Tag: Bhairava Geetha

  • ಈ ವಾರ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ ಭೈರವ ಡಾಲಿ!

    ಈ ವಾರ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ ಭೈರವ ಡಾಲಿ!

    ಬೆಂಗಳೂರು: ಟಗರು ಚಿತ್ರದಲ್ಲಿ ಡಾಲಿ ಪಾತ್ರದ ಮೂಲಕ ವಿಜೃಂಭಿಸಿದ್ದರಲ್ಲಾ ಧನಂಜಯ್? ಅದಾಗಿ ವಾರದೊಪ್ಪತ್ತಿನಲ್ಲಿಯೇ ರಾಮ್ ಗೋಪಾಲ್ ವರ್ಮಾ ಅವರನ್ನು ಹೈಜಾಕ್ ಮಾಡಿದ್ದರು. ತಾವು ನಿರ್ಮಾಣ ಮಾಡಲಿರೋ ಚಿತ್ರಕ್ಕೆ ಏಕಾಏಕಿ ಧನಂಜಯ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಚಿತ್ರೀಕರಣಕ್ಕೂ ಚಾಲನೆ ನೀಡಿ ಬಿಟ್ಟಿದ್ದರು. ಹಾಗೆ ಒಂದೇ ಉಸಿರಿಗೆ ತಯಾರಾಗಿ ನಿಂತಿರೋ ಚಿತ್ರ ಭೈರವ ಗೀತಾ!

    ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿ, ದಕ್ಷಿಣ ಭಾರತೀಯ ಚಿತ್ರರಂಗದ ಗಮನ ಸೆಳೆದುಕೊಂಡಿರೋ ಈ ಚಿತ್ರ ಇದೇ ವಾರ ಅದ್ಧೂರಿಯಾಗಿ ತೆರೆ ಕಾಣಲಿದೆ!

    ರಾಮ್ ಗೋಪಾಲ್ ವರ್ಮಾ ಯಾವುದನ್ನೂ, ಯಾರನ್ನೂ ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಅವರು ಎಂತೆಂಥಾ ನಿರ್ದೇಶಕರನ್ನು, ನಟ ನಟಿಯರನ್ನೇ ಗೇಲಿ ಮಾಡಿ ನಕ್ಕು ವಿವಾದಕ್ಕೀಡಾದ ಅದೆಷ್ಟೋ ಉದಾಹರಣೆಗಳಿದ್ದಾವೆ. ಅಂಥಾದ್ದರಲ್ಲಿ ಟಗರು ಚಿತ್ರದಲ್ಲಿನ ಡಾಲಿ ಪಾತ್ರವನ್ನು ಅವರು ಒಪ್ಪಿಕೊಂಡಿದ್ದೇ ದೊಡ್ಡ ವಿಚಾರ.

    ಹಾಗೆ ಡಾಲಿಯನ್ನು ಮೆಚ್ಚಿ ಕೊಂಡಾಡಿದ ವರ್ಮಾ ಭೈರವ ಗೀತಾ ಚಿತ್ರದ ರಗಡ್ ಪ್ರೇಮ್ ಕಹಾನಿಯ ಪಾತ್ರವಾಗಿಸಿದ್ದಾರೆ. ಉಳ್ಳವರ ವಿರುದ್ಧ ಪ್ರೀತಿಯನ್ನಷ್ಟೇ ಬೆನ್ನಿಗಿಟ್ಟುಕೊಂಡು ತಿರುಗಿ ಬೀಳೋ ಪ್ರೇಮಿಯ ಕಥೆಯಾಧಾರಿತವಾದ ಈ ಚಿತ್ರದಲ್ಲಿ ಭರಪೂರ ರೊಮ್ಯಾನ್ಸೂ ಇದೆ ಎಂಬುದು ಪೋಸ್ಟರುಗಳ ಮೂಲಕವೇ ಸಾಬೀತಾಗಿದೆ. ಈ ಮೂಲಕವೇ ಭೈರವ ಗೀತಾ ಬಗ್ಗೆ ಎಲ್ಲೆಡೆ ಕುತೂಹಲ ನಿಗಿನಿಗಿಸೋ ಕೆಂಡದಂತಾಗಿದೆ. ಅಸಲಿಗೆ ಭೈರವನ ಖದರ್ ಎಂಥಾದ್ದೆಂಬುದು ಈ ವಾರ ಜಾಹೀರಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಾದಾಮಿಯಲ್ಲಿ ಭೈರವಗೀತಾ!

    ಬಾದಾಮಿಯಲ್ಲಿ ಭೈರವಗೀತಾ!

    ಬೆಂಗಳೂರು: ಡಾಲಿ ಧನಂಜಯ್ ನಟನೆಯ ಭೈರವ ಗೀತಾ ಚಿತ್ರ ಅಂತಿಮ ಹಂತ ತಲುಪಿಕೊಂಡಿದೆ. ಟ್ರೈಲರ್ ಮತ್ತು ಪೋಸ್ಟರ್ ಮೂಲಕವೇ ಎಲ್ಲರನ್ನೂ ಆವರಿಸಿಕೊಂಡಿರೋ ಈ ಚಿತ್ರದ ಚಿತ್ರೀಕರಣವೀಗ ಮತ್ತೆ ಕರ್ನಾಟಕಕ್ಕೆ ಶಿಫ್ಟ್ ಆಗಿದೆ. ಇದೀಗ ಚಿತ್ರತಂಡ ಬಾದಾಮಿಯಲ್ಲಿ ಬೀಡು ಬಿಟ್ಟಿದೆ.

    ಉತ್ತರಕರ್ನಾಟಕದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಬಾದಾಮಿಯಲ್ಲಿ ಇದೀಗ ಭೈರವ ಗೀತಾ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಲ್ಲಿನ ದೇವಸ್ಥಾನದ ಆವರಣದಲ್ಲಿ ವಿಶೇಷವಾದ ಹಾಡೊಂದರ ಚಿತ್ರೀಕರಣವೀಗ ನಡೆಯುತ್ತಿದೆ. ಇದರ ಜೊತೆಗೆ ಆಕ್ಷನ್ ಸೀನೊಂದರ ಚಿತ್ರೀಕರಣವನ್ನು ಬಾದಾಮಿ ಸುತ್ತಮುತ್ತಲ ಪ್ರದೇಶದಲ್ಲಿಯೇ ನಡೆಸಲು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ.

    ಈ ಆಕ್ಷನ್ ದೃಶ್ಯವನ್ನು ಸೆರೆ ಹಿಡಿದರೆ ಭೈರವ ಗೀತಾ ಚಿತ್ರದ ಚಿತ್ರೀಕರಣ ಸಮಾಪ್ತಿಗೊಳ್ಳಲಿದೆ. ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿಯೇ ಚಿತ್ರೀಕರಣಗೊಳ್ಳುತ್ತಿದೆ. ಇದು ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಡಾಲಿಯ ಭೈರವಾವತಾರದ ಬಗ್ಗೆ ವರ್ಮಾ ಹೇಳಿದ್ದೇನು?

    ಡಾಲಿಯ ಭೈರವಾವತಾರದ ಬಗ್ಗೆ ವರ್ಮಾ ಹೇಳಿದ್ದೇನು?

    ಟಗರು ಚಿತ್ರದ ಡಾಲಿ ಪಾತ್ರದಲ್ಲಿ ಧನಂಜಯ ಮಿಂಚುತ್ತಲೇ ಮೀನ ಮೇಷ ಎಣಿಸದೆ ಅವರೊಂದಿಗೆ ಚಿತ್ರ ಶುರು ಮಾಡಿದ್ದವರು ರಾಂ ಗೋಪಾಲ್ ವರ್ಮಾ. ಅವರು ನಿರ್ಮಾಣ ಮಾಡಿರೋ ಭೈರವ ಗೀತಾ ಎಂಬ ಚಿತ್ರದಲ್ಲಿ ಧನಂಜಯ ನಾಯಕನಾಗಿ ನಟಿಸುತ್ತಿರೋದು ಗೊತ್ತೇ ಇದೆ. ಇದೀಗ ಅದರ ಫಸ್ಟ್ ಲುಕ್ ಆರ್‌ಜಿವಿ ಕೈ ಸೇರಿದೆ. ಅದನ್ನು ನೋಡಿ ಅವರ ಥ್ರಿಲ್ ಆಗಿದ್ದಾರೆ.

     

    ಭೈರವ ಗೀತಾ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ವರ್ಮಾ ಗರಡಿಯಲ್ಲಿ ಪಳಗಿರುವ ಸಿದ್ದಾರ್ಥ. ಅವರ ನಿರ್ದೇಶನದಲ್ಲಿ ಧನಂಜಯ್ ಅಬ್ಬರದ ನಟನೆ ನೀಡಿರೋ ಈ ಚಿತ್ರದ ಫಸ್ಟ್ ಲುಕ್ಕನ್ನು ವರ್ಮಾ ಮೆಚ್ಚಿ ಕೊಂಡಾಡಿದ್ದಾರೆ. ಡಾಲಿ ಭೈರವನಾಗಿ ನೀಡಿರೋ ನಟನೆಯನ್ನು ಮೆಚ್ಚಿಕೊಂಡಿರೋ ವರ್ಮಾ, ಧನಂಜಯನ ಪಾಲಿಗೆ ಈ ಚಿತ್ರ ನಿರ್ದಿಷ್ಟವಾದೊಂದು ಮಹಾ ತಿರುವು ನೀಡುವ ಭವಿಷ್ಯವನ್ನೂ ಹೇಳಿದ್ದಾರೆ.

    ಇನ್ನುಳಿದಂತೆ ವರ್ಮಾ ಬಹುವಾಗಿ ಹೊಗಳಿರೋದು ನಿರ್ದೇಶಕ ಸಿದ್ದಾರ್ಥ ಅವರ ಕಸುಬುದಾರಿಕೆಯನ್ನು. ಆರ್‌ಜಿವಿ ಬಹಳಷ್ಟು ನಂಬಿಕೆಯಿಟ್ಟು ಭೈರವ ಗೀತಾ ಚಿತ್ರವನ್ನು ಸಿದ್ದಾರ್ಥ ಕೈಗೊಪ್ಪಿಸಿದ್ದರು. ಆದರೆ ಫಸ್ಟ್ ಲುಕ್ಕು ನೋಡಿದ ವರ್ಮಾ ತಮ್ಮ ಶಿಷ್ಯ ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ರೂಪಿಸಿದ್ದಾನೆಂದು ಬೆನ್ನು ತಟ್ಟಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಸಿದ್ದಾರ್ಥನನ್ನು ನೋಡುತ್ತಿದ್ದೇನೆ. ಆತ ಪ್ರತಿಭಾವಂತ, ಶ್ರಮ ಜೀವಿ. ಆತನ ಟ್ಯಾಲೆಂಟಿನ ಮೇಲೆ ನಂಬಿಕೆ ಇಟ್ಟು ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊರಿಸಿದ್ದೆ. ಅದನ್ನಾತ ಸಮರ್ಥವಾಗಿ ನಿರ್ವಹಿಸಿದ್ದಾನೆಂದೂ ವರ್ಮಾ ಹೇಳಿದ್ದಾರೆ.

    ಈ ಚಿತ್ರ ಆರಂಭದಲ್ಲಿಯೇ ಎಬ್ಬಿಸಿರೋ ಹವಾ ನೋಡಿದರೆ ಖಂಡಿತವಾಗಿಯೂ ಈ ಚಿತ್ರ ಟಗರು ಚಿತ್ರವನ್ನೇ ಸರಿಗಟ್ಟುವಂಥಾ ದಾಖಲೆ ನಿರ್ಮಿಸುವ ಲಕ್ಷಣಗಳೇ ಕಾಣಿಸುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv