Tag: Bhairadevi

  • ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಡಬಲ್ ಗಿಫ್ಟ್

    ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಡಬಲ್ ಗಿಫ್ಟ್

    ನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರಿಗೆ ಹುಟ್ಟುಹಬ್ಬದ (Birthday) ಸಂಭ್ರಮ. ಈ ಸಂದರ್ಭದಲ್ಲಿ ಅವರು ನಾಯಕಿಯಾಗಿ ನಟಿಸಿರುವ ‘ಭೈರಾದೇವಿ’ ಚಿತ್ರದ ಟೀಸರ್ ಹಾಗೂ ‘ಅಜಾಗ್ರತ’ ಚಿತ್ರದ ಪೋಸ್ಟರ್ ಬಿಡುಗಡೆಯಾಯಿತು. ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಈ ಎರಡು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಇಂದು ನನ್ನ ಹುಟ್ಟುಹಬ್ಬ. ನೀವೆಲ್ಲಾ ಬಂದಿರುವುದು ಖುಷಿಯಾಗಿದೆ. ತಮಗೆ ದೀಪಾವಳಿ ಹಬ್ಬದ ಶುಭಾಶಯ ಎಂದು ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ಈ ಬಾರಿ ನನ್ನ ಹುಟ್ಟುಹಬ್ಬ ಮತ್ತಷ್ಟು ವಿಶೇಷ. ಏಕೆಂದರೆ ನನ್ನ ಅಭಿನಯದ ಭೈರಾದೇವಿ (Bhairadevi) ಚಿತ್ರದ ಟೀಸರ್ ಬಿಡುಗಡೆ ಹಾಗೂ ಅಜಾಗ್ರತ (Ajagrata) ಪೋಸ್ಟರ್ ಬಿಡುಗಡೆ ಇಂದು ಆಗಿದೆ. ಈ ಎರಡು ಚಿತ್ರಗಳು ಶಮಿಕಾ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿದೆ.  ಭೈರಾದೇವಿ ನನ್ನ ಇಪ್ಪತ್ತು ವರ್ಷಗಳ ಸಿನಿಜರ್ನಿಯಲ್ಲೇ ವಿಭಿನ್ನವಾದ ಚಿತ್ರ. ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ‌. ನನಗೆ ಸ್ಮಶಾನ ಎಂದರೆ ಭಯ. ಈ ಚಿತ್ರದ ಚಿತ್ರೀಕರಣ ಹೆಚ್ಚಿನ ಭಾಗ ಸ್ಮಶಾನದಲ್ಲೇ ನಡೆದಿದೆ. ಈ ಚಿತ್ರಕ್ಕೆ ಪಟ್ಟಿರುವಷ್ಟು ಶ್ರಮ ನಾನು ಯಾವ ಚಿತ್ರಕ್ಕೂ ಪಟ್ಟಿಲ್ಲ. ಇಂದು ಟೀಸರ್ ನೋಡಿದಾಗ ತುಂಬಾ ಖುಷಿಯಾಯಿತು. ನಿರ್ದೇಶಕ ಶ್ರೀಜೈ ಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಭೈರಾದೇವಿ ತೆರೆಗೆ ಬರಲು ಸಿದ್ದವಾಗಿದ್ದು, ಸದ್ಯದಲ್ಲೇ ದಿನಾಂಕ ಘೋಷಣೆ ಮಾಡುತ್ತೇವೆ. ಇನ್ನು ಅಜಾಗ್ರತ ಚಿತ್ರ ಕೂಡ ಶಶಿಧರ್ ಅವರ ನಿರ್ದೇಶನದಲ್ಲಿ ಚೆನ್ನಾಗಿ ಮೂಡಿ ಬರುತ್ತಿದೆ. ಸಿನಿಮಾಗಳ ನಿರ್ವಹಣೆ ಜೊತೆಗೆ ನನ್ನ ಹುಟ್ಟುಹಬ್ಬವನ್ನು ಇಷ್ಟು ಅದ್ದೂರಿಯಾಗಿ ಆಯೋಜಿಸಿರುವ ನನ್ನ ಅಣ್ಣ ರವಿರಾಜ್ ಅವರಿಗೆ ಹಾಗೂ ಎರಡು ಚಿತ್ರತಂಡಕ್ಕೆ ಧನ್ಯವಾದ ಎಂದರು.

    ಇಂದು ಭೈರಾದೇವಿ ಚಿತ್ರದ ಟೀಸರ್ ಹಾಗೂ ಅಜಾಗ್ರತ ಚಿತ್ರದ ಪೋಸ್ಟರ್ ಬಿಡುಗಡೆ ಜೊತೆಗೆ ನನ್ನ ತಂಗಿ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆಯಾಗುತ್ತಿರುವುದು ಸಂತಸವಾಗಿದೆ. ಈ ಎರಡು ಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ಹಾಗೂ ನಿರ್ಮಾಪಕ ರವಿರಾಜ್.

    ಭೈರಾದೇವಿ ಚಿತ್ರ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ಮೂಡಿಬಂದಿದೆ. ಮೂರು ಭಾಷೆಗಳಲ್ಲೂ ಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಾಗಿದೆ. ಸಾಮಾನ್ಯವಾಗಿ ಹೆಣ್ಣು ಅಘೋರಿಗಳು ಕಾಣಿಸುವುದು ಕಷ್ಟ. ನಾನು ಆ ಬಗ್ಗೆ ಹೆಚ್ಚು ತಿಳಿದುಕೊಂಡು ಈ ಚಿತ್ರ ಮಾಡಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಹೆಣ್ಣು ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ.  ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ಭೈರಾದೇವಿ ಚಿತ್ರದ ನಿರ್ದೇಶಕ ಶ್ರೀಜೈ ತಿಳಿಸಿದರು.

    ಅಜಾಗ್ರತ  ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಪ್ರತ್ಯೇಕವಾಗಿ ಮೂಡಿಬರುತ್ತಿರುವ ಚಿತ್ರ. ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಪುಣೆಯಲ್ಲಿ ಎಂ.ಎಸ್.ಸಿ ಇನ್ ಫಿಲಂ ಮೇಕಿಂಗ್ ಮಾಡಿದ್ದೇನೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ನನ್ನ ಮೊದಲ ನಿರ್ದೇಶನದ ಘಾರ್ಗ ಚಿತ್ರದ ಚಿತ್ರೀಕರಣ ವೇಳೆ ರವಿರಾಜ್ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಪರಿಚಯವಾಯಿತು. ಆನಂತರ ನನಗೆ ಸಪ್ತಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ನೀಡಿದರು. ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ಚಿತ್ರ ನಟಿಯಾಗಿಯೇ ರಾಧಿಕಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು “ಅಜಾಗ್ರತ” ಚಿತ್ರದ ನಿರ್ದೇಶಕ ಶಶಿಧರ್ ಹೇಳಿದರು.

    ರಾಧಿಕಾ ಕುಮಾರಸ್ವಾಮಿ ಅವರ ನಿವಾಸದ ಬಳಿ ಆಯೋಜಿಸಲಾಗಿದ್ದ ಹುಟ್ಟುಹಬ್ಬದ ಸಮಾರಂಭಕ್ಕೆ  ಚಿತರಂಗದ ಗಣ್ಯರು ಹಾಗೂ ಸಾವಿರಾರು  ಅಭಿಮಾನಿಗಳು ಆಗಮಿಸಿ ಶುಭ ಕೋರಿದರು.

  • ಭೈರಾದೇವಿಯಾಗಿ ಬರಲಿದ್ದಾರೆ ರಾಧಿಕಾ ಕುಮಾರಸ್ವಾಮಿ

    ಭೈರಾದೇವಿಯಾಗಿ ಬರಲಿದ್ದಾರೆ ರಾಧಿಕಾ ಕುಮಾರಸ್ವಾಮಿ

    ಸೋಷಿಯಲ್ ಮೀಡಿಯಾದಲ್ಲಿ ಆಗೊಂದು ಈಗೊಂದು ವಿಡಿಯೋ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy), ಈ ಬಾರಿ ಪೂರ್ಣಪ್ರಮಾಣದಲ್ಲಿ ಅದರಲ್ಲೂ ಥಿಯೇಟರ್ ನಲ್ಲೇ ಅಭಿಮಾನಿಗಳ ಜೊತೆ ಮುಖಾಮುಖಿ ಆಗಲು ಸಿದ್ಧತೆ ನಡೆಸಿದ್ದಾರೆ. ರಾಧಿಕಾ ನಟನೆಯ ಭೈರಾದೇವಿ (Bhairadevi) ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿದ್ದು, ಶೂಟಿಂಗ್ ನಂತರದ ಕೆಲಸಗಳು ನಡೆಯುತ್ತಿವೆ.

    ಈ ಸಿನಿಮಾದಲ್ಲಿ ರಾಧಿಕಾ ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ. ಭೈರಾದೇವಿಯಾಗಿ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಅದೊಂದು ವಿಶೇಷ ಅವತಾರದ ಪಾತ್ರವಾಗಿದ್ದರಿಂದ ಅವರ ವೃತ್ತಿ ಜೀವನದ ಮಹತ್ವದ ಪಾತ್ರ ಇದಾಗಿದೆಯಂತೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಭಿನ್ನವಾಗಿದೆ. ಭೈರಾದೇವಿಯಾಗಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದರೆ, ಅಘೋರಿ ಪಾತ್ರದಲ್ಲಿ ಖಳನಟ ರವಿಶಂಕರ್ (Ravishankar) ಅಭಿನಯಿಸಿದ್ದಾರೆ. ರಾಧಿಕಾ ಅವರ ಗುರುವಿನ ಪಾತ್ರ ಅದಾಗಿದೆಯಂತೆ. ಅಲ್ಲದೇ, ಪೊಲೀಸ್ ಆಫೀಸರ್ ಪಾತ್ರದಲ್ಲಿ ರಮೇಶ್ ಅರವಿಂದ್ (Ramesh Aravind) ಇರುವುದು ಮತ್ತೊಂದು ವಿಶೇಷ. ಮೊನ್ನೆಯಷ್ಟೇ ಸಿನಿಮಾ ಟೀಸರ್ ಕೂಡ ರಿಲೀಸ್ ಮಾಡಿದೆ ಚಿತ್ರತಂಡ.

    ರಾಧಿಕಾ ಪಂಡಿತ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡದೇ ಇದ್ದರೂ, ಆಗೊಂದು ಈಗೊಂದು ಸಿನಿಮಾ ಮಾಡುವ ಮೂಲಕ ಸಿನಿಮಾ ರಂಗದಲ್ಲಿ ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತಿದ್ದಾರೆ. ನಟಿಯಾಗಿ, ನಿರ್ಮಾಪಕಿಯಾಗಿ ರಾಧಿಕಾ ಗುರುತಿಸಿಕೊಂಡಿದ್ದರೂ, ರೆಗ್ಯುಲರ್ ಆಗಿ ಸಿನಿಮಾ ಮಾಡಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಭೈರಾದೇವಿ’ ಚಿತ್ರದ ಹಾಡು ಬಿಡುಗಡೆ

    ‘ಭೈರಾದೇವಿ’ ಚಿತ್ರದ ಹಾಡು ಬಿಡುಗಡೆ

    ಬೆಂಗಳೂರು: ಶಮಿಕಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ನಿರ್ಮಿಸುತ್ತಿರುವ ‘ಭೈರಾದೇವಿ’ ಚಿತ್ರಕ್ಕಾಗಿ ಶ್ರೀಜೈ ಅವರು ಬರೆದಿರುವ ‘ಬಂದಾಳಮ್ಮ ಕಾಳಿಕಾ’ ಹಾಡು ಮೈಸೂರಿನ ಯುವದಸರಾದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಮಾಲತಿ ಲಕ್ಷ್ಮಣ್ ಈ ಹಾಡನ್ನು ಹಾಡಿದ್ದಾರೆ. ಯುವದಸರಾದ ವರ್ಣರಂಜಿತ ವೇದಿಕೆಯಲ್ಲಿ ನಡೆದ ಈ ಸಮಾರಂಭದಲ್ಲಿ ಸಂಸದ ಪ್ರತಾಪಸಿಂಹ, ರಾಧಿಕಾ ಕುಮಾರಸ್ವಾಮಿ, ನಟ ರಮೇಶ್ ಅರವಿಂದ್, ನಿರ್ದೇಶಕ ಶ್ರೀಜೈ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಭಾಗವಹಿಸಿದ್ದರು. ರವಿರಾಜ್ ಹಾಗೂ ಯಾದವ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

    ಶ್ರೀಜೈ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತೆರಚನೆ ಮಾಡಿ, ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕಾಶಿ, ಬೆಂಗಳೂರು, ತಮಿಳುನಾಡು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ.

    ಜೆ.ಎಸ್.ವಾಲಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಕೆ.ಸೆಂಥಿಲ್ ಪ್ರಸಾದ್ ಅವರ ಸಂಗೀತ ನಿರ್ದೇಶನವಿದೆ. ರವಿಚಂದ್ರನ್ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ರವಿಶಂಕರ್, ರಂಗಾಯಣ ರಘು, ಶಿವರಾಂ, ಸ್ಕಂದ ಅಶೋಕ್, ಸುಚೇಂದ್ರ ಪ್ರಸಾದ್, ಮಾಳವಿಕ ಅವಿನಾಶ್, ಪದ್ಮಜಾರಾವ್ ಮುಂತಾದವರಿದ್ದಾರೆ.

  • ಸ್ವೀಟಿ ರಾಧಿಕಾ ಮಧ್ಯರಾತ್ರಿ ಸ್ಮಶಾನದಲ್ಲಿ ಬಿದ್ದಿದ್ಹೇಗೆ ಗೊತ್ತಾ..!

    ಸ್ವೀಟಿ ರಾಧಿಕಾ ಮಧ್ಯರಾತ್ರಿ ಸ್ಮಶಾನದಲ್ಲಿ ಬಿದ್ದಿದ್ಹೇಗೆ ಗೊತ್ತಾ..!

    – ಸ್ಮಶಾನದ ಕೆಲಸಗಾರರು ಬಿಚ್ಚಿಟ್ರು ಮೈನಡುಗಿಸುವ ಸತ್ಯ!

    ಬೆಂಗಳೂರು: ನಟಿ ರಾಧಿಕ ಬೈರಾದೇವಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಶಾಂತಿನಗರ ಸ್ಮಶಾನದ ಗೋರಿಯ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟಾಗಿದೆ. ಆದರೆ ಶಾಂತಿನಗರದ ಈ ಸ್ಮಶಾನದಲ್ಲಿ ಕೆಲಸಗಾರರು ಮಾತ್ರ ಹೇಳೋದೆ ಬೇರೆ. ಶಾಂತಿನಗರದ ಸ್ಮಶಾನದಲ್ಲಿ ರಾಧಿಕಾರಿಗೆ ಕಂಟಕ ಬಂದಿದ್ಯಾ? ಒಂದು ಕ್ಷಣ ಮೈನಡುಗಿಸುತ್ತೆ ಸ್ಮಶಾನದೊಳಗಿನ ಕೆಲಸಗಾರರು ಬಿಚ್ಚಿಟ್ಟ ಕತ್ತಲೆಯ ಕಥೆ.

    ಶಾಂತಿನಗರದ ಈ ಸ್ಮಶಾನದ ಹೊರಭಾಗದ ರಸ್ತೆಯಲ್ಲೇ ಜನ ರಾತ್ರಿ ಹೊತ್ತು ಗಾಡಿ ಓಡಿಸೋಕೆ ಭಯ ಪಡ್ತಾರೆ. ಮಧ್ಯರಾತ್ರಿಯ ಕತ್ತಲೆಯಲ್ಲಿ ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಕಾಳಿ ವೇಷ ಹಾಕಿ ಹುಣಸೆಹಣ್ಣಿನ ಮರದ ಕೆಳಗೆ ಬೈರಾದೇವಿ ಸಿನಿಮಾದ ಶೂಟಿಂಗ್‍ನಲ್ಲಿ ತೊಡಗಿದ್ರು. ಇದೇ ಸಮಯದಲ್ಲಿ ಗೋರಿಯಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡು ಒಂದೂವರೆ ತಿಂಗಳು ಬೆಡ್ ರೆಸ್ಟ್ ನಲ್ಲಿದ್ದಾರೆ.

    ಸಾಮಾನ್ಯ ಸ್ಮಶಾನದಂತಿದ್ದ ಶಾಂತಿನಗರದಲ್ಲೀಗ ಮಾಟಮಂತ್ರದಂತಹ ಘಟನೆಗಳು ಹೆಚ್ಚಾಗಿದ್ಯಯಂತೆ. ಅಮಾವಾಸ್ಯೆ ಬಂದ್ರೆ ಸಾಕು ನಾಯಿಗಳನ್ನು ಕೊಂದು ಇಲ್ಲಿ ಕ್ಷುದ್ರ ಶಕ್ತಿಯನ್ನು ಅವಾಹನೆ ಮಾಡ್ತಾರಂತೆ. ಇದನ್ನು ದಾಟಿದ್ರೆ ಬೇರೆಯವರಿಗೆ ಅಪಾಯವಾಗುತ್ತೆ. ಅಲ್ಲದೇ ಇತ್ತೀಚೆಗೆ ಸಂಬಂಧಿಕರ ಸ್ಮಶಾನಕ್ಕೆ ಪೂಜೆ ಸಲ್ಲಿಸೋಕೆ ಜನ ಶಾಂತಿನಗರ ಸ್ಮಶಾನದಲ್ಲಿ ಹಿಂದೇಟು ಹಾಕುತ್ತಿದ್ದಾರಂತೆ. ನೆಗೆಟಿವ್ ಎನರ್ಜಿ ಸ್ಮಶಾನದಲ್ಲಿರೋದ್ರಿಂದ ರಾಧಿಕಾಗೆ ತೊಂದರೆಯಾಗಿರಲೂಬಹುದು, ಇದುವರೆಗೆ ಯಾವ ಶೂಟಿಂಗ್ ಸಂದರ್ಭದಲ್ಲೂ ಈ ರೀತಿ ಅನಾಹುತವಾಗಿಲ್ಲ ಅನ್ನೋದು ಕೆಲಸಗಾರರ ಮಾತು.

    ಈ ಸ್ಮಶಾನದಲ್ಲಿ ಎಂಟ್ರಿಯಾಗುತ್ತಲೇ ಕಾಳಿ ದೇವಿಯ ದೇಗುಲವಿದೆ. ಮೂಲವಿಗ್ರಹವಿರುವಾಗ ಇನ್ನೊಂದು ದೇವರ ಸೆಟ್ ಹಾಕಿ ಶೂಟಿಂಗ್ ಮಾಡುವಂತದ್ದು ಅಥವಾ ಸ್ಮಶಾನದ ಅವರಣದಲ್ಲಿ ಗೋರಿಯ ಪಕ್ಕ ಉಪ್ಪು, ಮೆಣಸು ಹಾಕಿ ಮಂತ್ರಪಠನೆ ಮಾಡಿದ್ರಿಂದ ಅನಾಹುತ ಸಂಭವಿಸಿರಬಹುದು. ಇಲ್ಲಿ ಏನೇ ಕೆಲಸ ಮಾಡಿದ್ರೂ ಮೊದಲು ಕಾಳಿಗೆ ಪೂಜೆ ಸಲ್ಲಿಸಲೇಬೇಕು. ಆದರೆ ಸಿನಿಮಾ ಟೀಮ್ ಇದನ್ನು ಮಾಡದೇ ಇದ್ದಿದ್ರಿಂದ ಹೀಗಾಗಿರಬಹುದು ಎಂದು ಸ್ಮಶಾನದ ಸಿಬ್ಬಂದಿ ಪುರಷೋತ್ತಮ್ ಹೇಳುತ್ತಾರೆ.

    ಸ್ಮಶಾನ ಅಂದ್ರೆ ಅಲ್ಲೊಂದು ನೆಗೆಟಿವ್ ಎನರ್ಜಿ ಇರುತ್ತೆ ಅನ್ನುವ ನಂಬಿಕೆ ಸಾಮಾನ್ಯ. ಏನೇ ಆಗಲಿ ಅದಷ್ಟು ಬೇಗ ರಾಧಿಕಾ ಚೇತರಿಸಿಕೊಳ್ಳಲಿ ಅವರ ಆರೋಗ್ಯ ಸುಧಾರಿಸಲಿ ಅಂತಾ ಹಾರೈಸೋಣ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿತ್ರ ನಿರ್ಮಾಣದಲ್ಲಿ ಬ್ಯೂಸಿಯಾದ ರಾಧಿಕಾ ಕುಮಾರಸ್ವಾಮಿ

    ಚಿತ್ರ ನಿರ್ಮಾಣದಲ್ಲಿ ಬ್ಯೂಸಿಯಾದ ರಾಧಿಕಾ ಕುಮಾರಸ್ವಾಮಿ

    ಬೆಂಗಳೂರು: ಬಹಳ ವರ್ಷಗಳಿಂದ ಸಿನಿರಂಗದಿಂದ ದೂರವಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಜೊತೆಗೆ ತಮ್ಮದೇ ಚಿತ್ರದಲ್ಲಿ ರಾಧಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

    ‘ಭೈರಾದೇವಿ’ ಅನ್ನುವ ಶೀರ್ಷಿಕೆಯಲ್ಲಿ ಚಿತ್ರ ಸೆಟ್ಟೇರಿದ್ದು ಇದೇ ತಿಂಗಳು 14ರಿಂದ ಚಿತ್ರೀಕರಣ ಶುರುವಾಗಲಿದೆ. ಸೋಮವಾರ ಬೆಂಗಳೂರಿನ ಬಂಡೆಕಾಳಮ್ಮ ದೇವಸ್ಥಾನದಲ್ಲಿ ಚಿತ್ರಕ್ಕೆ ಸರಳ ಮುಹೂರ್ತ ನೆರವೇರಿದೆ. ಭೈರಾದೇವಿ ಸಿನಿಮಾದಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಅಭಿನಯಿಸುತ್ತಿದ್ದು, ಅನುಪ್ರಭಾಕರ್ ರಮೇಶ್‍ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಸರಳವಾಗಿ ನಡೆದ ಮುಹೂರ್ತದಲ್ಲಿ ಚಿತ್ರತಂಡವಷ್ಟೇ ಭಾಗಿಯಾಗಿತ್ತು. ಈ ಚಿತ್ರವನ್ನ ಶ್ರೀಜಯ್ ನಿರ್ದೇಶನವಿದ್ದು ಬೆಂಗಳೂರು, ವಾರಣಾಸಿ, ಊಟಿ ಸೇರಿದಂತೆ ಹಲವು ರಮಣೀಯ ಸ್ಥಳಗಳಲ್ಲಿ ಶೂಟಿಂಗ್ ನಡೆಯಲಿದೆ.

    ಕೌಟುಂಬಿಕ ಕಥಾಹಂದರ ಕಥೆಯ ಈ ಚಿತ್ರದಲ್ಲಿ ರಾಧಿಕಾ ಭೈರಾದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ರಾಧಿಕಾ ಮಗಳು ಶಮಿಕಾ ಕೆ. ಸ್ವಾಮಿ ಕ್ಲ್ಯಾಪ್ ಮಾಡುವ ಮೂಲಕ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಮೂಡಿಬರುವ ಮೂರನೇ ಚಿತ್ರ ಭೈರಾದೇವಿ ಗೆ ಚಾಲನೆ ದೊರಕಿದೆ.