Tag: bhajarangi 2

  • ಹುಟ್ಟುಹಬ್ಬದಂದು ನಟಿ ಭಾವನಾ ಮೆನನ್ 86ನೇ ಸಿನಿಮಾ ಅನೌನ್ಸ್

    ಹುಟ್ಟುಹಬ್ಬದಂದು ನಟಿ ಭಾವನಾ ಮೆನನ್ 86ನೇ ಸಿನಿಮಾ ಅನೌನ್ಸ್

    ನ್ನಡದ ‘ಜಾಕಿ’ ಬ್ಯೂಟಿ ಭಾವನಾ ಮೆನನ್ (Bhavana  Menon) ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇಯಂದು (Birthday) ಹೊಸ ಸಿನಿಮಾದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಭಾವನಾ ನಟನೆಯ 86ನೇ ಚಿತ್ರದ ಬಗ್ಗೆ ಇಲ್ಲಿದೆ ಅಪ್‌ಡೇಟ್. ʻಭಜರಂಗಿ 2ʼ (Bhajarangi 2) ಬಳಿಕ ನಟಿ ಸಿಹಿಸುದ್ದಿ ಕೊಟ್ಟಿದ್ದಾರೆ.

    ಭಾವನಾ ಮೆನನ್ ಅವರು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ, ಮಲಯಾಳಂ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ (Puneeth Rajkumar) ಜೊತೆ ಜಾಕಿ, ಯಾರೇ ಕೂಗಾಡಲಿ, ಮೈತ್ರಿ ಚಿತ್ರಗಳಲ್ಲಿ ಭಾವನಾ ನಾಯಕಿಯಾಗಿ ನಟಿಸಿದ್ದಾರೆ. ಶಿವಣ್ಣ ಜೊತೆ ಭಜರಂಗಿ 2, ಟಗರು ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ

    ಸದ್ಯ ನಟಿ ಭಾವನಾ ಮೆನನ್ ಅವರು ‘ದಿ ಡೋರ್’ (The Door) ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾವನಾ ಬರ್ತ್‌ಡೇ ದಿನ ಚಿತ್ರದ ಪೋಸ್ಟರ್‌ ಲುಕ್‌ ರಿವೀಲ್‌ ಮಾಡಿದೆ ಚಿತ್ರತಂಡ. ಎಂದೂ ಕಾಣಿಸಿಕೊಂಡಿರದ ಭಿನ್ನ ರೋಲ್‌ನಲ್ಲಿ ಜಾಕಿ ಭಾವನಾ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಜೈದೇವ್ ನಿರ್ದೇಶನದ ಈ ಸಿನಿಮಾದಲ್ಲಿ ಭಾವನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ರಾಜನ್ ಬಂಡವಾಳ ಹೂಡಿದ್ದಾರೆ.

    ಕನ್ನಡದ ‘ರೋಮಿಯೋ’ (Romeo) ಚಿತ್ರದ ನಿರ್ಮಾಪಕ ನವೀನ್ (Naveen) ಜೊತೆ 2018ರಲ್ಲಿ ಭಾವನಾ ಮದುವೆಯಾದರು. ದಾಂಪತ್ಯ ಜೀವನ ಮತ್ತು ಸಿನಿಮಾ ಎರಡನ್ನು ಸಮರ್ಥವಾಗಿ ನಿಭಾಯಿಸುತ್ತಾ ನಟಿ ಬ್ಯುಸಿಯಾಗಿದ್ದಾರೆ. ಸದ್ಯ ಹುಟ್ಟುಹಬ್ಬದ ಅಂಗವಾಗಿ ಭಾವನಾ, ಪತಿ ಜೊತೆ ಚೆನ್ನೈನಲ್ಲಿದ್ದಾರೆ.

  • ಜನರ ಅಭಿಮಾನ ನೋಡಿದರೆ ಸಾಕಷ್ಟು ಸಂತೋಷವಾಗತ್ತಿದೆ: ಶಿವರಾಜ್ ಕುಮಾರ್

    ಜನರ ಅಭಿಮಾನ ನೋಡಿದರೆ ಸಾಕಷ್ಟು ಸಂತೋಷವಾಗತ್ತಿದೆ: ಶಿವರಾಜ್ ಕುಮಾರ್

    ಬೆಂಗಳೂರು: ಅಭಿಮಾನಿಗಳು ತುಂಬಾ ಚೆನ್ನಾಗಿ ರೆಸ್ಪಾನ್ಸ್ ಮಾಡಿದ್ದಾರೆ. ಜನರ ಅಭಿಮಾನವನ್ನು ನೋಡಿದರೆ ಸಾಕಷ್ಟು ಸಂತೋಷವಾಗತ್ತಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

    ಮಾಗಡಿ ಮುಖ್ಯ ರಸ್ತೆಯ ಆಂಜನೇಯನ ಗುಡಿಗೆ ಭೇಟಿ ಬಳೀಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಹಲವು ದಿನಗಳ ಬಳಿಕ ಚಿತ್ರ ತೆರೆ ಕಂಡಿದೆ. ಬಹಳ ಸಂತೋಷವಾಗತ್ತಿದೆ. ನನ್ನ ಹಾಗೂ ಹರ್ಷ ಅವರ ಕಾಂಬಿನೇಷನಲ್ಲಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಜನರು ಸುರಕ್ಷಿತವಾಗಿ ಬಂದು ಸಿನೆಮಾ ನೋಡಲಿ. ಸಿನಿಮಾದಲ್ಲಿ ಓಳ್ಳೆ ಥೀಮ್ ಇದೆ, ಜನರು ಒಪ್ಪಿಕೊಂಡ್ರೇ ಸಿನಿಮಾ ಗೆದ್ದ ಹಾಗೆ ಎಂದರು. ಇದನ್ನೂ ಓದಿ: ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2

    ಎರಡು ಚಿತ್ರಮಂದಿರಗಳಿಗೆ ವಿಸಿಟ್ ಮಾಡಿದ ಶಿವಣ್ಣ ನಂತರ ಆಂಜನೇಯನ ಗುಡಿಗೆ ಭೇಟಿ ಕೊಟ್ಟರು. ಈ ವೇಳೆ ಭಜರಂಗಿ 2 ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಹನುಮನ ವೇಷದಲ್ಲಿ ಬಾಲಕರು ನಟನನ್ನು ಸ್ವಾಗತಿಸಿದರು. ಬಳಿಕ ಸೆಂಚುರಿ ಸ್ಟಾರ್ ಅವರು ದೇವರಿಗೆ ಪೂಜೆ ಸಲ್ಲಿಸಿ ಆರ್ಶಿವಾದ ಪಡೆದರು. ಇದೇ ವೇಳೆ ಅಭಿಮಾನಿಗಳು ಶಿವಣ್ಣನಿಗೆ ಬೆಳ್ಳಿ ಗದೆ ಕೊಟ್ಟು ವಿಶ್ ಮಾಡಿದರು.

  • ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2

    ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2

    – 2 ವರ್ಷದ ಬಳಿಕ ಬೆಳ್ಳಿ ತೆರೆ ಮೇಲೆ ಶಿವಣ್ಣ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಇಂದು 375 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ವಿಶ್ವದಾದ್ಯಂತ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭಜರಂಗಿ ಹವಾ ಕ್ರಿಯೆಟ್ ಮಾಡಲಿದೆ.

    ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 5 ಗಂಟೆಗೆ ಅಭಿಮಾನಿಗಳಿಗಾಗಿ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಮೊದಲ ಶೋ ಗಾಗಿ ತುದಿಗಾಲಲ್ಲಿ ಅಭಿಮಾನಿಗಳು ನಿಂತಿದ್ದರು. ತೆರೆ ಮೇಲೆ ಶಿವಣ್ಣನನ್ನ ನೋಡುತಿದ್ದಂತೆ ಹುಚ್ಚೆದ್ದು ಕುಣಿದ ಅಭಿಮಾನಿಗಳು, ಸ್ಕ್ರೀನ್ ಮುಂದೆ ಹೂ ಎರಚಿ ಸಂಭ್ರಮಿಸಿದರು. ಅಲ್ಲದೆ ಶೋ ಆರಂಭಕ್ಕೂ ಮುನ್ನ ಪಟಾಕಿ ಹೊಡೆದು, ಶಿವರಾಜ್ ಕುಮಾರ್ ಕಟೌಟ್ ಗೆ ಹಾಲಿನ ಅಭಿಷೇಕ, ಪೂಜೆ ಸಲ್ಲಿಸಿದರು.

    ಇತ್ತ ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿಯಲ್ಲಿಯೂ ಶೋ ಆರಂಭವಾಗಿದೆ. ಬೆಂಗಳೂರಿನ ಗೌಡನ ಪಾಳ್ಯ ಶ್ರೀನಿವಾಸ ಥಿಯೇಟರ್ ನಲ್ಲಿ ಬೆಳಿಗ್ಗೆಯೇ ಸಿನಿಮಾ ಆರಂಭ ಆಗಿದೆ. ಗಾಂಧಿನಗರದ ಅನುಪಮ ಚಿತ್ರಂಮದಿರದಲ್ಲಿ 10 ಗಂಟೆಗೆ ಶೋ ಆರಂಭ ಆಗಲಿದೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

    ಜಯಣ್ಣ-ಭೋಗಣ್ಣ ನಿರ್ಮಾಣದ ಎ ಹರ್ಷ ನಿರ್ದೇಶನದ ಹಾಗೂ ಹರ್ಷ ಶಿವರಾಜ್ ಕುಮಾರ್ ಕಾಂಬೀನೇಷನ್ ಚಿತ್ರದಲ್ಲಿ ಚಿತ್ರದಲ್ಲಿ ಬಹುಭಾಷಾ ನಟಿ ಭಾವನ, ಹಿರಿಯ ನಟಿ ಶೃತಿ, ಸೌರವ್ ಲೋಕೇಶ್, ಶಿವರಾಜ್ ಕೆ ಆರ್ ಪೇಟೆ ತಾರಬಳಗವಿದೆ.

  • ಬರ್ತ್ ಡೇಗೆ ನಿಗೂಢ ಲೋಕಕ್ಕೆ ಕರೆದೊಯ್ದ ಭಜರಂಗಿ

    ಬರ್ತ್ ಡೇಗೆ ನಿಗೂಢ ಲೋಕಕ್ಕೆ ಕರೆದೊಯ್ದ ಭಜರಂಗಿ

    ಬೆಂಗಳೂರು: ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ನೇರವಾಗಿ ಆಚರಿಸದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದ್ದು, ಸಿಡಿಪಿ(ಕಾಮನ್ ಡಿಸ್‍ಪ್ಲೇ) ಮೂಲಕ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ. ಅಲ್ಲದೆ ವಿವಿಧ ರೀತಿಯ ಪೋಸ್ಟ್ ಗಳನ್ನು ಹಾಕುವ ಮೂಲಕ ಸಾಮಾಜಿಕ ಜಾಲತಾಣಗಲ್ಲೇ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಭಜರಂಗಿ 2 ಚಿತ್ರ ತಂಡ ಸಹ ಅಭಿಮಾನಿಗಳು ಖುಷಿಯನ್ನು ಇಮ್ಮಡಿಗೊಳಿಸಿದೆ.

    ಹೌದು ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಚಿತ್ರತಂಡ ಸರ್ಪ್ರೈಸ್ ನೀಡಿದ್ದು, ಅಭಿಮಾನಿಗಳು ಕುಣಿದುಕುಪ್ಪಳಿಸುವಂತೆ ಮಾಡಿದೆ. ವಿಶೆಷ ದಿನದಂದು ವಿಶೇಷ ಉಡುಗೊರೆ ನೀಡಿದ್ದು, ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್‍ನಲ್ಲಿ ಟೀಸರ್ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಸಂಭ್ರಮದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಂಜೆ ಹೊತ್ತಿಗಾಗಲೇ 3 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ.

    ಟೀಸರ್ ನಲ್ಲಿ ಸಹ ಆರೋಗ್ಯದ ಕುರಿತು ಮಾತನಾಡಲಾಗಿದ್ದು, ವಿಡಿಯೋದಲ್ಲಿ ವೈದ್ಯೋ ನಾರಾಯಣೋ ಹರಿಃ ಎಂದು ಪ್ರಾರಂಭವಾಗುತ್ತದೆ. ಭಗವಂತ ಮನುಷ್ಯನಿಗೆ ಎಲ್ಲ ಸೌಲಭ್ಯಗಳನ್ನು ಕೊಟ್ಟನು, ಕಾಲ ಕ್ರಮೇಣ ಅದು ಹೆಚ್ಚಾದಂತೆ ರೋಗ ರುಜಿನಗಳು ಹೆಚ್ಚಾದವು. ಇದಕ್ಕೆ ಪರಿಹಾರವನ್ನು ಪ್ರಕೃತಿಯಲ್ಲಿಯೇ ಇಟ್ಟನು ಎಂದು ಹೇಳಲಾಗಿದೆ. ಫುಲ್ ಮಾಸ್ ವಿಡಯೋ ಬಿಡುಗಡೆ ಮಾಡಲಾಗಿದ್ದು, ಶಿವಣ್ಣ ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಶೃತಿ ಸಿಗರೇಟ್ ಹಿಡಿದು ಮಾಸ್ ಲುಕ್ ನೀಡಿದ್ದಾರೆ. ವಿಡಿಯೋ ಯೂಟ್ಯೂಬ್‍ನಲ್ಲಿ ಅಖತ್ ಸದ್ದು ಮಾಡುತ್ತಿದೆ.

    ಟೀಸರ್ ನೋಡಿದ್ರೆ ಯಾವುದೋ ಒಂದು ನಿಗೂಢ ಲೋಕಕ್ಕೆ ಭೇಟಿ ನೀಡಿದ ಅನುಭವ ಆಗೋದು ಖಂಡಿತ. ಎಲ್ಲವೂ ದೃಶ್ಯಗಳು ಅಮೋಘವಾಗಿ ಮೂಡಿ ಬಂದಿವೆ. ಅದ್ಧೂರಿ ವೆಚ್ಚದಲ್ಲಿ ಬೃಹತ್ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದ್ದು, ಕಪ್ಪು-ಬಿಳುಪಿನ ಟೀಸರ್ ಒಂದು ರೀತಿಯ ಹೊಸತನದೊಂದಿಗೆ ಅಭಿಮಾನಿಗಳ ಮುಂದೆ ಬಂದಿದ್ದು, ಗಂಡುಗಲಿ ಅಭಿಮಾನಿಗಳು ಜೈ ಜೈ ಅನ್ನುತ್ತಿದ್ದಾರೆ.

    ಶಿವಣ್ಣನ ಹುಟ್ಟುಹಬ್ಬಕ್ಕೆ ಇತ್ತೀಚೆಗೆ ಅವರ ಅಭಿಮಾನಿಗಳು ಸಿಡಿಪಿ ತಯಾರಿಸಿದ್ದರು, ಇದನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದರು. ಇಂದೂ ಸಹ ಟ್ವೀಟ್ ಮೂಲಕ ಶಿವಣ್ಣನಿಗೆ ಕಿಚ್ಚ ವಿಶೇಷ ಶುಭಾಶಯ ತಿಳಿಸಿದ್ದಾರೆ. ಚಿತ್ರರಂಗದ ಹಲವು ಗಣ್ಯರು ಸಹ ಶುಭ ಕೋರುತ್ತಿದ್ದಾರೆ. ಶಿವಣ್ಣನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡುವುದು ಸವಾಲಿನ ಕೆಲಸವಾಗುತ್ತದೆ. ಹೀಗಾಗಿ ಯಾವುದೇ ಅಭಿಮಾನಿಗಳು ನನ್ನ ಹುಟ್ಟುಹಬ್ಬ ಆಚರಿಸಲು ಮನೆ ಬಳಿ ಬರಬೇಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿದ್ದರು. ವಿಡಿಯೋ ಮೂಲಕ ಕೇಳಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕವೇ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಭಜರಂಗಿ 2 ಟೀಸರ್ ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಇನ್ನೂ ಹೆಚ್ಚಿನ ಸಂತಸವನ್ನುಂಟು ಮಾಡಿದೆ.

    https://www.youtube.com/watch?v=kwpkKA_M3lc

  • ಭಜರಂಗಿ 2 ಸಿನಿಮಾಗೆ ಮತ್ತೆ ಸಂಕಷ್ಟ – ಬೆಂಕಿ ಬಿದ್ದ ಸೆಟ್ ಗೋದಾಮಿಗೆ ಬೀಗ ಹಾಕಿ ಅಧಿಕಾರಿಗಳಿಂದ ಸೀಜ್

    ಭಜರಂಗಿ 2 ಸಿನಿಮಾಗೆ ಮತ್ತೆ ಸಂಕಷ್ಟ – ಬೆಂಕಿ ಬಿದ್ದ ಸೆಟ್ ಗೋದಾಮಿಗೆ ಬೀಗ ಹಾಕಿ ಅಧಿಕಾರಿಗಳಿಂದ ಸೀಜ್

    ಬೆಂಗಳೂರು: ನೆಲಮಂಗಲದ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಭಜರಂಗಿ-2 ಸಿನಿಮಾ ಶೂಟಿಂಗ್ ವೇಳೆ ನಡೆದ ಅಗ್ನಿ ಅವಘಡ ಪ್ರಕರಣದಿಂದ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದೆ. ಸ್ಟುಡಿಯೋಗೆ ಭೇಟಿ ಕೊಟ್ಟ ತಹಶೀಲ್ದಾರ್ ಬೀಗ ಜಡಿದು ನೋಟಿಸ್ ಕೊಟ್ಟು ಬಂದಿದ್ದಾರೆ.

    ಮೋಹನ್ ಬಿ.ಕೆರೆ ಸ್ಟುಡಿಯೋ ಅಂದರೆ ಸಿನಿಮಾ ಮಂದಿಗೆ ಸಿಗುವ ಅದ್ಧೂರಿಯಾಗಿ ಮತ್ತೊಂದು ಪ್ರಪಂಚ ಸೃಷ್ಟಿಸುವ ಲೋಕ. ಅಥಾರ್ತ್ ಸಿನಿಮಾಗಾಗಿ ಸೆಟ್ ಹಾಕಿ ಶೂಟಿಂಗ್ ಮಾಡಿಕೊಳ್ಳುವ ಹಾಟ್ ಸ್ಪಾಟ್. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀನಿವಾಸಪುರ ಗ್ರಾಮದ ಬಳಿಯ ಆರ್ಟ್ ಡೈರೆಕ್ಟರ್ ಮೋಹನ್ ಬಿ.ಕೆರೆ ಒಡೆತನದ ಸ್ಟುಡಿಯೋದಲ್ಲಿ ಕಳೆದ 10 ದಿನಗಳಿಂದ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ‘ಭಜರಂಗಿ-2’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಇದನ್ನೂ ಓದಿ:   ಭಜರಂಗಿ-2 ಸಿನಿಮಾ ಸೆಟ್‍ನಲ್ಲಿ ಮತ್ತೆ ಬೆಂಕಿ ಅವಘಡ

    ದುರಾದೃಷ್ಟವಶಾತ್ ಎರಡು ಬಾರಿ ಈ ಸಿನಿಮಾಗೆ ಹಾಕಲಾಗಿದ್ದ ಗುಹೆಯ ಬೃಹತ್ ಸೆಟ್‍ಗೆ ಬೆಂಕಿ ಬಿದ್ದು ಅನಾಹುತ ಸಂಭವಿಸಿತ್ತು. ಹೀಗಾಗಿ ಸತತ ಎರಡು ಬೆಂಕಿ ಅವಘಡಗಳ ಬಳಿಕ ಎಚ್ಚೆತ್ತ ಸ್ಥಳೀಯ ಆಡಳಿತ ಮೋಹನ್ ಬಿ.ಕೆರೆ ಸ್ಟುಡಿಯೋಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೀಜ್ ಮಾಡಿದೆ. ಈ ಸ್ಟುಡಿಯೋ ಸಿನಿಮಾ ಶೂಟಿಂಗ್ ಮಾಡಲು ಯೋಗ್ಯ ಜಾಗವಾಗಿದೆಯೇ, ಫೈರ್ ಎಕ್ಸಿಟ್ ಸೇರಿ ಮೂಲಭೂತ ಸೌಕರ್ಯಗಳು, ಅಧಿಕೃತ ಪರವಾನಗಿ ಹೀಗೆ ಚಲನಚಿತ್ರ ಚಿತ್ರೀಕರಣದ ಸಮಯದಲ್ಲಿ ಇರಬೇಕಾದ ಎಲ್ಲಾ ಸೌಕರ್ಯಗಳು ಮತ್ತು ದಾಖಲೆಗಳನ್ನ ಕೂಡಲೇ ನೀಡುವಂತೆ ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸಯ್ಯ ಸ್ಟುಡಿಯೋ ಮಾಲೀಕರಿಗೆ ನೋಟಿಸ್ ಜಾರಿ, ಸ್ಟುಡಿಯೋವನ್ನು ಸೀಜ್ ಮಾಡಿದ್ದಾರೆ. ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನೀಡುವಂತೆ ಹೇಳಿ ನೋಟಿಸ್ ಜಾರಿ ಮಾಡಿದ್ದೇವೆ ಸೂಕ್ತ ಸಮಯದಲ್ಲಿ ನೋಟಿಸ್ ಗೆ ಉತ್ತರ ಕೊಡದೆ ಇದ್ದರೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವುದಾಗಿ ತಹಶೀಲ್ದಾರ್ ಶ್ರೀನಿವಾಸಯ್ಯ ಹೇಳಿದ್ದಾರೆ. ಇದನ್ನೂ ಓದಿ:  ‘ಭಜರಂಗಿ-2’ ಚಿತ್ರತಂಡಕ್ಕೆ ಮತ್ತೊಂದು ಶಾಕ್- 60 ಮಂದಿ ಕಲಾವಿದರಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ

    ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತರಾಜು ಮಾತನಾಡಿ, ನಾವು ಈ ಜಮೀನಿನಲ್ಲಿ ವ್ಯವಹಾರಿಕ ಕೆಲಸ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಪ್ರಶ್ನೆ ಮಾಡಿದ್ದೇವು. ಆಗಲೂ ಯಾವುದೇ ಸೂಕ್ತ ಉತ್ತರ ನೀಡಿರಲಿಲ್ಲ. ಈಗಲಾದರೂ ಸ್ಥಳೀಯ ಆಡಳಿತ ಎಚ್ಚೆತ್ತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಆಗ್ರಹಿಸಿದರು.

  • ಹ್ಯಾಟ್ರಿಕ್ ಹೀರೋ ಶಿವಣ್ಣನ ಅಭಿಮಾನಿಗಳಿಗೊಂದು ನಿರಾಸೆಯ ಸುದ್ದಿ!

    ಹ್ಯಾಟ್ರಿಕ್ ಹೀರೋ ಶಿವಣ್ಣನ ಅಭಿಮಾನಿಗಳಿಗೊಂದು ನಿರಾಸೆಯ ಸುದ್ದಿ!

    ಯಾರೇ ಹೀರೋಗಳ ಹುಟ್ಟುಹಬ್ಬಕ್ಕಾದರೂ ಅಭಿಮಾನಿಗಳು ಸದಾ ಕಾದು ಕೂತಿರುತ್ತಾರೆ. ಅದು ತಮ್ಮ ನೆಚ್ಚಿನ ನಟರನ್ನು ಭೇಟಿಯಾಗಲು ಇರೋ ಸದಾವಕಾಶ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳೂ ಕೂಡಾ ಇದಕ್ಕೆ ಹೊರತಾಗಿಲ್ಲ. ಜುಲೈ 12ರಂದು ಶಿವಣ್ಣನ ಬರ್ತ್ ಡೇ ಇರೋದರಿಂದ ಅಭಿಮಾನಿಗಳೆಲ್ಲ ಪ್ಲ್ಯಾನಿಂಗ್ ಶುರು ಹಚ್ಚಿಕೊಂಡಿದ್ದಾರೆ. ಆದರೆ ಆ ಉತ್ಸಾಹದಿಂದಿರೋ ಅಭಿಮಾನಿಗಳಿಗೆಲ್ಲ ನಿರಾಸೆಯಾಗುವಂಥಾ ಸುದ್ದಿಯೀಗ ಹೊರಬಿದ್ದಿದೆ.

    ಈ ಬಾರಿ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಹ ವಾತಾವರಣವಿಲ್ಲ. ಅದಕ್ಕೆ ಕಾರಣವಾಗಿರೋದು ಅವರನ್ನು ಬಹು ಕಾಲದಿಂದ ಬಾಧಿಸುತ್ತಿರುವ ಭುಜದ ನೋವು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಶಿವಣ್ಣ ಈ ಚಿಕಿತ್ಸೆ ಪಡೆಯುತ್ತಿರೋದು ಲಂಡನ್‍ನಲ್ಲಿ. ಈ ಸಂಬಂಧವಾಗಿ ಅವರು ಜುಲೈ 6ರಂದು ಲಂಡನ್‍ಗೆ ತೆರಳಲಿದ್ದಾರೆ. ಆ ಬಳಿಕ ಇಪ್ಪತ್ತು ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತದೆ.

    ಈ ಕಾರಣದಿಂದ ಈ ಬಾರಿ ಶಿವಣ್ಣ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇದೇ ತಿಂಗಳ ಇಪ್ಪತ್ತನೇ ತಾರೀಕಿನಿಂದ ಭಜರಂಗಿ 2 ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ. ಈ ಹಿಂದೆ ಭಜರಂಗಿ ಚಿತ್ರದ ಮೂಲಕ ನಿರ್ದೇಶಕ ಎ.ಹರ್ಷ ಮತ್ತು ಶಿವಣ್ಣನ ಕಾಂಬಿನೇಷನ್ ಮೋಡಿ ಮಾಡಿತ್ತು. ಇದೀಗ ಭಜರಂಗಿ 2 ಮೂಲಕ ಈ ಜೋಡಿ ಮತ್ತೆ ಒಂದಾಗಿದೆ. ಈ ಚಿತ್ರದಲ್ಲಿ ಟಗರು ನಂತರ ಜಾಕಿ ಭಾವನಾ ಮತ್ತೊಮ್ಮೆ ಶಿವಣ್ಣನಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

    ಈ ತಿಂಗಳ ಇಪ್ಪತ್ತರಿಂದ ಒಂದಷ್ಟು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿರೋ ಶಿವರಾಜ್ ಕುಮಾರ್ ಅವರು ಆ ನಂತರ ಚಿಕಿತ್ಸೆಗೆ ತೆರಳಲಿದ್ದಾರಂತೆ. ಇದು ನಿಜಕ್ಕೂ ಶಿವಣ್ಣ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ. ಆದರೂ ಅದಕ್ಕೆ ಆರೋಗ್ಯ ಸಂಬಂಧಿ ಸಮಸ್ಯೆ ಕಾರಣವಾಗಿರೋದರಿಂದ ಅಭಿಮಾನಿ ಬಳಗ ಬೇಸರಿಸಿಕೊಳ್ಳಲಾರದು.