ಇದು ಮಂಗಳೂರಿನ ಸುರತ್ಕಲ್‍ನಲ್ಲಿ (Surathkal) ನಡೆದ ಹಿಂದೂ-ಮುಸ್ಲಿಂ ಲವ್ ಸ್ಟೋರಿಯಾಗಿದೆ (Hindu- Muslim Love Story). ಮುಸ್ಲಿಂ ಯುವತಿಯೊಬ್ಬಳು ಭಜರಂಗದಳದ (Bhajarangdal) ಕಾರ್ಯಕರ್ತನನ್ನ ಮದುವೆಯಾಗಿದ್ದಾಳೆ.
ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿರೋ ಪ್ರಶಾಂತ್, ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಯತ್ನಿಸಿದ್ದ. ಇದೀಗ ಸುರತ್ಕಲ್ ನ ಮುಸ್ಲಿಂ ಯುವತಿಯ ಪ್ರೀತಿಸಿ ವರಿಸಿ ಸುದ್ದಿಯಾಗಿದ್ದಾನೆ.
ಇತ್ತ ಆಯೇಷಾ ಪೋಷಕರು ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಉಡುಪಿ: ಶಿವಮೊಗ್ಗದ ಈದ್ ಮಿಲಾದ್ (Eid Milad) ಮೆರವಣಿಗೆಯಲ್ಲಿ ಯುವಕರ ಗುಂಪು ಪುಂಡಾಟ ಮೆರೆದಿತ್ತು. ಔರಂಗಜೇಬನ ಕಟೌಟ್, ಟಿಪ್ಪುವಿನ ಪತಾಕೆಗೆ ಪೊಲೀಸರು ಅಕ್ಷೇಪಿಸಿದ್ದು ಇದಕ್ಕೆ ಕಾರಣವಾಗಿತ್ತು. ಘಟನೆ ನಡೆಯುತ್ತಿದ್ದಂತೆ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಪ್ರಚೋದನಾತ್ಮಕ ಭಾವನೆಗಳಿಗೆ ಧಕ್ಕೆ ತರುವ ಬ್ಯಾನರ್, ಬಂಟಿಂಗ್ಸ್ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದೆ. ಈ ಸೂಚನೆಯ ಮೊದಲ ಪರಿಣಾಮ ಕರಾವಳಿ ಜಿಲ್ಲೆ ಉಡುಪಿ ಮೇಲೆ ಬಿದ್ದಿದೆ. ಅಕ್ಟೋಬರ್ 10 ಎಂಜಿಎಂ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದೆ. ಕಾರ್ಯಕ್ರಮಕ್ಕೆ ನಗರ ಸಿದ್ಧಗೊಳ್ಳುತ್ತಿದೆ. ಸರಕಾರದ ಸೂಚನೆಯಂತೆ ಎಸ್‍ಪಿ ಡಾ. ಅರುಣ್ ಕೆ ಅವರು ಎಲ್ಲಾ ಅನಧಿಕೃತ ನಿಯಮಬಾಹಿರ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ಭಜರಂಗದಳ ಬಿಜೆಪಿ (BJP) ಮತ್ತು ಸಂಘ ಪರಿವಾರದ ಮುಖಂಡರು ನಗರದಲ್ಲಿ 30ಕ್ಕೂ ಹೆಚ್ಚು ಕಟೌಟ್ಗಳನ್ನು ಅಳವಡಿಸಿದ್ದರು. ಯಾವುದೇ ಮುನ್ಸೂಚನೆ ನೀಡಿದೆ ಉಡುಪಿ ನಗರಸಭೆ ಕಟಾವುಟಗಳನ್ನು ತೆರೆವು ಮಾಡಿದ್ದು ಆಯೋಜಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಖಂಡರು ಉಡುಪಿ ಬಿಜೆಪಿ ಶಾಸಕ ಯಶ್ ಪಾಲ ಸುವರ್ಣ ಈ ಬಗ್ಗೆ ಎಸ್ಪಿ ಜೊತೆ ಮಾತುಕತೆ ಮಾಡಿದ್ದಾರೆ. ನಿಯಮದ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಸಿರುವ ಹುನ್ನಾರ ಇದು. ಇಬ್ಬಗೆ ನೀತಿಯನ್ನು ಸರ್ಕಾರ ಪ್ರದರ್ಶಿಸುತ್ತಿದೆ ಎಂದು ಶಾಸಕ ಯಶ್ ಪಾಲ್ ಆರೋಪಿಸಿದ್ದಾರೆ.
ಶಿವಮೊಗ್ಗ ಘಟನೆ ನಂತರ ಕಠಿಣ ನಿಯಮವನ್ನು ಜಾರಿಗೆ ತರಲು ಸರ್ಕಾರದಿಂದ ಮೌಖಿಕ ಸೂಚನೆ ಬಂದಿದೆ. ನಗರಸಭೆಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಅಧಿಕಾರಿಗಳು ಆದೇಶವನ್ನು ಪಾಲಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.
ತಿಂಗಳ ಹಿಂದೆ ಉಡುಪಿಯಲ್ಲಿ ಅಧಿಕಾರ ವಹಿಸಿಕೊಂಡ ಎಸ್. ಪಿ ಡಾ. ಅರುಣ್ ಹಲವಾರು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದಾರೆ. ನಗರದ ಸೌಂದರ್ಯ ಕೆಡಿಸುವ ಡಿಜಿಟಲ್ ಬ್ಯಾನರ್ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದದ್ದರಿಂದ ಈ ವಿಚಾರದಲ್ಲೂ ನಿಯಮ ಬಿಗಿ ಮಾಡಿದ್ದಾರೆ. ಶೌರ್ಯ ಜಾಗರಣಾ ರಥಯಾತ್ರೆ ಹೆಸರಿನ ಕಾರ್ಯಕ್ರಮದ ಮೇಲೆ ಸರ್ಕಾರದ ನಿಯಮದ ಮೊದಲ ಪರಿಣಾಮ ಬಿದ್ದಿದೆ.
ಮಂಗಳೂರು: ಇಲ್ಲಿನ ಮೂವರು ಭಜರಂಗದಳದ (Bajrang Dal) ಕಾರ್ಯಕರ್ತರ ಗಡಿಪಾರು ವಿಚಾರ ಇದೀಗ ರಾಜ್ಯಾದ್ಯಂತ ಚರ್ಚೆಯಾಗ್ತಿದೆ. ಇದೊಂದು ಕಾಂಗ್ರೆಸ್ (Congress) ಸರ್ಕಾರದ ಹಿಂದೂ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ಈ ನಡೆಗೆ ಹಿಂದೂ ಸಂಘಟನೆಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಮಂಗಳೂರಲ್ಲಿ (Mangaluru) ನೈತಿಕ ಪೊಲೀಸ್‍ಗಿರಿ ನಡೆಸಿದ್ದ ಭಜರಂಗದಳದ ಮೂವರು ಕಾರ್ಯಕರ್ತರನ್ನು ಗಡಿಪಾರು ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸುಲ್ತಾನ್ ಜ್ಯುವೆಲ್ಲರಿಯ ಕಾರ್ಯಕ್ರಮ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ಭಜರಂಗದಳದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಕಾಶ್ ಶಕ್ತಿನಗರ ಎನ್ನುವವರು ನೈತಿಕ ಪೊಲೀಸ್‍ಗಿರಿ (Moral Policing) ಪ್ರದರ್ಶಿಸಿದ್ರು. ಈ ಬೆನ್ನಲ್ಲೇ ಪದೇ ಪದೇ ಕಾನೂನುಭಂಗ ಮಾಡ್ತಿರೋ ನಿಮ್ಮನ್ನು ಏಕೆ ಗಡಿಪಾರು (Externment) ಮಾಡಬಾರದು, ಉತ್ತರಿಸಿ ಎಂದು ನೊಟೀಸ್ ಜಾರಿ ಮಾಡಿದೆ.
ಗಡಿಪಾರು ನೊಟೀಸ್‍ಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗೋಹತ್ಯೆ ವಿರುದ್ಧ ಕಾನೂನು ಇದೆ, ಅಕ್ರಮ ಗೋಹತ್ಯೆ ಮಾಡೋದನ್ನು ನೋಡಿ ಸುಮ್ಮನಿರಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಈವರೆಗೆ ಪೊಲೀಸರಿಗೆ ತಿಳಿಸಿಯೇ ದಾಳಿ ಮಾಡುತ್ತಿದ್ದೆವು. ಇನ್ನು ಪೊಲೀಸರಿಗೆ ತಿಳಿಸದೆ ದಾಳಿ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಜರಂಗದಳ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್ ನೀಡಲು ಅವರೇನು ಕೊಲೆ ಮಾಡಿದ್ದಾರಾ, ರೇಪ್ ಮಾಡಿದ್ದಾರಾ, ಉಗ್ರಗಾಮಿಗಳ ತರ ಬಾಂಬ್‍ಗಳನ್ನು ತಯಾರು ಮಾಡ್ತಾರಾ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಭಜರಂಗದಳದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹೆದರಿಸೋ ಕೆಲಸ ಮಾಡ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಎಷ್ಟು ಜನ್ರನ್ನ ಸರ್ಕಾರ ಗಡಿಪಾರು ಮಾಡುತ್ತೆ ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದೂ ಸಂಘಟನೆಗಳ ಮೇಲೆ ಸಮರ ಸಾರಲು ಮುಂದಾಗಿದೆ.ಹಿಂದೂ ಸಂಘಟನೆಗಳೂ ಇದಕ್ಕೆ ತಕ್ಕ ಉತ್ತರ ಕೊಡಲು ಮುಂದಾಗಿದೆ. ಈ ವಿಚಾರ ಇನ್ಯಾವ ಮಟ್ಟಕ್ಕೆ ಹೋಗುತ್ತೆ ಅನ್ನೋ ಆತಂಕ ಮನೆ ಮಾಡಿದೆ.
ಕಾರವಾರ: ಬಿಡದಿ ನಿತ್ಯಾನಂದನ ಲುಕ್, ಆತನಂತೆಯೇ ಮಾತುಗಾರಿಕೆ, ಹಾವಭಾವ. ನಾನೊಬ್ಬ ನಿತ್ಯಾನಂದನ ಸ್ವರೂಪ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು, ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಇದ್ದುಕೊಂಡೇ ಮುಗ್ಧ ಜನರಿಗೆ ಮೋಸ ಮಾಡುತಿದ್ದ ಸತ್ಯಾನಂದ ಸ್ವಾಮಿಯ ಅಸಲಿ ಮುಖವನ್ನು ಮಂಗಳೂರಿನ ಭಜರಂಗದಳದ ಕಾರ್ಯಕರ್ತರು ಹೊರಗೆಳೆದಿದ್ದಾರೆ.
ಬಿಡದಿ ನಿತ್ಯಾನಂದನ ರಾಸಲೀಲೆ ಯಾರು ತಾನೇ ಕೇಳದೇ ಇರಲು ಸಾಧ್ಯ? ಇದೀಗ ನಿತ್ಯಾನಂದ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡರೆ, ಆತನ ಸ್ವರೂಪ ತಾನು ಎಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಚವೆಯ ಬೋರಳ್ಳಿಯಲ್ಲಿ ಸತ್ಯಾನಂದ ಉದ್ಭವವಾಗಿ ಬಿಟ್ಟಿದ್ದಾನೆ. ಈತ ತಾನು ಧರಿಸುವ ಕಾವಿಯಿಂದ ಹಿಡಿದು ಹಾವಾಭಾವದಲ್ಲೂ ನಿತ್ಯಾನಂದನ ಅನುಕರಣೆ ಮಾಡುತ್ತಾನೆ. ಅಷ್ಟೇ ಅಲ್ಲ, ಈತನಿಗೆ ಮಹಿಳೆಯರು ಎಂದರೆ ಅತೀವ ಪ್ರೀತಿ. ಹೀಗಾಗಿ ನಿತ್ಯಾನಂದನ ಪ್ರಭಾವದಲ್ಲಿ ಓರ್ವ ಮಹಿಳೆಯನ್ನು ಅತ್ಯಾಚಾರ ಮಾಡಲು ಹೋಗಿ ಜೈಲಿನ ಕಂಬಿ ಎಣಿಸಿ ಬೇಲ್ ಮೂಲಕ ಹೊರಬಂದಿದ್ದಾನೆ.
ಇಷ್ಟಾದರೂ ತನ್ನ ಚಾಳಿ ಮುಂದುವರಿಸಿರುವ ಈತ ಸತ್ಯಾನಂದ ಪರಮಶಿವ ಎಂಬ ಫೇಸ್‌ಬುಕ್ ಅಕೌಂಟ್ ಮಾಡಿಕೊಂಡು ಪ್ರತಿ ದಿನ ಧಾರ್ಮಿಕ ವಿಚಾರವಾಗಿ ದಿನಗಟ್ಟಲೆ ಪ್ರವಚನ ನೀಡುತಿದ್ದ. ಇಷ್ಟು ಸಾಲದು ಎನ್ನುವಂತೆ ಭಾರತ ಮಾತೆ ನನ್ನ ಹೆಂಡತಿ, ಇಲ್ಲಿರುವ ಜನರು ನನ್ನ ಮಕ್ಕಳು ಎಂದು ಕೆಟ್ಟದಾಗಿ ಹೇಳುವುದರ ಜೊತೆಗೆ ಹಿಂದೂ ದೇವರು, ಧರ್ಮ ಕ್ಷೇತ್ರದ ಬಗ್ಗೆ ಅವಹೇಳನ ಮಾಡುತ್ತಿದ್ದ. ತಾನೇ ದೇವರೆಂದು ಹೇಳುವ ಮೂಲಕ ಈತ ನಿತ್ಯಾನಂದನಿಗೆ ಕಮ್ಮಿ ಇಲ್ಲ ಎನ್ನುವಂತೆ ನಡೆದುಕೊಳ್ಳುತಿದ್ದ.
ಈತ ಫೇಸ್‌ಬುಕ್ ಮೂಲಕ ಮುಗ್ಧ ಮಹಿಳೆಯರನ್ನು ತನ್ನ ನಯವಾದ ಮಾತಿನಿಂದ ಆಕರ್ಷಿಸಿ ಹಣ ಪೀಕುವುದಲ್ಲದೇ, ದೇವಿ ದರ್ಶನ ಮಾಡಿಸುತ್ತೇನೆ, ನನ್ನ ಆಶ್ರಮಕ್ಕೆ ಬನ್ನಿ ಎಂದು ಕರೆಸಿಕೊಳ್ಳುತ್ತಿದ್ದ. ಹೀಗೆ ಮಂಗಳೂರಿನ ಮಹಿಳೆಗೆ ಕರೆಸಿ, ದೇವರನ್ನು ತೋರಿಸಲು ಹೋಗಿದ್ದವ ಇದೀಗ ಭಜರಂಗದಳ ಕಾರ್ಯಕರ್ತರಿಂದ ಗೂಸಾ ತಿಂದು ಕ್ಷಮಾಪಣೆ ಕೇಳಿ ಕಾವಿ ಕಳಚಿದ್ದಾನೆ.
ಈ ಕಳ್ಳ ಸ್ವಾಮೀಜಿಯ ನಿಜವಾದ ಹೆಸರು ಶೇಖರ್ ಸಣ್ತಮ್ಮ ಪಟಗಾರ್. ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಳ್ಳಿ ಗ್ರಾಮದಲ್ಲಿ ಆಟೋ ಚಲಾಯಿಸಿಕೊಂಡಿದ್ದ. ಕಳೆದೆರಡು ವರ್ಷಗಳಿಂದ ಅದೇನಾಯ್ತೋ ಏನೋ ತನ್ನ ಮೈ ಮೇಲೆ ದೇವಿ ಬರುತ್ತಾಳೆ. ನಾನು ನಿತ್ಯಾನಂದನ ಸ್ವರೂಪಿ ಎಂದು ಕಾವಿ, ರುದ್ರಾಕ್ಷಿ ತೊಟ್ಟು ಸ್ವಯಂ ಘೋಷಿಸಿತ ಸ್ವಾಮೀಜಿ ಆಗಿದ್ದಾನೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ಪರ್ವ – ಇದು ಹೇಡಿಗಳ ಲಕ್ಷಣ ಎಂದ ಈಶ್ವರಪ್ಪ
ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅದರಲ್ಲಿ ವೀಡಿಯೋ ಹರಿಬಿಟ್ಟು ಜನರನ್ನು ಮರುಳು ಮಾಡುತ್ತಿದ್ದ ಈತನಿಗೆ 2,000ಕ್ಕೂ ಹೆಚ್ಚು ಜನ ಫಾಲೋವರ್‌ಗಳು ಇದ್ದಾರೆ. ಈತ ತನ್ನ ಮನೆಯನ್ನೇ ಆಶ್ರಮ ಮಾಡಿಕೊಂಡು ಅಲ್ಲಿಗೆ ತನ್ನ ಅನುಯಾಯಿಗಳನ್ನು ಕರೆಸಿಕೊಂಡು ಜ್ಯೋತಿಷ್ಯ, ವಾಸ್ತು, ಧರ್ಮ ಬೋಧನೆ ಎಂದು ಪುಂಗಿ ಬಿಟ್ಟು ಹಣ ಪೀಕುತ್ತಿದ್ದ. ಎಲ್ಲಿ ಈತನಿಗೆ ಮಹಿಳೆಯರ ಚಪಲ ಹೆಚ್ಚಾಯಿತೋ ಆಗ ಈತನ ಅಸಲಿ ಮುಖ ಆತನ ಅನುಯಾಯಿಗಳಿಗೆ ನಿಧಾನವಾಗಿ ತಿಳಿಯಲು ಪ್ರಾರಂಭವಾಯಿತು.
ಇತ್ತೀಚೆಗೆ ಗ್ರಾಮ ಪಂಚಾಯಿತಿಯವರು ಈತನ ಬಳಿ ಬರುವ ಜನರಿಗೆ ಮೋಸದ ವಿಷಯ ತಿಳಿಸಿ ಜಾಗೃತಿ ಮೂಡಿಸುವುದರ ಜೊತೆಗೆ ಆತನಿಗೆ ಬುದ್ಧಿ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಇವೆಲ್ಲವನ್ನು ಬಿಡುವಂತೆ ಹೇಳಿದ್ದರು. ಆದರೆ ಇದ್ಯಾವುದಕ್ಕೂ ಕಿವಿಗೊಡದ ಈತ ತನ್ನ ವಂಚನೆ ಕೆಲಸವನ್ನು ಮುಂದುವರಿಸಿದ್ದ. ಈ ವಿಷಯ ತಿಳಿದು ಒಂದು ಬಾರಿ ಮಾಧ್ಯಮಗಳು ಅಲ್ಲಿಗೆ ಹೋಗುತ್ತಿದ್ದಂತೆ ಆಶ್ರಮಕ್ಕೆ ಬೀಗ ಹಾಕಿ ಓಡಿಹೋಗಿದ್ದ. ಈತನ ಕೆಟ್ಟ ಕೆಲಸಗಳಿಂದಾಗಿ ಊರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಗ್ರಾಮದವರು ಈತನನ್ನು ಹುಡುಕಿ ಇದೀಗ ಅಂಕೋಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು
ಸ್ವಯಂ ಘೋಷಿತ ಸ್ವಾಮೀಜಿ ಶೇಖರನಿಗೆ ಭಜರಂಗದಳ ಎಚ್ಚರಿಕೆ ನೀಡಿದ್ದಕ್ಕೆ ಕಾವಿ, ರುದ್ರಾಕ್ಷಿ ಬಿಚ್ಚಿ ನಾನು ಇನ್ನು ಮೇಲೆ ಕಾವಿ ತೊಡುವುದಿಲ್ಲ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟದ್ದಾನೆ. ಇದಲ್ಲದೇ ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ಇದ್ದ ವೀಡಿಯೋಗಳನ್ನೂ ಡಿಲೀಟ್ ಮಾಡಿದ್ದು, ತನ್ನನ್ನು ಪ್ರಶ್ನಿಸಿದ ಜನರ ವಿರುದ್ಧವೇ ಈಗ ಅಂಕೋಲ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದಾನೆ.
Live Tv
[brid partner=56869869 player=32851 video=960834 autoplay=true]