Tag: bhanupriya

  • ಶಿಕ್ಷಣ, ಕುಟುಂಬದ ಬಂಡಿ ಸಾಗಿಸಲು ಫುಡ್ ಡೆಲಿವರಿ ಗರ್ಲ್ ಆದ ವಿದ್ಯಾರ್ಥಿನಿ..!

    ಶಿಕ್ಷಣ, ಕುಟುಂಬದ ಬಂಡಿ ಸಾಗಿಸಲು ಫುಡ್ ಡೆಲಿವರಿ ಗರ್ಲ್ ಆದ ವಿದ್ಯಾರ್ಥಿನಿ..!

    ಭುವನೇಶ್ವರ: ಮಹಾಮಾರಿ ಕೊರೊನಾ ವೈರಸ್ ನಿಂದ ಜನರ ಜೀವನ ದುಸ್ಥರವಾಗಿದೆ. ಅನೇಕ ಮಂದಿ ತಮ್ಮ ಕೆಲಸಗಳನ್ನೇ ಕಳೆದುಕೊಂಡು ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬಳು ವಿದ್ಯಾರ್ಥಿನಿ ತನ್ನ ಬದುಕಿನ ಬಂಡಿ ಸಾಗಿಸಲು ಹಾಗೂ ಶಿಕ್ಷಣ ಮುಂದುವರಿಸಲು ಡೆಲಿವರಿ ಗರ್ಲ್ ಆದ ಸ್ಫೂರ್ತಿದಾಯಕ ಸ್ಟೋರಿ ಇಲ್ಲಿದೆ.

    ಈಕೆಯ ಹೆಸರು ಭಾನುಪ್ರಿಯ. 18 ವರ್ಷದ ಈಕೆಗೆ ಮುಂದೆ ಚೆನ್ನಾಗಿ ಓದಿ ಡಾಕ್ಟರ್ ಆಗಬೇಕು ಎಂಬ ಕನಸು ಹೊತ್ತಿದ್ದಾಳೆ. ಆದರೆ ಈ ಕೊರೊನಾ ವೈರಸ್ ಲಾಕ್ ಡೌನ್ ಪರಿಣಾಮ ಭಾನುಪ್ರಿಯ ಕನಸಿಗೆ ಅಡ್ಡಿಯಂಟಾಗಿದೆ. ಆದರೂ ಛಲ ಬಿಡದೆ ಸಾಧಿಸುವ ಗುರಿಯನ್ನು ಕೈಗೆತ್ತಿಕೊಂಡಿದ್ದಾಳೆ. ಇದನ್ನೂ ಓದಿ: ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

    ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹಾಗೂ ಕುಟುಂಬದ ಆಧಾರ ಸ್ತಂಭವಾಗಿದ್ದ ತಂದೆ ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡರು. ಒಂದು ಹೊತ್ತಿನ ಊಟಕ್ಕೂ ಒರದಾಡುವಂತಾಯಿತು. ಈ ಮೂಲಕ ಭಾನುಪ್ರಿಯ ಅವರ ಕುಟುಂಬದ ಬಂಡಿ ಸಾಗಿಸಲು ಕಷ್ಟವಾಗಿತ್ತು. ಮುಂದೆ ಏನು ಪ್ರಶ್ನೆ ಭಾನುಪ್ರಿಯಳನ್ನು ಕಾಡತೊಡಗಿತ್ತು. ಇದನ್ನೂ ಓದಿ: ಯೋಗ ಮಾಡಲು ಹೋಗಿ ಟ್ರೋಲ್‍ಗೊಳಗಾದ ನಟಿ ರಾಖಿ ಸಾವಂತ್

    ತಂದೆ ತಮ್ಮ ಸಂಸಾರದ ನೊಗ ಎಳೆಯಲು ಪಡುತ್ತಿರುವ ಕಷ್ಟವನ್ನು ಕಣ್ಣಾರೆ ಕಂಡ ಭಾನುಪ್ರಿಯ, ತನ್ನ ವಿದ್ಯಾಭ್ಯಾಸವನ್ನು ಸ್ವಲ್ಪ ಕಾಲ ಪಕ್ಕಕ್ಕಿಟ್ಟು ಏನಾದರೂ ಮಾಡಲೇಬೆಕೆಂಬ ಹಠಕ್ಕೆ ಬಿದ್ದಳು. ಅಂತೆಯೇ ಸ್ಥಳೀಯ ಆನ್ ಲೈನ್ ಫುಡ್ ಡೆಲಿವರಿ ಕಂಪನಿ ಝೊಮ್ಯಾಟೋನಲ್ಲಿ ಸಂದರ್ಶನ ಎದುರಿಸಿದಳು ಅಲ್ಲದೆ ಆಯ್ಕೆ ಕೂಡ ಆದಳು.

    ರಾತ್ರಿ ಸಮಯದಲ್ಲಿ ನಿರ್ಜನ ಪ್ರದೇಶಗಳಲ್ಲಿ ತೆರಳಿ ಜನರಿಗೆ ಆಹಾರ ತಲುಪಿಸುವುದು ತುಂಬಾ ಕಷ್ಟದ ಕೆಲಸ ಎಂದು ಗೊತ್ತಿದ್ದರೂ ಭಾನುಪ್ರಿಯ ಮಾತ್ರ ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಕೆಲಸಕ್ಕೆ ಸೇರಿಯೇ ಬಿಟ್ಟಳು. ಇತ್ತ ಬೆಳಗ್ಗೆ 6 ಗಂಟೆಗೆ ಟ್ಯೂಷನ್ ಕೂಡ ತೆಗೆದುಕೊಳ್ಳುವ ಮೂಲಕ ಹೆಚ್ಚಿನ ದುಡಿಮೆ ಕೂಡ ಮಾಡುತ್ತಿದ್ದು, ಓದು ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಾಳೆ.