Tag: Bhalki

  • ಲವ್ವರ್ ತಂದೆ ಬೈದಿದ್ದಕ್ಕೆ ಮನನೊಂದು ರೈಲಿಗೆ ತಲೆಕೊಟ್ಟ ಯುವಕ

    ಲವ್ವರ್ ತಂದೆ ಬೈದಿದ್ದಕ್ಕೆ ಮನನೊಂದು ರೈಲಿಗೆ ತಲೆಕೊಟ್ಟ ಯುವಕ

    ಬೀದರ್: ತಾನು ಪ್ರೀತಿಸುತ್ತಿದ್ದ ಯುವತಿಯ ಪೋಷಕರು ಮನೆಗೆ ಬಂದು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಯುವಕನೋರ್ವ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದ ರೈಲ್ವೆ ಗೇಟ್ ಬಳಿ ನಡೆದಿದೆ.

    ಸಚಿನ್ ರಾಮ್‍ರಾವ್ ವಾಂಗೆ (18) ಆತ್ಮಹತ್ಯೆಗೆ ಶರಣಾದ ಯುವಕ. ಭಾಲ್ಕಿ ಪಟ್ಟಣದ ಗುರು ಪ್ರಸನ್ನ ಐಟಿಐ ಕಾಲೇಜಿನ ವ್ಯಾಸಂಗ ಮಾಡುತ್ತಿದ್ದ ಸಚಿನ್ ತನ್ನ ಕ್ಲಾಸ್‍ಮೇಟ್ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ.

    ಸಚಿನ್ ಮತ್ತು ಯುವತಿಯ ನಡುವಿನ ಲವ್ ವಿಷಯ ತಿಳಿದ ಯುವತಿಯ ಪೋಷಕರು ಸಚಿನ್ ಮನಗೆ ಬಂದು ಗಲಾಟೆ ಮಾಡಿದ್ದರು. ಈ ವೇಳೆ ಸಚಿನ್ ಪೋಷಕರಿಗೂ ಬೈದಿದ್ರು. ತನ್ನಿಂದಾಗಿ ಪೋಷಕರಿಗೆ ಸಾರ್ವಜನಿಕವಾಗಿ ಅವಮಾನವಾಯಿತು ಎಂದು ಮನನೊಂದು ಸಚಿನ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗುಲ್ಬರ್ಗಾ ರೈಲ್ವೆ ವಿಭಾಗದ ಡಿವೈಎಸ್‍ಪಿ ಬಸವರಾಜು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಘಟನಾ ಸ್ಥಳಕ್ಕೆ ಬೀದರ್ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಬೀದರ್- ಕಳಪೆ ಕಾಮಗಾರಿ: ನೀರಿನ ರಭಸಕ್ಕೆ ಒಡೆದ ಬ್ಯಾರೇಜ್

    ಬೀದರ್- ಕಳಪೆ ಕಾಮಗಾರಿ: ನೀರಿನ ರಭಸಕ್ಕೆ ಒಡೆದ ಬ್ಯಾರೇಜ್

    ಬೀದರ್: ಕಾರಂಜಾ ಡ್ಯಾಂನಿಂದ ಹರಿಯಬಿಟ್ಟ ನೀರಿನಿಂದ ಭಾಲ್ಕಿ ತಾಲೂಕಿನ ಗೋಧಿಹಿಪ್ಪರಗಾ ಗ್ರಾಮದ ಬಳಿಯ ಬ್ಯಾರೆಜ್ ಕಂ ಬ್ರಿಡ್ಜ್ ಒಡೆದು ನೀರು ಪೋಲಾಗುತ್ತಿದೆ.

    ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿ ಕಾರಂಜಾ ನದಿಗೆ ಡ್ಯಾಂ ಕಟ್ಟಲಾಗಿದೆ. ಈ ಡ್ಯಾಂನಿಂದ ಪ್ರತಿನಿತ್ಯ 86 ಸಾವಿರ ಕ್ಯೂಸೆಕ್ ನೀರನ್ನು ಹರಿಯಬಿಡಲಾಗುತ್ತಿದೆ. ಆದರೆ ಕೇವಲ 8 ತಿಂಗಳ ಹಿಂದೆ ಗೋಧಿಹಿಪ್ಪರಗಾ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ನೀರಿನ ರಭಸಕ್ಕೆ ಒಡೆದು ಹೋಗಿದೆ. ಶುಕ್ರವಾರ ರಾತ್ರಿಯಿಂದ ನದಿಗೆ ನೀರನ್ನು ಹರಿಸಲಾಗುತ್ತಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

    ಮಾಸಿಮಾಡ ಮತ್ತು ಗೋಧಿಹಿಪ್ಪರಗಾ ಗ್ರಾಮದ ನಡುವೆ ಸಂಚಾರ ಕೂಡ ಕಡಿದು ಹೋಗಿದೆ. ಬ್ಯಾರೇಜ್ ಒಡೆದು ಹೋಗಿದ್ದ ಅಧಿಕಾರಿಗಳು ಮಾತ್ರ ನದಿಯ ನೀರನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಹತ್ತಾರು ಎಕರೆಯಲ್ಲಿ ರೈತರು ಬೆಳೆದಿದ್ದ ತರಕಾರಿ, ಕಬ್ಬು ನಾಶವಾಗಿವೆ.

    ಅವೈಜ್ಞಾನಿಕ ರೀತಿಯಲ್ಲಿ ನೀರು ಬಿಟ್ಟಿರುವುದು ಮತ್ತು ಕಳಪೆ ಗುಣಮಟ್ಟದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದ್ದರಿಂದ ಇಷ್ಟೆಲ್ಲಾ ಅನಾಹುತವಾಗಲು ಕಾರಣ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.