Tag: Bhama

  • ನಾಲ್ಕೇ ವರ್ಷಕ್ಕೆ ಡಿವೋರ್ಸ್ ಪಡೆದ ಯಶ್ ಚಿತ್ರದ ನಾಯಕಿ ಭಾಮಾ

    ನಾಲ್ಕೇ ವರ್ಷಕ್ಕೆ ಡಿವೋರ್ಸ್ ಪಡೆದ ಯಶ್ ಚಿತ್ರದ ನಾಯಕಿ ಭಾಮಾ

    ಹಜ ನಟನೆಯ ಮೂಲಕ ಗಮನ ಸೆಳೆದಿರುವ ಯಶ್ ನಟನೆಯ ‘ಮೊದಲ ಸಲ’ (Modala Sala) ಚಿತ್ರದ ನಾಯಕಿ ಭಾಮಾ (Bhama) ದಾಂಪತ್ಯ ಬದುಕಿನಲ್ಲಿ ಡಿವೋರ್ಸ್ (Divorce) ಬಿರುಗಾಳಿ ಬಿಸಿದೆ. ಉದ್ಯಮಿ ಅರುಣ್ ಜೊತೆಗಿನ ದಾಂಪತ್ಯಕ್ಕೆ ನಟಿ ಅಂತ್ಯ ಹಾಡಿದ್ದಾರೆ. ಸದ್ಯ ನಟಿಯ ಸೋಷಿಯಲ್ ಮೀಡಿಯಾದ ಪೋಸ್ಟ್ ಹಲವು ಚರ್ಚೆಗೆ ಗ್ರಾಸವಾಗಿದೆ.

    2020ರ ಜನವರಿಯಲ್ಲಿ ಉದ್ಯಮಿ ಅರುಣ್ ಜಗದೀಶ್ (Arun Jagadish) ಎಂಬುವವರನ್ನು ಭಾಮಾ ವರಿಸಿದ್ದರು. ಮನೆಯವರೇ ಹುಡುಕಿ ಮಾಡಿದ ಅರೇಂಜ್ಡ್ ಮದುವೆ ಅದಾಗಿತ್ತು. ಅರುಣ್ ಮತ್ತು ಭಾಮಾ ಜೋಡಿಗೆ ಒಬ್ಬಳು ಮಗಳು ಇದ್ದಾಳೆ. ಈಗ ಇದೇ ಜೋಡಿ ದೂರ ದೂರವಾಗಿದ್ದಾರೆ. ಅರುಣ್ ಜೊತೆಗಿನ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದರು. ತಮ್ಮ ಹೆಸರಿನ ಪಕ್ಕ ಇರುವ ಅರುಣ್ ಹೆಸರನ್ನು ಕೂಡ ತೆಗೆದಿದ್ದರು. ಇದನ್ನೂ ಓದಿ:ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ಡೇಟ್ ಫಿಕ್ಸ್

     

    View this post on Instagram

     

    A post shared by Bhamaa (@bhamaa)

    ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಭಾಮಾ, ಪರೋಕ್ಷವಾಗಿ ನಾನೀಗ ಒಂಟಿ ಎಂದು ಬರೆದುಕೊಂಡಿದ್ದಾರೆ. ಮಗಳು ಗೌರಿ ಜೊತೆಗಿನ ಫೋಟೋವನ್ನು ಹಂಚಿಕೊಂಡ ಭಾಮಾ, ನಾನು ‘ಸಿಂಗಲ್ ಮದರ್’ ಆಗಿದ್ದು ಮತ್ತಷ್ಟು ಬಲ ನೀಡಿತು ಎಂದು ಬರೆದುಕೊಂಡಿದ್ದಾರೆ.

    2010ರಲ್ಲಿ ನಟ ಯಶ್ ಜೊತೆಗೆ ಮೊದಲ ಸಲ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಪದಾರ್ಪಣೆ ಮಾಡಿದರು. ಅದಾದ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಶೈಲೂ, ಒಂದು ಕ್ಷಣದಲ್ಲಿ, ಆಟೋ ರಾಜ, ಬರ್ಫಿ, ಅಪ್ಪಯ್ಯ, ಅಂಬರ, ಅರ್ಜುನ, ರಾಗ ಸಿನಿಮಾಗಳ ಮೂಲಕ ಕನ್ನಡದಲ್ಲೂ ಗಮನ ಸೆಳೆದ ನಟಿ. ಈಗ ಇದೇ ನಟಿಯ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದಿದೆ.

  • `ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?

    `ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?

    ನ್ನಡದ ಶೈಲೂ, ಆಟೋರಾಜ, ರಾಗಾ, ಮೊದಲ ಸಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿ ಭಾಮಾ (Actress Bhama) ನಟಿಸಿದ್ದಾರೆ. ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ಭಾಮಾ ಅವರ ಸೋಷಿಯಲ್ ಮೀಡಿಯಾ ಫೋಟೋಗಳು ಡಿಲೀಟ್ ಆಗಿರೋದ್ರಿಂದ ಅನೇಕ ಅನುಮಾನ ಶುರುವಾಗಿದೆ. ಪತಿಯಿಂದ ನಟಿ ದೂರ ಸರಿದಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

    2018ರಿಂದ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ಭಾಮಾ ಅವರ ವೈಯಕ್ತಿಕ ಬದುಕಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗುತ್ತಿದೆ. 2020ರಲ್ಲಿ ಉದ್ಯಮಿ ಅರುಣ್ (Arun) ಅವರನ್ನು ಭಾಮಾ ಮದುವೆಯಾಗಿದ್ದರು. ಎರಡು ವರ್ಷದ ಮಗಳು ಕೂಡ ಇದ್ದಾರೆ. ಪತಿ, ಮಗಳು, ಸಂಸಾರ ಎಂದು ಬ್ಯುಸಿಯಿದ್ದ ನಟಿ ಬದುಕಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

    ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಭಾಮಾ ಅವರು ಮದುವೆ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಆದರೆ ಈಗ ಪತಿಯ ಜೊತೆಗಿನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ. ಇದರಿಂದ ಭಾಮಾ ಅವರು ಪತಿಯಿಂದ ಬೇರೆ ಆಗಿದ್ದಾರಾ ಎಂಬ ಚರ್ಚೆ ನಡೆಯುತ್ತಿದೆ.

     

    View this post on Instagram

     

    A post shared by Bhamaa (@bhamaa)

    ಇನ್ನೂ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಭಾಮಾ ದಂಪತಿ ಅದ್ದೂರಿಯಾಗಿ ಆಚರಿಸಿದ್ದರು. ಈ ಕುರಿತ ವೀಡಿಯೋ ಕೂಡ ಶೇರ್ ಮಾಡಿದ್ದರು. ಬಳಿಕ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ ಫೋಟೋ ಹಂಚಿಕೊಂಡಿಲ್ಲ. ಹಾಗಾಗಿ ಅನುಮಾನ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮಾ

    ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಭಾಮಾ ಸಿನಿಮಾ ರಂಗದಿಂದ ಸ್ವಲ್ಪ ದೂರ ಊಳಿದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇವರ ಕುರಿತಾಗಿ ಹರಿದಾಡುತ್ತಿರುವ ಸುಳ್ಳು ಸುದ್ದಿಗೆ ಇದೀಗ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಟಿ ಭಾಮಾ ಅವರ ಬಗ್ಗೆ ಒಂದು ಸುದ್ದಿ ಹರಿದಾಡಿತ್ತು. ನಟಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಿದ್ದೆ ಮಾತ್ರೆ ತೆಗೆದುಕೊಂಡು ಸಾಯುವ ಪ್ರಯತ್ನ ಮಾಡಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಈ ವಿಚಾರಕ್ಕೆ ನಟಿ ಭಾಮಾ ಸ್ಪಷ್ಟನೆ ನೀಡಿದ್ದಾರೆ.

    ಇತ್ತೀಚೆಗೆ ನನ್ನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಸುದ್ದಿಗಳು ವದಂತಿಗಳು ಹರಿದಾಡುತ್ತಿವೆ. ನಾವೆಲ್ಲರೂ ಆರೋಗ್ಯವಾಗಿದ್ದೇವೆ. ನನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಎಂದು ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Bhamaa (@bhamaa)

    ಮೂಲತಃ ಮಲಯಾಳಂ ನಟಿಯಾದರೂ ಕನ್ನಡದಲ್ಲಿ ಸಹ ಅಭಿನಯಿಸಿವ ಮೂಲಕವಾಗಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಭಾಮಾ, ಯಶ್ ಅವರ ಜೊತೆ ಮೊದಲಾ ಸಲ ಸಿನಿಮಾ ಮೂಲಕವಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟರು. ನಂತರ ಶೈಲೂ ಸಿನಿಮಾಗಳದಲ್ಲಿ ಉತ್ತಮ ನಟನೆಯನ್ನು ಮಾಡುವ ಮೂಲಕವಾಗಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

     

    View this post on Instagram

     

    A post shared by Bhamaa (@bhamaa)

    ಕೆಲ ವರ್ಷಗಳ ಹಿಂದೆ ಮದುವೆಯಾದ ನಟಿ ಭಾಮಾ, ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಿನಿಮಾ ಕ್ಷೇತ್ರದಿಂದ ಕೊಂಚ ದೂರವಾದ ಇವರು ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದಾರೆ.

  • ಉದ್ಯಮಿ ಜೊತೆ ‘ಶೈಲೂ’ ನಟಿ ನಿಶ್ಚಿತಾರ್ಥ

    ಉದ್ಯಮಿ ಜೊತೆ ‘ಶೈಲೂ’ ನಟಿ ನಿಶ್ಚಿತಾರ್ಥ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ಶೈಲೂ’ ಚಿತ್ರದಲ್ಲಿ ನಟಿಸಿದ ನಟಿ ಭಾಮಾ ಉದ್ಯಮಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಭಾಮಾ ಉದ್ಯಮಿ ಅರುಣ್ ಅವರ ಜೊತೆ ಮಂಗಳವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥದಲ್ಲಿ ಕೇವಲ ಅವರ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಭಾಮಾ ಅವರದ್ದು ಆರಂಜ್ಡ್ ಮ್ಯಾರೇಜ್ ಆಗಿದ್ದು, ಅರುಣ್ ಹಾಗೂ ಅವರು ಸಹಪಾಠಿಗಳು ಎಂದು ಹೇಳಲಾಗುತ್ತಿದೆ.

    ಅರುಣ್ ಮೂಲತಃ ಕೇರಳದ ಚೆನ್ನಿಥಾಲ, ಆಲಪ್ಪುಳದವರಾಗಿದ್ದು, ಕೆನೆಡಾದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿದೆ.

    ಭಾಮಾ ಹಾಗೂ ಅರುಣ್ ಅವರ ಆರತಕ್ಷತೆ ಕಾರ್ಯಕ್ರಮ ಕೊಚ್ಚಿಯಲ್ಲಿ ಜರುಗಲಿದೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ನಟಿಯ ಆತ್ಮೀಯ ಸ್ನೇಹಿತರು, ಚಿತ್ರರಂಗದ ಸಹದ್ಯೋಗಿಗಳು ಆಗಮಿಸಲಿದ್ದಾರೆ. ಸದ್ಯ ಭಾಮಾ ತಮ್ಮ ನಿಶ್ಚಿತಾರ್ಥ ಫೋಟೋಗಳನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ‘ನಿವೇದಂ’ ಚಿತ್ರದ ಮೂಲಕ ಭಾಮಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಅವರು ‘ಸೈಕಲ್’, ‘ಐವರ್ ವಿವಾಹಿತರಾಯಲ್’, ‘ಜನಪ್ರಿಯನ್’, ‘ಸೆವೆನ್ಸ್’ ಹಾಗೂ ‘ಹಸ್ಬೆಂಡ್ಸ್ ಇನ್ ಗೋವಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮೊದಲಸಲಾ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಭಾಮಾ ಶೈಲೂ, ಅಂಬರ, ಅರ್ಜುನಾ, ಆಟೋರಾಜ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.