ಯವಾದ ನಂತರ ಈ ಬಗ್ಗೆ ನಮ್ಮ ವಿಜ್ಞಾನಿಗಳು ನಿರ್ಧಾರ ಕೈಗೊಳ್ಳಬೇಕೇ ಹೊರತು, ವಾಟ್ಸಪ್ ಗ್ರೂಪ್‍ಗಳಲ್ಲಿ ಸೃಷ್ಟಿಸಲಾಗುವ ಭೀತಿ ಮತ್ತು ಕೆಲವು ರಾಜಕಾರಣಿಗಳ ರಾಜಕೀಯ ಆಧರಿಸಿ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗದು ಎಂದಿತ್ತು.

  • 2, 3ನೇ ಹಂತದ ಪರೀಕ್ಷೆಗೆ ಅನುಮತಿ- 2 ರಿಂದ 18 ವರ್ಷದವರ ಮೇಲೆ ಕೋವ್ಯಾಕ್ಸಿನ್ ಪ್ರಯೋಗ

    2, 3ನೇ ಹಂತದ ಪರೀಕ್ಷೆಗೆ ಅನುಮತಿ- 2 ರಿಂದ 18 ವರ್ಷದವರ ಮೇಲೆ ಕೋವ್ಯಾಕ್ಸಿನ್ ಪ್ರಯೋಗ

    ನವದೆಹಲಿ: ಕೊರೊನಾ 3ನೇ ಅಲೆ ಮಕ್ಕಳನ್ನು ಕಾಡಬಹುದು ಎಂಬ ಚರ್ಚೆ ನಡೆಯುತ್ತಿರುವಾಗಲೇ ಸಂತಸ ವಿಚಾರವೊಂದು ಹೊರ ಬಿದ್ದಿದೆ. ಭಾರತ್ ಬಯೋಟೆಕ್‍ನ ಕೊರೊನಾ ಲಸಿಕೆ ಕೋವ್ಯಾಕ್ಸಿನ್‍ಗೆ 2 ಹಾಗೂ 3ನೇ ಹಂತದ ಪರೀಕ್ಷೆ ನಡೆಸಲು ತಜ್ಞರ ಸಮಿತಿ ಒಪ್ಪಿಗೆ ಸೂಚಿಸಿದ್ದು, ಇದೀಗ 2 ರಿಂದ 18 ವರ್ಷದವರ ಮೇಲೂ ಪ್ರಯೋಗ ನಡೆಸಲು ಸಂಸ್ಥೆ ಸಿದ್ಧತೆ ನಡೆಸಿದೆ.

    ದೆಹಲಿಯ ಏಮ್ಸ್, ಪಾಟ್ನಾದ ಏಮ್ಸ್ ಹಾಗೂ ನಾಗ್ಪುರ್ ನ ಮೆಡಿಟ್ರಿನಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ 525 ಜನರಿಗೆ ಲಸಿಕೆ ಪ್ರಯೋಗ ಮಾಡಲಾಗುತ್ತದೆ.

    2 ರಿಂದ 18 ವರ್ಷದ ಮಕ್ಕಳಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಪ್ರತಿಕ್ರಿಯಾತ್ಮಕತೆ ಹಾಗೂ ರೋಗನಿರೋಧಕ ಶಕ್ತಿಯನ್ನು ಮೌಲ್ಯಮಾಪನ ಮಾಡಲು 2 ಹಾಗೂ 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಜ್ಞರ ಸಮಿತಿಗೆ ಮನವಿ ಸಲ್ಲಿಸಿತ್ತು. ಈ ಕುರಿತು ಚರ್ಚೆ ನಡೆಸಿ, ಪರಿಶೀಲಿಸಿದ ಕೇಂದ್ರ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ(ಸಿಡಿಎಸ್‍ಸಿಒ)ಯ ಸಬ್ಜೆಕ್ಟ್ ಎಕ್ಸ್ ಪರ್ಟ್ ಕಮಿಟಿ (ಎಸ್‍ಇಸಿ) ಇಂದು ಅನುಮತಿ ನೀಡಿದೆ.

    ಈ ಕುರಿತು ವಿವರವಾದ ಚರ್ಚೆ ನಡೆಸಿದ ಸಮಿತಿ, 2 ಹಾಗೂ 3ನೇ ಹಂತದ ಕ್ಲಿನಿಕಲ್ ಟ್ರಯಲ್‍ಗೆ ಅನುಮತಿ ನೀಡಿದೆ. ಆದರೆ 2ನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಂಡ ಬಳಿಕ, 3ನೇ ಹಂತದ ಟ್ರಯಲ್ ನಡೆಸುವ ಮೊದಲು ಮಧ್ಯಂತರ ಸುರಕ್ಷತಾ ದತ್ತಾಂಶವನ್ನು ಸಿಡಿಎಸ್‍ಸಿಒಗೆ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ ಎಂದು ವರದಿಯಾಗಿದೆ.

    ಈ ಮೊದಲು ಫೆಬ್ರವರಿ 24ರ ಎಸ್‍ಇಸಿ ಸಭೆಯಲ್ಲಿ ಈ ಪ್ರಸ್ತಾಪವನ್ನು ಚರ್ಚಿಸಲಾಗಿತ್ತು. ಆಗ ಪರಿಷ್ಕøತ ಕ್ಲಿನಿಕಲ್ ಟ್ರಯಲ್ ಪ್ರೋಟೋಕಾಲ್ ಸಲ್ಲಿಸಲು ಭಾರತ್ ಬಯೋಟೆಕ್‍ಗೆ ತಿಳಿಸಲಾಗಿತ್ತು.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ಸಂಸ್ಥೆ ಭಾರತ್ ಬಯೋಟೆಕ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಈಗಾಗಲೇ ವಯಸ್ಕರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಆದರೆ 2-18 ವರ್ಷದ ಮಕ್ಕಳಿಗೂ ನೀಡಲು ಇದೀಗ ಪರೀಕ್ಷೆ ನಡೆಸಲು ಮುಂದಾಗಿದೆ.

  • ರಾಜ್ಯಗಳಿಗೆ ನೀಡುವ ಕೋವ್ಯಾಕ್ಸಿನ್ ಬೆಲೆಯಲ್ಲಿ 200 ರೂ. ಇಳಿಕೆ

    ರಾಜ್ಯಗಳಿಗೆ ನೀಡುವ ಕೋವ್ಯಾಕ್ಸಿನ್ ಬೆಲೆಯಲ್ಲಿ 200 ರೂ. ಇಳಿಕೆ

    ಹೈದರಾಬಾದ್: ಭಾರತ್ ಬಯೋಟೆಕ್ ರಾಜ್ಯ ಸರ್ಕಾರಗಳಿಗೆ ನೀಡುವ ಕೋವ್ಯಾಕ್ಸಿನ್ ದರವನ್ನ 200 ರೂ.ನಷ್ಟು ಇಳಿಕೆ ಮಾಡಿದೆ. ಈ ಮೊದಲು ಪ್ರತಿ ಡೋಸ್‍ಗೆ 600 ರೂ.ನಿಗದಿಯಾಗಿತ್ತು. ಇದೀಗ ರಾಜ್ಯಗಳಿಗೆ 400 ರೂ.ಗೆ ಲಭ್ಯವಾಗಲಿದೆ. ಇದಕ್ಕೂ ಮೊದಲು ಸೀರಮ್ ಇನ್ಸಿಟ್ಯೂಟ್ ಬುಧವಾರ ತನ್ನ ಕೋವಿಶೀಲ್ಡ್ ಬೆಲೆಯನ್ನ ಇಳಿಸಿತ್ತು.

    ಕೇವಲ ರಾಜ್ಯ ಸರ್ಕಾರಗಳಿಗೆ ನೀಡುವ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿದೆ. ಈ ಮೊದಲಿನ ದರದಂತೆಯೇ ಕೇಂದ್ರ ಸರ್ಕಾರ (ಪ್ರತಿ ಡೋಸ್‍ಗೆ 150 ರೂ.) ಮತ್ತು ಖಾಸಗಿ ಆಸ್ಪತೆಗಳಿಗೆ (ಪ್ರತಿ ಡೋಸ್‍ಗೆ 1,200 ರೂ.) ನೀಡಲಿದೆ.

    ಸೀರಂ ತನ್ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಲಸಿಕೆಯನ್ನ ಕೇಂದ್ರ, ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ಮೂರು ಬೆಲೆಯಲ್ಲಿ ನೀಡುತ್ತಿವೆ. ರಾಜ್ಯಗಳಿಗೆ ನೀಡುತ್ತಿವೆ.

  • ದೇಶೀಯ ಲಸಿಕೆ ಕೋವ್ಯಾಕ್ಸಿನ್ ದರ ನಿಗದಿ

    ದೇಶೀಯ ಲಸಿಕೆ ಕೋವ್ಯಾಕ್ಸಿನ್ ದರ ನಿಗದಿ

    ಹೈದರಾಬಾದ್: ದೇಶಾದ್ಯಂತ ಕೊರೊನಾ 2ನೇ ಅಲೆ ತಾಂಡವಾಡುತ್ತಿದ್ದು, ಹತೋಟಿಗೆ ತರಲು ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ನಡೆಸಿವೆ. ಇದರ ಭಾಗವಾಗಿ ಮೇ ತಿಂಗಳಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಹೀಗಿರುವಾಗಲೇ ದೇಶೀಯ ಕೊರೊನಾ ಲಸಿಕೆ ಕೋವ್ಯಾಕ್ಸಿನ್‍ಗೆ ದರ ನಿಗದಿಪಡಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,200 ರೂ. ದರ ನಿಗದಿಪಡಿಸಲಾಗಿದೆ.

    ಈ ಕುರಿತು ಹೈದರಾಬಾದ್ ಮೂಲದ ಕೋವ್ಯಾಕ್ಸಿನ್ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಅಧಿಕೃತ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರದ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ 600 ರೂ., ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ ಕೋವ್ಯಾಕ್ಸಿನ್ ಬೆಲೆಯನ್ನು 1,200 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರಕ್ಕೂ ಸಂಸ್ಥೆ ಲಸಿಕೆಯನ್ನು ಒದಗಿಸಲಿದೆ.

    ಈ ಹಿಂದೆ ಸೀರಂ ಸಂಸ್ಥೆ ಖಾಸಗಿ ಆಸ್ಪತ್ರೆ ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವ ಕೊರೊನಾ ಲಸಿಕೆ ಕೋವಿಶೀಲ್ಡ್ ಬೆಲೆಯನ್ನ ಘೋಷಣೆ ಮಾಡಿಕೊಂಡಿತ್ತು. ಪ್ರತಿ ಡೋಸ್‍ಗೆ ರಾಜ್ಯ ಸರ್ಕಾರಕ್ಕೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ. ನಿಗದಿ ಮಾಡಿತ್ತು. ವ್ಯಾಕ್ಸಿನ್ ಅಭಿಯಾನದ ನೂತನ ಹಂತದಲ್ಲಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ನೇರವಾಗಿ ಲಸಿಕೆಯನ್ನ ಉತ್ಪಾದಕರಿಂದ ಖರೀದಿಸಲು ಅನುಮತಿ ಕಲ್ಪಿಸಲಾಗಿತ್ತು. ಇದೀಗ ಕೋವ್ಯಾಕ್ಸಿನ್ ಬೆಲೆಯನ್ನು ಸಹ ನಿಗದಿಪಡಿಸಲಾಗಿದೆ.

  • ಮೂಗಿನ ಮೂಲಕ ಲಸಿಕೆ – 10 ಮಂದಿಯ ಮೇಲೆ ಪ್ರಯೋಗ

    ಮೂಗಿನ ಮೂಲಕ ಲಸಿಕೆ – 10 ಮಂದಿಯ ಮೇಲೆ ಪ್ರಯೋಗ

    ಹೈದರಾಬಾದ್‌: ಮೂಗಿನ ಮೂಲಕ ಲಸಿಕೆಯ (ಇಂಟ್ರಾನಾಸಲ್ ವ್ಯಾಕ್ಸಿನ್‌) ಮೊದಲ ಕ್ಲಿನಿಕಲ್‌ ಪ್ರಯೋಗ ಆರಂಭಗೊಂಡಿದ್ದು 10 ಮಂದಿ ಭಾರತ್‌ ಬಯೋಟೆಕ್‌ ಕಂಪನಿಯ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಬುಧವಾರ 10 ಮಂದಿ ಲಸಿಕೆ ತೆಗೆದುಕೊಂಡಿದ್ದು, ಶೀಘ್ರವೇ ಪಾಟ್ನಾ, ಚೆನ್ನೈ ಮತ್ತು ನಾಗ್ಪುರದಲ್ಲಿ ಲಸಿಕೆಯ ಪ್ರಯೋಗ ನಡೆಯಲಿದೆ. ಮೊದಲ ಹಂತದಲ್ಲಿ ದೇಶದಲ್ಲಿ 175 ಮಂದಿ ಈ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ.

    ಕಳೆದ ಶುಕ್ರವಾರ ಹೈದರಾಬಾದ್‌ನಲ್ಲಿ ಕ್ಲಿನಿಕಲ್‌ ಪ್ರಯೋಗ ಆರಂಭಗೊಂಡಿದ್ದು ಮೊದಲ ದಿನ ಇಬ್ಬರು ಲಸಿಕೆಯನ್ನು ಪಡೆದುಕೊಂಡಿದ್ದರು.

    ಇಂಟ್ರಾನಾಸಲ್ ವ್ಯಾಕ್ಸಿನ್‌ ಪ್ರಯೋಗ ಯಶಸ್ವಿಯಾದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಇದು ಗೇಮ್‌ ಚೇಂಜರ್‌ ಆಗಲಿದೆ. ಬಹುತೇಕ ಲಸಿಕೆಗಳನ್ನು ಸ್ನಾಯುಗಳ ಮೂಲಕ ನೀಡಲಾಗುತ್ತದೆ. ಈಗ ನೀಡಲಾಗುತ್ತಿರುವ ಕೊರೊನಾ ಲಸಿಕೆಯನ್ನು ಸೂಜಿಯ ಮೂಲಕ ದೇಹಕ್ಕೆ ಕಳುಹಿಸಲಾಗುತ್ತದೆ. ಆದರೆ ಈ ಲಸಿಕೆಯನ್ನು ಮೂಗಿನ ಹೊಳ್ಳೆಗಳ ಒಳಗಡೆ ಸಿಂಪಡಿಸಲಾಗುತ್ತದೆ. ಹೀಗಾಗಿ ಇದರಲ್ಲಿ ಸೂಜಿಯ ಬಳಕೆಯ ಅಗತ್ಯವೇ ಇರುವುದಿಲ್ಲ.

    ಭಾರತ್‌ ಬಯೋಟೆಕ್‌ ಕಂಪನಿಯ ಮುಖ್ಯಸ್ಥ ಡಾ. ಕೃಷ್ಣ ಎಲ್ಲಾ ಪ್ರತಿಕ್ರಿಯಿಸಿ, ಕಂಪನಿ ಅಮೆರಿಕದ ವೈದ್ಯಕೀಯ ವಿಶ್ವವಿದ್ಯಾಲಯದ ಜೊತೆ ಸೇರಿ ನಾಸಲ್ ವ್ಯಾಕ್ಸಿನ್‌ ಬಗ್ಗೆ ಕೆಲಸ ಮಾಡುತ್ತಿದೆ. ನಾಸಲ್‌ ವ್ಯಾಕ್ಸಿನ್‌ಗಳು ಉತ್ತಮ ಆಯ್ಕೆ ಎಂದು ಈಗಾಗಲೇ ಸಂಶೋಧನೆಗಳು ತಿಳಿಸಿವೆ ಎಂದು ಹೇಳಿದ್ದಾರೆ.

    ಕೊರೊನಾ ವೈರಸ್‌ ಮೂಗಿನ ಮೂಲಕ ದೇಹಕ್ಕೆ ಪ್ರವೇಶಿಸುತ್ತದೆ. ಮೂಗಿನ ಮೂಲಕ ಲಸಿಕೆ ನೀಡಿದರೆ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ಬರುವುದರ ಜೊತೆಗೆ ಸೋಂಕು ಹರಡವುದನ್ನು ತಪ್ಪಿಸಬಹುದಾಗಿದೆ.

    ಭಾರತ್‌ ಬಯೋಟೆಕ್‌ ಕಂಪನಿ ಅಭಿವೃದ್ಧಿ ಪಡಿಸಿದರುವ ಕೊವಾಕ್ಸಿನ್‌ ಲಸಿಕೆಯನ್ನು ದೇಶದಲ್ಲಿ ತರ್ತು ಬಳಕೆಗೆ ಅನುಮತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಲಸಿಕೆಯನ್ನು ಪಡೆದುಕೊಂಡಿದ್ದರು.