Tag: Bhajarangi loki

  • ಪವನ್ ಕಲ್ಯಾಣ್ ಮುಂದೆ ಅಬ್ಬರಿಸಲಿದ್ದಾರೆ ಭಜರಂಗಿ ಲೋಕಿ

    ಪವನ್ ಕಲ್ಯಾಣ್ ಮುಂದೆ ಅಬ್ಬರಿಸಲಿದ್ದಾರೆ ಭಜರಂಗಿ ಲೋಕಿ

    ಸೌರವ್ ಲೋಕೇಶ್ ಹೀಗಂದ್ರೆ ಎಷ್ಟೋ ಜನಕ್ಕೆ ಗೊತ್ತಾಗ್ಲಿಕ್ಕಿಲ್ಲ. ಭಜರಂಗಿ ಲೋಕಿ ಅಂದ್ರೆ ಎಲ್ಲರಿಗೂ ಗೊತ್ತು. ಭಜರಂಗಿ ಸಿನಿಮಾ ಮೂಲಕ ಯಾರಪ್ಪ ಈ ನಟ ಅಂತ ಇಡೀ ಇಂಡಸ್ಟ್ರೀ ಒಮ್ಮೆಲೆ ತಿರುಗಿ ನೋಡುವಂತೆ ಮಾಡಿದ ಕಲಾವಿದ. ತನ್ನ ಅಮೋಘ ಅಭಿನಯದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದ ಸೌರವ್ ಲೋಕೇಶ್ ಭಜರಂಗಿ ಸಿನಿಮಾ ನಂತರ ಭಜರಂಗಿ ಲೋಕಿ ಎಂದೇ ಫೇಮಸ್ ಅಂತ ಆದರು. ಈಗ ತೆಲುಗಿನ ಒಜಿ ಸಿನಿಮಾದಲ್ಲಿ ಪವನ್ ಕಲ್ಯಾಣ್ ಮುಂದೆ ಅಬ್ಬರಿಸಿದ್ದಾರೆ.

    ಭಜರಂಗಿ ಯಶಸ್ಸಿನ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದ ಲೋಕಿ ಸದ್ಯ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಪ್ರಪಂಚದಾದ್ಯಂತ ತೆರೆಗೆ ಬರ್ತಿರೋ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಓಜಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ಭಜರಂಗಿ ಲೋಕಿ ಕೂಡ ಅಭಿನಯಿಸಿದ್ದಾರೆ. ಖಡಕ್ ಹಾಗೂ ಸ್ಟೈಲಿಷ್ ವಿಲನ್ ಆಗಿ ಲೋಕಿ ಪವನ್ ಕಲ್ಯಾಣ್ ಎದುರು ಕಾಣಿಸಿಕೊಳ್ತಿರೋದು ವಿಶೇಷ.

    ಸದ್ಯ ಬಿಡುಗಡೆ ಆಗಿರೋ ಟ್ರೇಲರ್ ನಲ್ಲಿ ಭಜರಂಗಿ ಲೋಕಿ ಲುಕ್ ನೋಡಿ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಆಂಧ್ರ ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ಸ್ಕ್ರೀನ್ ಶೇರ್ ಮಾಡಿರೋದಕ್ಕೆ ಲೋಕಿ ಸಂತಸ ವ್ಯಕ್ತ ಪಡಿಸಿದ್ದಾರೆ. ಅದಷ್ಟೇ ಅಲ್ಲದೆ ಓಜಿ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರವಹಿಸಿದ್ದು ಇಮ್ರಾನ್ ಹಶ್ಮಿ ಅವರ ಜೊತೆಯಲ್ಲಿಯೂ ಲೋಕಿ ಸ್ಕ್ರೀನ್ ಶೇರ್ ಮಾಡಿದ್ದಾರೆ.

    ಓಜಿ 90 ರ ದಶಕದ ಮುಂಬೈ ಮಾಫಿಯಾ ಹಿನ್ನೆಲೆಯ ಕಥಾ ಹಂದರ ಹೊಂದಿದೆ. ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್ ನಟ ಇಮ್ರಾನ್ ಹಷ್ಮಿ, ಸೌರವ್ ಲೋಕೇಶ್, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ರಾವ್ ರಮೇಶ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಥಮನ್ ಎಸ್. ಅವರು ಸಂಗೀತ ನೀಡಿದ್ದಾರೆ. ಸುಜೀತ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಡಿವಿವಿ ದಾನಯ್ಯ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • ‘ದಿಲ್‌ದಾರ್’ ಶ್ರೇಯಸ್ ಮಂಜುಗೆ ವಿಲನ್ ಆದ ‘ಭಜರಂಗಿ’ ಲೋಕಿ

    ‘ದಿಲ್‌ದಾರ್’ ಶ್ರೇಯಸ್ ಮಂಜುಗೆ ವಿಲನ್ ಆದ ‘ಭಜರಂಗಿ’ ಲೋಕಿ

    ನ್ನಡ ಮತ್ತು ಸೌತ್ ಸಿನಿಮಾಗಳಲ್ಲಿ ‘ಭಜರಂಗಿ’ ಲೋಕಿ (Bhajarangi Loki) ಬ್ಯುಸಿಯಾಗಿದ್ದಾರೆ. ಇದೀಗ ‘ಪಡ್ಡೆಹುಲಿ’ ಖ್ಯಾತಿಯ ಶ್ರೇಯಸ್ ಮಂಜು ಮುಂದೆ ವಿಲನ್ ಆಗಿ ಅಬ್ಬರಿಸಿದ್ದಾರೆ. ಸೌರವ್ ಲೋಕೇಶ್ ‘ದಿಲ್‌ದಾರ್’ (Dildar) ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ಕ್ಷಮೆ ಕೇಳದ ಕಮಲ್ ಹಾಸನ್‌ಗೆ ಬ್ಯಾನ್ ಬಿಸಿ..!

    ಸೌರವ್ ಲೋಕೇಶ್ ಸಿನಿ ಕೆರಿಯರ್‌ನಲ್ಲಿ ವಿಲನ್ ಪಾತ್ರಗಳೇ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು, ಈಗ ಶ್ರೇಯಸ್ ಮಂಜು ನಟನೆಯ ದಿಲ್‌ದಾರ್ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆಯುವ ಕಥೆ ಇದಾಗಿದ್ದು, ಮಧು ಜಿ ಗೌಡ ನಿರ್ದೇಶನ ಮಾಡಿದ್ದಾರೆ. ಸದ್ಯ ಕ್ಯಾರೆಕ್ಟರ್ ಟೀಸರ್‌ನಲ್ಲಿ ಸಖತ್ ರಗಡ್ ಆಗಿ ಸೌರವ್ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Saurav Lokesh (@sauravlokesh)

    ಕನ್ನಡ ಚಿತ್ರಗಳ ಜೊತೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರದಲ್ಲೂ ವಿಲನ್ ಆಗಿ ಅಬ್ಬರಿಸಿದ್ದಾರೆ. ದಿಗ್ಗಜರ ಜೊತೆ ಕನ್ನಡದ ನಟ ಅಭಿನಯಿಸಿದ್ದಾರೆ. ಇದನ್ನೂ ಓದಿ:ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!

    ಆಚಾರ್ಯ, ಸಲಾರ್ ಸಿನಿಮಾಗಳಲ್ಲಿ ಭಜರಂಗಿ ಲೋಕಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲುಗು ಮಾತ್ರವಲ್ಲ, ತಮಿಳಿನಲ್ಲೂ ಅವರಿಗೆ ಅವಕಾಶಗಳು ಅರಸಿ ಬರುತ್ತಿವೆ.

  • ತಾಯಿಗೆ ತಕ್ಕ ಮಗನ ವಿಶೇಷತೆ ಮೊಗೆದಷ್ಟೂ ಮುಗಿಯೋದಿಲ್ಲ!

    ತಾಯಿಗೆ ತಕ್ಕ ಮಗನ ವಿಶೇಷತೆ ಮೊಗೆದಷ್ಟೂ ಮುಗಿಯೋದಿಲ್ಲ!

    ಬೆಂಗಳೂರು: ಶಶಾಂಕ್ ಸಿನಿಮಾಸ್ ಅಡಿಯಲ್ಲಿ ಶಶಾಂಕ್ ಅವರೇ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರೋ ಚಿತ್ರ ತಾಯಿಗೆ ತಕ್ಕ ಮಗ. ಈಗಾಗಲೇ ಮಾಧುರ್ಯದ ಹಾಡುಗಳು ಮತ್ತು ಎನರ್ಜೆಟಿಕ್ ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ.

    ‘ತಾಯಿಗೆ ತಕ್ಕ ಮಗ’ ಶಶಾಂಕ್ ಅವರ ಸ್ವಂತ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರೋ ಮೊದಲ ಚಿತ್ರ. ಆದ್ದರಿಂದಲೇ ಆರಂಭವೇ ಅದ್ಧೂರಿಯಾಗಿರಬೇಕೆಂಬ ಮಹದಾಸೆಯಿಂದ ಪ್ರತಿಯೊಂದರಲ್ಲಿಯೂ ನಿಗಾ ವಹಿಸಿಯೇ ಈ ಚಿತ್ರವನ್ನು ರೂಪಿಸಿದ್ದಾರೆ. ಶಶಾಂಕ್ ಈ ಕಥೆಯನ್ನೂ ಕೂಡಾ ಅದಕ್ಕೆ ತಕ್ಕುದಾಗಿಯೇ ಹೊಸೆದಿದ್ದಾರಂತೆ. ಆದ್ದರಿಂದಲೇ ಬಿಡುಗಡೆಯ ಹೊಸ್ತಿಲಲ್ಲಿಯೇ ಗೆಲುವಿನ ಸೂಚನೆ ಮಿರುಗಲಾರಂಭಿಸಿದೆ.

    ಇದು ಶಶಾಂಕ್ ಮತ್ತು ಅಜೇಯ್ ರಾವ್ ಒಟ್ಟಾಗಿ ರೂಪಿಸಿದ ಮೂರನೇ ಚಿತ್ರ. ಅಜೇಯ್ ರಾವ್ ಅವರ ವೃತ್ತಿ ಜೀವನದಲ್ಲಿದು ಇಪ್ಪತೈದನೇ ಚಿತ್ರ. ಬಹಳಷ್ಟು ಕಷ್ಟಪಟ್ಟು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅಜೇಯ್ ರಾವ್ ಈ ಹಾದಿಯಲ್ಲಿ ಹದಿನೈದು ವರ್ಷ ಸಾಗಿ ಬಂದಿದ್ದಾರೆ. ಅದನ್ನು ತಾಯಿಗೆ ತಕ್ಕ ಮಗ ಚಿತ್ರ ಸಾರ್ಥಕಗೊಳಿಸಲಿದೆ ಎಂಬ ಭರವಸೆಯನ್ನೂ ಹೊಂದಿದ್ದಾರೆ.

    ಕಳೆದ ಹದಿನೈದು ವರ್ಷದ ಅಜೇಯ್ ರಾವ್ ಬಣ್ಣದ ಬದುಕನ್ನೊಮ್ಮೆ ಅವಲೋಕಿಸಿದರೆ ಅವರು ಈವರೆಗೂ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿದ್ದಾರೆ. ಆದರೆ ಅವರ ಪ್ರಧಾನ ಆಸಕ್ತಿ ಆಕ್ಷನ್‍ನತ್ತಲೇ ಇತ್ತೆಂಬುದು ಅಚ್ಚರಿಯಾದರೂ ಸತ್ಯ. ಅಷ್ಟಕ್ಕೂ ಅಜೇಯ್ ರಾವ್ ಶಾಲಾ ದಿನಗಳಿಂದಲೇ ಕರಾಟೆ ಚಾಂಪಿಯನ್. ಈ ಚಿತ್ರದಲ್ಲಿ ಕರಾಟೆ ಪಟ್ಟುಗಳನ್ನೂ ಕೂಡಾ ಅಜೇಯ್ ಪ್ರದರ್ಶಿಸಿದ್ದಾರಂತೆ!

    ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಗಿರಿ ಮಹೇಶ್ ಸಂಕಲನ ಹಾಗೂ ಕೆ.ರವಿವರ್ಮ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ ಅಜೇಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್, ಅಚ್ಯುತಕುಮಾರ್, ಸಾಧುಕೋಕಿಲ, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ಮುಂತಾದವರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews