Tag: bhairathi rangal

  • Exclusive:ಶಿವಣ್ಣ ‘ಭೈರತಿ ರಣಗಲ್’ ಸಿನಿಮಾದಲ್ಲಿ ಛಾಯಾ ಸಿಂಗ್ ನಟಿಸುತ್ತಾರಾ.? ನಟಿ ಸ್ಪಷ್ಟನೆ

    Exclusive:ಶಿವಣ್ಣ ‘ಭೈರತಿ ರಣಗಲ್’ ಸಿನಿಮಾದಲ್ಲಿ ಛಾಯಾ ಸಿಂಗ್ ನಟಿಸುತ್ತಾರಾ.? ನಟಿ ಸ್ಪಷ್ಟನೆ

    ಸ್ಯಾಂಡಲ್ವುಡ್ ಚಿಟ್ಟೆ ಛಾಯಾ ಸಿಂಗ್ (Chaya Singh) ಅವರು ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಪ್ರಸ್ತುತ ‘ಅಮೃತಧಾರೆ’ (Amruthadaare) ಸೀರಿಯಲ್ ನಾಯಕಿಯಾಗಿ ಕಿರುತೆರೆಯಲ್ಲಿ ಹೊಸ ಪರ್ವ ಆರಂಭಿಸಿದ್ದಾರೆ. ಈ ನಡುವೆ ‘ಭೈರತಿ ರಣಗಲ್’ (Bhairathi Rangal) ಚಿತ್ರದಲ್ಲಿ ಛಾಯಾ ಸಿಂಗ್ ನಟಿಸುತ್ತಾರಾ.? ಶಿವಣ್ಣ ಜೊತೆ ಮತ್ತೆ ಕಾಣಿಸಿಕೊಳ್ತಾರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ನಟಿ ಛಾಯಾ ಸಿಂಗ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

    2017ರಲ್ಲಿ ‘ಮಫ್ತಿ’ (Mufti) ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನರ್ತನ್ ನಿರ್ದೇಶನದಲ್ಲಿ ಶಿವಣ್ಣ ಅಬ್ಬರಿಸಿದ್ದರು. ಇದೇ ಸಿನಿಮಾದಲ್ಲಿ ಶಿವಣ್ಣಗೆ ತಂಗಿಯಾಗಿ ಛಾಯಾ ಜೀವತುಂಬಿದ್ದರು. ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಿದ್ದ ನಟಿ ಈ ಹಿಂದೆ ರೌಡಿ ಅಳಿಯ ಚಿತ್ರದಲ್ಲಿ ಶಿವಣ್ಣ ಜೊತೆ ನಟಿಸಿದ್ದರು. ಇದಾದ ನಂತರ 10 ವರ್ಷ ಕನ್ನಡ ಸಿನಿಮಾಗಳಿಂದ ದೂರವಿದ್ದರು. ಇದನ್ನೂ ಓದಿ:ಸುದೀಪ್ ನಟನೆಯ 46ನೇ ಸಿನಿಮಾ: ಇನ್ನಷ್ಟು, ಮತ್ತಷ್ಟು ಸುದ್ದಿ

    ಬಳಿಕ ಶಿವಣ್ಣ ಅವರ ಒತ್ತಾಯಕ್ಕೆ ಮಣಿದು 10 ವರ್ಷಗಳ ನಂತರ ಮಫ್ತಿ ಚಿತ್ರದಲ್ಲಿ ಶಿವರಾಜ್‌ಕುಮಾರ್ ಛಾಯಾ ಸಿಂಗ್ ಕೂಡ ಪ್ರಮುಖ ಪಾತ್ರ ಮಾಡ್ತಾರೆ. ಇದೀಗ ‘ಮಫ್ತಿ’ ಪ್ರೀಕ್ವೆಲ್ ಆಗಿರೋ ‘ಭೈರತಿ ರಣಗಲ್’ (Bharathi Rangal) ಸಿನಿಮಾಗೆ ಈಗ ಚಾಲನೆ ಸಿಕ್ಕಿದೆ. ಈ ಭಾಗದಲ್ಲೂ ನಟಿ ಛಾಯಾ ಸಿಂಗ್ ಆಕ್ಟ್ ಮಾಡ್ತಿದ್ದಾರೆ. ಈ ಕುರಿತು ನಟಿ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ. ಶಿವಣ್ಣ ಜೊತೆ ಮತ್ತೆ ಸ್ಕ್ರೀನ್ ಶೇರ್ ಮಾಡೋದಾಗಿ ಖುಷಿಯಿಂದ ಹೇಳಿಕೊಂಡಿದ್ದಾರೆ.

    ‘ಭೈರತಿ ರಣಗಲ್’ ಚಿತ್ರದಲ್ಲಿ ಶಿವಣ್ಣಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ತಿದ್ದಾರೆ. ಮುಂದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ. ಛಾಯಾ ಸಿಂಗ್ ಅವರ ಭಾಗದ ಚಿತ್ರೀಕರಣ ಮುಂದಿನ ತಿಂಗಳು ಜುಲೈನಿಂದ ಶುರುವಾಗಲಿದೆ ಎಂದು ತಿಳಿಸಿದ್ದಾರೆ.‌

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್

  • ಶಿವಣ್ಣಗೆ ನಾಯಕಿಯಾಗುವ ಲಕ್ಕಿ ಚಾನ್ಸ್ ಗಿಟ್ಟಿಸಿಕೊಂಡ ರುಕ್ಮಿಣಿ ವಸಂತ್

    ಶಿವಣ್ಣಗೆ ನಾಯಕಿಯಾಗುವ ಲಕ್ಕಿ ಚಾನ್ಸ್ ಗಿಟ್ಟಿಸಿಕೊಂಡ ರುಕ್ಮಿಣಿ ವಸಂತ್

    ಸ್ಯಾಂಡಲ್‌ವುಡ್‌ಗೆ (Sandalwood) ಭರವಸೆಯ ನಟಿ ಸಿಕ್ಕಿದ್ದಾರೆ. ರಿಲೀಸ್ ಆಗಿದ್ದು ಒಂದೇ ಸಿನಿಮಾ ಆಗಿದ್ರೂ ಕೂಡ ಸಾಲು ಸಾಲು ಸಿನಿಮಾ ಅವಕಾಶ ಬಾಚಿಕೊಳ್ತಿದ್ದಾರೆ. ಅವರೇ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ ರುಕ್ಮಿಣಿ ವಸಂತ್. ಸದ್ಯ ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್‌’ಗೆ (Bhairathi Rangal) ನಾಯಕಿಯಾಗುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

    5 ವರ್ಷಗಳ ಹಿಂದೆ ಬಂದಿದ್ದ ‘ಮಫ್ತಿ’ (Mufti) ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಸಮಯದಲ್ಲೇ ಶಿವಣ್ಣ ಸೀಕ್ವೆಲ್ ಮಾಡುವ ಬಗ್ಗೆ ಮಾತನಾಡಿದ್ದರು. ನಂತರ ಅದು ಸೀಕ್ವೆಲ್ ಅಲ್ಲ ಪ್ರೀಕ್ವೆಲ್ ಅನ್ನೋದ ಖಚಿತವಾಗಿತ್ತು. ಚಿತ್ರದಲ್ಲಿ ಸೆಂಚುರಿ ಸ್ಟಾರ್ ಮಾಫಿಯಾ ಡಾನ್ ‘ಭೈರತಿ ರಣಗಲ್’ ಪಾತ್ರದಲ್ಲಿ ಅಬ್ಬರಿಸಿದ್ದರು. ರಾಕ್ಷಸನಂತಹ ಪಾತ್ರದಲ್ಲಿ ಶಿವಣ್ಣ ಹೆಚ್ಚು ಡೈಲಾಗ್‌ಗಳಿಲ್ಲದೇ ಕಣ್ಣಿನಲ್ಲೇ ನಟಿಸಿ ಕಮಾಲ್ ಮಾಡಿದ್ದರು. ಆ ಪಾತ್ರ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಇದೀಗ ‘ಭೈರತಿ ರಣಗಲ್’ ಯಾರು? ಆತನ ಹಿನ್ನೆಲೆ ಏನು ಎನ್ನುವುದನ್ನು ತೆರೆ ತರಲಾಗುತ್ತಿದೆ. ಇದೀಗ ಶಿವಣ್ಣಗೆ ಜೋಡಿಯಾಗುವ ನಾಯಕಿಯ ಅನಾವರಣವಾಗಿದೆ.

    ಗೀತಾ ಶಿವರಾಜ್‌ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಭೈರತಿ ರಣಗಲ್’ ಚಿತ್ರಕ್ಕೆ ಯುವನಟಿ ರುಕ್ಮಿಣಿ ವಸಂತ್ ನಾಯಕಿ ಎಂದು ಚಿತ್ರತಂಡ ಅನೌನ್ಸ್ ಮಾಡಿದ್ದಾರೆ. ಇತ್ತೀಚಿಗೆ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಾಯಕಿ ಬಗ್ಗೆ ಕೇಳಲಾದ ಪ್ರಶ್ನೆಗೆ ನಿರ್ದೇಶಕ ನರ್ತನ್ ಪ್ರತಿಕ್ರಿಯೆ ನೀಡಿದ್ದರು. ನಾಯಕಿಯ ಪಾತ್ರಕ್ಕೆ ಬಹಳ ಪ್ರಾಮುಖ್ಯತೆಯಿದೆ. ಹಾಗಾಗಿ ಆ ಪಾತ್ರಕ್ಕೆ ಯಾರು ಸೂಕ್ತ ಎಂದು ಎನಿಸುತ್ತಾರೋ ಅವರನ್ನೇ ಆಯ್ಕೆ ಮಾಡುತ್ತೀವಿ ಎಂದಿದ್ದರು. ಈಗ ನಟಿ ರುಕ್ಮಿಣಿ ಅವರ ಆಯ್ಕೆಯಾಗಿದೆ. ಇದನ್ನೂ ಓದಿ:ಆ ಸಂಬಂಧ ಅರ್ಧಕ್ಕೆ ನಿಂತು ಹೋಯಿತು, ಆದ್ರೆ ನನಗೆ ಮದುವೆ ಬಗ್ಗೆ ನಂಬಿಕೆಯಿದೆ- ನಟಿ ವೈಷ್ಣವಿ

    ಮೊದಲ ಬಾರಿಗೆ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ತೆರೆಹಂಚಿಕೊಳ್ಳಲು ನಟಿ ರುಕ್ಮಿಣಿ ರೆಡಿಯಾಗಿದ್ದಾರೆ. ಎಂದೂ ಮಾಡಿರದ ಪಾತ್ರದಲ್ಲಿ ನಟಿ ಜೀವತುಂಬಲಿದ್ದಾರೆ. ಜೂನ್ 10ರಿಂದ ಶೂಟಿಂಗ್ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ. ಸದ್ಯ ರುಕ್ಮಿಣಿ, ವಿಜಯ್ ಸೇತುಪತಿ ಜೊತೆ ಮಲೇಷಿಯಾದಲ್ಲಿ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

    ‘ಘೋಸ್ಟ್’ ಶ್ರೀನಿ ನಿರ್ದೇಶನದ ‘ಬೀರ್‌ಬಲ್’ ಚಿತ್ರಕ್ಕೆ ನಾಯಕಿ ನಟಿಯಾಗಿ ಬೆಂಗಳೂರು ಬ್ಯೂಟಿ ರುಕ್ಮಿಣಿ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲೇ ನಟಿ ಗಮನ ಸೆಳೆದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಬಾನದಾರಿಯಲಿ’, ರಕ್ಷಿತ್ ಶೆಟ್ಟಿ ಜೊತೆ ‘ಸಪ್ತಸಾಗರದಾಚೆ ಎಲ್ಲೋ’, ಶ್ರೀಮುರಳಿ ಜೊತೆ ‘ಬಘೀರ’ ಸಿನಿಮಾ ತೆರೆಗೆ ಬರೋದ್ದಕ್ಕೆ ರೆಡಿಯಾಗಿದೆ. ತಮಿಳಿನ ನಟ ವಿಜಯ್ ಸೇತುಪತಿ (Vijay Seethupathi) ಜೊತೆ ರುಕ್ಮಿಣಿ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಶಿವಣ್ಣ ಜೊತೆ ನಟಿಸುವ ಬಂಪರ್ ಆಫರ್ ಕನ್ನಡದ ಯುವನಟಿಗೆ ಸಿಕ್ಕಿದೆ.

  • ‘ಭೈರತಿ ರಣಗಲ್’ಗೆ ಡೇಟು ರೇಟಿನ ನಾಯಕಿ ಬೇಕಂತೆ

    ‘ಭೈರತಿ ರಣಗಲ್’ಗೆ ಡೇಟು ರೇಟಿನ ನಾಯಕಿ ಬೇಕಂತೆ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಹವಾ ಕ್ರಿಯೇಟ್ ಮಾಡಿದ ಚಿತ್ರ ಅಂದರೆ ‘ಮಫ್ತಿ’ (Mufti) ಸಿನಿಮಾ. ಶಿವಣ್ಣ- ನರ್ತನ್ (Narthan) ಕಾಂಬೋದಲ್ಲಿ ಈ ಚಿತ್ರ ಕಮಾಲ್ ಮಾಡಿತ್ತು. ಇದೀಗ ಇದೇ ಸಿನಿಮಾದ ಪ್ರೀಕ್ವೆಲ್ ಜೊತೆ ಮಫ್ತಿ ಜೋಡಿ ‘ಭೈರತಿ ರಣಗಲ್’ ಸಿನಿಮಾ ಕಥೆ ಹೇಳೋದಕ್ಕೆ ರೆಡಿಯಾಗಿದ್ದಾರೆ. ಹಾಗಾದರೆ ಶಿವಣ್ಣಗೆ ಜೋಡಿಯಾಗೋ ಆ ನಾಯಕಿ ಯಾರು.? ಈ ಬಗ್ಗೆ ಸ್ವತಃ ಶಿವಣ್ಣ- ನಿರ್ದೇಶಕ ನರ್ತನ್ ಸ್ಪಷ್ಟನೆ ನೀಡಿದ್ದಾರೆ.

    ‘ಮಫ್ತಿ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ (Shivarajkumar) ಅಬ್ಬರಿಸಿದ್ದರು. ‘ಮಫ್ತಿ’ ಪಾರ್ಟ್ 2 ಆಗಿರೋ ‘ಭೈರತಿ ರಣಗಲ್’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಸದ್ಯ ‘ಭೈರತಿ ರಣಗಲ್’ (Bhairathi Rangal) ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಬಂಡೆಮಹಾಕಾಳಿ ದೇವಸ್ಥಾನದಲ್ಲಿ (Bande Mahakali) ಶಿವಣ್ಣ ಸಿನಿಮಾದ ಅದ್ದೂರಿ ಮುಹೂರ್ತ ಕೂಡ ಮಾಡಲಾಯ್ತು. ಶಿವಣ್ಣಗೆ ನಾಯಕಿಯಾಗೋ (Heroine) ಆ ನಟಿ ಯಾರು.? ಕನ್ನಡದ ಯುವನಟಿಗೆ ಚಾನ್ಸ್ ಸಿಗುತ್ತಾ.? ಅಥವಾ ಪರಭಾಷಾ ನಟಿ ಶಿವರಾಜ್‌ಕುಮಾರ್ ಜೋಡಿಯಾಗುತ್ತಾರಾ? ಈ ವಿಚಾರಕ್ಕೆ ಇದೀಗ ಉತ್ತರ ಸಿಕ್ಕಿದೆ.

    ನಮಗೆ ಶಿವಣ್ಣ ಅವರ ಡೇಟ್ ತುಂಬಾ ಮುಖ್ಯ. ಆ ಡೇಟು ಪ್ಲಸ್ ರೇಟು ಮ್ಯಾಚ್ ಆದರೆ ಯಾರಾದರೂ ಓಕೆ ಅಂತಾ ನಗುತ್ತಾ ನಿರ್ದೇಶಕ ನರ್ತನ್ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಶಿವಣ್ಣ ಮಾತನಾಡಿ, ನಾಯಕಿಯ ಪಾತ್ರಕ್ಕೆ ಯಾರು ಸೂಟ್ ಆಗುತ್ತಾರೋ ಅವರೇ ಹಾಕಿಕೊಳ್ತೀವಿ. ಅದಕ್ಕೆ ಕನ್ನಡ ನಟಿ ಪರಭಾಷಾ ನಟಿ ಎಂಬುದು ಇಲ್ಲ. ಆ ಪಾತ್ರಕ್ಕೆ ಹೊಂದುವಂತಹ ನಟಿಯನ್ನ ಆಯ್ಕೆ ಮಾಡ್ತೀವಿ ಅಂತಾ ತಿಳಿಸಿದ್ದಾರೆ. 100% ಕನ್ನಡದ ನಟಿಯನ್ನ ಹಾಕಬಾರದು ಅಂತಾ ಏನಿಲ್ಲ. ನಮ್ಮ ಭಾಷೆಯ ನಟಿ ಸೂಟ್ ಆಗುತ್ತಾರೆ ಅಂದರೆ ಚಿತ್ರಕ್ಕೆ ಹಾಕಿಕೊಳ್ಳಲು ಯಾವುದೇ ಬೇಸರವಿಲ್ಲ. ಆದರೆ ನಾಯಕಿಯ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಅದೊಂದು ಪ್ರಬುದ್ಧ ಪಾತ್ರ ಎಂದು ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್

    ‘ಭೈರತಿ ರಣಗಲ್’ ಸಿನಿಮಾ ಜೂನ್ 10ರಿಂದ ಶೂಟಿಂಗ್ ಶುರುವಾಗಲಿದೆ. ಬಳ್ಳಾರಿ ಸುತ್ತಮುತ್ತ ಶೂಟಿಂಗ್ ಮಾಡಲಿದ್ದಾರೆ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ‘ಭೈರತಿ ರಣಗಲ್’ ಚಿತ್ರ ನಿರ್ಮಾಣವಾಗಲಿದೆ.

  • ಭೈರತಿ ರಣಗಲ್‌ಗೆ `ಕೆಜಿಎಫ್ 2′ ರವಿ ಬಸ್ರೂರು ಸಂಗೀತ

    ಭೈರತಿ ರಣಗಲ್‌ಗೆ `ಕೆಜಿಎಫ್ 2′ ರವಿ ಬಸ್ರೂರು ಸಂಗೀತ

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಅವರು ತಮ್ಮ ಸಿನಿಮಾಗಳ ಮೂಲಕ ಹಿಟ್ ಮೇಲೆ ಹಿಟ್ ಕೊಡುತ್ತಿದ್ದಾರೆ. ಸಾಲು ಸಾಲು ಚಿತ್ರಗಳ ಮೂಲಕ ಶಿವಣ್ಣ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಶಿವಣ್ಣ `ಭೈರತಿ ರಣಗಲ್’ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದರು. ಈ ಬೆನ್ನಲ್ಲೇ ಸಿನಿಮಾ ಬಗ್ಗೆ ಚಿತ್ರತಂಡ ಮತ್ತೊಂದು ಅಪ್‌ಡೇಟ್ ಹಂಚಿಕೊಂಡಿದೆ. ಇದನ್ನೂ ಓದಿ: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

     

    View this post on Instagram

     

    A post shared by Geetha Pictures (@geethapictures)

    2017ರಲ್ಲಿ ‘ಮಫ್ತಿ’ (Mufti)ಸಿನಿಮಾದಲ್ಲಿ ಶಿವಣ್ಣನ ನಿರ್ವಹಿಸಿದ್ದ `ಭೈರತಿ ರಣಗಲ್’ ಪಾತ್ರ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾಕ್ಕೆ ಗೆಲ್ಲುವ ಶಕ್ತಿ ತಂದುಕೊಟ್ಟಿದ್ದೇ ಶಿವಣ್ಣನ ಪಾತ್ರ. ಈಗ ಅದೇ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ತೆರೆಗೆ ಬರುತ್ತಿದ್ದು, ಪಾತ್ರದ ಹೆಸರಾದ `ಭೈರತಿ ರಣಗಲ್’ ಅನ್ನು ಸಿನಿಮಾಕ್ಕೂ ಇಡಲಾಗಿದೆ.

    `ಮಫ್ತಿ’ ಪ್ರೀಕ್ವೆಲ್ ಭೈರತಿ ರಣಗಲ್‌ಗೆ ನರ್ತನ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ `ಕೆಜಿಎಫ್ 2′ (KGF 2) ಖ್ಯಾತಿಯ ರವಿ ಬಸ್ರೂರು (Ravi Basrur) ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಚಿತ್ರತಂಡ ಘೋಷಿಸಿದೆ. ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ರವಿ ಬಸ್ರೂರು ಅವರನ್ನು ತಂಡಕ್ಕೆ ಸ್ವಾಗತಿಸಿದೆ. ಈ ಹಿಂದೆ ಇದೇ ತಂಡದ ಜೊತೆ ಕೈ ಜೋಡಿಸಿ `ಮಫ್ತಿ’ಗೂ ಸಂಗೀತ ನಿರ್ದೇಶನ ಮಾಡಿ ಗೆದ್ದಿದ್ದ ರವಿ ಬಸ್ರೂರು ಈಗ `ಭೈರತಿ ರಣಗಲ್’ ಸಿನಿಮಾಗೂ ಕೆಲಸ ನಿರ್ವಹಿಸಲಿದ್ದಾರೆ. ಈ ಮೂಲಕ ಹಿಟ್ ಕಾಂಬಿನೇಷನ್ ಒಂದ್ತಾಗಿದೆ.

     

    View this post on Instagram

     

    A post shared by Geetha Pictures (@geethapictures)

    ಶಿವರಾಜ್ ಕುಮಾರ್ ಅವರ ಹೋಂ ಬ್ಯಾನರ್ ಗೀತಾ ಪಿಕ್ಚರ್ಸ್‌ ಇದು ಎರಡನೇ ಸಿನಿಮಾ ಆಗಿದ್ದು, ಮೊದಲ ಸಿನಿಮಾ `ವೇದ’ ಮೂಲಕ ಹಿಟ್ ನೀಡಿರುವ ನಿರ್ಮಾಪಕಿ ಗೀತಾ `ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಸಿನಿಮಾಗೂ ಸಾಥ್ ನೀಡುತ್ತಿದ್ದಾರೆ. ಸದ್ಯದಲ್ಲಿಯೇ ಈ ಸಿನಿಮಾದ ಚಿತ್ರೀಕರಣ ಆರಂಭ ಮಾಡಲಿದ್ದಾರೆ.