Tag: bhama harish

  • ಶೃತಿ ಹರಿಹರನ್ #MeToo ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ಭಾಮಾ ಹರೀಶ್

    ಶೃತಿ ಹರಿಹರನ್ #MeToo ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ಭಾಮಾ ಹರೀಶ್

    ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಮೀಟೂ ಆರೋಪ ಹಿಂದೆ ಹಳೆಯ ದ್ವೇಷ ಇದೆ ಎಂದು ಫೀಲ್ಮ್ ಚೇಂಬರ್ ಕಾರ್ಯದರ್ಶಿ ಭಾಮಾ ಹರೀಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ `ಬೆಂಕಿ ಬಿರುಗಾಳಿ’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಮಾ ಹರೀಶ್ ಅವರು, ಫೀಲ್ಮ್ ಚೇಂಬರ್ ಗೆ ಲಭಿಸಿರುವ ಮೂಲಗಳ ಪ್ರಕಾರ ನಟಿ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಅಳಿಯ ಧೃವ ಸರ್ಜಾರೊಂದಿಗೆ ನಟಿಸುವ ಅವಕಾಶ ನೀಡಲು ಮನವಿ ಮಾಡಿದ್ದರು. ಆದರೆ ಈ ವೇಳೆ ಅವರ ಜೋಡಿ ಹಾಗೂ ವಯಸ್ಸಿನ ಹೊಂದಾಣಿಕೆ ಕಾರಣ ನೀಡಿ ಅರ್ಜುನ್ ಸರ್ಜಾ ಅವರು ಶೃತಿ ಅವರ ಮನವಿಯನ್ನು ನಿರಾಕರಿಸಿದ್ದರು. ಅಂದಿನ ದ್ವೇಷ ದೊಡ್ಡದಾಗಿ ಇಂದು ಮೀಟೂವರೆಗೂ ಬಂದಿದೆ ಎಂದು ಗಂಭೀರ ಆರೋಪ ಮಾಡಿದರು.

    ದ್ವೇಷದಿಂದಲೇ ಈ ರೀತಿ ಆರೋಪ ಮಾಡಿದ್ದಾರೆ. ಇದು ಸರಿಯಲ್ಲ. ಇಲ್ಲದ ಆರೋಪ ಮಾಡುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಭಾಮಾ ಹರೀಶ್ ತಿಳಿಸಿದರು. ಈ ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳಾ ಹೋರಾಟಗಾರ್ತಿ, ಈ ಮೂಲಕ ಸಿನಿಮಾದಲ್ಲಿ ಲಿಂಗತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು. ಫೀಲ್ಮ್ ಚೇಂಬರ್ ಕಾರ್ಯದರ್ಶಿ ಅವರೇ ಈ ಕುರಿತು ಆರೋಪ ಮಾಡಿದ್ದು, ಮತ್ತೊಂದು ಚರ್ಚೆಗೆ ಕಾರಣವಾಗಿದೆ.

    ಕೇವಲ ಸಿನಿಮಾ ಚಾನ್ಸ್ ಗಾಗಿ ಶೃತಿ ಅವರು ಈ ಆರೋಪ ಮಾಡುತ್ತಾರ ಎಂಬ ಪ್ರಶ್ನೆಯೂ ಉದ್ಭವವಾಗಿದ್ದು, ಫೀಲ್ಮ್ ಚೇಂಬರ್ ಗೆ ಕಲಾವಿದರ ಸಂಘ, ನಿರ್ದೇಶಕರ ಸಂಘ ಸೇರಿದಂತೆ ಹಲವರ ಸಂಪರ್ಕ ಇರುವುದರಿಂದ ಈ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಫೀಲ್ಮ್ ಚೇಂಬರ್ ನಲ್ಲೂ ಮೀಟೂ ಆರೋಪದ ಕುರಿತು ಸಭೆ ಸೇರಿ ಚರ್ಚೆ ನಡೆಸಲಾಗಿದ್ದು, ಭಾಮಾ ಹರೀಶ್ ಅವರ ಮಾತು ಚರ್ಚೆಯಾಗಿರುವ ಸಾಧ್ಯತೆಯಿದೆ.

    ಸದ್ಯ ಇದುವರೆಗೂ ಮೀಟೂ ವಿಚಾರವಾಗಿ ಶೃತಿ ಹರಿಹರನ್ ಅವರು ದೂರು ನೀಡಿಲ್ಲ. ಸದ್ಯ ಅರ್ಜುನ್ ಸರ್ಜಾ ಅವರು ರಾಜ್ಯದಲಿಲ್ಲ. ಅದ್ದರಿಂದ ಅವರು ಆಗಮಿಸಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರೆ ಮಾತ್ರ ಈ ಕುರಿತು ಸ್ಪಷ್ಟತೆ ಲಭಿಸಲಿದೆ. ಉಳಿದಂತೆ ಧೃವ ಸರ್ಜಾ ಅವರು ಭರ್ಜರಿ ಸಿನಿಮಾ ಬಳಿಕ ಪೊಗರು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ 1 ವರ್ಷದಿಂದಲೂ ಸಿದ್ಧತೆ ನಡೆಯುತ್ತಿದೆ. ಈ ವೇಳೆಯೇ ವಿಸ್ಮಯ ಚಿತ್ರದಲ್ಲಿ ನಟಿಸಿದ್ದ ಬಳಿಕ ಶೃತಿ ಅವರು ಅರ್ಜುನ್ ಸರ್ಜಾ ಅವರಲ್ಲಿ ಈ ಮನವಿ ಮಾಡಿದ್ದರು ಎನ್ನಲಾಗಿದೆ. ಇದನ್ನು ಓದಿ: ಸರ್ಜಾ ವಿರುದ್ಧ ಸೇಡಿಗಾಗಿ ಶೃತಿ ಹರಿಹರನ್ ಪರ ನಿಂತ್ರಾ ನಟ ಚೇತನ್?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸದಿದ್ರೆ ಆಹೋರಾತ್ರಿ ಧರಣಿ: ಭಾ.ಮ.ಹರೀಶ್

    ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಅಧಿಕಾರಾವಧಿ ಮುಗಿದು 9 ತಿಂಗಳಾದರೂ ಇನ್ನೂ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ನಿರ್ಮಾಪಕ ಭಾ.ಮ.ಹರೀಶ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ಮೇ 25ರ ಒಳಗಡೆ ಚುನಾವಣೆ ಪ್ರಕ್ರಿಯೆ ಆರಂಭಿಸದಿದ್ದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂಗಳದಲ್ಲಿ ಕುರಿತು ಹೋರಾಟ ಮಾಡುವುದಾಗಿ ಭಾ.ಮ.ಹರೀಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಕುರಿತು ಕನ್ನಡ ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರ ಜೊತೆ ಮಾತು-ಕಥೆ ನಡೆಸಿದ್ದು ಹಲವರ ಬೆಂಬಲ ಕೂಡ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

    ಈ ವಿಚಾರವಾಗಿ ಚಿತ್ರ ಮಂಡಳಿ ಫೇಸ್‍ಬುಕ್ ಪೇಜ್ ನಲ್ಲಿ ಪೋಸ್ಟ್ ಪ್ರಕಟವಾಗಿದ್ದು, ಅದರ ಯಥಾವತ್ ಕಾಪಿಯನ್ನು ಇಲ್ಲಿ ನೀಡಲಾಗಿದೆ

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸುವಂತೆ ಆಗ್ರಹಿಸಿ ಮಂಡಳಿ ಮಾಜಿ ಕಾರ್ಯದರ್ಶಿ ಭಾ.ಮ.ಹರೀಶ್ ನೇತೃತ್ವದ ಬಣ ಆಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.

    ಕಳೆದ ಸೆಪ್ಟೆಂಬರ್ ನಲ್ಲಿ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸಬೇಕಿತ್ತು .ಆದರೆ ಯಾವುದೋ ನೆಪವೊಡ್ಡಿ ಪ್ರಸ್ತುತ ವಾಣಿಜ್ಯಮಂಡಳಿ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಅವರು ಚುನಾವಣೆಯನ್ನು ಆರು ತಿಂಗಳುಗಳ ಕಾಲ ಮುಂದೂಡಿದ್ದರು. ಈಗ ಇದೇ ಜೂನ್ ನಲ್ಲಿ ನಡೆಯಬೇಕಿರುವ ಚುನಾವಣೆಯನ್ನೂ ಕೂಡ ಅವರು ಮುಂದೂಡುವ ಯತ್ನದಲ್ಲಿದ್ದಾರೆ. ಹಾಗಾಗಿ ಚುನಾವಣೆ ನಡೆಸುವ ಪ್ರಕ್ರಿಯೆ ನಡೆಯಬೇಕು ಎಂದು ಭಾ.ಮ.ಹರೀಶ್ ನೇತೃತ್ವದ ನಿರ್ಮಾಪಕರ ತಂಡ ಒತ್ತಾಯಿಸಿದೆ.

    ಜಯಸಿಂಹ ಮುಸುರಿ, ದಿನೇಶ್ ಗಾಂಧಿ, ನಂಧಿಹಾಳ್, ರಾಜೇಶ್ ಬ್ರಹಾವರ್, ಬಿ.ಆರ್.ಕೇಶವ ಸೇರಿದಂತೆ ಇತರ ನಿರ್ಮಾಪಕರ ತಂಡವು ಇದೇ ತಿಂಗಳ 25 ರಿಂದ ವಾಣಿಜ್ಯ ಮಂಡಳಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಭಾ.ಮ.ಹರೀಶ್ ನೇತೃತ್ವದ ನಿರ್ಮಾಪಕರ ತಂಡ ತಿಳಿಸಿದೆ.

    https://www.youtube.com/watch?v=uX36lAxExv4