Tag: bharat beedim bharat motors

  • ಮಂಗ್ಳೂರಿನಲ್ಲಿ ಭಾರತ್ ಬೀಡಿ, ಭಾರತ್ ಮೋಟಾರ್ಸ್ ಮೇಲೆ ಐಟಿ ದಾಳಿ

    ಮಂಗ್ಳೂರಿನಲ್ಲಿ ಭಾರತ್ ಬೀಡಿ, ಭಾರತ್ ಮೋಟಾರ್ಸ್ ಮೇಲೆ ಐಟಿ ದಾಳಿ

    ಮಂಗಳೂರು: ನಗರದ ವಿವಿಧ ಉದ್ಯಮಿಗಳ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಕಡೆಗಳಲ್ಲಿ ಬೀಡಿ ವರ್ಕ್ಸ್ ಮೇಲೆ ಐಟಿ ದಾಳಿ ನಡೆದಿದೆ.

    ಮಂಗಳೂರಿನ ವಿವಿಧ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ಮಾಡುವ ಮೂಲಕ ಭಾರತ್ ಉದ್ಯಮ ಸಮೂಹಕ್ಕೆ ಐಟಿ ಶಾಕ್ ನೀಡಿದೆ. ಭಾರತ್ ಮೋಟಾರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಂಗಳೂರು, ಕಾಞಂಗಾಡ್ ಸೇರಿ ವಿವಿಧೆಡೆ ಇರುವ ಭಾರತ್ ಬೀಡಿ ಕಚೇರಿ ಮೇಲೆಯೂ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಮಂಗಳೂರು, ಉಡುಪಿ, ಬೆಂಗಳೂರಿನಲ್ಲಿ ಭಾರತ್ ಮೋಟಾರ್ಸ್ ಉದ್ಯಮವಿದೆ. ವಿವಿಧ ಬ್ರಾಂಡ್ ಗಳ ಕಾರು ಡೀಲರ್ ಶಿಪ್ ಹೊಂದಿರುವ ಭಾರತ್ ಮೋಟಾರ್ಸ್ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.